Tag: Barge

  • ಬಾರ್ಜ್ ಅಪಘಾತ ಪ್ರಕರಣ: 23 ನೌಕರರ ರಕ್ಷಣೆ

    ಬಾರ್ಜ್ ಅಪಘಾತ ಪ್ರಕರಣ: 23 ನೌಕರರ ರಕ್ಷಣೆ

    ಮಂಗಳೂರು: ಉಳ್ಳಾಲದ ಮೊಗವೀರಪಟ್ಟಣದ ಸಮುದ್ರ ತೀರದಲ್ಲಿ ಕಡಲ್ಕೊರೆತ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದ ಚೀನಾದ ಬಾರ್ಜ್ ಹಡಗು ಅಪಘಾತಕ್ಕೀಡಾಗಿದ್ದು, ಹಡಗಿನಲ್ಲಿದ್ದ ನೌಕರರ ರಕ್ಷಣಾ ಕಾರ್ಯಾಚರಣೆ ಅಂತ್ಯವಾಗಿದೆ.

    ಒಟ್ಟು 27 ಮಂದಿ ನೌಕರರು ಬಾರ್ಜ್ ನಲ್ಲಿ ಸಿಲುಕಿಕೊಂಡಿದ್ದರು. ಶನಿವಾರದಂದು ನಾಲ್ವರು ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿತ್ತು. ಇಂದು 23 ನೌಕರರನ್ನು ರಕ್ಷಣೆ ಮಾಡಲಾಗಿದೆ. ಕರಾವಳಿ ಕಾವಲು ಪಡೆ ಬೋಟ್ ನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಶನಿವಾರ ರಾತ್ರಿ 8 ಗಂಟೆ ವೇಳೆಗೆ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಬೆಳಗ್ಗೆ 6 ಗಂಟೆಯಿಂದ ಮತ್ತೆ ಕಾರ್ಯಾಚರಣೆ ಶುರು ಮಾಡಿದ್ದು, 23 ನೌಕರರನ್ನ ರಕ್ಷಿಸಲಾಗಿದೆ.

    ಉಳ್ಳಾಲ ಕಡಲ ತೀರದಲ್ಲಿ ತಡೆಗೋಡೆ ಮತ್ತು ಡ್ರೆಜ್ಜಿಂಗ್ ಕಾಮಗಾರಿ ನಡೆಸುತ್ತಿದ್ದ ಬಾರ್ಜ್ ಶನಿವಾರ ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಬಂಡೆ ಕಲ್ಲಿಗೆ ಡಿಕ್ಕಿ ಹೊಡೆದು ದುರಂತಕ್ಕೀಡಾಗಿತ್ತು. ಹಡಗಿನೊಳಗೆ ನೀರು ನುಗ್ಗುತ್ತಿದ್ದ ಹಾಗೆ ಶಿಫ್ಟ್ ಕ್ಯಾಪ್ಟನ್ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಜಿಲ್ಲಾಡಳಿತ ಕೂಡಲೇ ಇಂಡಿಯನ್ ಕೋಸ್ಟ್ ಗಾರ್ಡಿಗೆ ಮಾಹಿತಿ ನೀಡಿದ್ದು, ಸಂಜೆ 6 ಗಂಟೆಗೆ ಭಾರತೀಯ ಇಂಡಿಯನ್ ಕೋಸ್ಟ್ ಗಾರ್ಡ್‍ನ ಅಮರ್ಥ್ಯ ಹೆಸರಿನ ಹಡಗು ಧಾವಿಸಿ ಬಂತು.

  • ಮುಳುಗುವ ಭೀತಿಯಲ್ಲಿ ಬಾರ್ಜ್-ಅಪಾಯದಲ್ಲಿ 33 ನೌಕರರು

    ಮುಳುಗುವ ಭೀತಿಯಲ್ಲಿ ಬಾರ್ಜ್-ಅಪಾಯದಲ್ಲಿ 33 ನೌಕರರು

    ಮಂಗಳೂರು: ಬ್ರೇಕ್ ವಾಟರ್ ಕಾಮಗಾರಿಯ ಬಾರ್ಜ್ ಸಮುದ್ರದ ನಡುವಿನ ಬಂಡೆಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉಳ್ಳಾಲದ ಸಮುದ್ರ ಕಿನಾರೆಯಲ್ಲಿ ನಡೆದಿದೆ.

    ಉಳ್ಳಾಲದ ಮೊಗವೀರಪಟ್ಣದಲ್ಲಿ ಈ ಘಟನೆ ನಡೆದಿದೆ. ಬಾರ್ಜ್ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಭಾಗಶಃ ಹಾನಿಯಾಗಿದ್ದು, ಮುಳುಗಡೆ ಭೀತಿಯಲ್ಲಿದೆ. ಬಾರ್ಜ ನಲ್ಲಿ ಕೆಲಸ ಮಾಡುತ್ತಿದ್ದ 33 ನೌಕರರು ಅಪಾಯದಂಚಿನಲ್ಲಿದ್ದಾರೆ. ಇತ್ತ ಬಾರ್ಜ್ ನಲ್ಲಿರುವ ಜನರು ಸಿಡಿಮದ್ದು ಸಿಡಿಸಿ ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ.

    ಬ್ರೇಕ್ ವಾಟರ್ ಕಾಮಗಾರಿಗೆ ಆಗಮಿಸಿದ್ದ ಬಾಜ್ ಈಗಾಗಲೇ ಮೊದಲ ಹಂತದ ಕಾಮಾಗರಿಯನ್ನು ಪೂರ್ಣಗೊಳಿಸಿತ್ತು. ಬಾರ್ಜ್ ರವಿವಾರ ಮುಂಬೈನತ್ತ ಪ್ರಯಾಣ ಬೆಳಸಬೇಕಿತ್ತು. ಬಾರ್ಜ್ ನಿಲುಗಡೆಗೆ ಹಾಕಿದ್ದ ಲಂಗರು ಸಮುದ್ರದ ಅಲೆಗಳ ಹೊಡೆತಕ್ಕೆ ಶನಿವಾರ ಮಧ್ಯಾಹ್ನ ತುಂಡಾಗಿದೆ. ಇನ್ನು ಸ್ಥಳಕ್ಕೆ ಕೋಸ್ಟಲ್  ಗಾರ್ಡ್ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.