Tag: Basavaraja Horatti

  • ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-3: ಶುಭ ಕೋರಿದ ಬಸವರಾಜ ಹೊರಟ್ಟಿ

    ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-3: ಶುಭ ಕೋರಿದ ಬಸವರಾಜ ಹೊರಟ್ಟಿ

    ಕ್ರಿಕೆಟ್‌ಗೂ ಸಿನಿಮಾಗೂ ನಂಟು ಇದೆ. ಸಿನಿಮಾ ಕಲಾವಿದರಲ್ಲಿ ಎಷ್ಟೋ ಮಂದಿ ತಾವೊಬ್ಬ ಉತ್ತಮ ಕ್ರಿಕೆಟ್‌ ಆಟಗಾರನಾಗಬೇಕೆಂದು ಬಯಸಿದ್ದವರು. ಕಲಾವಿದರು ಕೂಡಾ ಕ್ರಿಕೆಟ್‌ ಆಡಲು ನೋಡಲು ಬಯಸುತ್ತಾರೆ. ಇದೇ ಕಾರಣಕ್ಕೆ ಕಳೆದ 2 ವರ್ಷಗಳಿಂದ ಟೆಲಿವಿಷನ್‌ ಪ್ರೀಮಿಯರ್‌ ಲೀಗ್‌ (Television Premiere) ನಡೆಯುತ್ತಿದೆ. ಇದೀಗ ಮೂರನೇ ಸೀಸನ್‌ ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಜನವರಿಯಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3 ನಡೆಯಲಿದೆ. ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಾ ಬಂದಿದೆ. ಈಗಾಗಲೇ ಯಶಸ್ವಿಯಾಗಿ 2 ಸೀಸನ್‌ಗಳು ಮುಗಿದಿದ್ದು, 3ನೇ ಸೀಸನ್ ಜನವರಿ ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಬೆಂಗಳೂರಿನ  ಅಶೋಕ‌ ಹೋಟೆಲ್ ನಲ್ಲಿ ಬಿಡ್ಡಿಂಗ್ ನಡೆಸಲಾಗಿದ್ದು, ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ  (Basavaraja Horatti) ವಿಶೇಷ ಅತಿಥಿಯಾಗಿ ಭಾಗವಹಿಸಿ ಟೂರ್ನಮೆಂಟ್ ಗೆ ಶುಭ ಕೋರಿದರು. ಟಿಪಿಎಲ್ ಬ್ರ್ಯಾಂಡ್ ಅಂಬಾಸಿಡರ್ ರಾಗಿಣಿ ದ್ವಿವೇದಿ ಇದ್ದಾರೆ.

    ಈ ವೇಳೆ ಮಾತನಾಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಬಹಳ ಖುಷಿ ಅನಿಸುತ್ತಿದೆ. ನನ್ನ ದೃಷ್ಟಿಯಲ್ಲಿ ಜೀವನದಲ್ಲಿ ಎರಡು ವ್ಯಕ್ತಿಗಳನ್ನು ನೋಡುತ್ತೀರಾ? ಯಾರು ಆ ಎರಡು ವ್ಯಕ್ತಿಗಳು. ಸತ್ತರು ಬದುಕಿದ್ದಾಗೆ ಇರುವವರು…ಮತ್ತೊಬ್ಬರು ಬದುಕಿದ್ದು ಸತ್ತಾಗೆ ಇರುವವರು. ಸತ್ತ ಬದುಕಿದ್ದವರು ಪುನೀತ್. ಅಪ್ಪು ನನ್ನ ಜೊತೆ ಆತ್ಮೀಯವಾಗಿದ್ದವರು. ಮಾಧ್ಯಮದವರು ಹಾಗೂ ಸೀರಿಯಲ್ ನವರು ಕೂಡಿ ಕ್ರಿಕೆಟ್ ಟೂರ್ನಮೆಂಟ್ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯ. ನಾವು ಜೀವನದಲ್ಲಿ ಕ್ರಿಕೆಟ್ ಆಡುತ್ತಾ ಇದ್ದೇವು. ಅದು ಮನುಷ್ಯನಿಗೆ ರಿಲ್ಯಾಕ್ಸ್ ನೀಡುತ್ತದೆ. ನಿಮಗೆ ಏನೂ ಅನುಕೂಲಬೇಕು ಸಾಧ್ಯವಾದ ಎಲ್ಲಾ ರೀತಿ ನಾನು ನೀಡುತ್ತೇನೆ. ನೀವು ಏನಾದರೂ ಹೊಸದೊಂದನ್ನು ಮಾಡಬೇಕು. ಕ್ರಿಕೆಟ್ ಆಡಿ, ಏನೇ ಮಾಡಿ ಜೀವನದಲ್ಲಿ ನಿಮ್ಮನ್ನು ನೆನಪಿಡುವಂತಹ ಕೆಲಸ ಮಾಡಿ ಎಂದರು.

    ಟಿಪಿಎಲ್ ದಿನದಿಂದ ದಿನಕ್ಕೆ ಆಕರ್ಷಿಸುತ್ತಿದ್ದು, ಐಪಿಎಲ್ ಮಾದರಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. 150 ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಬಿಡ್ ಗೆ ಮಾರಾಟವಾದ ಆಟಗಾರರಿಗೆ N1 ಅಕಾಡೆಮಿ ಕಡೆಯಿಂದ ಹಣದ ರೂಪದಲ್ಲಿ ರಿವಾರ್ಡ್ ಸಹ ನೀಡಲಾಗಿದೆ.

    ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, ಕೆಕೆಆರ್‌ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೇವಿಯರ್ಸ್ , ಎವಿಆರ್ ಟಸ್ಕರ್ಸ್‌, ರಾಸು ವಾರಿಯರ್, ಭಜರಂಗಿ ಬಾಯ್ಸ್, ದಿ ಬುಲ್‌ ಸ್ಕ್ವಾಡ್‌, ಇನ್‌ಸೇನ್‌ ಕ್ರಿಕೆಟ್‌ ಟೀಂ, ಜಿಎಲ್‌ಆರ್‌ ವಾರಿಯರ್ಸ್ ಸೇರಿದಂತೆ ಒಟ್ಟು 10 ಟೀಮ್‌ಗಳು ಭಾಗವಹಿಸಲಿದ್ದ 150 ಸೆಲೆಬ್ರಿಟಿಗಳು ಈ  ಟೂರ್ನಮೆಂಟ್ ಗೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್‌ಗಳಿರಲಿದ್ದಾರೆ. ಎವಿಆರ್ ಗ್ರೂಪ್ಸ್‌ನ ಹೆಚ್ ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ.

    ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ. ರಂಜಿತ್ ಕುಮಾರ್ ಎಸ್ ಓನರ್, ಜಿಎಲ್‌ಆರ್‌ ವಾರಿಯರ್ಸ್ ಟೀಂಗೆ ಲೂಸ್ ಮಾದ ಯೋಗಿ ನಾಯಕನಾದರೆ ರಾಜೇಶ್ ಎಲ್ ಓನರ್, ಇನ್‌ಸೇನ್‌ ಕ್ರಿಕೆಟ್‌ ಟೀಂಗೆ ರವಿಶಂಕರ್ ಗೌಡ ನಾಯಕ-ಫೈಜಾನ್ ಖಾನ್ ಓನರ್, ದಿ ಬುಲ್‌ ಸ್ಕ್ವಾಡ್‌ ತಂಡಕ್ಕೆ ಶರತ್ ಪದ್ಮನಾಭ್ ನಾಯಕ-ಮೋನಿಶ್ ಓನರ್, ಭಜರಂಗಿ ಬಾಯ್ಸ್ ಟೀಂಗೆ ಸಾಗರ್ ಬಿಳಿಗೌಡ ನಾಯಕ- ಸ್ವಸ್ತಿಕ್ ಆರ್ಯ ಓನರ್, ರಾಸು ವಾರಿಯರ್ಸ್ ಟೀಂಗೆ ದೀಕ್ಷಿತ್ ಶೆಟ್ಟಿ ನಾಯಕ-ರಘು ಭಟ್ ಹಾಗೂ ಸುಗುಣ ಓನರ್, ಎವಿಆರ್‌ ಟಸ್ಕರ್ಸ್‌ಗೆ ಚೇತನ್ ಸೂರ್ಯ ನಾಯಕ – ಅರವಿಂದ್ ವೆಂಕಟ್ ರೆಡ್ಡಿ ಓನರ್, ಬಯೋಟಾಪ್ ಲೈಫ್ ಸೇವಿಯರ್ಸ್ ಟೀಂಗೆ ಅಲಕಾ ನಂದ ಶ್ರೀನಿವಾಸ್ ನಾಯಕ Dr.ವಿಶ್ವನಾಥ್ ಸಿದ್ದರಾಮರೆಡ್ಡಿ ಹಾಗು ಪ್ರಸನ್ನ ಓನರ್‌, ಮೀಡಿಯಾ ಹೌಸ್‌ಗೆ ಅರುಣ್ ರಾಮ್ ಗೌಡ ನಾಯಕ-ಲಕ್ಷ್ಮೀ ಕಾಂತ್ ರೆಡ್ಡಿ ಓನರ್, ಗೋಲ್ಡನ್ ಈಗಲ್ ವಿಹಾನ್ ನಾಯಕ-ಕುಶಾಲ್ ಗೌಡ ಒಡೆತನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೊಮ್ಮೆ ಪರಿಷತ್ ಸಭಾಪತಿ ಹುದ್ದೆಗೆ ಬಸವರಾಜ ಹೊರಟ್ಟಿ ಅಭ್ಯರ್ಥಿ

    ಮತ್ತೊಮ್ಮೆ ಪರಿಷತ್ ಸಭಾಪತಿ ಹುದ್ದೆಗೆ ಬಸವರಾಜ ಹೊರಟ್ಟಿ ಅಭ್ಯರ್ಥಿ

    ಧಾರವಾಡ: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇದೇ 21 ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ (BJP) ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ (Basavaraj Horatti) ಆಯ್ಕೆ ಬಹುತೇಕ ಖಚಿತವಾಗಿದೆ. ಹೊರಟ್ಟಿಯವರನ್ನು ಅಭ್ಯರ್ಥಿ ಎಂದು ಇಂದು ಸಂಜೆಯೇ ಅಂತಿಮವಾಗಿ ಬಿಜೆಪಿ ಘೋಷಿಸುವ ಸಾಧ್ಯತೆ ಇದೆ.

    ಚುನಾವಣೆಯಲ್ಲಿ (Election) ಹೊರಟ್ಟಿ ಅವರು ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ ಇಂದು ಸಂಜೆ ಅವರ ಹೆಸರನ್ನು ಅಂತಿಮ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಮತ್ತೆ ಮುನ್ನೆಲೆಗೆ ಬಂದ ‘ಹಿಂದೂ’ ವರ್ಡ್ ವಾರ್

    ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ ಅವರು, ಇಂದು ಬೆಳಿಗ್ಗೆ ರವಿಕುಮಾರ್ ಅವರು ನನಗೆ ದೂರವಾಣಿ ಕರೆ ಮಾಡಿ ನೀವು ಅಭ್ಯರ್ಥಿಗಳಾಗಿದ್ದೀರಿ, ಅಧಿಕೃತವಾಗಿ ಘೋಷಣೆ ಮಾಡುತ್ತೇನೆ ಅಂದಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಹನಿಮೂನ್‌ನಿಂದ ಬರುವಾಗ ಟೆಕ್ಕಿ ದಂಪತಿಗೆ ಅಪಘಾತ – ಪತಿಯನ್ನು ಕಳೆದುಕೊಂಡ ನವವಿವಾಹಿತೆ

    v

    ಬೆಳಗಾವಿಯಲ್ಲಿ (Belagavi) ಅಧಿವೇಶನ ನಡೆಯುವಾಗ, ಅಧಿವೇಶನದಲ್ಲಿ ಧರಣಿ ಮಾಡೋದು ಬೇಡ ಎಂದು ನಾನು ಪ್ರತಿ ಬಾರಿಯೂ ಹೇಳುತ್ತಾ ಬಂದಿದ್ದೇನೆ. ನಾನು ಸಭಾಪತಿಯಾಗಿದ್ದಾಗ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲೆಂದೇ ಎರಡು ದಿನ ಮೀಸಲಿಟ್ಟಿದ್ದೆ ಎಂದು ಹೇಳಿದ್ದಾರೆ.

    ಈ ಭಾಗದ ಸಮಸ್ಯೆಗಳಿಗೆ ಪ್ರತಿಫಲ ಸಿಗಬೇಕು. ನಮ್ಮದು ಸಮಗ್ರ ಕರ್ನಾಟಕ. ಈ ಬಗ್ಗೆ ಬೇರೆ ಮಾತೇ ಇಲ್ಲ. ಆದರೆ ಪ್ರಮುಖವಾಗಿ ಉತ್ತರ ಕರ್ನಾಟಕ (Uttar Karnataka) ಭಾಗದ ಸಮಸ್ಯೆಗಳ ಬಗ್ಗೆ ಸ್ಪಂದಿಸಲು ಸರ್ಕಾರ, ಸದಸ್ಯರು ಮುಂದಾಗಬೇಕು. ಬರುವ ಡಿ.19 ರಿಂದ 30ರ ವರೆಗೆ ನಡೆಯುವ ಸದನದಲ್ಲಿ ಈ ಭಾಗದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಮೀಸಲಾತಿ (Reservation) ವಿಚಾರಕ್ಕೆ ಹಲವರು ಹೋರಾಟ ಮಾಡುತ್ತಾರೆ. ಹೋರಾಟ ಮಾಡುವುದು ಅವರ ಹಕ್ಕು. ಆದರೆ ಹೋರಾಟವನ್ನು ಶಾಂತಿಯುತವಾಗಿ ಮಾಡಬೇಕು ಎಂದು ಹೊರಟ್ಟಿ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ಸಿ.ಎಂ ಇಬ್ರಾಹಿಂ ರಾಜೀನಾಮೆ

    ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ಸಿ.ಎಂ ಇಬ್ರಾಹಿಂ ರಾಜೀನಾಮೆ

    ಬೆಂಗಳೂರು: ಈಚೆಗಷ್ಟೇ ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ.ಎಂ.ಇಬ್ರಾಹಿಂ ಅವರು ಇದೀಗ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.

    ಇಂದು ಬೆಳಿಗ್ಗೆ ವಿಧಾನಸೌಧದಲ್ಲಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕೊಠಡಿಗೆ ಆಗಮಿಸಿದ ಇಬ್ರಾಹಿಂ ಸಭಾಪತಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಹುಚ್ಚನಿಗೆ ಹೋಲಿಸಿದ್ದ ಪ್ರಕರಣ – ಸಿ ಎಂ ಇಬ್ರಾಹಿಂ ವಿರುದ್ಧ ದೂರು ದಾಖಲು

    HDKCM

    ಕೆಲ ದಿನಗಳ ಹಿಂದೆಯಷ್ಟೇ ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮೊದಲು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ವಿಧಾನ ಪರಿಷತ್ ಸ್ಥಾನಕ್ಕೆ ಸಹ ಇಂದೇ ರಾಜೀನಾಮೆ ಕೊಡುತ್ತೇನೆ. ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯಗೆ ಕಳುಹಿಸುತ್ತೇನೆ ಎಂದು ತಿಳಿಸಿದ್ದರು.

    ಸ್ವಾಭಿಮಾನ ಹಾಗೂ ರಾಜ್ಯದ ಹಿತ ದೃಷ್ಡಿಯಿಂದ ಈ ರಾಜೀನಾಮೆ ಅನಿವಾರ್ಯವಾಗಿದೆ. ಕಾಂಗ್ರೆಸ್‌ನಲ್ಲಿ ಸ್ವಾಭಿಮಾನ ಉಳಿಸಿಕೊಂಡು ಇರಲು ಸಾಧ್ಯವಿಲ್ಲ. 1994ರಲ್ಲಿ ಉಂಟಾದ ರಾಜಕೀಯ ಪರಿಸ್ಥಿತಿ 2022ರಲ್ಲೂ ಆಗಲಿದೆ. ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುತ್ತಿದೆ. ಪಂಚರಾಜ್ಯ ಚುನಾವಣೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಮಂತ್ರಾಲಯ ಮಠಕ್ಕೆ ಜಾಗ ಕೊಟ್ಟಿದ್ದು ಸಾಬ್ರು, ಬೇಡ ಅಂದ್ರೆ ಕಿತ್ಕೊಂಡು ಬನ್ನಿ: ಸಿಎಂ ಇಬ್ರಾಹಿಂ

    ಅಲ್ಲದೇ ಶೀಘ್ರವೇ ಎಚ್‌.ಡಿ.ದೇವೇಗೌಡರು, ಕುಮಾರಸ್ವಾಮಿ ಜೊತೆ ಕುಳಿತು ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ಗೊತ್ತಿಲ್ಲದ ದಾರಿಯಲ್ಲಿ ಹೋಗುವುದಕ್ಕಿಂತ ಗೊತ್ತಿರುವ ದಾರಿಯಲ್ಲಿ ಹೋಗುವುದು ಒಳಿತು ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದರು.

     

  • ಜಿಟಿಡಿ ಜೆಡಿಎಸ್‍ನಲ್ಲಂತೂ ಇರಲ್ಲ, ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ – ಹೊರಟ್ಟಿ

    ಜಿಟಿಡಿ ಜೆಡಿಎಸ್‍ನಲ್ಲಂತೂ ಇರಲ್ಲ, ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ – ಹೊರಟ್ಟಿ

    ಧಾರವಾಡ: ಮಾಜಿ ಸಚಿವ ಜಿ.ಟಿ.ದೇವೇಗೌಡರು ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ. ಆದರೆ ಜೆಡಿಎಸ್ ಪಕ್ಷದಲ್ಲಂತೂ ಅವರು ಇರುವುದಿಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು. ಅವರು ಜೆಡಿಎಸ್‍ನಲ್ಲಿರುವುದಿಲ್ಲ ಎನ್ನುವುದು ಅವರ ಮಾತಿನಲ್ಲೇ ತಿಳಿಯುತ್ತದೆ. ಮೊದಲೇ ಅವರಿಗೆ ಅಸಮಾಧಾನವಿತ್ತು. ಆಗಲೇ ಅವರು ಪಕ್ಷದಲ್ಲಿ ಉಸಿರುಗಟ್ಟುವ ವಾತಾವಾರಣ ಇದೆ ಎಂದಿದ್ದರು. ಅದು ನನಗೂ ಸರಿ ಅನಿಸಿತ್ತು. ಈಗ ಪರಿಸ್ಥಿತಿ ಇನ್ನೂ ಅತಿರೇಕಕ್ಕೆ ಹೋಗಿದೆ. ಹೀಗಾಗಿ ಅವರು ಪಕ್ಷದಲ್ಲಿ ಇರುವುದಿಲ್ಲ, ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ ಎಂದರು.

    ಇಂಥವರನ್ನೆಲ್ಲ ಕರೆದು ಮಾತನಾಡುವುದು ಪಕ್ಷದ ವರಿಷ್ಠರ ಧರ್ಮ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುವುದರಿಂದ ಪಕ್ಷದ ಭವಿಷ್ಯ ಹಾಳಾಗುತ್ತದೆ. ಹೀಗೆ ಮುಂದುವರಿದರೆ ಪಕ್ಷದ ಭವಿಷ್ಯ ಇನ್ನೂ ಕಠಿಣವಾಗುತ್ತದೆ. ಈಗಿನ ಬೆಳವಣಿಗೆ ನೋಡಿದರೆ ಅಪರೇಷನ್ ಕಮಲ ಮತ್ತೆ ನಡೆಯುತ್ತದೆ ಅನಿಸುತ್ತದೆ. ಸರ್ಕಾರ ಇದ್ದಾಗ ನಮ್ಮನ್ನೆಲ್ಲ ಸರಿಯಾಗಿ ನೋಡಿಲ್ಲ ಅಂತ ಬಹಳ ಜನ ಶಾಸಕರು ನೋವು ವ್ಯಕ್ತಪಡಿಸಿದ್ದಾರೆ. ನನಗೂ ಸಾಕಷ್ಟು ನೋವಾಗಿತ್ತು ಆದರೂ ನಾನು ಹೇಳಿಕೊಂಡಿಲ್ಲ. ನಾನು ಶಿಸ್ತಿನಲ್ಲಿರುವ ಕಾರಣ ಹೇಳಿಕೊಂಡಿರಲಿಲ್ಲ. ನನ್ನ ಬಳಿಯೂ ಅನೇಕರು ಮಾತನಾಡಿದ್ದಾರೆ. ಆಗಿನ ಅತೃಪ್ತಿ ಈಗ ಸ್ಫೋಟಗೊಳ್ಳುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

    ಪ್ರಸ್ತುತ ಸರ್ಕಾರದಲ್ಲಿ ಅನುಭವ ಇಲ್ಲದವರೇ ಹೆಚ್ಚಿದ್ದಾರೆ, ಅನುಭವಿಗಳು ಇಲ್ಲ. ಇದ್ದವರು ಎಲ್ಲರೂ ಹೊಟ್ಟೆ ತುಂಬಿದವರು ಆಗಿದ್ದಾರೆ. ಸಚಿವರಾಗಿ ಕಾನೂನು ಪ್ರಕಾರ ಕೆಲಸ ಮಾಡಿದರೆ ಸಾಕು. ಆದರೆ ಅವರಿಗೆ ಇಚ್ಛಾಶಕ್ತಿ ಕೊರತೆಯಿದೆ. ಅಸಮಾಧಾನಗಳು ಕೂಡ ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಹೊರತುಪಡಿಸಿದರೆ ಬೇರೆ ಯಾವ ಮಂತ್ರಿಯೂ ಕೆಲಸ ಮಾಡುತ್ತಿಲ್ಲ. ಪ್ರವಾಹ ಪರಿಸ್ಥಿತಿಯಲ್ಲಿ ಮಂತ್ರಿಗಳು ಹಗಲು ರಾತ್ರಿ ಕೆಲಸ ಮಾಡಬೇಕಿತ್ತು. ಆದರೆ, ಕೇವಲ ಪ್ರವಾಹ ನೋಡಿ ಬರುವುದನ್ನು ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಇದೆಯೋ ಇಲ್ಲವೋ ಎಂಬ ಭಾವನೆ ಜನರಲ್ಲಿದೆ. ವಿಧಾನಸಭೆಯಲ್ಲಿ ಯಾರೊಬ್ಬರೂ ಇರುವುದಿಲ್ಲ. ಜನರ ಬಳಿಯೂ ಇಲ್ಲ. ಹಾಗಾದರೆ ಇವರೆಲ್ಲ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.

    ಡಿ.ಕೆ.ಶಿವಕುಮಾರ್ ಇಡಿ ಕಸ್ಟಡಿಗೆ ಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ ಅದು ಕಾನೂನು ಕೆಲಸ. ಆದರೆ ಅವರು ಎಂದಿಗೂ ವಿಚಾರಣೆ ತಪ್ಪಿಸಿಲ್ಲ ಕರೆದಾಗಲೆಲ್ಲ ಹೋಗಿದ್ದಾರೆ. ಹೀಗಾಗಿ ಅವರನ್ನು ಬಂಧಿಸುವ ಅಗತ್ಯ ಇರಲಿಲ್ಲ ಎಂದು ತಿಳಿಸಿದ್ದಾರೆ.

  • ರಾಜ್ಯಾಧ್ಯಕ್ಷ ಹುದ್ದೆಗೆ ವಿಶ್ವನಾಥ್ ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ – ಹೊರಟ್ಟಿ

    ರಾಜ್ಯಾಧ್ಯಕ್ಷ ಹುದ್ದೆಗೆ ವಿಶ್ವನಾಥ್ ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ – ಹೊರಟ್ಟಿ

    ಹುಬ್ಬಳ್ಳಿ: ಜೆಡಿಸ್‍ನ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರನ್ನು ಸಮನ್ವಯ ಸಮಿತಿಗೆ ತೆಗೆದುಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇಷ್ಟವಿರಲಿಲ್ಲ. ಇದರ ಬಗ್ಗೆ ವಿಶ್ವನಾಥ್ ಅವರಿಗೆ ಬೇಸರವಿತ್ತು. ಅದಕ್ಕೆ ಅವರು ರಾಜೀನಾಮೆ ನೀಡಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಈ ವಿಚಾರದ ಬಗ್ಗೆ ಜೆಡಿಸ್ ವರಿಷ್ಠ ದೇವೇಗೌಡರ ಗಮನಕ್ಕೆ ತಂದಿದ್ದರು. ಆದರೆ ಅವರು ಸರಿಯಾಗಿ ಸ್ಪಂದಿಸಿಲ್ಲ ಎಂಬ ಬೇಸರ ವಿಶ್ವನಾಥ್ ಅವರಿಗಿತ್ತು. ಅದ್ದರಿಂದ ರಾಜೀನಾಮೆ ನೀಡಿರಬಹುದು. ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದು ಸರಿಯಲ್ಲ ಎಂದು ಹೇಳಿದರು.

    ವಿಶ್ವನಾಥ್ ನನ್ನ ಬಳಿಯೂ ಸಿದ್ದರಾಮಯ್ಯನ ಬಗ್ಗೆ ಇದ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಇನ್ನು ಸ್ವಲ್ಪ ದಿನ ಜೆಡಿಎಸ್‍ನ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬೇಕಿತ್ತು. ನಿನ್ನೆ ವಿಶ್ವನಾಥ್‍ಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದೆ. ಆದರೆ ವಿಶ್ವನಾಥ್ ಸಂಪರ್ಕಕ್ಕೆ ಸಿಗಲಿಲ್ಲ. ಅವರು ರಾಜೀನಾಮೆ ನೀಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಸರ್ಕಾರದ ರಚನೆ ವೇಳೆ ಹೇಳಿದಂತೆ ಕಾಂಗ್ರೆಸ್ ನಡೆದುಕೊಂಡಿಲ್ಲ. ವಿಧಾನಪರಿಷತ್ ಸಭಾಪತಿ ಸ್ಥಾನ ಜೆಡಿಎಸ್‍ಗೆ ನೀಡುವುದಾಗಿ ಹೇಳಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಸಭಾಪತಿ ಸ್ಥಾನ ತೆಗೆದುಕೊಂಡಿತು. ಅಷ್ಟೇ ಅಲ್ಲದೇ ಸಮನ್ವಯದ ಸಮಿತಿಯಲ್ಲಿ ಎರಡು ಪಕ್ಷದ ರಾಜ್ಯಾಧ್ಯಕ್ಷರು ಇರಬೇಕಿತ್ತು. ಎಲ್ಲ ಹಂತದಲ್ಲೂ ಸಿದ್ದರಾಮಯ್ಯ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಅದು ಮೈತ್ರಿ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದರು.

    ನೀವು ರಾಜ್ಯಾಧ್ಯಕ್ಷರು ಆಗುತ್ತಿರಾ ಎಂದು ಕೇಳಿದಾಗ, ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಅಧ್ಯಕ್ಷ ಸ್ಥಾನ ನಿರ್ವಹಿಸುವ ಶಕ್ತಿಯು ನನಲಿಲ್ಲ. ಬಂಡೆಪ್ಪ ಕಾಶೆಂಪೂರ್ ಅಂತವರು ಆ ಸ್ಥಾನಕ್ಕೆ ಸೂಕ್ತ ಎಂದು ಅವರು ಆಶಯ ವ್ಯಕ್ತಪಡಿಸಿದರು.

  • ಸಿದ್ದರಾಮಯ್ಯ ಸಿಎಂ ಹಾಗೇ ನಿರ್ಧಾರ ಕೈಗೊಳ್ತಾರೆ: ಬಸವರಾಜ್ ಹೊರಟ್ಟಿ

    ಸಿದ್ದರಾಮಯ್ಯ ಸಿಎಂ ಹಾಗೇ ನಿರ್ಧಾರ ಕೈಗೊಳ್ತಾರೆ: ಬಸವರಾಜ್ ಹೊರಟ್ಟಿ

    -ದೋಸ್ತಿ ಸರ್ಕಾರ ಬಹಳ ದಿನ ನಡೆಯೋದು ಡೌಟು

    ಹುಬ್ಬಳ್ಳಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ಸ್ವತಃ ತಾವೇ ಮುಖ್ಯಮಂತ್ರಿ ಹಾಗೇ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹೀಗಾದರೆ ಮೈತ್ರಿ ಸರ್ಕಾರ ಬಹಳ ದಿನ ನಡೆಯುವುದು ಡೌಟು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಭವಿಷ್ಯ ನುಡಿದಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಮಾಡಬೇಕಾದಾಗ ಕಾಂಗ್ರೆಸ್ ಯಾವುದೇ ಕಂಡೀಷನ್ ಹಾಕಿರಲಿಲ್ಲ. ಆದರೆ ಈಗ ಕಾಂಗ್ರೆಸ್ಸಿನವರು ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತಿದ್ದಾರೆ. ಬಹುಶಃ ಸಿದ್ದರಾಮಯನವರಿಗೆ ಈ ಸರ್ಕಾರವನ್ನು ನಡೆಸುವ ಇಚ್ಛೆ ಇಲ್ಲ. ಹೀಗಾಗಿ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಸಿದ್ದರಾಮಯ್ಯನವರು ಮುಖ್ಯಮಂತ್ರಿ ರೀತಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಜೆಡಿಸ್ ವರಿಷ್ಠರಾದ ಎಚ್.ಡಿ.ದೇವೇಗೌಡರೂ ಸಹ ಕಾಂಗ್ರೆಸ್ ನಡೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದು ಹೀಗೆ ಮುಂದುವರಿದರೆ, ಸರ್ಕಾರ ನಡೆಸುವುದು ಕಷ್ಟಸಾಧ್ಯ ಎಂದು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸವರಾಜ ಹೊರಟ್ಟಿಗೆ ಸಿಗುತ್ತಾ ಮಂತ್ರಿ ಭಾಗ್ಯ..?

    ಬಸವರಾಜ ಹೊರಟ್ಟಿಗೆ ಸಿಗುತ್ತಾ ಮಂತ್ರಿ ಭಾಗ್ಯ..?

    ಬೆಂಗಳೂರು: ವಿಧಾನ ಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮಂತ್ರಿ ಭಾಗ್ಯ ಸಿಗಲಿದೆ ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಮೂಲಗಳು ತಿಳಿಸಿವೆ.

    ಬಿಎಸ್‍ಪಿಯ ಎನ್.ಮಹೇಶ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಗೆ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಆಯ್ಕೆ ಸಾಧ್ಯತೆ ಇದೆ. ತೆರವಾದ ಖಾತೆ ಈಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಳಿಯೇ ಇದೆ. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಪರೀಕ್ಷೆಗಳು ಹತ್ತಿರವಾಗುತ್ತಿದ್ದು, ಬಹಳ ದಿನಗಳ ಕಾಲ ಖಾತೆ ಮುಖ್ಯಮಂತ್ರಿಗಳ ಬಳಿ ಇರಿಸಲು ಅಸಾಧ್ಯ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಮೈತ್ರಿ ಸರ್ಕಾರದಲ್ಲಿ ಭಾರೀ ಲಾಬಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ಬಸವರಾಜ ಹೊಟ್ಟಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಮನವಿಗೆ ಬಸವರಾಜ ಹೊರಟ್ಟಿ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎನ್ನುವ ನಂಬಿಕೆಯಿಂದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

    ಸಚಿವ ಸಂಪುಟ ವಿಸ್ತರಣೆಗೂ ಮುನ್ನವೇ ಬಸವರಾಜ ಹೊರಟ್ಟಿ ಅವರಿಗೆ ಮಂತ್ರಿಗಿರಿ ಸಿಗಲಿದೆ. ಈ ಹಿಂದೆಯೇ ಅವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು. ಈಗ ಆ ಭಾಗ್ಯ ಕೂಡಿಬಂದಿದೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 35 ವರ್ಷಗಳಲ್ಲಿ ಉ-ಕ ಭಾಗಕ್ಕೆ ನಿಮ್ಮ ಕೊಡುಗೆ ಏನು: ಹೊರಟ್ಟಿಗೆ ದಿಂಗಾಲೇಶ್ವರ ಶ್ರೀ ಸವಾಲು

    35 ವರ್ಷಗಳಲ್ಲಿ ಉ-ಕ ಭಾಗಕ್ಕೆ ನಿಮ್ಮ ಕೊಡುಗೆ ಏನು: ಹೊರಟ್ಟಿಗೆ ದಿಂಗಾಲೇಶ್ವರ ಶ್ರೀ ಸವಾಲು

    ಹುಬ್ಬಳ್ಳಿ: 35 ವರ್ಷಗಳ ರಾಜಕೀಯ ಜೀವನದಲ್ಲಿ ಹೊರಟ್ಟಿ ಅವರು ಉತ್ತರ ಕರ್ನಾಟಕ ಭಾಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೌರವಯುತ ಸ್ಥಾನದಲ್ಲಿರುವ ಹೊರಟ್ಟಿ ತಮ್ಮ ಘನತೆಗೆ ತಕ್ಕ ಹಾಗೇ ನಾಲಿಗೆ ಮೇಲೆ ಹಿಡಿತ ಇರಬೇಕು. ಪದೇ ಪದೇ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಅವರು ಯಾಕೆ ನಮ್ಮ ತೇಜೋವಧೆ ಮಾಡುತ್ತಾರೆ ಎಂಬುದನ್ನು ಬಹಿರಂಗ ಪಡಿಸಲಿ. ಇದಕ್ಕೂ ಮುನ್ನ ಅವರ 35 ವರ್ಷದ ರಾಜಕೀಯ ಜೀವನದಲ್ಲಿ ಈ ಭಾಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಸವಾಲು ಹಾಕಿದರು.

    ಇದೇ ವೇಳೆ ಲಿಂಗಾಯತ ಧರ್ಮವನ್ನು ಒಡೆಯಲು ಒಂದ ರಾಜಕಾರಣಿಗಳು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾಕೆ ಒಂದಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಆಡಳಿತರೂಢ ಸರ್ಕಾರದ ಮಲತಾಯಿ ಧೋರಣೆಯೇ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಕಾರಣ. ಈ ಕೂಗು ನನ್ನದೊಬ್ಬನದ್ದಲ್ಲ, ಈ ಭಾಗದ ಜನರ ಕೂಗು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ನನ್ನ ಬೆಂಬಲವೂ ಇದೆ ಎಂದು ಸ್ಪಷ್ಟಪಡಿಸಿದರು.

    ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಭಾನುವಾರ ಮಾತನಾಡಿದ್ದ ಬಸವರಾಜ್ ಹೊರಟ್ಟಿ ಅವರು, ದಿಂಗಾಲೇಶ್ವರ ಸ್ವಾಮೀಜಿಗೆ ಮಾಡಲು ಕೆಲಸವಿಲ್ಲ. ಅದಕ್ಕಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಮೂಗು ತೋರಿಸುತ್ತಿದ್ದಾರೆ. ಇನ್ನು ಕೆಲವು ಸ್ವಾಮೀಜಿಗಳು ಅವರ ಹಾಗೆಯೇ ಮಾಡುತ್ತಿದ್ದಾರೆ. ಸ್ವಾಮೀಜಿಗಳಿಗೆ ಏಕೆ ರಾಜಕೀಯ ಬೇಕು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಸಂಪೂರ್ಣ ನನ್ನ ವಿರೋಧವಿದೆ. ಅಖಂಡ ಕರ್ನಾಟಕ ನಿರ್ಮಾಣಕ್ಕೆ ಅನೇಕ ನಾಯಕರು, ಹೋರಾಟಗಾರರು ಶ್ರಮಿಸಿದ್ದಾರೆ. ಈಗ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ ಎಂದು ಹೇಳಿದ್ದರು.

  • ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಹೊರಟ್ಟಿ ಕಿಡಿ

    ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಹೊರಟ್ಟಿ ಕಿಡಿ

    ವಿಜಯಪುರ: ರಾಜಕೀಯ ವಿಚಾರಗಳಲ್ಲಿ ಸ್ವಾಮೀಜಿಗಳು ಭಾಗಿಯಾಗಬಾರದು ಎಂದು ಹಂಗಾಮಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿಗೆ ಮಾಡಲು ಕೆಲಸವಿಲ್ಲ. ಅದಕ್ಕಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಮೂಗು ತೋರಿಸುತ್ತಿದ್ದಾರೆ. ಇನ್ನು ಕೆಲವು ಸ್ವಾಮೀಜಿಗಳು ಅವರ ಹಾಗೆಯೇ ಮಾಡುತ್ತಿದ್ದಾರೆ. ಸ್ವಾಮೀಜಿಗಳಿಗೆ ಏಕೆ ಬೇಕು ರಾಜಕೀಯ ಎಂದು ಪ್ರಶ್ನಿಸಿದರು.

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಸಂಪೂರ್ಣ ನನ್ನ ವಿರೋಧವಿದೆ. ಅಖಂಡ ಕರ್ನಾಟಕ ನಿರ್ಮಾಣಕ್ಕೆ ಅನೇಕ ನಾಯಕರು, ಹೋರಾಟಗಾರರು ಶ್ರಮಿಸಿದ್ದಾರೆ. ಈಗ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಈ ಕುರಿತು ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಿರುವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮುಂದಿನ ಕೆಲವು ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಸಭೆ ಕರೆಯುವ ನಿರ್ಧಾರ ಕೈಗೊಂಡಿದ್ದಾರೆ. ಆಗ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದು ಹೇಳಿದರು.

    ವಿಜಯಪುರ, ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಸಭೆಯನ್ನು ನಡೆಸುವ ನಿರ್ಧಾರ ಮಾಡಲಾಗುತ್ತದೆ. ಸಭೆಯಲ್ಲಿ ಹೋರಾಟಗಾರು, ಮಠಾಧೀಶರು ಭಾಗವಹಿಸುತ್ತಾರೆ. ಆಗ ಚರ್ಚಿಸಿ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದು ನಿಜವಾದರೆ ಸರಿಪಡಿಸುವ ಕ್ರಮ ಕೈಗೊಳ್ಳಲಾಗುವುದು. ಆದರೆ ವೈಯಕ್ತಿಕ ರಾಜಕಾರಣಕ್ಕಾಗಿ ಪ್ರತ್ಯೇಕ ರಾಜ್ಯ ಬಗ್ಗೆ ವಿಚಾರ ಮಾಡಬಾರದು ಎಂದು ತಿಳಿಸಿದರು.

  • ಅರೇ, ಹೊರಟ್ಟಿಯವ್ರೇ ಸೈಡಿಗೆ ಬನ್ರಿ: ಸ್ಪೀಕರ್ ರಮೇಶ್ ಕುಮಾರ್

    ಅರೇ, ಹೊರಟ್ಟಿಯವ್ರೇ ಸೈಡಿಗೆ ಬನ್ರಿ: ಸ್ಪೀಕರ್ ರಮೇಶ್ ಕುಮಾರ್

    ಬೆಂಗಳೂರು: ಇಂದು ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನ ಆರಂಭವಾಗಿದೆ. ಎರಡು ಜಂಟಿ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣವನ್ನು ಮಾಡಿದ್ದಾರೆ. ರಾಜ್ಯಪಾಲರನ್ನು ವಿಧಾನ ಸಭೆಗೆ ಸ್ಪೀಕರ್ ಕರೆತರೋದು ಮತ್ತು ಕಳುಹಿಸಿ ಕೊಡುವುದು ಸಂಪ್ರದಾಯ. ಆದರೆ ರಾಜ್ಯಪಾಲರ ನಿರ್ಗಮನ ವೇಳೆ ಈ ಶಿಷ್ಟಾಚಾರ ಉಲ್ಲಂಘನೆ ಆಗಿತ್ತು.

    ರಾಜ್ಯಪಾಲ ವಜೂಭಾಯಿ ವಾಲಾ ತಮ್ಮ ಭಾಷಣ ಮುಗಿಸಿ ವಿಧಾನಸಭೆಯಿಂದ ನಿರ್ಗಮಿಸುತ್ತಿದ್ದರು. ಈ ವೇಳೆ ರಾಜ್ಯಪಾಲರ ಹಿಂದೆ ವಿಧಾನ ಪರಿಷತ್ ಹಂಗಾಮಿ ಸ್ಪೀಕರ್ ಬಸವರಾಜ ಹೊರಟ್ಟಿ ನಡೆದುಕೊಂಡು ಬರುತ್ತಿದ್ದರು. ಕೂಡಲೇ ಎಚ್ಚೆತ್ತ ವಿಧಾನ ಸಭೆ ಸ್ಪೀಕರ್ ರಮೇಶ್ ಕುಮಾರ್ ಮುಂದೆ ನಡೆದು ಹೋಗುತ್ತಿದ್ದ ಹೊರಟ್ಟಿಯವರ ಬೆನ್ನು ತಟ್ಟಿ ಪಕ್ಕಕ್ಕೆ ತೆರಳಲು ಸೂಚಿಸಿದ್ದಾರೆ. ಈ ವೇಳೆ ಹೊರಟ್ಟಿಯವರ ಪಕ್ಕದಲ್ಲಿದ್ದ ಸಿಎಂ ಸಹ ನನ್ನ ಕಡೆ ಬನ್ನಿ ಅಂತಾ ಸನ್ನೆ ಮಾಡಿದರು.

    ರಾಜ್ಯ ಸರ್ಕಾರ ರೈತರ ಕಲ್ಯಾಣಕ್ಕಾಗಿ ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ ನಾಡಿನ ಕೃಷಿಕ ಬಂಧುಗಳು ಸಮಸ್ಯೆಗಳು ಬಗೆಹರಿಯಲಿವೆ. ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬಾರದು ಎಂದು ಮನವಿ ಮಾಡಿಕೊಂಡರು. ಸರ್ಕಾರ ಅಖಂಡ ಕರ್ನಾಟಕದ ಅಭಿವೃದ್ಧಿಗಾಗಿ ಕೆಲಸ ಮಾಡಲಿದ್ದು, ಹಳೆಯ ಯೋಜನೆಗಳೊಂದಿಗೆ ಹೊಸ ಕಾರ್ಯಕ್ರಮಗಳು ಜಾರಿಯಾಗಲಿವೆ ಎಂದು ತಿಳಿಸಿದರು.