Tag: Bathinda

  • ಪಂಜಾಬ್ | ಸೋಷಿಯಲ್ ಮೀಡಿಯಾ ಸ್ಟಾರ್ ಕಾರಿನೊಳಗೆ ಶವವಾಗಿ ಪತ್ತೆ – ಕೊಲೆ ಶಂಕೆ

    ಪಂಜಾಬ್ | ಸೋಷಿಯಲ್ ಮೀಡಿಯಾ ಸ್ಟಾರ್ ಕಾರಿನೊಳಗೆ ಶವವಾಗಿ ಪತ್ತೆ – ಕೊಲೆ ಶಂಕೆ

    ಚಂಡೀಗಢ: ಸೋಷಿಯಲ್ ಮೀಡಿಯಾ ಸ್ಟಾರ್ (Social Media Influencer) ಒಬ್ಬರು ತಮ್ಮದೇ ಕಾರಿನೊಳಗೆ ಶವವಾಗಿ ಪತ್ತೆಯಾದ ಘಟನೆ ಪಂಜಾಬ್‌ನ (Punjab) ಆಸ್ಪತ್ರೆಯೊಂದರ ಪಾರ್ಕಿಂಗ್ ಏರಿಯಾದಲ್ಲಿ ನಡೆದಿದೆ.

    ಕಮಲ್ ಕೌರ್ (ಕಾಂಚನ್ ತಿವಾರಿ) ನಿಗೂಢವಾಗಿ ಸಾವನ್ನಪ್ಪಿದ ಸೋಷಿಯಲ್ ಮೀಡಿಯಾ ಸ್ಟಾರ್. ಕಮಲ್ ಕೌರ್ ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಕಾರಿನ ಹಿಂಬದಿ ಸೀಟಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ‘ಕಮಲ್ ಕೌರ್ ಭಾಬಿ’ ಎಂಬ ಹೆಸರಿನಿಂದ ಫೇಮಸ್ ಆಗಿದ್ದ ಕಮಲ್, ಇನ್ಸ್ಟಾಗ್ರಾಂನಲ್ಲಿ 3.83 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು. ಅಲ್ಲದೇ ಅಶ್ಲೀಲ ಭಾಷೆಯನ್ನು ಬಳಸಿ ವೀಡಿಯೊಗಳನ್ನು ಪೋಸ್ಟ್ ಮಾಡುವುದಕ್ಕೆ ಹೆಸರುವಾಸಿಯಾಗಿದ್ದು, ಹಲವು ವಿವಾದಕ್ಕೀಡಾಗಿದ್ದರು. ನಿಲ್ಲಿಸಿದ್ದ ಕಾರಿನಿಂದ ಕೆಟ್ಟ ವಾಸನೆ ಬರುತ್ತಿರುವುದರ ಕುರಿತು ಪೊಲೀಸರಿಗೆ ಮಾಹಿತಿ ದೊರೆತ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತಪಾಸಣೆ ವೇಳೆ ಪೊಲೀಸರಿಗೆ ಗುದ್ದಿದ ಕಾರು – ಓರ್ವ ಮಹಿಳಾ ಕಾನ್‌ಸ್ಟೆಬಲ್ ಸಾವು, ಇಬ್ಬರು ಅಧಿಕಾರಿಗೆ ಗಾಯ

    ಘಟನೆಯ ಕುರಿತು ಪ್ರತಿಕ್ರಿಯಿಸಿದ ಲುಧಿಯಾನ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಸಿಂಗ್, ಬುಧವಾರ ರಾತ್ರಿ ಭಟಿಂಡಾದ (Bathinda) ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯನ್ನು ಕಮಲ್ ಕೌರ್ ಎಂದು ಗುರುತಿಸಲಾಗಿದೆ. ಅವರ ನಿಜವಾದ ಹೆಸರು ಕಾಂಚನ್ ಕೌರ್, ಲುಧಿಯಾನ ನಿವಾಸಿ. ಕಮಲ್ ಕೌರ್ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಭಾಷೆಯನ್ನು ಬಳಸಿ ವೀಡಿಯೊಗಳನ್ನು ಪೋಸ್ಟ್ ಮಾಡುವುದಕ್ಕೆ ಹೆಸರುವಾಸಿಯಾಗಿದ್ದರು. ಘಟನೆ ಸಂಬಂಧ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು

    ಕಮಲ್ ಕೌರ್ ಅವರನ್ನು ಕೊಲೆ ಮಾಡಿ ನಂತರ ಆಕೆಯ ದೇಹವನ್ನು ಕಾರಿನ ಹಿಂದಿನ ಸೀಟಿನಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹ ಕೊಳೆತ ಕಾರಣ ಗಾಯದ ಗುರುತುಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಹೀದ್ ಭಾಯ್ ಮಣಿ ಸಿಂಗ್ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಗಾಯಾಳು ಮಕ್ಕಳ ವಿವರ ಕೋರಿ ಸಿಐಡಿಗೆ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್

  • ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

    ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

    – ಆಸ್ತಿ ಕಂಡು ಅಧಿಕಾರಿಗಳೇ ದಂಗು

    ನವದೆಹಲಿ: ಮಹೀಂದ್ರಾ ಥಾರ್‌ (Mahindra Thar), ರಾಯಲ್‌ ಎನ್‌ಫೀಲ್ಡ್‌ ಬೈಕ್‌, 1 ಕೋಟಿಗೂ ಅಧಿಕ ಮೌಲ್ಯದ ಫ್ಲಾಟ್‌ಗಳು, 2 ಐಫೋನ್‌, ರೋಲೆಕ್ಸ್‌ ವಾಚ್‌… ಇದಿಷ್ಟೂ ಯಾವುದೋ ರಿಯಲ್‌ ಎಸ್ಟೇಟ್‌ ಉದ್ಯಮಿಯ ಆಸ್ತಿಯಲ್ಲ. ಬದಲಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಓಳಗಾಗಿರುವ ಓರ್ವ ಲೇಡಿ ಕಾನ್‌ಸ್ಟೇಬಲ್‌ಗೆ (constable) ಸೇರಿದ ಆಸ್ತಿಯಾಗಿದೆ.

    ಕಳೆದ ಏಪ್ರಿಲ್‌ನಲ್ಲಿ ಮಾದಕ ದ್ರವ್ಯ ಹೊಂದಿದ್ದಕ್ಕಾಗಿ ಸೇವೆಯಿಂದ ವಜಾಗೊಂಡಿದ್ದ ಅಮನ್‌ದೀಪ್‌ ಕೌರ್‌ (Amandeep Kaur ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಗೆ ಆರೋಪದ ಮೇಲೆ ಪಂಜಾಬ್‌ ವಿಜಿಲೆನ್ಸ್‌ ಬ್ಯೂರೋ ಅವರನ್ನು ಸೋಮವಾರ ಬಂಧಿಸಿದೆ. ನಂತರ ಬಟಿಂಡಾ ಪೊಲೀಸ್‌ ಠಾಣೆಯಲ್ಲಿ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿದೆ.

    ಕಳೆದ ಏಪ್ರಿಲ್‌ನಲ್ಲಿ 17.71 ಗ್ರಾಂ ಹೆರಾಯಿನ್‌ ಸಾಗಿಸಿದ್ದಕ್ಕಾಗಿ ಕೌರ್‌ ಅವರನ್ನ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಬಂಧಿಸಿತ್ತು. ಬಳಿಕ ಅವರನ್ನ ಸೇವೆಯಿಂದ ವಜಾಗೊಳಿಸಲಾಗಿತ್ತು. ನಂತರ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಆದ್ರೆ ಇದೇ ಮೇ 2ರಂದು ಬಟಿಂಡಾದ ನ್ಯಾಯಾಲಯವು ಕೌರ್‌ ಅವರನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.

    ಇದೀಗ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿರುವ ಪಂಜಾಬ್‌ ವಿಜಿಲೆನ್ಸ್‌ (Punjab Vigilance Bureau) ಕೌರ್‌ಗೆ ಸೇರಿದ 1.35 ಕೋಟಿ ರೂ. ಮೌಲ್ಯದ ಆಸ್ತಿಯನ್ನ ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ 2 ಫ್ಲಾಟ್‌ಗಳು, 1 ಮಹೀಂದ್ರಾ ಥಾರ್‌, 1 ರೋಲೆಕ್ಸ್‌ ವಾಚ್‌, ಮೂರು ಐಫೋನ್‌ಗಳೂ ಸೇರಿವೆ.

    ವಶಪಡಿಸಿಕೊಂಡ ಆಸ್ತಿಗಳು ಎಷ್ಟಿವೆ?
    * ವಿರಾಟ್ ಗ್ರೀನ್, ಬಟಿಂಡಾದಲ್ಲಿರುವ ಭೂಮಿ (217 ಚದರ ಗಜಗಳು): 99,00,000 ರೂ. ಮೌಲ್ಯ
    * ಡ್ರೀಮ್ ಸಿಟಿ, ಬಟಿಂಡಾದಲ್ಲಿರುವ ಭೂಮಿ (120.83 ಚದರ ಗಜಗಳು): ರೂ 18,12,000
    * ಥಾರ್ ಕಾರ್: ರೂ 14,00,000
    * ರಾಯಲ್ ಎನ್‌ಫೀಲ್ಡ್ ಬುಲೆಟ್: ರೂ 1,70,000
    * ಐಫೋನ್ 13 ಪ್ರೊ ಮ್ಯಾಕ್ಸ್: ರೂ 45,000
    * ಐಫೋನ್ ಎಸ್‌ಇ: ರೂ 9,000
    * ವಿವೋ ಫೋನ್: ರೂ 2,000
    * ಬ್ಯಾಂಕ್ ಬ್ಯಾಲೆನ್ಸ್ (ಎಸ್‌ಬಿಐ): ರೂ 1,01,588.53
    * ರೋಲೆಕ್ಸ್ ವಾಚ್: ಬೆಲೆ ತಿಳಿದಿಲ್ಲ

    ಅಮನ್‌ದೀಪ್ ಕೌರ್ 2018 ಮತ್ತು 2024ರ ನಡುವೆ ಒಟ್ಟು 1.08,37,550 ರೂ. ಆದಾಯ ಹೊಂದಿದ್ದರು. ಆದರೆ ಅವರ ಖರ್ಚು 1,39,64,802.97 ರೂ.ಗಳಾಗಿತ್ತು. ಇದು ಅವರ ಆದಾಯ ಮೂಲಕ್ಕಿಂತ 31,27,252.97 ರೂ. ಹೆಚ್ಚಾಗಿತ್ತು. ಈ ಹಿನ್ನೆಲೆ ಕೇಸ್‌ ದಾಖಲಿಸಿ ತನಿಖೆ ನಡೆಸಲಾಗಿತ್ತು.

  • ಪಂಜಾಬ್ | ಸೇತುವೆ ಕುಸಿದು ಚರಂಡಿಗೆ ಬಿದ್ದ ಬಸ್ – 8 ಮಂದಿ ಸಾವು!

    ಪಂಜಾಬ್ | ಸೇತುವೆ ಕುಸಿದು ಚರಂಡಿಗೆ ಬಿದ್ದ ಬಸ್ – 8 ಮಂದಿ ಸಾವು!

    ಚಂಡೀಗಢ: 50 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್ ಸೇತುವೆಯ ಮೇಲಿಂದ ಚರಂಡಿಗೆ ಬಿದ್ದ ಪರಿಣಾಮ 8 ಜನ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಂಜಾಬ್‌ನ (Punjab) ಬತಿಂಡಾದಲ್ಲಿ (Bathinda) ನಡೆದಿದೆ.

    ಇಂದು (ಡಿ.27) ಈ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ 8 ಜನ ಸಾವನ್ನಪ್ಪಿದ್ದು, 18ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ಇದನ್ನೂ ಓದಿ: ರಣಬೀರ್ ಕಪೂರ್-ದೀಪಿಕಾ ಪಡುಕೋಣೆಯ ‘ಯೇ ಜವಾನಿ ಹೈ ದೀವಾನಿ’ ಜ.3ಕ್ಕೆ ರೀ-ರಿಲೀಸ್

    ಬಸ್ ಪಂಜಾಬ್‌ನ ಸರ್ದುಲ್‌ಗಢದಿಂದ ಬತಿಂಡಾಗೆ ತೆರಳುತ್ತಿತ್ತು. ಈ ವೇಳೆ ಜಿವಾನ್ ಸಿಂಗ್ ವಾಲಾ ಗ್ರಾಮದಲ್ಲಿ ಸೇತುವೆ ಮೇಲಿಂದ ಚರಂಡಿಗೆ ಬಿದ್ದಿದೆ. ಕೂಡಲೇ ಅಲ್ಲಿಯೇ ಇದ್ದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಜಿಲ್ಲಾಡಳಿತ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು.

    ಘಟನೆಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೊಂದು ಭೀಕರ ದುರಂತ. ಗಾಯಗೊಂಡು ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ 18 ಮಂದಿ ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಜೊತೆಗೆ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಎಎಪಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಪ್ರದೇಶದಲ್ಲಿ ಹವಾಮಾನ ವೈಪರೀತ್ಯವಿರುವ ಕಾರಣದಿಂದಾಗಿ ಈ ಅಪಘಾತ ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ರೇಪ್‌ ಕೇಸ್ ಕೊಟ್ಟವರು ಪರಿಚಯವೇ ಇಲ್ಲ ಅಂತ ದೇವರ ಮೇಲೆ ಪ್ರಮಾಣ ಮಾಡಲಿ: ಮುನಿರತ್ನ