Tag: barfi

  • ಹಬ್ಬಕ್ಕೆ ಮಾಡಿ ಡ್ರೈ ಫ್ರೂಟ್ಸ್ ಬರ್ಫಿ!

    ಹಬ್ಬಕ್ಕೆ ಮಾಡಿ ಡ್ರೈ ಫ್ರೂಟ್ಸ್ ಬರ್ಫಿ!

    ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಡ್ರೈ ಫ್ರೂಟ್ಸ್ ಬಳಸಿ ಬರ್ಫಿ ಮಾಡೋದನ್ನ ಇವತ್ತು ನಾನಿಲ್ಲಿ ತಿಳಿಸಿಕೊಡ್ತೀನಿ.

    ಬೇಕಾಗುವ ವಸ್ತುಗಳು
    ಬಾದಾಮಿ – ಅರ್ಧ ಕಪ್
    ಗೋಡಂಬಿ – ಅರ್ಧ ಕಪ್
    ಮಖಾನಾ – ಅರ್ಧ ಕಪ್
    ಕೊಬ್ಬರಿ ತುರಿ – ಅರ್ಧ ಕಪ್
    ಪುಟಾಣಿ, ಹುರಿಗಡಲೆ – 1 ಕಪ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಜಾಯಿಕಾಯಿ ಪುಡಿ – ಒಂದು ಚಿಟಿಕೆ
    ಕೇಸರಿ – ಒಂದು ಚಿಟಿಕೆ
    ಬೆಲ್ಲ – 300 ಗ್ರಾಂ
    ತುಪ್ಪ – ಅಗತ್ಯಕ್ಕೆ ತಕ್ಕಂತೆ

    ಮಾಡುವ ವಿಧಾನ
    ಮೊದಲಿಗೆ, ಒಲೆ ಆನ್ ಮಾಡಿ ಪಾತ್ರೆ ಇಟ್ಟು ಮಖಾನಗಳನ್ನು ಗರಿಗರಿಯಾಗಿ ಹುರಿಯಬೇಕು. ಹುರಿದ ಬಳಿಕ ಒಲೆ ಆಫ್ ಮಾಡಿ, ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು. ಹುರಿದ ಮಖಾನವನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ. ಈ ಪುಡಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಬೇಕು. ಅದೇ ಮಿಕ್ಸರ್ ಜಾರ್‌ನಲ್ಲಿ ಬಾದಾಮಿ ಮತ್ತು ಗೋಡಂಬಿ ಸೇರಿಸಿ ನುಣ್ಣಗೆ ಪುಡಿ ಮಾಡಿ ಮಖಾನ ಮಿಶ್ರಣಕ್ಕೆ ಸೇರಿಸಬೇಕು.

    ಮಖಾನ ಹಾಗೂ ಬಾದಾಮಿ ಮಿಶ್ರಣಕ್ಕೆ ತುರಿದ ಕೊಬ್ಬರಿ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ, ಕೇಸರಿ ಸೇರಿಸಿ, ಒಲೆ ಆನ್ ಮಾಡಿ ಅದರಲ್ಲಿ ಒಂದು ಪಾತ್ರೆ ಇಟ್ಟು ತುರಿದ ಬೆಲ್ಲ, ಸ್ವಲ್ಪ ತುಪ್ಪ ಮತ್ತು ಕಾಲು ಕಪ್ ನೀರು ಸೇರಿಸಿ ಸ್ವಲ್ವ ಪಾಕ ಆಗುವವರೆಗೆ ಬೇಯಿಸಬೇಕು. ಇನ್ನೊಂದು ಪಾತ್ರೆ ಇಟ್ಟು ಒಂದು ಟೀಸ್ಪೂನ್ ತುಪ್ಪ ಸೇರಿಸಿ ಬಿಸಿ ಮಾಡಿ ಕಡಲೆಕಾಯಿ, ಬಾದಾಮಿ ಪುಡಿಗಳನ್ನು ಕಡಿಮೆ ಉರಿಯಲ್ಲಿ ಹುರಿದು, ಪರಿಮಳ ಬಂದ ಬಳಿಕ ಬೆಲ್ಲದ ಪಾಕ ಸೇರಿಸಿ ಮಿಶ್ರಣ ಮಾಡಿ ಬೇಯಿಸಬೇಕು.

    ಇದಕ್ಕೆ ಹಿಟ್ಟಿನ ಪೇಸ್ಟ್‌ನಲ್ಲಿ ಸೇರಿಕೊಂಡು ದಪ್ಪವಾಗಿ ಹದವಾಗಿ ಬೆಂದ ಬಳಿಕ ಒಲೆ ಆಫ್ ಮಾಡಿ, ಒಂದು ತಟ್ಟೆಗೆ ತುಪ್ಪ ಹಚ್ಚಿ ಈ ಮಿಶ್ರಣವನ್ನು ಸೇರಿಸಿ ಸಮವಾಗಿ ಹರಡಬೇಕು. ಬಳಿಕ ಡ್ರೈ ಫ್ರೂಟ್ಸ್ ಸೇರಿಸಿ, ಚಿಕ್ಕ ಪೀಸ್​ಗಳಾಗಿ ಕತ್ತರಿಸಬೇಕು. ತಣ್ಣಗಾದ ಬಳಿಕ ಬರ್ಫಿ ಸೇವಿಸಲು ಸಿದ್ಧ.

  • ಕಾಜು ಬರ್ಫಿ ಮಾಡುವ ಸುಲಭ ವಿಧಾನ

    ಕಾಜು ಬರ್ಫಿ ಮಾಡುವ ಸುಲಭ ವಿಧಾನ

    ಅಂಗಡಿಗಳಲ್ಲಿ ಸಿಗುವ ಬರ್ಫಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಕಾಜು ಬರ್ಫಿ (Kaju Barfi) ಹೇಸರು ಕೇಳಿದರೇನೇ ಬಾಯಲ್ಲಿ ನೀರು ಬರುತ್ತದೆ. ಇಂತಹ ಕಾಜು ಬರ್ಫಿಯನ್ನು ಮನೆಯಲ್ಲಿ ತಯಾರಿಸಬಹುದು. ಅದನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಗೋಡಂಬಿ – 1 ಕಪ್
    ಸಕ್ಕರೆ – ಅರ್ಧ ಕಪ್
    ನೀರು – ಅರ್ಧ ಕಪ್
    ತುಪ್ಪ – 1 ಚಮಚ
    ರೋಸ್ ವಾಟರ್ ಅಥವಾ ಕೇಸರಿ – 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಗೋಡಂಬಿಯನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಒಣಗಿಸಿಕೊಳ್ಳಿ.
    * ಗೋಡಂಬಿ ಒಣಗಿದ ಬಳಿಕ ನೀರಿನ ಪಸೆ ಇಲ್ಲದ ಮಿಕ್ಸರ್ ಜಾರ್‌ನಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.
    * ಒಂದು ಪ್ಯಾನ್‌ನಲ್ಲಿ ನೀರು ಮತ್ತು ಸಕ್ಕರೆ ಹಾಕಿ ಸಣ್ಣನೆಯ ಉರಿಯಲ್ಲಿ ಬಿಸಿ ಮಾಡಿ. ಸಕ್ಕರೆ ಪೂರ್ತಿಯಾಗಿ ನೀರಿನಲ್ಲಿ ಕರಗಿ ದಪ್ಪಗಾಗುವವರೆಗೆ ಕುದಿಸಿರಿ.
    * ನಂತರ ಗೋಡಂಬಿ ಪುಡಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. (ಬೇಕೆಂದಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಬಹುದು).
    * ಸುಮಾರು 5-10 ನಿಮಿಷಗಳವರೆಗೆ ಗೋಡಂಬಿ ಪುಡಿಯನ್ನು ಸಣ್ಣ ಉರಿಯಲ್ಲಿ ನಿಧಾನವಾಗಿ ಕದಡುತ್ತಾ ಇರಿ. ಮಿಶ್ರಣ ನಿಧಾನವಾಗಿ ದಪ್ಪಗಾಗುತ್ತಾ ಬರುತ್ತದೆ. ನಂತರ ಸ್ಟೌವ್‌ನಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ.
    * ಈಗ ಒಂದು ಪ್ಲೇಟ್‌ಗೆ ಸ್ವಲ್ಪ ತುಪ್ಪ ಸವರಿ ಇಟ್ಟುಕೊಳ್ಳಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಸಿಹಿಯಾದ ಹಯಗ್ರೀವ

    * ಈಗ ಪ್ಯಾನ್‌ನಿಂದ ಗೋಡಂಬಿ ಮಿಶ್ರಣವನ್ನು ಇಳಿಸಿ, ಒಂದು ಪಾತ್ರೆಗೆ ಹಾಕಿ ಅದರ ಮೇಲೆ ಸ್ವಲ್ಪ ತುಪ್ಪ, ರೋಸ್ ವಾಟರ್ ಅಥವಾ ಕೇಸರಿ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಗೋಡಂಬಿ ಹಿಟ್ಟನ್ನು ಚೆನ್ನಾಗಿ ನಾದಿ.
    * ನಾದಿದ ಗೋಡಂಬಿ ಹಿಟ್ಟನ್ನು ತುಪ್ಪ ಸವರಿದ ಪ್ಲೇಟ್‌ಗೆ ಸಮತಟ್ಟಾಗಿ ಹಾಕಬೇಕು. ನಂತರ ಲಟ್ಟಣಿಗೆಯ ಸಹಾಯದಿಂದ ನಿಧಾನವಾಗಿ ಹಿಟ್ಟಿನ ಮೇಲೆ ಸ್ವಲ್ಪ ದಪ್ಪ ಬರುವವರೆಗೆ ರೋಲ್ ಮಾಡಿ.
    * ಈಗ ಒಂದು ಚಾಕುವಿನಿಂದ ಗೋಡಂಬಿ ಮಿಶ್ರಣವನ್ನು ವಜ್ರಾಕೃತಿಯಲ್ಲಿ ಕತ್ತರಿಸಿಕೊಳ್ಳಿ ಮತ್ತು ಹಿಟ್ಟು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
    * ಈಗ ರುಚಿರುಚಿಯಾದ ಕಾಜು ಬರ್ಫಿ ಸವಿಯಲು ರೆಡಿಯಾಗಿದ್ದು, ಇನ್ನು 5-6 ದಿನಗಳವರೆಗೆ ಸವಿಯಬಹುದು. ಫ್ರಿಡ್ಜ್ನಲ್ಲಿಟ್ಟರೆ ಸುಮಾರು 1 ತಿಂಗಳು ಕೆಡುವುದಿಲ್ಲ. ಇದನ್ನೂ ಓದಿ: ದೀಪಾವಳಿ ಸ್ಪೆಷಲ್- ಮನೆಯಲ್ಲಿಯೇ ಮಾಡಿ ರಸಭರಿತ ರಸಗುಲ್ಲ

    Live Tv
    [brid partner=56869869 player=32851 video=960834 autoplay=true]

  • ದೀಪಾವಳಿ ಹಬ್ಬಕ್ಕೆ ಮಾಡಿ ಸ್ಪೆಷಲ್ ಬರ್ಫಿ

    ದೀಪಾವಳಿ ಹಬ್ಬಕ್ಕೆ ಮಾಡಿ ಸ್ಪೆಷಲ್ ಬರ್ಫಿ

    ಬ್ಬ ಎಂದರೆ ಸಿಹಿ ತಿಂಡಿ ಇರಲೇಬೇಕು. ದೀಪಾವಳಿಗಾಗಿ ಪ್ರತಿ ಮನೆಯಲ್ಲಿಯೂ ವಿಶೇಷ ತಿಂಡಿಗಳ ಖಾದ್ಯಗಳು ತಯಾರಾಗುತ್ತವೆ. ಈ ವರ್ಷ ಕೊಂಚ ಭಿನ್ನವಾಗಿರುವ ಬರ್ಫಿಯನ್ನು ಮಾಡುವ ಮೂಲಕ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಬಾರದೇಕೆ? ಹಬ್ಬದ ಸಂತೋಷದ ಸಮಯದಲ್ಲಿ ಈ ಬರ್ಫಿಯನ್ನು ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿ ಸಂತೋಷವನ್ನು ಹೆಚ್ಚಿಸುತ್ತದೆ.

    ಬೇಕಾಗಿರುವ ಸಾಮಗ್ರಿಗಳು:
    * ಕಡ್ಲೆಹಿಟ್ಟು- 1 ಕಪ್
    * ಸಕ್ಕರೆ- 2 ಕಪ್
    * ಹಾಲು-1 ಕಪ್
    * ತುಪ್ಪ-1 ಕಪ್
    * ಕಾಯಿತುರಿ- 1 ಕಪ್
    * ಬಾದಾಮಿ- ಒಂದು ಕಪ್

    ಮಾಡುವ ವಿಧಾನ:
    * ಒಂದು ಪಾತ್ರೆಗೆ ತುಪ್ಪ ಹಾಕಿ, ಕರಗಿದ ಬಳಿಕ ಕಡ್ಲೆಹಿಟ್ಟು ಹಾಕಿ ಕಂದುಬಣ್ಣ ಬರುವವರೆಗೂ ಹುರಿಯಿರಿ.
    * ನಂತರ ಹಾಲು, ಸಕ್ಕರೆ ಮಿಶ್ರಣ ಮಾಡುತ್ತಾ ಚೆನ್ನಾಗಿ ಬೇಯಿಸಿರಿ.

    * ಇನ್ನು ಉಳಿದ ತುಪ್ಪ, ಬಾದಾಮಿ, ಕಾಯಿತುರಿ ಹಾಕಿ ಮಿಶ್ರಣ ಮಾಡಿ
    *ತದನಂತರ ಈ ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಸುರಿದು ತಣಿಯಲು ಬಿಡಿ

    * ನಂತರ ಅರ್ಧ ಗಂಟೆಯ ಬಳಿಕ ಚಾಕು ಉಪಯೋಗಿಸಿ ನಿಮಗೆ ಸೂಕ್ತವೆನಿಸಿದ ಆಕೃತಿಯಲ್ಲಿ ಕತ್ತರಿಸಿದರೆ ರುಚಿಯಾದ ಬರ್ಪಿ ಸವಿಯಲು ಸಿದ್ಧವಾಗುತ್ತದೆ.