Tag: basana gauda patil yatnal

  • ಯತ್ನಾಳ್ ನಮ್ಮ ಸಮುದಾಯದ ನಾಯಕ, ಬಲಿಪಶು ಆಗ್ಬಾರ್ದು: ರೇಣುಕಾಚಾರ್ಯ ಸಾಫ್ಟ್ ಕಾರ್ನರ್

    ಯತ್ನಾಳ್ ನಮ್ಮ ಸಮುದಾಯದ ನಾಯಕ, ಬಲಿಪಶು ಆಗ್ಬಾರ್ದು: ರೇಣುಕಾಚಾರ್ಯ ಸಾಫ್ಟ್ ಕಾರ್ನರ್

    ಬಳ್ಳಾರಿ: ಯತ್ನಾಳ್ ನಮ್ಮ ಸಮುದಾಯದ ನಾಯಕ. ಅವರ ಮುಖಾಂತರ ಕೆಲವರು ಮಾತನಾಡಿಸ್ತಿದ್ದಾರೆ. ಅವರು ಬಲಿಪಶು ಆಗಬಾರದು ಅನ್ನೋದು ನಮ್ಮ ಉದ್ದೇಶ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M P Renukacharya) ಯತ್ನಾಳ್ ಪರ ಬ್ಯಾಟಿಂಗ್ ಮಾಡಿದರು.

    ಅವಕಾಶ ಸಿಕ್ಕರೆ ಸಾಕು ಅಂತಾ, ಅವಕಾಶ ಸಿಕ್ಕಾಗಲೆಲ್ಲಾ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಹರಿಹಾಯ್ತಿದ್ದ ರೇಣುಕಾಚಾರ್ಯ ಇದೀಗ ಯತ್ನಾಳ್ ಪರ ಸಾಫ್ಟ್ ಕಾರ್ನರ್ ತೋರಿಸಿದ್ದಾರೆ. ಇದನ್ನೂ ಓದಿ: ಚಂದನ್‌ ಶೆಟ್ಟಿ ಅಪ್ಪುಗೆಯ ಬಗ್ಗೆ ʻಮುದ್ದು ರಾಕ್ಷಸಿʼ ಏನಂದ್ರು?

    ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲೆಲ್ಲಾ ನಾನು ಯತ್ನಾಳ್ ಚೆನ್ನಾಗಿದ್ದೇವೆ. ಅವರ ಮೇಲೆ ಈಗಲೂ ಗೌರವ ಇದೆ. ಆದರೆ ಕೆಲವು ದುಷ್ಟ ಶಕ್ತಿಗಳು ನಮ್ಮನ್ನ ದೂರ ಮಾಡಿದ್ವು. ಷಡ್ಯಂತ್ರ ಮಾಡಿದವರಿಗೆ ಉತ್ತರ ಕೊಡಬೇಕಿದೆ. ಅವರನ್ನ ಬಲಿಪಶು ಮಾಡ್ತಿದ್ದಾರೆ. ಯತ್ನಾಳ್ ನಮ್ಮ ಶತ್ರು ಅಲ್ಲ ಎಂದರು. ಇದನ್ನೂ ಓದಿ: ಸಮಾಜ ಇರೋದೇ ಹೀಗೆ.. ಹೆಣ್ಣು ಮಕ್ಕಳನ್ನೇ ದೂಷಿಸ್ತಾರೆ – ಕೆಟ್ಟ ಟ್ರೋಲ್‌ ಬಗ್ಗೆ ನಿವಿ ಖಡಕ್‌ ಮಾತು

    ನಾನು ಬೇಡ ಜಂಗಮ ಸಮುದಾಯದ ಸರ್ಟಿಫಿಕೇಟ್ ತಗೊಂಡಿದ್ದರೆ ನೇಣು ಹಾಕಿಕೊಳ್ಳುತ್ತೇನೆ. ನಾನು ಅಸೆಂಬ್ಲಿಯಲ್ಲೂ ಹೇಳಿದ್ದೇನೆ. ನಾನು ವೀರ ಶೈವ ಲಿಂಗಾಯತ ಎಂದು ಬರೆಸಿದ್ದೇನೆ. ನಾನು ಯಾವುದೇ ಬೇಡ ಜಂಗಮ ಸರ್ಟಿಫಿಕೇಟ್ ತಗೊಂಡಿಲ್ಲ. ನನ್ನ ಅಫಿಡವಿಟ್‌ನಲ್ಲಿ ವೀರಶೈವ ಲಿಂಗಾಯತ ಎಂದಿದೆ. ಮಾ. 16ರಂದು ದಾಖಲೆ ಬಿಡುಗಡೆ ಮಾಡುತ್ತೇನೆ. ವೀರಶೈವರು ಒಂದಾದ್ರೆ ಈ ದೇಶವನ್ನ ಆಳುತ್ತಾರೆ. ಆದರೆ ಒಂದಾದರೆ ಮಾತ್ರ ಎಂದು ವೀರೇಂದ್ರ ಹೆಗಡೆ ಅವರು ಹೇಳಿದ್ದರು. ಅದಕ್ಕಾಗಿ ನಾವು ಈಗ ಒಂದಾಗ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: 2020ನೇ ಸಾಲಿನ ರಾಜ್ಯ ಪ್ರಶಸ್ತಿ ಪ್ರಕಟ – ʻಜಂಟಲ್‍ಮನ್ʼ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ!

    ಬಿಎಸ್‌ವೈ ವಿರುದ್ಧ ನನ್ನನ್ನು ಚಾಕೂ ರೀತಿ ಬಳಸಿಕೊಂಡ್ರು:
    ಈ ಹಿಂದೆ ಯಡಿಯೂರಪ್ಪ ಅವರ ವಿರುದ್ಧ ನನ್ನನ್ನು ಚಾಕೂ ರೀತಿ ಬಳಸಿಕೊಂಡರು. ನನ್ನನ್ನ ರೆಸಾರ್ಡ್ ರಾಜಕಾರಣಕ್ಕೆ ಕಳಿಸಿದರು. ಬಳಿಕ ನನಗೆ ಮನವರಿಕೆ ಆಗಿ ಜ್ಞಾನೋದಯ ಆಯ್ತು. ಆಮೇಲೆ ನಾನು ಯಡಿಯೂರಪ್ಪನವರ ಜೊತೆ ಗಟ್ಟಿಯಾಗಿ ನಿಂತೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಇದನ್ನೂ ಓದಿ: Bengaluru | ಬೇಸಿಗೆಯ ತಾಪಕ್ಕೆ ತಂಪೆರಿದ ವರುಣ – ಬೆಂಗಳೂರಿನ ಹಲವೆಡೆ ಮಳೆಯ ಸಿಂಚನ

    ನನ್ನನ್ನ ಬಳಕೆ ಮಾಡಿಕೊಂಡು, ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಿದ್ರು. ನನ್ನನ್ನ ಬಲಿಪಶು ಮಾಡಿದಂತೆ ಯತ್ನಾಳ್ ಅವರನ್ನ ಎತ್ತಿ ಕಟ್ಟುತ್ತಿದ್ದಾರೆ. ಚಾಕೂ ರೀತಿ ಬಳಸಿಕೊಳುತ್ತಿದ್ದಾರೆ. ಯತ್ನಾಳ್ ಟೀಂ ಅಮಿತ್ ಷಾ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಪ್ರತಿತಿಕ್ರಿಯಿಸಿದ ಅವರು, ಅಮಿತ್ ಷಾ ಯಾರನ್ನೂ ಕರೆದಿಲ್ಲ. ಯತ್ನಾಳ್ ತಮ್ಮ ವೈಯಕ್ತಿಕ ಕಂಪನಿಗಾಗಿ ಮಾತಾಡ್ತಿದ್ದಾರೆ. ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲು ಆಗುವುದಿಲ್ಲ. ಸೂರ್ಯ ಚಂದ್ರ ಎಷ್ಟು ಸತ್ಯವೋ ಈ ವಿಚಾರವೂ ಅಷ್ಟೇ ಸತ್ಯ. ಅವರೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಅವರ ನೇತೃತ್ವದಲ್ಲೇ ಮುಂದೆ ಚುನಾವಣೆ ನಡೆಯುತ್ತದೆ. ಈ ಸರ್ಕಾರ ಅವರ ಅವಧಿ ಪೂರ್ಣಗೊಳಿಸಲ್ಲ. ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

  • ಮನೆ ಮಠ ಬಿಟ್ಟು ಪಕ್ಷ ಕಟ್ಟಿದ್ದಾರೆ- ಯಡಿಯೂರಪ್ಪ ಕೊಂಡಾಡಿದ ಯತ್ನಾಳ್

    ಮನೆ ಮಠ ಬಿಟ್ಟು ಪಕ್ಷ ಕಟ್ಟಿದ್ದಾರೆ- ಯಡಿಯೂರಪ್ಪ ಕೊಂಡಾಡಿದ ಯತ್ನಾಳ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B S Yediyurappa) ಅವರನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagauda Patil Yatnal) ಕೊಂಡಾಡಿದ್ದಾರೆ.

    ವಿಧಾನಸಭೆಯಲ್ಲಿ ಮಾತನಾಡಿದ ಯತ್ನಾಳ್, ಅಧ್ಯಕ್ಷರೇ ಮುಂದಿನ ಸಲ ಮಂತ್ರಿಗಳಾಗಿ ಆಗಿ ಅಂತೇಳಿದ್ದಾರೆ. ಆದರೆ ಅವರು ಸಿಎಂ ಆಗಿದ್ದಾಗ ನಿಮ್ಮನ್ನ ಮಂತ್ರಿ ಮಾಡಲಿಲ್ಲ, ನನ್ನನ್ನೂ ಮಂತ್ರಿ ಮಾಡಲಿಲ್ಲ. ನನ್ನ ಮಂತ್ರಿ ಮಾಡಿದ್ರೆ ಎಲ್ಲಿ ಸಿಎಂ ಆಗ್ಬಿಡ್ತಾನೋ ಅಂತಾ ಮಾಡಲಿಲ್ಲ. ನಿಮ್ಮನ್ನ ಕೇಂದ್ರ ಮಂತ್ರಿ ಮಾಡಿದ್ರು ಎಂದು ಹೇಳಿದರು.

    ನನ್ನ ಶಿಕ್ಷಣ ಮಂತ್ರಿ ಮಾಡಿದ್ದು ಯಡಿಯೂರಪ್ಪ ಅವರೇ ಅಂತ ಸ್ಪೀಕರ್ ಕಾಗೇರಿ ಹೇಳಿದಾಗ ಯಡಿಯೂರಪ್ಪ ಪರ ಮಾತನಾಡಿದ ಯತ್ನಾಳ್, ಅದೇನೇ ಇರಲಿ, ಯಡಿಯೂರಪ್ಪ ಕಷ್ಟ ಕಾಲದಲ್ಲಿ ನಮ್ಮ ಜೊತೆಗೆ ನಿಂತಿದ್ದಾರೆ. ವಿಜಯಪುರಕ್ಕೆ ಬಸ್ಸಿನಲ್ಲಿ ಬರುತ್ತಿದ್ದರು. ನಾನು ಬ್ಯಾಗ್ ಹಿಡಿದುಕೊಂಡು ಬರುತ್ತಿದ್ದೆ. ಶ್ರೀಕಾಂತ್ ಕುಲಕರ್ಣಿ ಪೇಪರ್ ಹಿಡಿದುಕೊಂಡು ಬರುತ್ತಿದ್ದ. ಇಬ್ಬರು ಆಟೋದಲ್ಲಿ ಯಡಿಯೂರಪ್ಪ ಅವರನ್ನ ಬಿಟ್ಟು ಬರುತ್ತಿದ್ದೆವು. ಮನೆ, ಮಠ ಬಿಟ್ಟು ಬಿಜೆಪಿ (BJP) ಪಕ್ಷ ಕಟ್ಟಿದ್ದಾರೆ, ಅದನ್ನ ಮರೆಯಲ್ಲ ಅಂತ ಯತ್ನಾಳ್ ಹೇಳಿದ್ರು. ಇದನ್ನೂ ಓದಿ: ಅಧಿವೇಶನ ಮುಗಿಸಿ ಸಿಸಿಎಲ್ ಪಂದ್ಯ ವೀಕ್ಷಣೆಗೆ ಬಂದ ಸಿಎಂ ಬೊಮ್ಮಾಯಿ

    ಯಡಿಯೂರಪ್ಪ ಅವರು ನಮ್ಮ ನಾಯಕರು, ನಮ್ಮ ನಡುವೆ ಏನೇ ವೈಷಮ್ಯ ಇರಬಹುದು. ರಾಜ್ಯದಲ್ಲಿ ಪಕ್ಷ ಕಟ್ಟಿದ್ದು ಯಡಿಯೂರಪ್ಪ, ಅನಂತ್ ಕುಮಾರ್ (Ananth Kumar) ಅವರು. ಉತ್ತರ ಕರ್ನಾಟಕದ ಭಾಗಕ್ಕೆ ನಾನು ಕೇಂದ್ರದಲ್ಲಿ ಮಂತ್ರಿ ಆಗುವ ಅವಕಾಶ ಸಿಕ್ಕಿತ್ತು. ಎಲ್ಲರೂ ಆಗ ಹೇ ಕೆಲಸ ಮಾಡಿಕೊಡಪ್ಪ ಅಂತಿದ್ರು. ಈಗ ಆರ್ ಅಶೋಕ್ ಅವರು, ಮುನಿರತ್ನ, ಸುಧಾಕರ್, ಸಿ.ಸಿ ಪಾಟೀಲ್, ಗೃಹ ಮಂತ್ರಿಗಳು ಸಹಕಾರ ನೀಡಿದ್ರು. ಮುಂದಿನ ದಿನಗಳಲ್ಲಿ ಯಾರು ಆ ಕಡೆಯವರು ಈ ಕಡೆ ಬರ್ತಾರೆ, ಈ ಕಡೆಯವರು ಆ ಕಡೆ ಹೋಗ್ತಾರೆ ಗೊತ್ತಿಲ್ಲ ಎಂದರು.

    ಪಕ್ಷ ಕಟ್ಟಿ ಕೊನೆವರೆಗೂ ಉಳಿದವರು ಯಡಿಯೂರಪ್ಪ. ಈಗ ನಿಲ್ಲಲ್ಲ ಮಗನನ್ನ ರೆಡಿ ಮಾಡಿದ್ದೇನೆ ಅಂತ ಹೇಳಿದ್ದಾರೆ. ಅನೇಕರು ಮಕ್ಕಳಿಗೆ ಬಿಟ್ಟುಕೊಡೋಣ ಅಂತಿದ್ರೆ, ಇನ್ನೂ ಕೆಲವರು ಸಾಯೋವರೆಗೂ ಶಾಸಕನಾಗೇ ಉಳಿಯಬೇಕು ಅಂತಿದ್ದಾರೆ. ಅದೇನೆ ಇರಲಿ ಯಡಿಯೂರಪ್ಪ ಅವರು ನನ್ನನ್ನ ಬೆಳೆಸಿದ್ರು ಎಂದು ಯತ್ನಾಳ್ ನೆನಪಿಸಿಕೊಂಡರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಯತ್ನಾಳ್ ಖಂಡನೆ

    ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಯತ್ನಾಳ್ ಖಂಡನೆ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಯನ್ನು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಖಂಡಿಸಿದ್ದಾರೆ.

    ರಾಜಕೀಯದಲ್ಲಿ ಟೀಕೆಗಳು ಸಹಜ. ಆದರೆ ಇಂತಹ ಹೇಳಿಕೆಯನ್ನು ನಾವು ಒಪ್ಪಲಾಗುವುದಿಲ್ಲ. ಈ ರೀತಿ ಯಾವ ರಾಜಕಾರಣಿಯೂ ಮಾತಾಡಬಾರದು. ಈ ರೀತಿಯ ನಡವಳಿಕೆಗಳು ರಾಜಕಾರಣಕ್ಕೆ ಶೋಭೆ ತರುವುದಿಲ್ಲ ಎಂದಿದ್ದಾರೆ. ಸೈದ್ಧಾಂತಿಕವಾಗಿ ವ್ಯಕ್ತಿಯನ್ನು ಎದುರಿಸಬೇಕು. ಸಿದ್ಧಾಂತಗಳನ್ನು ಟೀಕಿಸುವ ಮೂಲಕ ವಿರೋಧ ವ್ಯಕ್ತಪಡಿಸಬೇಕು. ಅದರಾಚೆ ವೈಯಕ್ತಿಕವಾಗಿ ಇಂತಹ ಮಾತುಗಳನ್ನು ಆಡಬಾರದು ಎಂದಿದ್ದಾರೆ. ಇದನ್ನೂ ಓದಿ: ನಿಮ್ಮಂಥವರು MLA ಆಗಿರೋದೇ ಸದನಕ್ಕೆ ಅಗೌರವ- ಕಾಂಗ್ರೆಸ್ ಸದಸ್ಯರ ವಿರುದ್ಧ ಸಿಡಿದ ಕಾಗೇರಿ

    ಸಿದ್ದರಾಮಯ್ಯ ರಾಜಕೀಯ ಅಂತ್ಯಕ್ಕೆ ಟಿಪ್ಪು ಸುಲ್ತಾನನ ಮೇಲಿನ ಒಲವು ಕಾರಣವಾಗುತ್ತದೆ. ಟಿಪ್ಪುವನ್ನು ಆದರ್ಶ ಮಾಡಿಕೊಂಡವರ ಕತೆಗಳನ್ನು ನಾವು ನೋಡಿದ್ದೇವೆ. ಟಿಪ್ಪು ಖಡ್ಗ ತಂದ, ಮಲ್ಯ ವಿದೇಶಕ್ಕೆ ಓಡಿಹೋದ. ಟಿಪ್ಪು ಸಿನಿಮಾ ತೆಗೆದವರು ನಾಶವಾದರು. ಹಿಂದೂಗಳ ಕಗ್ಗೊಲೆ ನಡೆಸಿದ ಟಿಪ್ಪುವನ್ನು ಕಾಂಗ್ರೆಸ್ ಮೆಚ್ಚಿಕೊಂಡಿದೆ. ಅದು ಸಹ ಅಂತ್ಯ ಕಾಣಲಿದೆ ಎಂದು ವ್ಯಂಗ್ಯವಾಡಿದ್ದಾರೆ.

    tippu

    ಅಶ್ವಥ್ ನಾರಾಯಣ್ ಹೇಳಿಕೆ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯರಾಜಕೀಯದಲ್ಲಿ ನಾಯಕರ ವಾಗ್ದಾಳಿಗಳು ನಡೆಯುತ್ತವೆ. ಅಂತೆಯೇ ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ್ದ ಸಚಿವ ಅಶ್ವಥ್ ನಾರಾಯಣ್, ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ. ರಾಜಕೀಯ ದಿಕ್ಸೂಚಿ ಮಂಡ್ಯದಿಂದ ಕಾಣಬೇಕು. ಹೀಗೆ ಮಾಡಲಿಲ್ಲ ಅಂದ್ರೆ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಾರೆ. ನಿಮಗೆ ಟಿಪ್ಪು ಬೇಕಾ ಸಾವರ್ಕರ್ ಬೇಕಾ, ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳಿಸಬೇಕು. ಹುರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದರು. ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದಿದ್ದರು.

    ಸಚಿವರು ವಿಷಾದ: ಸಚಿವರ ಹೇಳಿಕೆ ಭಾರೀ ವಿವಾದ ಹುಟ್ಟಿಸಿತ್ತು. ಈ ಬೆನ್ನಲ್ಲೇ ಅಶ್ವಥ್ ನಾರಾಯಣ್ ಅವರು ವಿಷಾದ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಟಿಪ್ಪು-ಸಿದ್ದರಾಮಯ್ಯ ಹೋಲಿಸಿ ತಾನು ಮಾತಾಡಿದ್ದು, ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಅಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ- ಸಾಕು ಬಿಟ್ಬಿಡಿ ಅಂತ ಮಾಧುಸ್ವಾಮಿ ಮನವಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತರು ಬ್ರಾಹ್ಮಣರು: ಯತ್ನಾಳ್

    ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತರು ಬ್ರಾಹ್ಮಣರು: ಯತ್ನಾಳ್

    ವಿಜಯಪುರ: ಈ ದೇಶದಲ್ಲಿ ನಿಜವಾದ ಅಲ್ಪಸಂಖ್ಯಾ ತರು ಅಂದ್ರೆ ಬ್ರಾಹ್ಮಣರು. ಅವರನ್ನ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಬೇಕು ಅಂತಾ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BasanaGauda Patil Yatnal) ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬ್ರಾಹ್ಮಣರು ಕೇವಲ ಶೇಕಡಾ 2 ರಿಂದ 3 ರಷ್ಟಿದ್ದಾರೆ. ನಿಜವಾದ ಅಲ್ಪ ಸಂಖ್ಯಾತರು ಬ್ರಾಹ್ಮಣರು. ಅಲ್ಪ ಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣ (Brahmins) ರನ್ನ ಸೇರಿಸಬೇಕು, ಇದು ನನ್ನ ವಾದ ಎಂದರು.

    ಮುಸ್ಲಿಮರು ಅಲ್ಪ ಸಂಖ್ಯಾತರು ಅಲ್ಲವೇ ಅಲ್ಲಾ. ಒಂದು ಜನಾಂಗದಷ್ಟಿರುವ ಮುಸ್ಲಿಂ ಹೇಗೆ ಅಲ್ಪ ಸಂಖ್ಯಾತರಾಗ್ತಾರೆ. ದೇಶದ್ರೋಹಿ ಕೆಲಸ ಮಾಡೋದು, ಪಾಕಿಸ್ತಾನ (Pakistan) ದ ಪರ ಮಾತನಾಡೋದು ಈಗ ಮೀಸಲಾತಿ ಬೇಕು ಅಂದ್ರೆ ಹೇಗೆ ಎಂದು ವಾಗ್ದಾಳಿ ನಡೆಸಿದರು.

    ಬಹಳ ಸೌಲಭ್ಯ ಬೇಕಿದ್ದರೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಕಿಡಿ ಕಾರಿದರು.

    Live Tv
    [brid partner=56869869 player=32851 video=960834 autoplay=true]

  • ಬರೀ ಸೋನಿಯಾ ಗಾಂಧಿ ಮಾತ್ರವಲ್ಲ ವಿಜಯೇಂದ್ರ, ಯಡಿಯೂರಪ್ಪ ಸಹ ಜೈಲಿಗೆ ಹೋಗ್ತಾರೆ: ಯತ್ನಾಳ್

    ಬರೀ ಸೋನಿಯಾ ಗಾಂಧಿ ಮಾತ್ರವಲ್ಲ ವಿಜಯೇಂದ್ರ, ಯಡಿಯೂರಪ್ಪ ಸಹ ಜೈಲಿಗೆ ಹೋಗ್ತಾರೆ: ಯತ್ನಾಳ್

    ಹಾವೇರಿ: ಕಾಂಗ್ರೆಸ್‍ನವರು ಮಾತ್ರವಲ್ಲ ಬಿಜೆಪಿಯ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಜೈಲಿಗೆ ಹೋಗುವ ಸಮಯ ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

    ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರೀ ಸೋನಿಯಾ ಗಾಂಧಿ ಮಾತ್ರವಲ್ಲ ವಿಜಯೇಂದ್ರ ಮತ್ತು ಯಡಿಯೂರಪ್ಪ ಸಹ ಜೈಲಿಗೆ ಹೋಗುತ್ತಾರೆ. ದುಬೈ ಮತ್ತು ಮಾರಿಸಸ್ ನಲ್ಲಿ ಆಸ್ತಿ ಮಾಡಿದ್ದಾರೆ. ಹೀಗಾಗಿ ವಿಜಯೇಂದ್ರ ಆಗಾಗ ದುಬೈ ಮತ್ತು ಮಾರಿಸಸ್ ಗೆ ಹೋಗುತ್ತಾರೆ ಎಂದು ಹೇಳಿದರು.

    ಯಡಿಯೂರಪ್ಪ ಆಪ್ತ ಉಮೇಶ್ ಮನೆಯಲ್ಲಿ ಸಿಕ್ಕ ಹತ್ತು ಸಾವಿರ ಕೋಟಿ ರೂಪಾಯಿ ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಸೇರಿದ್ದು. ಸಿಎಂ ಬದಲಾವಣೆ ಎಂಬುದು ಸುಳ್ಳು ಸುದ್ದಿ. ಇದೆ 18ರಂದು ಜೆ.ಪಿ.ನಡ್ಡಾ ಅವರು ರಾಜ್ಯಕ್ಕೆ ಆಗಮಿಸುವ ವೇಳೆ ಈ ಬಗ್ಗೆ ಸ್ಪಷ್ಟ ಸಂದೇಶ ನೀಡಲಿದ್ದಾರೆ. ಕೆಲವು ಸ್ವಾಮೀಜಿಗಳು ಹತ್ತು ಕೋಟಿ ರೂ. ಹೊಡೆದು ಮೀಸಲಾತಿ ಹೋರಾಟ ಮಾಡುವುದನ್ನು ಬಿಟ್ಟು ಸುಮ್ಮನಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೈಸೂರಿನಲ್ಲಿ ಮೋದಿ 2 ದಿನ- ಎಲ್ಲೆಲ್ಲಿಗೆ ಭೇಟಿ..?, ಕಾರ್ಯಕ್ರಮಗಳೇನು..?

    ಹತ್ತು ಕೋಟಿ ಹೊಡೆದು ಬೊಮ್ಮಾಯಿಯವರೇ ಗಡಿಬಿಡಿ ಮಾಡಬೇಡಿ, ಬೇಗನೆ ಕೊಡಬೇಡಿ ಅಂದಿದ್ದಾರೆ. ಏರ್ ಕಂಡೀಷನ್ ರೂಮಿನಲ್ಲಿ ಕುಳಿತಿದ್ದಾರೆ. ನಮ್ಮ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಂತೆ ಎಂದೂ ಕಟ್ಟಕಡೆಯ ಹಳ್ಳಿಗೆ ಹೋಗಿ ಹೋರಾಟ ಮಾಡಿಲ್ಲ. ಶೀಘ್ರವೆ ಮಠದ ಹತ್ತು ಕೋಟಿ ರೂ. ಹಗರಣ ಬೆಳಕಿಗೆ ಬರಲಿದೆ. ಯಡಿಯೂರಪ್ಪ ಮಠಕ್ಕೆ ಹತ್ತು ಕೋಟಿ ಕೊಟ್ಟು ಸಮಾಜವನ್ನು ಖರೀದಿ ಮಾಡಿದ್ದೇವೆ ಅಂತಾ ತಿಳ್ಕೊಂಡಿದ್ದರು. ಅವರದ್ದು ಹೊರಗೆ ಬರಲಿದೆ. ಈಗ ಅವರ ಜೊತೆ ಅವರು ಅಂದುಕೊಂಡಂತೆ ಲಿಂಗಾಯತ ಸಮಾಜವಿಲ್ಲ. ಕೆಲವು ಪರ್ಸೆಂಟ್ ಮಾತ್ರ ಇದೆ. ನಮ್ಮ ಸ್ವಾಮೀಜಿಗಳ ಹೋರಾಟ ಜೋರಾಗುತ್ತಿದ್ದಂತೆ ನಿನ್ನೆ ಸಿಎಂ ಅವರಿಗೆ ಗಡಿಬಿಡಿ ಮಾಡಬೇಡಿ ಅಂದವರೆ ನಿನ್ನೆ ಮನವಿ ಪತ್ರ ನೀಡಿದ್ದಾರೆ ಅಂತಾ ಪರೋಕ್ಷವಾಗಿ ವಚನಾನಂದ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.

    ನಾನೇನು ಮಂತ್ರಿ ಆಗಬೇಕು ಅಂದವನಲ್ಲ. ಸಿಎಂ ಅವರು ಯತ್ನಾಳರೇ ಮಂತ್ರಿ ಸ್ಥಾನದ ಪಟ್ಟಿಯಲ್ಲಿ ನಿಮ್ಮ ಹೆಸರೇ ಮೊದಲಿದೆ ಅಂದಿದ್ದಾರೆ. ಆದರೆ ನನಗೆ ಮಂತ್ರಿ, ಉಪಮುಖ್ಯಮಂತ್ರಿ, ಹತ್ತು ಖಾತೆ ಕೊಟ್ಟರೂ ಬೇಡ. ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿ ಸಾಕು ಅಂದಿರುವೆ. 2ಎ ಮೀಸಲಾತಿ ಕೊಟ್ಟರೆ ನಮ್ಮ ಸಮಾಜ ಬಿಜೆಪಿ ಪರ. ಇಲ್ಲದಿದ್ದರೆ ನಿನ್ನೆ ಬೆಳಗಾವಿ ರಿಸಲ್ಟ್ ನೋಡಿದ್ದೀರಲ್ಲ. ಸಿಎಂ ಬಸವರಾಜ ಬೊಮ್ಮಾಯಿಯವರ ಮೇಲೆ ನಮಗೆ ವಿಶ್ವಾಸವಿದೆ. ಈ ತಿಂಗಳು 22ರಂದು ಮೀಸಲಾತಿ ಸಂಬಂಧ ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

    22ರ ನಂತರ ಹೋರಾಟದ ರೂಪುರೇಷೆ ಬಗ್ಗೆ ನಿರ್ಣಯ ಆಗಲಿದೆ. ಬ್ರಿಟನ್ ರಾಣಿಯ ನಂತರ ಸೋನಿಯಾ ಗಾಂಧಿಯೇ ದೊಡ್ಡ ಶ್ರೀಮಂತೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆ ಮಾಡಲು ಕೇಂದ್ರ ಸರ್ಕಾರ ಒತ್ತಡ ಹಾಕಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಇಡಿ ತನಿಖೆ ನಡೆಯುತ್ತಿದೆ.

    Live Tv

  • ರೇಣುಕಾಚಾರ್ಯ, ಯತ್ನಾಳ್ ಭೇಟಿ – ಸಚಿವ ಸ್ಥಾನದ ಬಗ್ಗೆ ಚರ್ಚೆ

    ರೇಣುಕಾಚಾರ್ಯ, ಯತ್ನಾಳ್ ಭೇಟಿ – ಸಚಿವ ಸ್ಥಾನದ ಬಗ್ಗೆ ಚರ್ಚೆ

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಪ್ರಬಲ ಸಚಿವ ಸ್ಥಾನಾಕಾಂಕ್ಷಿಗಳಾಗಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ವಿಕಾಸಸೌಧದಲ್ಲಿ ಭೇಟಿಯಾದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ರೇಣುಕಾಚಾರ್ಯ ಅವರ ಕೊಠಡಿಯಲ್ಲಿ ಇಬ್ಬರು ನಾಯಕರು ಭೇಟಿಯಾಗಿ ಪರಸ್ಪರ ಚರ್ಚೆ ನಡೆಸಿದರು.

    ಚರ್ಚೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೇಣುಕಾಚಾರ್ಯ, ಇದು ನಮ್ಮ ಆಕಸ್ಮಿಕ ಸೌಜನ್ಯದ ಭೇಟಿ. ಯತ್ನಾಳ್ ಅತ್ಯಂತ ಅನುಭವಿ ರಾಜಕಾರಣಿಗಳು. ಅವರು ಹಿರಿಯರು ಹಾಗೂ ಕೇಂದ್ರ ಸಚಿವರಾಗಿದ್ದರು. ಮುಂದೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಚರ್ಚೆ ಮಾಡಿದೆವು. ಮೇಕೆದಾಟು ಪಾದಯಾತ್ರೆಯ ಮೂಲಕ ಅಧಿಕಾರಕ್ಕೆ ಬಂದ್ವಿ ಎಂಬಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದಾರೆ. ಡಿ.ಕೆ.ಶಿವಕುಮಾರ್ ವೇಗ ತಡೆಯಲು ಚರ್ಚೆ ನಡೆಸಿದೆವು ಎಂದರು. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ಕಾಲ ಬಂದ್ರೆ ಹೈಕಮಾಂಡ್ ಭೇಟಿ: ಕಾಲ ಬಂದ್ರೆ ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುತ್ತೇವೆ. ಯತ್ನಾಳ್ ಹಿರಿಯರಿದ್ದಾರೆ. ಅವರು ಮಂತ್ರಿಯಾಗಲಿ ಎಂದು ಶುಭ ಕೋರುತ್ತೇನೆ ಎಂದರು.

    ಇದೇ ವೇಳೆ ಸಂಪುಟ ಪುನರ್ ರಚನೆ ವಿಚಾರದ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, ಯಾವ ಸಚಿವರ ವಿರುದ್ಧವೂ ಆಕ್ರೋಶ ಇಲ್ಲ. ಸಂಘಟನೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಕೆಲಸ ಮಾಡಿದವರನ್ನು ಮುಂದುವರೆಸುವುದು ಒಳ್ಳೆಯದು. ಅಧಿಕಾರಕ್ಕೋಸ್ಕರ ಇದ್ದವರು, ಸ್ವಾರ್ಥಕೊಸ್ಕರ ಇದ್ದವರನ್ನು ಕೈಬಿಡಬೇಕು. ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತೇವೆ, ಸಿಎಂ ಜೊತೆಗೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಮುಂದಿನ ದಿನದಲ್ಲಿ ಬಿಜೆಪಿ ದೇಶದಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು. ಇದನ್ನೂ ಓದಿ: ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು

    ಎಲ್ಲಾ ಶಾಸಕರು ಮಾತನಾಡೋಕೆ ಆಗ್ತಿಲ್ಲ ಎಂದು ಬಹಳಷ್ಟು ಶಾಸಕರು ನಮಗೆ ಹೇಳಿದ್ದಾರೆ. ಹೀಗಾಗಿ ನಾವಿಬ್ಬರು ಸಚಿವ ಸಂಪುಟದ ಬಗ್ಗೆ ಮಾತನಾಡಿದ್ದೇವೆ. ಆದರೆ ಬಿಜೆಪಿಯಲ್ಲಿ ಸಹಿ ತೆಗೆದುಕೊಳ್ಳುವ ಸಂಸ್ಕೃತಿ ಇಲ್ಲ ಎಂದರು.

    ರೇಣುಕಾಚಾರ್ಯಗೆ ಆಶೀರ್ವಾದ!: ಸಚಿವ ಸಂಪುಟ ರಚನೆಯಲ್ಲಿ ಅವಕಾಶ ಸಿಗುವ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಈಗ ಏನೂ ಹೇಳಲು ಆಗಲ್ಲ. ಪಂಚರಾಜ್ಯ ಮುಗಿದ ಮೇಲೆ ಆಗುತ್ತೋ ಅಥವಾ ಅದಕ್ಕಿಂತ ಮೊದಲೇ ಆಗುತ್ತೋ ನೋಡೋಣ. ಆದ್ರೆ ಒಳ್ಳೆಯ ಬೆಳವಣಿಗೆ ಆಗುತ್ತೆ. ರೇಣುಕಾಚಾರ್ಯ ಮಂತ್ರಿಯಾಗ್ಲಿ ಅಂತ ಆಶೀರ್ವಾದ ಮಾಡುತ್ತೇನೆ. ರೇಣುಕಾಚಾರ್ಯ ಯಾರಾದರೂ ನಾಯಕತ್ವ ಒಪ್ಪಿಕೊಂಡ್ರೆ ಅವರ ನಾಯತ್ವದಲ್ಲೇ ಇರ್ತಾರೆ ಎಂದರು.

    ಬಿಎಸ್ವೈ ನಾಯಕತ್ವ ಅಥವಾ ಬೊಮ್ಮಾಯಿ ನಾಯಕತ್ವ ರೇಣುಕಾಚಾಯ್ ಒಪ್ಪಿಕೊಂಡಿದ್ದಾರಾ ಎಂಬ ಪ್ರಶ್ನೆಗೆ, ಅವರು ಬಿಜೆಪಿ ನಾಯಕತ್ವ ಒಪ್ಪಿಕೊಂಡಿದ್ದಾರೆ ಎಂದರು. ಪಕ್ಷದ ಹೈಕಮಾಂಡ್ ಯಾವ ರೀತಿ ಬದಲಾವಣೆ ಮಾಡುತ್ತೆ ನೋಡೋಣ. ಗುಜರಾತ್ ಮಾದರಿಯಲ್ಲಿ ಮಾಡುತ್ತೋ ಅಥವಾ ಕರ್ನಾಟಕಕ್ಕೆ ಬೇರೆ ಮಾದರಿ ಮಾಡುತ್ತೋ ನೋಡೋಣ ಎಂದರು.

    ಸಚಿವ ಪುನರ್ ರಚನೆ ಇನ್ನು 15 ದಿವಸದಲ್ಲಿ ಆದ್ರೆ ಒಳ್ಳೆಯದು. ಮಾರ್ಚ್ ನಂತ್ರ ಸಚಿವ ಸಂಪುಟ ರಚನೆ ಆದ್ರೆ ಏನೂ ಉಪಯೋಗ ಇಲ್ಲ, ಮಾಡುವುದಿದ್ರೆ ಈಗಲೇ ಮಾಡಿ. ಇಲ್ಲ ಅಂದರೆ ಶಾಸಕರಾಗಿ ಕೊನೆ ಪಕ್ಷ ಒಂದು ವರ್ಷ ಇದ್ದಾಗ ಮಾಡಿದ್ರೆ ಪರಿಣಾಮಕಾರಿಯಾಗಿ ಅಭಿವೃದ್ಧಿ ಮಾಡಬಹುದು ಎಂದರು. ಇದರ ಜೊತೆಗೆ ಮೊದಲು ಕೊರೊನಾವನ್ನು ಸಮರ್ಥವಾಗಿ ಎದುರಿಸಬೇಕು ಎಂದು ಹೇಳಿದರು.

  • ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕ ರೇಣುಕಾಚಾರ್ಯ

    ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕ ರೇಣುಕಾಚಾರ್ಯ

    ಬೆಂಗಳೂರು: ಉತ್ತರಪ್ರದೇಶ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ ನಿಶ್ಚಿತ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

    ಸರ್ಕಾರದಲ್ಲಿ ಮುಖ್ಯಮಂತ್ರಿ ಹೊರತುಪಡಿಸಿ ಉಳಿದೆಲ್ಲರ ಬದಲಾವಣೆ ಆಗಲಿದೆ. ಯತ್ನಾಳ್ ಹೇಳಿರೋದು ಸತ್ಯ. ಅಭಿವೃದ್ಧಿ ದೃಷ್ಟಿಯಿಂದ ಒಂದಷ್ಟು ಬದಲಾವಣೆ ಆಗಲಿದೆ. ನೋಡಿದ ಮುಖಗಳನ್ನೇ ಜನ ಎಷ್ಟು ಬಾರಿ ನೋಡ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹಿರಿಯ ಸಚಿವರ ಮೇಲೆ ಆಕ್ರೋಶ ಹೊರಹಾಕಿದರು. ನಾನು ಸಾಮಾನ್ಯರಲ್ಲಿ, ಸಾಮಾನ್ಯ ಕಾರ್ಯಕರ್ತ ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರು.

    ನನಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ನಗಣ್ಯ. ಇದು ಹೋದ ಪುಟ್ಚ ಬಂದ ಪುಟ್ಚ ಅನ್ನೋ ರೀತಿ. ನನ್ನ ಕ್ಷೇತ್ರನೇ ನನಗೆ ಸರ್ವಸ್ವ. ಈ ಹುದ್ದೆ ಕೇವಲ ತೋರ್ಪಡಿಕೆ ಅಷ್ಟೇ ಇದರಲ್ಲಿ ಏನೂ ಇಲ್ಲ, ಕೇವಲ ಕಚೇರಿ ವಾಹನ ಅಷ್ಚೇ. ಬಿಡು ಅಂದ್ರೆ ಈಗಲೇ ಬಿಡ್ತೇನೆ ಎಂದರು. ಇದನ್ನೂ ಓದಿ: ಫ್ಲೆಕ್ಸ್, ಹೋರ್ಡಿಂಗ್‌ ಎಲ್ಲಾ ಹಾಕಿದ್ದೇನೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿ – ಬಿಕ್ಕಿಬಿಕ್ಕಿ ಅತ್ತ ಆಕಾಂಕ್ಷಿ

    ಅನಗತ್ಯ ಪಾದಯಾತ್ರೆ ಮಾಡಿ ಗೊಂದಲ ಮೂಡಿಸಿದ ಕಾಂಗ್ರೆಸ್ , ರಾಜ್ಯದ ಜನತೆಯ ಬಹಿರಂಗ ಕ್ಷಮೆ ಕೇಳಬೇಕು. ನನ್ನಿಂದ ತಪ್ಪಾದಾಗ ಕ್ಷಮೆ ಕೇಳಿದ್ದೆ ನೀವೂ ಕೇಳಿ. ಪದೇ ಪದೇ ನನ್ನ ಮೇಲೆ ಕ್ರಮಕ್ಕೆ ಒತ್ತಾಯಿಸುವ ಕಾಂಗ್ರೆಸ್ ಗೆ ಸವಾಲೆಸೆದರು. ನನ್ನ ಮೇಲೆನೂ ಕೇಸ್ ಹಾಕಿ ಅಂತ ಎಸ್ ಪಿ ಗೆ ಹೇಳಿದ್ದೆ. ನನ್ನ ಮೇಲೆ ಕೇಸ್ ಹಾಕಿದ್ರೆ ನಾನು ಸ್ವಾಗತಿಸ್ತೀನಿ ಎಂದು ಹೇಳಿದರು.

  • ಜಾತ್ರೆ ಮಾಡೋಕೆ ಅಧಿವೇಶನ ಮಾಡುವುದು ಬೇಡ: ಯತ್ನಾಳ್

    ಜಾತ್ರೆ ಮಾಡೋಕೆ ಅಧಿವೇಶನ ಮಾಡುವುದು ಬೇಡ: ಯತ್ನಾಳ್

    ಬೆಳಗಾವಿ: ಅಧಿವೇಶನದ ಪ್ರಾರಂಭದಲ್ಲೇ ಉತ್ತರ ಕನ್ನಡದ ಬಗ್ಗೆ ಚರ್ಚೆ ಆಗಬೇಕಿತ್ತು. ಇನ್ನು ಮುಂದೆ ಉತ್ತರ ಕನ್ನಡದ ಬಗ್ಗೆ ಚರ್ಚೆ ಮಾಡೋದಾದರೆ ಅಧಿವೇಶನದಲ್ಲಿ ಮಾಡಲಿ. ಜಾತ್ರೆ ಮಾಡುವುದಕ್ಕೆ ಅಧಿವೇಶನ ಮಾಡುವುದು ಬೇಡ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

    ಸಿದ್ದರಾಮಯ್ಯನವರ ಇಂದಿನ ನಡವಳಿಕೆ, ಕೂಗಾಟ ಅಸಹ್ಯಕರವಾಗಿತ್ತು ಎಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದ ಹಿನ್ನೆಲೆಯಲ್ಲಿ ಯತ್ನಾಳ್ ಹೇಳಿಕೆ ನೀಡಿದರು.

    ಉತ್ತರ ಕನ್ನಡದ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚೆ ಆಗಲಿಲ್ಲ. ವಿರೋಧ ಪಕ್ಷದವರೂ ಚರ್ಚೆ ಮಾಡಲಿಲ್ಲ. ಆಡಳಿತ ಪಕ್ಷದವರು ಸರಿಯಾಗಿ ಉತ್ತರ ನೀಡಲು ಬಿಡಲಿಲ್ಲ. ಸಿಎಂ ಮೊದಲ 5 ದಿನ ಚರ್ಚೆ ಮಾಡಲು ಹೇಳಬೇಕಿತ್ತು ಎಂದರು. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಬಿಟ್ಟರೆ ಬಿಜೆಪಿ ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ

    ಸಿದ್ದರಾಮಯ್ಯ ನಿನ್ನೆ ಬಿಲ್ ಪಾಸ್ ಬಳಿಕ ಹತಾಶರಾಗಿದ್ದಾರೆ. ಹಿರಿಯ ಕಾಂಗ್ರೆಸ್ ಸದಸ್ಯರೊಬ್ಬರು ಕಾಗದ ಹರಿದು ಹಾಕಿ ಸೋನಿಯಾ ಗಾಂಧಿಗೆ ಫೋಟೋ ತೋರಿಸಲು ಹೋಗಿದ್ದಾರೆ. ಈ ಅಧಿವೇಶನ ಜಾತ್ರೆ ಆದಂತೆ ಆಗಿದೆ. ನಮಗೂ ಹತಾಶೆಯಾಗಿದೆ. ಇದೇ ರೀತಿಯಾದರೆ ಸುವರ್ಣ ಸೌಧ ಮುಂದೆ ಗೋಲಗುಮ್ಮಟ ತರ ಪ್ರವಾಸಿ ಮಂದಿರ ಆಗುತ್ತದೆ ಎಂದು ವ್ಯಂಗ್ಯ ಮಾಡಿದರು.

    ಕೆಲವರಿಗೆ ಸದನದಲ್ಲಿ ಭಾಷಣ ಮಾಡಿ ಹೋಗುವ ಸಂಸ್ಕೃತಿ ಇದೆ. ಸಿದ್ದರಾಮಯ್ಯ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ಈ ರೀತಿಯಾಗಿ ಮಾಡಿದ್ದಾರೆ. ಸುವರ್ಣಸೌಧ ಕೇವಲ 15 ದಿನಕ್ಕೆ ಮಾತ್ರ ಉಪಯೋಗವಾಗುತ್ತಿದೆ. ಮುಂದಿನ ಅಧಿವೇಶನದಲ್ಲಿ ಉತ್ತರ ಕನ್ನಡದ ಸಮಸ್ಯೆಗಳ ಬಗ್ಗೆ ಚರ್ಚೆ ಆಗದಿದ್ದರೆ ನಾವೂ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆಯ ಮಾತನ್ನು ಆಡಿದರು. ಇದನ್ನೂ ಓದಿ: ಕಾಂಗ್ರೆಸ್ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕ್ಕೆ ಅನ್ಯಾಯ ಮಾಡಿದೆ: ಗೋವಿಂದ ಕಾರಜೋಳ

  • ‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್‍ವೈ ಭಾವುಕ..!

    ‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್‍ವೈ ಭಾವುಕ..!

    – ಕಂಟಕ ಎದುರಾಗಿಸಿದ ಮೂವರು ಯಾರು..?

    ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಪದತ್ಯಾಗ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬೆನ್ನಲ್ಲೇ ಬಿಎಸ್‍ವೈ ತಮ್ಮ ಆಪ್ತರ ಬಳಿ ಭಾವಕರಾಗಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನನ್ನವರೇ ನನಗೆ ಶತ್ರುವಾದರು ಎಂದು ಬಿಎಸ್‍ವೈ ಅವರು ತಮ್ಮ ಆಪ್ತರ ಬಳಿ ಭಾವುಕರಾಗಿದ್ದಾರೆ. ತಾವೇ ಕರೆತಂದ ಮೂವರಿಂದ ಬಿಎಸ್‍ವೈ ಕುರ್ಚಿಗೆ ಕಂಟಕವಾಗಿದೆಯಂತೆ. ತನ್ನ ಬೆನ್ನಿಗೆ ನಿಲ್ತಾರೆ ಅಂದುಕೊಂಡಿದ್ದವರಿಂದಲೇ ಸಿಎಂಗೆ ಸಂಕಷ್ಟ ಎದುರಾಗಿದೆ.

    ಆ ಮೂವರು ವ್ಯಕ್ತಿಗಳು ಯಾರು.?
    ಬಸನಗೌಡ ಪಾಟೀಲ್ ಯತ್ನಾಳ್: ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್ ಅಂದು ಬಿಎಸ್‍ವೈ ವಿರೋಧಿ ಬಣದಲ್ಲಿದ್ದರು. ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆ ಅಂದೇ ನೋಟಿಸ್ ನೀಡಲಾಗಿತ್ತು. ಈ ನೋಟಿಸ್‍ನಿಂದ ನೊಂದು ಜೆಡಿಎಸ್‍ಗೆ ಜಂಪ್ ಆದರು. 2018ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ವಾಪಸ್ ಆಗಿದ್ದರು. ಆದರೆ ಈ ಸಂದರ್ಭದಲ್ಲಿ ತೀವ್ರ ವಿರೋಧದ ನಡುವೆಯೂ ಬಿಎಸ್‍ವೈ ಅವರು ಯತ್ನಾಳ್ ರನ್ನು ಪಕ್ಷಕ್ಕೆ ಕರೆತಂದು ವಿಜಯಪುರದಿಂದ ಟಿಕೆಟ್ ಕೊಟ್ಟು ಗೆಲ್ಲಿಸಿದ್ದರು. ಈಗ ಬಿಎಸ್‍ವೈ ವಿರುದ್ಧವೇ ಯತ್ನಾಳ್ ಉಲ್ಟಾ ಹೊಡೆಯುತ್ತಿದ್ದು, ಎಲ್ಲಾ ಕಡೆ ಬಿಎಸ್‍ವೈ ವಿರುದ್ಧ ಮಾತಾಡಿ ಡ್ಯಾಮೇಜ್ ಮಾಡಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಕೈ ಸೇರಿದೆ ವರದಿ – ಜಾತಿ ಚೌಕಟ್ಟು ಮೀರುತ್ತಾ ಬಿಜೆಪಿ?

    ಸಿ.ಪಿ.ಯೋಗೇಶ್ವರ್: ಬಿಜೆಪಿಯಿಂದ ಕಾಂಗ್ರೆಸ್, ಎಸ್‍ಪಿಗೆ ಹೋಗಿದ್ದ ಸಿಪಿವೈ, ಪಕ್ಷ ಸೇರ್ಪಡೆಗೆ ಮೂಲ ಬಿಜೆಪಿಗರ ವಿರೋಧವಿತ್ತು. ದ್ರೋಹ ಬಗೆದವರು ಬೇಡ ಅಂತಾ ವಿರೋಧ ಉಂಟಾಗಿತ್ತು. ಆದರೂ ಹೈಕಮಾಂಡ್‍ನ್ನು ಒಪ್ಪಿಸಿ ಬಿಎಸ್‍ವೈ ಅವರು ಸಿಪಿವೈಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದರು. ಇದನ್ನೂ ಓದಿ: ನನ್ನ ಪರವಾಗಿ ಯಾರೂ ಪ್ರತಿಭಟನೆಗೆ ಮುಂದಾಗಬಾರದು – ಬಿಎಸ್‍ವೈ ಮನವಿ

    2019ರಲ್ಲಿ ಸರ್ಕಾರ ಬರಲು ಯೋಗೇಶ್ವರ್ ಕೂಡ ಕಾರಣರಾಗಿದ್ದರು. 17 ಜನರನ್ನ ಪಕ್ಷಕ್ಕೆ ಕರೆತರುವಲ್ಲಿ ಯೋಗೇಶ್ವರ್ ಪಾತ್ರ ಬಹುಮುಖ್ಯವಾಗಿದ್ದು, ಅದಕ್ಕಾಗಿ ಬಿಎಸ್‍ವೈ ಅವರು ಸಿಪಿವೈಯನ್ನು ಎಂಎಲ್‍ಸಿ ಮಾಡಿ ಸಚಿವ ಸ್ಥಾನ ನೀಡಿದ್ದರು. ಈ ವೇಳೆಯೂ ಬಿಎಸ್‍ವೈ ಅವರು ವಿರೋಧ ಎದುರಿಸಿ ಸಚಿವ ಸ್ಥಾನ ನೀಡಿದ್ದರು. ನಂತರ ಬಿಎಸ್‍ವೈ ವಿರುದ್ಧವೇ ಯೋಗೇಶ್ವರ್ ಬಹಿರಂಗ ಸಮರ ಸಾರಿದ್ದರು.

    ಹೆಚ್.ವಿಶ್ವನಾಥ್: ಮೋದಿ, ಬಿಎಸ್‍ವೈಯವರನ್ನು ಬೈದುಕೊಂಡೇ ಬಂದಿದ್ದರು. ಸೈದ್ಧಾಂತಿಕವಾಗಿ ಬಿಜೆಪಿಯ ಕಟ್ಟಾ ವಿರೋಧಿಯಾಗಿದ್ರು. 2014ರ ಲೋಕ ಸಮರದಲ್ಲಿ ಮೋದಿ ವಿರುದ್ಧ ಮಾತಾಡಿದ್ದರು. 17 ಮಂದಿಯನ್ನು ಪಕ್ಷಕ್ಕೆ ಕರೆತರುವಲ್ಲಿ ವಿಶ್ವನಾಥ್ ಪಾತ್ರ ಕೂಡ ಇದ್ದು, ವಿರೋಧದ ನಡುವೆಯೂ ಬಿಎಸ್‍ವೈಯವರು ವಿಶ್ವನಾಥ್ ರನ್ನು ಪಕ್ಷಕ್ಕೆ ಕರೆತಂದರು.

    ಬಿಜೆಪಿ ಸೇರ್ಪಡೆಗೆ ಮೂಲ ಬಿಜೆಪಿಗರ ವಿರೋಧವಿತ್ತು. ಬೈಎಲೆಕ್ಷನ್‍ನಲ್ಲಿ ಸೋತರೂ ವಿಶ್ವನಾಥ್ ಕೈಬಿಡದ ಬಿಎಸ್‍ವೈ, ಹೈಕಮಾಂಡ್ ಮುಂದೆ ಪಟ್ಟು ಹಿಡಿದು ಪರಿಷತ್ ಸದಸ್ಯರಾಗಿ ನೇಮಕ ಮಾಡಿದ್ದರು. ಆದರೆ ಇದೀಗ ಬಿಎಸ್‍ವೈ ವಿರುದ್ಧವೇ ವಾಗ್ದಾಳಿ ಮಾಡಿ ಡ್ಯಾಮೇಜ್ ಮಾಡಿದ್ದಾರೆ.  ಇದನ್ನೂ ಓದಿ : ಯಡಿಯೂರಪ್ಪ ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಸುಬ್ರಮಣಿಯನ್ ಸ್ವಾಮಿ

  • ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪ -ಯತ್ನಾಳ್‍ಗೆ ಬಿಎಸ್‍ವೈ ಅಭಿಮಾನಿಗಳಿಂದ ಘೆರಾವ್

    ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪ -ಯತ್ನಾಳ್‍ಗೆ ಬಿಎಸ್‍ವೈ ಅಭಿಮಾನಿಗಳಿಂದ ಘೆರಾವ್

    ಚಾಮರಾಜನಗರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವೀರಶೈವ ಸಮಾಜದ ಮುಖಂಡರು, ಸಿಎಂ ಬಿ.ಎಸ್ ಯಡಿಯೂರಪ್ಪ ಅಭಿಮಾನಿಗಳು ಘೆರಾವ್ ಹಾಕಿ ಪ್ರತಿಭಟಿಸಿದ್ದಾರೆ. ಯತ್ನಾಳ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಶಾಸಕರಿಗೆ ನಗರದ ಹರಳುಕೋಟೆ ಆಂಜನೇಯ ದೇವಾಲಯ ಸಮೀಪ ಯಡಿಯೂರಪ್ಪ ಅಭಿಮಾನಿಗಳು ಘೆರಾವ್ ಹಾಕಿದ್ದಾರೆ. ಇದನ್ನೂ ಓದಿ: ಮೋದಿ, ದೀದಿಗೆ 2,600 ಕೆ.ಜಿ ಮಾವಿನ ಹಣ್ಣು ಕಳುಹಿಸಿದ ಬಾಂಗ್ಲಾ ಪ್ರಧಾನಿ

    ವೀರಶೈವ ಲಿಂಗಾಯತ ಸಮಾಜವನ್ನು 2ಂ ಸೇರಿಸಬೇಕೆಂದು ಒತ್ತಾಯಿಸಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಯತ್ನಾಳ್ ಅವರ ಕಾರಿಗೆ ಮುತ್ತಿಗೆ ಹಾಕಿದ ಲಿಂಗಾಯತ ಸಮಾಜದ ಯುವಕರು, ಮುಖಂಡರುಗಳು ಯತ್ನಾಳ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿಎಂ ವಿರುದ್ಧ ಯಾವುದೇ ಹೇಳಿಕೆಗಳನ್ನು ಕೊಡಬಾರದು, ಸಮಯದಾಯ ಒಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.

    ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿ ಯತ್ನಾಳ್ ಅವರಿಗೆ ಭದ್ರತೆ ಒದಗಿಸಿದರು.