Tag: Basavarajan

  • ನನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು, ಕಾನೂನು ಹೋರಾಟ ಮಾಡ್ತೇನೆ: ಬಸವರಾಜನ್

    ನನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು, ಕಾನೂನು ಹೋರಾಟ ಮಾಡ್ತೇನೆ: ಬಸವರಾಜನ್

    ಚಿತ್ರದುರ್ಗ: ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಹಿನ್ನೆಲೆಯಲ್ಲಿ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಜಾಮೀನು ಮಂಜೂರಾದ ಬಳಿಕ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ತಿಳಿಸಿದರು.

    ಅತ್ಯಾಚಾರ ಆರೋಪ ಬಂದಿರುವ ಮುರುಘಾ ಮಠದ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಸದ್ಯಕ್ಕೆ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಯಾವುದೇ ಪಿತೂರಿ ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಮಕ್ಕಳಿಗೆ ನಾನೇ ರಕ್ಷಣೆ ನೀಡಿದ್ದೇನೆ ಎಂದರು.

    ನಾನು ಸಂತ್ರಸ್ತ ಬಾಲಕಿಯರ ರಕ್ಷಣೆಗೆ ನಿಂತಿದ್ದೇನೆ. ನಾನು ಆಡಳಿತ ಅಧಿಕಾರಿಯಾಗಿದ್ದಾಗ ವಿಚಾರ ಗೊತ್ತಿದ್ದರೆ ಆಗಲೇ ರಕ್ಷಣೆ ಕೊಡುತ್ತಿದ್ದೆ. ಅನ್ಯಾಯವಾಗಿದೆ ಎಂದು ಗೊತ್ತಾದ ತಕ್ಷಣ ನಾನು, ನನ್ನ ಪತ್ನಿ, ಮಗ ಅವರಿಗೆ ರಕ್ಷಣೆ ನೀಡಿದ್ದೇವೆ. ಆಡಳಿತಾಧಿಕಾರಿ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಮಠದಲ್ಲಿ ಷಡ್ಯಂತ್ರ ನಡೆಯಿತು. ಅದಕ್ಕಾಗಿ ಈಗಾಗಲೇ ಜಾಮೀನು ಅರ್ಜಿ ಹಾಕಿದ್ದೆ. ಈಗ ನನಗೆ ಜಾಮೀನು ಸಿಕ್ಕಿದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ರೇಪ್‌ ಕೇಸ್‌ – ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್‌, ಪತ್ನಿಗೆ ಜಾಮೀನು

    ರೇಪ್‌ ಕೇಸ್‌ – ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್‌, ಪತ್ನಿಗೆ ಜಾಮೀನು

    ಚಿತ್ರದುರ್ಗ: ಅತ್ಯಾಚಾರ ಆರೋಪ ಬಂದಿರುವ ಮುರುಘಾ ಮಠದ ಆಡಳಿತಾಧಿಕಾರಿಯೂ ಆಗಿರುವ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮತ್ತು ಪತ್ನಿ ಸೌಭಾಗ್ಯ ಅವರಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

    ಒಂದನೇ ಜಿಎಂಎಫ್‌ಸಿ ನ್ಯಾಯಾಲಯಕ್ಕೆ ಇಂದು ಮಧ್ಯಾಹ್ನ ಬಸವರಾಜನ್ ಹಾಗೂ ಸೌಭಾಗ್ಯ ಹಾಜರಾಗಿದ್ದರು. ಕೋರ್ಟ್‌ ಜಾಮೀನು ನೀಡಿದ್ದರಿಂದ ಆರೋಪಿಗಳು ಸದ್ಯಕ್ಕೆ ಬಂಧನ ಭೀತಿಯಿಂದ ಪಾರಾಗಿದ್ದಾರೆ.

    ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಅಡಿಯಲ್ಲಿ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಮುರುಘಾ ಶ್ರೀಗೆ ಸದ್ಯಕ್ಕಿಲ್ಲ ರಿಲೀಫ್‌ – ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ಮುರುಘಾ ಮಠದ ಹಾಸ್ಟೆಲ್ ವಾರ್ಡನ್ ರಶ್ಮಿ ಅವರು ನೀಡಿದ ದೂರನ್ನು ಆಧರಿಸಿ ಎಸ್.ಕೆ.ಬಸವರಾಜನ್ ವಿರುದ್ಧ ಸೆಕ್ಷನ್ 354 (ಅತ್ಯಾಚಾರಕ್ಕೆ ಯತ್ನ) ಹಾಗೂ ಬಸವರಾಜನ್ ಮತ್ತು ಸೌಭಾಗ್ಯ ವಿರುದ್ಧ ಸೆಕ್ಷನ್ 341, 342, 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಆಡಳಿತಾಧಿಕಾರಿ ಬಸವರಾಜನ್ ಹಾಸ್ಟೆಲ್ ಪರಿಶೀಲನೆ ಮಾಡುವ ನೆಪದಲ್ಲಿ ಆಗಾಗ ಬಂದು ದೇಹದ ಅಂಗಾಂಗಗಳನ್ನು ಮುಟ್ಟಿ ಹಿಂಸೆ ನೀಡುತ್ತಿದ್ದರು. ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧ ತೋರಲಾಯಿತು. ಇದರಿಂದ ವಿಚಾರ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ರಶ್ಮಿ ದೂರಿನಲ್ಲಿ ಉಲ್ಲೇಖಿಸಿದ್ದರು.

    Live Tv
    [brid partner=56869869 player=32851 video=960834 autoplay=true]