Tag: basaveshwar nagar

  • ಬೆಂಗಳೂರಲ್ಲಿ ಕಿಟ್ಟಿ ಪಾರ್ಟಿ ಆಯೋಜಿಸಿ 50 ಕೋಟಿ ವಂಚನೆ ಕೇಸ್ – ಲಾಯರ್ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ ಮತ್ತೋರ್ವ ಅರೆಸ್ಟ್

    ಬೆಂಗಳೂರಲ್ಲಿ ಕಿಟ್ಟಿ ಪಾರ್ಟಿ ಆಯೋಜಿಸಿ 50 ಕೋಟಿ ವಂಚನೆ ಕೇಸ್ – ಲಾಯರ್ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ ಮತ್ತೋರ್ವ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಕಿಟ್ಟಿ ಪಾರ್ಟಿ (Kitty Party) ಆಯೋಜಿಸಿ 50 ಕೋಟಿ ಹಣ ವಂಚನೆ ಪ್ರಕರಣ ಸಂಬಂಧ ಮತ್ತೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ವಂಚಕಿ ಸವಿತಾಳ ಪರ ಲಾಯರ್ ಎಂದು ಎಂಟ್ರಿ ಕೊಟ್ಟು ಎಸಿಪಿ, ಸಬ್ ಇನ್ಸ್ಪೆಕ್ಟರ್‌ಗೆ ಅವಾಜ್ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ನಕಲಿ ವಕೀಲ ಯೋಗಾನಂದನನ್ನು (52) ಬಂಧಿಸಲಾಗಿದೆ. ಈತ ವಂಚಕಿ ಸವಿತಾಳನ್ನು ಹೇಗೆ ಅರೆಸ್ಟ್ ಮಾಡಿದ್ರಿ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ. ಅಲ್ಲದೇ ಆರೋಪಿ ಸವಿತಾ ಬಳಿಯಿದ್ದ ಮನೆ ಕೀ ಹೊರಗೆ ತೆಗೆದುಕೊಂಡು ಹೋಗ್ತಿದ್ದ ವೇಳೆ ಆರೋಪಿ ಕೀ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಅಡ್ಡ ಹಾಕಿದ್ದ ಪೊಲೀಸರಿಗೆ ಅದ್ಹೇಗೆ ಕೀ ಕಿತ್ತುಕೊಳ್ತೀರೋ ನೋಡ್ತೀನಿ ಎಂದು ನಕಲಿ ವಕೀಲ ಯೋಗಾನಂದ ಅವಾಜ್ ಹಾಕಿದ್ದ. ಇದನ್ನೂ ಓದಿ: ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ – 20ಕ್ಕೂ ಹೆಚ್ಚು ಮಂದಿಗೆ ಪಂಗನಾಮ ಹಾಕಿದ್ದ ಮಹಿಳೆ ಅರೆಸ್ಟ್‌

    ಈತನ ರಂಪಾಟವನ್ನ ಗಮನಿಸಿದ್ದ ಕೆಪಿ ಅಗ್ರಹಾರ ಇನ್ಸ್ಪೆಕ್ಟರ್ ಗೋವಿಂದರಾಜ್ ಈತನ ಕೇಸ್ ಹಿಸ್ಟರಿ ತೆಗೆದಾಗ ಹಳೆ ಕೇಸ್‌ನಲ್ಲಿ ಮುದುಕಿಗೆ ಯೋಗಾನಂದ್ ಹೊಡೆದಿದ್ದರ ಮಾಹಿತಿ ಸಿಕ್ಕಿದೆ. ಆಗ ಬಸವೇಶ್ವರ ನಗರ ಎಸ್‌ಐ ಆಗಿದ್ದ ಗೋವಿಂದರಾಜ್ ಈತನನ್ನು ಬಂಧಿಸಿದ್ದರು. ಆಗ ನಾನು ಪ್ರೊಫೆಸರ್ ಎಂದು ಹೇಳಿಕೊಂಡಿದ್ದ ಯೋಗಾನಂದ್‌ನನ್ನು ಈಗ ಮತ್ತೆ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ‌ ಪ್ರಕರಣ | ಆರ್‌ಸಿಬಿ A1, ಡಿಎನ್‌ಎ A2 – ಮ್ಯಾಜಿಸ್ಟ್ರೇಟ್ ತನಿಖಾ ವರದಿ

    ಪ್ರಕರಣ ಏನು?
    20ಕ್ಕೂ ಹೆಚ್ಚು ಮಹಿಳೆಯರಿಗೆ 50 ಕೋಟಿ ರೂ.ಗಿಂತಲೂ ಹೆಚ್ಚು ವಂಚನೆ ಮಾಡಿದ್ದ ಆರೋಪದಡಿ ಬಸವೇಶ್ವರನಗರ ಪೊಲೀಸರು ಸವಿತಾ ಎಂಬಾಕೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭೂಕಂಪನ ಅನುಭವ – ಬೆಚ್ಚಿಬಿದ್ದ ಜನ

    ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನ ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಹಲವು ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು. ಸಿಎಂ, ಡಿಸಿಎಂ, ಎಂಬಿ ಪಾಟಿಲ್ ಹೆಸರೇಳಿ ಗಾಳ ಹಾಕ್ತಿದ್ದ ಸವಿತಾ, ನಿಧಾನವಾಗಿ ಹೂಡಿಕೆ ನೆಪದಲ್ಲಿ ಹಣ ಪಡೆದುಕೊಳ್ತಿದ್ದಳು. ಇದನ್ನೂ ಓದಿ: ಮೋದಿ ನಿವೃತ್ತಿಗೆ‌ ಮೋಹನ್ ಭಾಗವತ್ ಸೂಚನೆ? – ವಿಪಕ್ಷಗಳಿಂದ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ

    ಅಮೆರಿಕದಿಂದ ಕಮ್ಮಿ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ ಮಾಡಿದ್ದಾಳೆ. ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ಹಣ ನೀಡದೇ ನೆಪ ಹೇಳಿ ತಪ್ಪಿಸಿಕೊಳ್ತಿದ್ದಳು. ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಕೇಸ್ ದಾಖಲಾಗಿ ಬಂಧನವಾಗಿ ಬೇಲ್ ಮೇಲೆ ಹೊರಗಿದ್ದ ಸವಿತಾ ಮತ್ತದೇ ಚಾಳಿ ಮುಂದುವರೆಸಿ ಈಗ ಬಸವೇಶ್ವರ ನಗರ ಪೊಲೀಸರ ಅತಿಥಿ ಆಗಿದ್ದಾಳೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ತನಿಖಾ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ

  • ಕಮಲ್‌ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಇಬ್ಬರ ವಿರುದ್ಧ ಎಫ್‌ಐಆರ್

    ಕಮಲ್‌ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಇಬ್ಬರ ವಿರುದ್ಧ ಎಫ್‌ಐಆರ್

    ಬೆಂಗಳೂರು: ನಟ ಕಮಲ್‌ ಹಾಸನ್ (Kamal Haasan) ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡ ಪರ ಸಂಘಟನೆಯ ಇಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

    ನಟ ಕಮಲ್ ಹಾಸನ್ ಅವರ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆ ರಾಜ್ಯದಲ್ಲಿ ತ್ರೀವ ಆಕ್ರೋಶ ಹುಟ್ಟುಹಾಕಿದೆ. ಹೇಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬಸವೇಶ್ವರ ನಗರದ (Basaveshwar Nagar) ಪವಿತ್ರ ಪ್ಯಾರಡೈಸ್ ಬಳಿ ನಟನ ಭಾವಚಿತ್ರಕ್ಕೆ ಬೆಂಕಿ ಹಾಕಿ ಪ್ರತಿಭಟಿಸಿದ್ದರು.ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಗುಡ್ಡ ಕುಸಿತ, ಪ್ರಾಣಹಾನಿ – ರಕ್ಷಣಾ ಕಾರ್ಯಕ್ಕೆ ಯು.ಟಿ ಖಾದರ್ ಸೂಚನೆ

    ಪೊಲೀಸರ ಅನುಮತಿ ಪಡೆಯದೇ ರಸ್ತೆಯಲ್ಲಿ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಆರೋಪದ ಬೆನ್ನಲ್ಲೇ ಇದೀಗ ಕನ್ನಡ ಪರ ಸಂಘಟನೆಯ ಕಾರ್ಯಕರ್ತರಾದ ರವಿಕುಮಾರ್ ಹಾಗೂ ಬಸವೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ನೋಟಿಸ್ ಕೊಟ್ಟು ಕಳುಹಿಸಿದ್ದಾರೆ.

    ಏನಿದು ವಿವಾದ?
    ಮೇ 27ರಂದು `ಥಗ್ ಲೈಫ್’ (Thug Life) ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು.ಇದನ್ನೂ ಓದಿ: ಕಮಲ್ ಹಾಸನ್ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

  • ಅಡ್ರೆಸ್ ತಪ್ಪಾಗಿದ್ದಕ್ಕೆ ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿತ ಕೇಸ್ – ಡೆಲಿವರಿ ಬಾಯ್ ಅರೆಸ್ಟ್

    ಅಡ್ರೆಸ್ ತಪ್ಪಾಗಿದ್ದಕ್ಕೆ ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿತ ಕೇಸ್ – ಡೆಲಿವರಿ ಬಾಯ್ ಅರೆಸ್ಟ್

    ಬೆಂಗಳೂರು: ಅಡ್ರೆಸ್‌ನಲ್ಲಿ ಸಿಂಗಲ್ ಡಿಜಿಟ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಸವೇಶ್ವರ ನಗರ (Basaveshwar Nagar) ಪೊಲೀಸರು ಡೆಲಿವರಿ ಬಾಯ್‌ನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ವಿಷ್ಣುವರ್ಧನ್ ಎಂದು ಗುರುತಿಸಲಾಗಿದ್ದು, ಗ್ರಾಹಕ ಶಶಾಂಕ್ ಅವರ ಮೇಲೆ ಹಲ್ಲೆ ನಡೆಸಿದ್ದ.ಇದನ್ನೂ ಓದಿ: ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್ – ಕ್ಷಮೆಯಾಚಿಸಿದ ಕಂಪನಿ

    ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದು, ಆರ್ಡರ್ ಡೆಲಿವರಿಗೆ ಹೋದಾಗ ಅದರಲ್ಲಿ ಪಕ್ಕದ ಮನೆ ಅಡ್ರೆಸ್ ಇತ್ತು, ಇದರಿಂದ ವಿಳಾಸ ಯಾಕೆ ತಪ್ಪಾಗಿ ನೀಡಿದ್ದೀರಿ ಎಂದು ಮಹಿಳೆಯನ್ನು ಕೇಳಿದ್ದೆ. ಈ ವೇಳೆ ಶಶಾಂಕ್ ಬಂದು ನನ್ನ ಜೊತೆ ಗಲಾಟೆ ಮಾಡಿದ್ದರು. ಹೀಗಾಗಿ ಕೋಪದಿಂದ ಅವರ ಮೇಲೆ ಹಲ್ಲೆ ಮಾಡಿದೆ ಎಂದು ಡೆಲಿವರಿ ಬಾಯ್ ಹೇಳಿಕೊಂಡಿದ್ದಾನೆ.

    ಪ್ರಕರಣ ಏನು?
    ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಮೇ 21ರಂದು ಈ ಘಟನೆ ನಡೆದಿತ್ತು. ಆ್ಯಪ್‌ವೊಂದರಲ್ಲಿ ಹಲ್ಲೆಗೊಳಗಾದ ಶಶಾಂಕ್ ಪತ್ನಿ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ಬಂದಾಗ ಶಶಾಂಕ್ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಹೋಗಿದ್ದರು. ಈ ವೇಳೆ ಅಡ್ರೆಸ್ ವಿಚಾರವಾಗಿ ಬಾಯಿಗೆ ಬಂದಹಾಗೇ ಮಾತಾಡುತ್ತಿದ್ದ. ಇದನ್ನು ಕೇಳಿಸಿಕೊಂಡು ಶಶಾಂಕ್ ಹೊರಗಡೆ ಹೋಗಿ ಆತನೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದ್ದರು. ಆಗ ಒಮ್ಮೆಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯವಾಗಿತ್ತು. ಹಲ್ಲೆ ನಡೆಸಿದ ದೃಶ್ಯಗಳು ಅದೇ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಗ್ರಾಹಕ ಶಶಾಂಕ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿತ್ತು. ಬಳಿಕ ಡೆಲಿವರಿ ಕಂಪನಿ ಶಶಾಂಕ್ ಅವರಿಗೆ ಕ್ಷಮೆ ಕೇಳಿತ್ತು.

    ಈ ಕುರಿತು ಶಶಾಂಕ್ ಮಾತನಾಡಿ, ಹಲ್ಲೆಯಿಂದಾಗಿ ನನ್ನ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಹೀಗಾಗಿ ಡಾಕ್ಟರ್ ಇನ್ನೊಮ್ಮೆ ಚೆಕ್ ಮಾಡುತ್ತೇನೆ ಎಂದಿದ್ದು, ಒಂದು ವೇಳೆ ಸರಿಹೋಗದಿದ್ದರೆ ಆಪರೇಷನ್ ಮಾಡಬೇಕು ಎಂದು ಹೇಳಿದ್ದರು. ಸಂಬಂಧಪಟ್ಟ ಕಂಪನಿಯವರು, ಪೊಲೀಸರು ನನಗೆ ನ್ಯಾಯಕೊಡಿಸಬೇಕು ಎಂದು ಕೇಳಿಕೊಂಡಿದ್ದರು.ಇದನ್ನೂ ಓದಿ:ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

  • ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್ – ಕ್ಷಮೆಯಾಚಿಸಿದ ಕಂಪನಿ

    ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್ – ಕ್ಷಮೆಯಾಚಿಸಿದ ಕಂಪನಿ

    ಬೆಂಗಳೂರು: ಅಡ್ರೆಸ್‌ನಲ್ಲಿ ಸಿಂಗಲ್ ಡಿಜಿಟ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ (Delivery Boy) ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡೆಲಿವರಿ ಕಂಪನಿ ಗ್ರಾಹಕನಿಗೆ ಕ್ಷಮೆಯಾಚಿಸಿದೆ.

    ಡೆಲಿವರಿ ಬಾಯ್ ವಿಷ್ಣುವರ್ಧನ್ ಎಂಬಾತ ಗ್ರಾಹಕ ಶಶಾಂಕ್ ಅವರ ಮೇಲೆ ಹಲ್ಲೆ ನಡೆಸಿದ್ದ. ಬೆಂಗಳೂರಿನ (Bengaluru)ಬಸವೇಶ್ವರ ನಗರದಲ್ಲಿ (Basaveshwar Nagar) ಈ ಘಟನೆ ನಡೆದಿತ್ತು. ಮೇ 21ರಂದು ಆ್ಯಪ್‌ವೊಂದರಲ್ಲಿ ಶಶಾಂಕ್ ಪತ್ನಿ ಆರ್ಡರ್ ಮಾಡಿದ್ದರು. ಇದನ್ನೂ ಓದಿ: ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

    ಡೆಲಿವರಿ ಬಾಯ್ ಬಂದಾಗ ಶಶಾಂಕ್ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಹೋದಾಗ ಅಡ್ರೆಸ್ ವಿಚಾರವಾಗಿ ಬಾಯಿಗೆ ಬಂದಹಾಗೇ ಮಾತಾಡುತ್ತಿದ್ದ. ಇದನ್ನು ಕೇಳಿಸಿಕೊಂಡು ಶಶಾಂಕ್ ಹೊರಗಡೆ ಹೋಗಿ ಆತನೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದ್ದರು. ಆಗ ಒಮ್ಮೆಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯವಾಗಿದೆ. ಹಲ್ಲೆ ನಡೆಸಿದ ದೃಶ್ಯಗಳು ಅದೇ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಈ ಘಟನೆ ಕುರಿತು ಶಶಾಂಕ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಇದೀಗ ಡೆಲಿವರಿ ಕಂಪನಿ ಶಶಾಂಕ್ ಅವರಿಗೆ ಕ್ಷಮೆ ಕೇಳಿದೆ.

    ಈ ಕುರಿತು ಶಶಾಂಕ್ ಮಾತನಾಡಿದ್ದು, ಹಲ್ಲೆಯಿಂದಾಗಿ ನನ್ನ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಹೀಗಾಗಿ ಡಾಕ್ಟರ್ ಇನ್ನೊಮ್ಮೆ ಚೆಕ್ ಮಾಡುತ್ತೇನೆ ಎಂದಿದ್ದು, ಒಂದು ವೇಳೆ ಸರಿಹೋಗದಿದ್ದರೆ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ. ಸಂಬಂಧಪಟ್ಟ ಕಂಪನಿಯವರು, ಪೊಲೀಸರು ನನಗೆ ನ್ಯಾಯಕೊಡಿಸಬೇಕು ಎಂದು ಕೇಳಿಕೊಂಡಿದ್ದರು.ಇದನ್ನೂ ಓದಿ: `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

  • ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

    ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

    ಬೆಂಗಳೂರು: ಅಡ್ರೆಸ್‌ನಲ್ಲಿ ಸಿಂಗಲ್ ಡಿಜಿಟ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ (Delivery Boy) ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ ನಗರದಲ್ಲಿ (Basaveshwar Nagar) ನಡೆದಿದೆ.

    ಹಲ್ಲೆಗೊಳಗಾದ ಗ್ರಾಹಕ ಶಶಾಂಕ್ ಹಾಗೂ ಡೆಲಿವರಿ ಬಾಯ್‌ನ್ನು ವಿಷ್ಣುವರ್ಧನ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಗಡಿಯಲ್ಲಿ ಭಾರತಕ್ಕೆ ನುಸುಳಲು ಯತ್ನ – ಶಂಕಿತ ಪಾಕಿಸ್ತಾನಿ ಹೊಡೆದುರುಳಿಸಿದ ಬಿಎಸ್‌ಎಫ್‌

     ಮೇ 21ರಂದು ಆ್ಯಪ್‌ವೊಂದರಲ್ಲಿ ಶಶಾಂಕ್ ಪತ್ನಿ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ಬಂದಾಗ ಶಶಾಂಕ್ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಹೋದಾಗ ಅಡ್ರೆಸ್ ವಿಚಾರವಾಗಿ ಬಾಯಿಗೆ ಬಂದಹಾಗೇ ಮಾತಾಡುತ್ತಿದ್ದ. ಇದನ್ನು ಕೇಳಿಸಿಕೊಂಡು ಶಶಾಂಕ್ ಹೊರಗಡೆ ಹೋಗಿ ಆತನೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದ್ದರು. ಆಗ ಒಮ್ಮೆಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯವಾಗಿದೆ. ಹಲ್ಲೆ ನಡೆಸಿದ ದೃಶ್ಯಗಳು ಅದೇ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಈ ಘಟನೆ ಕುರಿತು ಶಶಾಂಕ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

    ಈ ಕುರಿತು ಶಶಾಂಕ್ ಮಾತನಾಡಿ, ಹಲ್ಲೆಯಿಂದಾಗಿ ನನ್ನ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಹೀಗಾಗಿ ಡಾಕ್ಟರ್ ಇನ್ನೊಮ್ಮೆ ಚೆಕ್ ಮಾಡುತ್ತೇನೆ ಎಂದಿದ್ದು, ಒಂದು ವೇಳೆ ಸರಿಹೋಗದಿದ್ದರೆ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ. ಸಂಬಂಧಪಟ್ಟ ಕಂಪನಿಯವರು, ಪೊಲೀಸರು ನನಗೆ ನ್ಯಾಯಕೊಡಿಸಬೇಕು ಎಂದು ಕೇಳಿಕೊಂಡಿದ್ದಾರೆ.ಇದನ್ನೂ ಓದಿ: Ramanagara | ಸರ್ಕಾರದ ಇ ಸ್ವತ್ತು ಸಾಫ್ಟ್‌ವೇರ್ ಹ್ಯಾಕ್ ಮಾಡಿ ದಾಖಲೆಗಳ ತಿದ್ದುಪಡಿ – ಮೂವರ ಬಂಧನ

     

  • 33 ಸೆಕೆಂಡ್‌ನಲ್ಲಿ 33 ಲಕ್ಷ ದೋಚಿದ ಖದೀಮರು – ಕಾರಿನ ಗ್ಲಾಸ್ ಒಡೆದು ಕಳ್ಳತನ

    33 ಸೆಕೆಂಡ್‌ನಲ್ಲಿ 33 ಲಕ್ಷ ದೋಚಿದ ಖದೀಮರು – ಕಾರಿನ ಗ್ಲಾಸ್ ಒಡೆದು ಕಳ್ಳತನ

    ಹಾವೇರಿ: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು, 33 ಸೆಕೆಂಡ್‌ನಲ್ಲಿ ಕಾರಿನಲ್ಲಿದ್ದ 33 ಲಕ್ಷ ರು. ಹಣವನ್ನು ಖದೀಮರು ದೋಚಿರುವ ಘಟನೆ ಹಾವೇರಿ (Haveri) ನಗರದಲ್ಲಿ ನಡೆದಿದೆ.

    ಬಸವೇಶ್ವರ ನಗರದ ಹತ್ತನೇ ಕ್ರಾಸ್‌ನಲ್ಲಿರುವ ಸಂತೋಷ್ ಹಿರೇಮಠ ಎಂಬುವರಿಗೆ ಸೇರಿದ ನಗದು ಕಳ್ಳತನವಾಗಿದೆ.

    ಸಿವಿಲ್ ಕಾಂಟ್ರ‍್ಯಾಕ್ಟರ್ ಆಗಿರುವ ಸಂತೋಷ್ ಹಾವೇರಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೈನಂದಿನ ವ್ಯವಹಾರಕ್ಕಾಗಿ 33 ಲಕ್ಷ ರೂ. ಹಣವನ್ನು ಸಂಬಂಧಿಕರ ಖಾತೆಯಿಂದ ಚೆಕ್ ಮುಖಾಂತರ ಹಣ ಡ್ರಾ ಮಾಡಿಕೊಂಡಿದ್ದರು. ಡ್ರಾ ಮಾಡಿದ ಹಣವನ್ನು ಕಾರಿನ ಹಿಂಭಾಗದ ಸೀಟಿನಲ್ಲಿಟ್ಟಿದ್ದರು. ಇದನ್ನೂ ಓದಿ: ಚಾಮರಾಜನಗರ: 4 ಕರುಗಳನ್ನು ಕೊಂದಿದ್ದ ಚಿರತೆ ಕೊನೆಗೂ ಸೆರೆ

    ಸಂತೋಷ್ ಮಾ.6ರಂದು ಸಂಜೆ 4:05ಕ್ಕೆ ಮನೆ ಮುಂದೆ ಕಾರು ನಿಲ್ಲಿಸಿ, ಕಾರಿನಲ್ಲಿ ಹಣ ಬಿಟ್ಟು ಮನೆಯೊಳಗೆ ಹೋಗಿದ್ದರು. ಮನೆಯಲ್ಲಿ ಊಟ ಮಾಡಿ ವಾಪಸ್ ಸಂಜೆ 5:20ಕ್ಕೆ ಕಾರಿನ ಹತ್ತಿರ ಬಂದು ನೋಡಿದಾಗ ಕಾರಿನ ಗ್ಲಾಸ್ ಒಡೆದು ಹಣ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

    2 ಬೈಕ್‌ಗಳಲ್ಲಿ ಬಂದಿದ್ದ 4 ಜನ ಕಳ್ಳರಲ್ಲಿ ಒಬ್ಬ ಕಾರಿನ ಬಳಿ ಸುತ್ತಾಡಿ, ಕಾರಿನ ಗ್ಲಾಸ್ ಒಡೆದು ಕಾರಿನ ಒಳಹೊಕ್ಕು ಹಣವಿದ್ದ ಬ್ಯಾಗ್ ತೆಗೆದುಕೊಂಡಿದ್ದಾನೆ. ನಂತರ ಬೈಕ್‌ನಲ್ಲಿ ಬಂದ ಮತ್ತೊಬ್ಬ ಖದೀಮ ಆತನನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ರಾಯಚೂರು ಜಿಲ್ಲೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

    ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್ಪಿ, ಹೆಚ್ಚುವರಿ ಎಸ್ಪಿ ಹಾಗೂ ಪೊಲೀಸರು, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಮಾಲೀಕನಿಗೆ 26 ಸಾವಿರ ರೂ. ದಂಡ

    ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಗಳ ಪತ್ತೆಗಾಗಿ 3 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಅಂಶುಕುಮಾರ ಎಂದು ತಿಳಿಸಿದರು

  • PUBLiC TV Impact | ಡೆಡ್‌ಲೈನ್ ಟೆನ್ಶನ್‌ನಲ್ಲಿ ಪಾಲಿಕೆ ಯಡವಟ್ಟು – ಬಿಬಿಎಂಪಿಯಿಂದ ಗುಂಡಿ ಮುಚ್ಚುವ ಕಾರ್ಯ ಶುರು!

    PUBLiC TV Impact | ಡೆಡ್‌ಲೈನ್ ಟೆನ್ಶನ್‌ನಲ್ಲಿ ಪಾಲಿಕೆ ಯಡವಟ್ಟು – ಬಿಬಿಎಂಪಿಯಿಂದ ಗುಂಡಿ ಮುಚ್ಚುವ ಕಾರ್ಯ ಶುರು!

    ಬೆಂಗಳೂರು: ಟಾರ್ಗೆಟ್ ರೀಚ್ ಆಗುವ ಭರದಲ್ಲಿ ತರಾತುರಿಯಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದ ಬಿಬಿಎಂಪಿ, ಪಬ್ಲಿಕ್ ಟಿವಿ (PUBLiC TV) ವರದಿ ಬಳಿಕ ಎಚ್ಚೆತ್ತುಕೊಂಡಿದೆ.

    ಹೌದು. ಆಗಸ್ಟ್ 12ರಂದು ಜಾಲಹಳ್ಳಿ (Jalahalli) ರಸ್ತೆ ಗುಂಡಿ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿ ಪರಿಣಾಮ ಎಚ್ಚೆತ್ತ ಬಿಬಿಎಂಪಿ (BBMP) ಇದೀಗ ಗುಂಡಿ ಮುಚ್ಚುವ ಕೆಲಸ ಮಾಡಿಸಿದೆ. ಬಸವೇಶ್ವರ ನಗರದ (Basaveshwar Nagar) ವಾಟರ್ ಟ್ಯಾಂಕ್ ರಸ್ತೆಯಲ್ಲಿ ಬರೆ ಜೆಲ್ಲಿ ಕಲ್ಲು ಸುರಿದ ಬಿಬಿಎಂಪಿ ದುರಸ್ತಿ ಮಾಡಿತ್ತು. ಟಾರ್ಗೆಟ್ ರೀಚ್ ಆಗುವ ಬರದಲ್ಲಿ ತರಾತುರಿಯ ಕೆಲಸ ಮುಗಿಸಿತ್ತು. ಪ್ರಮುಖ ರಸ್ತೆ ದುರಸ್ತಿಗಾಗಿ 600 ಕೋಟಿಗೂ ಅಧಿಕ ಹಣವನ್ನು ಮೀಸಲಿಡಲಾಗುತ್ತು. ಆದರೆ ನೋಡಿದರೆ ಕೇವಲ ಜಲ್ಲಿ ಕಲ್ಲು ಹಾಗೂ ಸೀಮೆಂಟ್ ದುರಸ್ತಿ ಕೆಲಸ ಮಾಡಲಾಗಿತ್ತು.ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ಬಂಧನಕ್ಕೆ ಕೇಸರಿ ಕಲಿಗಳು ಕೆಂಡ – ಸರ್ಕಾರದ ವಿರುದ್ಧ ಅಶ್ವಥ್‌ ನಾರಾಯಣ್‌ ತೀವ್ರ ವಾಗ್ದಾಳಿ

    ರಸ್ತೆಯ ಅರ್ಧಭಾಗ ಆವರಿಸಿರುವ ಗುಂಡಿಗೆ ಕೇವಲ ಜೆಲ್ಲಿಯನ್ನು ಸುರಿಯಲಾಗಿತ್ತು. ಇದರಿಂದ ಇನ್ನಷ್ಟು ಅಪಘಾತಗಳು ಹೆಚ್ಚಾಗುತ್ತವೆ ಎಂದು ವಾಹನ ಸವಾರರು ಕಿಡಿಕಾರಿದ್ದರು. ದಯವಿಟ್ಟು ಕೈ ಮುಗಿದು ಬೇಡಿಕೊಳ್ಳುತ್ತೇವೆ ರಸ್ತೆ ಗುಂಡಿ ಮುಚ್ಚಿ ಅಂತ ಸಾರ್ವಜನಿಕರು ಬೇಡಿಕೊಂಡಿದ್ದರು. ಈ ಕುರಿತಂತೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಯ ಪರಿಣಾಮ ಇದೀಗ ಗುಂಡಿ ಮುಚ್ಚುವ ಆರಂಭವಾಗಿದೆ. ಜೊತೆಗೆ ಬೆಂಗಳೂರು ಗುಂಡಿ ಮುಕ್ತ ಮಾಡಲು ಡಿಸಿಎಂ ಸೆ.15ರ ವರೆಗೆ ಕೊನೆಯ ದಿನ ಎಂದು ಕೊಟ್ಟಿರುವ ಡೆಡ್‌ಲೈನ್ ಹಿನ್ನೆಲೆ ಕೆಲಸ ಜೋರಾಗಿ ನಡೆಯುತ್ತಿದೆ.

    ಇದೀಗ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದ್ದು, ಜಾಲಹಳ್ಳಿ ಮುಖ್ಯ ರಸ್ತೆ, ದಾಸರಹಳ್ಳಿ (Dasarhalli) ವಲಯ ರಸ್ತೆಯನ್ನು ಆಯುಕ್ತರ ನೇತೃತ್ವದಲ್ಲಿ ಮುಚ್ಚಲಾಗುತ್ತಿದೆ. ಪಬ್ಲಿಕ್ ಟಿವಿ ವರದಿ ನಂತರ ಅಯ್ಯಪ್ಪ ದೇವಾಲಯದ ಮುಂದೆ ಬಿಬಿಎಂಪಿ ಗುಂಡಿ ಮುಚ್ಚುತ್ತಿದೆ. ಇಂದು ಕಡೆ ದಿನವಾದ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಭಾನುವಾರದಂದು ರಸ್ತೆ ಗುಂಡಿ ಮುಚ್ಚುವುದರಲ್ಲಿ ತೊಡಗಿದ್ದಾರೆ.ಇದನ್ನೂ ಓದಿ: ದೇಶದ ಮೊದಲ ವಂದೇ ಮೆಟ್ರೋ, 6 ವಂದೇ ಭಾರತ್‌ ರೈಲು ಸೇವೆಗೆ ಮೋದಿ ಚಾಲನೆ – ಏನಿದರ ವಿಶೇಷ!

  • ಧೂಳು ಹಿಡಿದ ಲಾರಿಯಲ್ಲಿ ಬೆಲೆ ಬಾಳುವ ಔಷಧಿಗಳ ಸಂಗ್ರಹ

    ಧೂಳು ಹಿಡಿದ ಲಾರಿಯಲ್ಲಿ ಬೆಲೆ ಬಾಳುವ ಔಷಧಿಗಳ ಸಂಗ್ರಹ

    – ಆವರಣದಲ್ಲಿ ಸಿಗುತ್ತಿವೆ ಅವಧಿ ಮುಗಿಯದ ಔಷಧಿಗಳು
    – ಆರೋಗ್ಯ ಇಲಾಖೆಯ ಮಹಾ ನಿರ್ಲಕ್ಷ್ಯ ಅನಾವರಣ

    ಬೆಂಗಳೂರು: ಜನರ ಜೀವ ಉಳಿಸಬೇಕಾದ ಔಷಧಗಳಿಗೆ (Medicine) ಈಗ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರದ ಔಷಧ ಉಗ್ರಾಣದ ಹೊರ ಭಾಗದಲ್ಲಿಯೇ ಸಿರಿಂಜ್, ಮೆಡಿಸಿನ್‌ಗಳನ್ನು ಸಂಗ್ರಹಿಸಿ ಆರೋಗ್ಯ ಇಲಾಖೆಯ (Health Department) ವೈದ್ಯಕೀಯ ಸರಬರಾಜು ನಿಗಮದ (Medical Supply Corporation) ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.

    ಬೆಂಗಳೂರು (Bengaluru) ಸೇರಿ, ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಮಾಡುವ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿರ್ಲಕ್ಷ್ಯ ಇದೀಗ ಬಯಲಾಗಿದೆ. ಬಸವೇಶ್ವರ ನಗರ (Basaveshwar Nagar), ಸಿದ್ಧಯ್ಯ ಪುರಾಣಿಕ ರಸ್ತೆಯಲ್ಲಿರುವ ಸರ್ಕಾರಿ ಔಷಧಿ ಮಳಿಗೆಯ ಆವರಣದ ಹೊರ ಭಾಗದಲ್ಲಿ ಬೆಲೆ ಬಾಳುವ ಔಷಧಿಗಳನ್ನು ಧೂಳು ಹಿಡಿದ ಲಾರಿಯಲ್ಲಿ (Lorry) ಸಂಗ್ರಹಿಸಿಟ್ಟಿದ್ದಾರೆ. ಬಿಸಿಲಿನಲ್ಲಿ, ಧೂಳಿನಲ್ಲಿ ಔಷಧಗಳನ್ನು ಇಡಲಾಗಿದೆ. ಮಳೆ ಬಂದರೆ ದುಬಾರಿ ಔಷಧಿಗಳು ಎಲ್ಲವೂ ನೀರು ಪಾಲಾಗುತ್ತದೆ. ಆ ಔಷಧಿಗಳನ್ನು ಗೋದಾಮಿನಲ್ಲಿ ಇಡಬೇಕೆಂಬ ಕನಿಷ್ಟ ಸಾಮಾನ್ಯ ಜ್ಞಾನವನ್ನೂ ಇಲ್ಲಿನ ಅಧಿಕಾರಿಗಳು ಪಾಲಿಸಿಲ್ಲ. ಇದನ್ನೂ ಓದಿ: ಕಲ್ಲಿದ್ದಲು ಕಳ್ಳತನ ಕೇಸ್‌ – ಇದ್ದ ಮೂವರಲ್ಲಿ ಕಳ್ಳ ಯಾರು? ವೈಟಿಪಿಎಸ್ ಅಧಿಕಾರಿಗಳು ಹೇಳೋದು ಏನು?

    2023-24ರ ಸಾಲಿನಲ್ಲಿ ವಿವಿಧ ಆಸ್ಪತ್ರೆಗಳಿಗೆ ಔಷಧಗಳಿಗೆ ಹೆಚ್ಚು ಬೇಡಿಕೆ ಬಂದಿತ್ತು. 732 ಡ್ರಗ್ಸ್‌ಗಳ ಪೈಕಿ, 409 ಎಸೆನ್ಶಿಯಲ್ ಡ್ರಗ್ಸ್ ಕೂಡ ಆಸ್ಪತ್ರೆಗಳಿಗೆ ಸರಿಯಾದ ಸಮಯಕ್ಕೆ ಪೂರೈಕೆ ಆಗುತ್ತಿಲ್ಲ. ಆಸ್ಪತ್ರೆಯ ಆವರಣದ ಹೊರಗೆ ಯಾವುದೇ ಸುರಕ್ಷತೆ, ಭದ್ರತೆ ಇಲ್ಲದ ಲಾರಿಯಲ್ಲಿ ನೂರಾರು ಸಿರಿಂಜ್ ಬಾಕ್ಸ್‌ಗಳನ್ನು ಹಲವು ದಿನಗಳಿಂದ ಸಂಗ್ರಹಿಸಿಟ್ಟಿದ್ದಾರೆ. ನವೆಂಬರ್ 19ರಂದು ಇದೇ ಜಾಗಕ್ಕೆ ಹೋದಾಗಲೂ ಇದೇ ಲಾರಿಯಲ್ಲಿರುವ ಔಷಧಿಗಳನ್ನು ಹೀಗೇ ಖಾಲಿ ಬಿಟ್ಟಿದ್ದರು. ಇದನ್ನೂ ಓದಿ: ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

    ಔಷಧ ಮಳಿಗೆಯ ಆವರಣದಲ್ಲಿಯೇ ಅವಧಿ ಮುಗಿಯದೇ ಇರುವ ಔಷಧಿಗಳನ್ನು ಎಸೆಯಲಾಗಿದೆ. ಔಷಧಿ ಸಂಗ್ರಹ ಮಳಿಗೆಯ ವ್ಯಾಪ್ತಿ ದೊಡ್ಡದಾಗಿದ್ದು, ಇಲ್ಲಿ ರಾತ್ರಿ ಸಮಯದಲ್ಲಿ ಕೇವಲ ಒಬ್ಬರೇ ಸೆಕ್ಯೂರಿಟಿ ಗಾರ್ಡ್ ಇರುತ್ತಾರೆ. ಯಾರು, ಹೇಗೆ, ಎಲ್ಲಿ ಬೇಕಾದರೂ ಮೆಡಿಸಿನ್‌ಗಳನ್ನು ದೋಚಬಹುದು. ಅಷ್ಟರಮಟ್ಟಿಗೆ ಭದ್ರತೆ ಇಲ್ಲದಂತಾಗಿದೆ. ಅದೇನೆ ಆಗಲಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನಹರಿಸಬೇಕಿದೆ. ಇದನ್ನೂ ಓದಿ: ಜಮೀರ್ ಒಬ್ಬ ರಾಷ್ಟ್ರದ್ರೋಹಿ, ಸಚಿವ ಸಂಪುಟದಿಂದ ವಜಾ ಮಾಡಿ – ಈಶ್ವರಪ್ಪ ಆಗ್ರಹ

  • ಅನೈತಿಕ ಸಂಬಂಧಕ್ಕೆ ಮಹಿಳೆ ಬಲಿ

    ಅನೈತಿಕ ಸಂಬಂಧಕ್ಕೆ ಮಹಿಳೆ ಬಲಿ

    – ಸಾಯುತ್ತೇನೆಂದವಳ ಕುಣಿಕೆಯ ಹಗ್ಗ ಎಳೆದು ಕುರ್ಚಿ ತಳ್ಳಿ ಸಾಯಿಸಿದ ಪ್ರಿಯಕರ

    ಬೆಂಗಳೂರು: ಅನೈತಿಕ ಸಂಬಂಧ (Illegal Relation) ಹೊಂದಿದ್ದನ್ನು ಪ್ರಶ್ನಿಸಿ ಸಾಯುತ್ತೇನೆ ಎಂದು ಹೆದರಿಸಿದ ಮಹಿಳೆಯ ಕುಣಿಕೆ ಎಳೆದು ಕುರ್ಚಿಯನ್ನು ತಳ್ಳಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ (Bengaluru) ಬಸವೇಶ್ವರನಗರದಲ್ಲಿ (Basaveshwar Nagar) ನಡೆದಿದೆ.

    ಸರವಣ (35) ಮೃತ ಮಹಿಳೆ. ಈಕೆಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಸಹ ಗಣೇಶ್ (22) ಎಂಬ ಯುವಕನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಅಷ್ಟೇ ಅಲ್ಲದೇ ಯುವಕನಿಗೆ 50 ಸಾವಿರ ರೂ. ಹಣ ಹಾಗೂ ಒಂದು ಮನೆಯನ್ನೂ ಸಹ ಮಾಡಿಕೊಟ್ಟಿದ್ದಳು. ಇಷ್ಟೆಲ್ಲಾ ಇದ್ದರೂ ಗಣೇಶ್ ಬೇರೆ ಹುಡುಗಿಯೊಂದಿಗೆ ಸಲುಗೆಯನ್ನು ಬೆಳೆಸಿಕೊಂಡಿದ್ದ. ಇದನ್ನು ತಿಳಿದ ಮಹಿಳೆ ಆತನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಬಳಿಕ ಆತ ಸಲುಗೆ ಬೆಳೆಸಿಕೊಂಡಿರುವ ಹುಡುಗಿ ಯಾರೆಂದು ಪ್ರಶ್ನಿಸಿದ್ದಾಳೆ. ಅಲ್ಲದೇ ತಾನು ನೀಡಿದ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾಳೆ. ಇದರಿಂದಾಗಿ ಇವರಿಬ್ಬರ ಮಧ್ಯೆ ಗಲಾಟೆ ನಡೆದಿದೆ. ಇದನ್ನೂ ಓದಿ: ನಕಲಿ ಪಾಸ್‌ಪೋರ್ಟ್‌ ಬಳಸಿ ವಿದೇಶಕ್ಕೆ ಹಾರಲು ಸಂಚು ರೂಪಿಸಿದ್ದ ಆರೋಪಿ ಅಂದರ್‌

    ಈ ವೇಳೆ ಗಣೇಶ್ ಸಾಯುತ್ತೇನೆ ಎಂದು ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ (Suicide) ಮುಂದಾಗಿದ್ದ. ಇದನ್ನು ನೋಡಿದ ಮಹಿಳೆ ತಾನೂ ಕೂಡಾ ಸಾಯುವುದಾಗಿ ಕುಣಿಕೆ ಹಾಕಿಕೊಂಡಿದ್ದಾಳೆ. ಈ ವೇಳೆ ಗಣೇಶ್ ಆಕೆಯ ಕುಣಿಕೆಯ ಹಗ್ಗ ಎಳೆದು ಕುರ್ಚಿಯನ್ನು ತಳ್ಳಿದ್ದಾನೆ. ಇದರಿಂದಾಗಿ ಕುಣಿಕೆ ಕುತ್ತಿಗೆಗೆ ಬಿಗಿದು ಮಹಿಳೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಕುಡಿಯಲು ಹಣ ಕೊಡದಿದ್ದಕ್ಕೆ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನೇ ಕೊಂದ ಪಾಪಿ ಮಗ

    ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗಣೇಶ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಲಿಫ್ಟ್‌ಗೆ ಸಿಲುಕಿ 26ರ ಯುವಕ ಸಾವು

  • ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಡಿವೈಡರ್‌ಗೆ ಗುದ್ದಿದ ಬೈಕ್ – ಮೂವರು ಟೆಕ್ಕಿಗಳ ದುರ್ಮರಣ

    ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಡಿವೈಡರ್‌ಗೆ ಗುದ್ದಿದ ಬೈಕ್ – ಮೂವರು ಟೆಕ್ಕಿಗಳ ದುರ್ಮರಣ

    ಬೆಂಗಳೂರು: ನಗರದಲ್ಲಿ ಭಾನುವಾರ ತಡರಾತ್ರಿ ಭೀಕರ ಬೈಕ್ ಅಪಘಾತ ಸಂಭವಿಸಿದ್ದು ಮೂವರು ಟೆಕ್ಕಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

    ಕುಣಿಗಲ್ ನಿವಾಸಿ ಅನಿಲ್, ಟಿ ನರಸಿಪುರದ ಕಾರ್ತಿಕ್ ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರು ಶ್ರೀನಾಥ್ ಮೃತ ಟೆಕ್ಕಿಗಳು. ಈ ಘಟನೆ ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆ ಬಳಿ ನಡೆದಿದೆ.

    ಮೂವರು ಟೆಕ್ಕಿಗಳು ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್ ಕಡೆಯಿಂದ ಮಾಗಡಿ ರಸ್ತೆ ಕಡೆ ಹೋಗುತ್ತಿದ್ದರು. ಈ ವೇಳೆ ಕಾರ್ತಿಕ್ ಎಂಬಾತ ಯಮಹ ಆರ್ 15 ಬೈಕನ್ನು ವೇಗವಾಗಿ ಚಲಾಯಿಸಿದ್ದಾನೆ. ಪರಿಣಾಮ ಬೈಕ್ ರಸ್ತೆ ಬದಿಯಲ್ಲಿದ್ದ ಬೆಸ್ಕಾಂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಂತರ ಡಿವೈಡರ್‍ಗೆ ಗುದ್ದಿದೆ.

    ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೆ ಮೂವರು ಟೆಕ್ಕಿಗಳು ಕೂಡ ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸದ ಕಾರಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

    ರಸ್ತೆಯಲ್ಲಿ ಬಿದ್ದಿದ್ದ ಮೃತ ದೇಹಗಳನ್ನು ವಿಕ್ಟೋರಿಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.