Tag: Basavaraj S Bommai BJP

  • ಕುಟುಂಬದ ಓರ್ವ ಪ್ರೀತಿಯ ಸದಸ್ಯನನ್ನು ಕಳೆದುಕೊಂಡೆ – ಬೊಮ್ಮಾಯಿ

    ಕುಟುಂಬದ ಓರ್ವ ಪ್ರೀತಿಯ ಸದಸ್ಯನನ್ನು ಕಳೆದುಕೊಂಡೆ – ಬೊಮ್ಮಾಯಿ

    ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮನೆಯ ನಾಯಿ ಮೃತಪಟ್ಟಿದೆ.

    ನಾಯಿ ಮೃತಪಟ್ಟ ಬಗ್ಗೆ ಟ್ವೀಟ್ ಮಾಡಿದ ಅವರು, ಇಂದು ನಮ್ಮ ಮನೆಯ ಮುದ್ದಿನ ನಾಯಿ ‘ಸನ್ನಿ’ ವಯೋಸಹಜ ದಿಂದ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದ್ದು ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಕಾಣೆಯಾಗಿದ್ದ ಚಿನ್ನದ ಸರ ನಾಯಿ ಮಲದಲ್ಲಿ ಪತ್ತೆ

    ನಿಮ್ಮ ಸ್ನೇಹಿತನಿಗೆ ತುಂಬಾ ಗೌರವವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಸಂತಾಪ .. ಓಂ ಶಾಂತಿ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.