Tag: Basanaguda Patil Yatnal

  • ಟ್ಯಾಗ್ ಮಾಡದೇ ಹೆಸರು ಬರೆದು ಟಾಂಗ್ ಕೊಟ್ಟ ಕಾಂಗ್ರೆಸ್‍ಗೆ ಯತ್ನಾಳ್ ತಿರುಗೇಟು

    ಟ್ಯಾಗ್ ಮಾಡದೇ ಹೆಸರು ಬರೆದು ಟಾಂಗ್ ಕೊಟ್ಟ ಕಾಂಗ್ರೆಸ್‍ಗೆ ಯತ್ನಾಳ್ ತಿರುಗೇಟು

    ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಗಳ ಜಟಾಪಟಿ ನಡುವೆ ಬಿಜೆಪಿಯ (BJP Notice) ಶಿಸ್ತು ಸಮಿತಿ ನೋಟಿಸ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಸಂಬಂಧ ಹೆಸರು ಬರೆದು ಟಾಂಗ್ ಕೊಟ್ಟ ಕಾಂಗ್ರೆಸ್‍ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತಿರುಗೇಟು ನೀಡಿದ್ದಾರೆ.

    ಹೌದು. ಶಿಸ್ತುಕ್ರಮದ ಕುರಿತು ಬರೆಯುತ್ತಾ ಪ್ರತಾಪ್ ಸಿಂಹ (Pratap Simha) ಅವರನ್ನು ಟ್ಯಾಗ್ ಮಾಡಿ ಯತ್ನಾಳ್ ಅವರನ್ನು ಟ್ಯಾಗ್ ಮಾಡದೇ ಅವರ ಹೆಸರನ್ನು ಕಾಂಗ್ರೆಸ್ ಬರೆದುಕೊಂಡಿದೆ. ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಯತ್ನಾಳ್, ನನ್ನನ್ನು ಟ್ಯಾಗ್ ಮಾಡಿದ್ರೆ ಜಾಡಿಸ್ತೀನಿ ಅಂತ, ಹೆಸರು ಬರೆದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.

    ಕಾಂಗ್ರೆಸ್ ಟ್ವೀಟ್‍ನಲ್ಲೇನಿದೆ..?: ಬಿಜೆಪಿಯಲ್ಲಿ ಶಿಸ್ತಿನ ಪಾಠ ಕೇವಲ ಬಿಎಸ್‍ವೈ ಬ್ರಿಗೇಡ್‍ಗೆ ಮಾತ್ರವೇ?. ಬೊಮ್ಮಾಯಿಯವರ ವಿರುದ್ಧ ಮಾತನಾಡಿದ ಪ್ರತಾಪ್ ಸಿಂಹರಿಗೆ ಶಿಸ್ತುಕ್ರಮದ ನೋಟಿಸ್ ಇಲ್ಲ. ಬಿಎಸ್‍ವೈ ವಿರುದ್ಧ ಅಬ್ಬರಿಸಿದ್ದ ಯತ್ನಾಳರಿಗೆ ನೋಟಿಸ್ ಇಲ್ಲ. ನಿರಾಣಿ ವಿರುದ್ಧ ಮಾತನಾಡಿದವರಿಗೆ ನೋಟಿಸ್ ಇಲ್ಲ.

    ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವವನ್ನು ಹಾಗೂ ಬಿಎಸ್‍ವೈ (B S Yediyurappa) ಬೆಂಬಲಿಗರನ್ನು ಸಂಪೂರ್ಣ ಮುಗಿಸಿಹಾಕಲು ಸಂತೋಷ ಕೂಟ ಪಣ ತೊಟ್ಟಿದೆ ಎಂದು ಬರೆದು ಬಿಎಸ್‍ವೈ ಹಾಗೂ ಪ್ರತಾಪ್ ಸಿಂಹಗೆ ಕಾಂಗ್ರೆಸ್ ಟ್ಯಾಗ್ ಮಾಡಿದೆ.

    ಯತ್ನಾಳ್ ತಿರುಗೇಟು: ನಮ್ಮ ಪಕ್ಷದ ಆಂತರಿಕ ವಿಚಾರ ನಿಮಗೆ ಏನು ಸಂಬಂಧ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ನಮ್ಮಲ್ಲಿ “Internal Democracy” ಇದೆ, Dont Disturb ಅಂತ ಗದರಿಸುವ ಸಂಸ್ಕೃತಿ ಇಲ್ಲ. ನನ್ನನ್ನು ಟ್ಯಾಗ್ ಮಾಡಿದ್ರೆ ಜಾಡಿಸ್ತೀನಿ ಅಂತ, ಹೆಸರು ಬರೆದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ. ನಿಮ್ಮ ಮಹದೇವಪ್ಪನಿಗೆ, ಕಾಕಪಾಟಿಲನಿಗೆ ಕೊಟ್ಟಿದ್ದ ಮಾತು ಪೂರೈಸಲು ಕೆಲಸ ಮಾಡಿ ಎಂದು ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈಕಮಾಂಡ್ ಗಮನಿಸುತ್ತಿದೆ, ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ: ಯತ್ನಾಳ್

    ಹೈಕಮಾಂಡ್ ಗಮನಿಸುತ್ತಿದೆ, ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ: ಯತ್ನಾಳ್

    ಬೆಂಗಳೂರು: ಯಾರ ಹೆಸರನ್ನೂ ಉಲ್ಲೇಖಿಸದೇ ವಂಶಾಡಳಿತ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಕ್ರೋಶ ಹೊರಹಾಕಿದ್ದಾರೆ.

    ಈ ಕುರಿತು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ್, ಪಕ್ಷದ ಹೈಕಮಾಂಡ್ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದೆ. ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಹೇಳುವ ಮೂಲಕ ಹೆಸರನ್ನು ಹೇಳದೇ ತಮ್ಮದೇ ಪಕ್ಷದ ಕೆಲವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ
    ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರು ನಮ್ಮ ದೇಶದ ವಂಶಾಡಳಿತ ರಾಜಕೀಯ ವ್ಯವಸ್ಥೆ ಬಗ್ಗೆ ಹಾಗೂ ವಂಶಾಡಳಿತ ಭ್ರಷ್ಟಾಚಾರವನ್ನು ಬೇರು ಸಮೇತವಾಗಿ ಕಿತ್ತೊಗೆಯುವ ಘೋಷಣೆ ಮಾಡಿದ್ದು ರಾಷ್ಟ್ರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ರಾಷ್ಟ್ರವನ್ನು ಎರಡು ಬಾರಿ ಉದ್ದೇಶಿಸಿ ಮಾತನಾಡಿದ ಅವರು ವಂಶಾಡಳಿತ ಕುಟುಂಬಗಳ ನಡೆಸಿರುವ ವ್ಯಾಪಕ ಭ್ರಷ್ಟಾಚಾರ, ದುರಂಕಾರ, ಇಡಿ ಕುಟುಂಬ ಅಧಿಕಾರದ ಐಷಾರಾಮಿ ಜೀವನ ನಿಜಕ್ಕೂ ಹೇಸಿಗೆ ತರುವಂತಹುದು ಎಂದಿದ್ದಾರೆ.

    ಪಕ್ಷಕ್ಕಾಗಿ ಪೂರ್ತಿ ಜೀವನ ಹಗಲು ರಾತ್ರಿ ಮನೆ ಮಠ ಬಿಟ್ಟು ದುಡಿದು ಕರ್ಮಟ ಕಾರ್ಯಕರ್ತರು ಯಾವುದೇ ಅಧಿಕಾರ ಅನುಭವಿಸದೆ ತಮ್ಮ ಜೀವನದ ಅಂತ್ಯದಲ್ಲಿ ಆರೋಗ್ಯ, ಆರ್ಥಿಕ ಮತ್ತು ವ್ಯಕ್ತಿಗತ ಹಾಳು ಮಾಡಿಕೊಂಡಿರುವ ಕಾರ್ಯಕರ್ತರಿಗೆ ಹೊಸ ಆಶಾಕಿರಣ ಮೂಡಿಸಿದೆ. ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರು ನಮ್ಮ ದೇಶದ ಎಲ್ಲ ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರಿಗೆ ಹೊಸ ಆಶಾಕಿರಣ ಮೂಡಿಸಿದ್ದು, ನಾನು ಅವರಿಗೆ ಹೃದಯ ಪೂರ್ವಕ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಕೊನೆಯಲ್ಲಿ ಪಕ್ಷದ ಹೈಕಮಾಂಡ್ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದೆ. ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಬರೆದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

  • ಬ್ಲಡ್‍ಲೆಸ್ ಬಕ್ರಿದ್, ನಾಯ್ಸ್ ಲೆಸ್ ಫ್ರೈಡೇನೂ ಮಾಡೋಣ – ಪಟಾಕಿ ನಿಷೇಧಕ್ಕೆ ಯತ್ನಾಳ್ ಗರಂ

    ಬ್ಲಡ್‍ಲೆಸ್ ಬಕ್ರಿದ್, ನಾಯ್ಸ್ ಲೆಸ್ ಫ್ರೈಡೇನೂ ಮಾಡೋಣ – ಪಟಾಕಿ ನಿಷೇಧಕ್ಕೆ ಯತ್ನಾಳ್ ಗರಂ

    ಬೆಂಗಳೂರು: ರಾಜ್ಯ ಸರ್ಕಾರ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡಿರುವುದಕ್ಕೆ ಅಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮದೇ ಸರ್ಕಾರವನ್ನು ಕುಟುಕಿರುವ ಯತ್ನಾಳ್, ಇಕೋ ಫ್ರೆಂಡ್ಲಿ ಗಣೇಶ ಹಬ್ಬ ಮತ್ತು ನಾಯ್ಸ್ ಲೆಸ್ ದೀಪಾವಳಿ ರೀತಿಯಲ್ಲೇ ಬ್ಲಡ್‍ಲೆಸ್ ಬಕ್ರೀದ್, ನಾಯ್ಸ್ ಲೆಸ್ ಫ್ರೈಡೇನೂ ಮಡೋಣ ಎಂದು ಪೋಸ್ಟ್ ಹಾಕಿದ್ದಾರೆ.

    ಈ ವಿಚಾರವಾಗಿ ಫೇಸ್‍ಬುಕ್ ಪೋಸ್ಟ್ ಹಾಕಿರುವ ಅವರು, ಹಿಂದೂಗಳು ಸಾಮೂಹಿಕವಾಗಿ ಸೇರುವುದೇ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬ, ದಸರಾ-ದುರ್ಗಪೂಜೆ ಮತ್ತು ದೀಪವಾಳಿ ಸಮಯದಲ್ಲಿ. ಆದರೆ ಗಣೇಶ ಹಬ್ಬ ಬಂದ್ರೆ ಇಕೋ ಫ್ರೆಂಡ್ಲಿ ಗಣೇಶ ಹಬ್ಬ, ದೀಪಾವಳಿ ಬಂದ್ರೆ ನಾಯ್ಸ್ ಲೆಸ್ ದೀಪಾವಳಿ ಮಾಡಿ ಎಂದು ಭೋದನೆ ಮಾಡುತ್ತಾರೆ ಎಂದು ತಮ್ಮದೇ ಪಕ್ಷದ ತೀರ್ಮಾನಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಇದರ ಜೊತೆಗೆ ಇಕೋ ಫ್ರೆಂಡ್ಲಿ ಗಣೇಶ ಹಬ್ಬ ಮತ್ತು ನಾಯ್ಸ್ ಲೆಸ್ ದೀಪಾವಳಿ ಇವುಗಳ ಜೊತೆಗೆ ನಾಯ್ಸ್ ಲೆಸ್ ಫ್ರೈಡೇ, ಬ್ಲಡ್‍ಲೆಸ್ ಬಕ್ರಿದ್ ನತ್ತು ಕ್ರ್ಯಾಕರ್ಲೆಸ್ ಡಿಸೆಂಬರ್ 31 ನೈಟ್ ಇವೆಲ್ಲವುಗಳನ್ನು ಮಡೋಣ. ಬಕ್ರಿದ್‍ನಲ್ಲಿ ರಕ್ತ ಹರಿಸುವುದು ಬೇಡ. ಡಿಸೆಂಬರ್ 31ರಂದು ಪಟಾಕಿ ಹೊಡೆಯುವುದು ಬೇಡ. ಫ್ರೈಡೇ ಸ್ಪೀಕರಿನಲ್ಲಿ ಕೂಗುವುದು ಬೇಡ. ರಸ್ತೆ ಮೇಲೆ ನಮಾಜು ಮಾಡುವುದು ಬೇಡ. ಬೀದಿಲಿ ಪಟಾಕಿ ಹೊಡೆಯೋದು ಬೇಡ. ನಾವೆಲ್ಲ ಮನೆಯಲ್ಲಿ ದೀಪ ಹಚ್ಚುತ್ತೇವೆ, ಅವರು ಸ್ಪೀಕರ್ ಹಚ್ಚದೇ ನಾಮಜು ಮಾಡಲಿ ರಸ್ತೆ ಮೇಲೆ ಬೇಡ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.