Tag: Basavanagowda Patil Yatnal

  • ಹೋರಾಟಗಾರರದ್ದೆಲ್ಲ ದೊಡ್ಡ ರಿಯಲ್ ಎಸ್ಟೇಟ್ ದಂಧೆಗಳಿವೆ: ಯತ್ನಾಳ್ ಕಿಡಿ

    ಹೋರಾಟಗಾರರದ್ದೆಲ್ಲ ದೊಡ್ಡ ರಿಯಲ್ ಎಸ್ಟೇಟ್ ದಂಧೆಗಳಿವೆ: ಯತ್ನಾಳ್ ಕಿಡಿ

    ವಿಜಯಪುರ: ಅವರೆಲ್ಲ ಕರ್ನಾಟಕದ ಸಲುವಾಗಿ ಹೋರಾಡುತ್ತಾರೆ. ಅವರನ್ನು ಹೀರೋ ಮಾಡಬೇಕು ಎಂದು ಹೇಳುತ್ತೀರಿ. ಆದರೆ ಅವರದ್ದೆಲ್ಲ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ದಂಧೆಗಳಿವೆ ಎಂದು ಬಿಜೆಪಿ (BJP) ನಾಯಕ ಬಸವನಗೌಡ ಪಾಟೀಲ್ (Basavanagowda Patil Yatnal) ಯತ್ನಾಳ್ ಕಿಡಿಕಾರಿದ್ದಾರೆ.

    ವಿಜಯಪುರದಲ್ಲಿ (Vijayapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟಗಾರರು ಎನಿಸಿಕೊಂಡವರು ಮಿನಿಸ್ಟರ್ ಮನೆಯಲ್ಲೇ ಇರ್ತಾರೆ. ಹೋರಾಟ ಮಾಡ್ತಿನಿ ಎಂದು ಅವರು ರಾಜಕಾರಣಿಗಳ ಮನೆಯಲ್ಲಿದ್ದರೆ ಹೇಗೆ? ಹೋರಾಟದ ಅಸ್ತಿತ್ವ ಎಲ್ಲಿ ಉಳಿದಿದೆ? ಎಂದು ಕಾವೇರಿ ಹೋರಾಟದ ವೇಳೆ ಕರವೇ ನಾಯಕ ಕೆಪಿಸಿಸಿ ಕಚೇರಿಗೆ ಹೋದ ವಿಚಾರಕ್ಕೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪತ್ರ ಬರೆದು ಬೆದರಿಕೆ ಹಾಕಿದ್ದರೆ ಪ್ರಗತಿಪರರು ಸುಮ್ಮನಾಗುತ್ತಿದ್ದರು: ಶಿವಾಜಿರಾವ್‌ ಜಾಧವ್‌ ಹೇಳಿದ್ದೇನು?

    ಕೆಲವೊಂದು ಸಂಘಟನೆಗಳು 10 ಜನರನ್ನ ಕರೆದುಕೊಂಡು ಒಂದು ಜಂಡಾ ಹಿಡಿದು ಹೋಗ್ತಾರೆ. ನೋಡಿ ಅವರೆಲ್ಲಾ ಬುಕ್ ಆಗಿದ್ದಾರೆ. ನೀವು ಮಾತ್ರ ಅವರನ್ನು ಕರ್ನಾಟಕದ ಸಲುವಾಗಿ ಹೋರಾಡುತ್ತಾರೆ. ಹೀರೋ ಮಾಡಬೇಕು ಎನ್ನುತ್ತೀರಿ. ಅವರು ಹೀರೋ ಆಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಹೋರಾಟಗಾರರು ಎಂದು ಹೇಳಿಕೊಂಡು ಸಿಎಂ ಮನೆಯಲ್ಲಿ, ಡಿಸಿಎಂ ಮನೆಯಲ್ಲಿ ಇರ್ತಾರೆ. ಜೈಲಿನಿಂದ ಬಂದ ಮೇಲೆ ಡಿಸಿಎಂನ್ನು ಮಾತನಾಡಿಸಲು ಹೋಗ್ತಾರೆ. ಏನು ಸ್ವಾತಂತ್ರ್ಯ ಹೋರಾಟಕ್ಕೋ ಅಥವಾ ಪಾಕಿಸ್ತಾನ ಯುದ್ಧ ಗೆದ್ದು ಬಂದವರಂತೆ ಅವರ ಮನೆಗೆ ಮಾತಾಡಿಸೋಕೆ ಹೋಗ್ತಾರೆ. ಅವರು ಜೈಲಿಗೆ ಹೋಗಿದ್ದು ಭ್ರಷ್ಟಾಚಾರದಿಂದ. ಇಂಥವರ ಮನೆಗೆ ಮಾತಾಡಲು ಹೋಗ್ತಾರೆ ಎಂದರೆ ನೈತಿಕತೆ ಎಲ್ಲಿದೆ ಎಂದು ಕೆಲವು ಹೋರಾಟಗಾರರು ಹಾಗೂ ಡಿ.ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದು ಸಂಪುಟದ ಮೂವರು ಸಚಿವರಿಗೆ ಜೀವ ಬೆದರಿಕೆ ಪತ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಲಾಯಕರಿಂದ ನಾವು ಏನೂ ಕಲಿಯಲು ಸಾಧ್ಯವಿಲ್ಲ: ನಿರಾಣಿ ವಿರುದ್ಧ ಯತ್ನಾಳ್ ಕಿಡಿ

    ನಾಲಾಯಕರಿಂದ ನಾವು ಏನೂ ಕಲಿಯಲು ಸಾಧ್ಯವಿಲ್ಲ: ನಿರಾಣಿ ವಿರುದ್ಧ ಯತ್ನಾಳ್ ಕಿಡಿ

    ವಿಜಯಪುರ: ಯಾರು ನಾಲಾಯಕರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೇಟಿಯವರ ಸಿಡಿ ಮಾಡಿದವರು ನಾಲಾಯಕರು. ಯಾರ್ಯಾರಿಗೆ ಸಪ್ಲೈಯರ್ ಆಗಿ ಇದ್ದಾರೋ ಅವರು ನಾಲಾಯಕರು ಎಂದು ಯತ್ನಾಳ್ ವಿರುದ್ಧ ಸಚಿವ ನಿರಾಣಿ ‘ನಾಲಾಯಕ್’ ಪದ ಬಳಕೆಗೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು.

    ನಾನು ಸಪ್ಲೈಯರ್ ಅಲ್ಲ, ಯಾರಿಗೂ ದುಡ್ಡು ಕೊಟ್ಟಿಲ್ಲ. ಮಂತ್ರಿಯಾಗಲು ಯಾರ ಕಾಲು ಹಿಡಿದಿಲ್ಲ, ಎಂಎಲ್‍ಸಿ ಆಗುವುದಕ್ಕೂ ನಾನು ಯಾರ ಕಾಲು ಹಿಡಿದಿಲ್ಲ. ಅಂತಹ ನಾಲಾಯಕರಿಂದ ನಾವು ಏನೂ ಕಲಿಯಲು ಸಾಧ್ಯವಿಲ್ಲ ಎಂದು ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.

    ಸಪ್ಲೈಯರ್ ಯಾರ್ಯಾರಿಗೆ ಏನು ಸಪ್ಲೈ ಮಾಡಿದ್ದಾರೆ ಎಂದು ಗೊತ್ತಿದೆ. ಯಡಿಯೂರಪ್ಪನವರಿಗೆ, ಮೇಲಿನವರಿಗೆ ಏನೇನು ಸಪ್ಲೈ ಮಾಡಿದ್ದಾರೆ ಎಂದು ಎಲ್ಲವನ್ನೂ ಕಾಲ ಬಂದಾಗ ಹೇಳುತ್ತೇನೆ. ಕೆಲವರು ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದರು.

  • ಯತ್ನಾಳ್‍ಗೆ ನನ್ನ ಕಂಡರೆ ಪ್ರೀತಿ: ಬಿ.ವೈ ವಿಜಯೇಂದ್ರ

    ಯತ್ನಾಳ್‍ಗೆ ನನ್ನ ಕಂಡರೆ ಪ್ರೀತಿ: ಬಿ.ವೈ ವಿಜಯೇಂದ್ರ

    – ವಿಜಯೇಂದ್ರ ಎದುರು ಕಣ್ಣೀರಿಟ್ಟ ಮಹಿಳೆ

    ಚಿಕ್ಕಮಗಳೂರು: ನಾನು ಆವತ್ತೇ ಹೇಳಿದ್ದೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನನ್ನ ಮೇಲೆ ಪ್ರೀತಿ ಇದೆ. ಪ್ರೀತಿಯಿಂದ ಹೀಗೆಲ್ಲ ಮಾತನಾಡುತ್ತಾರೆ. ಅದರ ಬಗ್ಗೆ ನನಗೆ ಬೇಸರವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿಕೆ ನೀಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ ನಡೆದ ಬಸವ ತತ್ವ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ನಾನು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತ, ನರೇಂದ್ರ ಮೋದಿ ಬೆಂಬಲಿಗ ಹಾಗೂ ಓರ್ವ ಹಿಂದೂ ಕಾರ್ಯನಾಗಿರುವ ಕಾರಣ ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಶಾಸಕ ಯತ್ನಾಳ್ ಅವರು ಹಿರಿಯರು ಹಾಗೂ ನನ್ನ ಮೇಲಿನ ಪ್ರೀತಿಯಿಂದ ಅವರು ಆ ರೀತಿ ಮಾತನಾಡುತ್ತಾರೆ. ಅದಕ್ಕೆ ನನಗೆ ಬೇಸರವಿಲ್ಲ ಎಂದರು.

    ನಂತರ ಜಾರಕಿಹೊಳಿ ಸಿಡಿ ಕುರಿತಂತೆ ಮಾತನಾಡಿದ ವಿಜಯೇಂದ್ರ, ಸಿಡಿ ಪ್ರಕರಣದ ಬಗ್ಗೆ ಎಸ್‍ಐಟಿ. ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ಏನೆಂದು ತನಿಖೆಯ ಬಳಿಕ ಹೊರಬರಬೇಕಿದೆ. ಇದರ ಹಿಂದೆ ಯಾರಿದ್ದಾರೆ, ಯಾರ ಕೈವಾಡವಿದೆ? ಸಿಡಿ ಹಿಂದೆ ಅಗ್ರಗಣ್ಯ ನಾಯಕರು ಯಾರು ಸೇರಿಕೊಂಡಿದ್ದಾರೆಂದು ಬಹುಶಃ ತನಿಖೆಯ ಬಳಿಕ ಗೊತ್ತಾಗಲಿದ್ದು, ಅಲ್ಲಿವರೆಗೂ ಕಾಯಬೇಕಷ್ಟೆ ಎಂದು ಅಭಿಪ್ರಾಯಪಟ್ಟರು.

    ವಿಜಯೇಂದ್ರ ಎದುರು ಮಹಿಳೆ ಕಣ್ಣೀರು :
    ಕಾರ್ಯಕ್ರಮ ಮುಗಿಸಿ ಹೊರಟ ವಿಜಯೇಂದ್ರ ಕಾರಿನ ಬಳಿ ಬಂದ ಚಿಕ್ಕಮಗಳೂರಿನ ಮಮತಾ ಎಂಬವರು ವಿಜಯೇಂದ್ರ ಮುಂದೆ ಅಳಲು ತೋಡಿಕೊಂಡು ಕಣ್ಣೀರಿಟ್ಟು, ನಮಗೆ ನ್ಯಾಯ ಕೊಡಿಸಿ ಇಲ್ಲ ದಯಾಮರಣಕ್ಕೆ ಅನುಮತಿ ಕೊಡಿಸಿ ಎಂದು ಗೋಳಾಡಿದರು. ಚಿಕ್ಕಮಗಳೂರಿನ ಪ್ರಸನ್ನ ಎಂಬವರ ಕುಟುಂಬ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಕುಂದೂರು ಬಳಿ 57 ಎಕರೆ ತೋಟವನ್ನ ಖರೀದಿ ಮಾಡಿದೆ. ರಿಜಿಸ್ಟರ್ ಆಗಿಲ್ಲ. ಕೇಸ್ ನ್ಯಾಯಾಲಯದಲ್ಲಿದೆ. ಆದರೆ, ತರೀಕೆರೆ ರಾಜಕೀಯ ಮುಖಂಡರ ಬೆಂಬಲಿಗರು ನಮಗೆ ತೋಟಕ್ಕೆ ಹೋಗಲು ಬಿಡುತ್ತಿಲ್ಲ. ಹೋದಾಗ ಹಲ್ಲೆ ಮಾಡುತ್ತಾರೆ. ಈಗಾಗಲೇ ಹಲವು ಬಾರಿ ಹಲ್ಲೆ ಮಾಡಿದ್ದಾರೆ. ದೂರು ಕೊಟ್ಟರೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ವಿಜಯೇಂದ್ರ ಅವರ ಎದುರೇ ನೆಲಕ್ಕೆ ಬಿದ್ದು ಹೊರಳಾಡಿದರು. ನಮಗೆ ಯಾರಿಂದಲೂ ನ್ಯಾಯ ಸಿಗುತ್ತಿಲ್ಲ. ಪೊಲೀಸರಿಂದ ದೌರ್ಜನ್ಯವಾಗುತ್ತಿದೆ. ನೀವಾದರು ನ್ಯಾಯ ಕೊಡಿಸಿ ಎಂದು ಬೇಡಿಕೊಂಡರು. ವಿಜಯೇಂದ್ರ ಕೂಡ ನ್ಯಾಯ ಕೊಡಿಸುವ ಭರವಸೆ ನೀಡಿ ಅಧಿಕಾರಿಗಳು ಹಾಗೂ ಪೊಲೀಸರ ಜೊತೆ ಮಾತನಾಡುತ್ತೇನೆ ಎಂದರು.

    ಮಮತಾ ವಿಜಯೇಂದ್ರನ ಬಳಿ ಅವಲತ್ತು ತೋಡಿಕೊಂಡರು. ನೇರವಾಗಿ ತರೀಕೆರೆ ಶಾಸಕ ಸುರೇಶ್ ಈ ರೀತಿ ಮಾಡಿಸುತ್ತಿದ್ದಾರೆ ಎಂದು ಹೇಳದ ಪ್ರಸನ್ನ ಅವರ ಕುಟುಂಬ ತರೀಕೆರೆ ಪ್ರಭಾವಿ ರಾಜಕೀಯ ಮುಖಂಡರು ತಮ್ಮ ಬೆಂಬಲಿಗರು ಮೂಲಕ ಈ ರೀತಿ ಮಾಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಸುರೇಶ್ ವಿರುದ್ಧ ಆರೋಪಿಸಿದ್ದಾರೆ. ಪೊಲೀಸರಿಂದಲೂ ನಮಗೆ ನ್ಯಾಯ ಸಿಗುತ್ತಿಲ್ಲ. ಅವರು ಹೊಡೆದಿರುವ ಫೋಟೋ ಹಾಗೂ ವಿಡಿಯೋಗಳನ್ನು ಕೊಟ್ಟರೂ ಪೊಲೀಸರು ಅವರ ಪರವೇ ಇದ್ದಾರೆ ಎಂದು ದೂರಿದರು.

  • ಬಿಜೆಪಿ ಶಾಸಕ ಯತ್ನಾಳ್ ಗಡಿಪಾರು ಮಾಡಿ: ಕೈ, ಡಿಎಸ್‍ಎಸ್ ನಾಯಕರ ಆಗ್ರಹ

    ಬಿಜೆಪಿ ಶಾಸಕ ಯತ್ನಾಳ್ ಗಡಿಪಾರು ಮಾಡಿ: ಕೈ, ಡಿಎಸ್‍ಎಸ್ ನಾಯಕರ ಆಗ್ರಹ

    ವಿಜಯಪುರ: ಬಿಜೆಪಿ ಶಾಸಕ ಬನವನಗೌಡ ಪಾಟೀಲ್ ಯತ್ನಾಳ್‍ರ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಮತ್ತು ದಲಿತ ಸಂಘರ್ಷ ಸಮಿತಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಶಾಸಕರ ಗಡಿಪಾರಿಗೆ ಪೊಲೀಸರಲ್ಲಿ ಮನವಿಯನ್ನು ಸಲ್ಲಿಸಿದ್ದಾರೆ.

    ಕಾಂಗ್ರೆಸ್ ಮತ್ತು ಡಿಎಸ್‍ಎಸ್‍ನ ಮುಖಂಡರು ಜಂಟಿಯಾಗಿ ಇಂದು ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ರಂಜಾನ್ ಮುಗಿಯುವವರೆಗೂ ಶಾಸಕ ಯತ್ನಾಳ್‍ರವರನ್ನು ಗಡಿಪಾರು ಮಾಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

    ಕಾಂಗ್ರೆಸ್‍ನ ಜಿಲ್ಲಾ ವಕ್ತಾರರಾದ ಎಸ್ ಎಂ ಪಾಟೀಲ ಗಣಿಹಾರ ಮಾತನಾಡಿ, ಶಾಸಕರು ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿ, ಮುಸ್ಲಿಂಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಕನಿಷ್ಠ ಗೌರವವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಯತ್ನಾಳ್‍ರ ಶಾಸಕ ಸ್ಥಾನ ರದ್ದುಗೊಳಿಸುವಂತೆ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

    ಕಳೆದ ವಾರದ ನಡೆದ ಸಮಾರಂಭದಲ್ಲಿ ಯತ್ನಾಳ್ ನನ್ನ ಕಚೇರಿಗೆ ಬುರ್ಖಾಧಾರಿಗಳು ಹಾಗೂ ಟೋಪಿಧಾರಿಗಳು ಬರುವುದು ಬೇಡ ಎಂದ್ದಿದ್ದರು. ಅಲ್ಲದೆ ನಾನು ಶಾಸಕನಾಗಿರುವುದು ಕೇವಲ ಹಿಂದೂ ಮತಗಳಿಂದ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಯತ್ನಾಳ್‍ರ ಈ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದನ್ನೂ ಓದಿ: ಎಂ.ಬಿ ಪಾಟೀಲ್ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್