Tag: Basanagowda Patil Yatna

  • ಜಮೀರ್‌ಗೆ ಬಿಜೆಪಿ `ಮಹಾನಾಯಕ’ನ ಬೆಂಬಲವಿದೆ, ನಮ್ಮವರೇ ಸುಲಿಗೆ ಮಾಡುತ್ತಿದ್ದಾರೆ: ಯತ್ನಾಳ್

    ಜಮೀರ್‌ಗೆ ಬಿಜೆಪಿ `ಮಹಾನಾಯಕ’ನ ಬೆಂಬಲವಿದೆ, ನಮ್ಮವರೇ ಸುಲಿಗೆ ಮಾಡುತ್ತಿದ್ದಾರೆ: ಯತ್ನಾಳ್

    ವಿಜಯಪುರ: ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಬಿಜೆಪಿ ಮಹಾನಾಯಕನ ಬೆಂಬಲವಿದೆ, ನಮ್ಮವರೇ ವಸೂಲಿ ಮಾಡುತ್ತಿದ್ದಾರೆ. ಅಡ್ಜಸ್ಟ್‌ಮೆಂಟ್‌ ಇರೋದ್ರಿಂದಾನೇ ಇದೆಲ್ಲ ಆಗುತ್ತಿದೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಿಡಿ ಕಾರಿದರು.

    BasangoudaPatilYatnal

    ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ತೂರಾಟ ನಡೆಸಿದವರಿಗೆ ಶಾಸಕ ಜಮೀರ್ ಅಹ್ಮದ್‌ಖಾನ್ ಕಡೆಯಿಂದ ಆಹಾರದ ಕಿಟ್ ವಿತರಣೆಯಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜಮೀರ್ ಅವರು ಹಿಂದೂ ವಿರೋಧಿ ಕೆಲಸಗಳನ್ನೇ ಮಾಡುತ್ತಿದ್ದಾರೆ. ಈಗ ಕಲ್ಲು ಹೊಡೆದವರಿಗೆ ಸಹಾಯ ಮಾಡುತ್ತಿದ್ದಾರೆ. ಇದರಲ್ಲಿ ನಮ್ಮವರ ವಸೂಲಿಯೂ ಇದೆ. ಬಿಜೆಪಿ ಮಹಾನಾಯಕನ ಬೆಂಬಲವಿದೆ. ಈ ಅಡ್ಜಸ್ಟ್‌ಮೆಂಟ್‌ ಇರೋದ್ರಿಂದಾನೇ ಇದೆಲ್ಲ ನಡೆಯುತ್ತಿದೆ ಎಂದು ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು

    Basanagowda Yatnal,

    ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವವರನ್ನೆಲ್ಲ ಬಂಧಿಸುತ್ತಿರುವಾಗ, ಇವರನ್ನೇಕೆ ಬಿಟ್ಟಿದ್ದಾರೆ? ಗೃಹ ಸಚಿವರು ಶಾಸಕ ಜಮೀರ್‌ನನ್ನು ಈ ಕೂಡಲೆ ಒದ್ದು ಒಳಗೆ ಹಾಕಿಸಬೇಕು. ಸಿದ್ದರಾಮ್ಯಯ ಅವರೇ ಜಮೀರ್‌ನನ್ನು ಪಕ್ಷದಿಂದ ಕಿತ್ತು ಒಗೆದಿದ್ದಾರೆ. ಈ ಬಗ್ಗೆಯೂ ಜಮೀರ್ ಪ್ರತಿಕ್ರಿಯೆ ಕೊಟ್ಟಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಯತ್ನಾಳ್ ಆಗ್ರಹಿಸಿದರು. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು 

    ZAMEER AHMAD KHAN

    ಇದೇ ವೇಳೆ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೆ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ರಾಜ್ಯದಲ್ಲಿ ಈಗಾಗಲೇ ಸಚಿವ ಸಂಪುಟ ಬದಲಾವಣೆ ಆಗಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡಿದೆ ಎಂದರು.

  • ವಿಜಯೇಂದ್ರನ ಶಿಷ್ಯರು ಶಾಸಕರ ನಕಲಿ ಸಿಡಿ ಮಾಡ್ತಾರೆ: ಯತ್ನಾಳ್

    ವಿಜಯೇಂದ್ರನ ಶಿಷ್ಯರು ಶಾಸಕರ ನಕಲಿ ಸಿಡಿ ಮಾಡ್ತಾರೆ: ಯತ್ನಾಳ್

    – ದಾಲ್ ಮೇ ಕುಚ್ ಕಾಲಾ ಹೈ

    ವಿಜಯಪುರ: ಸಿಎಂ ಪುತ್ರ ಬಿ.ವೈ.ವಿಜಯೇಂದ್ರನ ಶಿಷ್ಯರು ಕೆಲ ಶಾಸಕರ ನಕಲಿ ಸಿಡಿ ಮಾಡುವ ಕೆಲಸ ಮಾಡ್ತಾರೆ ಅಂತ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಕೇವಲ ಮಂತ್ರಿ ಆಗಲು ಯತ್ನಾಳ್ ಟೀಕೆ ಮಾಡುತ್ತಿದ್ದಾನೆ ಅನ್ನೋ ತಪ್ಪು ಸಂದೇಶ ರವಾನಿಸುವ ಕೆಲಸವನ್ನ ಸಚಿವರಾದ ಜಗದೀಶ್ ಶೆಟ್ಟರ್ ಮತ್ತು ಕೆ.ಎಸ್.ಈಶ್ವರಪ್ಪ ಮಾಡುತ್ತಿದ್ದಾರೆ. ನಾನು ಎಂದೂ ಯಾರ ಬಳಿಯೂ ಮಂತ್ರಿ ಮಾಡಿ ಎಂದು ಬಯೋಡೇಟಾ ಹಿಡಿದು ಹೋದವನು ನಾನಲ್ಲ. ಈಶ್ವರಪ್ಪ ಬಳಿ ಆ ರೀತಿಯ ದಾಖಲೆಗಳಿದ್ರೆ ಬಿಡುಗಡೆ ಮಾಡಲಿ. ಶೆಟ್ಟರ್ ಅವರನ್ನ ಮಂತ್ರಿಯಾದ್ಮೇಲೆ ಒಮ್ಮೆ ಮಾತ್ರ ಭೇಟಿಯಾಗಿದ್ದೇನೆ. ಶೆಟ್ಟರ್ ಸೋದರನ ಜೊತೆ ಸೇರಿ ಏನು ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.

    ವಿಜಯಪುರ ನಗರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಕೇಳಿದ್ದೆ. ಅಂದು ಅವರೇ 23 ಕೋಟಿ ತತಕ್ಷಣ ಬಿಡುಗಡೆ ಮಾಡಬೇಕೆಂದು ಹೇಳಿದರು. ಆದ್ರೆ ಹಣಕಾಸಿನ ಕಚೇರಿಯಲ್ಲಿ ಹಣ ನೀಡಲ್ಲ. ಬಿಜೆಪಿ ಶಾಸಕರಿಗೆ ಹಣ ನೀಡದಂತೆ ಅವರೇ ಹೇಳಿದ್ದಾರಂತೆ. ಆದ್ರೆ ವಿರೋಧ ಪಕ್ಷದ ನಾಯಕರಿಗೆ ನೂರು ನೂರು ಕೋಟಿ ಹಣ ನೀಡಿದ್ಯಾಕೆ ಅಂತ ಪ್ರಶ್ನೆ ಮಾಡಿದರು.

    ಸಿಎಂ ಯಡಿಯೂರಪ್ಪನವರ ಮನೆಯಲ್ಲೇ ಒಂದು ಟೀಂ ಇದೆ. ವಿಜಯೇಂದ್ರನ ಶಿಷ್ಯರು ಕೆಲ ಶಾಸಕರದ್ದು ಇದೇ ರೀತಿ ನಕಲಿ ಸಿಡಿ ಮಾಡ್ತಾರೆ. ವಿಜಯೇಂದ್ರ ಬಳಿ ಯಾರ ಯಾರದ್ದು ಸಿಡಿ ಇದೆ ಅಂತ ನನಗೆ ಗೊತ್ತಿದೆ. ಸಮಯ ಬಂದಾಗ ಎಲ್ಲ ವಿಷಯವನ್ನ ದಾಖಲೆ ಸಮೇತ ಹೇಳುತ್ತೇನೆ. ಇಂದು ಅಮಿತ್ ಶಾ ಬಳಿ ಯಾವುದೇ ದೂರು ಸಲ್ಲಿಸಲ್ಲ. ದೆಹಲಿಗೆ ತೆರಳಿ ಈ ಬಗ್ಗೆ ಮಾತನಾಡುತ್ತೇನೆ ಎಂದರು.

  • ಯತ್ನಾಳ್‍ಗಿರೋ ಗಟ್ಸ್ ರಾಜ್ಯ ಬಿಜೆಪಿ ನಾಯಕರಿಗಿಲ್ಲ: ಹೊರಟ್ಟಿ

    ಯತ್ನಾಳ್‍ಗಿರೋ ಗಟ್ಸ್ ರಾಜ್ಯ ಬಿಜೆಪಿ ನಾಯಕರಿಗಿಲ್ಲ: ಹೊರಟ್ಟಿ

    – ಮುಂದೆ ಯತ್ನಾಳ್ ಸಿಎಂ ಆಗಬಹುದು

    ಚಿಕ್ಕಬಳ್ಳಾಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಇರೋ ಗಟ್ಸ್ ರಾಜು ಬಿಜೆಪಿ ನಾಯಕರಿಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೊರಟ್ಟಿ, ಬಿಜೆಪಿ ಹೈಕಮಾಂಡ್ ತನ್ನ ಅಭಿಪ್ರಾಯಗಳನ್ನು ಯತ್ನಾಳ್ ಅವರ ಮೂಲಕ ಹೇಳಿಸುತ್ತಿದೆ. ಹಾಗಾಗಿ ಯತ್ನಾಳ್ ವರಿಗೆ ಬಿಜೆಪಿ ಹೈಕಮಾಂಡ್ ಶ್ರೀರಕ್ಷೆ ಇರುವ ಕಾರಣಕ್ಕೆ ರಾಜ್ಯ ಬಿಜೆಪಿ ನಾಯಕರು ಕ್ರಮ ಕೈಗೊಳ್ಳಲು ಆಗಿಲ್ಲ. ಈ ರೀತಿ ಬೇರೆ ಯಾರಾದ್ರೂ ಮಾತಾಡಿದ್ರೆ ಪಕ್ಷದಿಂದ ಕ್ಷಣಾರ್ಧದಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡುತ್ತಿದ್ದರು. ಇನ್ನು ಈಶ್ವರಪ್ಪ ಸಹ ಹಿಂದೆ ಇದನ್ನೇ ಮಾಡಿದ್ದರು ಎಂದರು.

    ಯಾರ ಬೆಂಬಲವಿಲ್ಲದೇ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಲು ಬರಲ್ಲ. ಯತ್ನಾಳ್ ಅವರಿಗೆ ಉತ್ತರ ಕರ್ನಾಟಕ ಭಾಗದವರನ್ನೇ ಮುಖ್ಯಮಂತ್ರಿ ಮಾಡಲಾಗುದು ಎಂದು ಹೇಳಿರಬೇಕು. ಹಾಗಾಗಿ ಅಷ್ಟು ಗಟ್ಟಿಯಾಗಿ ಸಿಎಂ ಬದಲಾವಣೆ ಕುರಿತು ಹೇಳಿತ್ತಿದ್ದಾರೆ. ಮುಂದೆ ಯತ್ನಾಳ್ ಅವರೇ ಸಿಎಂ ಅಗಬಹುದು ಎಂದು ಹೊರಟ್ಟಿ ಭವಿಷ್ಯ ನುಡಿದರು. ಇದನ್ನೂ ಓದಿ: ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ-ಮತ್ತೆ ಯತ್ನಾಳ್ ಕಿಡಿ

    ಯತ್ನಾಳ್ ಹೇಳಿದ್ದೇನು?: ಬಿಎಸ್‍ವೈ ಸಿಎಂ ಆಗಿ ಬಹಳ ದಿನ ಉಳಿಯುವುದಿಲ್ಲ. ಕೇಂದ್ರ ಸರ್ಕಾರದವರಿಗೂ ಸಿಎಂ ಬಿಎಸ್‍ವೈ ಸಾಕಾಗಿ ಹೋಗಿದ್ದಾರೆ. ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗುತ್ತಾರೆ. ಉತ್ತರ ಕರ್ನಾಟಕದವರು 100 ಶಾಸಕರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುತ್ತಾರೆ. ಆದರೆ ಉಳಿದ ಭಾಗದಲ್ಲಿ ಕೇವಲ 15 ಶಾಸಕರು ಬಿಜೆಪಿಯಿಂದ ಗೆದ್ದು ಅವರಲ್ಲೇ ಒಬ್ಬರು ಸಿಎಂ ಆಗುತ್ತಾರೆ. ಹೀಗಾಗಿ ಮುಂದಿನ ಬಾರಿ ಉತ್ತರ ಕರ್ನಾಟಕದವರೇ ಸಿಎಂ ಆಗೋದು ಪಕ್ಕಾ. ಜೊತೆಗೆ ಉತ್ತರ ಕರ್ನಾಟಕದವರನ್ನೇ ಸಿಎಂ ಮಾಡುವ ಭರವಸೆಯನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಇದನ್ನೂ ಓದಿ: ಕಾಲಾಯ ತಸ್ಮೈ ನಮಃ – ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ಮಾರ್ಮಿಕ ನುಡಿ

    ಇತ್ತ ಯತ್ನಾಳ್ ಹೇಳಿಕೆ ಬೆನ್ನಲ್ಲೇ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಅವರನ್ನ ಪಕ್ಷದಿಂದ ಉಚ್ಛಾಟಿಸಬೇಕು. ಯತ್ನಾಳ್ ಉತ್ತರನ ಪೌರುಷನಂತೆ ಮೂರ್ಖತನದ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ, ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದರು.