Tag: basava jayanthi

  • ಎತ್ತುಗಳ ಮೆರವಣಿಗೆ ವೇಳೆ ಚಪ್ಪಲಿ ತೂರಿದ ಯುವಕನನ್ನು ಥಳಿಸಿದ ಗ್ರಾಮಸ್ಥರು

    ಎತ್ತುಗಳ ಮೆರವಣಿಗೆ ವೇಳೆ ಚಪ್ಪಲಿ ತೂರಿದ ಯುವಕನನ್ನು ಥಳಿಸಿದ ಗ್ರಾಮಸ್ಥರು

    ಹಾವೇರಿ: ಬಸವ ಜಯಂತಿ ಪ್ರಯುಕ್ತ ನಡೆದ ಎತ್ತುಗಳ ಮೆರವಣಿಗೆ ವೇಳೆ ಸವಣೂರು ತಾಲೂಕಿನ ಗ್ರಾಮದಲ್ಲಿ ಯುವಕನೊಬ್ಬ ಚಪ್ಪಲಿ ತೂರಿ ವಿಕೃತಿ ಮೆರೆದಿದ್ದಾನೆ.

    ಮಂಗಳವಾರ ರಾತ್ರಿ ಕಾರಡಗಿ ಗ್ರಾಮದಲ್ಲಿ ಮೆರವಣಿಗೆ ಹೋಗುತ್ತಿದ್ದ ವೇಳೆ ಎತ್ತುಗಳ ಮೇಲೆ ಖಾಜಾಮುದ್ದೀನ್ ಕೋಲ್ಕಾರ(29) ಎಂಬಾತ ಚಪ್ಪಲಿ ತೂರಿದ್ದಾನೆ.

    ಚಪ್ಪಲಿ ತೂರಿದ್ದಕ್ಕೆ ಆಕ್ರೋಶಗೊಂಡ ಜನರು ಯುವಕನನ್ನು ಹಿಡಿದು ಕಟ್ಟಿ ಹಾಕಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಖಾಜಾಮುದ್ಧೀನ್‌ನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮೇ 6ರಂದು ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ ಸನ್ಯಾಸ ದೀಕ್ಷೆ ಸ್ವೀಕಾರ

    ಥಳಿತಕ್ಕೆ ಒಳಗಾದ ಆರೋಪಿ ತಲೆಗೆ ಗಾಯವಾದ ಹಿನ್ನೆಲೆಯಲ್ಲಿ ಈಗ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಮಟೆ ತಾಳಕ್ಕೆ ಸಚಿವ ಜಿಟಿಡಿಯಿಂದ ಬಿಂದಾಸ್ ಸ್ಟೆಪ್ಸ್

    ತಮಟೆ ತಾಳಕ್ಕೆ ಸಚಿವ ಜಿಟಿಡಿಯಿಂದ ಬಿಂದಾಸ್ ಸ್ಟೆಪ್ಸ್

    ಮೈಸೂರು: ಬಸವ ಜಯಂತಿ ಮೆರವಣಿಗೆಯಲ್ಲಿ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

    ಇಂದು ಮೈಸೂರಿನಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಈ ವೇಳೆ ಅಲ್ಲಿ ಬಾರಿಸಿದ ತಮಟೆ ತಾಳಕ್ಕೆ ಜಿ. ಟಿ ದೇವೇಗೌಡರು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಜಿಟಿಡಿ ಅವರಿಗೆ ಪಾಲಿಕೆ ಸದಸ್ಯ ಬಿ.ವಿ ಮಂಜುನಾಥ್ ಕೂಡ ಸಾಥ್ ನೀಡಿದರು.

    ಇಂದು ಮೈಸೂರಿನಲ್ಲಿ ಗಣ್ಯರು ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಸುತ್ತೂರು ಶ್ರೀ, ಸಚಿವ ಜಿಟಿ ದೇವೇಗೌಡ, ಶಾಸಕ ಎಲ್. ನಾಗೇಂದ್ರ ಅವರು ಗನ್ ಹೌಸ್ ಬಳಿ ಇರುವ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ಕಾರ್ಯಕ್ರಮ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದ್ದು, ವಿವಿಧ ವೀರಶೈವ ಸಂಘ ಸಂಸ್ಥೆಗಳಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.

  • ಬಿಎಸ್‍ವೈ ಭಾವಚಿತ್ರವನ್ನು ಚಿಕ್ಕದಾಗಿ ಹಾಕಿದ್ದಕ್ಕೆ ಅಭಿಮಾನಿಯ ಆಕ್ರೋಶ

    ಬಿಎಸ್‍ವೈ ಭಾವಚಿತ್ರವನ್ನು ಚಿಕ್ಕದಾಗಿ ಹಾಕಿದ್ದಕ್ಕೆ ಅಭಿಮಾನಿಯ ಆಕ್ರೋಶ

    ಮೈಸೂರು: ಜಾಹೀರಾತಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪವರ ಭಾವಚಿತ್ರವನ್ನು ಚಿಕ್ಕದ್ದಾಗಿ ಹಾಕಿದ್ದಕ್ಕೆ ಬಸವ ಜಯಂತಿ ಸಭಾ ಕಾರ್ಯಕ್ರಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ಸುತ್ತೂರು ಮಠದ ಆವರಣದಲ್ಲಿ ನಡೆಯುತ್ತಿರುವ ಬಸವ ಜಯಂತಿ ಸಂಬಂಧ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಲಾಗಿತ್ತು.

    ಬಸವ ಜಯಂತಿಗೆ ಶುಭಾಶಯ ಕೋರಿ ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಪತ್ರಿಕಾ ಜಾಹೀರಾತು ನೀಡಿದ್ದಾರೆ. ಈ ಜಾಹೀರಾತಿನಲ್ಲಿ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳ ಭಾವಚಿತ್ರ ಹಾಕಿಸಲಾಗಿದೆ. ಜೆಡಿಎಸ್, ಕಾಂಗ್ರೆಸ್ ನಗರಾಧ್ಯಕ್ಷರ ಫೋಟೋ, ಬಿಜೆಪಿ ಸಂಸದರ ಫೋಟೋ ಎಲ್ಲವನ್ನೂ ದೊಡ್ಡದಾಗಿ ಹಾಕಿಸಲಾಗಿದೆ. ಆದರೆ ಜಾಹೀರಾತಿನ ಕೆಳ ಸಾಲಿನ ಗುಂಪಿನಲ್ಲಿ ಚಿಕ್ಕದಾಗಿ ಬಿ.ಎಸ್. ಯಡಿಯೂರಪ್ಪ ಭಾವಚಿತ್ರ ಹಾಕಲಾಗಿದೆ. ಇದರಿಂದ ಯಡಿಯೂರಪ್ಪವರ ಅಭಿಮಾನಿ ಬಸವ ಜಯಂತಿಯ ಸಭಾ ಕಾರ್ಯಕ್ರಮ ನಡೆಯುವ ವೇಳೆ ಆಕ್ರೋಶ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಮುಂದಾದರು.

    ಯಡಿಯೂರಪ್ಪವರು ವೀರಶೈವ ಸಮಾಜದ ಕಳಸ ಹಾಗಾಗಿ ಅವರ ಭಾವಚಿತ್ರವನ್ನು ಸಣ್ಣದಾಗಿ ಹಾಕಿ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಭಾವಚಿತ್ರವನ್ನು ದೊಡ್ಡದಾಗಿ ಹಾಕಿದ್ದಾರೆ. ಅವರ ಜೊತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಭಾವಚಿತ್ರ ದೊಡ್ಡದಾಗಿ ಹಾಕಿಸಿದ್ದಾರೆ. ಆದರೆ ಬಿಎಸ್‍ವೈ ಚಿತ್ರ ಸಣ್ಣದಾಗಿ ಹಾಕಿ ಅವಮಾನ ಮಾಡಲಾಗಿದೆ ವೇದಿಕೆ ಮುಂಭಾಗ ಯಡಿಯೂರಪ್ಪ ಅಭಿಮಾನಿ ಕೂಗಾಡಿದರು.

  • ಬಸವ ಜಯಂತಿಗೆ ಸಚಿವ ತನ್ವೀರ್ ಸೇಠ್ ಗೈರು: ಶಾಸಕರಿಂದ ಕ್ಷಮೆಯಾಚನೆಗೆ ಆಗ್ರಹ

    ಬಸವ ಜಯಂತಿಗೆ ಸಚಿವ ತನ್ವೀರ್ ಸೇಠ್ ಗೈರು: ಶಾಸಕರಿಂದ ಕ್ಷಮೆಯಾಚನೆಗೆ ಆಗ್ರಹ

    ರಾಯಚೂರು: ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನ ರಾಯಚೂರಿನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ನಗರದ ಬಸವೇಶ್ವರ ವೃತ್ತದಲ್ಲಿ ಮಾಲಾರ್ಪಣೆ ಮೂಲಕ ಗಣ್ಯರು ಬಸವ ಜಯಂತಿಗೆ ಚಾಲನೆ ನೀಡಿದರು. ಯುವಕರು ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿದ್ರು. ಬಳಿಕ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಸವಣ್ಣನವರ ವಿಚಾರಗಳ ಬಗ್ಗೆ ಹಲವಾರು ಗಣ್ಯರು ಬೆಳಕು ಚೆಲ್ಲಿದ್ರು.

    ಈ ವೇಳೆ ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಗೈರಿನ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ಆಗಮಿಸದೆ ಸಚಿವರು ಬಸವ ಅನುವಾಯಿಗಳ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಅಂತ ತಿಪ್ಪರಾಜು ಆಗ್ರಹಿಸಿದರು.

    ಕಾರ್ಯಕ್ರಮದಲ್ಲಿ ರಾಯಚೂರು ಸಂಸದ ಬಿ.ವಿ.ನಾಯಕ್, ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಇನ್ನೂ ಸಂಜೆ ವೇಳೆ ನಗರದ ವೀರಭದ್ರೇಶ್ವರ ದೇವಾಲಯದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬಸವಣ್ಣ ಭಾವಚಿತ್ರ ಮೆರವಣಿಗೆ ನಡೆಯಲಿದೆ.

     

  • ಅಂತರಾಷ್ಟ್ರೀಯ ಬಸವ ಜಯಂತಿ- 23 ಭಾಷೆಗಳಲ್ಲಿ ವಚನ ಮುದ್ರಣ, ಮೋದಿಯಿಂದ ಪುಸ್ತಕ ಬಿಡುಗಡೆ

    ಅಂತರಾಷ್ಟ್ರೀಯ ಬಸವ ಜಯಂತಿ- 23 ಭಾಷೆಗಳಲ್ಲಿ ವಚನ ಮುದ್ರಣ, ಮೋದಿಯಿಂದ ಪುಸ್ತಕ ಬಿಡುಗಡೆ

    ಬೆಂಗಳೂರು: ರಾಜ್ಯ ಬಸವ ಸಮಿತಿಗೆ ಐವತ್ತು ವರ್ಷ ಆದ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಬಸವ ಜಯಂತಿ ಆಚರಿಸಲು ಬಸವ ಸಮಿತಿ ನಿರ್ಧರಿಸಿದೆ.

    ಬೆಳಗ್ಗೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಮೊದಲ ಅಂತರಾಷ್ಟ್ರೀಯ ಬಸವ ಜಯಂತಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದೇ ವೇಳೆ 23 ರಾಜ್ಯದ ವಿವಿಧ ಭಾಷೆಗಳಲ್ಲಿ 2 ಸಾವಿರದ 500 ವಚನಗಳನ್ನು ಮುದ್ರಿಸಲಾಗಿದ್ದು ಈ ಪುಸ್ತಕವನ್ನು ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ.

    200ಕ್ಕೂ ಅಧಿಕ ಭಾಷಾ ತಜ್ಞರು ಸೇರಿ ತಯಾರು ಮಾಡಿರುವ ಈ ವಚನಗಳ ಬಂಢಾರ ಇಂಗ್ಲಿಷ್, ಹಿಂದಿ, ತಮಿಳು, ಉರ್ದು, ಸಂಸ್ಕೃತ, ತಮಿಳು ಹೀಗೆ 23 ಭಾಷೆಗಳಲ್ಲಿ ಪ್ರಕಟವಾಗಲಿದ್ದು ಬಸವಣ್ಣನವರ ತತ್ವಗಳನ್ನು ದೇಶದ ತುಂಬಾ ಹರಡುವ ಯೋಜನೆಗೆ ಬಸವ ಸಮಿತಿ ಮುಂದಾಗಿದೆ.