Tag: Basavraj Bommai

  • ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನು ಸಮೀಕ್ಷೆ ಮಾಡಿ: ಚೌಹಾಣ್‌ಗೆ ಬೊಮ್ಮಾಯಿ ಪತ್ರ

    ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನು ಸಮೀಕ್ಷೆ ಮಾಡಿ: ಚೌಹಾಣ್‌ಗೆ ಬೊಮ್ಮಾಯಿ ಪತ್ರ

    ಬೆಂಗಳೂರು: ಫಸಲ್ ಭೀಮಾ ಯೋಜನೆಯನ್ನು ಇನ್ನಷ್ಟು ರೈತಸ್ನೇಹಿಯನ್ನಾಗಿ ಮಾಡಲು ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನಿನ ಸರ್ವೆನಂಬ‌ರ್ ಆಧಾರದಲ್ಲಿ ಉಪಗ್ರಹದ ಮೂಲಕ ಬೆಳೆ ಹಾನಿ ಸಮೀಕ್ಷೆ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬವರಾಜ ಬೊಮ್ಮಾಯಿ (Basavaraj Bommai) ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ (Shivraj Singh Chouhan) ಅವರಿಗೆ ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಫಸಲ್ ಭೀಮಾ ಯೋಜನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) ಮಹತ್ವಾಕಾಂಕ್ಷೆಯ ರೈತ (Farmer) ಪರವಾದ ಯೋಜನೆಯಾಗಿದ್ದು, ಈ ಯೋಜನೆಯನ್ನು ಇನ್ನಷ್ಟು ರೈತ ಪರ ಹಾಗೂ ಪಾರದರ್ಶಕವಾಗಿ ಜಾರಿ ಮಾಡುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದನ್ನೂ ಓದಿ: ಮಾರುಕಟ್ಟೆಯಲ್ಲಿ ನವಿಲುಕೋಸಿಗೆ ಸರಿಯಾದ ಬೆಲೆ ಸಿಗದೇ ಬೆಳೆ ನಾಶ ಮಾಡಿದ ರೈತ

    ಬರ, ಪ್ರವಾಹದಂತಹ ಅನೇಕ ಕಾರಣಗಳಿಂದ ಬೆಳೆ ಹಾನಿಗೊಳಗಾದಾಗ ಗ್ರಾಮ ಪಂಚಾಯತಿ ಮಟ್ಟದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದೆ. ಅದರ ಬದಲು ಪ್ರತಿ ರೈತರ ಜಮೀನಿನ ಸರ್ವೆ ನಂಬರ್ ಆಧಾರದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದರೆ ನಿಜವಾಗಲೂ ಬೆಳೆಹಾನಿಗೊಳಗಾದ ಎಲ್ಲ ರೈತರೂ ವಿಮಾ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ಅಲ್ಲದೇ ಅನಗತ್ಯವಾಗಿ ವಿಮಾ ಪರಿಹಾರ ಪಡೆಯುವುದನ್ನು ತಪ್ಪಿಸಿದಂತಾಗುತ್ತದೆ.

    ಇನ್ನೊಂದು ಮಹತ್ವದ ವಿಷಯವೆಂದರೆ ಬೆಳೆ ಹಾನಿಯ ಪ್ರಮಾಣವನ್ನು ಹಿಂದಿನ ಏಳು ವರ್ಷಗಳ ಅಂದಾಜು ಪಡೆಯುವುದರಿಂದ ಸರಿಯಾದ ಹಾನಿಯ ಪ್ರಮಾಣವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಳೆಯ ಅನಿಶ್ಚಿತತೆ ಹಾಗೂ ಹವಾಮಾನ ವೈಪರಿತ್ಯರಿಂದ ಏಳು ವರ್ಷಗಳ ಅವಧಿಯಲ್ಲಿ ಬೆಳೆ ಹಾನಿಯ ಬಗ್ಗೆ ನಿಖರವಾದ ಮಾಹಿತಿ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬೆಳೆ ಹಾನಿಯ ಬಗ್ಗೆ ಪ್ರಸ್ತುತ ಹಂಗಾಮು ವರ್ಷ ಹಾಗೂ ಹಿಂದಿನ ವರ್ಷ ಸೇರಿ ಎರಡು ವರ್ಷಗಳನ್ನು ಪರಿಗಣಿಸಬೇಕು. ಈ ಎರಡೂ ಸುಧಾರಣೆಗಳನ್ನು ಜಾರಿಗೆ ತರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೇ ಈಗಾಗಲೇ ಪ್ರೀಮಿಯಂ ಮೊತ್ತ ನಿಗದಿಯಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ.

    ಈ ಎರಡು ಸುಧಾರಣೆಗಳನ್ನು ತಂದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿಮ್ಮ ಉದ್ದೇಶದಂತೆ ಫಸಲ್ ಬಿಮಾ ಯೋಜನೆ ರೈತರ ಆಪದ್ಭಾಂದವ ಆಗಲಿದೆ. ದಯವಿಟ್ಟು ಈ ವಿಷಯದಲ್ಲಿ ತಾವು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಅಧ್ಯಕ್ಷತೆಯಲ್ಲಿ ಈ ವಿಷಯದ ಕುರಿತು ಚರ್ಚಿಸಲು ನಾನು ಆಸಕ್ತನಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

  • ಕಾಂಗ್ರೆಸ್‌ನ ಪಠಾಣ್ ರೌಡಿಶೀಟರ್ ಅಂದಿದ್ದು ಅವರ ಪಕ್ಷದವರೇ, ಅವ್ರೇ ಸ್ಪಷ್ಟೀಕರಣ ಕೊಡಲಿ- ಬೊಮ್ಮಾಯಿ

    ಕಾಂಗ್ರೆಸ್‌ನ ಪಠಾಣ್ ರೌಡಿಶೀಟರ್ ಅಂದಿದ್ದು ಅವರ ಪಕ್ಷದವರೇ, ಅವ್ರೇ ಸ್ಪಷ್ಟೀಕರಣ ಕೊಡಲಿ- ಬೊಮ್ಮಾಯಿ

    ಹಾವೇರಿ: ಯಸೀರ್ ಖಾನ್ ಪಠಾಣ್ (Yasir Khan Pathan) ರೌಡಿಶೀಟರ್ ಎಂದು ಅವರ ಪಕ್ಷದವರೇ ಮಾತಾಡಿದ್ದಾರೆ. ಅವರ ಪಕ್ಷದವರೇ ಸ್ಪಷ್ಟೀಕರಣ ಕೊಡಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavraj Bommai) ಹೇಳಿದ್ದಾರೆ.

    ಶಿಗ್ಗಾಂವಿ ಉಪಚುನಾವಣೆ (Shiggoan By Election) ಕಾವು ದಿನದಿಂದ ದಿನಕ್ಕೆ ರಂಗುಪಡೆಯುತ್ತಿದೆ. ಶಿಗ್ಗಾಂವಿಯಲ್ಲಿ ಲಿಂಗಾಯತ ಪಂಚಮಸಾಲಿ ಮುಖಂಡರ ಮನೆಮನೆಗೆ ಭೇಟಿ ನೀಡಿ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಿದ್ದಾರೆ. ಪುತ್ರ ಭರತ್ ಬೊಮ್ಮಾಯಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಡಿ.6ಕ್ಕೆ ದಿಲ್ಜಿತ್ ಶೋ; ಅಕ್ರಮ ಟಿಕೆಟ್‌ ಮಾರಾಟ ಆರೋಪ – ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ED ದಾಳಿ

    ಹಾವೇರಿಯಲ್ಲಿ (Haveri) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಗ್ಯಾರಂಟಿನೂ ಕೈ ಹಿಡಿದಿಲ್ಲ, ಏನೂ ಹಿಡಿದಿಲ್ಲ. ನಾನು ಹೆಚ್ಚಿನ ಸಮಯ ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಇದ್ದ ಕಾರಣ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದೆ. ಈ ಎಲ್ಲಾ ವಿಚಾರ ನಮ್ಮ ಕಾರ್ಯಕರ್ತರಿಗೆ ಮನದಟ್ಟಾಗಿದೆ. ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆ ವಾತಾವರಣ ಇದೆ. ಕಾಂಗ್ರೆಸ್‌ನವರು ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗಲ್ಲ ಎಂದರು. ಇದನ್ನೂ ಓದಿ: ಮದುವೆಯಾಗುವಂತೆ ಒತ್ತಾಯಿಸಿದ ಗರ್ಭಿಣಿ ಪ್ರೇಯಸಿಯನ್ನು ಹತ್ಯೆ ಮಾಡಿದ ಗೆಳೆಯ

    ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿ ಒಂದೇ ಒಂದು ಮನೆ ಕೊಟ್ಟಿಲ್ಲ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಹಾಸ್ಯಾಸ್ಪದ ಅಷ್ಟೆ, ಹೋಗಿ ನೋಡಿಕೊಂಡು ಬರಲಿ. ಕಾಂಗ್ರೆಸ್ ನಾಯಕರ ಭಾಷಣ ಸುಳ್ಳಿನ ಕಂತೆ ಅಷ್ಟೆ. ನಾವು ಎಲ್ಲರೂ ಒಗ್ಗಟ್ಟಿನಲ್ಲಿದ್ದೇವೆ. ನನಗಿಂತ ಹೆಚ್ಚು ಬೆಂಬಲ ಭರತ್‌ಗೆ (Bharath Bommai) ಸಿಕ್ಕಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲಾ ಸಮುದಾಯದವರು ಭರತ್‌ಗೆ ಬೆಂಬಲ ವ್ಯಕ್ತಪಡಿಸ್ತಿದ್ದಾರೆ. ಹೆಚ್ಚು ಮತಗಳ ಅಂತರದಿಂದ ಭರತ್ ಗೆಲ್ಲುತ್ತಾನೆ. ಖಾದ್ರಿ ಮನವೊಲಿಕೆ ಆದರೆ ಅದು ನಮಗೇನೂ ಪರಿಣಾಮ ಬೀರಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನ ಭೇಟಿಯಾದ ಉಪರಾಷ್ಟ್ರಪತಿ

    ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರ ದಂಡೇ ಪ್ರಚಾರಕ್ಕೆ ಬರುವ ವಿಚಾರ ಕೇಳಿದಾಗ, ದಯವಿಟ್ಟು ಬರಲಿ ಬಂದರೆ ಸ್ವಾಗತ ಎಂದರು. ಇದನ್ನೂ ಓದಿ: ಉತ್ತರ ಪ್ರದೇಶ| ರೈಲು ಹಳಿಗಳ ಮೇಲೆ 6 ಕೆಜಿ ಮರದ ತುಂಡು ಇರಿಸಿ ಹಳಿ ತಪ್ಪಿಸಲು ಯತ್ನ

  • ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರು ಸಿಎಂ ಬದಲಾವಣೆ ಅವಸರದಲ್ಲಿದ್ದಾರೆ- ಬಸವರಾಜ ಬೊಮ್ಮಾಯಿ

    ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರು ಸಿಎಂ ಬದಲಾವಣೆ ಅವಸರದಲ್ಲಿದ್ದಾರೆ- ಬಸವರಾಜ ಬೊಮ್ಮಾಯಿ


    ಗದಗ: ಕಾಂಗ್ರೆಸ್ (Congress) ಆಡಳಿತ ಪಕ್ಷದಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ. ಕಳೆದ 1 ತಿಂಗಳಿಂದ ಹಿರಿಯ ಸಚಿವರ ಚಟುವಟಿಕೆ ಗಮನಿಸಿದಾಗ, ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರು ಮುಖ್ಯಮಂತ್ರಿಗಳ ಬದಲಾವಣೆ ಅವಸರದಲ್ಲಿದ್ದಾರೆ ಅಂತ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ನಗರದ ಸರಾಫ್ ಬಜಾರ್‌ನಲ್ಲಿರುವ ಅಂಬಾಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಿನ ಮುಖ್ಯಮಂತ್ರಿಯನ್ನು ತೆಗೆದರೆ ತಮಗೆ ಅವಕಾಶ ಇದೆ ಎಂದು ಅವರದ್ದೇ ಪಕ್ಷದ ಬಹಳ ಹಿರಿಯ ಸಚಿವರು ಅಂದುಕೊಂಡಿದ್ದಾರೆ. ಮುಂದೆ ನಮ್ಮ ಸರ್ಕಾರ ಬರೋದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಅವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಇದರ ಒಟ್ಟು ಪರಿಣಾಮದಿಂದ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಸ್ಥಗಿತವಾಗಿದೆ ಎಂದರು. ಇದನ್ನೂ ಓದಿ: Kolar | ಪತಿಯಿಂದ ವರದಕ್ಷಿಣೆ ಕಿರುಕುಳ – ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

    ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಯಾವುದಕ್ಕೂ ಹಣ ಬಿಡುಗಡೆ ಆಗುತ್ತಿಲ್ಲ. ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ನಿಂತು ಹೋಗಿವೆ. ಇದರಿಂದ ರಾಜ್ಯ ಇನ್ನಷ್ಟು ಹಿನ್ನಡೆ ಆಗುತ್ತಿದೆ. ಕಳೆದ 2-3 ತಿಂಗಳಿಂದ ಹಗರಣಗಳ ಸುರಿಮಳೆ ಆಗುತ್ತಿದೆ. ಮುಡಾ ಹಗರಣದಲ್ಲಿಯೇ (MUDA Scam) ಕಾಲ ಕಳೆದು ಹೊಯ್ತು. ಇಂತಹ ಒಂದು ಸರ್ಕಾರ ಪಡೆದುಕೊಂಡಿದ್ದು ಕರ್ನಾಟಕದ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ವರದಿ ಬಗ್ಗೆ ಅಭಿಪ್ರಾಯ ಹೇಳ್ತೀನಿ – ಈಶ್ವರ್ ಖಂಡ್ರೆ

    ವಿಜಯೇಂದ್ರವರು (B Y Vijayendra) ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿ, ಅವರ ಬೇರೆ ಕೆಲಸಗಳಿಗೆ ಭೇಟಿ ಆಗಿರಬಹುದು. ಈ ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನ ನಾವು ಮಾಡುತ್ತಿಲ್ಲ. ತಾತ್ವಿಕವಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಿದೆ ವಿನಹ ಈ ಸರ್ಕಾರ ಅಭದ್ರಗೊಳಿಸುವಂತಹದ್ದು ಯಾವುದು ಇಲ್ಲ. ದಸರಾ (Dasara) ನಂತರ ಸಿಎಂ ಬದಲಾವಣೆ ಆಗ್ತಾರೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಅವರ ಲೆಕ್ಕಾಚಾರ ಇರಬಹುದು. ಆದ್ರೆ ಸಿಎಂ ಆತ್ಮಸಾಕ್ಷಿಯ ಬಗ್ಗೆ ಮಾತನಾಡ್ತಾರೆ. ಅವರ ಮಾತುಗಳ ನೋಡಿದಾಗ ರಾಜೀನಾಮೆ ಕೊಡಲು ಮಾನಸಿಕವಾಗಿ ತಯಾರು ಆಗಿದ್ದಾರೆ ಅನಿಸುತ್ತೆ ಎಂದರು. ಇದನ್ನೂ ಓದಿ: ಸಿಎಂ ಹುದ್ದೆ ಕನಸು ಕಂಡರೆ ಹೇಳುವೆ, ಸದ್ಯಕ್ಕೆ ಬೇಡ – ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ವಿಜಯೇಂದ್ರ

    ಜಾತಿಗಣತಿ ಬಿಡುಗಡೆ ವಿಚಾರದಲ್ಲಿ ಬಿ.ಕೆ ಹರಿಪ್ರಸಾದ್ ಹೇಳಿಕೆ ನೋಡಿದ್ರೆ ಅವರ ಮನದಾಳದ ಮಾತು ಹೇಳಿದ್ದಾರೆ. ಜಾತಿಗಣತಿ ಬರುವುದು ಮುಖ್ಯನಾ? ಸರ್ಕಾರ ಬಿಳುವುದು ಮುಖ್ಯನಾ ಅನ್ನುವುದನ್ನು ಅವರೇ ಸ್ಪಷ್ಟೀಕರಣ ಕೊಡಬೇಕು ಎಂದರು. ನಿಖರವಾಗಿ ಜಾತಿಗಣತಿ ಆದೇಶ ಅದರಲ್ಲಿ ಇಲ್ಲ. ಕಾಂತರಾಜ್ ಕೊಟ್ಟ ವರದಿ ಆಗ ಸ್ವೀಕರಿಸಲಿಲ್ಲ. 2018 ರಲ್ಲಿ ವರದಿ ಕೊಟ್ಟಿದ್ರು ಆಗ ಯಾಕೆ ಮಾಡಲಿಲ್ಲ? ಯಾಕೆ ಪೆಂಡಿಂಗ್ ಇಟ್ರು? ಜಯಪ್ರಕಾಶ್ ಹೆಗ್ಡೆ 2-3 ತಿಂಗಳಲ್ಲಿ ಹೇಗೆ ವರದಿ ಕೊಡ್ತಾರೆ ಎಂದು ಪ್ರಶ್ನಿಸಿದರು. ಅವರು ಮೂರು ವರ್ಷ ಡೇಟಾ ತೆಗೆದುಕೊಂಡಿದ್ರು. ಇವರು ಏನಿಲ್ಲದೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ತೇಪೆ ಹಚ್ಚಿದ ಆ ವರದಿ ತೆಗೆದುಕೊಂಡು ಹಿಂದುಳಿದ ವರ್ಗ ಅಭಿವೃದ್ಧಿ ಮಾಡ್ತೆವಿ ಅಂತಿದ್ದಾರೆ. ಇದು ಬಹಳ ಗೊಂದಲವಿದೆ, ಈ ಗೊಂದಲ ಸ್ಪಷ್ಟವಾಗಬೇಕು. ಅದಕ್ಕಾಗಿ ಜಾತಿಗಣತಿ ಬಿಡುಗಡೆ ಮಾಡ್ರಿ ಅಂತ ನಾನು ಹೇಳಿದ್ದೆನೆ ಎಂದು ಹೇಳಿದರು. ಇದನ್ನೂ ಓದಿ: ಪಶ್ಚಿಮ ಬಂಗಾಳ| ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ- 7 ಮಂದಿ ಸಾವು, ಹಲವರಿಗೆ ಗಾಯ

    ಕಾಂಗ್ರೆಸ್ ಪಕ್ಷದಲ್ಲಿಯೇ ಮೊದಲಿಂದಲೂ ವಿರೋಧವಿದೆ. ಡಿಕೆ ಶಿವಕುಮಾರ್, ಶಾಮನೂರು ಶಿವಶಂಕ್ರಪ್ಪ, ಎಂ.ಬಿ ಪಾಟೀಲ ಎಲ್ಲರು ಮಾಹಿತಿ ಕೊಟ್ಟಿದ್ದಾರೆ. ಅವರಿಲ್ಲಿಯೇ ಹೊಂದಾಣಿಕೆ, ಸ್ಪಷ್ಟತೆ ಇಲ್ಲ. ಎಲ್ಲಾ ಗೊಂದಲ ನಿವಾರಣೆ ಮಾಡಿ ಜಾತಿಗಣತಿ ಆದಷ್ಟು ಬೇಗನೆ ಹೊರಗೆ ಬರಲಿ. ಇನ್ನು ಉಪಚುನಾವಣೆ ಕುರಿತು ಚನ್ನಪಟ್ಟಣದಲ್ಲಿ ಮೈತ್ರಿ ಗೊಂದಲ ನಿವಾರಣೆ ಆಗುತ್ತೆ. ಕಾಯ್ದು ನೋಡಿ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಕೇಳೋ ಮೊದಲು ವಿಜಯೇಂದ್ರ ರಾಜೀನಾಮೆ ನೀಡಲಿ: ಈಶ್ವರ್ ಖಂಡ್ರೆ

    ಈ ವೇಳೆ ಬಿಜೆಪಿ (BJP) ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಅನಿಲ ಅಬ್ಬಿಗೇರಿ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು. ಇದನ್ನೂ ಓದಿ: ವಿಜಯೇಂದ್ರ ಏನು ಹೈಕಮಾಂಡಾ? – ಸಿಎಂ ರಾಜೀನಾಮೆ ಹೇಳಿಕೆಗೆ ಜಮೀರ್ ತಿರುಗೇಟು

  • ಸುಮಲತಾಗೆ ಖುದ್ದು ಆಹ್ವಾನ ಕೊಟ್ಟ ಸಿಎಂ

    ಸುಮಲತಾಗೆ ಖುದ್ದು ಆಹ್ವಾನ ಕೊಟ್ಟ ಸಿಎಂ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಂದೇ ಭಾರತ್, ಶತಾಬ್ದಿ ಸೂಪರ್‌ಫಾಸ್ಟ್ ರೈಲುಗಳ ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ- ಸೋಮಣ್ಣ

    ವಂದೇ ಭಾರತ್, ಶತಾಬ್ದಿ ಸೂಪರ್‌ಫಾಸ್ಟ್ ರೈಲುಗಳ ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ- ಸೋಮಣ್ಣ

    ಬೆಳಗಾವಿ: ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express) ಹಾಗೂ ಶತಾಬ್ದಿ ಸೂಪರ್ ಫಾಸ್ಟ್ ರೈಲುಗಳ (Shatabdi Express) ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ವಿ.ಸೋಮಣ್ಣ (V Somanna) ತಿಳಿಸಿದರು.

    ರೈಲುಗಳ ವೇಳಾಪಟ್ಟಿಯ (Train Schedules) ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ರೈಲ್ವೆ ಮಂತ್ರಾಲಯವನ್ನು ಪತ್ರ ಮುಖೇನ ಕೋರಲಾಗಿದೆ. ರೈಲ್ವೆ ಅಧಿಕಾರಿಗಳು ಇದು ಕಷ್ಟ ಅನ್ನುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಜನತೆಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಮದ್ಯಕ್ಕೆ ದಾಸರಾದ ದಂಪತಿ – ಮಗು ಸಾಕಲಾಗದೇ ಬಾಲಮಂದಿರದಲ್ಲಿ ಬಿಟ್ಟುಹೋದ್ರು

    ವಿಧಾನ ಪರಿಷತ್ತಿನಲ್ಲಿ (Legislative Council) ಸದಸ್ಯ ಮರಿತಿಬ್ಬೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಡ್ಯದಲ್ಲಿ ಈ ಎರಡೂ ರೈಲುಗಳಿಗೂ ಸಹ ನಿಲುಗಡೆ ಒದಗಿಸಬೇಕೆಂಬ ಸದಸ್ಯರ ಕೋರಿಕೆಯ ಬಗ್ಗೆಯೂ ಅಗತ್ಯ ಕ್ರಮಕೈಗೊಳ್ಳುವಂತೆ ಮಂತ್ರಾಲಯಕ್ಕೆ ಪತ್ರದ ಮುಖೇನ ತಿಳಿಸಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನನಗೆ, ನೇಹಾಗೆ ಕಾಂಪಿಟೇಶನ್ ಇತ್ತು: ಅನುಪಮಾ

    ವಂದೇ ಭಾರತ್  ಎಕ್ಸ್‌ಪ್ರೆಸ್‌ ರೈಲು ಸೇವೆಯು ಆರಂಭವಾದ ನಂತರ ಶತಾಬ್ದಿ ಹಾಗೂ ವಂದೇ ಭಾರತ್ ಎರಡು ರೈಲುಗಳಲ್ಲೂ ಬಹುತೇಕ ಪೂರ್ಣ ಪ್ರಮಾಣದಲ್ಲಿ ಪಯಾಣಿಕರು ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿರುವುದಾಗಿ ಸಚಿವರು ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ – ಕಾಂಗ್ರೆಸ್‍ಗೆ ಬೊಮ್ಮಾಯಿ ಸವಾಲು

    ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ – ಕಾಂಗ್ರೆಸ್‍ಗೆ ಬೊಮ್ಮಾಯಿ ಸವಾಲು

    ಕಲಬುರಗಿ: ಜಿಲ್ಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ವಿರಾಟ್ ಒಬಿಸಿ (OBC) ಸಮಾವೇಶದಲ್ಲಿ ಕಾಂಗ್ರೆಸ್ (Congress) ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತೆ ಗುಡುಗಿದ್ದಾರೆ. ಒಬಿಸಿಗಳು ನಿಮ್ಮ ಜೇಬಲ್ಲಿ ಇಲ್ಲ. ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ ಎಂದು ಸವಾಲು ಹಾಕಿದ್ದಾರೆ.

    ವೇದಿಕೆಯಲ್ಲಿ ಮಾತನಾಡಿದ ಅವರು, ನಾನು ನಿಮ್ಮ ಸೇವಕ. ನೀವು ನಮ್ಮ ಮಾಲೀಕರು. ನಮ್ಮನ್ನು ಮತ್ತೆ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ನೆರದಿದ್ದ ಜನರನ್ನ ನೋಡಿದ್ರೆ ಬಿಜೆಪಿ ಬಾವುಟ ವಿಧಾನಸೌಧ ಮೂರನೇ ಮಹಡಿ ಮೇಲೆ ಹಾರಾಡಲಿದೆ. ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಮೋಸ ಮಾಡಿ ಮತ ಪಡೆದಿದೆ. ಸಿದ್ದರಾಮಯ್ಯನವರಿಗೆ (Siddaramaiah) ಬದಲಾವಣೆ ಕಾಲ ಬಂದಿದೆ. ಎಲ್ಲರನ್ನು ಎಲ್ಲ ಕಾಲಕ್ಕೂ ಮೋಸ ಮಾಡಲು ಆಗುವುದಿಲ್ಲ. ಕಾಗಿನೇಲೆ ಅಭಿವೃದ್ಧಿ ಮಾಡಿದ್ದು ನಮ್ಮ ನಾಯಕ ಯಡಿಯೂರಪ್ಪನವರು (B.S Yediyurappa). ಕುರುಬ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದು ನಮ್ಮ ಸರ್ಕಾರ. ಎಸ್‍ಸಿ (SC), ಎಸ್‍ಟಿ (ST) ಮೀಸಲಾತಿ ಹೆಚ್ಚಳ ಮಾಡಿ ಆದೇಶ ಮಾಡಿದ್ದೇನೆ. ಈ ವರ್ಗಗಳಿಗೆ ಹೆಚ್ಚು ನ್ಯಾಯ ನೀಡಿದ್ದು ನಮ್ಮ ಸರ್ಕಾರ ಎಂದಿದ್ದಾರೆ. ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್, ಸಿಹಿಕಹಿ ಚಂದ್ರು ಸೇರಿ 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

    ಮೀಸಲಾತಿ ಹೆಚ್ಚಳ ವಿಚಾರದಲ್ಲಿ ನಮ್ಮ ಶ್ರಮವಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪಕ್ಕದಲ್ಲಿ ಮನೆಯಲ್ಲಿ ಗಂಡು ಮಗು ಹುಟ್ಟಿದ್ರೆ ಇವರ ಮನೆಯಲ್ಲಿ ಸ್ವೀಟ್ ಹಂಚಿದ್ರು ಅನ್ನೊ ಹಾಗೆ ಸಿದ್ದರಾಮಯ್ಯ ಮಾಡ್ತಿದಾರೆ. ಕುರುಬ ಸಮಾಜಕ್ಕೆ ನ್ಯಾಯ ಕೊಡುವ ನೈತಿಕತೆನು ಇಲ್ಲವೇ ಸಿದ್ದರಾಮಯ್ಯನವರೇ? ಪ್ರಧಾನಿ ಮೋದಿಯವರು (Narendra Modi) ಹಿಂದುಳಿದ ವರ್ಗಗಳ ನೇತಾತರರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ದಾರಿಯಲ್ಲಿ ನಮ್ಮ ಸರ್ಕಾರ ಹೋಗುತ್ತಿದೆ. ತಳವಾರ/ಪರಿವಾರ ಎಸ್‍ಟಿಯಲ್ಲಿ ಬರಬೇಕೆಂದು ಕೇಂದ್ರ ಸರ್ಕಾರ ಆದೇಶ ಮಾಡಿದೆ. ಅದಕ್ಕಾಗಿ ತಳವಾರ/ಪರಿವಾರ ಸಮಾಜವನ್ನು ಹಿಂದುಳಿದ ವರ್ಗದಿಂದ ತೆಗೆದು ಎಸ್‍ಟಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಜನಗಳೇ ನಾನು ಕಲಬುರಗಿಗೆ ಖಾಲಿ ಕೈಯಿಂದ ಬಂದಿಲ್ಲ. ಸಮಾವೇಶದಲ್ಲಿ ತಳವಾರ್/ಪರಿವಾರವನ್ನು ಎಸ್‍ಟಿಗೆ ಸೇರಿಸಿದ ಆದೇಶ ಪ್ರತಿ ಪ್ರದರ್ಶಿಸಿದರು.

    ಸಿಎಂ ಆದೇಶ ಪ್ರತಿ ತೋರಿಸುತ್ತಿದ್ದಂತೆ ತಳವಾರ್/ಪರಿವಾರ ಸಮಾಜರಿಂದ ಜಯಘೋಷ ಸಮಾವೇಶದಲ್ಲಿ ಬೊಮ್ಮಾಯಿ ಪರ ಜನ ಘೋಷಣೆ ಕೂಗಿದರು. ಹಿಂದುಳಿದ ವರ್ಗಗಳ ಪರ ಕೆಲಸ ಮಾಡಲು 24 ಗಂಟೆ ಸಿದ್ಧನಿದ್ದೇನೆ. ನಿಮ್ಮನ್ನ ನೋಡಿ ನಮಗೆ ಆನೆ ಬಲ ಬಂದಂತಾಗಿದೆ. ಹಿಂದುಳಿದ ವರ್ಗಗಳು ನಮ್ಮ ಜೇಬಿನಲ್ಲಿದೆ ಅಂತಾ ಕಾಂಗ್ರೆಸ್‍ನವರು ಅಂದುಕೊಂಡಿದ್ದಾರೆ. ಹೀಗೆ ಅಂದುಕೊಂಡರೆ ನೀವು ಕಲಬುರಗಿಗೆ ಬಂದು ಒಬಿಸಿ ಸಮಾವೇಶದಲ್ಲಿನ ಜನ ನೋಡಿ. ತಾಕ್ಕತಿದ್ದರೆ, ಧಮ್ ಇದ್ರೆ ಈ ವಿಜಯಯಾತ್ರೆ ತಡೆಯಿರಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಇವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ: ಜಗ್ಗೇಶ್

    ಮಧ್ಯಪ್ರದೇಶ ಸಿಎಂ ಶಿವರಾಜ್‍ಸಿಂಗ್ ಚೌವ್ಹಾಣ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿ ಹಲವರಿದ್ದ ಈ ಸಮಾವೇಶದಲ್ಲಿ ಅಂದಾಜು 2 ಲಕ್ಷ ಕಾರ್ಯಕರ್ತರು ಪಾಲ್ಗೊಂಡಿದ್ರು.

    Live Tv
    [brid partner=56869869 player=32851 video=960834 autoplay=true]

  • ಜಲ ಯೋಜನೆಗಳ ಆಡಳಿತಾತ್ಮಕ, ತಾಂತ್ರಿಕ ಕೆಲಸ ಶೀಘ್ರ ಪೂರ್ಣಗೊಳಿಸಲು ಸಿಎಂ ಒತ್ತಾಯ

    ಜಲ ಯೋಜನೆಗಳ ಆಡಳಿತಾತ್ಮಕ, ತಾಂತ್ರಿಕ ಕೆಲಸ ಶೀಘ್ರ ಪೂರ್ಣಗೊಳಿಸಲು ಸಿಎಂ ಒತ್ತಾಯ

    ಬೆಂಗಳೂರು: ಇಂದು ಸಂಜೆ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ರಾಜ್ಯದ ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಮತ್ತಿತರ ಯೋಜನೆಗಳ ಆಡಳಿತಾತ್ಮಕ ಮತ್ತು ತಾಂತ್ರಿಕ ಕೆಲಸಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಾಳೆ ಬೆಳಿಗ್ಗೆ ಜಿ.ಎಸ್.ಟಿ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುವುದಾಗಿ ತಿಳಿಸಿದರು.

    ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಒಪ್ಪಿಗೆ ನೀಡಿದ್ದಾರೆ. ಅದರ ಬಗ್ಗೆ ಕೆಲವು ವಿಚಾರಗಳನ್ನು ಚರ್ಚಿಸಲು ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದೇನೆ. ಕೇಂದ್ರ ಇಂಧನ ಸಚಿವರನ್ನು ಭೇಟಿಯಾಗಲು ಸಮಯ ನಿಗದಿಯಾಗಿಲ್ಲ ಎಂದರು. ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ಮೈಸೂರಿನ ಶಿಲ್ಪಿ ಯೋಗಿರಾಜ್ ಅರುಣ್

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ರಕ್ಷಣಾ ಸಚಿವ ಅಮಿತ್ ಷಾ ಅವರ ಸಮಯ ನಿಗದಿಯಾದಲ್ಲಿ ಅವರನ್ನು ಭೇಟಿಯಾಗುವುದಾಗಿ ತಿಳಿಸಿದರು. ಈ ಭೇಟಿಯಲ್ಲಿ ಸಂಪುಟ ಪುನಾರಚನೆ ವಿಚಾರ ಬಂದರೆ ಚರ್ಚಿಸುವುದಾಗಿ ಹೇಳಿದರು. ಇದನ್ನೂ ಓದಿ: ಅಮೆರಿಕದ ಟೈಮ್ಸ್‌ ಸ್ಕ್ವೇರ್‌ನಲ್ಲಿ ಮೊದಲ ಬಾರಿಗೆ ನಮಾಜ್- ಇಸ್ಲಾಂ ಬಗ್ಗೆ ತಪ್ಪು ಕಲ್ಪನೆಗಳಿವೆ ಎಂದ ಮುಸ್ಲಿಮರು

  • ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬಜೆಟ್ ಘೋಷಣೆಗಳ ಶೀಘ್ರ ಅನುಷ್ಠಾನಕ್ಕೆ ಸಮಿತಿ ರಚನೆ: ಬೊಮ್ಮಾಯಿ

    ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬಜೆಟ್ ಘೋಷಣೆಗಳ ಶೀಘ್ರ ಅನುಷ್ಠಾನಕ್ಕೆ ಸಮಿತಿ ರಚನೆ: ಬೊಮ್ಮಾಯಿ

    ಬೆಂಗಳೂರು: ಬಜೆಟ್ ಘೋಷಣೆಗಳ ಶೀಘ್ರ ಅನುಷ್ಠಾನಕ್ಕೆ ಕಾರ್ಯಾದೇಶಗಳನ್ನು ಹೊರಡಿಸಿ ಘೋಷಿತ ಯೋಜನೆಗಳನ್ನುಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಪ್ರಥಮ ಬಾರಿಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಆರ್ಥಿಕ ಇಲಾಖೆಯ ಸಹಯೋಗದಲ್ಲಿ ಬಜೆಟ್‍ನ ಪ್ರಮುಖ ಘೋಷಿತ ಯೋಜನೆಗಳಿಗೆ ಕಾರ್ಯಾದೇಶವನ್ನು ನೀಡುವುದು ಹಾಗೂ ಅನುಷ್ಠಾನದ ಸಂಪೂರ್ಣ ಮೇಲ್ವಿಚಾರಣೆಯನ್ನು ಈ ಸಮಿತಿ ಮಾಡಲಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ದೊರಕಿಸುವುದು ಹಾಗೂ ಒಂದೇ ಬಾರಿಗೆ ಎಲ್ಲಾ ಯೋಜನೆಗಳಿಗೆ ಅನುಮೋದನೆ ನೀಡುವ ಉದ್ದೇಶದಿಂದ ಪ್ರಥಮ ಬಾರಿಗೆ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಸಮಿತಿ ರಚಿಸಲಾಗಿದೆ ಎಂದರು.

    ಬಜೆಟ್‍ನಲ್ಲಿ ಘೋಷಿಸಿರುವ ಹೊಸ ಯೋಜನೆಗಳನ್ನು ತೀವ್ರಗತಿಯಲ್ಲಿ ಅನುಷ್ಠಾನಗೊಳಿಸಲು ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆಯನ್ನೂ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದೆಹಲಿಯಿಂದ ಕರೆ ಬರುವ ನಿರೀಕ್ಷೆಯಿದೆ: ಬೊಮ್ಮಾಯಿ

    ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿ ಸಿದ್ಧತೆ: ಸರ್ಕಾರ ಕೈಗಾರಿಕೋದ್ಯಮಕ್ಕೆ ಮಹತ್ವ ನೀಡಿದೆ. ನವೆಂಬರ್‍ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ನೇತೃತ್ವದಲ್ಲಿ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿವೆ. ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಗೆ ಆಕರ್ಷಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

    ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ: ಕಳೆದ ಮೂರು ತ್ರೈ ಮಾಸಿಕಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದು ವಿದೇಶಿ ಹೂಡಿಕೆದಾರರಿಗೆ ನಮ್ಮ ರಾಜ್ಯದ ಮೇಲಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರಾವಳಿಯಿಂದ ಮೈಸೂರಿಗೆ ಎಂಟ್ರಿ – ಚಾಮುಂಡಿಬೆಟ್ಟದಲ್ಲಿ ಬಹಿಷ್ಕಾರದ ಕಿಚ್ಚು

  • ಕಂಬಾರ ಪತ್ನಿ ನಿಧನ- ಕಂಬನಿ ಮಿಡಿದ ಬೊಮ್ಮಾಯಿ

    ಕಂಬಾರ ಪತ್ನಿ ನಿಧನ- ಕಂಬನಿ ಮಿಡಿದ ಬೊಮ್ಮಾಯಿ

    ಬೆಂಗಳೂರು: ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರ ಪತ್ನಿ ಸತ್ಯಭಾಮ ಚಂದ್ರಶೇಖರ್ ಕಂಬಾರರವರು ಇಂದು ನಿಧನ ಹೊಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ಧರ್ಮ ಪತ್ನಿ ಶ್ರೀಮತಿ ಸತ್ಯಭಾಮ ಕಂಬಾರ ಅವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಸತ್ಯಭಾಮ ಅವರು ಚಂದ್ರಶೇಖರ ಕಂಬಾರ ಅವರ ಪ್ರೇರಣಾ ಶಕ್ತಿಯಾಗಿದ್ದು, ಅವರಿಗೆ ಅಪಾರವಾದ ಓದಿನ ಹವ್ಯಾಸವಿತ್ತು. ಹೀಗಾಗಿ ಅವರು ಸಾಹಿತ್ಯ ಕ್ಷೇತ್ರದಲ್ಲಿನ ಬೆಳವಣಿಗೆ ಕುರಿತು ಆಸಕ್ತಿ ಹೊಂದಿದ್ದರು. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕಂಬಾರ ಕುಟುಂಬದ ಸದಸ್ಯರಿಗೆ ನೀಡಲಿ ಅಂತ ಕೋರುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.

    ಚಂದ್ರಶೇಖರ್ ಕಂಬಾರ್ ಪತ್ನಿ ಸತ್ಯಭಾಮ (76) ಇಂದು ಬೆಳಿಗ್ಗೆ 6:15ಕ್ಕೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸತ್ಯಭಾಮ ಕಳೆದ ಜನವರಿ 3 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

  • ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ: ಮುನೇನಕೊಪ್ಪ

    ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ: ಮುನೇನಕೊಪ್ಪ

    ಹುಬ್ಬಳ್ಳಿ: ಹಿರಿಯ ನಾಯಕರು ಹೇಳಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಆಗಲ್ಲ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸಲು ಯಾವ ಮುಖಂಡರು ಪ್ರಯತ್ನ ಪಟ್ಟಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಸಿಕ್ಕ ಸಿಎಂ ಪಟ್ಟ ಉಳಿಸಿಕೊಳ್ಳುತ್ತೇವೆ ಎಂದರು.

    basavaraj bommai

    ಮತಾಂತರ ಮಸೂದೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಮನಸ್ಸಿನಲ್ಲಿ ಮತಾಂತರ ಕಾಯ್ದೆ ಬರಬೇಕು ಎಂಬ ಬಯಕೆ ಇದೆ. ಈ ವಿಚಾರ ಮೊನ್ನೆ ನಡೆದ ಕಲಾಪದಲ್ಲಿ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿ ಆಗಲಿ: ಹಂಸಲೇಖ

    ಮಹಿಳೆಯರ ರಕ್ಷಣೆ ವಿಚಾರವಾಗಿ ಮಾತನಾಡಿ, ಗಾರ್ಮೆಂಟ್ ಕ್ಷೇತ್ರದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಅಗತ್ಯ ಕ್ರಮ ವಹಿಸಲಾಗಿದೆ. ಎಲ್ಲಾ ಗಾರ್ಮೆಂಟ್ ಮಾಲೀಕರ ಜೊತೆ ಮಾತನಾಡಿದ್ದೇವೆ ಎಂದು ಭರವಸೆ ನೀಡಿದ ಅವರು, ಟೆಕ್ಸ್ಟೈಲ್ಸ್ನಲ್ಲಿ ನೇಕಾರರ ಮಕ್ಕಳಿಗೆ ವಿದ್ಯಾನಿಧಿ ನೀಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮೆಸ್ಕಾಂ ಇಲಾಖೆಯ ಅವ್ಯವಹಾರ ಬಯಲುಗೊಳಿಸಿ ಅಧಿಕಾರಿಗಳಿಗೆ ಈಶ್ವರಪ್ಪ ಕ್ಲಾಸ್

    ಮಹಿಕೋ ಕಂಪೆನಿ ವಿತರಿಸಿದ ಹತ್ತಿ ಬೀಜ ಕಳಪೆ ಎಂಬ ದೂರು ರೈತರಿಂದ ಬಂದಿದೆ. ಕೃಷಿ ಇಲಾಖೆಗೆ ಅಗತ್ಯ ಕ್ರಮ ವಹಿಸಲು ಸೂಚಿಸಲಾಗುವುದು ಎಂದರು.

    ರಾಜ್ಯ ಕಾರ್ಯಕಾರಿಣಿ ಸಭೆಯ ವಿಚಾರವಾಗಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಆಯೋಜನೆ ಆಗಿರುವುದು ಸಂತಸದ ವಿಚಾರವಾಗಿದೆ. ಕಾರ್ಯಕಾರಿಣಿ ಸಭೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಚುನಾವಣೆಯ ಸೋಲು, ಗೆಲವುಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಾಗುವುದು. ಜೊತೆಗೆ ಗೆಲ್ಲಲು ಕಾರಣವಾದ ಅಂಶಗಳೇನು ಹಾಗೂ ಜನ ಕೈ ಬಿಡಲು ಕಾರಣವೇನು ಎಂಬ ವಿಚಾರಗಳ ಕುರಿತು ಚರ್ಚೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: 29 ವರ್ಷದ ಬಳಿಕ ಪಾಕಿಸ್ತಾನದ ಜೈಲಿನಿಂದ ತಾಯಿನಾಡಿಗೆ ಕಾಲಿಟ್ಟ ಕುಲದೀಪ್ ಸಿಂಗ್

    ಬೆಳಗಾವಿಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲು ಹಾಗೂ ಹಾನಗಲ್ ಉಪಚುನಾವಣೆ ಸೋಲಿನ ಬಗ್ಗೆ ಈಗಾಗಲೇ ಆತ್ಮಾವಲೋಕನ ಆಗಿದೆ ಎಂದ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ನೂಡಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ- 6 ಮಂದಿ ಸಾವು

    ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಕಾರ್ಯಕಾರಿಣಿ ಸಭೆ ಲೋಗೋವನ್ನು ಬಿಡುಗಡೆ ಮಾಡಲಾಯಿತು. ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ದತ್ತಮೂರ್ತಿ ಕುಲಕರ್ಣಿ ಇತರರಿದ್ದರು. ಇದನ್ನೂ ಓದಿ:  ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!