Tag: Basana Gowda Patil Yatnal

  • ಡಿಕೆಶಿಗೆ ಮಂಗಳೂರು ಕುಕ್ಕರ್‌ನೊಂದಿಗೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ: ಯತ್ನಾಳ್ ವ್ಯಂಗ್ಯ

    ಡಿಕೆಶಿಗೆ ಮಂಗಳೂರು ಕುಕ್ಕರ್‌ನೊಂದಿಗೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ: ಯತ್ನಾಳ್ ವ್ಯಂಗ್ಯ

    ಕಲಬುರಗಿ: ಉಗ್ರಗಾಮಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರ ಬ್ರದರ್ಸ್. ಅವರಿಗೆ ಮಂಗಳೂರು (Mangaluru) ಕುಕ್ಕರ್ (Cooker) ಜೊತೆ ಬೆಳಗಾವಿಯ (Belagavi) ಕುಕ್ಕರ್ ಮೇಲೆ ಹೆಚ್ಚು ಪ್ರೀತಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gowda Patil Yatnal) ವ್ಯಂಗ್ಯವಾಡಿದ್ದಾರೆ.

    ಉಗ್ರಗಾಮಿಗಳ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇ ಆರ್ ಆಲ್ ಮೈ ಬ್ರದರ್ಸ್ ಅಂತಾ ಡಿಕೆಶಿ ಹೇಳ್ತಿರ್ತಾರೆ. ಹಾಗಾಗಿ ಭಯೋತ್ಪಾದಕರು ಸಹ ಡಿಕೆಶಿಯ ಬ್ರದರ್ಸ್. ಡಿಕೆಶಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ ಇದೆ. ಮಂಗಳೂರು ಕುಕ್ಕರ್ ಜೊತೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ. ಒಟ್ಟಾರೆಯಾಗಿ ಡಿಕೆಶಿಗೆ ಕುಕ್ಕರ್ ಎಂದ್ರೆ ಬಹಳ ಪ್ರೀತಿ ಹಾಗಾಗಿ ಉಗ್ರ ಶಾರೀಕ್ ವಿಚಾರದಲ್ಲಿ ಆ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ. ಇದನ್ನೂ ಓದಿ: ಇವರಿಗೆ ಮಹಿಳೆಯರು ಹಿಜಬ್, ಬಿಕಿನಿ ಏನೇ ಧರಿಸಿದ್ರು ಸಮಸ್ಯೆ: ಪಠಾಣ್ ಪರ ನಿಂತ ನುಸ್ರತ್

    ಬಳಿಕ ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಚಿತ್ರದಲ್ಲಿ ನಟಿ ದೀಪಿಕಾ ಪಡಕೋಣೆ (Deepika Padukone)  ಕೇಸರಿ ಬಿಕಿನಿ (Bikini Controversy) ಧರಿಸಿದ ವಿಚಾರವಾಗಿ ಮಾತನಾಡಿ, ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣವನ್ನು ಅಪಮಾನ ಮಾಡಲಾಗ್ತಿದೆ. ಶೀಘ್ರವೇ ಶಾರುಖ್ ಖಾನ್ ಮಣ್ಣು ಮುಕ್ಕುತ್ತಾನೆ. ಈಗಾಗಲೇ ಅಮಿರ್ ಖಾನ್ ಸಿನಿಮಾ ಇಲ್ಲದೆ ಖಾಲಿ ಬಿದ್ದಿದ್ದಾನೆ. ಅದೇ ರೀತಿ ಶಾರುಖ್ ಖಾನ್ ಕೂಡ ಸಿನಿಮಾ ಇಲ್ಲದೆ ಕೂರುವ ಕಾಲ ಹತ್ತಿರವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಾರಿಕ್‌ನನ್ನು ವಶಕ್ಕೆ ಪಡೆದ NIA ಅಧಿಕಾರಿಗಳು

    Live Tv
    [brid partner=56869869 player=32851 video=960834 autoplay=true]

  • ಚಾಕು ಹಾಕಿದವರಿಗೆ ಪರಿಹಾರ ಕೊಡೋಕೆ ಹೋಗ್ತೀವಾ: ಯತ್ನಾಳ್‌ ಪ್ರಶ್ನೆ

    ಚಾಕು ಹಾಕಿದವರಿಗೆ ಪರಿಹಾರ ಕೊಡೋಕೆ ಹೋಗ್ತೀವಾ: ಯತ್ನಾಳ್‌ ಪ್ರಶ್ನೆ

    ವಿಜಯಪುರ: ನಾವು ಹಿಂದೂಗಳ ಪರವಾಗಿಯೇ ಇದ್ದೇವೆ. ಯಾರದೇನು ಅಂಜಿಕೆ, ಪಂಜಿಕೆಯಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

    ಸಿದ್ದರಾಮಯ್ಯ ಅವರು ಕೊಟ್ಟ ಪರಿಹಾರ ಹಣವನ್ನು ಮುಸ್ಲಿಂ ಮಹಿಳೆ ಎಸೆದ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಅವರು, ಅವರು ಸಿದ್ದರಾಮಯ್ಯ ಬಂಧುಗಳು. ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಇಂಧನ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಕರೆಂಟ್ ನಾಪತ್ತೆ – ವಿದ್ಯುತ್ ಇಲ್ಲದೆ ಪರದಾಡಿದ ಸುಳ್ಯದ ಜನತೆ

    ಅವರಿಗೂ ಗೊತ್ತಾಗಿದೆ, ಪರಿಹಾರ ಕೊಟ್ಟಷ್ಟೇ ಒಗಿತಾರೆ ಅಂತ. ಶಾಶ್ವತವಾಗಿ ನಮಗೆ ಪರಿಹಾರ ಕೊಡಲ್ಲ ಅಂತಾ ಮುಸ್ಲಿಮರಿಗೆ ಗೊತ್ತಾಗಿದೆ. ಬಿಜೆಪಿಯವರು ಮುಸ್ಲಿಂ ಮಹಿಳೆಗೆ ಕುಮ್ಮಕ್ಕು ಯಾಕೆ ಕೊಡ್ತಾರ್ರೀ. ರೊಕ್ಕ ಒಗೆದವರು ಬಿಜೆಪಿಯವರ ಮಾತು ಕೇಳ್ತಾರೇನ್ರಿ ಎಂದು ಪ್ರಶ್ನಿಸಿದ್ದಾರೆ.

    ನಾಳೆ ಅವರಿಗೆ ಮಕ್ಕಳು ಆಗದಿದ್ರೆ ಬಿಜೆಪಿ ಕುಮ್ಮಕ್ಕು ಅಂತಾರೆ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ. ಹಿಂದೂಗಳಿಗೆ ಅನ್ಯಾಯ ಆಗೈತಿ, ಅದಕ್ಕೆ ಹಿಂದೂಗಳಿಗೆ ಪರಿಹಾರ ಕೊಟ್ಟಿದ್ದೀವಿ. ಅದಕ್ಕೆ ಅಂಜಿಕೆಯೇನು? ಕೆರೂರು ಗಲಭೆ ಪ್ರಕರಣದಲ್ಲಿ ಬಿಜೆಪಿ ಸಚಿವರು, ಶಾಸಕರು ಹಿಂದೂ ಗಾಯಾಳುಗಳಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ ಎಂದು ಯತ್ನಾಳ್‌ ತಿಳಿಸಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಹಿಜಬ್ ಕಿಚ್ಚು – ವಿವಾದಿತ ವಿದ್ಯಾರ್ಥಿನಿಯರ ಮೂಲಕ CFI ಗರ್ಲ್ಸ್‌ ಕಾನ್ಫರೆನ್ಸ್

    ಅನ್ಯಾಯ ಆಗಿರೋದು ಹಿಂದೂಗಳಿಗೆ. ನೀವೂ ಸುಮ್ಮನೆ ಇದ್ದವರಿಗೆ (ಹಿಂದೂ) ಹೊಡೆದಿರಿ. ಅವರಿಗೇಕೆ ಪರಿಹಾರ ಕೊಡ್ತಾರೆ, ನಮಗೇನು ತಲೆ ಕೆಟ್ಟಿದೆಯಾ? ದೇಶದ್ರೋಹಿ ಕೆಲಸ ಮಾಡ್ತೀರಿ. ನೀವೂ ಚಾಕು ಹಾಕುತ್ತೀರಿ. ಚಾಕು ಹಾಕಿದವರಿಗೆ ಪರಿಹಾರ ಕೊಡೋಕೆ ಹೋಗ್ತೀವಾ? ನಾವು ಹಿಂದೂಗಳ ಪರವಾಗಿಯೇ ಇದ್ದೇವೆ. ಯಾರ ಅಂಜಿಕಿ, ಪಂಜಿಕೆಯಿಲ್ಲ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಹಿ ಸುದ್ದಿ ಕೊಟ್ಟರೆ ಸಿಎಂಗೆ ಕಲ್ಲುಸಕ್ಕರೆ ತುಲಾಭಾರ: ಜಯಮೃತ್ಯುಂಜಯ ಸ್ವಾಮೀಜಿ

    ಸಿಹಿ ಸುದ್ದಿ ಕೊಟ್ಟರೆ ಸಿಎಂಗೆ ಕಲ್ಲುಸಕ್ಕರೆ ತುಲಾಭಾರ: ಜಯಮೃತ್ಯುಂಜಯ ಸ್ವಾಮೀಜಿ

    ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರಕ್ಕೆ ಕೊಟ್ಟಿದ್ದ ಗಡುವು ಮುಗಿದಿದೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಕ್ಯಾಬಿನೆಟ್ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು. ಆಯೋಗದ ವರದಿ ಪಡೆದು ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದೊಂದೇ ಬಾಕಿ. ಈ ವಿಚಾರವಾಗಿ ನಿನ್ನೆ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಸಮಾಜದ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವರು ಧ್ವನಿ ಎತ್ತಿದ್ದು, 2ಎ ಮೀಸಲಾತಿ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ

    ನಿನ್ನೆ ಈ ವಿಚಾರವಾಗಿ ಇಂದು ಬೆಳಗ್ಗೆ ಸಿಎಂ ಉತ್ತರ ಕೋಡುತ್ತಾರೆ ಎಂದು ಹೇಳಿದ್ದರು. ಇಂದು ಸಿಎಂ ಉತ್ತರ ಕೊಟ್ಟರು. ಏನು ತೀರ್ಮಾನ ತೆಗೆದುಕೊಂಡಿದ್ದಾರೆ ನಮಗೆ ಗೊತ್ತಿಲ್ಲ. ಶಾಸಕ ಬಸನಗೌಡ ಪಾಟೀಲ್ ಬೆಳಗಾವಿಗೆ ಬರುತ್ತಾರೆ. ಯತ್ನಾಳ್‍ಗೆ ಸಿಎಂ ಯಾವ ಭರವಸೆ ನೀಡಿದ್ದಾರೆ ಗೊತ್ತಿಲ್ಲ. ಇಂದು ಸಮಾವೇಶದಲ್ಲಿ ಯತ್ನಾಳ್ ಅವರು ಭಾಗಿಯಾಗುವ ಸಾಧ್ಯತೆ ಇದೆ. ಸಮಾವೇಶದಲ್ಲಿ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ. ನಂತರ ಹೋರಾಟದ ಮುಂದಿನ ರೂಪರೇಷೆ ಬಗ್ಗೆ ಚರ್ಚೆ ಮಾಡಲಾಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು: ಆನಂದ್ ಸ್ವರೂಪ್ ಶುಕ್ಲಾ

    ಸರ್ಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳುವ ಭರವಸೆ ನಮಗಿದೆ. ಮೀಸಲಾತಿ ವಿಚಾರವಾಗಿ ಸರ್ಕಾರ ಬೇಗ ಸಿಹಿ ಸುದ್ದಿ ಕೊಡಬೇಕು. ಸಿಹಿ ಸುದ್ದಿ ಕೊಟ್ಟರೆ ಸಿಎಂಗೆ ಕಲ್ಲುಸಕ್ಕರೆ ತುಲಾಭಾರ ಮಾಡಲಾಗುತ್ತೆ, ಇಲ್ಲಾವಾದರೆ ಮತ್ತೆ ಹೋರಾಟ ಮುಂದುವರಿಸಲಾಗುತ್ತೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

  • ಬಿಎಸ್‍ವೈ, ಸಿದ್ದರಾಮಯ್ಯ, ಜಮೀರ್ ಎಲ್ಲರೂ ಆಪ್ತರು – ಯತ್ನಾಳ್

    ಬಿಎಸ್‍ವೈ, ಸಿದ್ದರಾಮಯ್ಯ, ಜಮೀರ್ ಎಲ್ಲರೂ ಆಪ್ತರು – ಯತ್ನಾಳ್

    ಹಾವೇರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಎರಡು ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೋ ಹೊರತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ಸಿಎಂ ಸ್ಥಾನದಲ್ಲಿ ಇರುತ್ತಾರೆ ಎಂದು ಘೋಷಿಸಿಲ್ಲ ಎಂದು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್  ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಜೊತೆ ಬಹಳ ಆಪ್ತರಾಗಿದ್ದಾರೆ. ಹಾಗಾಗಿ ಯಡಿಯೂರಪ್ಪ ಯಾವಾಗ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂಬುದು ಅವರಿಗೆ ಮಾತ್ರ ಗೊತ್ತಿದೆ. ಯಡಿಯೂರಪ್ಪ, ಜಾರ್ಜ್, ಜಮೀರ್ ಅಹಮ್ಮದ್ ಖಾನ್ ಎಲ್ಲರೂ ಬಹಳ ಆಪ್ತರು. ಅಮಿತ್ ಶಾ ಎರಡೂವರೆ ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೆ. ಆದರೆ ಯಡಿಯೂರಪ್ಪನವರೆ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿದರು.

    ರಾಜ್ಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ನಾನು ಸಚಿವ ಸ್ಥಾನ ಕೇಳಿಲ್ಲ. ಯಾವ್ಯಾವ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅಂತಹ ಕಡೆಗಳಲ್ಲಿ ಸಚಿವ ಸ್ಥಾನ ನೀಡುವಂತೆ ಹೇಳಿದ್ದೇನೆ. ಸಚಿವ ಸ್ಥಾನ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದರು.

    ಇದೇ ವೇಳೆ ಸಿಡಿ ವಿಚಾರವಾಗಿ ನಾನು ಏನು ಹೇಳಿಲ್ಲ. ನಾನು ಶರಣರ ವಚನಗಳ ಸಿಡಿ ನೋಡುತ್ತೇನೆ ಹೊರತು ಅಂತಹ ಸಿಡಿಗಳನ್ನು ನೋಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದನ್ನು ನಾನು ಹೇಳಿದ್ದೇನೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

    ಸದ್ಯ ಈಗ ಮೋದಿಯವರ ಗಾಳಿ ಇರುವುದರಿಂದ ವಲಸಿಗ ಶಾಸಕರು ಮೋದಿಯವರಿಗೆ ಜೈ ಅಂತಿದ್ದಾರೆ. ನಾಳೆ ಗಾಳಿ ಬೇರೆಯಾದರೆ ಸೋನಿಯಾಕಿ ಜೈಕಾರ ಹಾಕುತ್ತಾರೆ. ದೇವೇಗೌಡ ಅಪ್ಪಾಜಿ ಎಂದು ಕೂಡ ಕರೆಯುತ್ತಾರೆ. ವಲಸಿಗ ಶಾಸಕರು ಈಗ ಮೂಲ ಬಿಜೆಪಿ ಶಾಸಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾ ಇದೇ ವೇಳೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅಲ್ಲ, ಅವರು ಉಪಾದ್ಯಾಪಿ ಠಾಕ್ರಿ. ಚುನಾವಣಾ ಸ್ಟಂಟ್ ಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.