Tag: Basanagoda Patil Yatnal

  • ರೈತರ ಆಸ್ತಿ ಒಂದಿಂಚೂ ಪಡೆದಿಲ್ಲ – ವಕ್ಫ್ ಆಸ್ತಿ ನಾವು ದಾಖಲಾತಿ ಮಾಡಿಕೊಂಡ್ರೆ ಏನು ತಪ್ಪು? – ಜಮೀರ್ ಪ್ರಶ್ನೆ

    ರೈತರ ಆಸ್ತಿ ಒಂದಿಂಚೂ ಪಡೆದಿಲ್ಲ – ವಕ್ಫ್ ಆಸ್ತಿ ನಾವು ದಾಖಲಾತಿ ಮಾಡಿಕೊಂಡ್ರೆ ಏನು ತಪ್ಪು? – ಜಮೀರ್ ಪ್ರಶ್ನೆ

    – ರೈತರ ಜಮೀನಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ಗೆ ಸಚಿವರ ಸಮರ್ಥನೆ

    ವಿಜಯಪುರ: ಇಲ್ಲಿನ ರೈತರ ಜಮೀನಿಗೆ ವಕ್ಫ್ ಬೋರ್ಡ್‌ನಿಂದ (Waqf Board) ನೀಡರುವ ನೊಟೀಸ್‌ನ್ನು ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಸಮರ್ಥನೆ ಮಾಡಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ರೈತರ ಒಂದಿಂಚು ಜಮೀನು ನಾವು ಪಡೆದಿಲ್ಲ. ವಿಜಯಪುರದಲ್ಲಿ (Vijayapura) ನಾವು ವಕ್ಫ್ ಅದಾಲತ್ ಮಾಡುತ್ತಿದ್ದೇವು. ಆ ಸಭೆಗೆ ಶಾಸಕ ಯತ್ನಾಳ್ (Basanagouda Patil Yatnal) ಅವರನ್ನು ಕರೆದಿದ್ದೇವು. ಆದರೆ ಅವರು ಆ ಸಭೆಗೆ ಬರಲಿಲ್ಲ. ಈಗ ಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಕೇಸ್‌ – 1ನೇ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸತೀಶ್‌ ರೈಗೆ 7 ವರ್ಷ ಜೈಲು

    ರೈತರ ಒಂದು ಇಂಚು ಆಸ್ತಿ ಪಡೆದಿಲ್ಲ. ರೈತರ ಆಸ್ತಿ ಆಗಿದ್ರೆ ಅದನ್ನ ವಾಪಸ್ ಕೊಡ್ತೀವಿ. ಸುಮ್ಮನೆ ಆರೋಪ ಮಾಡ್ತಿದ್ದಾರೆ. ವಕ್ಫ್ ಆಸ್ತಿ ದಾಖಲಾತಿ ಮಾಡ್ತಿದ್ದೇವೆ. ಅದರಲ್ಲಿ ರೈತರ ಜಾಗ ಯಾವುದೂ ಇಲ್ಲ. ಇವರು ಸುಮ್ಮನೆ ಕ್ರಿಯೇಟ್ ಮಾಡಿಕೊಂಡಿದ್ದಾರೆ. ರೈತರ ಆಸ್ತಿ ಯಾರು ಮುಟ್ಟೋಕೆ ಆಗುವುದಿಲ್ಲ ಎಂದು ನೊಟೀಸ್ ಸಮರ್ಥನೆ ಮಾಡಿಕೊಂಡರು.

    ಯತ್ನಾಳ್ ಮೀಟಿಂಗ್‌ಗೆ ಬರಲಿಲ್ಲ. 3 ದಿನ ಆದ ಮೇಲೆ ಆರೋಪ ಮಾಡ್ತಿದ್ದಾರೆ. ವಕ್ಫ್ ಆಸ್ತಿ ನಾವು ದಾಖಲಾತಿ ಮಾಡಿಕೊಂಡರೆ ಏನು ತಪ್ಪು? ನಾವು ರೈತರ ಆಸ್ತಿ ಒಂದಿಂಚು ಪಡೆದಿಲ್ಲ. ವಕ್ಫ್ ಆಸ್ತಿ ಖಾತಾ ಮಾಡ್ತಿದ್ದೇವೆ. ರೈತರ ಆಸ್ತಿ ನಾವು ಮುಟ್ಟಲ್ಲ. ಬೇರೆಯವರ ಜಾಗ ನಾವು ಹೇಗೆ ಪಡೆಯೋಕೆ ಆಗುತ್ತದೆ? ಯತ್ನಾಳ್ ಸಭೆಗೆ ಬಂದು ವಿರೋಧ ಮಾಡಬೇಕಿತ್ತು. ಯಾಕೆ ವಿರೋಧ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

    ವಿಜಯಪುರ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್:
    ವಿಜಯಪುರ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಎಂ ಬಿ ಪಾಟೀಲ (MB Patil) ಮತಕ್ಷೇತ್ರದ ಹೊನವಾಡ ಗ್ರಾಮದ ರೈತರ ಜಮೀನು ತನ್ನದೆಂದು ವಕ್ಫ್ ಬೋರ್ಡ್ ನೋಟಿಸ್ ನೀಡಿತ್ತು. ಇದ್ರಿಂದ ರೈತರು ಆತಂಕಗೊಂಡಿದ್ದಾರೆ. ಆದ್ರೆ, ಡಿಸಿ ಮಾತ್ರ, ಹೆದರಬೇಡಿ.. ನಿಮ್ಮಲ್ಲಿರುವ ಸೂಕ್ತ ದಾಖಲೆ ನೀಡಿ ಎಂದಿದ್ದರು. ಇದ್ರಿಂದ ತೃಪ್ತಗೊಳ್ಳದ ರೈತರು ವಕ್ಫ್ ಕಾಯ್ದೆ ಕುರಿತ ಸಂಸದೀಯ ಜಂಟಿ ಸದನ ಸಮಿತಿ ಸದಸ್ಯರು ಆಗಿರುವ ಸಂಸದ ತೇಜಸ್ವೀ ಸೂರ್ಯರನ್ನು ಭೇಟಿ ಮಾಡಿದ್ದರು. ನ್ಯಾಯ ಒದಗಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಿದ್ದರು.

    ಈ ವೇಳೆ ಮಾತನಾಡಿದ್ದ ಸಂಸದ ತೇಜಸ್ವಿ ಸೂರ್ಯ, ರೈತರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ತರಾತುರಿಯಲ್ಲಿ ನೀಡಲಾಗಿರುವ ವಕ್ಫ್ ಬೋರ್ಡ್ ನೋಟೀಸ್‌ನಿಂದ ರಾಜ್ಯದ ಸಾವಿರಾರು ರೈತರು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಶೀಘ್ರವೇ ಅವರ ಆತಂಕ ದೂರ ಮಾಡಿ, ನ್ಯಾಯ ನೀಡುವ ಕೆಲಸ ಮಾಡಲಾಗುವುದು ಅಂದ್ರು. ವಿಜಯಪುರ ಜಿಲ್ಲೆಯೊಂದರಲ್ಲೇ 15 ಸಾವಿರಕ್ಕೂ ಅಧಿಕ ಎಕರೆ ಕೆರೆ ಜಾಗವನ್ನು ವಕ್ಫ್, ತನ್ನ ಆಸ್ತಿ ಎಂದು ನೋಟೀಸ್ ಜಾರಿ ನೀಡಿದೆ ಎಂದು ತೇಜಸ್ವಿ ಸೂರ್ಯ ಆಪಾದಿಸಿದ್ದರು. ವಕ್ಫ್ ತಿದ್ದುಪಡಿ ಬಿಲ್ ಜಾರಿಗೆ ಮುನ್ನ ಸಾಧ್ಯವಾದಷ್ಟು ಜಾಗವನ್ನು ವಕ್ಫ್ ಹೆಸರಿಗೆ ನೋಂದಣಿ ಮಾಡಿಕೊಡುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡ್ತಿರೋದು ಅಕ್ಷಮ್ಯ ಎಂದು ತೇಜಸ್ವಿ ಸೂರ್ಯ ಕಿಡಿಕಾರಿದ್ದರು.ಇದನ್ನೂ ಓದಿ: ಶಿಗ್ಗಾಂವಿ ಕಾಂಗ್ರೆಸ್‌ ಬಂಡಾಯ ಶಮನ – ಅಜ್ಜಂಪೀರ್‌ ಮನವೊಲಿಸುವಲ್ಲಿ ಸಿಎಂ ಯಶಸ್ವಿ

  • 2,500 ಕೋಟಿ ಕೊಡಿ ನಿಮ್ಮನ್ನೂ ಸಿಎಂ ಮಾಡ್ತೀವಿ ಅಂದ್ರು: ಬಾಂಬ್ ಸಿಡಿಸಿದ ಯತ್ನಾಳ್

    2,500 ಕೋಟಿ ಕೊಡಿ ನಿಮ್ಮನ್ನೂ ಸಿಎಂ ಮಾಡ್ತೀವಿ ಅಂದ್ರು: ಬಾಂಬ್ ಸಿಡಿಸಿದ ಯತ್ನಾಳ್

    ಬೆಳಗಾವಿ: ದೆಹಲಿಯಿಂದ ಬಂದ ಕೆಲವರು 2500 ಕೋಟಿ ಕೊಡಿ ನಿಮ್ಮನ್ನು ಸಿಎಂ ಮಾಡ್ತೀವಿ ಅಂತಾ ಹೇಳಿದ್ರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

    ರಾಮದುರ್ಗದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ಕೆಲವರು ನಿಮಗೆ ಟಿಕೆಟ್ ಕೊಡಿಸುತ್ತೇವೆ, ದೆಹಲಿ ಕರೆದುಕೊಂಡು ಹೋಗ್ತೇವೆ. ಸೋನಿಯಾ ಗಾಂಧಿ ಭೇಟಿ ಮಾಡಿಸ್ತೀವಿ, ಜೆ.ಪಿ.ನಡ್ಡಾರನ್ನ ಭೇಟಿ ಮಾಡಿಸ್ತೀವಿ ಅಂತಾ ಹೇಳಿ ಬರ್ತಾರೆ. ಹಾಗೇ ನನ್ನ ಹತ್ತಿರವೂ ದೆಹಲಿಯಿಂದ ಒಂದಿಷ್ಟು ಬಂದಿದ್ದರು ಎಂದಿದ್ದಾರೆ. ಇದನ್ನೂ ಓದಿ; ಮರ್ಯಾದೆಯಿಂದ ವಾಪಸ್ ಹೋಗೋ ಲೇ – ಇನ್ಸ್‌ಪೆಕ್ಟರ್‌ಗೆ ಎಂ.ಪಿ.ಕುಮಾರಸ್ವಾಮಿ ಆವಾಜ್

    YATNAL 1

    ನಿಮ್ಮನ್ನು ಸಿಎಂ ಮಾಡ್ತೀವಿ 2,500 ಕೋಟಿ ರೆಡಿ ಮಾಡ್ಕೋಳಿ ಅಂತಾ ಹೇಳಿದ್ರು. ಆದ್ರೆ ನಾನು, 2500 ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ. ಆ ಹಣ ಹೆಂಗ್ ಇಡೋದು? ಏನು ಕೋಣೆಯಲ್ಲಿ ಇಡೋದಾ ಅಥವಾ ಗೋದಾಮಿನಲ್ಲಿ ಇಡೋದಾ? ಎಂದು ಪ್ರಶ್ನಿಸಿದೆ ಎಂದು ಕಿಡಿಕಾರಿದ್ದಾರೆ.

    ಟಿಕೆಟ್ ಕೊಡ್ತೀನಿ ಅಂತಾ ರಾಜಕಾರಣದಲ್ಲಿ ಎಲ್ಲಾ ಕಡೆ ಮೋಸ ಮಾಡ್ತಾರೆ. ಎಚ್ಚರಿಕೆಯಿಂದ ಇರಬೇಕು. ರಾಜಕಾರಣದಲ್ಲಿ ಯಾರೂ ದೆಹಲಿಗೆ ಹೋಗಿ ಹಾಳಾಗಬೇಡಿ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಪತಿ ಕಣ್ಣೆದುರೇ ಪ್ರಿಯಕರನೊಂದಿಗೆ ಪತ್ನಿ ಸೆಕ್ಸ್ – ಸ್ಕ್ರೂಡ್ರೈವರ್‌ನಿಂದ ಇಬ್ಬರನ್ನು ಇರಿದು ಕೊಂದ

    Yatnal

    ನಾನು ವಾಜಪೇಯಿಯವರ ಕೈಕೆಳಗೆ ಕೆಲಸ ಮಾಡಿದ್ದೇನೆ. ಅಡ್ವಾಣಿ, ರಾಜನಾಥಸಿಂಗ್, ಅರುಣ್ ಜೇಟ್ಲಿ ಅವರು ನನ್ನನ್ನು ಬಸನಗೌಡ ಅಂತಾ ಹೆಸರು ಹೇಳಿ ಕರೀತಿದ್ರು. ಅಂತಹ ವ್ಯಕ್ತಿಗೆ ಎರಡೂಸಾವಿರ ಕೋಟಿ ಸಜ್ಜ ಮಾಡಿ ಇಡಿ ಸಿಎಂ ಮಾಡ್ತೀವಿ ಅಂತಾ ಹೇಳ್ತಾರೆ. ನಡ್ಡಾರ ಮನೆಗೆ ಕರೆದುಕೊಂಡು ಹೋಗ್ತೀವಿ, ಅಮಿತ್ ಶಾ ಮನೆಗೆ ಕರೆದುಕೊಂಡು ಹೋಗ್ತೀವಿ ಅಂತಾರೆ ಎಂದು ದೂರಿದ್ದಾರೆ.

  • ನನ್ನ ಆಫೀಸ್‍ಗೆ ಬುರ್ಖಾ ಧಾರಿಗಳು ಬರೋದೇ ಬೇಡ: ಶಾಸಕ ಯತ್ನಾಳ್

    ನನ್ನ ಆಫೀಸ್‍ಗೆ ಬುರ್ಖಾ ಧಾರಿಗಳು ಬರೋದೇ ಬೇಡ: ಶಾಸಕ ಯತ್ನಾಳ್

    ವಿಜಯಪುರ: ನನ್ನ ಕಚೇರಿಗೆ ಬುರ್ಖಾಧಾರಿಗಳು, ಟೋಪಿ ಧಾರಿಗಳು ಬರುವುದೇ ಬೇಡ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿಡಿಯೋ ವೈರಲ್ ಆಗಿದೆ.

    ಸಿದ್ಧೇಶ್ವರ ಕಲಾಭವನದಲ್ಲಿ ಜೂನ್ 4 ರಂದು ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ಈ ಶಾಸಕ ಯತ್ನಾಳ್ ಅವರ ಈ ಹೇಳಿಕೆಯ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿಬಂದಿದೆ.

    ಚುನಾವಣೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಾನು ಮುಸ್ಲಿಮರ ಮುಖವನ್ನೇ ನೋಡಬಾರದು ಎಂದು ಶಪಥ ಮಾಡಿದ್ದೆ. ಅಲ್ಲದೇ ಮುಸ್ಲಿಮರು ನನಗೆ ಮತ ಹಾಕುವುದೇ ಬೇಡವೆಂದು ಹೇಳಿದ್ದೆ. ಮುಸ್ಲಿಮರಿಗೆ ಬೆಂಬಲಿಸುತ್ತಿರುವ ಕೆಲವು ಹಿಂದುಗಳು ಅವರಿಗೆ ಹುಟ್ಟಿದ್ದಾರೆ ಅನಿಸುತ್ತದೆ. ನಾನು ಚುನಾವಣೆಯಲ್ಲಿ ಸೋಲುತ್ತೇನೆಂದು ಅವರು ಭಾವಿಸಿದ್ದರು ಎಂದು ಶಾಸಕ ಯತ್ನಾಳ್ ಭಾಷಣದಲ್ಲಿ ಹೇಳಿದ್ದರು.

    ಹಿಂದೂ ಜನರನ್ನು ಬಿಟ್ಟು ಬೇರೆ ಯಾರಿಗೂ ಕೆಲಸ ಮಾಡಿಕೊಡದಂತೆ ಮಹಾನಗರ ಪಾಲಿಕೆ ಸದಸ್ಯರಿಗೂ ತಾಖೀತು ಮಾಡಿರುವೆ. ಮುಸ್ಲಿಮರು ಹಿಂದೂ ಮಹಿಳೆಯರಿಗೆ, ವ್ಯಾಪಾರಿಗಳಿಗೆ ತೊಂದರೆ ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ನಾನು ಆಯ್ಕೆಯಾಗದಿದ್ದರೆ ತಮಗೆ ಉಳಿಗಾಲವಿಲ್ಲವೆಂದು ಹಿಂದೂಗಳು ತಿಳಿದಿದ್ದರು. ಹೀಗಾಗಿ ಅವರೇ ಚುನಾವಣೆಯಲ್ಲಿ ಗೆಲುವು ನೀಡಿದ್ದಾರೆ. ಹಿಂದೂಗಳ ಪರವಾಗಿ ಮಾತ್ರ ನಾನು ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

    ವಿವಾದಾತ್ಮಕ ಹೇಳಿಕೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಶಿವಾಜಿ ಮಹಾರಾಜರ ಕಾರ್ಯಕ್ರಮದಲ್ಲಿ ನಾನು ಮುಸ್ಲಿಮರ ಬಗ್ಗೆ ಮಾತನಾಡಿದ್ದೇನೆ. ಹಿಂದೂ ಧರ್ಮದ ವಿರುದ್ಧ ಮಾತನಾಡುವ ಅಕ್ಬರುದ್ದೀನ್ ಓವೈಸಿಗೆ ಮೊದಲು ಪ್ರಶ್ನೆ ಮಾಡಿ, ಅವರ ವಿರುದ್ಧ ಬರೆಯಿರಿ. ನಂತರ ನನ್ನನ್ನು ಪ್ರಶ್ನಿಸಿ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

    ನಾನು ಚುನಾವಣೆಗೂ ಮುನ್ನ ಮುಸ್ಲಿಮರ ಮತಗಳು ಬೇಡವೆಂದು ಹೇಳಿದ್ದೆನೆ. ನನ್ನ ಮಾತಿಗೆ ನಾನು ಈಗಲೂ ಬದ್ಧನಾಗಿರುವೆ. ಹಫ್ತಾ ವಸೂಲಿ, ರೌಡಿಶೀಟರ್ ಗಳ ಬಗ್ಗೆ ಹೇಳಿದ್ದೇನೆ. ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.