Tag: barrier

  • ಐವರ ಜಲಸಮಾಧಿ ಬಳಿಕ ಎಚ್ಚೆತ್ತ ಅಧಿಕಾರಿಗಳು – ಆರಂಭವಾಯ್ತು ತಡೆಗೋಡೆ ನಿರ್ಮಾಣ ಕಾರ್ಯ

    ಐವರ ಜಲಸಮಾಧಿ ಬಳಿಕ ಎಚ್ಚೆತ್ತ ಅಧಿಕಾರಿಗಳು – ಆರಂಭವಾಯ್ತು ತಡೆಗೋಡೆ ನಿರ್ಮಾಣ ಕಾರ್ಯ

    ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರು (Car) ನಾಲೆಗೆ ಬಿದ್ದು, ಐವರು ಜಲಸಮಾಧಿಯಾದ ಆಘಾತಕಾರಿ ಘಟನೆಯ ಬಳಿಕ ಇದೀಗ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ದುರ್ಘಟನೆ ನಡೆದ ಸ್ಥಳದಲ್ಲಿ ಇದೀಗ ತಡೆಗೋಡೆ (Barrier) ನಿರ್ಮಿಸುವ ಕಾರ್ಯ ಆರಂಭವಾಗಿದೆ.

    ದುರ್ಘಟನೆ ಪಾಂಡವಪುರ ತಾಲೂಕಿನ ಬನಘಟ್ಟ ಬಳಿಯ ವಿಸಿ ನಾಲೆಯಲ್ಲಿ (VC Canal) ಸಂಭವಿಸಿತ್ತು. ಭದ್ರವಾತಿ ನಿವಾಸಿಗಳಾದ ಚಂದ್ರಪ್ಪ (61), ಕೃಷ್ಣಪ್ಪ (60), ಧನಂಜಯ (55), ಬಾಬು ಹಾಗೂ ಜಯಣ್ಣ ಘಟನೆಯಲ್ಲಿ ಸಾವನ್ನಪ್ಪಿದ್ದರು. ಮೃತರು ಇಂಡಿಕಾ ಕಾರಿನಲ್ಲಿ ಮಂಗಳವಾರ ಸಂಜೆ 4:45 ರ ವೇಳೆಯಲ್ಲಿ ಮೈಸೂರಿನಿಂದ ಭದ್ರಾವತಿ ಕಡೆಗೆ ಪ್ರಯಾಣ ಬೆಳೆಸಿದ್ದರು. ಬನಘಟ್ಟದ ವಿಸಿ ನಾಲೆ ಸೇತುವೆ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ನೇರವಾಗಿ ನಾಲೆಗೆ ಉರುಳಿಬಿದ್ದಿದೆ.

    ಕಿರಿದಾದ ರಸ್ತೆ ಹಾಗೂ ತಿರುವಿದ್ದ ಕಾರಣ ಚಾಲಕನಿಗೆ ಕಾರು ನಿಯಂತ್ರಿಸಲು ಸಾಧ್ಯವಾಗಿಲ್ಲ. ಅಲ್ಲದೇ ಕೆಆರ್‌ಎಸ್ ಅಣೆಕಟ್ಟಿನಿಂದ ನಾಲೆಗೆ ನೀರು ಬಿಟ್ಟಿರುವುದರಿಂದ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಇದರಿಂದ ನಾಲೆಗೆ ಬಿದ್ದ ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದರು. ಇದನ್ನೂ ಓದಿ: ನಾಪತ್ತೆಯಾಗಿ ಮೂರು ದಿನಗಳ ಬಳಿಕ ದಟ್ಟ ಅರಣ್ಯದಲ್ಲಿ ಪತ್ತೆಯಾದ 85ರ ವೃದ್ಧೆ

    ಇದೀಗ ಬಳಘಟ್ಟ ಬಳಿಯ ವಿಸಿ ನಾಲೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಆರಂಭವಾಗಿದೆ. ಅಧಿಕಾರಿಗಳು ಸ್ಥಳದಲ್ಲೇ ಖುದ್ದು ಹಾಜರಿದ್ದು ಕೆಲಸ ಮಾಡಿಸುತ್ತಿದ್ದಾರೆ. ತಡೆಗೋಡೆ ನಿರ್ಮಿಸುವ ಜೊತೆಗೆ ಹೆದ್ದಾರಿ ಪಕ್ಕದಲ್ಲಿದ್ದ ಗಿಡಗಂಟೆ ತೆರವುಗೊಳಿಸಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ.

    ದುರ್ಘಟನೆ ಬಳಿಕ ಇಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ತಡೆಗೋಡೆ ನಿರ್ಮಿಸಲು ಸೂಚಿಸಿದ್ದಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿ ವಲಯದ ಅಧಿಕಾರಿಗಳು ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಚಿಂತಾಮಣಿ ಮನೆಯ ಮೇಲೆ ಪೊಲೀಸ್‌ ದಾಳಿ – ಹುಲಿ ಉಗುರು ಪತ್ತೆ, ಯುವಕ ನಾಪತ್ತೆ

  • ಒಡೆದ ಕೆರೆಯ ತಡೆಗೋಡೆ- ಅಳ್ನಾವರದ ನಾಲ್ಕು ಬಡಾವಣೆ ಸ್ಥಳಾಂತರ

    ಒಡೆದ ಕೆರೆಯ ತಡೆಗೋಡೆ- ಅಳ್ನಾವರದ ನಾಲ್ಕು ಬಡಾವಣೆ ಸ್ಥಳಾಂತರ

    ಧಾರವಾಡ: ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ ತುಂಬಿದ್ದು, ಭಾರೀ ನೀರು ಸಂಗ್ರಹವಾಗಿದೆ. ಅಲ್ಲದೆ ಕೆರೆಯ ತಡೆಗೋಡೆ ಒಡೆದಿದ್ದರಿಂದ ನೀರು ಅಳ್ನಾವರ ಪಟ್ಟಣಕ್ಕೆ ಹರಿದು ಬರುತ್ತಿದೆ. ಈ ಹಿನ್ನೆಲೆ ಪಟ್ಟಣದ ತಿಲಕನಗರ, ದೇಸಾಯಿ ಚಾಳ್, ಕಾಳೆ ಪ್ಲಾಟ್ ಜನರನ್ನು ಅಳ್ನಾವರ ತಾಲೂಕಾ ಆಡಳಿತ ಸ್ಥಳಾಂತರಿಸುತ್ತಿದೆ.

    ಮನೆ ಖಾಲಿ ಮಾಡಿಸುತ್ತಿದ್ದು, ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಕೆರೆಯ ಪಕ್ಕದ ಗ್ರಾಮಸ್ಥರು ಭಯಭೀತರಾಗಿದ್ದು, ಸಾಕಷ್ಟು ಬೆಳೆ ಸಹ ನಾಶವಾಗಿದೆ.

    ಸದ್ಯ ಅಳ್ನಾವರ ಪಟ್ಟಣಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಗೋಪಾಲ ಕೃಷ್ಣ ಹಾಗೂ ಅಳ್ನಾವರ ತಹಶೀಲ್ದಾರ್ ಅಮರೇಶ ಪಮ್ಮಾರ್, ಡವಗಿ ನಾಕಾ ಪರಿಶೀಲನೆ ನಡೆಸಿದರು. ಜನರ ಸ್ಥಳಾಂತರಕ್ಕೆ 6 ಪರಿಹಾರ ಕೇಂದ್ರ ತೆರೆಯಲಾಗಿದೆ. ಜನರನ್ನು ಸ್ಥಳಾಂತರ ಮಾಡುವ ಕೆಲಸ ನಡೆದಿದೆ ಎಂದು ಗೋಪಾಲಕೃಷ್ಣ ತಿಳಿಸಿದರು.

  • ರಸ್ತೆ ಬದಿಯ ಹಳ್ಳಕ್ಕೆ ಕಾರು ಪಲ್ಟಿ – ವಾರಕ್ಕೊಂದು ಗಾಡಿ ಪಲ್ಟಿಯಾದ್ರೂ ಸರ್ಕಾರ ಡೋಂಟ್ ಕೇರ್

    ರಸ್ತೆ ಬದಿಯ ಹಳ್ಳಕ್ಕೆ ಕಾರು ಪಲ್ಟಿ – ವಾರಕ್ಕೊಂದು ಗಾಡಿ ಪಲ್ಟಿಯಾದ್ರೂ ಸರ್ಕಾರ ಡೋಂಟ್ ಕೇರ್

    ಚಿಕ್ಕಮಗಳೂರು: ರಸ್ತೆ ತಿರುವಿನಲ್ಲಿ ತಡೆಗೋಡೆಗಳಿಲ್ಲದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಶಿಫ್ಟ್ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಮೂಲೆಮನೆ ಗ್ರಾಮದಲ್ಲಿ ನಡೆದಿದೆ.

    ಶಿಫ್ಟ್ ಕಾರಿನಲ್ಲಿ ನಾಲ್ವರು ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಬೆಳಗಿನ ಜಾವ ಸುಮಾರು 4 ಗಂಟೆಗೆ ಮೂಲೆಮನೆ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ ಕಾರು ಹಳ್ಳಕ್ಕೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಶಿಫ್ಟ್ ಕಾರಿನ ಹಿಂದೆ ಸಂಚರಿಸುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಕಾರಿನಲ್ಲಿದ್ದವರನ್ನ ರಕ್ಷಿಸಿದ್ದಾರೆ. ರಸ್ತೆ ಬದಿಯ ಹಳ್ಳಕ್ಕೆ ತಡೆಗೋಡೆ ಇಲ್ಲದಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ವಾರಕ್ಕೊಂದು ಅಪಘಾತ: ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ಪ್ರವಾಸಿ ವಾಹನಗಳು ಓಡಾಡುತ್ತವೆ. ಈ ತಿರುವಿನಲ್ಲಿ ವಾರಕ್ಕೊಂದು ಅಪಘಾತಗಳು ನಡೆಯುತ್ತಿವೆ. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಉಪಯೋಗವಿಲ್ಲ ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿ ಕಾರಿದ್ದಾರೆ. ಈಗ ಸಣ್ಣ-ಪುಟ್ಟ ಅಪಘಾತಗಳಾಗಿವೆ. ನಾಳೆ ದೊಡ್ಡ ಅನಾಹುತವಾದರೆ ಅದಕ್ಕೆ ಜವಾಬ್ದಾರಿ ಯಾರೆಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

  • ಮಳೆ ಕಡಿಮೆಯಿದ್ರೂ ಮನೆ, ತೋಟಗಳು ಸಂಪೂರ್ಣ ಜಲಾವೃತ

    ಮಳೆ ಕಡಿಮೆಯಿದ್ರೂ ಮನೆ, ತೋಟಗಳು ಸಂಪೂರ್ಣ ಜಲಾವೃತ

    – 3 ವರ್ಷದಿಂದ ಹೊಳೆಗೆ ತಡೆಗೋಡೆ ನಿರ್ಮಿಸಿಲ್ಲ

    ಹಾಸನ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ಆದರೂ ಕಾವೇರಿ ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಹೊಳೆ ದಂಡೆಯ ಮನೆಗಳು, ತೋಟಗಳು ಸಂಪೂರ್ಣ ಜಲಾವೃತವಾಗಿದ್ದು, ಸ್ಥಳೀಯರು ಆತಂಕ ಹೊರಹಾಕುತ್ತಿದ್ದಾರೆ.

    ಕಳೆದ ನಾಲ್ಕೈದು ದಿನದಿಂದ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಕಳೆದ ಮೂರು ವರ್ಷದಿಂದ ಇದೇ ಪರಿಸ್ಥಿತಿ ಪುನರಾವರ್ತನೆ ಆಗುತ್ತಿದೆ. ಜೀವನ ನಡೆಸೋದು ಹೇಗೆ ಎಂಬ ಆತಂಕ ಶುರುವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ನಮ್ಮನ್ನು ಬೇರೆಡೆ ಸ್ಥಳಾಂತರ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ನಾವು ಎಲ್ಲಿಗೂ ಹೋಗಲು ತಯಾರಿಲ್ಲ. ಅದರ ಬದಲು ನದಿಗೆ ಶಾಶ್ವತವಾಗಿ ಒಂದು ತಡೆಗೋಡೆ ನಿರ್ಮಿಸಿದರೆ ನಮ್ಮ ಮನೆಗಳಿಗೆ ನೀರು ನುಗ್ಗುವುದು ತಪ್ಪುತ್ತದೆ. ಕಳೆದ ಮೂರು ವರ್ಷದಿಂದ ಜನಪ್ರತಿನಿಧಿಗಳು ತಡೆಗೋಡೆ ನಿರ್ಮಿಸುವ ಭರವಸೆ ನೀಡುತ್ತಲೇ ಇದ್ದಾರೆ ಎಂದು ಯುವಕರು ಆರೋಪಿಸಿದ್ದಾರೆ.

    ಶನಿವಾರವಷ್ಟೇ ಸಚಿವ ಗೋಪಾಲಯ್ಯ, ಶಾಸಕರಾದ ಎಟಿ.ರಾಮಸ್ವಾಮಿ ಇಲ್ಲಿಗೆ ಬಂದು ಪುನಃ ತಡೆಗೋಡೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಆದರೆ ಈ ಬಾರಿಯೂ ತಡೆಗೋಡೆ ನಿರ್ಮಾಣ ಕೇವಲ ಭರವಸೆಗಷ್ಟೇ ಸೀಮಿತವಾದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡುತ್ತಿದ್ದಾರೆ ಸ್ಥಳೀಯರು.

  • ಕಾರಿನಲ್ಲಿ ತೋಟಕ್ಕೆ ಹೊಗುತ್ತಿದ್ದಾಗ ಅಪಘಾತ: ಪತ್ನಿ ಸಾವು, ಪತಿ-ಮಗಳು ಬಚಾವ್

    ಕಾರಿನಲ್ಲಿ ತೋಟಕ್ಕೆ ಹೊಗುತ್ತಿದ್ದಾಗ ಅಪಘಾತ: ಪತ್ನಿ ಸಾವು, ಪತಿ-ಮಗಳು ಬಚಾವ್

    ತುಮಕೂರು: ಕಾರು ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ಗೂಳೂರು ಬಳಿಯ ಪೋದಾರ್ ಶಾಲೆ ಬಳಿ ನಡೆದಿದೆ.

    ವಿನೂತಾ (28) ಮೃತಪಟ್ಟ ಮಹಿಳೆಯಾಗಿದ್ದಾರೆ. ಕಾರಿನಲ್ಲಿದ್ದ ವಿನೂತಾ ಅವರ ಪತಿ ರಾಘವೇಂದ್ರ ಹಾಗೂ 4 ವರ್ಷದ ಮಗಳು ಶ್ರಾವ್ಯ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ರಾಘವೇಂದ್ರ ಅವರು ಇಂದು ಬೆಳಗ್ಗ ಪತ್ನಿ ವಿನೂತಾ ಹಾಗೂ ಮಗಳು ಶ್ರಾವ್ಯ ಜೊತೆಗೆ ಕಾರಿನಲ್ಲಿ ತೋಟಕ್ಕೆ ಹೋಗುತ್ತಿದ್ದರು. ಈ ವೇಳೆ ಗೂಳೂರು ಬಳಿಯ ಪೋದಾರ್  ಶಾಲೆ ಸಮೀಪದಲ್ಲಿ ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿದೆ. ಪರಿಣಾಮ ಕಾರಿನ ಮುಂದಿನ ಸೀಟ್‍ನಲ್ಲಿ ಕುಳಿತ್ತಿದ್ದ ವಿನೂತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಕಾರನ್ನು ಚಾಲನೆ ಮಾಡುತ್ತಿದ್ದ ರಾಘವೇಂದ್ರ ಹಾಗೂ ಶ್ರಾವ್ಯ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗಾಯಗೊಂಡಿದ್ದ ರಾಘವೇಂದ್ರ ಹಾಗೂ ಶ್ರಾವ್ಯ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಕುರಿತು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.