Tag: Basundi

  • ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

    ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

    ದೇಶಾದ್ಯಂತ ನವರಾತ್ರಿ ಹಬ್ಬ ಆಚರಿಸಲಾಗುತ್ತಿದೆ. ಹಬ್ಬದ ದಿನ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಸಿಹಿಯಾದ ಅಡುಗೆ ಮಾಡಿ ಸವಿಯುವುದು ಸರ್ವೇ ಸಾಮಾನ್ಯ. ಆದರೆ ನವರಾತ್ರಿ ಹಬ್ಬದ ವೇಳೆ 9 ದಿನ ಯಾವ ರೀತಿಯ ಸಿಹಿತಿಂಡಿಯನ್ನು ಮಾಡಬೇಕೆಂದು ಯೋಚಿಸುತ್ತಿರುವ ನಿಮಗೆ ನಾವು ಸಿಹಿಯಾದ ಬಾಸುಂದಿ ಮಾಡುವ ವಿಧಾನ ಹಾಗೂ ಬೇಕಾಗಿರುವ ಸಾಮಗ್ರಿಗಳು ಏನು ಎಂದು ಹೇಳುತ್ತೇವೆ. ಹಬ್ಬದ ದಿನದಂದು ಬಾಸುಂದಿ ಸವಿಯುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಿ.

    Basundi

    ಬೇಕಾಗುವ ಸಾಮಗ್ರಿಗಳು:
    * ಹಾಲು- 2ಕಪ್
    * ಕೆನೆ/ಹೆವಿ ಕ್ರೀಮ್- 2 ಚಮಚ
    * ಕೋವಾ- 1ಚಮಚ
    * ಏಲಕ್ಕಿ- 1
    * ಸಕ್ಕರೆ- ಅರ್ಧ ಕಪ್
    * ಕೇಸರಿ- ಸ್ವಲ್ಪ
    * ಬಾದಾಮಿ- ಸ್ವಲ
    * ಪಿಸ್ತಾ- ಸ್ವಲ್ಪ

    Basundi

    ಮಾಡುವ ವಿಧಾನ:
    * ಸ್ವಲ್ಪ ಕೇಸರಿ ಎಳೆಗಳನ್ನು ಬಿಸಿಯಾದ ನೀರಿನಲ್ಲಿ ನೆನೆಸಿಡಿ
    * ಒಂದು ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ಹಾಲನ್ನು ಸೇರಿಸಿ, ಕುದಿಯಲು ಬಿಡಿ. ಒಮ್ಮೆ ಹಾಲು ಕುದಿ ಬಂದ ತಕ್ಷಣ ಕೇಸರಿ, ಕೋವಾವನ್ನು ಸೇರಿಸಿ ಚೆನ್ನಾಗಿ ಬೇಯಿಸಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    Basundi

    * ನಂತರ, ಹೆವಿ ಕ್ರೀಮ್, ಏಲಕ್ಕಿ ಪುಡಿ, ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ಸೇರಿಸಿ 3-4 ನಿಮಿಷಗಳ ಕಾಲ ಕುದಿಸಬೇಕು.
    * ಹಾಲು ಮೊದಲಿನ ಪ್ರಮಾಣಕ್ಕಿಂತ ಕಡಿಮೆಯಾಗಿ, ದಪ್ಪವಾದ ಸ್ಥಿರತೆಯನ್ನು ಪಡೆದುಕೊಳ್ಳುತ್ತಿದ್ದಾಗ ಸಕ್ಕರೆಯನ್ನು ಸೇರಿಸಿ. ಸಕ್ಕರೆಯು ಚೆನ್ನಾಗಿ ಕುದಿಸಿದರೆ ಬಾಸುಂದಿ ರೆಸಿಪಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನವರಾತ್ರಿ ಉಪವಾಸ- ಈ ಆಹಾರಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    Live Tv
    [brid partner=56869869 player=32851 video=960834 autoplay=true]

  • ಬಾಸುಂದಿ ಮಾಡುವ ಸರಳ ವಿಧಾನ ನಿಮಗಾಗಿ

    ಬಾಸುಂದಿ ಮಾಡುವ ಸರಳ ವಿಧಾನ ನಿಮಗಾಗಿ

    ನಿಮಗೆ ಯಾವುದಾದರೂ ಸಿಹಿ ತಿನ್ನಬೇಕು ಎಂದು ಆಸೆಯಾದಾಗ, ಮನೆಯಲ್ಲಿ ಸಮಾರಂಭ ಇದ್ದಾಗ ಅಥವಾ ವಿಶೇಷ ಹಬ್ಬಕ್ಕೆ ಮನೆಯಲ್ಲೇ ಸಿಹಿ ತಿನಿಸು ತಯಾರಿಸಬೇಕು ಎಂದಿದ್ದರೆ ಬಾಸುಂದಿ ಮಾಡಿ ಸಖತ್ ಟೇಸ್ಟ್ ಆಗಿರುತ್ತದೆ

    ಬೇಕಾಗುವ ಸಾಮಗ್ರಿಗಳು:
    * ಹಾಲು- 2 ಲೀಟರ್
    * ಕೇಸರಿದಳ – ಸ್ವಲ್ಪ
    * ಬಾದಾಮಿ, ಗೋಡಂಬಿ, ಪಿಸ್ತಾ- ಅರ್ಧ ಕಪ್
    * ಸಕ್ಕರೆ- 1 ಕಪ್
    * ಏಲಕ್ಕಿಪುಡಿ- ಸ್ವಲ್ಪ

    Basundi
    ಮಾಡುವ ವಿಧಾನ:
    * ಒಂದು ಪಾತ್ರೆಗೆ ಹಾಲು ಹಾಗೂ ಕೇಸರಿದಳ ಹಾಕಿ ಕುದಿಸಿ. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
    * ಮಧ್ಯಮ ಉರಿಯಲ್ಲಿ ಹಾಲು ಕುದಿ ಬಂದಾಗ ಕಟ್ಟಿದ ಕೆನೆಯನ್ನು ತೆಗೆದು ಹಾಲಿನ ಮಧ್ಯದಲ್ಲಿ ಹಾಕುತ್ತಾ ಬನ್ನಿ. ಹೀಗೆ ಪ್ರತಿ ಬಾರಿಯೂ ಮಾಡುತ್ತಾ ಬನ್ನಿ. ಹಾಲು ಕೆನೆಯೊಂದಿಗೆ ಗಟ್ಟಿಯಾಗುತ್ತಾ ಬಂದಾಗ ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾವನ್ನು ಹಾಕಿ ಮಿಶ್ರಣ ಮಾಡಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ಹಾಲು ಗಟ್ಟಿಯಾಗಲು ಅರ್ಧ ಗಂಟೆ ಬೇಕಾಗುತ್ತದೆ. ನಂತರ ಸಕ್ಕರೆಯನ್ನು ಸೇರಿಸಿ. 5 ನಿಮಿಷ ಕುದಿಸಿ. ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಹಾಲು ದಪ್ಪವಾದ ಬಳಿಕ ಒಲೆಯಿಂದ ಇಳಿಸಿ. ಪೂರ್ತಿ ಆರಲು ಬಿಡಿ. ಈಗ ಬಾಸುಂದಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್