Tag: basana gauda patil yatnal

  • ನಿರಾಣಿಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿದೆ: ವಿಜಯಾನಂದ ಕಾಶಪ್ಪನವರ್

    ನಿರಾಣಿಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿದೆ: ವಿಜಯಾನಂದ ಕಾಶಪ್ಪನವರ್

    ಯಾದಗಿರಿ: ಸಚಿವ ಮುರುಗೇಶ್ ನಿರಾಣಿ ಅವರೇ ದೊಡ್ಡ ನಾಲಾಯಕ್. ನಿರಾಣಿಯವರಿಗೆ ಅಧಿಕಾರದ ಹುಚ್ಚು ಹಿಡಿದಿದೆ. ಅವರಿಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿದೆ ಅಂತ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ತಿರುಗೇಟು ನೀಡಿದ್ದಾರೆ.

    ಯಾದಗಿರಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾನಾಡಿದ ಅವರು, ಯತ್ನಾಳ್ ವಿರುದ್ಧ ಸಚಿವ ನಿರಾಣಿ ನಾಲಾಯಕ್ ಪದ ಬಳಕೆ ವಿಚಾರ ಸಂಬಂಧ ಪ್ರತಿಕ್ರಿಯಸಿದರು. ನಿರಾಣಿಯವರಿಗೆ ಸಮಾಜದ ಬಗ್ಗೆ ಕಳಕಳಿ ಇಲ್ಲ. ನನ್ನ ಬಗ್ಗೆ ಸ್ವಾಮೀಜಿ ಬಗ್ಗೆ ಅತೀ ಕೀಳಾಗಿ ಮಾತನಾಡಿರುವುದು ಮಾಧ್ಯಮದಲ್ಲಿ ಕಂಡಿದ್ದೀರಿ. ಸದನದಲ್ಲಿ ವರದಿ ತರಿಸಿಕೊಂಡು ಆರು ತಿಂಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದರು.

    ಇವರ್ಯಾಕೆ ಹಿಯ್ಯಾಳಿಸುವಂತ ಮಾತಾಡುತ್ತಿದ್ದಾರೆ. ಬಸನಗೌಡ ಯತ್ನಾಳ್ ಅವರು ಸಮಾಜದ ಪರ ನಿಂತಿದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಸಮಾಜದ ವಿರುದ್ಧ ಹೀಗೆ ಹೇಳಿಕೆಗಳನ್ನ ಕೊಟ್ರೆ ಸಮಾಜ ತಕ್ಕ ಪಾಠ ಕಲಿಸುತ್ತದೆ.ಸ್ವಾಮಿಜೀ ಅವರ ಆಶೀರ್ವಾದದಿಂದ ಮಂತ್ರಿಯಾಗಿರೋದನ್ನ ಮರೆಯಬಾರದೆಂದು ಎಚ್ಚರಿಕೆ ನೀಡಿದರು.

  • ಯತ್ನಾಳ್, ಬಿಎಸ್‍ವೈ ಮುಖಾಮುಖಿ – ನಾನು, ನೀನು ಕೂತು ಮಾತನಾಡೋಣವೆಂದ ಸಿಎಂ

    ಯತ್ನಾಳ್, ಬಿಎಸ್‍ವೈ ಮುಖಾಮುಖಿ – ನಾನು, ನೀನು ಕೂತು ಮಾತನಾಡೋಣವೆಂದ ಸಿಎಂ

    ಬೆಂಗಳೂರು: ವಿಧಾನಸಭೆಯ ಮೊಗಸಾಲೆಯಲ್ಲಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಮುಖಾಮುಖಿಯಾದರು.

    ವಿಧಾನಸಭೆ ಕಲಾಪ ಮುಂದೂಡುತ್ತಲೇ ಯಡಿಯೂರಪ್ಪ, ಯತ್ನಾಳ್ ಮುಖಾಮುಖಿ ಭೇಟಿಯಾದರು. ಈ ವೇಳೆ ಯತ್ನಾಳ್ ಬೆನ್ನು ತಟ್ಟಿದ ಯಡಿಯೂರಪ್ಪ, ನಾನು ನೀನು ಕುಳಿತು ಮಾತಾಡೋಣ. ಪಂಚಮಸಾಲಿ ಮೀಸಲಾತಿ ಕುರಿತು ಮಾತಾಡೋಣ. ಏನು ಬೇಕೋ ಮಾತಾಡೋಣ ಎಂದು ಬಿಎಸ್‍ವೈ ಅವರು ಯತ್ನಾಳ್ ಗೆ ಭರವಸೆ ನೀಡಿದರು.

    ಯತ್ನಾಳ್ ಅಷ್ಟೆಲ್ಲ ಕಿಡಿಕಾರಿದರೂ ಅಲ್ಲದೆ ಮುಜುಗರದ ಹೇಳಿಕೆ ಕೊಟ್ಟರೂ ಸಿಎಂ ಸಾಫ್ಟ್ ಆದರು. ಯತ್ನಾಳ್ ರನ್ನು ಮಾತುಕತೆಗೆ ಆಹ್ವಾನಿಸಿದ ಸಿಎಂ ಅವರು ಈ ಮೂಲಕ ಇಬ್ಬರ ಮಧ್ಯೆ ಸಂಘರ್ಷ ನಿಲ್ಲಿಸೋಣ ಎಂಬ ಸಂದೇಶ ರವಾನಿಸಿದರು.

    ಯತ್ನಾಳ್ ಜೊತೆ ಸಿಎಂ ಸಂಧಾನಕ್ಕೆ ಮುಂದಾದ ಕಾರಣ ಏನು?, ಪಂಚಮಸಾಲಿ ಹೋರಾಟ ನಿಲ್ಲಲಿ ಎಂಬ ಉದ್ದೇಶವಾ..? ಅಥವಾ ಸದ್ಯಕ್ಕೆ ಯತ್ನಾಳ್ ಜೊತೆ ವಿರಸಕ್ಕಿಂತ ಸ್ನೇಹವೇ ಸೂಕ್ತ ಅನ್ನೋ ಅಭಿಪ್ರಾಯಕ್ಕೆ ಬಂದ್ರಾ ಎಂಬ ಅನುಮಾನ ಎದ್ದಿದೆ.

  • ಯತ್ನಾಳ್ ಉಚ್ಛಾಟನೆಗೆ ಚಾರ್ಜ್‍ಶೀಟ್ ರೆಡಿ ಮಾಡ್ತಿದೆ ಸಿಎಂ ಟೀಂ..!

    ಯತ್ನಾಳ್ ಉಚ್ಛಾಟನೆಗೆ ಚಾರ್ಜ್‍ಶೀಟ್ ರೆಡಿ ಮಾಡ್ತಿದೆ ಸಿಎಂ ಟೀಂ..!

    ಬೆಂಗಳೂರು: ಪಂಚಮಸಾಲಿ ಸಮಾವೇಶದಲ್ಲಿ ಮತ್ತೆ ಸಿಎಂ ಬಿಎಸ್‍ವೈ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

    ಪದೇ ಪದೇ ಬಿಎಸ್‍ವೈ ಮೇಲೆ ಮಾತಿನ ಛಾಟಿ ಬೀಸುತ್ತಿರುವ ಯತ್ನಾಳ್ ವಿರುದ್ಧ ಗರಂ ಆಗಿರುವ ಬಿಎಸ್‍ವೈ ಟೀಂ ಇದೀಗ ಶಾಸಕರ ವಿರುದ್ಧ ಹೈಕಮಾಂಡ್‍ಗೆ ದೂರು ಕೊಡಲು ಮುಂದಾಗಿದೆ.

    ಮುಖ್ಯಮಂತ್ರಿಯವರೇ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ. ನೋಟಿಸ್ ಕೊಟ್ಟು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಮೀಸಲಾತಿ ನೀಡದಿದ್ದಲ್ಲಿ ಕುರ್ಚಿ ಖಾಲಿ ಮಾಡಿಸುತ್ತೇವೆ. ನಿನ್ನೆ ಸಮಾವೇಶದಲ್ಲಿ ಪ್ರಚೋದನೆ ಮಾಡಿದ್ದೇ ಯತ್ನಾಳ್. ಹೀಗಾಗಿ ಯತ್ನಾಳ್‍ಗೆ ಬುದ್ಧಿ ಕಲಿಸಲೇಬೇಕೆಂದು ಬಿಎಸ್‍ವೈ ಟೀಂ ಪಣ ತೊಟ್ಟಿದೆ.

    ಶತಾಯಗತಾಯ ಯತ್ನಾಳ್ ಉಚ್ಛಾಟನೆಗೆ ಬಿಎಸ್‍ವೈ ಟೀಂ ಪಟ್ಟು ಹಿಡಿದಿದ್ದು, ಶೀಘ್ರದಲ್ಲೇ ದೆಹಲಿಗೆ ತೆರಳಲು ಬಿಎಸ್‍ವೈ ಆಪ್ತರ ಒಂದು ಟೀಮ್ ಸಿದ್ಧತೆ ಮಾಡಿಕೊಂಡಿದೆ. ಯತ್ನಾಳ್ ವಿರುದ್ಧ ಚಾರ್ಜ್ ಶೀಟನ್ನೂ ರೆಡಿ ಮಾಡುತ್ತಿರುವ ಬಿಎಸ್‍ವೈ ಟೀಂ, ಇದುವರೆಗೆ ಯತ್ನಾಳ್ ಕೊಟ್ಟ ಹೇಳಿಕೆಗಳ ಬಗ್ಗೆ ವಿವರಿಸಲು ನಿರ್ಧಾರ ಮಾಡಿದೆ.

  • ನಮ್ಮ ಕುಟುಂಬದ ಬಗ್ಗೆ ಯತ್ನಾಳ್ ಪತ್ರ ಬರೆದಿದ್ದರೆ ಸಂತೋಷ: ವಿಜಯೇಂದ್ರ

    ನಮ್ಮ ಕುಟುಂಬದ ಬಗ್ಗೆ ಯತ್ನಾಳ್ ಪತ್ರ ಬರೆದಿದ್ದರೆ ಸಂತೋಷ: ವಿಜಯೇಂದ್ರ

    ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತುಂಬಾ ಹಿರಿಯರು. ಅವರಿಗೆ ನನ್ನ ಮೇಲೆ ಬಹಳ ಪ್ರೀತಿಯಿದೆ. ನಮ್ಮ ಕುಟುಂಬದ ಬಗ್ಗೆ ಅವರು ಪತ್ರ ಬರೆದಿದ್ದಾರೆಂದರೆ ಸಂತೋಷ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ವಕ್ರವಾಗಿ ನುಡಿದರು.

    ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಪತ್ರ ಬರೆದ ವಿಚಾರ ದೆಹಲಿಯ ನಾಯಕರು ನೋಡಿಕೊಳ್ಳುತ್ತಾರೆ ಎಂದಷ್ಟೇ ಹೇಳಿ, ರಾಜ್ಯದಲ್ಲಿ ಮೀಸಲಾತಿಗೆ ನಡೆದ ಹೋರಾಟದ ವಿಚಾರದಲ್ಲಿ ಯಾರ ವಿರೋಧವೂ ಇಲ್ಲ. ಸಿಎಂ, ಬಿಜೆಪಿ ನಾಯಕರು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಯಾವ ಗುಂಪುಗಾರಿಕೆಯೂ ನಡೆದಿಲ್ಲ. ಮೀಸಲಾತಿಗೆ ಹೋರಾಟ ಮಾಡುವುದು ಸಹಜ. ಹೋರಾಟ ಮಾಡುವುದು ತಪ್ಪಲ್ಲ. ಆದರೆ ಸಂವಿಧಾನದಡಿ ಯಾವ ರೀತಿ ಪರಿಹಾರ ಕೊಡಬೇಕು ಎನ್ನುವುದನ್ನ ಸಿಎಂ ನಿರ್ಧರಿಸುತ್ತಾರೆ ಎಂದರು.

    ಬಸವ ಕಲ್ಯಾಣ, ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಮುಂದಿನ ಚುನಾವಣೆಗೆ ನಾನು ಎಲ್ಲಿ ಅಭ್ಯರ್ಥಿಯಾಗುವೆ ಎನ್ನವುದು ಗೊತ್ತಿಲ್ಲ. ಅದೆಲ್ಲವನ್ನು ಪಕ್ಷ ನಿರ್ಣಯ ಮಾಡಲಿದೆ. ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಣೆ ವಿಚಾರಣದಲ್ಲಿ ಯಾರಾದರೂ ಅವಿದ್ಯಾವಂತರು ಮಾತನಾಡಿದ್ದರೆ ನಾನು ಉತ್ತರ ಕೊಡಬಹುದಿತ್ತು. ಆದರೆ ವಿದ್ಯಾವಂತರಾದ ಸಿದ್ದರಾಮಯ್ಯ, ಹೆಚ್‍ಡಿಕೆ ಅವರೇ ಈ ರೀತಿ ಮಾತನಾಡಿದರೆ ಹೇಗೆ? ಎಂದರಲ್ಲದೇ, ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ಅದು ವಿವಾಧಿತ ಎನ್ನುವುದು ನನಗೆ ಆಶ್ಚರ್ಯ ತರಿಸಿದೆ. ಇಂತಹ ವಿಷಯದಲ್ಲಿ ರಾಜಕೀಯ ಮಾಡಿ ಮತದಾರರನ್ನ ಅಡ್ಡದಾರಿಗೆ ತೆಗೆದುಕೊಂಡು ಹೋಗಿದ್ದಕ್ಕೆ ಕಾಂಗ್ರೆಸ್ಸಿಗೆ ಈ ಗತಿ ಬಂದಿದೆ ಎಂದು ಸಿದ್ದರಾಮಯ್ಯ, ಹೆಚ್‍ಡಿಕೆ ಹೇಳಿಕೆಗೆ ವಿಜಯೇಂದ್ರ ಅವರು ತಿರುಗೇಟು ನೀಡಿದರು.

  • ಯತ್ನಾಳ್ ಹಾವು-ಚೇಳು ಆರೋಪಕ್ಕೆ ವಿಜಯೇಂದ್ರ ತಿರುಗೇಟು

    ಯತ್ನಾಳ್ ಹಾವು-ಚೇಳು ಆರೋಪಕ್ಕೆ ವಿಜಯೇಂದ್ರ ತಿರುಗೇಟು

    ಶಿವಮೊಗ್ಗ: ಈ ಹಿಂದೆ ಮುಖ್ಯಮಂತ್ರಿ ಅವರ ನಿವಾಸದಲ್ಲಿ ಅವರ ಆಪ್ತ ಸಹಾಯಕರು, ಅಧಿಕಾರಿಗಳು ಇರುತ್ತಿದ್ದರು. ಆದರೆ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸದಲ್ಲಿ ಹಾವು-ಚೇಳುಗಳ ರೀತಿ ಅವರ ಕುಟುಂಬಸ್ಥರು ಸೇರಿಕೊಂಡಿದ್ದಾರೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು.

    ಯತ್ನಾಳ್ ಆರೋಪಕ್ಕೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಡಿವಿಜಿ ಅವರ ಕಗ್ಗದ ಮೂಲಕ ತಿರುಗೇಟು ನೀಡಿದ್ದಾರೆ. ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವನ ಕೊಂಕು ಮಾತಿಗೆ ಕೊರಗುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

    ಯತ್ನಾಳ್ ಅವರು ಹಾವು-ಚೇಳು ಅಂತ ಆರೋಪ ಮಾಡಿರುವುದು ರಾಜಕೀಯ ವಿರೋಧಿಗಳಿಗೆ. ಈ ರೀತಿಯ ವೈಯಕ್ತಿಕ ಹೇಳಿಕೆಗಳಿಗೆ ದಿನೇ ದಿನೇ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಕೆಲಸ ಮಾಡುವ ಮೂಲಕ, ಪಕ್ಷ ಸಂಘಟನೆ ಮಾಡುವ ಮೂಲಕ ನನ್ನದೇ ಆದ ಸೇವೆ ಮಾಡುತ್ತೇನೆ ಎಂದು ವಿಜಯೇಂದ್ರ ತಿಳಿಸಿದರು.