Tag: Basavajaya Mrutyunjaya Swamiji

  • 2 ತಿಂಗಳಲ್ಲಿ ಮತ್ತೆ ನನ್ನನ್ನ ಬಿಜೆಪಿಗೆ ಸೇರಿಸಿಕೊಳ್ತಾರೆ: ಯತ್ನಾಳ್

    2 ತಿಂಗಳಲ್ಲಿ ಮತ್ತೆ ನನ್ನನ್ನ ಬಿಜೆಪಿಗೆ ಸೇರಿಸಿಕೊಳ್ತಾರೆ: ಯತ್ನಾಳ್

    – ದೀಪ ಆರುವ ಮುನ್ನ ಜೋರಾಗಿ ಉರಿಯುತ್ತೆ, ಅದಕ್ಕೆ ಕಾಶಪ್ಪನವರ್ ಉರಿಯುತ್ತಿದ್ದಾನೆ
    – ಶ್ರೀಗಳ ಹತ್ಯೆ ವಿಚಾರ ನನಗೆ ಗೊತ್ತಿಲ್ಲ, ಬೆಲ್ಲದ್‌ರನ್ನೇ ಕೇಳಿ ಎಂದ ಶಾಸಕ

    ವಿಜಯಪುರ: ಬಿಜೆಪಿಯಿಂದ (BJP) ಉಚ್ಚಾಟನೆ ಆಗಿದ್ದೀನಿ, ಹಾಗೇ ನೋಡಿದ್ರೆ 18 ವರ್ಷ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು, ಆದರೆ ನೋಡಿ 2 ತಿಂಗಳಲ್ಲಿ ಮತ್ತೆ ಮರಳಿ ಬಿಜೆಪಿಗೆ ಸೇರಿಸಿಕೊಳ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟನೆ ಆಗಿರೋದು ನಾನು. ಹಾಗೇ ನೋಡಿದ್ರೆ 18 ವರ್ಷ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು. ಆದ್ರೆ ನೋಡಿ 2 ತಿಂಗಳಲ್ಲಿ ಮತ್ತೆ ಮರಳಿ ನನ್ನನ್ನ ಸೇರಿಸಿಕೊಳ್ತಾರೆ. ಏನು ಮಾಡೋದು? ನಮ್ಮ ಶಕ್ತಿ ಇದ್ದರೆ ಎಲ್ಲರೂ ಕರೆಯುತ್ತಾರೆ. ಇಲ್ಲ ಅಂದ್ರೆ ಅಪ್ಪಾಜಿ ಎನ್ನುತ್ತ ಯಡ್ಡಿಯೂರಪ್ಪ, ವಿಜಯೇಂದ್ರ ಕೈ, ಕಾಲು ಹಿಡಿಯಬೇಕಾಗುತ್ತೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ಇದೇ ವೇಳೆ ಕೂಡಲಸಂಗಮಶ್ರೀ ವಿರುದ್ಧ ಹತ್ಯೆಗೆ ಸಂಚು ರೂಪಿಸಿದ ವಿಚಾರವಾಗಿ ಮಾತನಾಡಿದ ಅವರು, ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ. ಅದರ ಬಗ್ಗೆ ಬೆಲ್ಲದ್ ಅವರನ್ನೇ ಕೇಳಿ. ನಾವು ಜಯಮೃತ್ಯುಂಜಯ ಸ್ವಾಮೀಜಿಗಳಿಗಾಗಿ 15 ಎಕರೆ ಜಮೀನು ತೆಗೆದುಕೊಂಡು ಹಾಸ್ಟೇಲ್ ಸಮೇತ ಮಠದ ವ್ಯವಸ್ಥೆ ಮಾಡುತ್ತೇವೆ. ಅದರ ಬಗ್ಗೆ ಬುಧವಾರ ನಾನು, ಸಿಸಿ ಪಾಟೀಲ್ ಸೇರಿದಂತೆ ಅನೇಕರು ಸೇರಿ ಸಭೆ ಮಾಡುತ್ತೇವೆ. ಶ್ರೀಗಳು ಅಲ್ಲಿಯೇ ಇರಲಿದ್ದಾರೆ. ಈ ಬಾರಿ ಯಾವುದೇ ರಾಜಕಾರಣಿ ಕೂಡ ಟ್ರಸ್ಟ್ನಲ್ಲಿ ಇರುವುದಿಲ್ಲ. ಕೇವಲ ಭಕ್ತರು ಮಾತ್ರ ಟ್ರಸ್ಟ್ನಲ್ಲಿ ಇರುತ್ತಾರೆ ಎಂದರು.

    ಉಚ್ಚಾಟನೆ ಮಾಡಲು ಕಾಶಪ್ಪನವರ್ ಯಾರು? ಇದೇನು ರಾಜಕೀಯ ಪಕ್ಷನಾ? ಸ್ವಾಮೀಜಿಗಳ ಜೊತೆ ಭಕ್ತರಿದ್ದಾರೆ. ಯಾವಾಗಲೂ ದೀಪ ಆರುವ ಮುನ್ನ ಜೋರಾಗಿ ಉರಿಯುತ್ತೆ, ಅದಕ್ಕೆ ಕಾಶಪ್ಪನವರ್ ಉರಿಯುತ್ತಿದ್ದಾನೆ. ಇಡೀ ಸಮಾಜ ಸ್ವಾಮೀಜಿಗಳ ಜೊತೆಯಲ್ಲಿದೆ. ಆ ಟ್ರಸ್ಟ್ನಲ್ಲಿ ಅವರ ಹೆಸರು ಇಲ್ಲ ಎಂದ್ಮೇಲೆ ಅದರ ಮೇಲೆ ಆಸೆಯೂ ಕೂಡ ಇರಬಾರದು. ನಾವು ಆಸೆ ಬಿಟ್ಟು ಬಿಡಿ ಎಂದು ಹೇಳಿದ್ದೇವೆ. ಗದಗನ ಪ್ರಭಣ್ಣಾ ಹುಣಶಿಕಟ್ಟಿ, ಧಾರವಾಡದ ಅಸೂಟಿ ಎರಡು ಕುಟುಂಬದವರು ಸಮಾಜದ ಆಸ್ತಿಯನ್ನು ಖಾಸಗಿ ಟ್ರಸ್ಟ್ ಮಾಡಿಕೊಂಡಿದ್ದಾರೆ. ಅವರ ಮಕ್ಕಳು, ಮೊಮ್ಮಕಳೇ ಅದರ ಟ್ರಸ್ಟ್ನ ಸದಸ್ಯರಾಗಿರುತ್ತಾರೆ. ಬೇರೆಯವರು ಟ್ರಸ್ಟ್ನ ಸದಸ್ಯರಾಗುವ ಹಾಗಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೇದೆಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ – ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್

  • ಪಂಚಮಸಾಲಿ ಪೀಠಕ್ಕೆ ಹೊಸ ಶ್ರೀ? ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆಗೆ ನಿರ್ಧಾರ?

    ಪಂಚಮಸಾಲಿ ಪೀಠಕ್ಕೆ ಹೊಸ ಶ್ರೀ? ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆಗೆ ನಿರ್ಧಾರ?

    -ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸ್ವಾಮೀಜಿ

    ಬಾಗಲಕೋಟೆ: ಒಂದು ಕಡೆ ಪೀಠದಿಂದ ಸ್ವಾಮೀಜಿಗಳನ್ನು ಕೆಳಗಿಳಿಸುವ ಕಸರಸ್ತು ನಡೆಯುತ್ತಿದ್ದರೆ, ಇತ್ತ ಅನಾರೋಗ್ಯದಿಂದ ಜಯಮೃತ್ಯುಂಜಯ ಶ್ರೀಗಳು (Jaya Mruthyunjaya Swamiji) ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಪಂಚಮಸಾಲಿ (Panchamasali) ಶ್ರೀಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ವಿಭು ಭಕ್ರು ಪ್ರಮಾಣ ವಚನ ಸ್ವೀಕಾರ

    ಬಾಗಲಕೋಟೆ ಕರೂಡಿ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಸ್ವಾಮೀಜಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಶುಕ್ರವಾರ ರಾತ್ರಿಯಿಂದಲೂ ಶ್ರೀಗಳಿಗೆ ತಲೆನೋವು, ವಾಂತಿ, ಎದೆ ನೋವು ಶುರುವಾಗಿತ್ತು. ಇಂದು ಬೆಳಿಗ್ಗೆ ಎದೆ ನೋವು ಹೆಚ್ಚಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇತ್ತೀಚಿಗೆ ಕೂಡಲಸಂಗಮ ಪೀಠಕ್ಕೆ ಬೀಗ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣದಿಂದ ಶ್ರೀಗಳು ಬಹಳ ನೊಂದುಕೊಂಡಿದ್ದರು. ಇದರ ಬೆನ್ನಲ್ಲೇ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇನ್ನೂ ಇದೇ ಪ್ರಕರಣದಲ್ಲಿ ಕೋರ್ಟ್ ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.ಇದನ್ನೂ ಓದಿ: ಕೋಟಿ ಒಡೆಯನಾದ ಮಾದಪ್ಪ – ಒಂದೇ ತಿಂಗಳಲ್ಲಿ ಭಕ್ತರಿಂದ 2.36 ಕೋಟಿ ಕಾಣಿಕೆ

  • ಕಾಶಪ್ಪನವರ್ ಆಯ್ತು ಈಗ ಜಯ ಮೃತ್ಯುಂಜಯ ಶ್ರೀ ವಿರುದ್ಧ ಹೆಬ್ಬಾಳ್ಕರ್ ಅಸಮಾಧಾನ

    ಕಾಶಪ್ಪನವರ್ ಆಯ್ತು ಈಗ ಜಯ ಮೃತ್ಯುಂಜಯ ಶ್ರೀ ವಿರುದ್ಧ ಹೆಬ್ಬಾಳ್ಕರ್ ಅಸಮಾಧಾನ

    ವಿಜಯಪುರ: ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರ ಬಳಿಕ ಪಂಚಮಸಾಲಿ ಪೀಠದ ಶ್ರೀ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (lakshmi Hebbalkar) ಅಸಮಾಧಾನ ಹೊರಹಾಕಿದ್ದಾರೆ.

    ವಿಜಯಪುರ (vijayapura) ಜಿಲ್ಲೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಭಿನ್ನಾಭಿಪ್ರಾಯ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basavajaya Mrutyunjaya Swamiji) ಅವರು ಬೆಳಗಾವಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಪಂಚಮಸಾಲಿ ಹೋರಾಟ ಮಾಡುವುದಾಗಿ ಹೇಳಿದ್ದರು. ನಾವು ಸರ್ಕಾರದಲ್ಲಿದ್ದರೂ ಹೋರಾಟದಲ್ಲಿ ಭಾಗಿಯಾಗಿದ್ದೆವು. ಆದರೆ ಸ್ವಾಮೀಜಿಗಳು ಸರ್ಕಾರಕ್ಕೆ ಮುಜುಗರವಾಗುವಂತೆ ಹೋರಾಟ ಮಾಡಬಾರದು ಎಂದು ಪ್ರತಿಕ್ರಿಯಿಸಿದರು.ಇದನ್ನೂ ಓದಿ: ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್‌, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ

    ಯಾವುದೇ ಸರ್ಕಾರ ಇದ್ದರೂ ಅತಿಯಾಗಿದೆ ಎನ್ನುವ ರೀತಿಯಲ್ಲಿ ಹೋರಾಟ ಮಾಡಬಾರದು. ಪಂಚಮಸಾಲಿ ಸಮಾಜವನ್ನು ಬಿಟ್ಟು ನಾನಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.

    ಇದೇ ವೇಳೆ ಗೃಹಲಕ್ಷ್ಮಿ ಹಣದ ವಿಚಾರವಾಗಿ, ಉಪಚುನಾವಣೆ ಕ್ಷೇತ್ರಗಳಿಗೆ ಮಾತ್ರ ಗೃಹಲಕ್ಷ್ಮೀ ಹಣ ಹಾಕಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿ ಮಾತನಾಡಿದರು. ನೀವು ಎಲ್ಲಾ ಜಿಲ್ಲೆಗಳಲ್ಲಿಯೂ ಚೆಕ್ ಮಾಡಿಕೊಳ್ಳಿ ಎಂದು ತಿಳಿಸಿದರು.ಇದನ್ನೂ ಓದಿ: ಖಂಡನೆ, ಮಂಡನೆ, ಎಚ್ಚರಿಕೆ ಸಾಕು, ಬಾಂಗ್ಲಾದೇಶಕ್ಕೆ ಸರಿಯಾಗಿ ಬುದ್ಧಿ ಕಲಿಸಿ: ಮುತಾಲಿಕ್‌

  • ತಾಯಿ ಮೇಲೆ ಆಣೆ ಮಾಡಿ ಸಿಎಂ ಕೊಟ್ಟ ಮಾತು ತಪ್ಪಿದ್ರು – ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ

    ತಾಯಿ ಮೇಲೆ ಆಣೆ ಮಾಡಿ ಸಿಎಂ ಕೊಟ್ಟ ಮಾತು ತಪ್ಪಿದ್ರು – ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ

    ಹಾವೇರಿ: ಪಂಚಮಸಾಲಿ (Panchamasali) ಸಮುದಾಯಕ್ಕೆ 2ಎ ಮೀಸಲಾತಿ (2A Reservation) ಕಲ್ಪಿಸುವ ವಿಚಾರದಲ್ಲಿ ತಾಯಿ ಮೇಲೆ ಆಣೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕೊಟ್ಟ ಮಾತು ತಪ್ಪಿದ್ದಾರೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ (Basavajaya Mrutyunjaya Swamiji) ಬೇಸರ ವ್ಯಕ್ತಪಡಿಸಿದ್ದಾರೆ.

    ಕಳೆದ ಅಧಿವೇಶನದಲ್ಲಿ ನಮಗೆ ಸಿಎಂ ಮಾತು ಕೊಟ್ಟಿದ್ದರು. ತಾಯಿಯ ಮೇಲೆ ಪ್ರಮಾಣ ಮಾಡಿ ಡಿ.29ಕ್ಕೆ 2A ಮೀಸಲಾತಿ ನೀಡುತ್ತೇವೆಂದು ಹೇಳಿದ್ದರು. ಆದರೆ 2C, 2D ಹೊಸ ಪ್ರವರ್ಗ ರಚನೆ ಮಾಡಿ ನಮಗೆ ಘೋಷಣೆ ಮಾಡಿದ್ದಾರೆ. ನಮಗೆ 2A ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: BJP ಸರ್ಕಾರ ಇನ್ನೆರಡು ತಿಂಗಳು ಮಾತ್ರ, ಅದಕ್ಕೆ ಪ್ರತಿಮೆ ಸ್ಥಾಪನೆ ಮಾಡ್ತಿದ್ದಾರೆ- ಡಿಕೆಶಿ

    ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು, 2D ಮೀಸಲಾತಿಯಲ್ಲಿ ಏನಿದೆ. ಎಷ್ಟು ಮೀಸಲಾತಿ ಎಂಬುವುದರ ಬಗ್ಗೆ ಸ್ಪಷ್ಟನೆ ಕೊಡಲಿಲ್ಲ. ಇದು ಅಸ್ಪಷ್ಟವಾಗಿದ್ದರಿಂದ ನಾವು ಒಪ್ಪಿರಲಿಲ್ಲ. ಅಸಾಂವಿಧಾನಿಕವಾಗಿ ನಿರ್ಣಯ ತೆಗೆದುಕೊಂಡಿದ್ದರು. ನಾವು ಕೇಳಿದ್ದು 2A ಮೀಸಲಾತಿ. ಆದರೆ ಅವರು ನೀಡಿದ್ದು 2Dಯನ್ನು. ತಾಯಿಯ ಮೇಲೆ ಆಣೆ ಮಾಡಿ ಮಾತು ಕೊಟ್ಟು ತಪ್ಪಿದ್ದಾರೆ ಎಂದು ಸಿಎಂ ವಿರುದ್ಧ ಅಸಾಮಾಧಾನ ಹೊರಹಾಕಿದ್ದಾರೆ.

    ಒಂದು ದಿನದ ಸಾಂಕೇತಿಕವಾಗಿ ಸಿಎಂ ಮನೆ ಮುಂದೆ ಸತ್ಯಾಗ್ರಹ ಮಾಡ್ತಿದ್ದೇವೆ. ನಮ್ಮ ನೋವು ಏನಿದೆ ಇಂದು ಇವತ್ತು ತೋರಿಸಲಿದ್ದೇವೆ. ಮುಂದಿನ ಹೋರಾಟಕ್ಕೆ ಏನು ಮಾಡಬೇಕೆಂದು ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಹೈಕೋರ್ಟ್ ಆದೇಶದ ಕುರಿತು ಮಾತನಾಡಿದ ಅವರು, ಹೈಕೋರ್ಟ್‌ ಇದನ್ನು ನಿರಾಕರಿಸಿದೆ. ನಾವು ಕೂಡ ನಿರಾಕರಣೆ ಮಾಡಿದ್ದೇವೆ. ಎಲ್ಲೋ ಒಂದು ಕಡೆ ನಮ್ಮ ಮೀಸಲಾತಿ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ನಮಗೆ ಅನುಮಾನ ಇತ್ತು. ಈಗ ಅದು ಸತ್ಯವಾಗಿದೆ. ನಮಗೆ 2A ಮೀಸಲಾತಿಯೇ ಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಒಂದೇ ಕಡೆ ನಿಂತ್ರೆ ಬಲವಿಲ್ಲ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು – ಸಿದ್ದುಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಎಂ ಮನೆ ಮುಂದೆಯೇ ನಾವೆಲ್ಲರೂ ಸಂಕ್ರಾಂತಿ ಆಚರಿಸುತ್ತೇವೆ – ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಸಿಎಂ ಮನೆ ಮುಂದೆಯೇ ನಾವೆಲ್ಲರೂ ಸಂಕ್ರಾಂತಿ ಆಚರಿಸುತ್ತೇವೆ – ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ (Panchamasali) ಮೀಸಲಾತಿ (Reservation) ಸಂಬಂಧ ಜ.12ರ ಒಳಗೆ ಗೆಜೆಟ್‌ ಅಥವಾ ಆದೇಶ ಹೊರಡಿಸದಿದ್ದರೆ ಮತ್ತೆ ಹೋರಾಟ ನಡೆಸುತ್ತೇವೆ. ಸಿಎಂ ಮನೆ ಮುಂದೆಯೇ ಸಂಕ್ರಾಂತಿ ಆಚರಿಸಿ ಪ್ರತಿಭಟಿಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ (BasavajayaMrutyunjayaSwamiji) ಎಚ್ಚರಿಕೆ ನೀಡಿದ್ದಾರೆ.

    ಹಾವೇರಿಯಲ್ಲಿ (Haveri) ಮಾತನಾಡಿದ ಅವರು, 2D ಮತ್ತು 2Cಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದೇವೆ ಎಂದು ಸರ್ಕಾರ ಹೇಳಿತು. ಆಗ ಜನರಿಗೆ ನಾವೇನು ಉತ್ತರ ಕೊಡಬೇಕು ಎಂದು ಸುಮ್ಮನೆ ಕುಳಿತೆವು. ನಾವು ಕಾನೂನು ತಜ್ಞರನ್ನು ಕರೆದು ಚರ್ಚಿಸಿದೆವು. 110ಕ್ಕೂ ಹೆಚ್ಚು ವಕೀಲರನ್ನು ಸೇರಿಸಿ ಚರ್ಚಿಸಿದೆವು. ನಮ್ಮ ಕಾನೂನು ತಜ್ಞರು ಇದನ್ನು ತಿರಸ್ಕರಿಸಲು ಹೇಳಿದ್ದಾರೆ. ಜ.12ರ ಒಳಗಾಗಿ ಗೆಜೆಟ್ ಅಥವಾ ಆದೇಶ ಹೊರಡಿಸದಿದ್ದರೆ ಮತ್ತೆ ಹೋರಾಟ ಶುರುವಾಗುತ್ತದೆ. 13 ರಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಳ ಮೀಸಲಾತಿ ಚರ್ಚೆ ಬಳಿಕ ಸರ್ಕಾರದ ನಿರ್ಧಾರ ಪ್ರಕಟ: ಮಾಧುಸ್ವಾಮಿ

    ಡಿ.22 ರಂದು ಸಿಎಂ ನಮ್ಮ ಸಮಾಜದ ವಿರಾಟ ರೂಪದ ಪ್ರತಿಭಟನೆ ನೋಡಿ ಹೋರಾಟ ಶಾಂತಗೊಳಿಸಿದರು. ಆವತ್ತು ಬೆಳಗ್ಗೆ ಆಯೋಗದ ವರದಿ ಪಡೆದುಕೊಂಡರು. ಮಧ್ಯಾಹ್ನ ಕ್ಯಾಬಿನೆಟ್ ಸಭೆಯಲ್ಲಿ ಘೋಷಣೆ ಮಾಡುತ್ತಾರೆ ಎಂದು ಕಾದಿದ್ದೆವು. ಕೊಟ್ಟರೆ ಅಭಿನಂದನೆ, ಕೊಡದಿದ್ದರೆ ಮಹಾಮುತ್ತಿಗೆಗೆ ಸಿದ್ಧತೆ ಮಾಡಿಕೊಂಡು ಬಂದಿದ್ದೆವು. ನಮ್ಮ ಎಲ್ಲ ನಾಯಕರನ್ನು ಕರೆದು ಒಂದೆರಡು ಗಂಟೆಗಳ ಕಾಲ ಚರ್ಚಿಸಿದರು. ನಮ್ಮ ಸಮಾಜಕ್ಕೆ ಸಿಹಿ ಸುದ್ದಿ ಕೊಡುತ್ತಾರೆ ಎಂದು ಕಾದಿದ್ದೆವು. ಸಿಎಂ ಸನ್ಮಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದೆವು ಎಂದು ಮಾತನಾಡಿದ್ದಾರೆ.

    ಸಿಎಂ ಕೊನೆಯ ಅಸ್ತ್ರವಾಗಿ ತಾಯಿಯ ಮೇಲೆ ಆಣೆ ಮಾಡಿ ಮಾತು ಕೊಟ್ಟರು. ತಾಯಿ ಅಂದರೆ ನಮಗೆ ದೇವರ ಸಮಾನ. ತಾಯಿಯ ಮೇಲೆ ಆಣೆ ಮಾಡಿದ್ದಕ್ಕೆ ಅವರ ಮೇಲೆ ಭರವಸೆ ಇಟ್ಟು ಕಾಯ್ತೀವಿ ಎಂದು ಹೊರಬಂದೆವು‌. ಒಂದು ವಾರ ಕಾಯೋಣ ಎಂದು ಕಾದೆವು. ಹೋರಾಟಕ್ಕೆ ಬಂದ ಜನರ ಮನಸ್ಸಿಗೆ ಭಾರವಾದರೂ ನಮ್ಮ ಮನವಿಗೆ ವಾಪಸ್ ಮನೆಗಳಿಗೆ ತೆರಳಿದರು. ಸಚಿವ ಸಂಪುಟದ ಅಸ್ಪಷ್ಟ ನಿಲುವು ಬಂದು ಗೊಂದಲವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾಲದಲ್ಲೇ ಸ್ಯಾಂಟ್ರೋ ರವಿ ಜೈಲಿನಿಂದ ಹೊರಬಂದಿದ್ದಾನೆ: ಬೊಮ್ಮಾಯಿ

    ಚೆನ್ನಮ್ಮ ಮೂರ್ತಿಯಿಂದ ಸಿಎಂ ಮನೆಯವರೆಗೆ ಹೋರಾಟ ಮಾಡುತ್ತೇವೆ. ಸಿಎಂ ಅವರ ಜೊತೆಗಿನ ಚರ್ಚೆ, ಮಾತು ಕೊಟ್ಟು ತಪ್ಪಿರುವ ಬಗ್ಗೆಯೂ ಚರ್ಚೆ ಆಗಲಿದೆ. ಹೋರಾಟಕ್ಕೆ ನ್ಯಾಯ ಪಡೆದುಕೊಂಡು ಸಂಕ್ರಾಂತಿಯ (Sankranti) ಎಳ್ಳು-ಬೆಲ್ಲ ತಿನ್ನೋಣ. ಮೀಸಲಾತಿಯ ಆದೇಶ ಪ್ರತಿ ನಮ್ಮ ಕೈಗೆ ಸಿಗೋವರೆಗೂ ನಾವು ಹೋರಾಡುತ್ತೇವೆ. ಸಿಎಂ ಮನೆ ಮುಂದೆಯೇ ನಾವೆಲ್ಲರೂ ಸಂಕ್ರಾಂತಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯುಗಾದಿ ಹಬ್ಬಕ್ಕೆ ನಮಗೆ ಮೀಸಲಾತಿ ಸಿಗುವ ವಿಶ್ವಾಸ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಯುಗಾದಿ ಹಬ್ಬಕ್ಕೆ ನಮಗೆ ಮೀಸಲಾತಿ ಸಿಗುವ ವಿಶ್ವಾಸ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಬೆಂಗಳೂರು: ಮಾರ್ಚ್ ನಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲೇ ನಮಗೆ ಮೀಸಲಾತಿ ಸಿಗುವ ವಿಶ್ವಾಸ ಇದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಇಂದು ಹಿಂದುಳಿದ ವರ್ಗಗಳ ಆಯೋಗದ ವಿಚಾರಣೆಯಲ್ಲಿ ಹಾಜರಾಗಿ ಗೌಡ ಲಿಂಗಾಯತ ಸಮುದಾಯದ ಬಗ್ಗೆಯೂ ವಿವರಣೆ ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜ, ಗೌಡ, ಲಿಂಗಾಯತ ಸಮಾಜವನ್ನು 2ಎಗೆ ಸೇರ್ಪಡೆ ಮಾಡಬೇಕೆಂದು ಹೋರಾಟ ನಡೆಯುತ್ತಿದೆ. ಪಂಚಮಸಾಲಿಗಳೆಂದರೆ, ಉತ್ತರ ಕರ್ನಾಟಕ ಮಾತ್ರ ಅಲ್ಲ, ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಗೌಡ ಲಿಂಗಾಯತ ಹೆಸರಿನಲ್ದಿದ್ದಾರೆ. ಅವರೆಲ್ಲ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇಂದು ಹಿಂದುಳಿದ ವರ್ಗಗಳ ಆಯೋಗ ಗೌಡ ಲಿಂಗಾಯತದ ಬಗ್ಗೆ ವಿವರಣೆ ಕೇಳಲು ಕರೆದಿದ್ದರು. ನಾವು ನಮ್ಮ ವಕೀಲರ ಜೊತೆ ಬಂದು ಅಭಿಪ್ರಾಯ ತಿಳಿಸಿದ್ದೇವೆ ಎಂದರು. ಇದನ್ನೂ ಓದಿ: ಪಂಚಮಸಾಲಿ ಸ್ವಾಮೀಜಿಗೆ ಬಸವಣ್ಣನವರ ಹೆಸರು ಹೇಳೋ ನೈತಿಕತೆಯೇ ಇಲ್ಲ: ಪುಟ್ಟಸಿದ್ಧಶೆಟ್ಟಿ

    ಗೌಡ, ಲಿಂಗಾಯತರು ನಮ್ಮ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದವರು. ಅವರಿಗೆ 2ಎ ಮೀಸಲಾತಿ ನೀಡಬೇಕು ಎಂದು ಮನವಿ ಸಹ ಮಾಡಿದ್ದೇವೆ. ಈಗಾಗ್ಲೇ ಸರ್ಕಾರಕ್ಕೆ ನಮ್ಮ ಮನವಿಯನ್ನು ತಿಳಿಸಿದ್ದೇವೆ. ಹಿಂದೆ ನಮ್ಮ ಮನವಿ ಹೇಳಲು ಸಿಎಂ ಮನೆ ಬಾಗಿಲಿಗೆ ಹೋಗಬೇಕಿತ್ತು, ಈಗಿನ ಸಿಎಂ ಹುಬ್ಬಳ್ಳಿಯಲ್ಲಿ ನಮ್ಮ ಸಭೆಗೆ ಬಂದು ನಮ್ಮ ಮನವಿ ಆಲಿಸಿದ್ದಾರೆ. ಹಿಂದೆ ಯಡಿಯೂರಪ್ಪನರ ಕಿವಿಗೆ ಯಾರೋ ಏನೋ ತುಂಬಿದ್ದರು. ಹೀಗಾಗಿ ಯಡಿಯೂರಪ್ಪನವರು ನಮಗೆ ಅಷ್ಟಾಗಿ ಸ್ಪಂದಿಸಲಿಲ್ಲ. ಈಗ ಬೊಮ್ಮಾಯಿಯವರು ನಮ್ಮ ಮನವಿಗೆ ಸ್ಪಂದಿಸುತ್ತಿದ್ದರೆ, ಅದಷ್ಟು ಬೇಗ ನಮಗೆ ಸಿಹಿ ಸುದ್ದಿ ಸಿಗುವ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬೂಸ್ಟರ್‌ ಡೋಸ್‌ ಪಡೆಯಲು 60 ವರ್ಷ ಮೇಲ್ಪಟ್ಟವರಿಗೆ ಹೊಸ ಮಾರ್ಗಸೂಚಿ

    ಬೊಮ್ಮಾಯಿ ಅವರು ಸಿಎಂ ಆಗಿ ಎಲ್ಲಿಯವರೆಗೆ ಇರ್ತಾರೆ ಅಲ್ಲಿಯವರೆಗೆ ನಮ್ಮ ಬೆಂಬಲವಿದೆ ಎಂದು ಜಯಮೃತ್ಯುಂಜಯ ಶ್ರೀಗಳು ಪ್ರತಿಕ್ರಿಯೆ ನೀಡಿದರು. 2023ರವರೆಗೆ ಅವರೇ ಮುಂದುವರೆಯುತ್ತಾರೆ. ಅಲ್ಲಿಯವರೆಗೂ ನಮ್ಮ ಬೆಂಬಲವಿದೆ. ಬದಲಾವಣೆ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ಮಾತನಾಡುವುದು ಅಷ್ಟು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು.

    ಹಿಂದುಳಿದ ವರ್ಗಗಳ ಆಯೋಗದ ವಿಚಾರಣೆ ವೇಳೆ ಜಯಮೃತ್ಯುಂಜಯ ಶ್ರೀಗಳ ನಿಯೋಗದಲ್ಲಿ ಲಿಂಗಾಯತಗೌಡ ಮಹಾಸಭಾ ಅಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ್, ಮೈಸೂರು ಭಾಗದ ಮುಖಂಡರಾದ ದೂರ ಮಂಜುನಾಥ್ ಉಪಸ್ಥಿತರಿದ್ದರು.