Tag: bath

  • ಕೇವಲ 15 ನಿಮಿಷಗಳಲ್ಲಿ ಸ್ನಾನ ಮಾಡಿಸಿ, ಮೈ ಒಣಗಿಸಿ ಕಳುಹಿಸುತ್ತೆ ಈ ಯಂತ್ರ

    ಕೇವಲ 15 ನಿಮಿಷಗಳಲ್ಲಿ ಸ್ನಾನ ಮಾಡಿಸಿ, ಮೈ ಒಣಗಿಸಿ ಕಳುಹಿಸುತ್ತೆ ಈ ಯಂತ್ರ

    – ಜಪಾನ್‌ನಿಂದ Human Washing Machine ಆವಿಷ್ಕಾರ
    -ಸ್ನಾನ ಮಾತ್ರವಲ್ಲದೇ ಮನಸ್ಸಿಗೂ ಮುದ

    ಗಿನ ಯುಗ ತಂತ್ರಜ್ಞಾನದ ಯುಗವಾಗಿದೆ. ಪ್ರತಿನಿತ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದಲ್ಲ ಒಂದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುವಲ್ಲಿ ಜಪಾನ್‌ ಮುಂದಿದೆ. ಬಟ್ಟೆ ಒಗೆಯಲು ಹೇಗೆ ವಾಷಿಂಗ್ ಮಷಿನ್ ಇದೆಯೋ ಅದೇ ರೀತಿಯಲ್ಲಿ ಮನುಷ್ಯರನ್ನೇ ಕ್ಲೀನ್ ಮಾಡಲು ಕೂಡ ಒಂದು ಯಂತ್ರ ಕಂಡುಹಿಡಿಯಲಾಗಿದೆ. ನೀವು ವಾಷಿಂಗ್ ಮಷಿನ್ ಒಳಗೆ ಬಟ್ಟೆ ಹಾಕಿ ನೀರು, ಪುಡಿ ಹಾಕಿದರೆ ಬಟ್ಟೆ ಎಲ್ಲಾ ಒಗೆದು ಒಣಗಿಸಿ ಕೊಡುತ್ತದೆ. ಅದೇ ರೀತಿ ಕೇವಲ 15 ನಿಮಿಷಗಳಲ್ಲಿ ಈ ಯಂತ್ರ ಕೂಡ ನಿಮ್ಮನ್ನೂ ಕ್ಲೀನ್ ಮಾಡುತ್ತದೆ. ಹಾಗಿದ್ರೆ ಈ ಯಂತ್ರ ಯಾವುದು? ಕೆಲಸ ಹೇಗೆ ಮಾಡುತ್ತದೆ? ಪ್ರಯೋಜನಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

    ಜಪಾನ್‌ನ ವಿಜ್ಞಾನಿಗಳ ತಂಡವು ಯಾರು ನಂಬಲಾಗದಂತಹ ಆವಿಷ್ಕಾರವೊಂದನ್ನು ಸಂಶೋಧನೆ ಮಾಡಿ, ಸೈ ಎನಿಸಿಕೊಂಡಿದೆ. ಅಲ್ಲಿನ ವಿಜ್ಞಾನಿಗಳು ಸ್ನಾನದ ಮಷಿನ್ ಒಂದನ್ನು ಕಂಡುಹಿಡಿದಿದ್ದಾರೆ. ಇದು AI ಚಾಲಿತ ಯಂತ್ರವಾಗಿದ್ದು, ಮನುಷ್ಯರನ್ನು 15 ನಿಮಿಷದಲ್ಲಿ ಸ್ನಾನ ಮಾಡಿಸಿ, ಕ್ಲೀನ್ ಮಾಡುತ್ತದೆ.

    ಜಪಾನ್‌ನ ಎಂಜಿನಿಯರ್‌ಗಳು ‘ಹ್ಯೂಮನ್ ವಾಷಿಂಗ್ ಮೆಷಿನ್ ಆಫ್ ದಿ ಫ್ಯೂಚರ್ ‘ ಅಥವಾ ‘ಮಿರೈ ನಿಂಗೆನ್ ಸೆಂಟಕುಕಿ’ ಯನ್ನು ಅನಾವರಣಗೊಳಿಸಿದ್ದಾರೆ. ಜಪಾನಿನ ಶವರ್ ಹೆಡ್ ಕಂ. ಒಸಾಕಾದ ಸೈನ್ಸ್ ಕಂಪನಿ ಈ ಯಂತ್ರವನ್ನುಕಂಡುಹಿಡಿದಿದೆ. ಜಪಾನೀಸ್ ಪ್ರಕಟಣೆಯ ಅಸಾಹಿ ಶಿಂಬುನ್‌ನ ವರದಿಯ ಪ್ರಕಾರ, ಈ ಯಂತ್ರ AI (ಕೃತಕ ಬುದ್ಧಿಮತ್ತೆ) ಸಹಾಯದಿಂದ ಕೆಲಸ ಮಾಡುತ್ತದೆ ಎಂದು ತಿಳಿಸಿದೆ. ಯಂತ್ರದೊಳಗೆ ವ್ಯಕ್ತಿಯೊಬ್ಬ ಹೋದಾಗ ಮೊದಲು ಆತನ ದೇಹದ ಚರ್ಮದ ಬಗ್ಗೆ ತಿಳಿದುಕೊಳ್ಳುತ್ತದೆ. ಅದರ ಆಧಾರದ ಮೇಲೆ ಸೋಪ್ ಆಯ್ಕೆ ಮಾಡುತ್ತದೆ. ಬಳಿಕ ದೇಹಕ್ಕೆ ಸ್ನಾನ ಮಾಡಿಸಿ ದೇಹವನ್ನು ಒಣಗಿಸಿ ಆಚೆ ಕಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

    ಈ ಯಂತ್ರವನ್ನು ವಿಶೇಷವಾಗಿ ಅಂಗವಿಕಲರಿಗೆ ಹಾಗೂ ವಯಸ್ಸಾದವರನ್ನು ಗಮನದಲ್ಲಿರಿಸಿಕೊಂಡು ಆವಿಷ್ಕಾರ ಮಾಡಲಾಗಿದೆ. ಈ ಯಂತ್ರ ಬಹಳ ಸರಳ ಸೆಟ್ಟಿಂಗ್ಸ್‌ಗಳನ್ನು ಹೊಂದಿದ್ದು, ಸುಲಭವಾಗಿ ಬಳಕೆ ಮಾಡಬಹುದಾಗಿದೆ. ಅಲ್ಲದೇ ಈ ಯಂತ್ರ ಸುರಕ್ಷತೆಯನ್ನೂ ಒದಗಿಸುತ್ತದೆ. ಇಷ್ಟು ಮಾತ್ರವಲ್ಲದೇ ಸೋಂಕುಗಳು ಮತ್ತು ಚರ್ಮದ ಕಿರಿಕಿರಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವರದಿಗಳು ತಿಳಿಸಿವೆ.

    ಕೆಲಸ ಹೇಗೆ?
    *ವ್ಯಕ್ತಿ ಯಂತ್ರದ ಬಾತ್ ಟಬ್‌ನಲ್ಲಿ ಹೋಗಿ ಕುಳಿತರೆ ಮೊದಲು ಸ್ನಾನಕ್ಕೆ ಸೂಕ್ತವಾಗುವಷ್ಟು ಬೆಚ್ಚಗಿನ ನೀರಿನಿಂದ ಟಬ್ ತುಂಬಲು ಪ್ರಾರಂಭವಾಗುತ್ತದೆ.
    *ಬಳಿಕ ಸಣ್ಣ ಗಾಳಿಯ ಗುಳ್ಳೆಗಳು ಶಕ್ತಿಯುತ ಒತ್ತಡದ ತರಂಗವನ್ನು ಉಂಟುಮಾಡುತ್ತವೆ. ಅದು ಚರ್ಮದ ಮೇಲಿರುವ ಕೊಳೆಯನ್ನು ತೆಗೆದುಹಾಕುತ್ತದೆ. ನೀರಿನಿಂದ ನೀವು ಶುದ್ಧವಾದ ಬಳಿಕ ನಿಮ್ಮನ್ನು ಒಣಗಿಸಲು ಮುಂದಾಗುತ್ತದೆ.
    *ಇದರಲ್ಲಿ ನೀವು ಎಷ್ಟು ಬಿಸಿ ಗಾಳಿ ಬರಬೇಕು ಎಂಬುದನ್ನು ಕೂಡ ಆಯ್ಕೆ ಮಾಡಬಹುದು. ಇಲ್ಲವೆ ಎಐ ಮೂಲಕ ಹೊರಗಿನ ತಾಪಮಾನಕ್ಕೆ ಸರಿಯಾಗಿ ಅದಾಗಿಯೇ ಹೊಂದಿಸಿಕೊಳ್ಳುತ್ತದೆ. ಇದರ ಮಾಹಿತಿಯನ್ನು ಒದಗಿಸುತ್ತವೆ.
    *ಅಲ್ಲದೇ ಈ ಯಂತ್ರವು ದೇಹವನ್ನು ಮಾತ್ರವಲ್ಲ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮನಸ್ಸಿಗೂ ಆಹ್ಲಾದ ಉಂಟಾಗುವಂತೆ ಮಾಡುತ್ತದೆ.
    *ಇದು ಮಾನವನ ಮನಸ್ಸನ್ನು ಶಾಂತಗೊಳಿಸಿ ಒತ್ತಡದಿಂದ ಮುಕ್ತಗೊಳಿಸುತ್ತದೆ. ಸ್ನಾನದ ಪ್ರಕ್ರಿಯೆ ಇದರಲ್ಲಿ ತ್ವರಿತವಾಗಿ ನಡೆಯುತ್ತದೆ. ಮಾತ್ರವಲ್ಲದೆ ಇದು ದೈಹಿಕ ಮತ್ತು ಮಾನಸಿಕವಾಗಿ ಮಾನವನಿಗೆ ಉಲ್ಲಾಸವನ್ನು ನೀಡುತ್ತದೆ.

    ಮಾರುಕಟ್ಟೆಗೆ ಯಾವಾಗ?
    ʼಹ್ಯೂಮನ್ ವಾಷಿಂಗ್ ಮಷಿನ್‌ʼನ ಮೊದಲ ಯಂತ್ರವನ್ನು 50 ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತು. ಇದನ್ನು ಮೊದಲ ಬಾರಿಗೆ 1970ರಲ್ಲಿ ಸ್ಯಾನ್ಯೊ ಎಲೆಕ್ಟ್ರಿಕ್ ಕಂ. ಪ್ಯಾನಾಸೋನಿಕ್ ಹೋಲ್ಡಿಂಗ್ಸ್ ಕಾರ್ಪೊರೇಷನ್ ನಿರ್ಮಿಸಿತ್ತು. ಜಪಾನ್ ವರ್ಲ್ಡ್ ಎಕ್ಸ್‌ಪೊಸಿಷನ್‌ನಲ್ಲಿ ಪ್ರದರ್ಶಿಸಲಾಗಿತ್ತು. ಇದು ಬಿಸಿ ನೀರು, ಸೂಕ್ಷ್ಮ ಬಬಲ್ ಗಳು, ಪ್ಲಾಸ್ಟಿಕ್ ಮಸಾಜ್ ಬಾಲ್‌ಗಳನ್ನು ಒಳಗೊಂಡಿತ್ತು. ಆದರೆ ಇದು ಕೆಲವೊಂದು ಕಾರಣಗಳಿಂದ ಮಾರುಕಟ್ಟೆಗೆ ಬರಲಿಲ್ಲ.

    ಇದೀಗ ಹೊಸದಾಗಿ ಅನಾವರಣಗೊಳಿಸಲಾದ ʼಹ್ಯೂಮನ್ ವಾಷಿಂಗ್ ಮಷಿನ್ʼ ವಿಶ್ವದ ಗಮನ ಸೆಳೆದಿದೆ. ಈ ಯಂತ್ರವನ್ನು ಸಿದ್ಧಪಡಿಸಿರುವ ಜಪಾನ್​ನ ಸೈನ್ಸ್​ ಕೋ ಕಂಪನಿ, 2025ರಲ್ಲಿ ಒಸಾಕಾ ಕನ್ಸಾಯ್​​ನಲ್ಲಿ ನಡೆಯಲಿರುವ ಎಕ್ಸ್​ಪೋದಲ್ಲಿ ಮೊದಲು 1,000 ಜನರಿಗೆ ಪ್ರಾಯೋಗಿಕವಾಗಿ ಸ್ನಾನ ಮಾಡಿಸುವ ಮೂಲಕ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. 1,000 ಜನರಿಗೆ ಸ್ನಾನ ಮಾಡಿಸಿ ಅವರಿಂದ ಬಂದ ಪ್ರತಿಕ್ರಿಯೆ ಆಧಾರದ ಮೇಲೆ ಮತ್ತಷ್ಟು ಯಂತ್ರಗಳನ್ನು ಮಾರುಕಟ್ಟೆಗೆ ತರಲು ಕಂಪನಿ ಯೋಚಿಸಿದೆ.

    ಈ ಯಂತ್ರವು ವಯಸ್ಸಾದ ಮತ್ತು ಅಂಗವಿಕಲ ವ್ಯಕ್ತಿಗಳ ಜೀವನವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ನವೀನ ತಂತ್ರಜ್ಞಾನದ ಗಮನಾರ್ಹ ಉದಾಹರಣೆಯಾಗಿದೆ. ಅದರ ಸ್ವಯಂಚಾಲಿತ ಸ್ನಾನದ ವ್ಯವಸ್ಥೆ, ಸೌಕರ್ಯ ಮತ್ತು ಸುರಕ್ಷತಾ ವೈಶಿಷ್ಟ್ಯಗಳು ಸ್ನಾನದ ಸಹಾಯದ ಅಗತ್ಯವಿರುವವರಿಗೆ ಅಮೂಲ್ಯವಾದ ಸಂಪನ್ಮೂಲವೆಂದರೆ ತಪ್ಪಾಗಲಾರದು.

    ಹ್ಯೂಮನ್ ವಾಷಿಂಗ್ ಮಷಿನ್‌ನಲ್ಲಿ ಸ್ನಾನ ಮಾಡಲು ಇಚ್ಛಿಸುವವರಿಗೆ ಕಂಪನಿಯು ಈಗಾಗಲೇ ತನ್ನ ವೆಬ್‌ಸೈಟ್‌ನಲ್ಲಿ ಈ ಯಂತ್ರವನ್ನು ಕಾಯ್ದಿರಿಸುವ ಅವಕಾಶವನ್ನೂ ನೀಡುತ್ತಿದೆ.

  • ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಪ್ರತಿಭಟಿಸಿ ಕೆಸರು ನೀರಲ್ಲೇ ಸ್ನಾನ ಮಾಡಿದ ಶಾಸಕಿ

    ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಪ್ರತಿಭಟಿಸಿ ಕೆಸರು ನೀರಲ್ಲೇ ಸ್ನಾನ ಮಾಡಿದ ಶಾಸಕಿ

    ರಾಂಚಿ: ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ (National Highway) ತುಂಬಿದ ಕೆಸರಲ್ಲಿ (Mud) ಕುಳಿತು ಶಾಸಕಿಯೊಬ್ಬರು (MLA) ಸ್ನಾನ (Bath) ಮಾಡಿ ಪ್ರತಿಭಟಿಸಿರುವ ಘಟನೆ ಜಾರ್ಖಂಡ್‌ನ (Jharkhand) ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ. ಶಾಸಕಿ ಕೊಳಚೆ ನೀರಿನಲ್ಲಿ ಮಿಂದು ತಕ್ಷಣವೇ ರಸ್ತೆಯ ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ.

    ಮಹಾಗಾಮಾದ ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಅವರು ತಮ್ಮ ಮೇಲೆ ಕೆಸರು ನೀರನ್ನು ಸುರಿದುಕೊಂಡು, ಈ ರಸ್ತೆಯ ದುರಸ್ತಿಯನ್ನು ಕೈಗೊಂಡು ದೊಡ್ಡ ಗುಂಡಿಗಳನ್ನು ಮುಚ್ಚಲು ಈಗಿಂದೀಗಲೇ ಮುಂದಾಗದಿದ್ದರೆ, ನಾನು ಇಲ್ಲಿಂದ ಕದಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ – ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್

    ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಹೋರಾಟದಲ್ಲಿ ನಾನು ಭಾಗಿಯಾಗಲು ಬಯಸಲ್ಲ. ಇದು ಎನ್‌ಹೆಚ್-133 ಆಗಿದ್ದು, ಈ ವರ್ಷ ಮೇ ತಿಂಗಳಿನಲ್ಲಿ ಇದರ ವಿಸ್ತರಣೆಯ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿಕೊಂಡಿದ್ದರು. ಆದರೆ ದುರಸ್ತಿಗೆ ಕೇಂದ್ರ ಹಣವನ್ನು ನೀಡಿಲ್ಲ. ಈ ಹೆದ್ದಾರಿಯಿಂದ ಸಾರ್ವಜನಿಕರು ಕಷ್ಟಪಡುತ್ತಿದ್ದು, ಇದನ್ನು ಸರಿಪಡಿಸುವಂತೆ ನಾನು ಮುಖ್ಯಮಂತ್ರಿಗಳಿಗೆ ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೋಗ್ಬೇಡಿ ಸರ್- ಮಂಡ್ಯದಲ್ಲಿ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರು

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್

    ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್

    ಮುಂಬೈ: ಸಾರ್ವಜನಿಕವಾಗಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ ನೀಡಿದ್ದ ಪತಿ ವಿರುದ್ಧ ಪುಣೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪತ್ನಿ ಗರ್ಭಧರಿಸಬೇಕಾದರೆ ಸಾರ್ವಜನಿಕವಾಗಿ ಸ್ನಾನ ಮಾಡಬೇಕೆಂದು ಮಾಂತ್ರಿಕನೋರ್ವ ಸಲಹೆ ನೀಡಿದ್ದರಿಂದ ವ್ಯಕ್ತಿಯೊರ್ವ ತನ್ನ ಪತ್ನಿಗೆ ಸಾರ್ವಜನಿಕವಾಗಿ ಎಲ್ಲರ ಮುಂದೆ ಸ್ನಾನ ಮಾಡುವಂತೆ ಕಿರುಕುಳ ನೀಡಿದ ಹಿನ್ನೆಲೆ ಆತ ಮತ್ತು ಆತನ ಪೋಷಕರ ವಿರುದ್ಧ  ಪ್ರಕರಣ ದಾಖಲಾಗಿದೆ.

    ಮಾಂತ್ರಿಕ ನೀಡಿದ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಡ ಜಿಲ್ಲೆಯ ಜಲಪಾತಕ್ಕೆ ಕರೆದೊಯ್ದು ವ್ಯಕ್ತಿ ಎಲ್ಲರ ಮುಂದೆ ಸ್ನಾನ ಮಾಡುವಂತೆ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಮಡಿಕೇರಿಯಲ್ಲಿ ನಡೆದ ಮೊಟ್ಟೆ ಎಸೆತ ಪ್ರಕರಣ ನನಗೆ ಗೊತ್ತಿಲ್ಲ: ಅಪ್ಪಚ್ಚು ರಂಜನ್

    ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 498 (ವಿವಾಹಿತ ಸ್ತ್ರೀಯನ್ನು ಆಪರಾಧಿಕ ಉದ್ದೇಶದಿಂದ ಪುಸಲಾಯಿಸುವುದು ಅಥವಾ ಕರೆದುಕೊಂಡುಹೋಗುವುದು) ಮತ್ತು ಮಾನವಬಲಿ, ಅಮಾನವೀಯ, ದುಷ್ಟ, ಅಘೋರಿ ಆಚರಣೆಗಳು ಸೇರಿದಂತೆ ಮಹಾರಾಷ್ಟ್ರದ 2013ರ ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭಾರತಿ ವಿದ್ಯಾಪೀಠದ ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ತನಿಖೆ ನಡೆಸುವ ವೇಳೆ ದಂಪತಿಗೆ ಮಕ್ಕಳಿರಲಿಲ್ಲ. ಹಾಗಾಗಿ ಮಾಂತ್ರಿಕನ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಡ ಜಿಲ್ಲೆಯ ಜಲಪಾತಕ್ಕೆ ಕರೆದೊಯ್ದು ನಂತರ ಎಲ್ಲರ ಮುಂದೆ ಸ್ನಾನ ಮಾಡುವಂತೆ ಹಿಂಸೆ ನೀಡಿದ್ದಾನೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ಕೊಡಗಿನಲ್ಲಿ ನಾಳೆಯಿಂದ ಶನಿವಾರದವರೆಗೆ ನಿಷೇಧಾಜ್ಞೆ- ಮದ್ಯ ಮಾರಾಟ ನಿಷೇಧ

    Live Tv
    [brid partner=56869869 player=32851 video=960834 autoplay=true]

  • ಹಳ್ಳಕ್ಕೆ ಸ್ನಾನಕ್ಕೆ ಇಳಿದಾಗ ಪಿಟ್ಸ್ ಬಂದು ವ್ಯಕ್ತಿ ನೀರುಪಾಲು

    ಹಳ್ಳಕ್ಕೆ ಸ್ನಾನಕ್ಕೆ ಇಳಿದಾಗ ಪಿಟ್ಸ್ ಬಂದು ವ್ಯಕ್ತಿ ನೀರುಪಾಲು

    ಧಾರವಾಡ: ಹಳ್ಳಕ್ಕೆ ಸ್ನಾನಕ್ಕೆ ಇಳಿದಾಗ ಪಿಟ್ಸ್ ಬಂದು ವ್ಯಕ್ತಿಯೊಬ್ಬರು ನೀರು ಪಾಲಾದ ಘಟನೆ ನವಲಗುಂದ ತಾಲೂಕಿನ ಯಮನೂರ ಬೆಣ್ಣಿಹಳ್ಳದಲ್ಲಿ ನಡೆದಿದೆ.

    ಮುದ್ದೆಬಿಹಾಳ ಮೂಲದ ವಾಸಿಂ (22) ಮೃತ ವ್ಯಕ್ತಿ. ಇವರು ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದ ವೇಳೆ ಅವಘಡ ಸಂಭವಿಸಿದೆ. ತಾಯಿ ಜೊತೆಗೆ ಗೋವಾಕ್ಕೆ ದುಡಿಯಲು ಹೋಗಿದ್ದ ವಾಸಿಂ, ಕುಟುಂಬ ಸಮೇತ ಗೋವಾದಿಂದ ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದರು. ಅಂತೆಯೇ ಸ್ನಾನ ಮಾಡಲೆಂದು ಬೆಣ್ಣಿಹಳ್ಳಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಬುಲ್ಡೋಜರ್ ಸದ್ದು: 14 ಮನೆಗಳು ಸೇರಿದಂತೆ 17 ಟಿನ್ ಶೆಡ್ ತೆರವು

    ದರ್ಶನಕ್ಕೂ ಮೊದಲು ಸ್ನಾನ ಮಾಡಲು ಹಳ್ಳಕ್ಕೆ ಇಳಿದಿದ್ದ ವೇಳೆ ಪಿಟ್ಸ್ ಬಂದು ನೀರುಪಾಲಾಗಿದ್ದಾರೆ. ನವಲಗುಂದ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Live Tv

  • ಆನೆಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿದ ಗಾಲಿ ಜನಾರ್ದನ ರೆಡ್ಡಿ

    ಆನೆಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿದ ಗಾಲಿ ಜನಾರ್ದನ ರೆಡ್ಡಿ

    ಬಳ್ಳಾರಿ: ಅಂಗಾರಕ ಸಂಕಷ್ಟ ದಿನದ ಹಿನ್ನೆಲೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ನಾನ ಮಾಡಿಸಿ ವಿಶೇಷ ಆಹಾರ ನೀಡಿ ಪೂಜೆ ಸಲ್ಲಿಸಿದ್ದಾರೆ.

    Janardhana Reddy

    ಬಳ್ಳಾರಿಯ ಹವಂಬಾವಿಯಲ್ಲಿ ಇರುವ ರೆಡ್ಡಿ ನಿವಾಸದಲ್ಲಿ ಇಂದು ಬೆಳಗ್ಗೆ ಜನಾರ್ದನ್ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮಿ, ಆನೆಗೆ ಸ್ನಾನ ಮಾಡಿಸಿದರು. ಬಳಿಕ ಗಜರಾಜನಿಗೆ ಕಬ್ಬು, ಕಲ್ಲಂಗಡಿ, ಬೆಲ್ಲ, ಬಾಳೆಹಣ್ಣು ಸೇರಿದಂತೆ ತರಹೇವಾರಿ ಹಣ್ಣು, ಹಂಪಲ ತಿನಿಸುಗಳನ್ನು ಆನೆಗೆ ತಿನ್ನಿಸಿದರು. ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್ ಅಗರ್ವಾಲ್

    Janardhana Reddy

    ಆನೆ ತನ್ನ ಕಾಲಿನಿಂದ ತೆಂಗಿನಕಾಯಿ ಒಡೆದು ದಂಪತಿಗೆ ನೀಡಿ ಆಶೀರ್ವಾದ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲಡೆ ವೈರಲ್ ಆಗುತ್ತಿದೆ. ಆನೆ ತೆಂಗಿನಕಾಯಿ ಒಡೆಯುತ್ತಿರುವ ದೃಶ್ಯ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಸಂಕಷ್ಟದ ದಿನದಂದು ಆನೆಗೆ ಸ್ನಾನ ಮಾಡಿಸಿ ರೆಡ್ಡಿ ದಂಪತಿ ಬಳ್ಳಾರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ದಲಿತ ಹುಡುಗನಿಗೆ ಕಾಲು ನೆಕ್ಕಲು ಒತ್ತಾಯ – ವೀಡಿಯೋ ವೈರಲ್, 8 ಮಂದಿ ಅರೆಸ್ಟ್

  • ಟ್ಯೂಷನ್ ಟೀಚರ್ ಸ್ನಾನದ ವೀಡಿಯೋ ಸೆರೆಹಿಡಿದು ಸಿಕ್ಕಿಬಿದ್ದ ಹುಡ್ಗ

    ಟ್ಯೂಷನ್ ಟೀಚರ್ ಸ್ನಾನದ ವೀಡಿಯೋ ಸೆರೆಹಿಡಿದು ಸಿಕ್ಕಿಬಿದ್ದ ಹುಡ್ಗ

    ಮುಂಬೈ: ಟ್ಯೂಷನ್ ಶಿಕ್ಷಕಿ ಸ್ನಾನ ಮಾಡುತ್ತಿದ್ದ ವೀಡಿಯೋವನ್ನು ಸೆರೆಹಿಡಿದಿದ್ದಕ್ಕೆ 16 ವರ್ಷದ ಹುಡುಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಹುಡುಗ ತನ್ನ ಶಿಕ್ಷಕಿ ಸ್ನಾನ ಮಾಡಲು ತೆರಳುವ ಮುನ್ನ ಬಾತ್ ರೂಮ್‍ನಲ್ಲಿ ಮೊಬೈಲ್ ಫೋನ್‍ನನ್ನು ಬಚ್ಚಿಟ್ಟಿದ್ದಾನೆ. ಹುಡುಗನಿಗೆ 10-11 ವರ್ಷದವನಾಗಿದ್ದಗಲಿಂದಲೂ ಶಿಕ್ಷಕಿ ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಆದರೆ ಒಮ್ಮೆ ಮೊಬೈಲ್ ಫೋನ್ ಬಾತ್ ರೂಂನ ಸೋಪ್ ಬಾಕ್ಸ್ ಹಿಂದೆ ಕಂಡುಬಂದಿದ್ದು, ಶಿಕ್ಷಕಿ ಸ್ನಾನ ಮಾಡುತ್ತಿರುವ ವೀಡಿಯೋ ರೆಕಾರ್ಡ್ ಆಗುತ್ತಿರುವ ಬಗ್ಗೆ ತಿಳಿದುಬಂದಿದೆ. ಇದನ್ನೂ ಓದಿ: ಪರೀಕ್ಷೆಯ ಒತ್ತಡ ನಿಭಾಯಿಸುವುದು ಹೇಗೆ- ವಿದ್ಯಾರ್ಥಿಗಳಿಗೆ ಮೋದಿ ಟಿಪ್ಸ್‌

    ನಂತರ ಮೊಬೈಲ್ ಫೋನ್ ಪರಿಶೀಲಿಸಿದ ಶಿಕ್ಷಕಿಗೆ ತನ್ನ ಬೆತ್ತಲೆಯ ಹಳೆಯ ಫೋಟೋ ಹಾಗೂ ವೀಡಿಯೋಗಳನ್ನು ನೋಡಿ ಶಾಕ್ ಆಗಿದ್ದಾರೆ. ಬಳಿಕ ಪುಣೆಯ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಹುಡುಗನ ವಿರುದ್ಧ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಹುಡುಗನ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಸಿದ್ದಾರೆ. ಇದನ್ನೂ ಓದಿ: 20 ಕಡೆ ದಾಳಿ, ಸಾವಿರಾರು ಜನರ ಹತ್ಯೆ – ಮೋದಿಗೆ ಕೊಲೆ ಬೆದರಿಕೆ

  • ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿದೆ: ಕೇಂದ್ರ

    ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿದೆ: ಕೇಂದ್ರ

    ನವದೆಹಲಿ: ಗಂಗಾ ನದಿಯ ನೀರು ಸ್ನಾನ ಮಾಡಲು ಯೋಗ್ಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಗಂಗಾ ನದಿ ಸ್ನಾನದ ಮಾನದಂಡಗಳ ಸ್ವೀಕಾರಾರ್ಹ ಮಿತಿಗಳಲ್ಲಿದೆ ಎಂದಿದೆ.

    ಕೇಂದ್ರ ಜಲಶಕ್ತಿ ಹಾಗೂ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಬಿಶ್ವೇಶ್ವರ ಟುಡು, ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ ತುಡು ಮಾತನಾಡಿ, ಗಂಗಾ ಸ್ಟ್ರೆಚ್‌ಗಳು (Ganga stretches) ಆದ್ಯತೆಯ ವರ್ಗದಲ್ಲಿ 4 ವರೆಗೆ ಇಲ್ಲ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಗಂಗಾ ನದಿಯ ಎರಡು ಸ್ಟ್ರೆಚ್‌ಗಳು 3 ಮತ್ತು 6 ಮಿಲಿಗ್ರಾಂ ಲೀಟರ್‌ವರೆಗಿನ ಜೈವಿಕ ಆಮ್ಲಜನಕದೊಂದಿಗೆ (BOD) 4 ವರ್ಗದಲ್ಲಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

    ವರ್ಗ 1 ಅನ್ನು ಹೆಚ್ಚಿನ ಪ್ರಮಾಣದ ಜೈವಿಕ ಆಮ್ಲಜನಕದಿಂದ ಹೆಚ್ಚು ಕಲುಷಿತಗೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ 4 ವರ್ಗವನ್ನು ಕಡಿಮೆ ಮಾಲಿನ್ಯವೆಂದು ಪರಿಗಣಿಸಲಾಗುತ್ತದೆ.

    2021 ರ CPCB ದತ್ತಾಂಶದ ಪ್ರಕಾರ, ಗಂಗಾ ನದಿಯ ನೀರಿನ ಗುಣಮಟ್ಟವು ಕರಗಿದ ಆಮ್ಲಜನಕ (DO) ಅಧಿಸೂಚಿತವು ಸ್ನಾನದ ನೀರಿನ ಗುಣಮಟ್ಟದ ಮಾನದಂಡಗಳ ಸ್ವೀಕಾರಾರ್ಹ ಮಿತಿಯೊಳಗೆ ಕಂಡುಬಂದಿದೆ. ನದಿಯ ಪರಿಸರ ವ್ಯವಸ್ಥೆಯು ಒಪ್ಪಿಕೊಳ್ಳುವ ಸ್ಥಿತಿಯಲ್ಲಿದೆ ಎಂದು ಸೂಚಿಸುತ್ತದೆ. ಇದನ್ನೂ ಓದಿ: ಏರ್‌ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್‌ ಮುಖ್ಯಸ್ಥ ಎನ್.ಚಂದ್ರಶೇಖರನ್‌ ನೇಮಕ

    ನಮಾಮಿ ಗಂಗೆ ಕಾರ್ಯಕ್ರಮದಡಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಐದು ರಾಜ್ಯಗಳ 97 ಸ್ಥಳಗಳಲ್ಲಿ ಆಯಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಮೂಲಕ ಗಂಗಾ ನದಿಯ ನೀರಿನ ಗುಣಮಟ್ಟ ಮೌಲ್ಯಮಾಪನ ನಡೆಸುತ್ತಿದೆ. ಕಾರ್ಯಕ್ರಮದಡಿ 30,853 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಒಟ್ಟು 364 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದ್ದು, 183 ಯೋಜನೆಗಳನ್ನು ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗಿದೆ.

  • ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ತಾಯಿ, ಮಗು ಉಸಿರುಗಟ್ಟಿ ಸಾವು

    ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ತಾಯಿ, ಮಗು ಉಸಿರುಗಟ್ಟಿ ಸಾವು

    ಬೆಂಗಳೂರು: ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿ ತಾಯಿ-ಮಗು ಉಸಿರುಗಟ್ಟಿ ಸಾವನ್ನಪ್ಪಿದ ದುರ್ಘಟನೆ ಸಿಲಿಕಾನ್ ಸಿಟಿಯ ಚಿಕ್ಕಬಾಣಾವರದಲ್ಲಿ ನಡೆದಿದೆ.

    ಮೃತ ದುರ್ದೈವಿಗಳನ್ನು ಮಂಗಳಾ(35) ಹಾಗೂ ಮಗಳು ಗೌತಮಿ(7) ಎಂದು ಗುರುತಿಸಲಾಗಿದೆ. ಮಂಜುಳಾ ಪತಿ ಕೆಲಸಕ್ಕೆ ತೆರಳಿದ ಬಳಿಕ ಈ ಅವಘಢ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಂಗಳಾ ಅವರು ಗ್ಯಾಸ್ ಗೀಸರ್ ಆನ್ ಮಾಡಿ ಮಗಳು ಗೌತಮಿಗೆ ಸ್ನಾನ ಮಾಡಿಸಲೆಂದು ಹೋಗಿದ್ದರು. ಈ ವೇಳೆ ಗೀಸರ್ ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಇಡೀ ಕೊಠಡಿ ಆವರಿಸಿದೆ. ಪರಿಣಾಮ ಉಸಿರಾಡಲು ಸಾಧ್ಯವಾಗದೆ ಅಮ್ಮ-ಮಗಳು ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇದನ್ನೂ ಓದಿ: ಸಿಗರೇಟ್‌ನಿಂದ ಸುಟ್ಟು ಸಾಮೂಹಿಕ ಅತ್ಯಾಚಾರ- ಪತಿ, ಆತನ ಸ್ನೇಹಿತರು ಅರೆಸ್ಟ್‌

    ಇತ್ತ ಸಂಜೆಯಾದರೂ ಮಂಗಳಾ ಅವರು ನಮನೆಯಿಂದ ಹೊರಬಾರದ್ದನ್ನು ಗಮನಿಸಿದ ಮಾಲೀಕರು ಮನೆಯೊಳಗೆ ಹೋಗಿ ನೋಡಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ನಂತರ ತಾಯಿ-ಮಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಯಿತು.

    ಘಟನೆ ಸಂಬಮಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ

    ಭೂಪಾಲ್: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಪುಷ್ಪಾ ಬಾಯಿ (45) ಮೃತಳು, ಈಕೆ ಪತಿ ರಾಜಕುಮಾರ್ ಬಹೆ (50) ಕೊಲೆ ಮಾಡಿದ್ದಾನೆ. ಈತ ಅರಣ್ಯ ಇಲಾಖೆಯ ದಿನಗೂಲಿ ನೌಕರನಾಗಿದ್ದನು. ಸ್ನಾನಕ್ಕೆ ಹೋದಾಗ ತನ್ನ ಹೆಂಡತಿಯನ್ನು ಕರೆದು ಟವೆಲ್ ಕೊಡಲು ಹೇಳಿದ್ದ. ಆದರೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದಳು. ಆತನ ಸ್ನಾನ ಮುಗಿದರೂ ಆಕೆ ಟವೆಲ್ ಕೊಡದಿದ್ದರಿಂದ ಕೋಪಗೊಂಡ ಗಂಡ ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಡೆದಿದ್ದೇನು?: ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಕಿರ್ನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೀರಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:  ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಮಾಡುವ ವಿಧಾನ

    ರಾಜಕುಮಾರ್ ಬಹೆ ಸ್ನಾನದ ನಂತರ ಟವೆಲ್ ನೀಡುವಂತೆ ಕೇಳಿದ್ದ. ಪುಷ್ಪ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದುದರಿಂದ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಳು. ಇದರಿಂದ ಕೋಪಗೊಂಡ ವ್ಯಕ್ತಿ ಸ್ನಾನ ಮುಗಿಸಿ ಹೊರಗೆ ಬಂದ ನಂತರ ಕಬ್ಬಿಣದ ರಾಡಿನಿಂದ ಪತ್ನಿಯ ತಲೆಗೆ ಪದೇ ಪದೇ ಹೊಡೆದಿದ್ದಾನೆ. ಇದರಿಂದ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತನ್ನ ಅಪ್ಪನನ್ನು 23 ವರ್ಷದ ಮಗಳನ್ನು ತಡೆಯಲು ಪ್ರಯತ್ನಿಸಿದಾಗ ಆಕೆಗೆ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ

    ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಭಾನುವಾರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಭಾನುವಾರ ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

  • ಅಣ್ಣನೊಂದಿಗೆ ಕೆರೆ ಸ್ನಾನಕ್ಕೆ ಹೋಗಿದ್ದ ತಮ್ಮ ವಾಪಸ್ ಬರಲೇ ಇಲ್ಲ!

    ಅಣ್ಣನೊಂದಿಗೆ ಕೆರೆ ಸ್ನಾನಕ್ಕೆ ಹೋಗಿದ್ದ ತಮ್ಮ ವಾಪಸ್ ಬರಲೇ ಇಲ್ಲ!

    ಮಡಿಕೇರಿ: ಸ್ನಾನಕ್ಕೆಂದು ಅಣ್ಣನೊಂದಿಗೆ ಕೆರೆಗೆ ತೆರಳಿದ್ದ ತಮ್ಮ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

    ವಿರಾಜಪೇಟೆ ನಗರದ ಶಾಂತಿ ನಗರದ ನಿವಾಸಿ ಬಿಎಸ್‍ಎಫ್ ನಿವೃತ್ತ ಯೋಧ ದಿವಂಗತ ಮಜೀದ್ ಡಿ.ಎ ಅವರ ಪುತ್ರ ವಿದ್ಯಾರ್ಥಿ ಮೊಹಮ್ಮದ್ ಜೀಯಾನ್ (19) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ. ಜೀಯಾನ್ ತನ್ನ ಅಣ್ಣನೊಂದಿಗೆ ಬುಧವಾರ ಬೆಳಗ್ಗೆ ತೋಟಕ್ಕೆ ಹೋಗಿದ್ದ. ತೋಟದ ಅಂಚಿನಲ್ಲಿರುವ ಕೆರೆಗೆ ಸ್ನಾನ ಮಾಡಲೆಂದು ತೆರಳಿದ್ದಾರೆ. ಈ ವೇಳೆ ನೀರಿನ ಆಳಕ್ಕೆ ಹೋದ ಜೀಯಾನ್ ಮುಳುಗಿದ್ದಾನೆ. ಅಣ್ಣ ನೆರೆಹೊರೆಯವರ ಸಹಾಯದಿಂದ ಪಾರಾಗಿದ್ದು, ಜೀಯಾನ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ

    ಯುವಕ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದೆ.