Tag: Basavakalyana

  • ಬೀದರ್ – ಬಿಜೆಪಿ ಮುಖಂಡ, ಉದ್ಯಮಿ ಸಂಜೀವಕುಮಾರ್ ಸುಗೂರೆ ನಾಪತ್ತೆ

    ಬೀದರ್ – ಬಿಜೆಪಿ ಮುಖಂಡ, ಉದ್ಯಮಿ ಸಂಜೀವಕುಮಾರ್ ಸುಗೂರೆ ನಾಪತ್ತೆ

    -ನಾಲ್ಕೈದು ಜನರ ಹೆಸರು ಉಲ್ಲೇಖಿಸಿ ಪತ್ರ ಬರೆದಿರುವ ಮುಖಂಡ

    ಬೀದರ್: ಹಣಕಾಸಿನ ವ್ಯವಹಾರ ವಿಚಾರಕ್ಕೆ ಮನನೊಂದು ಬಿಜೆಪಿ (BJP) ಮುಖಂಡ ಹಾಗೂ ಉದ್ಯಮಿ ನಾಪತ್ತೆಯಾಗಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyana) ಪಟ್ಟಣದಲ್ಲಿ ನಡೆದಿದೆ.

    ಬಿಜೆಪಿ ಮುಖಂಡ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ್ ಆಪ್ತರಾಗಿರುವ ಸಂಜೀವಕುಮಾರ್ ಸುಗೂರೆ (Sanjeevkumar Sugure) ನಾಪತ್ತೆಯಾಗಿದ್ದು, ಜಿಲ್ಲಾ ಹಾಗೂ ರಾಜ್ಯ ಬಿಜೆಪಿಯ ಪ್ರಮುಖ ನಾಯಕರ ಜೊತೆ ಸುಗೂರೆ ಉತ್ತಮ ಒಡನಾಟ ಹೊಂದಿದ್ದಾರೆ. ಅ.13 ಭಾನುವಾರದಿಂದ ತಮ್ಮ ಮನೆಯಿಂದಲೇ ನಾಪತ್ತೆಯಾಗಿದ್ದಾರೆ.ಇದನ್ನೂ ಓದಿ: ‘ಕೆರಳಿದ ಸಿಂಹ’ ಚಿತ್ರದ ನಿರ್ದೇಶಕ ಚಿ.ದತ್ತರಾಜ್ ನಿಧನ

    ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಾಲ್ಕೈದು ಜನರ ಹೆಸರು ಉಲ್ಲೇಖಿಸಿ ಪತ್ರ ಬರೆದಿರುವ ಮಾಹಿತಿ ಲಭಿಸಿದೆ. ಮೊಬೈಲ್, ಕಾರು ಸೇರಿದಂತೆ ಯಾವುದನ್ನು ತೆಗೆದುಕೊಂಡು ಹೋಗದೇ ನಡೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ತಮ್ಮ ನಿವಾಸದಿಂದ ಹೊರಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಹುತೇಕ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.

    ಸದ್ಯ ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾನಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ: ಎಸ್‌ಸಿಒ ಶೃಂಗಸಭೆ – ಮಂಗಳವಾರ ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

  • ಸಿನಿಮೀಯ ಸ್ಟಂಟ್ ರೀತಿಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು

    ಸಿನಿಮೀಯ ಸ್ಟಂಟ್ ರೀತಿಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು

    -ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೀದರ್: ಸಿನಿಮೀಯ ರೀತಿಯಲ್ಲಿ ಬೈಕ್ ಡಿಕ್ಕಿಯಾಗಿ ಪಾದಚಾರಿ ಹಾಗೂ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ (Basava Kalyana) ತಾಲೂಕಿನ ಹಳ್ಳಿ ಗ್ರಾಮದ 65ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೃತ ದುರ್ದೈವಿಗಳನ್ನು ಪಾದಚಾರಿ 40 ವರ್ಷದ ಗುಲ್ಚಂದ್ ಗಾಯಕ್ವಾಡ್ ಹಾಗೂ ಬೈಕ್ ಸವಾರ 21 ವರ್ಷದ ಅಜಯ್ ಎಂದು ಗುರುತಿಸಲಾಗಿದ್ದು, ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಹಳೇ ದ್ವೇಷಕ್ಕೆ ಹರಿದ ನೆತ್ತರು – ಜೊತೆಯಲ್ಲೇ ಕುಡಿದು ಸ್ನೇಹಿತನ ಕೊಲೆ

    65ನೇ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಗುಲ್ಚಂದ್ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಸಿನಿಮೀಯ ರೀತಿಯಲ್ಲಿ ಅಜಯನ ಬೈಕ್ ವೇಗವಾಗಿ ಎದುರಿಗೆ ಬಂದಿದ್ದು, ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು 500 ಮೀ. ದೂರದವರೆಗೆ ಗುಲ್ಚಂದ್‌ನನ್ನು ರಸ್ತೆಗೆ ಉಜ್ಜಿಕೊಂಡು ಹೋಗಿದೆ. ಉಜ್ಜಿಕೊಂಡು ಹೋಗುತ್ತಾ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಧಗ ಧಗನೆ ಹೊತ್ತಿ ಊರಿದಿದೆ.

    ಸಿನಿಮೀಯ ರೀತಿಯಲ್ಲಿ ಸ್ಟಂಟ್ ಮಾಡಿ, ಬೈಕ್ ರಸ್ತೆಗೆ ಉಜ್ಜಿಕೊಂಡು ಬರುವ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಫಲಿತಾಂಶ ಪ್ರಕಟಿಸುವಂತೆ ಆಗ್ರಹ; ಪಿಎಸ್‌ಐ ಹುದ್ದೆ ಆಕಾಂಕ್ಷಿಗಳಿಂದ ಇಂದು ಪ್ರತಿಭಟನೆ

  • ಈಜಲು ಹೋಗಿದ್ದ ಬಾಲಕ ಮುಲ್ಲಾಮಾರಿ ಜಲಾಶಯದಲ್ಲಿ ಮುಳುಗಿ ಸಾವು

    ಈಜಲು ಹೋಗಿದ್ದ ಬಾಲಕ ಮುಲ್ಲಾಮಾರಿ ಜಲಾಶಯದಲ್ಲಿ ಮುಳುಗಿ ಸಾವು

    ಬೀದರ್: ಈಜಲು (Swim) ಹೋಗಿದ್ದ ಬಾಲಕ ಮುಲ್ಲಾಮಾರಿ (Mullamari Dam) ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyana) ತಾಲೂಕಿನ ಖೇರ್ಡಾ ಬಿ ಗ್ರಾಮದಲ್ಲಿ ನಡೆದಿದೆ.

    15 ವರ್ಷದ ಮುಜಾಬೀಲ್ ಕಾಜೋದ್ದಿನ್ ಸಾವನ್ನಪ್ಪಿದ ದುರ್ದೈವಿ ಬಾಲಕ. ಐವರು ಗೆಳೆಯರ ಜೊತೆ ಈಜಲು ಹೋದಾಗ ನೀರಿನಲ್ಲಿ ಮುಳಗಿ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ್ ಗ್ರಾಮದ ನಿವಾಸಿಯಾಗಿದ್ದಾನೆ. ಆತನ ತಾಯಿ ತನ್ನ ಊರು ತಡೋಳ ಗ್ರಾಮಕ್ಕೆ ಹೋದ ಸಂದರ್ಭ ಬಾಲಕ ಈಜಲು ಮುಲ್ಲಾಮಾರಿ ಜಲಾಶಯಕ್ಕೆ ಹೋಗಿದ್ದಾನೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಸ್‌ಪಿಪಿ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಪರಮೇಶ್ವರ್

    ಈ ವೇಳೆ ಈಜಲು ಬಾರದೆ ಮುಲ್ಲಾಮಾರಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಜಲಾಶಯದಿಂದ ಬಾಲಕನ ಮೃತದೇಹ ಹೊರ ತೆಗೆದಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಕೆಂಡದಂತ ಬಿಸಿಲು, ಬಿಸಿಗಾಳಿ ಹೊಡೆತಕ್ಕೆ ದೆಹಲಿಯಲ್ಲಿ 15 ಮಂದಿ ಸಾವು

  • ಬಸವಕಲ್ಯಾಣದಲ್ಲಿ ಭಾರೀ ಮಳೆ – ಕೆರೆ ಒಡೆದು ರೈತರ ಜಮೀನಿಗೆ ನುಗ್ಗಿದ ನೀರು

    ಬಸವಕಲ್ಯಾಣದಲ್ಲಿ ಭಾರೀ ಮಳೆ – ಕೆರೆ ಒಡೆದು ರೈತರ ಜಮೀನಿಗೆ ನುಗ್ಗಿದ ನೀರು

    ಬೀದರ್‌: ತಡರಾತ್ರಿ ಧಾರಾಕಾರ ಮಳೆಗೆ (Rain) ಸಣ್ಣ ಕೆರೆ ಒಡೆದು ಅವಾಂತರ ಸೃಷ್ಟಿಯಾಗಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyan) ತಾಲೂಕಿನ ಅಟ್ಟೂರು ಗ್ರಾಮದ ಬಳಿ ನಡೆದಿದೆ

    ಧಾರಾಕಾರ ಮಳೆಗೆ ಗ್ರಾಮದ ಸಣ್ಣ ಕೆರೆ (Lake) ಭರ್ತಿಯಾಗಿ ಒಡೆದ ಪರಿಣಾಮ ಕೆರೆಯಲ್ಲಿದ್ದ ಬಹುತೇಕ ನೀರು ಖಾಲಿ ಖಾಲಿಯಾಗಿದೆ. ಕೆರೆಯ ಕೆಳಗಿದ್ದ ಜಮೀನುಗಳಿಗೆ ನೀರು ನುಗ್ಗಿದ್ದು 20% ರಷ್ಟು ಬೆಳೆ ಹಾನಿಯಾಗಿದೆ. ಇದನ್ನೂ ಓದಿ: ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು, ಸಚಿವರಾಗಿ ಪವನ್‌ ಕಲ್ಯಾಣ್‌ ಪ್ರಮಾಣವಚನ ಸ್ವೀಕಾರ

    ಮಳೆಗೆ ಗ್ರಾಮದ ಹಲವು ರೈತರ ಜಮೀನಿನಲ್ಲಿದ್ದ ಬಾವಿಗಳು ತುಂಬಿದ್ದು ಕೆರೆ ನೀರಿನ ರಭಸಕ್ಕೆ ಅಟ್ಟೂರು ಹಾಗೂ ಅಟ್ಟೂರು ತಾಂಡಾದ ಮಧ್ಯೆ ಇರುವ ರಸ್ತೆ ಸೇತುವೆ ಕೊಚ್ಚಿ ಹೋಗಿದೆ. ಕೋಹಿನೂರು ಹೊಬಳಿಯಲ್ಲೇ ತಡರಾತ್ರಿ 180 ಮಿಲಿ ಮೀಟರ್ ಮಳೆಯಾಗಿದೆ.

     

  • ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ತಂಬಾಕು ಜಪ್ತಿ

    ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ತಂಬಾಕು ಜಪ್ತಿ

    ಬೀದರ್ : ಅಕ್ರಮವಾಗಿ ಮಹಾರಾಷ್ಟ್ರಕ್ಕೆ (Maharashtra) ಸಾಗಿಸುತ್ತಿದ್ದ 7. 20 ಲಕ್ಷ ರೂ. ಮೌಲ್ಯದ ತಂಬಾಕು (Tobacco) ಜಪ್ತಿ ಮಾಡಿದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಂಗ್ಲಾ ಕ್ರಾಸ್ ಬಳಿ ನಡೆದಿದೆ.

    ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಪ್ರತಿಷ್ಠಿತ M – SCENTED TOBACOO GOLD ಕಂಪನಿಯ ತಂಬಾಕು ಪ್ಯಾಕೆಟ್‌ಗಳನ್ನು ಸಾಗಿಸಲಾಗುತ್ತಿತ್ತು. ಇದನ್ನೂ ಓದಿ: Loksabha Election: ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ?

     

    ಹೈದರಾಬಾದ್‌ನಿಂದ ಮುಂಬೈಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಫರ್ಮಿಯಾ ಎಂಬಾತನ ಮೇಲೆ ಮೇಲೆ ಎಫ್ಐಆರ್ ದಾಖಲಾಗಿದೆ. ಅಕ್ರಮ ಸಾಗಾಟಕ್ಕೆ ಬಳಸಿದ್ದ 20 ಲಕ್ಷ ಮೌಲ್ಯದ ವಾಹನವೂ ಜಪ್ತಿ ಮಾಡಲಾಗಿದ್ದು ಈ ಕುರಿತು ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟೈಮ್ಸ್‌ ನೌ ಸಮೀಕ್ಷೆ – NDA 366, INDIA 104 ಸೀಟ್‌: ಕರ್ನಾಟಕದಲ್ಲಿ ಬಿಜೆಪಿ ದಳ ಮೈತ್ರಿಗೆ 23 ಸ್ಥಾನ

  • ಬೀದರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಬಲಿ

    ಬೀದರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಬಲಿ

    ಬೀದರ್: ಚಲಿಸುತ್ತಿದ್ದ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಭೀಕರ ರಸ್ತೆ ಅಪಘಾತವಾಗಿ (Accident) ದಂಪತಿ ಬಲಿಯಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyana) ತಾಲೂಕಿನ ಸಸ್ತಾಪೂರ್ ಬಂಗ್ಲಾ ಬಳಿ ನಡೆದಿದೆ.

    ಗುಂಡಪ್ಪ ಬಲಭೀಮ್ ಚಿಟಂಪಲ್ಲೆ (33) ಹಾಗೂ ಪತ್ನಿ ಸುಜಾತ ಗುಂಡಪ್ಪ ಚಿಟಂಪಲ್ಲೆ (29) ಸಾವನ್ನಪ್ಪಿದ ದುರ್ದೈವಿ ದಂಪತಿ. ಬಸವಕಲ್ಯಾಣದ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದ್ದು, ಅಪಘಾತದ ರಭಸಕ್ಕೆ ಪತಿ ಗುಂಡಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿ ಸುಜಾತರನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ (Kalaburagi) ರವಾನೆ ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮಹಾಮಳೆಗೆ ಮತ್ತೊಂದು ಬಲಿ

    ಮೂಲತ: ಹುಮ್ನಾಬಾದ್ (Humnabad) ತಾಲೂಕಿನ ಹುಡಗಿ ಗ್ರಾಮಕ್ಕೆ ಸೇರಿದ ದಂಪತಿಗೆ 3 ವರ್ಷದ ಮುದ್ದಾದ ಮಗುವಿದೆ. ಘಟನೆ ವೇಳೆ ದಂಪತಿ ಜೊತೆಗಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಈ ಕುರಿತು ಬಸವಕಲ್ಯಾಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸವಕಲ್ಯಾಣ ಪೊಲೀಸರು ಅಪರಿಚಿತ ವಾಹನದ ಬೆನ್ನುಬಿದ್ದಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

  • ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆಗೈದ ಪತಿಯ ಅಣ್ಣ!

    ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆಗೈದ ಪತಿಯ ಅಣ್ಣ!

    ಬೀದರ್: ಕೌಟುಂಬಿಕ ಕಲಹ (Family Dispute) ಹಿನ್ನೆಲೆ ಪತಿಯ ಅಣ್ಣ ಮಹಿಳೆಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyana) ಪಟ್ಟಣದಲ್ಲಿ ತ್ರೀಪುರಾಂತನಲ್ಲಿ ನಡೆದಿದೆ.

    ಸಂಗೀತ ಶ್ರೀಧರ ಕಾಂಗೆ (35) ಕೊಲೆಯಾದ ಮಹಿಳೆ. ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಗಲಾಟೆಯಲ್ಲಿ ಹರಿತವಾದ ಆಯುಧದಿಂದ ಮಹಿಳೆಯ ಕೊಲೆ (Murder) ಮಾಡಿದ್ದು, ಹತ್ಯೆಯಾದ ಮಹಿಳೆ ಗೃಹ ರಕ್ಷಕ ದಳದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಇದನ್ನೂ ಓದಿ: ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ

    CRIME 2

    ಮಹಿಳೆಯ ಹತ್ಯೆಗೈದ ಆರೋಪಿ ಬಸವಕಲ್ಯಾಣ ನಗರಸಭೆಯಲ್ಲಿ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿದ್ದು, ಮನೆಯಲ್ಲಿ ಯಾರು ಇಲ್ಲದಿದ್ದಾಗ ಮಹಿಳೆಯೊಂದಿಗೆ ಜಗಳವಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಕ್ರಮ ಗೋಸಾಗಾಟ ವೇಳೆ ಅಡ್ಡಗಟ್ಟಿದ ಪೊಲೀಸರು – ಅಡ್ಡಾದಿಡ್ಡಿ ಚಾಲನೆಯಿಂದ ಕಂಟೈನರ್ ಪಲ್ಟಿ

  • ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ – ಬಸವಕಲ್ಯಾಣ ಕ್ಷೇತ್ರದ ಅಖಾಡ ಹೇಗಿದೆ?

    ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ – ಬಸವಕಲ್ಯಾಣ ಕ್ಷೇತ್ರದ ಅಖಾಡ ಹೇಗಿದೆ?

    ಬೀದರ್: ವಿಶ್ವಗುರು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣ (Basavakalyan) ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಬಿಜೆಪಿಯಿಂದ (BJP)ಮತ್ತೊಮ್ಮೆ ಶರಣು ಸಲಗರ್ (Sharanu Salagar) ಅಗ್ನಿ ಪರೀಕ್ಷೆಗೆ ಇಳಿದರೆ ಕಾಂಗ್ರೆಸ್‌ನಿಂದ (Congress) ಮಾಜಿ ಸಿಎಂ ಎನ್ ಧರಂ ಸಿಂಗ್ (Dharam Singh) ಪುತ್ರ ವಿಜಯ್ ಸಿಂಗ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ನಿಂದ (JDS) ಈಗಾಗಲೇ ಸೈಯದ್ ಯಾಸ್ರಬ್ ಅಲಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

    2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ಬಸವಕಲ್ಯಾಣ ಕ್ಷೇತ್ರದಲ್ಲಿ ಹುಲಸೂರು ಮತ ಕ್ಷೇತ್ರದ ಕೆಲವು ಗ್ರಾಮಗಳ ವಿಲೀನಗೊಂಡಿದೆ. ಹೀಗಾಗಿ ಕ್ಷೇತ್ರದ ಸ್ವರೂಪವೂ ಬದಲಾಗಿದೆ. ಒಟ್ಟಾರೆ ಬಸವಕಲ್ಯಾಣ ಕ್ಷೇತ್ರ ಜಿಲ್ಲೆಯ ಪ್ರಮುಖ ರಾಜಕೀಯ ಚಟುವಟಿಕೆ ಕೇಂದ್ರವಾಗಿ ಮಾರ್ಪಟ್ಟಿದೆ.

    1957ರಿಂದ ಬಸವಕಲ್ಯಾಣ ಕ್ಷೇತ್ರ ಒಟ್ಟು 15 ಚುನಾವಣೆಗಳನ್ನು ಕಂಡಿದ್ದು 16ನೇ ಚುನಾವಣೆಗೆ ಕ್ಷೇತ್ರದಲ್ಲಿ 2.41 ಲಕ್ಷ ಮತದಾರರಿದ್ದಾರೆ. ಮತದಾರ 5 ಬಾರಿ ಕಾಂಗ್ರೆಸ್‍ನ ಕೈ ಹಿಡಿದರೆ, 7 ಬಾರಿ ಜನತಾ ಪರಿವಾರಕ್ಕೆ ಮಣೆ ಹಾಕಿದ್ದಾನೆ. ಒಂದು ಬಾರಿ ಪಕ್ಷೇತರ, ಎರಡು ಸಲ ಕಮಲ ಅರಳಿದೆ. ಜಿಲ್ಲೆಯಲ್ಲೇ ಮೊದಲ ಬಾರಿ ಮಹಿಳಾ ಪ್ರತಿನಿಧಿಯನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ ಸಮಾನತೆ ಸಾರಿದ ಕ್ಷೇತ್ರ ಎನ್ನುವುದು ವಿಶೇಷ.

    ಬಸವಕಲ್ಯಾಣ ಕ್ಷೇತ್ರದದಲ್ಲಿ ಈಗ ಅನುಭವ ಮಂಟಪ ಕಾಮಗಾರಿ ಭರದಿಂದ ಸಾಗುತ್ತಿದ್ದು ಜನತಾ ಪರಿವಾರದಿಂದ ಬಸವರಾಜ ಪಾಟೀಲ್ ಅಟ್ಟೂರು ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ಒಂದು ಬಾರಿ ಉಪ ಚುನಾವಣೆ ನಡೆದಿದೆ.

    2018ರಲ್ಲಿ ಶೇ.42.27ರಷ್ಟು ಮತ ಪಡೆದು ಕಾಂಗ್ರೆಸ್‌ನ ಬಿ. ನಾರಾಯಣರಾವ್ (B. Narayan Rao) ಗೆಲುವು ಪಡೆದಿದ್ದರು. ಬಿಜೆಪಿಯ ಮಲ್ಲಿಕಾರ್ಜುನ ಖೂಬಾಗೆ ಶೇ.30.38 ರಷ್ಟು ಮತ ಬಿದ್ದರೆ ಜೆಡಿಎಸ್ ಪಿಜಿ ಆರ್‌ ಸಿಂಧಿಯಾ 21.62 ರಷ್ಟು ಮತ ಪಡೆದಿದ್ದರು. 2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ ಶೇ.41.17ರಷ್ಟು ಮತ ಪಡೆದು ಗೆದ್ದರೆ ಕಾಂಗ್ರೆಸ್‍ನ ಮಾಲಾ ಬಿ ನಾರಾಯಣರಾವ್ ಶೇ.34.17 ಮತಗಳನ್ನು ಪಡೆದು ಎರಡನೇಯ ಸ್ಥಾನ ಪಡೆದರು.

    ಬಸವಕಲ್ಯಾಣ ಕ್ಷೇತ್ರದಲ್ಲಿ ಒಟ್ಟು 2,43,089 ಮತದಾರರು ಇದ್ದು ಇದರಲ್ಲಿ 1,26,681 ಪುರುಷ ಮತದಾರರು ಹಾಗೂ 1,16,408 ಮಹಿಳಾ ಮತದಾರರು ಇದ್ದಾರೆ. 60 ಸಾವಿರ ಲಿಂಗಾಯತ, 45 ಸಾವಿರ ಮರಾಠ, 50 ಸಾವಿರ ಮುಸ್ಲಿಂ, 35 ಸಾವಿರ ಎಸ್‌ಸಿ, 15 ಸಾವಿರ ಎಸ್‌ಟಿ, 18 ಸಾವಿರ ಕೋಳಿ, ಇತರೆ 20 ಸಾವಿರ ಮತದಾರರು ಇದ್ದಾರೆ. ಒಟ್ಟಾರೆಯಾಗಿ ಲಿಂಗಾಯತರು, ಮುಸ್ಲಿಮರು ಹಾಗೂ ಮರಾಠಿಗ ಮತದಾರರೇ ಇಲ್ಲಿ ಪಕ್ಷಗಳ ಗೆಲುವಿಗೆ ನಿರ್ಣಾಯಕ.

    ಬಿಜೆಪಿ ಧನಾತ್ಮಕ ಅಂಶಗಳು
    ಚುನಾವಣಾ ಚಾಣಕ್ಯ ಅಮಿತ್ ಶಾ ಕಲ್ಯಾಣ ಅನುಭವ ಮಂಟಪದಿಂದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ಕೊಟ್ಟಿದ್ದು ಬಿಜೆಪಿಗೆ ವರದಾನ. ಎಲ್ಲರ ಜೊತೆ ಕೆಲಸ ಮಾಡುವ ಬಿಜೆಪಿಯ ಶರಣು ಸಲಗರ್ ಕಡೆ ಜನರ ಒಲವಿದೆ. ಕಲ್ಯಾಣದ ನೂತನ ಅನುಭವ ಮಂಟಪಕ್ಕೆ ಬಿಜೆಪಿ ಸರ್ಕಾರ 500 ಕೋಟಿ ರೂ. ಅನುದಾನ ನೀಡಿದ್ದು ಕಾಮಗಾರಿ ಕಾರ್ಯ ಭರದಿಂದ ಸಾಗುತ್ತಿದ್ದು ಲಿಂಗಾಯತರ ಮತಗಳು ಬಿಜೆಪಿಗೆ ಬೀಳಬಹುದು. ಮರಾಠಿಗರನ್ನು ಸೆಳೆಯಲು ಶಿವಾಜಿ ಪಾರ್ಕ್‌ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ತಂದು ಹಲವು ಅಭಿವೃದ್ಧಿ ಕೆಲಸ ಮಾಡಲಾಗಿದೆ.

    ಬಿಜೆಪಿ ಋಣಾತ್ಮಕ ಅಂಶಗಳು
    ಕಾಂಗ್ರೆಸ್‌ನಿಂದ ವಿಜಯ್ ಸಿಂಗ್‌ಗೆ ಟಿಕೆಟ್ ಸಿಕ್ಕಿದ್ದರಿಂದ ನೇರಾನೇರ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ. ಕೊನೆಯ ಕ್ಷಣದಲ್ಲಿ ಜೆಡಿಎಸ್‌ನಿಂದ ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್ ಸಿಕ್ಕರೆ ತ್ರಿಕೋನ ಸ್ಪರ್ಧೆ ನಡೆಯಬಹುದು. ಕಳೆದ ಬಾರಿ ಟಿಕೆಟ್ ಸಿಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೇಂದ್ರ ಸಚಿವ ಭಗವಂತ್ ಖೂಬಾ ಹಾಗೂ ಶಾಸಕ ಸಲಗರ್ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಹಿನ್ನಡೆಯಾಬಹುದು. ಕಾಂಗ್ರೆಸ್ ಮಾಜಿ ಸಿಎಂ ಪುತ್ರನಿಗೆ ಟಿಕೆಟ್ ಸಿಕ್ಕಿದ್ದು ಮರಾಠ, ಅಲ್ಪಸಂಖ್ಯಾತರು, ಒಬಿಸಿ ಮತಗಳನ್ನು ಸೆಳೆಯುವ ಸಾಧ್ಯತೆಯಿದೆ.

    ಕಾಂಗ್ರೆಸ್‌ ಧನಾತ್ಮಕ ಅಂಶಗಳು
    ಮಾಜಿ ಸಿಎಂ ಧರಂಸಿಂಗ್‌ ಪುತ್ರ ವಿಜಯ್ ಸಿಂಗ್‌ಗೆ ಟಿಕೆಟ್‌ ಸಿಕ್ಕಿದೆ. ಮರಾಠರು, ಅಲ್ಪಸಂಖ್ಯಾತರು ಹಾಗೂ ಒಬಿಸಿ ಮತದಾರರು ಹೆಚ್ಚಾಗಿದ್ದಾರೆ. ವಿಜಯ್ ಸಿಂಗ್ ತಮ್ಮದೇಯಾದ ಕಾರ್ಯಕರ್ತರ ಹಾಗೂ ಯುವಕರ ಪಡೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಪತಿಯನ್ನು ತಬ್ಬಿ ಕಣ್ಣೀರಿಟ್ಟ ಶಿಲ್ಪಾ ಜಗದೀಶ್

    ಮಲ್ಲಿಕಾರ್ಜುನ ಖೂಬಾ ಜೆಡಿಎಸ್‌ಗೆ ಮತ್ತೆ ಬಂದಿದ್ದು ಟಿಕೆಟ್ ಸಿಕ್ಕರೆ ಕಾಂಗ್ರೆಸ್ ಮತಗಳು ಜೆಡಿಎಸ್ ಗೆ ಶಿಫ್ಟ್ ಆಗುವ ಸಾಧ್ಯತೆಯಿದೆ. ಈ ಬಾರಿ ದಿವಂಗತ ಬಿ. ನಾರಾಯಣರಾವ್ ಅನುಕಂಪ ಮತಗಳು ಕಾಂಗ್ರೆಸ್‌ಗೆ ಬೀಳುವುದು ಅನುಮಾನ. ನೂತನ ಅನುಭವ ಮಂಟಪ ಸೇರಿದಂತೆ ವಿವಿಧ ಬಿಜೆಪಿ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು.

    ಜೆಡಿಎಸ್‌ ಧನಾತ್ಮಕ ಅಂಶಗಳು
    ವಿಜಯ್ ಸಿಂಗ್‌ಗೆ ಕಾಂಗ್ರೆಸ್ ನಿಂದ ಟಿಕೆಟ್ ಘೋಷಣೆಯಾಗಿದ್ದು ಲಿಂಗಾಯತ ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

    ಜೆಡಿಎಸ್‌ ಋಣಾತ್ಮಕ ಅಂಶಗಳು
    ಕಲ್ಯಾಣ ನಾಡಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಯಾತ್ರೆಗಳನ್ನು ಮಾಡಿದರೂ ಜೆಡಿಎಸ್‌ನಿಂದ ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ ನಡೆದಿಲ್ಲ. ಇನ್ನೂ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದರೂ ಯಾರಿಗೆ ಬಿ ಫಾರಂ ಸಿಗುತ್ತದೆ ಎಂಬ ಗೊಂದಲದಲ್ಲಿ ಕಾರ್ಯಕರ್ತರಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿಗೆ ಬಿದ್ದಂತೆ ಪ್ರಚಾರ ಮಾಡುತ್ತಿದ್ದರೂ ಜೆಡಿಎಸ್‌ನಿಂದ ದೊಡ್ಡ ಮಟ್ಟದ ಪ್ರಚಾರ ನಡೆದಿಲ್ಲ.

  • ಮಹಿಳಾ ಸಮಾನತೆ ಸಾರಿದ ನೆಲದಲ್ಲಿ ಪುರುಷರದ್ದೇ ದರ್ಬಾರ್

    ಮಹಿಳಾ ಸಮಾನತೆ ಸಾರಿದ ನೆಲದಲ್ಲಿ ಪುರುಷರದ್ದೇ ದರ್ಬಾರ್

    ಬೀದರ್: ವೈಚಾರಿಕ ಕ್ರಾಂತಿಯ ಮೂಲಕ ಮಹಿಳೆಯರಿಗೆ ಸಮಾನತೆಯ ಸಂದೇಶ ಸಾರಲು ನೆಲೆ ಒದಗಿಸಿದ ಗಡಿ ಜಿಲ್ಲೆ ಬೀದರ್‌ನಲ್ಲೇ (Bidar) ಇಂದಿಗೂ ಸಮಾನತೆ ಆಶಯದ ಪರಿಕಲ್ಪನೆ ಈಡೇರಲು ಸಾಧ್ಯವಾಗಿಲ್ಲ.

    ಸ್ವತಂತ್ರ್ಯ ಭಾರತದ ಆರಂಭದ ಮೂರು ಚುನಾವಣೆ (Election) ಹೊರುಪಡಿಸಿದರೆ ಯಾವ ಮಹಿಳಾ ಅಭ್ಯರ್ಥಿಯೂ ಸಹ ಕಲ್ಯಾಣ ನಾಡಿನಿಂದ ಚುನಾಯಿತರಾಗಿಲ್ಲ. ಟಿಕೆಟ್ ಹಂಚಿಕೆಯಲ್ಲೂ ಮಹಿಳಾ ಪ್ರಾತಿನಿಧ್ಯದ ಕೊರಗು ಅಂಟಿಕೊಂಡೇ ಬಂದಿದೆ.

    ಮಹಿಳೆಯರಿಗೆ ಸಮಾನ ಸ್ಥಾನಮಾನದ ಕುರಿತು ಪ್ರತಿಪಾದಿಸಿದ ಬಸವ ಭೂಮಿಯಲ್ಲಿಯೇ ಇಂದಿಗೂ ಸ್ತ್ರೀಯರ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ಎರಡು ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳಿಂದ ಇಲ್ಲಿಯವರೆಗೆ ಕೇವಲ ಇಬ್ಬರು ಮಹಿಳೆಯರು ಮಾತ್ರ ಗೆದ್ದಿದ್ದಾರೆ. ಇದನ್ನೂ ಓದಿ: ಮೊಹಮ್ಮದ್ ನಲಪಾಡ್ ವಿರುದ್ಧ ದೂರು ದಾಖಲು

    ಬಸವಕಲ್ಯಾಣ (Basavakalyana) ಕ್ಷೇತ್ರದಿಂದ 1957 ಹಾಗೂ 1962ರಲ್ಲಿ ಅನ್ನಪೂರ್ಣಬಾಯಿ ಮತ್ತು ಹುಲಸೂರ (Hulasuru) ಕ್ಷೇತ್ರದಿಂದ (ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕೈಬಿಡಲಾಗಿದೆ) 1985ರಲ್ಲಿ ಶಿವಕಾಂತಾ ಚತುರೆ ಗೆಲುವು ಸಾಧಿಸಿದ್ದರು. ಜಿಲ್ಲೆಯಲ್ಲಿ 1989ರಿಂದ ಈಚೆಗೆ ಒಬ್ಬ ಮಹಿಳಾ ಅಭ್ಯರ್ಥಿಯೂ ವಿಧಾನಸಭೆ ಮತ್ತು ಇಲ್ಲಿಯವರೆಗೆ ಲೋಕಸಭೆಗೆ ಆಯ್ಕೆಯಾಗಿಲ್ಲ.

    ಒಂದೆಡೆ ಕಣ್ಣಕ್ಕಿಳಿದ ಒಂದೆರೆಡು ಮಹಿಳಾ ಅಭ್ಯರ್ಥಿಗಳಿಗೆ ಮತದಾರರಿಂದ ಬೆಂಬಲವಿಲ್ಲ. ಮತ್ತೊಂದೆಡೆ ಅಭ್ಯರ್ಥಿಗಳು ಸಮಮರ್ಥರಾಗಿದ್ದರೂ ರಾಜಕೀಯ ಪಕ್ಷಗಳು ಅವರಿಗೆ ಟಿಕೆಟ್ ನೀಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ.

    ಪರಭಾವಗೊಂಡ ಮಹಿಳಾ ಅಭ್ಯರ್ಥಿಗಳು
    ಬೀದರ ವಿಧಾನಸಭೆ ಕ್ಷೇತ್ರದಿಂದ 1989ರಲ್ಲಿ ಮಸ್ತಾನಭಿ ಮೌಲನಭಿ ಪಕ್ಷೇತರ ಅಭ್ಯರ್ಥಿಯಾಗಿ, 2004ರಲ್ಲಿ ರಫತ್ ಮತೀನ್ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ, 2008ರಲ್ಲಿ ಜೆಡಿಎಸ್‍ನಿಂದ (JDS) ರಾಜಶ್ರೀ ಸ್ವಾಮಿ, ಭಾಲ್ಕಿ ಕ್ಷೇತ್ರದಿಂದ 1994ರಲ್ಲಿ ಬಿಎಎಸ್‍ಪಿಯಿಂದ ಶೋಭಾ ವಿಜಯ, ಹುಮನಾಬಾದ್ ಕ್ಷೇತ್ರದಿಂದ 2004ರಲ್ಲಿ ಶೋಭಾರ ರಾಣಿ, ಮೀಸಲು ಕ್ಷೇತ್ರವಾಗಿ ಹುಲಸೂರನಿಂದ 1962ರಲ್ಲಿ ಕಾಂಗ್ರೆಸ್‍ನಿಂದ ಸುಭದ್ರಾಬಾಯಿ, 1989ರಲ್ಲಿ ಆರ್‌ಪಿಐನಿಂದ ಗಂಗಮ್ಮ ಫುಲೆ, 1999ರಲ್ಲಿ ಪಕ್ಷೇತರರಾಗಿ ಎಚ್.ಮಹಾದೇವಿ, 2004ರಲ್ಲಿ ಪಕ್ಷೇತರರಾಗಿ ಶೋಭಾಬಾಯಿ ಬಿಜಾಪೂರೆ ಮತ್ತು ಬಸವಕಲ್ಯಾಣ ಕ್ಷೇತ್ರದಿಂದ 2008ರಲ್ಲಿ ಭಗಿರತಿ ಶಿವರಾಜ ಪಕ್ಷೇತರರಾಗಿ, 20013ರಲ್ಲಿ ಬಸವಕಲ್ಯಾಣದಿಂದ ಮಲ್ಲಮ್ಮ ಅಟ್ಟೂರ ಕೆಜೆಪಿಯಿಂದ (KJP) ಹಾಗೂ ಶಾಸಕ ನಾರಾಯಣರಾವ್ ಅಕಾಲಿಕ ನಿಧನದಿಂದ 2021 ರ ಮೇ ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಪತ್ನಿ ಮಲ್ಲಮ್ಮ ಬಿ ನಾರಾಯಣರಾವ್ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಬೀದರ್ ದಕ್ಷಿಣದಿಂದ ಮೀನಾಕ್ಷಿ ಸಂಗ್ರಾಮ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದರು. ಆದರೆ, ಅಲ್ಪ ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡಿದ್ದರು.

    ಬೀದರ್ ದಕ್ಷಿಣದಿಂದ ಮತ್ತೊಮ್ಮೆ ಕಂಠೀರವ ಸ್ಟುಡಿಯೋ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಹೆಸರು ಕೇಳಿ ಬಂದಿತ್ತು. ಆದರೆ ಶಾಸಕ ಅಶೋಕ ಖೇಣಿ ಕಾಂಗ್ರೆಸ್ ಸೇರ್ಪಡೆಯಿಂದ ಅದು ಸಹ ಕೈತಪ್ಪಿದೆ. ಮಹಿಳೆಯರಿಗೆ 50% ನಷ್ಟು ಪ್ರಾತಿನಿಧ್ಯ ಸಿಗಲೇಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಆದರೆ ರಾಜಕೀಯ ಪಕ್ಷಗಳಿಂದ ಮಹಿಳೆಯರಿಗೆ ಟಿಕೆಟ್ ಹಂಚಿಕೆಯಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ಚುನಾವಣೆಯಲ್ಲಾದರೂ ಸಮಾನತೆಯ ಪರಿಕಲ್ಪನೆ ಈಡೇರುತ್ತದೆಯೇ ಕಾದು ನೋಡಬೇಕಾಗಿದೆ.

    ಮನೋಭಾವ ಬದಲಾಗಲಿ
    ಚುನಾವಣೆಗೆ ಸ್ಪರ್ಧಿಸಲು ಜಿಲ್ಲೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಪುರುಷ ಪ್ರಧಾನ ಪ್ರತಿನಿಧಿಗಳು ಈ ವಿಷಯದಲ್ಲಿ ಅಡ್ಡಗಾಲು ಹಾಕುತ್ತಿದ್ದಾರೆ. ಬಸವಣ್ಣನ ಸಮಾನತೆಯ ನೆಲದಲ್ಲಿ ಕೇವಲ ಇಬ್ಬರು ಮಹಿಳೆಯರು ಶಾಸಕರಾಗಿ ಆಯ್ಕೆಯಾಗಿರುವುದು ದುರ್ದೈವದ ಸಂಗತಿ. 50% ರಷ್ಟು ಮತದಾರರು ಮಹಿಳೆಯರಿದ್ದಾರೆ. ಆದರೆ ಟಿಕೆಟ್ ಕೊಡುವಲ್ಲಿ ಮಾತ್ರ ಮಹಿಳೆಯರಿಗೆ ಎಲ್ಲಾ ರಾಜಕೀಯ ಪಕ್ಷಗಳು ನಿರ್ಲಕ್ಷ ತೋರುತ್ತಿವೆ ಎಂದು ಜಿಲ್ಲೆಯ ಮಹಿಳೆಯರು ಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಅನರ್ಹ

  • ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ರೆ ಏನಾಗುತ್ತೆ ತಿಳಿಯಬೇಕು: ಮಲ್ಲಿಕಾರ್ಜುನ್ ಖೂಬಾ

    ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ರೆ ಏನಾಗುತ್ತೆ ತಿಳಿಯಬೇಕು: ಮಲ್ಲಿಕಾರ್ಜುನ್ ಖೂಬಾ

    – ದುಡ್ಡಿಗಾಗಿ ಬಸಕಲ್ಯಾಣದ ಬಿಜೆಪಿ ಟಿಕೆಟ್ ಸೇಲ್ ಮಾಡಿದ್ದಾರೆ

    ಬೀದರ್: ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಏನಾಗುತ್ತದೆ ಎಂಬುದನ್ನು ಪಕ್ಷದ ಹಿರಿಯ ನಾಯಕರು ತಿಳಿಯಬೇಕು ಎಂದು ಬಸವಕಲ್ಯಾಣ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷ್ಠಾವಂತರಿಗೆ ಪಕ್ಷ ಅನ್ಯಾಯ ಮಾಡಿದೆ. ಉಚ್ಛಾಟನೆ ಮಾಡಿದ್ದನ್ನು ಸ್ವಾಗತಿಸುತ್ತೇನೆ. ಅವರು ಏನೇ ಮಾಡಿದರೂ ಸಂತೋಷದಿಂದ ಸ್ವಾಭಿಮಾನದಿಂದ ಬದುಕುತ್ತೆನೆ. ಪಕ್ಷದಿಂದ ನನಗೆ ಏನು ಅನ್ಯಾಯ ಆಗಿದೆ ಎಂದು ಅದು ಪಕ್ಷದ ಹಿರಿಯರಿಗೆ ಗೋತ್ತಿದೆ. ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಏನಾಗುತ್ತೆ ಎಂದು ಅವರು ತಿಳಿದುಕೊಳ್ಳಬೇಕು. ನಾನು ತನು, ಮನ, ಧನ ಹಾಗೂ ಶ್ರಮದಿಂದ ಪಕ್ಷಕ್ಕಾಗಿ ಕೆಲಸ ಮಾದ್ದೇನೆ. ಇದರಿಂದ ನನಗೆ ಏನೂ ಆಗುವುದಿಲ್ಲ. ಪಕ್ಷಗಳು ಬರುತ್ತವೆ, ಹೋಗತ್ತವೆ ಆದರೆ ನಮ್ಮ ನಿಷ್ಠೆ ಜನರ ಪರವಾಗಿ ಇರುತ್ತದೆ ಎಂದು ಟಾಂಗ್ ನೀಡಿದರು.

    ಪಕ್ಷದಲ್ಲಿ ಯಾರು ದುಡಿಯುತ್ತಾರೋ ಅವರಿಗೆ ಟಿಕೆಟ್ ನೀಡಬೇಕು. ಐಡಿ ಕ್ರಿಯೇಟ್ ಮಾಡಿ, ದುಡ್ಡಿಗೋಸ್ಕರ ಟಿಕೆಟ್ ಸೇಲ್ ಮಾಡಿದ್ದಾರೆ. ಇಂತಹ ಕೆಲಸದಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಬಸವಕಲ್ಯಾಣದ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇನೆ, ಯಾವುದೇ ಪಕ್ಷದಲ್ಲಿ ಮುಂದೆ ಈ ರೀತಿ ಆಗಬಾರದು ಎಂದರು.

    ಬಿಜೆಪಿಯವರು ಒಂದು ಕುಟುಂಬಕ್ಕೆ 3 ಸಾವಿರ ರೂ. ಹಣ ನೀಡಿದ್ದಾರೆ. ಈ ಮೂಲಕ ಚುನಾವಣೆ ಪ್ರಚಾರ ಮಾಡಿದ್ದಾರೆ. ಸರ್ಕಾರ ಪಾರದರ್ಶಕವಾಗಿ ಚುನಾವಣೆ ಮಾಡಬೇಕಿತ್ತು. ಆದರೆ ಶರಣರ ನಾಡಿನಲ್ಲಿ ದುಡ್ಡಿನ ಹೊಳೆ ಹರಿಸಿ ಚುನಾವಣೆ ನಡೆಸಿದ್ದಾರೆ. ಒಂದು ಕಾರಿನಲ್ಲಿ ಕೋಟಿಗಟ್ಟಲೇ ಹಣ ಕೊಂಡೊಯ್ದು, ಹಂಚಿದ್ದಾರೆ. ಹಲವು ಕಡೆ ವಾಹನಗಳನ್ನು ಸೀಜ್ ಮಾಡಿದ್ದಾರೆ. ದುಡ್ಡು ಹಂಚಿ ಚುನಾವಣೆ ಮಾಡುವ ಮೂಲಕ ಬಸವಣ್ಣನವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನ ಮಾಡಿದ್ದಾರೆ ಎಂದರು.

    ನಮಗೆ ಜನರ ಬೆಂಬಲವಿದೆ, ಸ್ವಾಭಿಮಾನಿ ಬಸವಕಲ್ಯಾಣ ಜನ ನನ್ನನ್ನು ಕೈ ಬಿಡುವುದಿಲ್ಲ. ನ್ಯಾಯಕ್ಕಾಗಿ ಒಳ್ಳೆಯ ರೀತಿಯಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ, ಎಲ್ಲ ಕಡೆ ವಾತಾವರಣ ಚೆನ್ನಾಗಿದೆ ಎಂದರು.