Tag: basana gouda patil yatnal

  • ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ: ಯತ್ನಾಳ್ ನಿಗಿನಿಗಿ ಕೆಂಡ

    ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ: ಯತ್ನಾಳ್ ನಿಗಿನಿಗಿ ಕೆಂಡ

    – ಪ್ರಹ್ಲಾದ್ ಜೋಶಿಯನ್ನ ಸೋಲಿಸಲು ಬಿಎಸ್‌ವೈ ಚೇಲಾಗಳನ್ನ ರೆಡಿ ಮಾಡಿದ್ದಾರೆ; ಹೊಸ ಬಾಂಬ್

    ಹುಬ್ಬಳ್ಳಿ: ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಆರೋಪಿಸಿದರು.

    ಹುಬ್ಬಳ್ಳಿಯ(Hubballi) ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೇನು ಭ್ರಷ್ಟಾಚಾರ ಮಾಡಿಲ್ಲ, ಅಡ್ಡ ಮತದಾನ ಮಾಡಿಲ್ಲ. ಎಲ್ಲಾ ಸಮುದಾಯದ ಯುವಕರು ರಸ್ತೆಗೆ ಬಂದು ನನ್ನ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಹಿಂದುತ್ವದ ಪರವಾಗಿ ಮಾತನಾಡುತ್ತಿರುವವನ್ನು ತುಳಿಯುತ್ತಿದ್ದಾರೆ ಎಂಬ ಭಾವನೆ ಜನರಲ್ಲಿದೆ. ನನ್ನ ಪರವಾಗಿ ಮಾತನಾಡಿ, ಹೋರಾಟ ಮಾಡಿ ಎಂದು ನಾನು ಯಾರಿಗೂ ಹೇಳಿಲ್ಲ. ಇಡೀ ಹಿಂದು ಸಮಾಜ ನನ್ನ ಪರವಾಗಿ ಹೋರಾಟ ಮಾಡುತ್ತಿದೆ ಎಂದರು. ಇದನ್ನೂ ಓದಿ: ಅಯ್ಯೋ ವಿಧಿಯೇ… ಕಾಲೇಜಿನಲ್ಲಿ ವಿದಾಯ ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

    ಈ ಹಿಂದೆ ಯಡಿಯೂರಪ್ಪನವರನ್ನ(B S Yediyurappa) ಮತ್ತು ಸಿದ್ದರಾಮಯ್ಯನವರನ್ನ(Siddaramaiah) ಹೊರಗಡೆ ಹಾಕಿದಾಗ ಇಷ್ಟು ದೊಡ್ಡಮಟ್ಟದ ಹೋರಾಟ ಮಾಡಿಲ್ಲ. ಇಂದು ಸ್ವಯಂಪ್ರೇರಿತವಾಗಿ ಜನರು ಹೋರಾಟ ಮಾಡುತ್ತಿದ್ದಾರೆ. ನಾವು ಯಾರಿಗೂ ದುಡ್ಡು ಕೊಟ್ಟು ಹೋರಾಟ ಮಾಡಲು ಹೇಳಿಲ್ಲ. ಹಿಂದೂ ಯುವಕರ ಕೊಲೆಯಾದ ಸಮಯದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದೇನೆ. ನಾನು ಕೂಡಲಸಂಗಮದ ಶ್ರೀಗಳಿಗೆ ಹೋರಾಟ ಮಾಡಿ ಎಂದು ಹೇಳಿಲ್ಲ ಎಂದು ಹೇಳಿದರು.

    ಮೋಹನ್ ಲಿಂಬಿಕಾಯಿ ಯಡಿಯೂರಪ್ಪನ ಚೇಲಾ
    ಮೀಸಲಾತಿಗಾಗಿ ಪಾದಯಾತ್ರೆ ಆರಂಭ ಮಾಡಿದಾಗ ನಾನೇ ಅದಕ್ಕೆ ಚಾಲನೆ ನೀಡಿದ್ದೆ. ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಮಹಾನಾಯಕ ನಮ್ಮ ಸ್ವಾಮೀಜಿಗಳಿಗೆ ಹೋರಾಟ ಕೈ ಬಿಡಲು ಆಮಿಷ ತೋರಿಸಿದ್ದರು. ಸಮಾಜದ ವ್ಯಕ್ತಿಗಳಿಗೆ ಅನ್ಯಾಯ ಆದಾಗ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಪರೋಕ್ಷವಾಗಿ ಪಂಚಮಸಾಲಿ ಮುಖಂಡರಾದ ಮೋಹನ್ ಲಿಂಬಿಕಾಯಿ, ನೀಲಕಂಠ ಶೆಟ್ಟಿ, ಪ್ರಭಣ್ಣ ಹುಣಸಿಕಟ್ಟಿ ಮೇಲೆ ಹರಿಹಾಯ್ದ ಅವರು, ಮೋಹನ್ ಲಿಂಬಿಕಾಯಿ ಯಡಿಯೂರಪ್ಪನ ಚೇಲಾ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಹುಬ್ಬಳ್ಳಿ | ಭೀಕರ ರಸ್ತೆ ಅಪಘಾತ – ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

    ಪಂಚಮಸಾಲಿ ಹೋರಾಟದ ಸಮಯದಲ್ಲಿ ಸುವರ್ಣಸೌಧದ ಮುಂದೆ ಲಾಠಿ ಚಾರ್ಜ್ ಮಾಡಲಾಗಿದೆ. ಬಿಜೆಪಿ ಸರ್ಕಾರ 2ಡಿ ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಮೀಸಲಾತಿ ಜಾರಿ ಮಾಡಲು ಆಸಕ್ತಿ ತೋರುತ್ತಿಲ್ಲ. ಮುಸ್ಲಿಂ ಮೀಸಲಾತಿ ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗುತ್ತಿದೆ. ಆದರೆ ರೈತಾಪಿ ವರ್ಗ ಅತೀ ಹೆಚ್ಚು ಇರುವ ಪಂಚಮಸಾಲಿ ಸಮುದಾಯಕ್ಕೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾರ್ಯ ಆಗಬೇಕು
    ಮಾನವೀಯತೆ ಬಿಟ್ಟು ಪಂಚಮಸಾಲಿ ಸಮುದಾಯದ ಹೋರಾಟದ ಸಮಯದಲ್ಲಿ ಹಿಗ್ಗಾಮುಗ್ಗಾ ಹೊಡೆದು ಚಿತ್ರಹಿಂಸೆ ನೀಡಲಾಗಿದೆ. ಲಾಠಿ ಚಾರ್ಜ್ ಗೈಡ್‌ಲೈನ್ಸ್ ಬಿಟ್ಟು, ಮಾನವ ಹಕ್ಕು ಉಲ್ಲಂಘನೆ ಮಾಡಿ ಪಂಚಮಸಾಲಿ ಸಮುದಾಯದ ಮೇಲೆ ಹಲ್ಲೆ ಮಾಡಲಾಗಿದೆ. ಈ ಸರ್ಕಾರಕ್ಕೆ ಹಿಂದೂಗಳ ಮೇಲೆ ಎಷ್ಟು ದ್ವೇಷಯಿದೆ. ಅಮಾನುಷವಾಗಿ ಈ ಲಾಠಿ ಚಾರ್ಜ್ ಮಾಡಲಾಗಿದೆ. ಹೈಕೋರ್ಟ್ ಸೂಚನೆಯನ್ನು ಸ್ವಾಗತ ಮಾಡುತ್ತೇನೆ. ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾರ್ಯ ಆಗಬೇಕು ಎಂದರು. ಇದನ್ನೂ ಓದಿ: ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?

    ವಿಜಯೇಂದ್ರನ ಹಗರಣಕ್ಕೆ ಯಡಿಯೂಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ರು
    ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಹೈಕಮಾಂಡ್ ಕೆಳಗೆ ಇಳಿಸಿದ್ದು ಏಕೆಂದರೆ ಅವರು ಮಾಡಿದ ಭ್ರಷ್ಟಾಚಾರ, ಚೆಕ್ ಮೂಲಕ ಲಂಚ ತೆಗೆದುಕೊಂಡಿದ್ದೆ ರಾಜೀನಾಮೆಗೆ ಕಾರಣ. ಅವರ ಸುಪುತ್ರ ವಿಜಯೇಂದ್ರ(B Y Vijayendra) ಮಾಡಿದ ಹಗರಣದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ನನ್ನನ್ನ ನೀವು ಹೊರಗಡೆ ಹಾಕಿರಬಹುದು. ರಾಜ್ಯದಲ್ಲಿ ಇವತ್ತು ಹಿಂದುತ್ವದ ನಾಯಕ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಭಗವಾಧ್ವಜದ ಮೇಲೆ ಚುನಾವಣೆ ಎದುರಿಸ್ತೇನೆ, ಮುಸ್ಲಿಂ ಮತಗಳು ಬೇಕಿಲ್ಲ: ಯತ್ನಾಳ್‌ ಲೇವಡಿ

    ಎಲ್ಲಾ ಸಮಾಜ ನ್ಯಾಯಕ್ಕಾಗಿ ಸದನದಲ್ಲಿ ಹೋರಾಟ ಮಾಡಿದವನು ನಾನು. ಕೂಡಲಸಂಗಮ ಸ್ವಾಮೀಜಿಗಳು ಬಹಳಷ್ಟು ನಿಸ್ವಾರ್ಥರಾಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೋರಾಟವನ್ನ ನಮ್ಮ ಸ್ವಾಮೀಜಿಗಳು ಮುಂದುವರೆಸುತ್ತಾರೆ. ಸಮಾಜದ ಹೋರಾಟದಿಂದ ಮಂತ್ರಿ ಸ್ಥಾನವನ್ನ ತಪ್ಪಿಸಿಕೊಂಡವನು ನಾನು ಎಂಬುದು ಎಲ್ಲರಿಗೂ ಗೊತ್ತು. ಪ್ರಬಣ್ಣ ಹುಣಸಿಕಟ್ಟಿ ಶನಿವಾರ ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಪ್ರಹ್ಲಾದ್ ಜೋಶಿ(Prahlad Joshi) ಮತ್ತು ಅರವಿಂದ್ ಬೆಲ್ಲದ್ ಅವರನ್ನ ಸೋಲಿಸಲು ಇಲ್ಲೊಬ್ಬ ನ್ಯಾಯವಾದಿಯನ್ನ ಯಡಿಯೂರಪ್ಪ ರೆಡಿ ಮಾಡಿದ್ದಾರೆ. ಪ್ರತಿಯೊಬ್ಬರನ್ನ ಸೋಲಿಸಲು ಒಬ್ಬೊಬ್ಬ ಚೇಲಾಗಳನ್ನ ಯಡಿಯೂರಪ್ಪ ಸಿದ್ಧ ಮಾಡಿ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • BSY ವಿರುದ್ಧ ಆರೋಪದ ನಡುವೆಯೇ ವಿಜಯಪುರಕ್ಕೆ ವಿಜಯೇಂದ್ರ ಭೇಟಿ- ಜಿಲ್ಲಾ ಬಿಜೆಪಿಯಲ್ಲಿ ಸಂಚಲನ

    BSY ವಿರುದ್ಧ ಆರೋಪದ ನಡುವೆಯೇ ವಿಜಯಪುರಕ್ಕೆ ವಿಜಯೇಂದ್ರ ಭೇಟಿ- ಜಿಲ್ಲಾ ಬಿಜೆಪಿಯಲ್ಲಿ ಸಂಚಲನ

    ವಿಜಯಪುರ: ಕಳೆದ ವಿಧಾನಸಭೆ ಚುನಾವಣೆಗೆ ಮುಂಚೆ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸಿಎಂ ಆಗಿದ್ದ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪಗಳ ಸುರಿಮಳೆ ಸುರಿಸಿದರು. ಬಳಿಕ ಚುನಾವಣೆ ವೇಳೆ ಯಡಿಯೂರಪ್ಪ ನಮ್ಮ ಹಿರಿಯರು ಅಂತಾ ಹೇಳಿ ಆಶ್ಚರ್ಯ ಮೂಡಿಸಿದರು. ರಾಜ್ಯ ಬಿಜೆಪಿಯ (BJP) ಚುಕ್ಕಾಣಿಯನ್ನ ವಿಜಯೇಂದ್ರ (BY Vijayendra) ಹಿಡಿಯುತ್ತಿದಂತೆ ಇದೀಗ ಮತ್ತೆ ಯತ್ನಾಳ್ ಯಡಿಯೂರಪ್ಪ (B S Yediyurappa) ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಅಂತರ್ ಯುದ್ಧದ ಮಧ್ಯೆ ವಿಜಯೇಂದ್ರ ಅವರು ಯತ್ನಾಳ್ ಅಡ್ಡಾಕ್ಕೆ ಲಗ್ಗೆ ಇಡುತ್ತಿದ್ದಾರೆ.

    ಹೌದು. ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದ ಮೇಲೆ ಪ್ರಥಮ ಬಾರಿಗೆ ವಿಜಯಪುರ ನಗರಕ್ಕೆ ವಿಜಯೇಂದ್ರ ಪಾದಾರ್ಪಣೆ ಮಾಡುತ್ತಿದ್ದಾರೆ. ಶನಿವಾರ ವಿಜಯಪುರ ನಗರಕ್ಕೆ ವಿಜಯೇಂದ್ರ ಆಗಮಿಸುತ್ತಿದ್ದು, ನಗರದ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿ ನಾಯಕರ ಸಭೆ ನಡೆಸಿ ಜಿಲ್ಲಾ ಬಿಜೆಪಿಯ ಸಂಘಟನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಂತರ ನಗರದ ಆಶ್ರಮದಲ್ಲಿರುವ ಶ್ರೀ ಸಿದ್ದೇಶ್ವರ ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಲಿಂಗೈಕ್ಯದ ಹಿನ್ನೆಲೆ ನಡೆಯುತ್ತಿರುವ ಗುರುನಮನ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

    ಸಹಜವಾಗಿಯೇ ಬಿಜೆಪಿ ರಾಜ್ಯಧ್ಯಕ್ಷರ ವಿಜಯಪುರ ಭೇಟಿಯಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದ್ರೆ, ಇನ್ನೊಂದೆಡೆ ಯತ್ನಾಳ್ ವಿರೋಧಿಗಳಲ್ಲಿ ಕುತೂಹಲ ಕೂಡ ಮೂಡಿದೆ. ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿರುವ ಯತ್ನಾಳ್ ವಿರುದ್ಧ ಕ್ರಮದ ಬಗ್ಗೆ ವಿಜಯೇಂದ್ರ ಘೋಷಿಸಿಸುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಕೋವಿಡ್‌ ವೇಳೆ 40 ಸಾವಿರ ಕೋಟಿ ಅವ್ಯವಹಾರ, 45 ರೂ. ಮಾಸ್ಕ್‌ಗೆ 485 ರೂ. ಬಿಲ್‌: ಯತ್ನಾಳ್‌ ಬಾಂಬ್‌

    ಯತ್ನಾಳ್ ಆರೋಪ ಏನು..?: ಬಿಜೆಪಿ ಸರ್ಕಾರದಲ್ಲಿಯೇ ಭಾರೀ ಕೋವಿಡ್ ಹಗರಣ ನಡೆದಿದೆ. ಕೊರೋನಾ ವೇಳೆ 40 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ಡಿಕೆಶಿ ಕೇಸ್ ಬಳಿಕ ಅಪ್ಪಾಜಿಯದ್ದೇ, ತನಿಖೆ ಮಾಡಿಸುವೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ 45 ರೂಪಾಯಿ ಮಾಸ್ಕ್‍ಗೆ 485 ಬಿಲ್ ಹಾಕಿದ್ದಾರೆ. 10 ಸಾವಿರ ಬೆಡ್‍ಗಳ ಬಾಡಿಗೆ ಬಿಲ್‍ನಲ್ಲಿ ಬೆಡ್ ಖರೀದಿ ಮಾಡಿದ್ರೆ, ಎರಡು ಬೆಡ್ ಬರ್ತಿದ್ವು. ಒಂದು ಬೆಡ್‍ಗೆ 20 ಸಾವಿರ ಬಾಡಿಗೆ, 20 ಸಾವಿರದಲ್ಲಿ ಹೊಸ ಬೆಡ್ ಬರುತ್ತಿತ್ತು. ಮಾಸ್ಕ್, ಬೆಡ್‍ಗಳಲ್ಲಿಯು ಭ್ರಷ್ಟಾಚಾರ ನಡೆದಿದೆ ಎಂದು ಸ್ವಪಕ್ಷದ ನಾಯಕನ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು. ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ ಅಥವಾ ನೋಟಿಸ್ ನೀಡಲಿ ಅವರ ಬಗ್ಗೆ ಉಚ್ಚಾಟನೆ ಮಾಡಿದ ಮರುದಿನ ಎಲ್ಲಾ ಹೇಳ್ತೀನಿ. ದಾಖಲೆ ಬಿಡುಗಡೆ ಮಾಡೋದಾಗಿ ಬಹಿರಂಗ ಸವಾಲ್ ಹಾಕಿದ್ದರು.

  • ನಿಮ್ಮ ಬಗ್ಗೆ ಗೌರವವಿದೆ, ಭಿನ್ನಾಭಿಪ್ರಾಯ ಕೈಬಿಡಿ- ಯತ್ನಾಳ್‍ಗೆ ರೇಣುಕಾಚಾರ್ಯ ವಿನಂತಿ

    ನಿಮ್ಮ ಬಗ್ಗೆ ಗೌರವವಿದೆ, ಭಿನ್ನಾಭಿಪ್ರಾಯ ಕೈಬಿಡಿ- ಯತ್ನಾಳ್‍ಗೆ ರೇಣುಕಾಚಾರ್ಯ ವಿನಂತಿ

    ದಾವಣಗೆರೆ: ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ದಯವಿಟ್ಟು ಭಿನ್ನಾಭಿಪ್ರಾಯಗಳನ್ನು ಕೈ ಬಿಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರಿಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ಮನವಿ ಮಾಡಿಕೊಂಡರು.

    ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಆತ್ಮೀಯ ಸ್ನೇಹಿತರು ಕೇಂದ್ರ ಸಚಿವರಾಗಿರುವ ಅನುಭವ ಇದೆ. ನಿಮ್ಮ ಬಗ್ಗೆ ಗೌರವವಿದೆ, ನಾನು ವಿನಂತಿ ಮಾಡುತ್ತೇನೆ. ನಮ್ಮ ಸಂಘರ್ಷದಿಂದಲೇ ಕಳೆದ ಬಾರಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಪ್ರತಿ ಬಾರಿ ಯಡಿಯೂರಪ್ಪ, ವಿಜಯೇಂದ್ರ ಅವರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಹೇಳಿದರು.

    ವಿಜಯೇಂದ್ರ (BY Vijayendra) ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಎಲ್ಲರೂ ಒಟ್ಟಾಗಿ ಮಾಡಿದ್ದಾರೆ. ಮುಂದಿನ ಲೋಕಸಭೆಗೆ 28 ಸ್ಥಾನ ಗೆಲ್ಲ ಬೇಕು. ಯತ್ನಾಳ್ ಜೆಡಿಎಸ್ ಗೆ ಹೋದಾಗ ಯಡಿಯೂರಪ್ಪನವರು ಪಕ್ಷಕ್ಕೆ ವಾಪಸ್ ಕರೆ ತಂದಿದ್ದರು. ಆದರೆ ಯಡಿಯೂರಪ್ಪನವರ (BS Yediyurappa) ಬಗ್ಗೆ ಪದೇ ಪದೇ ಟೀಕೆ ಮಾಡಿದರೆ ಒಳ್ಳೆಯದಲ್ಲ. ಈ ರೀತಿ ಟೀಕೆ ಮಾಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂದು ತಿಳಿಸಿದರು.

    ಇನ್ನಾದರೂ ಒಟ್ಟಾಗಿ ಹೋಗುವ ಮೂಲಕ ಭಿನ್ನಾಭಿಪ್ರಾಯ ಕೈ ಬಿಡಬೇಕೆಂದು ರೇಣುಕಾಚಾರ್ಯ ಅವರು ಯತ್ನಾಳ್ ಜೊತೆ ವಿನಂತಿ ಮಾಡಿಕೊಂಡರು. ಇದನ್ನೂ ಓದಿ: ಕರ್ನಾಟಕದಲ್ಲಿ ನಮ್ಮ ಮುಟ್ಟಾಳತನದಿಂದಲೇ ಅಧಿಕಾರ ಕಳೆದುಕೊಂಡ್ವಿ – ಈಶ್ವರಪ್ಪ

  • ಯತ್ನಾಳ್ ವಿರುದ್ಧ ಒಳಸಂಚು ಮಾಡಿ ವಿಪಕ್ಷ ನಾಯಕ ಸ್ಥಾನ ತಪ್ಪಿಸಿದರು: ಜಯಮೃತ್ಯುಂಜಯ ಸ್ವಾಮೀಜಿ

    ಯತ್ನಾಳ್ ವಿರುದ್ಧ ಒಳಸಂಚು ಮಾಡಿ ವಿಪಕ್ಷ ನಾಯಕ ಸ್ಥಾನ ತಪ್ಪಿಸಿದರು: ಜಯಮೃತ್ಯುಂಜಯ ಸ್ವಾಮೀಜಿ

    ವಿಜಯಪುರ: ಯತ್ನಾಳ್‌ ವಿರುದ್ಧ ಒಳಸಂಚು ಮಾಡಿ ವಿಪಕ್ಷ ನಾಯಕ ಸ್ಥಾನ ತಪ್ಪಿಸಿದರು ಎಂದು ಬಿಜೆಪಿ ನಾಯಕರ ವಿರುದ್ಧ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ (Jayamrutyunjaya Swamiji) ಅಸಮಾಧಾನ ವ್ಯಕ್ತಪಡಿಸಿದರು.

    ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನ ಪಂಚಮಸಾಲಿ ಸಮಾಜಕ್ಕೆ ಸಿಗುವ ನಿರೀಕ್ಷೆ ಇತ್ತು. ಆದರೆ ಹುಸಿಯಾಗಿದೆ. ಇದರಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಉತ್ತರ ಕರ್ನಾಟಕದ ಯಾರಿಗಾದರೂ ವಿಪಕ್ಷ ನಾಯಕ ಸ್ಥಾನ ನೀಡಬೇಕಿತ್ತು. ಬಿಜೆಪಿ ಮೊದಲಿನಿಂದಲೂ ಪಂಚಮಸಾಲಿ ಸಮುದಾಯದ ನಾಯಕರನ್ನ ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದಾರೆ ಎಂದು ಬೇಸರಿಸಿದರು. ಇದನ್ನೂ ಓದಿ: ಜಮೀರ್ ಒಬ್ಬ ಮತಾಂಧ, ಮುಸ್ಲಿಂ ಭೂತ ಹಿಡಿದಿದೆ: ಮುತಾಲಿಕ್ ಕಿಡಿ

    ಪಂಚಮಸಾಲಿ ಹೋರಾಟದಲ್ಲಿ ಇದ್ದವರನ್ನೇ ಟಾರ್ಗೆಟ್ ಮಾಡಿದ್ದಾರೆ. ಹೋರಾಟ ವಿರೋಧಿಸಿದ ಸಮಾಜದ ಕೆಲವರೊಟ್ಟಿಗೆ ಸೇರಿ ಒಳಸಂಚು ಮಾಡಿ ಯತ್ನಾಳ್ (Basanagouda Patil Yatnal) ಅವರಿಗೆ ಸಿಗಬೇಕಿದ್ದ ವಿಪಕ್ಷ ನಾಯಕ ಸ್ಥಾನವನ್ನ ತಪ್ಪಿಸಿದ್ದಾರೆ ಎಂದು ದೂರಿದರು.

    ಬೆಳಗಾವಿ (Belagavi) ಚಳಿಗಾಲದ ಅಧಿವೇಶನದ ಒಳಗಾಗಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ‌ ನೀಡಿ. ಮೀಸಲಾತಿ ಘೋಷಿಸದಿದ್ದರೆ ಅಧಿವೇಶನದಲ್ಲಿ ಲಿಂಗ ಪೂಜೆ ಮಾಡುತ್ತೇವೆ‌. ಜಾತ್ಯತೀತ ಅಂತ ಹೇಳುವ ಸಿಎಂ‌ ಸಿದ್ದರಾಮಯ್ಯ ನಮ್ಮ‌ ಸಮುದಾಯಕ್ಕೆ ಮೀಸಲಾತಿ ನೀಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ನನ್ನ ಧರಧರನೇ ಎಳೆದೊಯ್ದು ಠಾಣೆಯಲ್ಲಿ ಕೂರಿಸಿದ್ದರು- ನೆನಪು ಮೆಲುಕು ಹಾಕಿಕೊಂಡ ಸಿಎಂ

    ತಮ್ಮ‌ ಸಮುದಾಯ ಮೀಸಲಾತಿಗೆ ಶಿಫಾರಸು ಮಾಡಿದ್ದಾರೆ. ಅದೇ ರೀತಿ ಪಂಚಮಸಾಲಿ ಸಮುದಾಯದ ಮೀಸಲಾತಿಗೂ ಶಿಫಾರಸು ಮಾಡಲಿ. ಕಾಂಗ್ರೆಸ್ (Congress) ಪಕ್ಷದಲ್ಲಿರುವ ನಮ್ಮವರು ಇದಕ್ಕೆ ಒತ್ತಾಯ ಮಾಡಿದ್ದಾರೆ ಎಂದರು.