Tag: Basavraj Bommai

  • ಯಾರು ಯಾರನ್ನು ಸೋಲಿಸಿದರು ಅಂತಾ ಬೊಮ್ಮಾಯಿ ಹೇಳಬೇಕು – ಜಾರಕಿಹೊಳಿಗೆ ಡಿಕೆಶಿ ಟಾಂಗ್

    ಯಾರು ಯಾರನ್ನು ಸೋಲಿಸಿದರು ಅಂತಾ ಬೊಮ್ಮಾಯಿ ಹೇಳಬೇಕು – ಜಾರಕಿಹೊಳಿಗೆ ಡಿಕೆಶಿ ಟಾಂಗ್

    ಬೆಳಗಾವಿ: ಸಿಡಿ ಪ್ರಕರಣ ಮುಂದಿಟ್ಟುಕೊಂಡು ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

    ಚುನಾವಣೆ ಫಲಿತಾಂಶ ಬಳಿಕ ಡಿಕೆಶಿ ಜೊತೆಗೆ ಓಪನ್ ವಾರ್ ಆಗಲಿ ಎಂದಿದ್ದ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ಯಾರನ್ನು ಸೋಲಿಸಿದರು ಅಂತಾ ಬೊಮ್ಮಾಯಿ ಹೇಳಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

    ಸ್ವಯಂಕೃತ ಅಪರಾಧವನ್ನು ಬಿಜೆಪಿಯವರು ಮಾಡಿಕೊಂಡಿದ್ದಾರೆ. ಬೇಕಾಗಿತ್ತು ಮಾಡಿಕೊಂಡಿದ್ದಾರೆ, ಒಳ್ಳೆಯದಾಗಲಿ ಬಹಿರಂಗ ವಾರ್ ಅಥವಾ ಯಾವ ವಾರ್ ಅವರನ್ನೇ ಕೇಳಿ. ಸಿಡಿ ಪ್ರಕರಣದಲ್ಲಿ ಬಿಚ್ಚಿದ್ದು ಮಾಡಿದ್ದು ನಾವೆಲ್ಲ ನೋಡಿದ್ದೇವೆ. ಕಾಂಗ್ರೆಸ್ ಪಕ್ಷದ ಪರ ಬಿಜೆಪಿ ಸೇರಿದಂತೆ ಎಲ್ಲ ಪಕ್ಷದವರು ಮತ ಚಲಾಯಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುರಿಗಳಂತೆ ಕರೆತಂದು ಮತ ಹಾಕಿಸಿಕೊಂಡು ಗೆಲುವು ಸಾಧಿಸಿದ್ದಾರೆ: ಮಂಥರ್ ಗೌಡ ವಾಗ್ದಾಳಿ

    ಕಾಂಗ್ರೆಸ್ ಪಕ್ಷದ ಮುಖಂಡರ ಒಗ್ಗಟ್ಟು ಈ ಗೆಲುವಿಗೆ ಕಾರಣ. ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆಗೆ ಹೋಗುತ್ತೇವೆ. ರಾಜ್ಯದ ಎಲ್ಲ ಜನ ಬದಲಾವಣೆ ಬಯಸುತ್ತಿದ್ದಾರೆ. ಕಾಂಗ್ರೆಸ್ ಇನ್ನೂ ಎರಡು ಮೂರು ಸ್ಥಾನಗಳಲ್ಲಿ ಗೆಲ್ಲಬೇಕಿತ್ತು ಎಂದು ಹೇಳಿದ್ದಾರೆ.

  • ಬೊಮ್ಮಾಯಿ ಸಂಪುಟದಲ್ಲಿ ವಿಜಯೇಂದ್ರಗೆ ಮಂತ್ರಿ ಪಟ್ಟ ನೀಡಿ – ಬಿಎಸ್‍ವೈ ಒತ್ತಡ

    ಬೊಮ್ಮಾಯಿ ಸಂಪುಟದಲ್ಲಿ ವಿಜಯೇಂದ್ರಗೆ ಮಂತ್ರಿ ಪಟ್ಟ ನೀಡಿ – ಬಿಎಸ್‍ವೈ ಒತ್ತಡ

    ಬೆಂಗಳೂರು: ಸಿಎಂ ಸ್ಥಾನದಿಂದ ಕೆಳಗಿಳಿದರೂ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲ್ಲ. ತಮಗೆ ರಾಜ್ಯಪಾಲರ ಹುದ್ದೆಯೂ ಬೇಡ ಎಂದಿರುವ ಯಡಿಯೂರಪ್ಪನವರ ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ.

    ಮೂಲಗಳ ಪ್ರಕಾರ, ವಿಜಯೇಂದ್ರರನ್ನು ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಮಾಡುವಂತೆ ಹೈಕಮಾಂಡ್ ಮೇಲೆ ಯಡಿಯೂರಪ್ಪ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸದ್ಯಕ್ಕೆ ಮೌನವೇ ಆಭರಣ ಎನ್ನುವಂತಿದ್ದಾರೆ. ಇದನ್ನೂ ಓದಿ : ಸ್ವಾಮೀಜಿಗಳು ಬಿಜೆಪಿಗೆ ಬೆದರಿಕೆ ಹಾಕುವುದು ತಪ್ಪು: ಈಶ್ವರಪ್ಪ

    ಈ ಮಧ್ಯೆ, ಬಿಎಸ್‍ವೈ ಸಮಕಾಲೀನರಾದ ಕೆಎಸ್ ಈಶ್ವರಪ್ಪ ಡಿಸಿಎಂ ಆಗಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಇದ್ರ ಭಾಗವಾಗಿ ಉತ್ತರ ಕರ್ನಾಟಕದ ಶಕ್ತಿ ದೇವತೆ ಬಾದಾಮಿಯ ಬನಶಂಕರಿ ದೇಗುಲಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ನಾನು ಡಿಸಿಎಂ ಆಗ್ಬೇಕು ಅಂತಾ ಜನ ಬಯಸ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ನಂಬರ್ 2 ಸ್ಥಾನದ ಮೇಲಿನ ಆಸೆಯನ್ನು ಹೊರಹಾಕಿದ್ದಾರೆ. ವಲಸಿಗರ ವಿಚಾರದಲ್ಲಿಯೂ ಯೂಟರ್ನ್ ತೆಗೆದುಕೊಂಡಿದ್ದಾರೆ. ಬಿಜೆಪಿ ಹಾಲು, ಹೊರಗಿನಿಂದ ಬಂದವರು ಜೇನು, ಎರಡು ಸೇರಿದ್ರೇ ಹಾಲು ಜೇನು ಎಂದಿದ್ದಾರೆ.