Tag: Basmati Rice

  • ಇರಾನ್‌, ಇಸ್ರೇಲ್‌ ಸಂಘರ್ಷ – ಭಾರತದ ಬಂದರುಗಳಲ್ಲಿ ಉಳಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ

    ಇರಾನ್‌, ಇಸ್ರೇಲ್‌ ಸಂಘರ್ಷ – ಭಾರತದ ಬಂದರುಗಳಲ್ಲಿ ಉಳಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ

    –  ಸಂಘರ್ಷದಿಂದ ಹಡಗಲ್ಲಿರೋ ಸರಕಿಗೆ ವಿಮೆ ಅನ್ವಯಿಸಲ್ಲ – ರಫ್ತುದಾರರ ಆತಂಕ

    ನವದೆಹಲಿ: ಇಸ್ರೇಲ್‌ ಹಾಗೂ ಇರಾನ್‌ ಸಂಘರ್ಷದಿಂದ (Israel-Iran Conflict) ಭಾರತದ ಅಕ್ಕಿ ರಫ್ತಿನ ಮೇಲೆ ಭಾರೀ ಹೊಡೆತ ಬಿದ್ದಿದೆ. ಇರಾನ್‌ಗೆ ರಫ್ತಾಗಬೇಕಿದ್ದ (Export) ಸುಮಾರು 1 ಲಕ್ಷ ಟನ್ ಬಾಸ್ಮತಿ ಅಕ್ಕಿ (Basmati Rice) ಭಾರತದ (India) ಬಂದರುಗಳಲ್ಲೇ ಉಳಿದುಕೊಂಡಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಮಾಹಿತಿ ನೀಡಿದೆ.

    ಸೌದಿ ಅರೇಬಿಯಾದ ನಂತರ ಭಾರತ ದಿಂದ ಹೆಚ್ಚು ಬಾಸ್ಮತಿ ಅಕ್ಕಿ ಆಮದು ಮಾಡಿಕೊಳ್ಳುವ ರಾಷ್ಟ್ರ ಇರಾನ್ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 10 ಲಕ್ಷ ಟನ್ ಬಾಸ್ಮತಿ ಅಕ್ಕಿ ಭಾರತದಿಂದ ಇರಾನ್‌ಗೆ ರಫ್ತಾಗಿತ್ತು. ಈಗ ನಡೆಯುತ್ತಿರುವ ಸಂಘರ್ಷದಿಂದಾಗಿ, ರಫ್ತಾಗಬೇಕಿದ್ದ 18% – 20% ರಷ್ಟು ಬಾಸ್ಮತಿ ಅಕ್ಕಿ ಇಲ್ಲೇ ಉಳಿಯುವಂತಾಗಿದೆ. ಇದನ್ನೂ ಓದಿ: ಇಸ್ರೇಲ್‌- ಇರಾನ್‌ ಯುದ್ಧ ಮುಕ್ತಾಯ | ಕದನ ವಿರಾಮ ಘೋಷಿಸಿದ ಟ್ರಂಪ್‌

    ಜೂ.30ಕ್ಕೆ ವಾಣಿಜ್ಯ ಸಚಿವರ ಜೊತೆ ರಫ್ತುದಾರರ ಸಭೆ
    ಇರಾನ್‌ಗೆ ತೆರಳಬೇಕಿದ್ದ ಅಕ್ಕಿ ತುಂಬಿದ ಹಡಗುಗಳು ಗುಜರಾತ್‌ನ ಕಾಂಡ್ಲಾ ಹಾಗೂ ಮುಂಡ್ರಾ ಬಂದರಿನಲ್ಲೇ ಉಳಿದಿವೆ. ಸಂಘರ್ಷ ನಡೆಯುತ್ತಿರುವುದರಿಂದ ಹಡಗಿನಲ್ಲಿರುವ ಸರಕಿಗೆ ವಿಮೆ ಅನ್ವಯವಾಗುವುದಿಲ್ಲ. ಇದರಿಂದ ರಫ್ತುದಾರರು ನಷ್ಟವಾಗುವ ಆತಂಕದಲ್ಲಿದ್ದಾರೆ. ದೇಶೀಯ ಬಾಸ್ಮತಿ ಅಕ್ಕಿ ಬೆಲೆಯಲ್ಲಿ ಕೇಜಿಗೆ 4ರಿಂದ 5 ರೂ. ಕಡಿಮೆಯಾಗಿರುವುದು ರಫ್ತುದಾರರನ್ನು ಮತ್ತಷ್ಟು ಚಿಂತೆಗೆದೂಡಿದೆ. ಇದನ್ನೂ ಓದಿ: ಸುರಕ್ಷಿತ ಸ್ಥಳಗಳಲ್ಲೇ ಇರಿ – ಇರಾನ್‌ ಮಿಸೈಲ್‌ ದಾಳಿ ಬೆನ್ನಲ್ಲೇ ಕತಾರ್‌ನಲ್ಲಿರೋ ಭಾರತೀಯರಿಗೆ ಎಚ್ಚರಿಕೆ

  • ತುಂಬಾ ಸಿಂಪಲ್ ಆಗಿ ಮಾಡಿ ಗೀರೈಸ್

    ತುಂಬಾ ಸಿಂಪಲ್ ಆಗಿ ಮಾಡಿ ಗೀರೈಸ್

    ಬಾಸ್ಮತಿ ರೈಸ್ (Basmati Rice) ಹಾಗೂ ತುಪ್ಪದಿಂದ (Ghee) ತಯಾರಿಸಲಾಗುವ ಗೀರೈಸ್ (Ghee Rice) ದಕ್ಷಿಣ ಭಾರತದ ಒಂದು ಫೇಮಸ್ ಪಾಕ ವಿಧಾನ. ಗೀರೈಸ್ ತುಂಬಾ ರುಚಿಯಾದ ಸ್ವಾದ ನೀಡುತ್ತದಾದರೂ ಇದನ್ನು ಕುರ್ಮ ಅಥವಾ ಗ್ರೇವಿಯೊಂದಿಗೆ ಸವಿದರೆ, ಇದರ ರುಚಿಯನ್ನು ದುಪ್ಪಟ್ಟು ಮಾಡಬಹುದು. ತುಂಬಾ ಸಿಂಪಲ್ ಆಗಿ ಗೀರೈಸ್ ಮಾಡುವ ವಿಧಾನವನ್ನು ನಾವಿಂದು ಹೇಳಿಕೊಡುತ್ತೇವೆ. ರುಚಿಕರ ಗೀರೈಸ್ ಅನ್ನು ಒಮ್ಮೆ ನೀವು ಕೂಡಾ ಮನೆಯಲ್ಲಿ ಮಾಡಿ ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 1 ಟೀಸ್ಪೂನ್
    ಅರ್ಧಕ್ಕೆ ಕತ್ತರಿಸಿದ ಗೋಡಂಬಿ – 8
    ಒಣದ್ರಾಕ್ಷಿ – 2 ಟೀಸ್ಪೂನ್
    ಕರಿಬೇವಿನ ಎಲೆ – 1
    ದಾಲ್ಚಿನ್ನಿ ಚಕ್ಕೆ – 1 ಇಂಚು
    ಏಲಕ್ಕಿ – 2
    ಲವಂಗ – 5

    ಕಾಳು ಮೆಣಸು – ಅರ್ಧ ಟೀಸ್ಪೂನ್
    ಕತ್ತರಿಸಿದ ಈರುಳ್ಳಿ – ಅರ್ಧ
    ಸೀಳಿದ ಮೆಣಸಿನಕಾಯಿ – 1
    ಬಾಸ್ಮತಿ ಅಕ್ಕಿ – 1 ಕಪ್ (20 ನಿಮಿಷ ನೀರಿನಲ್ಲಿ ನೆನೆಸಿಡಿ)
    ನೀರು – 2 ಕಪ್
    ನಿಂಬೆ ರಸ – 1 ಟೀಸ್ಪೂನ್
    ಉಪ್ಪು – 1 ಟೀಸ್ಪೂನ್ ಇದನ್ನೂ ಓದಿ: ಡಾಬಾ ಸ್ಟೈಲ್‌ನಲ್ಲಿ ಮಾಡಿ ಪನೀರ್ ಭುರ್ಜಿ ಗ್ರೇವಿ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ ಹುರಿಯಿರಿ.
    * ಗೋಡಂಬಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ತಕ್ಷಣ ತುಪ್ಪದಿಂದ ತೆಗೆದು ಪಕ್ಕಕ್ಕಿರಿಸಿ.
    * ಈಗ ಅದೇ ಕಡಾಯಿಯಲ್ಲಿ ಕರಿ ಬೇವಿನ ಎಲೆ, ದಾಲ್ಚಿನ್ನಿ ಚಕ್ಕೆ, ಏಲಕ್ಕಿ, ಲವಂಗ ಮತ್ತು ಕಾಳು ಮೆಣಸು ಹಾಕಿ.
    * ಈರುಳ್ಳಿ, ಮೆಣಸಿನಕಾಯಿ ಸೇರಿಸಿ, ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಈಗ ನೆನೆಸಿಟ್ಟ ಬಾಸ್ಮತಿ ಅಕ್ಕಿ ಹಾಕಿ, 1 ನಿಮಿಷ ಹುರಿಯಿರಿ.
    * ಬಳಿಕ 2 ಕಪ್ ನೀರು, 1 ಟೀಸ್ಪೂನ್ ನಿಂಬೆ ರಸ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ, ಕುದಿಸಿ.
    * ಕಡಾಯಿಯನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಿಸಿ.
    * ಈಗ ಹುರಿದ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹಾಕಿ ಮಿಕ್ಸ್ ಮಾಡಿ.
    * ಇದೀಗ ಗೀರೈಸ್ ತಯಾರಾಗಿದ್ದು, ಕುರ್ಮಾದೊಂದಿಗೆ ಸವಿಯಿರಿ. ಇದನ್ನೂ ಓದಿ: ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ

    Live Tv
    [brid partner=56869869 player=32851 video=960834 autoplay=true]

  • ಅಮೆರಿಕ, ಇರಾನ್ ಯುದ್ಧದ ಕಾರ್ಮೋಡ- ಭಾರೀ ಸಂಕಷ್ಟಕ್ಕೆ ಸಿಲುಕಿದ ಬಳ್ಳಾರಿ ರೈತರು

    ಅಮೆರಿಕ, ಇರಾನ್ ಯುದ್ಧದ ಕಾರ್ಮೋಡ- ಭಾರೀ ಸಂಕಷ್ಟಕ್ಕೆ ಸಿಲುಕಿದ ಬಳ್ಳಾರಿ ರೈತರು

    ಬಳ್ಳಾರಿ: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿ ಮಾಡಿದೆ. ಅಲ್ಲದೇ ಈ ಯುದ್ಧದ ಭೀತಿ ಹಲವು ರಾಷ್ಟ್ರಗಳಲ್ಲಿ ಋಣತ್ಮಾಕ ಪ್ರಭಾವವನ್ನು ಬೀರಿದೆ. ಅದರಲ್ಲೂ ರಾಜ್ಯದ ಬಳ್ಳಾರಿಯ ಕಂಪ್ಲಿ ರೈತರಿಗೆ ಸಂಕಷ್ಟ ಎದುರಾಗಿದೆ.

    ಇರಾನ್ ಹಾಗೂ ಅಮೆರಿಕ ನಡುವಣ ಉದ್ವಿಗ್ನ ಸ್ಥಿತಿ ಭಾರತದ ಮೇಲೆ ಹಲವು ರೀತಿಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ. ತೈಲ ಸಂಪದ್ಭರಿತವಾದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಬಿಕ್ಕಟ್ಟು, ಭಾರತಕ್ಕೆ ಕೇವಲ ಪೆಟ್ರೋಲಿಯಂ ಉತ್ಪನ್ನಗಳು ಮಾತ್ರವಲ್ಲದೇ ಹಲವು ವಹಿವಾಟುಗಳಿಗೂ ಹೊಡೆತ ನೀಡುತ್ತಿದೆ.

    ಭಾರತದಿಂದ ಬಾಸುಮತಿ ಅಕ್ಕಿಯನ್ನು ಖರೀದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇರಾನ್‍ಗೆ ಬಾಸುಮತಿ ಅಕ್ಕಿಯನ್ನು ರಫ್ತು ಮಾಡಲು ಸಾಧ್ಯವಿಲ್ಲ. ಉದ್ವಿಗ್ನ ಪರಿಸ್ಥಿತಿಯು ತಿಳಿಯಾಗುವವರೆಗೂ ರಫ್ತು ಬೇಡಿಕೆ ಸ್ವೀಕರಿಸಬೇಡಿ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ತನ್ನ ಸದಸ್ಯರಲ್ಲಿ ಮನವಿ ಮಾಡಿದೆ.

    ಕಂಪ್ಲಿಯಲ್ಲಿ ಬೆಳೆಯುವ ಬಾಸುಮತಿ ಮತ್ತು ಸೋನಾ ಮಸೂರಿಗೆ ಇರಾನ್ ಮತ್ತು ದುಬೈನಲ್ಲಿ ಉತ್ತಮ ಬೇಡಿಕೆ ಇದ್ದು ಪ್ರತಿ ಕೆಜಿಗೆ 105 ರೂ. ಬೆಲೆ ಇದೆ. ಆದರೆ ಕೇವಲ ಒಂದೇ ವಾರದಲ್ಲಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಪ್ರತಿ ಕೆಜಿ ದರ 63 ರೂ. ಇಳಿಕೆಯಾಗಿದೆ. ಇಲ್ಲಿ ಬೆಳೆದ ಅಕ್ಕಿಯನ್ನು ರೈತರು ಮುಂಬೈ ಮಾರ್ಗವಾಗಿ ದುಬೈ, ಇರಾನ್ ರಾಷ್ಟ್ರಗಳಿಗೆ ಕಳುಹಿಸುತ್ತಿದ್ದರು.

    ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ಸಾಗಾಣಿಕೆ, ಪಾವತಿ ಹಲವಾರು ತಿಂಗಳು ವಿಳಂಬವಾಗುವುದು ಖಚಿತ. ಬಾಸುಮತಿ ಅಕ್ಕಿ ರಫ್ತು ಸ್ಥಗಿತಗೊಂಡರೆ ದೇಶದಲ್ಲಿ ಅಕ್ಕಿ ಸಂಗ್ರಹ ಹೆಚ್ಚಳಗೊಳ್ಳಲಿದೆ. ಆದ್ದರಿಂದ ಬೆಲೆ ಭಾರೀ ಕುಸಿತಗೊಂಡು ಬೆಳೆಗಾರರ ಆದಾಯಕ್ಕೆ ಹೊಡೆತ ಬೀಳಲಿದೆ ಎಂಬುದು ಇಲ್ಲಿನ ರೈತರ ವಾದ. ಪ್ರತಿ ವರ್ಷ ಇಲ್ಲಿ ಬೆಳೆದ ಅಕ್ಕಿಗೆ ಒಳ್ಳೆಯ ಬೆಲೆ ಸಿಗುತಿತ್ತು. ಕಳೆದ ವರ್ಷ 68 ಮೆಟ್ರಿಕ್ ಟನ್ ಅಕ್ಕಿ ಕೇವಲ ಬಳ್ಳಾರಿಯಿಂದಲೇ ರಫ್ತಾಗುತ್ತಿದ್ದು, ಹೀಗಾಗಿ ಈ ಬಾರಿ ಇರಾನ್‍ಗೆ ಅಕ್ಕಿ ರಫ್ತಾಗುವ ಬಹುತೇಕ ನಿಲ್ಲಿಸಲಾಗಿದೆ.

    ರಫ್ತು ಸ್ಥಗಿತಗೊಂಡಿರುವುದು ರೈತರನ್ನು ಚಿಂತೆಗೆ ದೂಡಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಇಳುವರಿ ಬಂದಿದೆ. ಜೊತೆಗೆ ತುಂಗಭದ್ರಾ ಡ್ಯಾಂ ಸಂಪೂರ್ಣವಾಗಿ ತುಂಬಿರುವ ಕಾರಣ ಹಿಂಗಾರು ಬೆಳೆ ಕೂಡಾ ಉತ್ತಮವಾಗಿ ಬರುವ ನೀರಿಕ್ಷೆಯಲ್ಲಿ ರೈತರಿದ್ದಾರೆ. ದೇಶದಲ್ಲಿ ಉತ್ಪಾದನೆಯಾಗುವ ಬಾಸುಮತಿ ಒಟ್ಟು ರಫ್ತಿನಲ್ಲಿ 3ನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಇರಾನ್ ಖರೀದಿಸುತ್ತದೆ. ಆದರೆ ಈಗ ರಫ್ತಿಗೆ ತಡೆ ಬೀಳುವ ಸಾಧ್ಯತೆ ಹಿನ್ನೆಲೆ ಬಾಸುಮತಿ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ.