Tag: basana gaouda patil yatnal

  • ಇಬ್ಬರು ಸಿಂಗ್‍ಗಳಿಂದ ರಾಜ್ಯ ಹಾಳು, ದೆಹಲಿಗೆ ಹೋಗೋದು ನಿಶ್ಚಿತ: ಯತ್ನಾಳ್

    ಇಬ್ಬರು ಸಿಂಗ್‍ಗಳಿಂದ ರಾಜ್ಯ ಹಾಳು, ದೆಹಲಿಗೆ ಹೋಗೋದು ನಿಶ್ಚಿತ: ಯತ್ನಾಳ್

    – ಉಪನಾಯಕನ ಸ್ಥಾನ ಬೇಡ
    – ಸಿಎಂ ವಿರುದ್ಧ ಶಾಸಕ ವಾಗ್ದಾಳಿ

    ಬೆಂಗಳೂರು: ನಾನು ದೆಹಲಿಗೆ ಹೋಗೋದು ನಿಶ್ಚಿತ. ದೆಹಲಿಗೆ ಹೋಗಿ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಹೇಳ್ತೀನಿ. ಇಬ್ಬರು ಮಹಾನುಭಾವರಿಂದ ರಾಜ್ಯ ಹಾಳಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಪಿಸಿದ್ದಾರೆ.

    ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗ್ತೀನಿ. ದೆಹಲಿಯಿಂದ ಕರೆ ಬರಬೇಕಿದೆ, ಬರುತ್ತೆ. ಮಂಗಳವಾರ ಕೇಂದ್ರ ಕಚೇರಿಯಿಂದ ಸೂಚನೆ ಕೊಟ್ಟಿದ್ದಾರೆ. ಹೈಕಮಾಂಡ್ ಕರೆ ಬಂದ ಕೂಡಲೇ ದೆಹಲಿಗೆ ಹೋಗ್ತೀನಿ. ಲ್ಲಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವರನ್ನು ಭೇಟಿ ಮಾಡುತ್ತೇನೆ. ಸೋಮಣ್ಣ ದೆಹಲಿಗೆ ಹೋಗುವ ಬಗ್ಗೆ ಮಾಹಿತಿ ಇಲ್ಲ. ಆದರೆ ನಾನು ದೆಹಲಿಗೆ ಹೋಗುವುದು ನಿಶ್ಚಿತ ಎಂದರು.

    ದೆಹಲಿಗೆ ಹೋಗಿ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಹೇಳ್ತೀನಿ. ಇಬ್ಬರು ಮಹಾನುಭಾವರಿಂದ ರಾಜ್ಯ ಹಾಳಾಗಿದೆ. ಒಬ್ಬ ದೆಹಲಿಯವನು ಇನ್ನೊಬ್ಬ ಕರ್ನಾಟಕದವನಿಂದ ರಾಜ್ಯ ಹಾಳಾಗಿದೆ. ಇಬ್ಬರು ಸಿಂಗ್ ಗಳು ಇದ್ದಾರೆ. ಅವರಿಂದ ರಾಜ್ಯ ಹಾಳಾಗಿದೆ, ಅದನ್ನ ಹೇಳ್ತೀನಿ ಎಂದು ಹೇಳಿದರು.

    ಯತ್ನಾಳ್ ಬಾಯಿ ಮುಚ್ಚಿಸೋಕೆ ಬೆಲ್ಲದ್‍ಗೆ ಉಪ ನಾಯಕನ ಪಟ್ಟ ಕೊಡಲು ವಿಜಯೇಂದ್ರ (BY Vijayendra), ಅಶೋಕ್ ರಿಂದ (R Ashok) ಹೈಕಮಾಂಡ್ ಗೆ ಮನವಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಬಾಯಿಯನ್ನು ಯಾರೂ ಮುಚ್ಚಿಸೋಕೆ ಆಗಲ್ಲ. ಯಾರು ಬೇಕಾದರೂ ಉಪ ನಾಯಕ ಆಗಲಿ. ಉಪ ನಾಯಕನಿಗೆ ಏನಿದೆ ಬೆಲೆ ಬದನೆಕಾಯಿ. ಡೆಪ್ಯುಟಿ ಸ್ಪೀಕರ್ ಇದ್ದ ಹಾಗೆ, ಉಪ ಸಭಾಪತಿ ಸ್ಥಾನ. ಯಾರಿಗೆ ಬೇಕಾದ್ರೆ ಅವರು ಕೊಡಲಿ. ನನಗೇನು ಅದರ ಬಗ್ಗೆ ಆಸೆ ಇಲ್ಲ. ಯಡಿಯೂರಪ್ಪ ಬಳಿಯೂ ನಾನು ನಿನ್ನ ಕೈ ಕೆಳಗೆ ಕೆಲಸ ಮಾಡಲ್ಲ ಅಂತ ಹೇಳಿದ್ದೆ. ಉಪನಾಯಕ ಸ್ಥಾನ ನನಗೆ ಬೇಡ ಎಂದು ನೇರವಾಗಿ ಯತ್ನಾಳ್ ಹುದ್ದೆಯನ್ನು ನಿರಾಕರಿಸಿದರು. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲಿನ ಹೊಣೆ ಹೊತ್ತು ಕಮಲ್ ನಾಥ್ ರಾಜೀನಾಮೆ?

    ಇದೇ ವೇಳೆ ಸಿಎಂ ಹೇಳಿದ್ರಲ್ಲಿ ತಪ್ಪೇನು ಎಂಬ ಸತೀಶ್ ಜಾರಕಿಹೋಳಿ (Sathish Jarakiholi) ಹೇಳಿಕೆ ವಿಚಾರದ ಕುರಿತು ಮಾತನಾಡಿ, ಹಾಗಾದ್ರೆ ಹಿಂದೂಗಳು ಯಾಕೆ ಕಾಂಗ್ರೆಸ್ ಗೆ ವೋಟ್ ಹಾಕಬೇಕು. ದೇಶದ ಸಂಪತ್ತು ಕೊಡೋಕೆ ಸಿದ್ದರಾಮಯ್ಯ ಯಾರು.?. ಸಿದ್ದರಾಮಯ್ಯ ಅವರ ಮನೆ ಆಸ್ತಿ ಕೊಡಲಿ. ಸಾಬ್ರು ವೋಟ್ ಪಡೆಯೋಕೆ ಹೀಗೆ ಮಾತಾಡೋದು ಸರಿಯಲ್ಲ. ನೆಹರು ಪ್ರಧಾನಿ ಮಾಡೋಕೆ ಪಾಕಿಸ್ತಾನ ಒಡೆದಿದ್ದರು. ಜಿನ್ನಾ ಪ್ರಧಾನಿ ಆಗಬೇಕು ಅಂತ ಕೇಳಿದಾಗ ನೆಹರು ಪ್ರಧಾನಿ ಆಗೋಕೆ ಪಾಕಿಸ್ತಾನ ಮಾಡಿದ್ರು. ಭಾರತದಲ್ಲಿ ಭಾರತದ ಸಂವಿಧಾನ, ನಮ್ಮ ಕಾನೂನು ಕಟ್ಟಳೆಯಲ್ಲಿ ಎಲ್ಲರೂ ಇರಬೇಕು ಎಂದು ನುಡಿದರು.

    ಕಾಂಗ್ರೆಸ್ (Congress) ಅವರು ಮುಸ್ಲಿಮರ ತುಷ್ಠೀಕರಣ ಮಾಡ್ತಿದ್ದಾರೆ. ಸಿಎಂ ಹಾಗೆ ಹೇಳಿರೋದು ದುರ್ವೈವ. ಸಾಬ್ರು ಮೀಟಿಂಗ್ ಹೋಗಿ ಹೀಗೆ ಮಾತಾಡೋದು ಸರಿಯಲ್ಲ. ಮೌಲ್ಯಿಗಳ ಸಮಾವೇಶದಲ್ಲಿ ಐಸಿಸ್ ಸಂಪರ್ಕ ಇದ್ದ ಮೌಲ್ವಿ ಒಬ್ಬ ಇದ್ದ. ಆ ಮೌಲ್ವಿಗೆ ಐಸಿಸ್ ನಿಂದ ಹಣ ಬರುತ್ತೆ. ಮೌಲ್ವಿ ಸಮಾವೇಶಕ್ಕೆ ಸಿಎಂ ಹೋಗೋದು ಸರಿಯಲ್ಲ. ಐಸಿಸ್ (ISIS) ಸಂಪರ್ಕ ಇರೋ ಮೌಲ್ವಿ ಇದ್ದಾನಾ ಇಲ್ಲವಾ ಅಂತ ಬೇಕಾದ್ರೆ ಇಂಟಲಿಜೆನ್ಸ್ ನಿಂದ ತನಿಖೆ ನಡೆಸಲಿ ಎಂದರು.

  • ಯಾವ ವ್ಯಕ್ತಿ ಗೌರವದ ಬಗ್ಗೆ ಮಾತನಾಡ್ತಿದ್ದೀರಿ?- ಮಹದೇವಪ್ಪ ವಿರುದ್ಧ ರೊಚ್ಚಿಗೆದ್ದ ಯತ್ನಾಳ್

    ಯಾವ ವ್ಯಕ್ತಿ ಗೌರವದ ಬಗ್ಗೆ ಮಾತನಾಡ್ತಿದ್ದೀರಿ?- ಮಹದೇವಪ್ಪ ವಿರುದ್ಧ ರೊಚ್ಚಿಗೆದ್ದ ಯತ್ನಾಳ್

    ಬೆಂಗಳೂರು: ಅಂಗರಕ್ಷನ ಬಳಿಯಿಂದ ಶೂ (Shoe) ಹಾಕಿಸಿಕೊಂಡು ವಿವಾದಕ್ಕೀಡಾದ ಬಳಿಕ ಸಮರ್ಥನೆ ಮಾಡಿಕೊಂಡು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ ಮಹದೇವಪ್ಪ (Dr. H.C Mahadevappa) ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

    ಈ ಸಂಬಂಧ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಯತ್ನಾಳ್ (Basangouda Patil Yatnal), ಇಷ್ಟು ಆರೋಗ್ಯ ಸಮಸ್ಯೆ ಇರುವವರು ಮನೆಯಲ್ಲಿ ವಿಶ್ರಾಂತಿ ಪಡೆಯಿರಿ. ಯಾವ ವ್ಯಕ್ತಿ ಗೌರವದ ಬಗ್ಗೆ ಮಾತನಾಡುತ್ತಿದ್ದಿರಿ?. ವಿವಾದವಾಗಿದ್ದು ದುರದೃಷ್ಟಕರವಲ್ಲ ನಿಮ್ಮಂತಹ ನಾಟಕೀಯ ಮಜವಾದಿಗಳು ಸಮಾಜವಾದದ ಬಗ್ಗೆ ಮಾತನಾಡುವುದು ದುರದೃಷ್ಟಕರ ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಚಿವರು- ವಿವಾದದ ಬಳಿಕ ಸೊಂಟ ನೋವೆಂದು ಸಮರ್ಥನೆ

    ಮಹದೇವಪ್ಪ ಸಮರ್ಥನೆ ಏನು..?: ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಗ ರಕ್ಷಕರು ಶೂ ಹಾಕಿದ್ದಾರೆಂಬ ಸಂಗತಿಯು ವಿವಾದದ ಸ್ವರೂಪ ಪಡೆದಿರುವುದು ದುರದೃಷ್ಟಕರ ಬೆಳವಣಿಗೆ. ವೈಯಕ್ತಿಕವಾಗಿ ವ್ಯಕ್ತಿ ಗೌರವ ಮತ್ತು ಘನತೆಯಲ್ಲಿ ನಂಬಿಕೆ ಇಟ್ಟಿರುವ ನನಗೆ ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪದ ಇರಾದೆ ಇಲ್ಲ. ಆದರೆ ಹಿಂದೆ  Hip Joint Knee ತೊಂದರೆ ಸಿಲುಕಿ ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಿಂದ ಬಾಗುವುದು ಕಷ್ಟವಾಗಿದ್ದ ಕಾರಣ ನಮ್ಮ ಆತ್ಮೀಯ ವಲಯದಿಂದ ಸಹಾಯ ಪಡೆದಿದ್ದೇನೆ.

    ಬಹು ವರ್ಷಗಳ ಕಾಲ ನನ್ನೊಡನೆಯೇ ಒಂದು ಕುಟುಂಬದಂತೆ ಇರುವ ನಮ್ಮ ಕೆಲ ಸಿಬ್ಬಂದಿ ಬಳಿ ಕಾಲಿನ ಸಮಸ್ಯೆಯ ಹಿನ್ನೆಲೆಯಲ್ಲಿ ಪಡೆದುಕೊಂಡಿರುವ ಈ ಸಹಾಯಕ್ಕೆ ಮಾನವೀಯ ನೆಲೆ ಇದೆ. ಸಹಾಯಕ್ಕೆ ಅಂಹಕಾರ, ಅಧಿಕಾರದ ಅಮಲು ಎಂಬ ಶಬ್ದಗಳನ್ನು ಬಳಸುವುದು ಸರಿಯಾದ ಕ್ರಮವಲ್ಲ. ಇನ್ನು ನನ್ನನ್ನು ಬಲ್ಲ ಎಲ್ಲರಿಗೂ ವ್ಯಕ್ತಿ ಗೌರವಕ್ಕೆ ಸಂಬಂಧಿಸಿದ ನನ್ನ ನಿಲುವುಗಳ ಬಗ್ಗೆ ಚೆನ್ನಾಗಿಯೇ ತಿಳಿದಿರುವ ಕಾರಣ ಇಂತಹ ಸಣ್ಣಪುಟ್ಟ ವಿವಾದಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಸಹಾಯಕ್ಕಾಗಿ ನನ್ನ ಅಂಗರಕ್ಷಕನಿಗೆ ಧನ್ಯವಾದಗಳು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಆಗಿದ್ದೇನು..?: ಧಾರವಾಡ ಸಪ್ತಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಸಚಿವ ಮಹಾದೇವಪ್ಪ ಅವರು ಅಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೇ ಊಟದ ವ್ಯವಸ್ಥೆ ಬಗ್ಗೆಯೂ ವಿದ್ಯಾರ್ಥಿಗಳ ವಿಚಾರಿಸಿ, ವಿದ್ಯಾರ್ಥಿಗಳಿಂದ ಅಹವಾಲು ಕೂಡ ಸ್ವೀಕರಿಸಿದರು. ಹಾಸ್ಟೆಲ್‍ಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಿದ ನಂತರ ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿ ಸಚಿವರು ತಮ್ಮ ಅಂಗರಕ್ಷಕನಿಂದಲೇ ಶೂ ಹಾಕಿಸಿಕೊಂಡ ಪ್ರಸಂಗ ನಡೆಯಿತು. ಸಚಿವರ ಈ ನಡೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.