Tag: basanagauda patil yatnal

  • ಅಸಮಾಧಾನಿತರಿಗೆ ಜುಲೈನಲ್ಲಿ ಬಂಫರ್ ಗಿಫ್ಟ್ – ಭರವಸೆಗೆ ಓಕೆ ಅಂದ್ರಾ ತ್ರಿಮೂರ್ತಿಗಳು?

    ಅಸಮಾಧಾನಿತರಿಗೆ ಜುಲೈನಲ್ಲಿ ಬಂಫರ್ ಗಿಫ್ಟ್ – ಭರವಸೆಗೆ ಓಕೆ ಅಂದ್ರಾ ತ್ರಿಮೂರ್ತಿಗಳು?

    ಬೆಂಗಳೂರು: ಅಸಮಾಧಾನಿತ ಶಾಸಕರು ರಹಸ್ಯ ಸಭೆಗಳ ನಡೆಸುವ ವಿಚಾರ ತಿಳಿದ ಸಿಎಂ ಯಡಿಯೂರಪ್ಪ, ಜುಲೈನಲ್ಲಿ ಬಂಫರ್ ಗಿಫ್ಟ್ ನೀಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

    ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೈಯಲ್ಲಿ ಬಂಡಾಯದ ಬಾವುಟ ಹಿಡಿಯಲು ಸಿದ್ಧರಾಗಿರುವ ತ್ರಿಮೂರ್ತಿ(ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ)ಗಳ ಪೈಕಿ ಒಬ್ಬರನ್ನು ಕರೆಸಿ ಮುಖ್ಯಮಂತ್ರಿಗಳು ಮಾತನಾಡಿದ್ದಾರಂತೆ. ಜುಲೈನಲ್ಲಿ ನಿಮಗೆ ಬಂಫರ್ ಗಿಫ್ಟ್ ಸಿಗಲಿದ್ದು, ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಎಂದು ಹೇಳಿದರಂತೆ. ಸಿಎಂ ಭರವಸೆಗೆ ಓಕೆ ಅಂದು, ಈಗ ಸಮಾಧಾನ ಏಕೆ ಮಾಡುತ್ತಿದ್ದೀರಿ ಎಂದು ಹೇಳಿ ಹೊರ ಬಂದಿದ್ದರಿಂದ ಸಿಎಂ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.

    ದೆಹಲಿಗೆ ಹೋಗಲು ಪ್ಲಾನ್: ಯಶವಂತಪುರದ ಅಪಾರ್ಟ್ ಮೆಂಟ್ ನಲ್ಲಿ ಸಭೆ ಸೇರಿದ್ದ ಅಸಮಾಧಾನಿತ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಮುಂದೆ ಯಡಿಯೂರಪ್ಪನವರ ವಿರುದ್ಧವೇ ದೂರು ಸಲ್ಲಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಈ ಸಭೆಯಲ್ಲಿ ಭಾಗಿಯಾಗಿದ್ದ 15ಕ್ಕೂ ಅಧಿಕ ಶಾಸಕರದ್ದು, ಯಡಿಯೂರಪ್ಪರನ್ನ ಕೆಳಗೆ ಇಳಿಸಬೇಕು, ಬಿಸಿಮುಟ್ಟಿಸಬೇಕು ಎಂಬುದು ಒಂದೇ ಅಜೆಂಡಾ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ಹೆಚ್‍ಡಿಕೆ ಮಾನಸಿಕ ಸ್ಥಿಮಿತಕ್ಕೆ ಸರ್ಕಾರದಿಂದಲೇ ಚಿಕಿತ್ಸೆ ನೀಡಬೇಕಿದೆ: ಯತ್ನಾಳ್

    ಹೆಚ್‍ಡಿಕೆ ಮಾನಸಿಕ ಸ್ಥಿಮಿತಕ್ಕೆ ಸರ್ಕಾರದಿಂದಲೇ ಚಿಕಿತ್ಸೆ ನೀಡಬೇಕಿದೆ: ಯತ್ನಾಳ್

    -ಕರ್ನಾಟಕದ ಓವೈಸಿಯಾಗಲು ಹೆಚ್‍ಡಿಕೆ ಪ್ರಯತ್ನ
    -ಇಮ್ರಾನ್ ಖಾನ್ ಅಳಿಯ ಕುಮಾರಸ್ವಾಮಿ
    -ಸಿಎಂ ಇಬ್ರಾಹಿಂ ಒರಿಜಿನಲ್ ಮುಸ್ಲಿಂ ಅಲ್ಲ

    ವಿಜಯಪುರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಸರ್ಕಾರದ ವತಿಯಿಂದಲೇ ಅವರಿಗೆ ಮಾನಸಿಕ ಚಿಕಿತ್ಸೆ ನೀಡಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

    ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಬಾಂಬ್ ಅಣಕು ಪ್ರದರ್ಶನದಂತಿದೆ ಎಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನಾಚಿಗೇಡಿತನ ಹಾಗೂ ಬೇಜವಾಬ್ದಾರಿ ಹೇಳಿಕೆಯಾಗಿದೆ. ಅವರು ಸಿಎಂ ಆಗಿದ್ದೇ ಅಣಕು ಪ್ರದರ್ಶನದಂತಿದೆ. ಕುಮಾರಸ್ವಾಮಿ ಅವರ ಜೀವನ ಹಾಗೂ ರಾಜಕೀಯ ಅಣುಕು ಪ್ರದರ್ಶನದಂತಿದೆ ಎಂದು ವ್ಯಂಗ್ಯವಾಡಿದರು. ಅವರಿಗೆ ದೇಶ, ಸೈನಿಕರು, ರಾಜ್ಯದ ಹಿತ ಯಾವುದೂ ಕಾಣಿಸಲ್ಲಾ. ಕುಮಾರಸ್ವಾಮಿ ಕರ್ನಾಟಕದ ಓವೈಸಿ ಆಗಲು ಈ ಮೂಲಕ ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಆದಿತ್ಯ ರಾವ್ ಓರ್ವ ಬ್ಲಾಕ್ ಮೇಲರ್. ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾನೆ. ಆತ ಓರ್ವ ಹಿಂದೂ, ಆತನ ಬಂಧನವಾಗಿದೆ. ಪೊಲೀಸ್ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಸರ್ಕಾರ ಮತ್ತು ಗೃಹ ಇಲಾಖೆ ಬಾಂಬ್ ಪತ್ತೆ ವಿಚಾರದಲ್ಲಿ ಗಂಭೀರವಾಗಿವೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿಸಿದರು.

    ಕಲಬುರಗಿಯಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಸಮಾವೇಶದಲ್ಲಿ ಕುಮಾರಸ್ವಾಮಿ, ಪಾಕಿಸ್ತಾನ ಲೀಡರ್ ಮಾತನಾಡಿದಂತೆ ಮಾತನಾಡಿದ್ದಾರೆ. ದಾವುದ್ ಇಬ್ರಾಹಿಂ ತಮ್ಮ ಇಮ್ರಾನ್ ಖಾನ್, ಇಮ್ರಾನ್ ಖಾನ್ ತಮ್ಮ ರಾಹುಲ್ ಗಾಂಧಿ, ಇಮ್ರಾನ್ ಖಾನ್ ಅಳಿಯ ಕುಮಾರಸ್ವಾಮಿ ಎಂಬಂತೆ ಅವರು ಮಾತನಾಡಿದ್ದಾರೆಂದು ಕಿಡಿಕಾರಿದರು.

    ಕುಮಾರಸ್ವಾಮಿ ಈಗಾಗಲೇ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ನಾಳೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದರೆ ಹಳೆ ಮೈಸೂರು ಭಾಗದ ಅಸ್ತಿತ್ವ ಕಳೆದುಕೊಳ್ಳುತ್ತಾರೆ. ಇನ್ನು ನಮ್ಮ ದೇಶದ ಅನ್ನ ತಿನ್ನುವ ಅಧಿಕಾರಿಗಳು ರಾಜಕಾರಣಿಗಳು ಪಾಕಿಸ್ತಾನದ ಎಜೆಂಟರಾಗಿ ಕೆಲಸ ಮಾಡಿದ ಉದಾಹರಣೆಗಳಿವೆ. ಮೋದಿ ಸರ್ಕಾರ ಬಂದ ಬಳಿಕ ಇವೆಲ್ಲ ಬಹಿರಂಗವಾಗುತ್ತಿವೆ ಎಂದರು.

    ಮೋದಿ ಅವರ ಕುಟುಂಬದ ಹಿನ್ನಲೆ ಮಾತನಾಡಿದ್ದ ಇಬ್ರಾಹಿಂ ಮುತ್ತಜ್ಜ ಯಾವ ಜಾತಿಯವನಿದ್ದ ಎಂದು ಇಬ್ರಾಹಿಂಗೆ ಕೇಳಿ. ಆತ ಪಕ್ಕಾ ಮುಸ್ಲಿಂ ಅಲ್ಲಾ. ಅರಬಸ್ಥಾನದಿಂದ ಬಂದ ಒರಿಜನಲ್ ಮುಸ್ಲಿಂ ಅಲ್ಲಾ. ಟಿಪ್ಪು ದಾಳಿಯ ಕಾಲದಲ್ಲಿ ಮತಾಂತರದಲ್ಲಿ ಮುಸ್ಲಿಂ ಆಗಿರುವ ಹೇಡಿಗಳು. ಅವರ ಬಗ್ಗೆ ಅವರಿಗೆ ಗೊತ್ತಿಲ್ಲ. ಇವರೇನು ಮೋದಿ ಅವರ ಬಗ್ಗೆ ಕೇಳೋದು ಎಂದು ಸಿಎಂ ಇಬ್ರಾಹಿಂ ವಿರುದ್ಧ ಆಕ್ರೋಶ ಹೊರಹಾಕಿದರು.

  • ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ – ಯತ್ನಾಳ್

    ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ – ಯತ್ನಾಳ್

    ಕಲಬುರಗಿ: ಲೋಕಸಭಾ ಚುನಾವಣೆಯ ಫಲಿತಾಂಶ ಬರುವುದಕ್ಕೂ ಮೊದಲೇ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು ಈಗ ನಾನು ಸಹ ಆಕಾಂಕ್ಷಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಯಾಕಂದ್ರೆ ಉತ್ತರ ಕರ್ನಾಟಕ ಬಿಜೆಪಿಯ ಭದ್ರಕೋಟೆಯಾಗಿದೆ. ಹೀಗಾಗಿ ಈ ಭಾಗಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಸಿಗಬೇಕಿದೆ ಎಂದರು.

    ಯಾವುದೇ ಒಂದು ಪ್ರದೇಶವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಮೈತ್ರಿ ಸರ್ಕಾರ ಮುಂದುವರಿದರೆ ಕಾಂಗ್ರೆಸ್ ಸಂಪೂರ್ಣ ನಾಶ ಆಗುತ್ತದೆ ಎನ್ನುವುದು ಈಗಾಗಲೇ ಕಾಂಗ್ರೆಸ್‍ಗೆ ಮನವರಿಕೆಯಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯರನ್ನ ರಾಜಕೀಯವಾಗಿ ಮುಗಿಸುವ ತಂತ್ರ ರೂಪಿಸಲು ಮುಂದಾಗಿದ್ದಾರೆ. ಸರ್ಕಾರ ಬೀಳಿಸಲು ನಾವು ಪ್ರಯತ್ನ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಎಂಬಿ ಪಾಟೀಲ್ ಮನಸ್ಸು ಮಾಡಿದ್ರೆ ಯತ್ನಾಳ್ ಕಾಂಗ್ರೆಸ್ ಕರೆತರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಕೂಡ ಮನಸ್ಸು ಮಾಡಿದರೆ ಎಂಬಿ ಪಾಟೀಲ್ ರನ್ನ ಬಿಜೆಪಿಗೆ ಕರೆತರುತ್ತೇನೆ. ಆದರೆ ಅವರು ಕಾಂಗ್ರೆಸ್ ನಲ್ಲೇ ಇರಲಿ ಎಂದು ಸುಮ್ಮನಾಗಿದ್ದೇನೆ ಎಂದರು.

    ಕಾಂಗ್ರೆಸ್‍ನ ಶಾಸಕರಿಗೆ ಕುಮಾರಸ್ವಾಮಿ ಯಾವುದೇ ಅನುದಾನ ನೀಡುತ್ತಿಲ್ಲ ಎಂಬ ಅಸಮಾಧಾನ ಇದೆ. ನನ್ನ ಕೆಲಸ ಏನಿದ್ದರೂ ಡೈರೆಕ್ಟ್ ಹಿಟ್ ಹಿಂದೆ ತೆರೆ ಮರೆಯಲ್ಲಿ ಕೆಲಸ ಮಾಡುವುದಿಲ್ಲ. ಹಾಗೆಯೇ ತೆರೆ ಮರೆಯಲ್ಲಿ ಕೆಲಸ ಮಾಡಿದರೆ ಯಾವತ್ತೋ ನಾನು ಮುಖ್ಯಮಂತ್ರಿ ಆಗುತ್ತಿದ್ದೆ ಎಂದು ಯತ್ನಾಳ್ ಹೇಳಿದರು.