Tag: Basavaraj Dhadesugur

  • ಕಾರಲ್ಲ, ನಾಯಿ ಹೋಗಿ ಬಿದ್ದಿದ್ದರಿಂದ ವೃದ್ಧೆ ಸಾವು: ಶಾಸಕ ದಡೆಸುಗೂರ್‌

    ಕಾರಲ್ಲ, ನಾಯಿ ಹೋಗಿ ಬಿದ್ದಿದ್ದರಿಂದ ವೃದ್ಧೆ ಸಾವು: ಶಾಸಕ ದಡೆಸುಗೂರ್‌

    ಕೊಪ್ಪಳ: ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಡೆಸುಗೂರ್ (Basavaraj Dhadesugur) ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

    ಕೊಪ್ಪಳ (Koppala) ಜಿಲ್ಲೆಯ ಮೈಲಾಪುರ ಕ್ರಾಸ್‍ನಲ್ಲಿ ಸೋಮವಾರ ಈ ಅಪಘಾತ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಚಳ್ಳೂರಿನ 70 ವರ್ಷದ ಮರಿಯಮ್ಮ ಚಿಕಿತ್ಸೆ ಫಲಕಾರಿಯಾಗದೇ ಇಂದು ಅಸುನೀಗಿದ್ದಾರೆ. ಇದನ್ನೂ ಓದಿ: ಹಿಂದೂಸ್ಥಾನ ಹಿಂದೂಸ್ಥಾನವಾಗಿಯೇ ಉಳಿಯಬೇಕು – ಭಾಗವತ್‌ ಹೇಳಿಕೆಗೆ ವಿಪಕ್ಷಗಳ ಟೀಕೆ

    ಅಪಘಾತ ವೇಳೆ ಶಾಸಕರು ಕೂಡ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಬಸವರಾಜ ದಡೆಸುಗೂರು, ನನ್ನ ಕಾರು ಮುದುಕಿಗೆ ಡಿಕ್ಕಿ ಹೊಡೆದಿಲ್ಲ. ನನ್ನ ಕಾರು ನಾಯಿಗೆ ಡಿಕ್ಕಿ ಹೊಡೆದಿತ್ತು. ನಾಯಿ ಹೋಗಿ ಮುದುಕಿ ಮೇಲೆ ಬಿದ್ದಿತ್ತು. ಗಾಯಗೊಂಡ ಆಕೆಯನ್ನು ನಾನೇ ಆಸ್ಪತ್ರೆಗೆ ಸೇರಿಸಿದ್ದೆ. ಇದೇ ತಪ್ಪಾಗಿದೆ ನೋಡಿ ಎಂದು ಕತೆ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಿಎಸ್‍ಐ ಅಕ್ರಮ ಕೇಸ್‍ಗೆ ಟ್ವಿಸ್ಟ್ – ಲಂಚ ಪಡೆದ ಬಿಜೆಪಿ ಶಾಸಕರ ಆಡಿಯೋ ವೈರಲ್

    ಪಿಎಸ್‍ಐ ಅಕ್ರಮ ಕೇಸ್‍ಗೆ ಟ್ವಿಸ್ಟ್ – ಲಂಚ ಪಡೆದ ಬಿಜೆಪಿ ಶಾಸಕರ ಆಡಿಯೋ ವೈರಲ್

    ಕೊಪ್ಪಳ: ಪಿಎಸ್‍ಐ ನೇಮಕಾತಿ ಅಕ್ರಮದ ಕೇಸ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಗೋಲ್‍ಮಾಲ್‍ನಲ್ಲಿ ಇಷ್ಟು ದಿನ ಅಧಿಕಾರಿಗಳು, ಅಭ್ಯರ್ಥಿಗಳ ಹೆಸರು ಕೇಳಿ ಬಂದಿತ್ತು. ಇದೀಗ ಬಿಜೆಪಿ ಶಾಸಕರೊಬ್ಬರ ಹೆಸರು ಕೇಳಿ ಬಂದಿದೆ.

    ಪ್ರಕರಣ ಸಂಬಂಧ ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ್ ದಡೇಸೂಗೂರ್ ಆಡಿಯೋ ವೈರಲ್ ಆಗಿದೆ. ಪಿಎಸ್‍ಐ ಮಾಡಿಸ್ತೀನಿ ಎಂದು 15 ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪವನ್ನು ದಡೇಸೂಗೂರ್ ಎದುರಿಸುತ್ತಿದ್ದಾರೆ. ನಿವೃತ್ತ ಪೊಲೀಸ್ ಕಾನ್ಸ್‌ಟೇಬಲ್‌ ಪರಸಪ್ಪ ಎಂಬುವವರ ಮಗನ ನೇಮಕಾತಿಗೆ ಹಣ ಪಡೆದಿದ್ದನ್ನು, ಸರ್ಕಾರಕ್ಕೆ ಆ ಹಣ ತಲುಪಿಸಿದ್ದೇನೆ ಎಂಬುದನ್ನು ಆಡಳಿತ ಪಕ್ಷದ ಶಾಸಕರು ಫೋನ್ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ಕೇಂದ್ರ ನಿರ್ಧಾರ

    ಹಣಕೊಟ್ಟ ಪರಸಪ್ಪ ಹಾಗೂ ಶಾಸಕ ದಡೇಸೂಗೂರ್ ನಡುವಿನ ಸಂಭಾಷಣೆ ವೈರಲ್ ಆಗಿದೆ. ಕೆಲಸವೂ ಮಾಡಿಕೊಡದೆ ಹಣವನ್ನೂ ಕೊಡದೆ ಶಾಸಕರು ಸತಾಯಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಜಿ ಸಚಿವ ಎಂ.ಬಿ ಪಾಟೀಲ್ ತನಿಖೆಗೆ ಆಗ್ರಹಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಆದರೆ ಬಸವರಾಜ್ ದಡೇಸೂಗೂರ್ ಮಾತ್ರ, ಆಡಿಯೋದ ಧ್ವನಿ ನನ್ನದೇ. ಆದ್ರೆ ನಾನು ಹಣ ಪಡೆದಿಲ್ಲ. ಪ್ರಕರಣದ ಮಧ್ಯಸ್ಥಿಕೆ ವಹಿಸಲು ನನ್ನೊಂದಿಗೆ ಮಾತಾಡಿದ್ರು ಅಷ್ಟೇ ಎಂದು ಪೂರ್ಣ ಮಾಹಿತಿ ನೀಡೋಕೆ ನಿರಾಕರಿಸಿದ್ದಾರೆ. ಇದನ್ನೂ ಓದಿ: ಸ್ವರೂಪ್‍ಗೆ ಟಿಕೆಟ್ ನೀಡುವಂತೆ ಒತ್ತಾಯ – ಕಾರ್ಯಕರ್ತರನ್ನು ಎದ್ದು ಹೋಗಿ ಎಂದು ಕೆಂಡಾಮಂಡಲವಾದ ರೇವಣ್ಣ

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ತೊಲಗಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಧನ್ವಂತರಿ ಯಾಗ ಮಾಡಿಸಿದ ಶಾಸಕ

    ಕೊರೊನಾ ತೊಲಗಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಧನ್ವಂತರಿ ಯಾಗ ಮಾಡಿಸಿದ ಶಾಸಕ

    ಕೊಪ್ಪಳ: ಲಾಕ್‍ಡೌನ್ ಮಧ್ಯೆಯೂ ಶಾಸಕರೊಬ್ಬರು ಕೊರೊನಾ ತೊಲಗಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಧನ್ವಂತರಿ ಯಾಗ ಮಾಡಿದ್ದಾರೆ.

    ಕೊಪ್ಪಳ ಜಿಲ್ಲೆಯಲ್ಲಿ ಜೂ 14ರವರೆಗೂ ಲಾಕ್‍ಡೌನ್ ಘೋಷಣೆ ಮಾಡಿ ಸಭೆ, ಸಮಾರಂಭ, ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಪೂಜೆಗೆ ಅವಕಾಶವಿಲ್ಲ, ಆದರೆ ಇಲ್ಲಿ ಶಾಸಕರೇ ಕೊರೊನಾ ನೆಪದಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ

    ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಇಂದು ಕುಟುಂಬ ಸಮೇತರಾಗಿ ಕನಕಗಿರಿ ಕ್ಷೇತ್ರದ ಶ್ರೀರಾಮನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಧನ್ವಂತರಿ ಯಾಗ ಮಾಡಿದ್ದಾರೆ. ಅರ್ಚಕರೊಂದಿಗೆ ಭರ್ಜರಿ ಯಾಗ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಬೆಂಬಲಿಗರು ಸಹ ಇದ್ದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಕೊಪ್ಪಳ ಜಿಲ್ಲೆಯಲ್ಲಿ ಈ ಮೊದಲು ಶೇ 30ರಷ್ಟು ಇದ್ದ ಪಾಸಿಟಿವಿಟಿ ದರ ಈಗ 3 ಪರ್ಸೆಂಟೇಜ್  ಇಳಿದಿದೆ. ಕ್ಷೇತ್ರದಲ್ಲಿ ಕೊರೊನಾ ಸಂಪೂರ್ಣ ಕಡಿಮೆಯಾಗಲಿ ಎಂದು ಯಾಗ ಮಾಡಲಾಗಿದ್ದು, ಈ ವರ್ಷ ಉತ್ತಮ ಮಳೆಯಾಗಿ ಬೆಳೆಯು ಬರಲಿ, ಕ್ಷೇತ್ರದ ಜನರೂ ಸುಭೀಕ್ಷೆಯಾಗಿರಲಿ ಎಂದು ಆಶಿಸಿ ಯಾಗ ಮಾಡಿದ್ದಾಗಿ ಹೇಳಿದ್ದಾರೆ. ಶಾಸಕ ಉದ್ದೇಶ ಸರಿ ಇರಬಹುದು ಆದರೆ ಜಿಲ್ಲಾಡಳಿತ ಮಾಡಿರುವ ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕಾಗಿದ್ದು ಸಹ ಶಾಸಕರ ಕರ್ತವ್ಯವಾಗಿದೆ ಎಂದು ಜನರು ಹೇಳುತ್ತಿದ್ದಾರೆ.

  • ಶ್ರೀರಾಮುಲು ಡಿಸಿಎಂ, ದಡೆಸೂಗುರು ಸಚಿವರನ್ನಾಗಿ ಮಾಡಿ – ಕೊಪ್ಪಳದ ಜನತೆ ಒತ್ತಾಯ

    ಶ್ರೀರಾಮುಲು ಡಿಸಿಎಂ, ದಡೆಸೂಗುರು ಸಚಿವರನ್ನಾಗಿ ಮಾಡಿ – ಕೊಪ್ಪಳದ ಜನತೆ ಒತ್ತಾಯ

    ಕೊಪ್ಪಳ: ಹಿಂದುಳಿದ ನಾಯಕ ಬಿ.ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನು ಮಾಡಲು ಮತ್ತು ಬಿ.ಎಸ್ ಯಡಿಯೂರಪ್ಪ ಅವರ ಮಾನಸ ಪುತ್ರ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗುರು ಅವರನ್ನು ಸಚಿವರನ್ನಾಗಿ ಮಾಡಲು ಕೊಪ್ಪಳ ಜನತೆ ಒತ್ತಾಯಿಸಿದ್ದಾರೆ.

    ಶಾಸಕ ಬಸವರಾಜ ದಡೆಸೂಗುರು ಅವರಿಗೆ ಸಚಿವರ ಸ್ಥಾನ ನೀಡಲು ಒತ್ತಾಯಿಸಿ ಇಂದು ಕನಕಗಿರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬಸವರಾಜ ದಡೆಸೂಗುರು ಅಭಿಮಾನಿಗಳು ಘೋಷಣೆ ಕೂಗೂವ ಮೂಲಕ ಒತ್ತಾಯ ಮಾಡಿದರು.

     

    ವಿಧಾನಸಭೆ ಚುನಾವಣೆ ವೇಳೆ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ್ದ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಕನಕಗಿರಿ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿ ಮಾಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಬಸವರಾಜ ದಡೆಸೂಗುರು ಅವರನ್ನು ನೀವು ಆಯ್ಕೆ ಮಾಡಿ ಶಾಸಕರನ್ನಾಗಿ ಕಳುಹಿಸಿ ನಾನು ಅವರಿಗೆ ಉನ್ನತ ಸ್ಥಾನವನ್ನು ನೀಡುತ್ತೇನೆ ಎಂದು ಸಚಿವ ಸ್ಥಾನ ನೀಡುವ ಬಗ್ಗೆ ಕ್ಷೇತ್ರದ ಜನರಿಗೆ ಸುಳಿವು ನೀಡಿದ್ದರು.

    ಇಂದು ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಅಧಿಕಾರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ಕ್ಷೇತ್ರದ ಜನತೆಯಲ್ಲಿ ಅಂದು ಯಡಿಯೂರಪ್ಪ ನೀಡಿದ್ದ ಭರವಸೆ ಚಿಗುರೊಡೆದಿದೆ. ಯಡಿಯೂರಪ್ಪ ಅವರು ಅಂದು ಕೊಟ್ಟ ಮಾತಿನಂತೆ ನಮ್ಮ ಶಾಸಕರಿಗೆ ಇಂದು ಸಚಿವ ಸ್ಥಾನ ನೀಡಲಿ ಎಂದು ಕ್ಷೇತ್ರದ ಜನತೆ ಒತ್ತಾಯ ಮಾಡುತ್ತಿದ್ದಾರೆ. ಇದರ ಜೊತೆಗೆ ಈ ಭಾಗದ ಹಿಂದುಳಿದ ನಾಯಕರಾದ ಬಿ.ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲು ಸಹ ಒತ್ತಾಯ ಮಾಡಿದ್ದಾರೆ.