Tag: basanagauda patil yatnal

  • ಬಿಜೆಪಿಯಲ್ಲಿ ತೀವ್ರಗೊಂಡ ಒಳಜಗಳ- ವೇದಿಕೆಯಲ್ಲಿಯೇ ಯತ್ನಾಳ್, ನಿರಾಣಿ ಪರಸ್ಪರ ಟಾಂಗ್

    ಬಿಜೆಪಿಯಲ್ಲಿ ತೀವ್ರಗೊಂಡ ಒಳಜಗಳ- ವೇದಿಕೆಯಲ್ಲಿಯೇ ಯತ್ನಾಳ್, ನಿರಾಣಿ ಪರಸ್ಪರ ಟಾಂಗ್

    ಬಾಗಲಕೋಟೆ: ರಾಜ್ಯ ಬಿಜೆಪಿಯಲ್ಲಿ ಅಡ್ಜಸ್ಟ್ ಮೆಂಟ್ ರಾಜಕಾರಣದ ಕದನ ತೀವ್ರಗೊಂಡಿದೆ. ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ನಿನ್ನೆ ಆಡಿದ್ದ ಮಾತುಗಳು ಮುರುಗೇಶ್ ನಿರಾಣಿ (Murugesh Nirani) ಕೋಪಕ್ಕೆ ಕಾರಣವಾಗಿದೆ.

    ಬಾಗಲಕೋಟೆ (Bagalkote) ಯಲ್ಲಿ ಮಾತಾಡಿದ ಅವರು, ಯಾರಾದ್ರೂ ಬಾಯಿಗೆ ಬಂದಂತೆ ಮಾತಾಡಿದ್ರೆ, ಅದಕ್ಕಿಂತ ಅಪ್ಪನಂತೆ ಮಾತಾಡಲು ನನಗೂ ಬರುತ್ತೆ. ಬೇರೆಯವರ ಬಗ್ಗೆ ಮಾತಾಡುವ ಮೊದಲು ತಾವೇನು ಮಾಡಿದ್ದೇವೆ ಎಂಬ ಬಗ್ಗೆ ಮೊದಲು ಮಾತಾಡ್ಬೇಕು. ಯಾರ್ಯಾರು ಯಾರ್ಯಾರಿಂದ ಸೋತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಷ್ಟುದಿನ ನಾನು ಸುಮ್ಮನಿರೋದು ನನ್ನ ದೌರ್ಬಲ್ಯ ಅಲ್ಲ. ಇಲಿ ಹೊಡೆಯಲು ಹೋಗಿ, ಗಣಪತಿಗೆ ಪೆಟ್ಟು ಬೀಳಬಾರದು ಎಂದು ಸುಮ್ಮನಿದ್ದೇನೆ.. ಯಾರಾದ್ರೂ ನನ್ನ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಲಿ ಎಂದು ಗುಡುಗಿದ್ರು.

    ಈ ಮೂಲಕ ತಮ್ಮ ಸೋಲಿಗೆ ಯತ್ನಾಳ್ ಕಾರಣ ಎಂದು ಪರೋಕ್ಷವಾಗಿ ದೂಷಿಸಿದ್ರು. ಇದಕ್ಕೆ ಯತ್ನಾಳ್ ವೇದಿಕೆಯಲ್ಲೇ ತಿರುಗೇಟು ಕೊಟ್ರು. ನನ್ನ ಸೋಲಿಸಲು ಎಲ್ಲೆಲ್ಲಿಂದಲೋ ದುಡ್ಡು ಕಳಿಸಿದ್ರು. ನಾನು ನೋಡ್ತೀನಿ, ನಮ್ಮ ಕಡೆನೂ ತಾಕತ್ತಿದೆ ಎನ್ನುವ ಮೂಲಕ ನಿರಾಣಿಗೆ ಎಚ್ಚರಿಕೆ ಕೊಟ್ರು. ಇದಕ್ಕೆ ಮತ್ತೆ ನಿರಾಣಿ ಪ್ರತ್ಯುತ್ತರ ನೀಡಿದ್ರು. ನಾನು ಹಣ ಕೊಟ್ಟಿದ್ದು ಬಿಜೆಪಿಗರಿಗೆ, ಕಾಂಗ್ರೆಸ್ಸಿಗರಿಗಲ್ಲ. ಈ ಅವಮಾನಕ್ಕೆ ಸರಿಯಾದ ಸಮಯದಲ್ಲಿ ಉತ್ತರ ಕೊಡ್ತೀನಿ ಅಂತಾ ವಾರ್ನಿಂಗ್ ನೀಡಿದ್ರು.

    ಈ ಮಧ್ಯೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಈಶ್ವರಪ್ಪ, ರವಿಕುಮಾರ್ ಈ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ, ಶೀಘ್ರವೇ ಎಲ್ಲಾ ಸರಿ ಹೋಗುವ ಭರವಸೆ ವ್ಯಕ್ತಪಡಿಸ್ತಿದ್ದಾರೆ. ಇದನ್ನೂ ಓದಿ: ಕೇಂದ್ರದ ಅಕ್ಕಿ ಬೇಕಿದ್ದರೆ ನಮ್ಮನ್ನು ಕೇಳಿಯೇ ಘೋಷಣೆ ಮಾಡ್ಬೇಕು: ಪ್ರಲ್ಹಾದ್ ಜೋಶಿ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲೇ ಯತ್ನಾಳ್‍ಗೆ ಬೊಮ್ಮಾಯಿ ತಿರುಗೇಟು

    ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲೇ ಯತ್ನಾಳ್‍ಗೆ ಬೊಮ್ಮಾಯಿ ತಿರುಗೇಟು

    ಬೆಳಗಾವಿ: ಕಾಂಗ್ರೆಸ್ (Congress) ನಾಯಕರನ್ನು ಮನೆಗೆ ಕರೆಸಿಕೊಳ್ಳಬೇಡಿ ಎಂದು ಹೇಳಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‍ (Basangouda Patil Yatnal) ಗೆ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲೇ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ತಿರುಗೇಟು ನೀಡಿದ್ದಾರೆ.

    ನಗರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಬೊಮ್ಮಾಯಿ, 30 ವರ್ಷಗಳಿಂದ ನಾನು ರಾಜಕಾರಣದಲ್ಲಿ ಇದ್ದೇನೆ. ಯಾರ ಜೊತೆಗೂ ನಾನು ರಾಜೀ ಮಾಡಿಕೊಂಡು ರಾಜಕಾರಣ ಮಾಡಿಲ್ಲ. ಮನೆಗೆ ಬಂದವರನ್ನು ಸ್ವಾಗತ ಮಾಡುವುದು ನಮ್ಮ ಪರಂಪರೆ. ನಾನೇನೂ ಯಾರನ್ನೂ ಮನೆಯೊಳಗಿನ ರೂಂಗೆ ಕರೆದುಕೊಂಡು ಹೋಗಿ ಮಾತನಾಡಿಲ್ಲ. ಕಾಂಗ್ರೆಸ್ ನಾಯಕರು ಜೊತೆಗಿನ ಎಲ್ಲ ಮಾತುಕತೆಗಳು ಬಹಿರಂಗವಾಗಿಯೇ ನಡೆಯುತ್ತವೆ. ಬಿಜೆಪಿಯೇ ನನ್ನ ತಂದೆ-ತಾಯಿ, ಬಿಜೆಪಿ (BJP) ಕಾರ್ಯಕರ್ತರು ನನ್ನ ಸಹೋದರ-ಸಹೋದರಿಯರು. ನಾನು ಸಿಎಂ ಆಗಿದ್ದಾಗ ಪಕ್ಷ, ಕಾರ್ಯಕರ್ತರ ಆಶಯದಂತೆ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇನೆ ಎಂದರು.

    ಸಿಎಂ ಆಗಿದ್ದಾಗ ಕಾರ್ಯಕರ್ತರ ಹಿತ ಕಾದಿದ್ದೇನೆ, ಮುಂದೆಯೂ ಕಾರ್ಯಕರ್ತರ ಹಿತ ಕಾಯುವೆ. ದೇಶ, ಧರ್ಮ ರಕ್ಷಣೆಗೆ ನಾನು ಸದಾ ಜಾಗೃತನಾಗಿ ಕೆಲಸ ಮಾಡುತ್ತೇನೆ. ಚುನಾವಣೆ ಸೋಲನ್ನು ಮರೆತು ವೇದಿಕೆ ಮೇಲಿನ ಎಲ್ಲ ನಾಯಕರು ಒಂದಾಗೋಣ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನೊಂದು ಅವಧಿಗೆ ಪ್ರಧಾನಿ ಮಾಡೋಣ. ಇದಕ್ಕಾಗಿ ಎಲ್ಲ ಪಕ್ಷಗಳ ನಾಯಕರು, ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡೋಣ ಎಂದು ಬೊಮ್ಮಾಯಿ ಮನವಿ ಮಾಡಿದರು. ಇದನ್ನೂ ಓದಿ: ಮತ್ತೆ ಹೊಂದಾಣಿಕೆ ರಾಜಕೀಯ ಬಾಂಬ್- ಬಿಜೆಪಿ ಸಮಾವೇಶಗಳಲ್ಲೇ ಗದ್ದಲ, ಆಕ್ರೋಶ ಸ್ಫೋಟ

     

  • ಇನ್ಮುಂದೆ ಮಹದೇವಪ್ಪನೂ ಕನ್ವರ್ಟ್, ಕಾಕಪಾಟೀಲನೂ ಕನ್ವರ್ಟ್- ಯತ್ನಾಳ್ ಹೀಗಂದಿದ್ಯಾಕೆ..?

    ಇನ್ಮುಂದೆ ಮಹದೇವಪ್ಪನೂ ಕನ್ವರ್ಟ್, ಕಾಕಪಾಟೀಲನೂ ಕನ್ವರ್ಟ್- ಯತ್ನಾಳ್ ಹೀಗಂದಿದ್ಯಾಕೆ..?

    ಬೆಂಗಳೂರು: ಬಿಜೆಪಿ ಸರ್ಕಾರ (BJP Government) ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ರದ್ದಿಗೆ ಇಂದಿನ ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದ್ದು, ಈ ಸಂಬಂಧ ಇದೀಗ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಟ್ವೀಟ್‍ನಲ್ಲೇನಿದೆ..?: ಮತಾಂತರ ನಿಷೇಧ ಕಾಯ್ದೆ (Prohibition of Conversion Act) ಯನ್ನು ಹಿಂಪಡೆಯುವುದರ ಮೂಲಕ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನಿಲುವನ್ನು ಮತ್ತೆ ಕಾಂಗ್ರೆಸ್ ಸರ್ಕಾರ (Congress Government) ಅನುಸರಿಸಿದೆ. ಆಮಿಷದ ಮತಾಂತರವನ್ನು ನಿರ್ಬಂಧಿಸುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದು “ಹಿಂದೂ” ಸಮಾಜವನ್ನು ಮತಾಂತರಗೊಳಿಸುವವರಿಗೆ ಬೆಂಬಲ ನೀಡಿದಂತೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಯಾವ “ಮಾಫಿಯಾ” ಈ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಒತ್ತಡ ಹೇರಿದೆ. ಸಿದ್ದರಾಮಯ್ಯನವರ “Conversion Bhagya” ಆಮಿಷದ ಮತಾಂತರಕ್ಕೆ ಬೆಂಬಲ ನೀಡಲು ಸಿದ್ದರಾಮಯ್ಯನವರು ಸಜ್ಜಾಗಿದ್ದಾರೆ. ಇನ್ನು ಮುಂದೆ ಮಹದೇವಪ್ಪನೂ “”CONVERT”” ಕಾಕಪಾಟಿಲನೂ “”CONVERT”” ಎಂದು ಬರೆದುಕೊಳ್ಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ನನ್ನ ಬದುಕಿನಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಮಾಡಲ್ಲ: ಸಿಂಹ ಆರೋಪಕ್ಕೆ ಬೊಮ್ಮಾಯಿ ತಿರುಗೇಟು

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್ (H K Patil) , ಕಾಂಗ್ರೆಸ್ ಸರ್ಕಾರದ ಮತ್ತೊಂದು ದೊಡ್ಡ ನಿರ್ಧಾರವನ್ನು ಬಹಿರಂಗಪಡಿಸಿದರು. ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ತೀರ್ಮಾನವನ್ನು ಕ್ಯಾಬಿನೆಟ್ ಸಭೆಯಲ್ಲಿ ಮಾಡಿರುವುದಾಗಿ ತಿಳಿಸಿದ ಅವರು ಜುಲೈ ಅಧಿವೇಶನದಲ್ಲಿ ಹೊಸ ತಿದ್ದುಪಡಿಯೊಂದಿಗೆ ಮರುಮಂಡನೆ ಮಾಡುವುದಾಗಿ ಹೇಳಿದರು.

  • ಮಿಸ್ಟರ್ ಶಿವಕುಮಾರ್ ಧಮ್ಮಿದ್ರೆ ನನ್ನ ನಾಲಿಗೆ ಮುಟ್ಟಿ ನೋಡು: ಯತ್ನಾಳ್ ಸವಾಲ್

    ಮಿಸ್ಟರ್ ಶಿವಕುಮಾರ್ ಧಮ್ಮಿದ್ರೆ ನನ್ನ ನಾಲಿಗೆ ಮುಟ್ಟಿ ನೋಡು: ಯತ್ನಾಳ್ ಸವಾಲ್

    ರಾಯಚೂರು: ಸೋನಿಯಾ ಗಾಂಧಿ (Sonia Gandhi) ಬಗ್ಗೆ ಶಿವಕುಮಾರ್ (DK Shivakumar) ಹತ್ತಿರ ಪ್ರಶ್ನೆ ಕೇಳಿದೆ. ಮಿಸ್ಟರ್ ಯತ್ನಾಳ್ ನನ್ನ ತಾಯಿ ಬಗ್ಗೆ ಮಾತನಾಡಿದ್ರೆ, ನಾಲಿಗೆ ಕತ್ತರಿಸ್ತೀನಿ ಅಂದ್ರು. ಮಿಸ್ಟರ್ ಶಿವಕುಮಾರ್ ನಿಂಗೆ ತಾಕತ್ತು ಧಮ್ಮಿದ್ರೆ, ನನ್ನ ನಾಲಿಗೆ ಮುಟ್ಟಿ ನೋಡು. ಏನು ಧಮ್ಕಿ ಹಾಕುತ್ತಿಯಾ ಅಂತ ಏಕವಚನದಲ್ಲಿಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagauda Patil Yatnal) ಸವಾಲೆಸೆದರು.

    ಜಿಲ್ಲೆಯ ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ (Pratap Gowda Patil) ಪರ ಪ್ರಚಾರ ವೇಳೆ ಯತ್ನಾಳ್, ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನಂತ ಎಂಎಲ್‍ಎ ಗೆ ಈ ರೀತಿಯಾಗಿ ಮಾತನಾಡುತ್ತಿ. ಇನ್ನು ನೀನು ಸಿಎಂ ಆದರೆ ಜನಸಾಮಾನ್ಯರ ಗತಿ ಏನಾಗಬೇಡ. ನಿನಗೆ ತಾಯಿ ಎಷ್ಟು, ತಂದೆ ಎಷ್ಟು ಅನ್ನೋದು ನನಗೆ ಗೊತ್ತಿಲ್ಲ. ನೀನು ಇದ್ದರೆ ಆ ಕಡೆ ಕನಕಪುರದಲ್ಲಿ ಇರಬೇಕು. ಉತ್ತರ ಕರ್ನಾಟಕದಲ್ಲಿ ನಾವು ಗಂಡುಗಲಿ ಇದ್ದೀವಿ. ನಾವು ಏನು ಕೈಗೆ ಬಳೆ ತೊಟ್ಟಿಲ್ಲ ಅಂತ ಹರಿಹಾಯ್ದರು.

    ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆ (Congress Manifesto) ಯಲ್ಲಿ ಬಜರಂಗದಳ ಸಂಘಟನೆ ಬ್ಯಾನ್ ವಿಚಾರವಾಗಿ ಮಾತನಾಡಿದ ಯತ್ನಾಳ್, ಬಜರಂಗದಳ ನಿಷೇಧ ಮಾಡ್ತೀವಿ ಅಂತಾರೆ. ಬಜರಂಗದಳ ನಿಷೇಧ ಆದ್ರೆ ಹಿಂದೂಗಳ ನಾಶ ಪ್ರಾರಂಭವಾಗುತ್ತೆ. ಬಜರಂಗದಳ ನಿಷೇಧ ಮಾಡಲು ಹತ್ತು ಜನ್ಮ ತಾಳಿದರೂ ಆಗಲ್ಲ ಎಂದರು. ಇದನ್ನೂ ಓದಿ: ನಾನ್‌ ಬೆಳಗಾವಿಗೆ ಬರ್ತಿದೀನಿ – ಮೇ 6ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರ ಶಿವಣ್ಣ ಪ್ರಚಾರ..!

    ಮೋದಿ (Narendra Modi) ಯವರನ್ನ ಕಾಂಗ್ರೆಸ್‍ನವರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ರು. ನಮ್ಮ ಕರ್ನಾಟಕದ ಕಾಂಗ್ರೆಸ್ ಹಿರಿಯ ನಾಯಕರು ವಿಷ ಹಾವು ಅಂದ್ರು. ನೀವು ಏನು ಹೆಬ್ಬಾವುನಾ ಅಂತ ಪ್ರಶ್ನಿಸಿದ ಯತ್ನಾಳ್, ಪ್ರಧಾನ ಮಂತ್ರಿಗೆ ಗೌರವ ಕೊಡುವುದು ಗೊತ್ತಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು.

    ರಾಹುಲ್ ಗಾಂಧಿ (Rahul Gandhi) ಅರೆ ಹುಚ್ಚಾ ಐತಿ. ಆತನ ಬಿಟ್ಟುಬಿಡಿ. ರಾಹುಲ್ ಗಾಂಧಿಗೆ ಲೀಟರ್, ಕೆ.ಜಿ ಬಗ್ಗೆ ವ್ಯತ್ಯಾಸ ಗೊತ್ತಿಲ್ಲ. ಭಾರತ್ ಜೋಡೋ ಅಂತೆ ಮಾಡಿದ್ರು, ತೋಡೋ ಎಲ್ಲಿ ಐತಿ ಪಾ. ತೋಡೋ ಮಾಡಿದವರು ನಿಮ್ಮ ಮುತ್ಯಾ. ಅವರು ನೆಹರು ಗಾಂಧಿ ಇದು ಡುಬ್ಲಿಕೇಟ್ ಗಾಂಧಿ. ಮೈಕ್ರೋ ಬೀಜ್ ಇದ್ದಂಗೆ ರಾಹುಲ್ ಗಾಂಧಿ ಅಂತ ಲೇವಡಿ ಮಾಡಿದರು.

  • ರೆಬೆಲ್ ಯತ್ನಾಳ್‍ಗೆ ಹೈಕಮಾಂಡ್ ಮತ್ತೆ ಮಾಫಿ- ಓನ್ಲಿ ವಾರ್ನಿಂಗ್, ನೋ ಆಕ್ಷನ್

    ರೆಬೆಲ್ ಯತ್ನಾಳ್‍ಗೆ ಹೈಕಮಾಂಡ್ ಮತ್ತೆ ಮಾಫಿ- ಓನ್ಲಿ ವಾರ್ನಿಂಗ್, ನೋ ಆಕ್ಷನ್

    ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್‍ (Basangouda Patil Yatnal) ಗೆ ಮತ್ತೆ ಮತ್ತೆ ನಸೀಬು ಕೈಹಿಡಿಯುತ್ತಿದೆ. ಕಳೆದ ಮೂರು ವರ್ಷಗಳಿಂದ ಪಕ್ಷ ಮತ್ತು ಸರ್ಕಾರದ ನಾಯಕರ ಬಗ್ಗೆ ಅಷ್ಟೆಲ್ಲ, ಮುಜುಗರದ, ಕೀಳು ಮಟ್ಟದ ಹೇಳಿಕೆಗಳನ್ನು ಕೊಡ್ತಾ ಬರುತ್ತಿದ್ದರೂ ಹೈಕಮಾಂಡ್ ಮತ್ತೆ ಮತ್ತೆ ಮಾಫಿ ಮಾಡುತ್ತಾನೇ ಇದೆ. ಇತ್ತೀಚೆಗೆ ಸಚಿವ ನಿರಾಣಿ ವಿರುದ್ಧ ಯತ್ನಾಳ್ ಅವರು ‘ಪಿಂಪ್’ ಪದ ಬಳಸಿ ವಾಗ್ದಾಳಿ ನಡೆಸಿದ ಮೇಲಂತೂ ಪಕ್ಷದ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟಿಸಿತ್ತು. ಮೀಸಲಾತಿ ಘೋಷಣೆ ಮಾಡ್ತಿಲ್ಲ ಅಂತ ಸಿಎಂ ಬೊಮ್ಮಾಯಿ (Basavaraj Bommai) ಮೇಲೂ ಯತ್ನಾಳ್ ಟೀಕಾ ಪ್ರಹಾರ ನಡೆಸಿದ್ದರು. ಪಕ್ಷಕ್ಕೂ, ಸರ್ಕಾರಕ್ಕೂ ಯತ್ನಾಳ್ ಹೇಳಿಕೆಗಳಿಂದ ಮತ್ತೊಮ್ಮೆ ಭಾರೀ ಮುಜುಗರ ಆಗಿತ್ತು. ಆದರೆ ಇಷ್ಟೆಲ್ಲ ಆದರೂ, ಯತ್ನಾಳ್ ವಿರುದ್ಧ ಯಾವುದೇ ಶಿಸ್ತು ಕ್ರಮ ಇಲ್ಲ.

    ಸಚಿವ ನಿರಾಣಿ (Murugesh Nirani) ವಿರುದ್ಧ ಬಳಸಿದ ಕೀಳು ಪದಗಳ ಹಿನ್ನೆಲೆಯಲ್ಲಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿಯು ಕೇಂದ್ರ ಬಿಜೆಪಿ ಶಿಸ್ತು ಸಮಿತಿಗೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇತ್ತಿಚೆಗೆ ಯತ್ನಾಳ್‍ಗೆ ಕೇಂದ್ರ ಬಿಜೆಪಿ (BJP) ಶಿಸ್ತು ಸಮಿತಿಯಿಂದ ಖುದ್ದು ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ತಾಕೀತು ಮಾಡಿ ಶೋಕಾಸ್ ನೊಟೀಸ್ ಕೊಡಲಾಗಿತ್ತು. ಇದರ ಭಾಗವಾಗಿ ಯತ್ನಾಳ್ ಅವರು ಮೂರು ದಿನಗಳ ಹಿಂದೆಯಷ್ಟೇ ರಹಸ್ಯವಾಗಿ ದೆಹಲಿಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಬಿಜೆಪಿ ಹೈಕಮಾಂಡ್ (BJP HighCommand) ಮತ್ತೊಮ್ಮೆ ಖಡಕ್ ವಾರ್ನಿಂಗ್ ಮಾತ್ರ ಕೊಟ್ಟು ಕಳಿಸಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಅಶೋಕ್ ಗೋಬ್ಯಾಕ್ ಭುಗಿಲು- ವರಿಷ್ಠರಿಗೆ ವರದಿ ರವಾನೆ

    ಸೀಕ್ರೆಟ್ ಆಗಿ ದೆಹಲಿಗೆ ಹೋಗಿ ಬಂದಿರೋ ಶಾಸಕ ಯತ್ನಾಳ್ ಗೆ ಬರೇ ವಾರ್ನಿಂಗ್ ಕೊಟ್ಟು ಕಳಿಸಲಾಗಿದೆಯಂತೆ. ಚುನಾವಣೆ ಹೊತ್ತಲ್ಲಿ ಯಾರ ವಿರುದ್ಧವೂ ಮಾತಾಡದಂತೆ ತಾಕೀತು ಮಾಡಿದ್ದಾರೆನ್ನಲಾಗಿದೆ. ಪಕ್ಷದ ಶಿಸ್ತು ಮೀರದೇ ಹದ್ದು ಬಸ್ತಿನಲ್ಲಿರುವಂತೆ ಕಟ್ಟೆಚ್ಚರ ನೀಡಿ ಕಳಿಸಲಾಗಿದೆಯಂತೆ. ಚುನಾವಣೆ ಸಮೀಪ ಯತ್ನಾಳ್ ಬಾಯಿಗೆ ಹೈಕಮಾಂಡ್ ಬೀಗ ಹಾಕುತ್ತೆ ಅನ್ನೋ ವಿರೋಧಿಗಳ ನಿರೀಕ್ಷೆ ಠುಸ್ ಆಗಿದೆ.

    ರೆಬೆಲ್ ಶಾಸಕ ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ನಿಲುವು ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ಆಗ್ತಿದೆ. ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಹೀಗೇಕೆ ನಡೆದುಕೊಳ್ತಿದೆ ಅನ್ನೋದು ಹಲವರಿಗೆ ಒಗಟಾಗಿದೆ. ಯತ್ನಾಳ್ ಗೆ ಪಂಚಮಸಾಲಿ ಸಮುದಾಯ ಸಪೋರ್ಟ್ ಗೆ ರಿಸ್ಕ್ ಬೇಡ ಅಂತ ವರಿಷ್ಠರು ಸುಮ್ನಾದ್ರಾ ಅಂತ ಚರ್ಚೆ ಆಗ್ತಿದೆ. ಒಂದೊಮ್ಮೆ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದರೆ ಮೀಸಲಾತಿ ಹೋರಾಟ ಇನ್ನಷ್ಟು ತೀವ್ರವಾಗಬಹುದು. ಜೊತೆಗೆ ಪಂಚಮಸಾಲಿ ಸಮುದಾಯ, ಮಠಾಧೀಶರು ತಿರುಗಿ ಬೀಳಬಹುದು. ಹೀಗಾಗಿ ಮತ್ತೆ ಹೊಸ ತಲೆನೋವು ಬೇಡ ಅಂತ ಅಂದುಕೊಳ್ಳುತ್ತಾ ಹೈಕಮಾಂಡ್ ಅಂತ ಪಕ್ಷದೊಳಗೆ ಗುಸು ಗುಸು ಚರ್ಚೆ ಜೋರಾಗಿದೆ. ಇದನ್ನೂ ಓದಿ: ಜೆಡಿಎಸ್ ವಿರುದ್ಧ ಮಾತಾಡಿದ್ರೆ ಸುಮಲತಾ ಲೀಡರ್ ಆಗಬಹುದು ಅಂದುಕೊಂಡಿದ್ದಾರೆ: ಪುಟ್ಟರಾಜು

    ಇತ್ತ ಹೈಕಮಾಂಡ್ ನಡೆಯಿಂದ ನಿರಾಣಿ ಬ್ರದರ್ಸ್ ವಲಯದಲ್ಲೂ ಭಾರೀ ಬೇಸರ ಮನೆ ಮಾಡಿದೆ ಎನ್ನಲಾಗಿದೆ. ಯತ್ನಾಳ್ ಗೆ ಹೈಕಮಾಂಡ್ ಸುಮ್ನೆ ಬಿಟ್ಟಿರಬಹುದು, ಆದರೆ ನಾವು ಸುಮ್ಮನಿರೋದು ಬೇಡ ಎಂಬ ನಿರ್ಧಾರಕ್ಕೆ ನಿರಾಣಿ ಬಣ ಬಂದಿದೆ ಎನ್ನಲಾಗಿದೆ. ಯತ್ನಾಳ್ ಗೆ ಖೆಡ್ಡಾ ತೋಡಲು ನಿರಾಣಿ ಟೀಮ್ ಸ್ಕೆಚ್ ಹಾಕಿದೆ ಎನ್ನಲಾಗಿದೆ. ವಿಜಯಪುರದಲ್ಲಿ ಯತ್ನಾಳ್ ರನ್ನು ರಾಜಕೀಯವಾಗಿ ಮುಳುಗಿಸಲು ಒಳಗೊಳಗೇ ಪ್ಲಾನ್ ರೂಪಿಸಲಾಗ್ತಿದೆಯಂತೆ. ಒಟ್ಟಿನಲ್ಲಿ ರೆಬೆಲ್ ಯತ್ನಾಳ್ ಗೆ ಸ್ವಪಕ್ಷೀಯರಿಂದಲೇ ಆಪತ್ತು ಕಟ್ಟಿಟ್ಟ ಬುತ್ತಿ. ಬಿಜೆಪಿಯಲ್ಲಿ ಯತ್ನಾಳ್ ವರ್ಸಸ್ ನಿರಾಣಿ ಸಂಘರ್ಷ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಡಿಯೂರಪ್ಪರನ್ನು ಬೈಬೇಡ ಅಂತ ಹೈಕಮಾಂಡ್‌ ಹೇಳಿದೆ!

    ಯಡಿಯೂರಪ್ಪರನ್ನು ಬೈಬೇಡ ಅಂತ ಹೈಕಮಾಂಡ್‌ ಹೇಳಿದೆ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೆಬೆಲ್ ಶಾಸಕ ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಟಫ್ ನಡೆ- ದೆಹಲಿಗೆ ಬುಲಾವ್

    ರೆಬೆಲ್ ಶಾಸಕ ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಟಫ್ ನಡೆ- ದೆಹಲಿಗೆ ಬುಲಾವ್

    ಬೆಂಗಳೂರು: ಬಿಜೆಪಿ (BJP) ಯ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagauda Patil Yatnal) ನಸೀಬು ಕೈಕೊಡುತ್ತಿರುವ ಲಕ್ಷಣಗಳು ಗೋಚರವಾಗ್ತಿದೆ. ಪಕ್ಷದ ಶಿಸ್ತು ಮೀರಿದ ಯತ್ನಾಳ್ ವಿಚಾರದಲ್ಲಿ ಕೊನೆಗೂ ಹೈಕಮಾಂಡ್ ಗಡುಸಾಗಿರುವ ಸುಳಿವು ಸಿಕ್ಕಿದೆ. ಮೊನ್ನೆಯಷ್ಟೇ ವಿಜಯಪುರಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಯತ್ನಾಳ್‍ಗೆ ಅವರ ತವರು ಜಿಲ್ಲೆಯಲ್ಲೇ ಮೊದಲ ಬಿಸಿ ಮುಟ್ಟಿಸಿದ್ದಾರೆ. ನಡ್ಡಾ ಕೊಟ್ಟ ಫಸ್ಟ್ ಶಾಕ್ ಗೆ ಯತ್ನಾಳ್ ಟೀಮ್‍ನಲ್ಲಿ ಆತಂಕ ಮನೆ ಮಾಡಿದ್ರೆ, ವಿರೋಧಿ ಟೀಮ್ ನಲ್ಲಿ ನಿರೀಕ್ಷೆ, ಖುಷಿ ಕಾಣಿಸಿಕೊಂಡಿದೆ.

    ವಿಜಯಪುರದ ಸಿಂದಗಿ ಮತ್ತು ನಾಗಠಾಣ ಕ್ಷೇತ್ರಗಳಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಕಾರ್ಯಕ್ರಮಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೇ ಎಂಟ್ರಿ ಇರಲಿಲ್ಲ. ವಿಜಯಪುರದ ಶಾಸಕರಿಗೇ ಅವರ ತವರು ಜಿಲ್ಲೆಯ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಿದ್ದು, ಬೇರ್ಯಾರೂ ಅಲ್ಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರೇ ಎಂದು ಬಿಜೆಪಿ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೇಂದ್ರದ ಶಿಸ್ತು ಸಮಿತಿ ನೊಟೀಸ್ ಕೊಟ್ಟ ಹಿನ್ನೆಲೆಯಲ್ಲಿ ಯತ್ನಾಳ್ ಜೊತೆ ಒಂದೇ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಹಿಂಜರಿದರು ಎನ್ನಲಾಗಿದೆ. ನೊಟೀಸ್ ಪಡೆದ ಶಾಸಕನ ಜೊತೆ ವೇದಿಕೆ ಹಂಚಿಕೊಳ್ಳಲ್ಲ ಅಂದ್ರಂತೆ ಜೆಪಿ ನಡ್ಡಾ. ಹೀಗಾಗಿಯೇ ವಿಜಯಪುರದ ಕಾರ್ಯಕ್ರಮಕ್ಕೆ ಯತ್ನಾಳ್ ಬರದಂತೆ ನಿರ್ಬಂಧ ವಿಧಿಸಲಾಯಿತು. ಈ ಮೂಲಕ ಯತ್ನಾಳ್ ಅವರಿಗೆ ಜೆ ಪಿ ನಡ್ಡಾ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ನಿರ್ಬಂಧ ಮೂಲಕ ಅಶಿಸ್ತು ತೋರಿದರೆ ಸಹಿಸಲ್ಲ ಎಂಬ ಖಡಕ್ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

    ಯತ್ನಾಳ್ ವಿಚಾರದಲ್ಲಿ ಜೆ.ಪಿ ನಡ್ಡಾ ಅವರು ಸಾಕಷ್ಟು ಯೋಚಿಸಿಯೇ ನಡೆದುಕೊಂಡಿರುವ ಸಾಧ್ಯತೆ ಇದೆ. ವಿಪಕ್ಷಗಳ ಟೀಕೆಗೂ ಗುರಿಯಾಗದಿರಲು ನಡ್ಡಾ ಎಚ್ಚರಿಕೆ ನಡೆ ಅನುಸರಿಸಿದ್ದಾರೆ. ಜೆ.ಪಿ ನಡ್ಡಾ ಅವರ ಈ ನಡೆಯಿಂದ ಒಂದು ಕಡೆ ಯತ್ನಾಳ್ ವಿರೋಧಿಗಳ ದಿಲ್ ಖುಷ್ ಆಗಿದ್ರೆ, ಇನ್ನೊಂದು ಕಡೆ ಖುದ್ದು ಯತ್ನಾಳ್ ಮತ್ತು ಟೀಮ್ ವಿಚಲಿತವಾಗಿದ್ದಾರಂತೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ PHD ಪಡೆದಿದ್ದಾರೆ, ಬೆಂಗ್ಳೂರನ್ನ ಹಾಳು ಮಾಡಿದ್ದಾರೆ: ಬೊಮ್ಮಾಯಿ

    ಈ ವಾರವೇ ದೆಹಲಿಗೆ ಬರುವಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ರನ್ನು ಹೈಕಮಾಂಡ್ ಬುಲಾವ್ ಕೊಟ್ಟಿದೆ. ಮುಜುಗರದ, ಕೀಳು ಮಟ್ಟದ ಹೇಳಿಕೆಗಳಿಗೆ ಖುದ್ದು ಬಂದು ವಿವರಣೆ ಕೊಡುವಂತೆ ವರಿಷ್ಠರು ತಾಕೀತು ಮಾಡಿದ್ದಾರೆ. ಈಗಾಗಲೇ ಕಳೆದ ವಾರ ಶಾಸಕ ಯತ್ನಾಳ್ ಗೆ ಕೇಂದ್ರದ ಶಿಸ್ತು ಸಮಿತಿಯಿಂದ ಶೋಕಾಸ್ ನೊಟೀಸ್ ಕೊಡಲಾಗಿದೆ. ನೊಟೀಸ್ ನಲ್ಲಿ ಖುದ್ದು ಹಾಜರಾಗಿ ವಿವರಣೆ ಕೊಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ದೆಹಲಿಗೆ ಯತ್ನಾಳ್ ಹೋಗಿಬರುವ ಸಾಧ್ಯತೆ ಹೆಚ್ಚಾಗಿದೆ.

    YATNAL 1

    ದೆಹಲಿಯಲ್ಲಿ ಯತ್ನಾಳ್ ಗೆ ಹೈಕಮಾಂಡ್ ವಾರ್ನಿಂಗ್ ಕೊಡ್ತಾರಾ, ಪನಿಶ್ಮೆಂಟ್ ಕೊಡ್ತಾರಾ ಅನ್ನೋದು ಸ್ಪಷ್ಟವಿಲ್ಲ. ಆದರೆ ಕೊನೆಗೂ ಈ ರೀತಿಯ ಟಫ್ ನಡೆಯನ್ನು ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಪ್ರದರ್ಶನ ಮಾಡಿರುವುದು ಅಚ್ಚರಿಯೇ ಸರಿ. ಒಟ್ಟಿನಲ್ಲಿ ಶಾಸಕ ಯತ್ನಾಳ್ ಅವರ ದೆಹಲಿ ಭೇಟಿ ಮತ್ತು ಅದರ ಫಲಿತಾಂಶ ಸಾಕಷ್ಟು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನ ನಂಬುವ ಪರಿಸ್ಥಿತಿಯಲ್ಲಿ ಜನರಿಲ್ಲ: ಹೆಚ್‍ಡಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾಸಕ ಯತ್ನಾಳ್-‌ ಸಚಿವ ನಿರಣಿ ಕಿತ್ತಾಟ- ಡಿಕೆ ಶಿವಕುಮಾರ್‌ ಲೇವಡಿ

    ಶಾಸಕ ಯತ್ನಾಳ್-‌ ಸಚಿವ ನಿರಣಿ ಕಿತ್ತಾಟ- ಡಿಕೆ ಶಿವಕುಮಾರ್‌ ಲೇವಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾಸಕ ಯತ್ನಾಳ್ ನಡೆ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಿದೆ: ಸಿ.ಟಿ ರವಿ

    ಶಾಸಕ ಯತ್ನಾಳ್ ನಡೆ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಿದೆ: ಸಿ.ಟಿ ರವಿ

    ನವದೆಹಲಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gauda Patil Yatnal) ವಿವಾದಾತ್ಮಕ ಹೇಳಿಕೆ ಮತ್ತು ಅವರ ನಡವಳಿಕೆ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಿದ್ದು, ಹೈಕಮಾಂಡ್‍ಗೆ ವರದಿ ನೀಡಲಾಗಿದೆ. ಈ ಬಗ್ಗೆ ಪಕ್ಷ ಗಮನ ಹರಿಸಲಿದ್ದು, ಶೀಘ್ರದಲ್ಲಿ ಒಂದು ನಿರ್ಣಯವನ್ನು ತೆಗೆದುಕೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದ್ದಾರೆ.

    ನವದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಭಾಗಿಯಾಗಿರುವ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ ಯತ್ನಾಳ್ ಹೇಳಿಕೆಯನ್ನು ಗಮನಿಸಿದೆ, ಇದು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ. ಬಿಜೆಪಿ (Bharatiya Janata Party) ಶಿಸ್ತಿಗೆ ಪಕ್ಷ ಇಲ್ಲಿ ಎಲ್ಲರೂ ಪಕ್ಷಕ್ಕೆ ಬದ್ಧವಾಗಿರಬೇಕು ಎಂದರು. ಇದನ್ನೂ ಓದಿ: ಹಣದ ಮಳೆ ಸುರಿಸಿದ ಮುಸ್ಲಿಂ ಮುಖಂಡರು

    ಕಾರ್ಯಕಾರಿಣಿ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ (Vidhanasabha Election) ಗಳ ಬಗ್ಗೆ ಚರ್ಚೆ ನಡೆದಿದೆ. ಗುಜರಾತ್ ರೀತಿಯ ಗೆಲುವು ಪಡೆಯಲು ಏನು ಮಾಡಬೇಕು ಎನ್ನುವ ಬಗ್ಗೆ ಸಮಾಲೋಚನೆ ನಡೆದಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಭರವಸೆ ಇದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ವರದಿ ನೀಡಿದ್ದಾರೆ ಎಂದು ಹೇಳಿದರು.

    ಸಿಎಂ ಘೋಷಣೆ ಮಾಡಿರುವ ರಥಯಾತ್ರೆ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚೆಯಾಗಿಲ್ಲ. ಬಹಿರಂಗ ಸಭೆಯಲ್ಲಿ ಮಾತನಾಡುವಂತ ವಿಷಯವಲ್ಲ ಇದು, ಪಕ್ಷದ ಪ್ರಮುಖ ನಾಯಕರು ನಿರ್ಧಾರ ಕೈಗೊಂಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ (Cabinet Expansion) ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಈ ಬಗ್ಗೆ ಸಿಎಂ ಕೇಳಬೇಕು ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿಸ್ತುಕ್ರಮಕ್ಕೆ ಹೈಕಮಾಂಡ್ ವಿಫಲ- ಯತ್ನಾಳ್‌ಗೆ ಖೆಡ್ಡಾ ತೋಡಲು ಸ್ವಪಕ್ಷೀಯ ವಿರೋಧಿಗಳಿಂದ್ಲೇ ಭಾರೀ ಸ್ಕೆಚ್?

    ಶಿಸ್ತುಕ್ರಮಕ್ಕೆ ಹೈಕಮಾಂಡ್ ವಿಫಲ- ಯತ್ನಾಳ್‌ಗೆ ಖೆಡ್ಡಾ ತೋಡಲು ಸ್ವಪಕ್ಷೀಯ ವಿರೋಧಿಗಳಿಂದ್ಲೇ ಭಾರೀ ಸ್ಕೆಚ್?

    ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ಇದುವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲು ಆಗಿಲ್ಲ. ಹೈಕಮಾಂಡ್‍ನಿಂದ ಕೇವಲ ಎಚ್ಚರಿಕೆ ಮಾತ್ರ, ಇಲ್ಲ ಶಿಸ್ತು ಕ್ರಮ. ರಾಜ್ಯ ಬಿಜೆಪಿ (BJP) ಯಿಂದಲೂ ಯಾವುದೇ ಕ್ರಮ ಇಲ್ಲವಾಗಿದೆ. ಯತ್ನಾಳ್ ವಿಚಾರದಲ್ಲಿ ಖುದ್ದು ಸಿಎಂ ಬೊಮ್ಮಾಯಿ (Basavaraj Bommai) ಯೂ ಅಸಹಾಯಕರೇ ಆಗಿರೋದು ಸ್ಪಷ್ಟವಾಗಿ ಗೋಚರವಾಗ್ತಿದೆ.

    ಇಷ್ಟೆಲ್ಲ ಸನ್ನಿವೇಶಗಳು ಯತ್ನಾಳ್ ಗೆ ಪರವಾಗಿರೋದು ಸ್ವಪಕ್ಷೀಯ ವಿರೋಧಿಗಳನ್ನು ಕೆಣಕಿದೆ. ಹೀಗಾಗಿ ರಾಜ್ಯ ಬಿಜೆಪಿ ಸ್ವಪಕ್ಷೀಯ ವಿರೋಧಿಗಳೆಲ್ಲ ಇದೀಗ ಯತ್ನಾಳ್ ವಿರುದ್ಧ ಒಂದಾಗಿ ಯತ್ನಾಳ್ ಗೆ ಖೆಡ್ಡಾ ತೋಡಲು ಸ್ಕೆಚ್ ರೂಪಿಸ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಯತ್ನಾಳ್ ಆಟಾಟೋಪಕ್ಕೆ ಬಿಜೆಪಿ ವರಿಷ್ಠರು ಸುಸ್ತು- ಲಗಾಮು ಹಾಕದಷ್ಟು ವೀಕ್ ಆಯ್ತಾ ಹೈಕಮಾಂಡ್?

    ಯತ್ನಾಳ್ ವಿರುದ್ಧ ನಿರಾಣಿ (Murugesh Nirani) ಮತ್ತು ಬ್ರದರ್ಸ್ ಒಂದಾಗಿ ಗುಡುಗಿರೋದು ಈ ನಿಟ್ಟಿನಲ್ಲಿ ಹಲವು ಸುಳಿವುಗಳನ್ನು ಬಿಟ್ಟು ಕೊಡ್ತಿದೆ. ಮೊನ್ನೆ ಬೆಂಗಳೂರಿನಲ್ಲಿ ಮಾತಾಡಿದ ಸಚಿವ ಮುರುಗೇಶ್ ನಿರಾಣಿ, ಯತ್ನಾಳ್ ವಿಚಾರದಲ್ಲಿ ಇನ್ನು ತಮ್ಮ ಸಹನೆ ಮುಗೀತು. ಯತ್ನಾಳ್ ನಾಲಿಗೆಗೆ ಕಡಿವಾಣ ಹಾಕ್ತೀವಿ ಅಂತ ನೇರವಾಗಿ ವಾರ್ನಿಂಗ್ ನೀಡಿದ್ದಾರೆ.

    ಶಾಸಕ ಯತ್ನಾಳ್‍ಗೆ ಸಚಿವ ಮುರುಗೇಶ್ ನಿರಾಣಿಯವರ ಸಹೋದರ ಸಂಗಮೇಶ್ ನಿರಾಣಿ (Sangamesh Nirani) ಯವರು ಸಹ ಭಾನುವಾರ ಟ್ವಿಟ್ಟರ್ ಮೂಲಕ ತೀಕ್ಷ್ಣವಾಗಿ ಯತ್ನಾಳ್ ಗೆ ಎಚ್ಚರಿಕೆ ಕೊಟ್ಟಿದ್ದಾರೆ. “ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ, ನಿನ್ನದೇ ಭಾಷೆಯಲ್ಲಿಯೇ ಉತ್ತರ ನೀಡುತ್ತೇನೆ. ಒಬ್ಬ ಅಪ್ಪನಿಗೆ ಹುಟ್ಟಿದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ. ನೇರ ಕಾದಾಟಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ನಿನ್ನ ರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ. ಮುರುಗೇಶ್ ನಿರಾಣಿ ತೇಜೋವಧೆಗೆ ನಿಂತ ಮುಠ್ಠಾಳರಿಗೆ ಕಾಲವೇ ಉತ್ತರ ನೀಡುತ್ತದೆ..” ಹೀಗೆಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿ ಸಂಗಮೇಶ್ ನಿರಾಣಿ ಗುಡುಗಿದ್ದಾರೆ.

    ಹರಿಹರದಲ್ಲಿ ಮಾತಾಡಿದ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (B Y Vijayendra) , ಯತ್ನಾಳ್ ವಿಚಾರ ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದು ಸುಳಿವು ಕೊಟ್ಟಿದ್ದಾರೆ. ಯತ್ನಾಳ್ ಗೆ ಎದುರಾಳಿಗಳಿಂದ ಸದ್ಯದಲ್ಲೇ ಕಂಟಕ ಎದುರಾಗುವ ಲಕ್ಷಣಗಳು ಗೋಚರವಾಗುತ್ತಿವೆ. ರಾಜಕೀಯವಾಗಿ ವಿಜಯಪುರದಲ್ಲಿ ಯತ್ನಾಳ್ ಪ್ರಭಾವ ಕುಗ್ಗಿಸಿ ಮಣಿಸಲು ಭಾರೀ ಸ್ಕೆಚ್ ರೆಡಿಯಾಗ್ತಿದೆ ಎನ್ನಲಾಗಿದೆ.

    ಯತ್ನಾಳ್ ರಾಜಕೀಯ ವಿರೋಧಿಗಳ ಜೊತೆ ಸ್ವಪಕ್ಷೀಯ ವಿರೋಧಿಗಳು ಕೈ ಮಿಲಾಯಿಸುವ ಪ್ರಯತ್ನಗಳೂ ತೆರೆಮರೆಯಲ್ಲಿ ನಡೀತಿವೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಜೆಪಿಯ ಅಂತರ್ಯುದ್ಧ ಭಾರೀ ಕುತೂಹಲ ಮೂಡಿಸಿರೋದಂತೂ ಸತ್ಯ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k