ನವದೆಹಲಿ: ಭಾರತದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ನೀಡಿದ ಸವಾಲನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪೂರ್ಣ ಮಾಡುವ ಮೂಲಕ ಸಚಿನ್ ತೆಂಡೂಲ್ಕರ್ ಅವರು ನಾನೊಬ್ಬ ಕ್ರಿಕೆಟ್ ಲೆಜೆಂಡ್ ಎಂಬುದನ್ನು ಮೊತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಕೊರೊನಾ ಲಾಕ್‍ಡೌನ್ ನಡುವೆ ಮನೆಯಲ್ಲಿ ಇರುವ ಯುವರಾಜ್ ಸಿಂಗ್ ಅವರು ಗುರುವಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸಚಿನ್ ತೆಂಡೂಲ್ಕರ್,ರೋಹಿತ್ ಶರ್ಮಾ ಮತ್ತು ಹರ್ಭಜನ್ ಸಿಂಗ್ ಅವರಿಗೆ ಕೀಪ್ ಈಟ್ ಆಪ್ ಎಂಬ ಜಾಲೆಂಜ್ ಕೊಟ್ಟಿದ್ದರು. ಈ ಚಾಲೆಂಜ್ ಅನ್ನು ಸ್ವೀಕರಿಸಿರುವ ಸಚಿನ್ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸವಾಲನ್ನು ಪೂರ್ಣಗೊಳಿಸಿದ್ದಾರೆ.
https://twitter.com/YUVSTRONG12/status/1260931470048129024
ಯುವರಾಜ್ ಸಿಂಗ್ ಕೊಟ್ಟ ಕೀಪ್ ಈಟ್ ಆಪ್ ಚಾಲೆಂಜ್‍ನಲ್ಲಿ ಕ್ರಿಕೆಟ್ ಬ್ಯಾಟಿನ ಒಂದು ಕಡೆ ಅಂಚಿನಲ್ಲಿ ಬಾಲನ್ನು ಬ್ಯಾಲೆನ್ಸ್ ಮಾಡಬೇಕಿತ್ತು. ಈ ಸವಾಲನ್ನು ನೀಡಿದ್ದ ಯುವಿ ಈ ಸವಾಲು ಸಚಿನ್ ಮತ್ತು ರೋಹಿತ್ ಗೆ ಸುಲಭವಾಗುತ್ತದೆ. ಆದರೆ ಹರ್ಭಜನ್ ಸಿಂಗ್ ಅವರಿಗೆ ಕಷ್ಟವಾಗುತ್ತದೆ. ಟ್ರೈ ಮಾಡಿ ಎಂದು ಹೇಳಿದ್ದರು. ಈ ಸವಾಲನ್ನು ಸ್ವೀಕರಿಸಿ ಕಣ್ಣು ಮುಚ್ಚಿ ಬಾಲನ್ನು ಬ್ಯಾಲೆನ್ಸ್ ಮಾಡಿರುವ ಸಚಿನ್ ಮತ್ತೆ ಯವರಾಜ್ ಅವರಿಗೆ ಇದನ್ನು ಮಾಡುವಂತೆ ಸವಾಲ್ ಹಾಕಿದ್ದಾರೆ.
https://www.instagram.com/p/CAPuZhxlGbk/?utm_source=ig_embed
ಕಣ್ಣಿಗೆ ಬಟ್ಟೆಕಟ್ಟಿಕೊಂಡು ಚಾಲೆಂಜ್ ಮಾಡಿರುವ ಸಚಿನ್, ಯುವಿ ನೀವು ತುಂಬ ಸುಲಭವಾದ ಆಯ್ಕೆಯನ್ನು ನನಗೆ ನೀಡಿದ್ದೀರಿ. ಆದರೆ ನಾನು ನಿಮಗೆ ಕಠಿಣವಾದ ಆಯ್ಕೆಯನ್ನು ನೀಡುತ್ತಿದ್ದೇನೆ. ಹಾಗೂ ನಿಮ್ಮನ್ನು ಈ ಚಾಲೆಂಜ್‍ಗೆ ನಾಮಿನೇಟ್ ಮಾಡಿದ್ದೇನೆ. ಬನ್ನಿ ನನಗಾಗಿ ಈ ಸವಾಲನ್ನು ಮಾಡಿ ಎಂದು ಸಚಿನ್ ಅವರು ಹೇಳಿದ್ದಾರೆ. ಜೊತೆಗೆ ನಾನು ನಿನಗೆ ವಾಪಸ್ ಚಾಲೆಂಜ್ ಮಾಡುತ್ತಿದ್ದೇನೆ ಯುವರಾಜ್ ಸಿಂಗ್, ಆದರೆ ನಾನು ಒಂದು ಟ್ವಿಸ್ಟ್ ಕೊಟ್ಟಿದ್ದೇನೆ. ನಾನು ಎಲ್ಲರೂ ಈ ಚಾಲೆಂಜ್ ಮಾಡಲು ಕೇಳುತ್ತೇನೆ ಸೇಫ್ ಆಗಿ ಮನೆಯಲ್ಲೇ ಇರಿ ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಸಚಿನ್ ಅವರು ಇನ್ನೊಂದು ವಿಡಿಯೋ ಆಪ್ಲೋಡ್ ಮಾಡಿದ್ದು, ಆದರಲ್ಲಿ ಯುವರಾಜ್ ಸಿಂಗ್ ಅವರಿಗೆ ಚಾಲೆಂಜ್ ಮಾಡಲು ಒಂದು ಸಲಹೆಯನ್ನು ನೀಡಿದ್ದಾರೆ. ನಾನು ಕಣ್ಣಿಗೆ ಕಟ್ಟಿಕೊಂಡಿರುವ ಬಟ್ಟೆ ಬಹಳ ತೆಳುವಾಗಿದೆ. ಈ ರೀತಿ ನೀವು ಚಾಲೆಂಜ್ ಅನ್ನು ಪೂರ್ಣಗೊಳಿಸಬಹುದು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಯುವರಾಜ್ ಸಿಂಗ್ ಅವರು, ನಾನು ಈ ಸವಾಲನ್ನು ಮಾಡಲು ಒಂದು ವಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಸುಮಾರು 60 ವರ್ಷದ ನಂತರ ಕೊರೊನಾದಿಂದ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈ ನಡುವೆ ಮನೆಯಲ್ಲಿ ಕುಳಿತಿರುವ ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ. ಲೈವ್‍ನಲ್ಲಿ ಬಂದು ಅಭಿಮಾನಿಗಳ ಬಳಿ ಮಾತನಾಡುತ್ತಿದ್ದಾರೆ. ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.