Tag: Barbados

  • ಬಾರ್ಬಡೋಸ್ ಸಂಸತ್ತಿಗೆ ಹೊರಟ್ಟಿ, ಖಾದರ್ ಭೇಟಿ

    ಬಾರ್ಬಡೋಸ್ ಸಂಸತ್ತಿಗೆ ಹೊರಟ್ಟಿ, ಖಾದರ್ ಭೇಟಿ

    ಬ್ರಿಡ್ಜ್‌ಟೌನ್‌: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಮತ್ತು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ (UT Khader) ಬಾರ್ಬಡೋಸ್  ಸಂಸತ್ತಿಗೆ (Barbados Parliament) ಭೇಟಿ ನೀಡಿದ್ದಾರೆ.

    68ನೇ ಅಂತರರಾಷ್ಟ್ರೀಯ ಕಾಮನ್‌ವೆಲ್ತ್ (Commonwealth) ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಲು ಬಾರ್ಬಡೋಸ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಯು.ಟಿ.ಖಾದರ್ ಅವರು ಬಾರ್ಬಡೋಸ್ ಸಂಸತ್ತಿಗೆ ಭೇಟಿ ನೀಡಿದರು. ಇದನ್ನೂ ಓದಿ: ಗಾಜಾ ಯುದ್ಧ ಅಂತ್ಯ | ಇಸ್ರೇಲ್‌ನ 7 ಒತ್ತೆಯಾಳುಗಳನ್ನ ಬಿಡುಗಡೆ ಮಾಡಿದ ಹಮಾಸ್

    ಬಾರ್ಬಡೋಸ್ ಸಂಸತ್ತಿನ ಸಭಾಧ್ಯಕ್ಷರ ಪೀಠವು ಭಾರತದಿಂದ ಕೊಡಲ್ಪಟ್ಟಿದೆ. ಇದು ಭಾರತ ಮತ್ತು ಬಾರ್ಬಡೋಸ್ ನಡುವಿನ ಸ್ನೇಹ ಮತ್ತು ಸಂಸತ್ತೀಯ ಸಹಕಾರದ ಸಂಕೇತವಾಗಿದೆ.

    ಈ ಸಮ್ಮೇಳನವು ಬಾರ್ಬಡೋಸ್ ಶಾಸಕಾಂಗದ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಂತರ-ಸಂಸದೀಯ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಅವಕಾಶವನ್ನು ಒದಗಿಸಿತು.

  • ಭೀಕರ ಚಂಡಮಾರುತ – ಬಾರ್ಬಡೋಸ್‌ನಲ್ಲೇ ಬೀಡುಬಿಟ್ಟ ಟೀಂ ಇಂಡಿಯಾ!

    ಭೀಕರ ಚಂಡಮಾರುತ – ಬಾರ್ಬಡೋಸ್‌ನಲ್ಲೇ ಬೀಡುಬಿಟ್ಟ ಟೀಂ ಇಂಡಿಯಾ!

    – ತವರಿನಲ್ಲಿ ವಿಜಯೋತ್ಸವಕ್ಕೆ ಕೊಂಚ ತಡೆ

    ಬಾರ್ಬಡೋಸ್‌: 17 ವರ್ಷಗಳ ಬಳಿಕ ಟಿ20 ವಿಶ್ವಕಪ್ (T20 World Cup) ಗೆದ್ದ ಟೀಂ ಇಂಡಿಯಾಗೆ ತವರಿನಲ್ಲಿ ಭರ್ಜರಿ ಸ್ವಾಗತ ನೀಡಲು ತಯಾರಿಗಳು ನಡೆದಿವೆ. ಆದ್ರೆ, ಅಭಿಮಾನಿಗಳ ಆಸೆಗೆ ಬಾರ್ಬಡೋಸ್‌ಗೆ ಅಪ್ಪಳಿಸಿದ ಭೀಕರ ಚಂಡಮಾರುತ ತಣ್ಣೀರು ಎರಚಿದೆ. ಹಾಗಾಗಿ ಟೀಂ ಇಂಡಿಯಾ (Team India) ತವರಿನಲ್ಲಿ ವಿಜಯೋತ್ಸವ ಆಚರಿಸಲು ಇನ್ನೂ ಮೂರ್ನಾಲ್ಕು ದಿನ ಕಾಯಬೇಕಿದೆ.

    ಕೆರೀಬಿಯನ್ ದ್ವೀಪಗಳಲ್ಲಿ ಸೋಮವಾರ (ಜು.1) ಬೆಳಗ್ಗಿನ ಜಾವದಲ್ಲಿ ಕೆಟಗಿರಿ-4 ಚಂಡಮಾರುತ ಬೀಸುತ್ತಿರುವುದರಿಂದ ವಿಮಾನಯಾನವೂ ಸೇರಿದಂತೆ ಎಲ್ಲ ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸದ್ಯಕ್ಕೆ ಸೇವೆ ಸ್ಥಗಿತಗೊಳಿಸಲಾಗಿದೆ.

    ಬಾರ್ಬಡೋಸ್ (Barbados) ಮತ್ತು ಸುತ್ತಮುತ್ತಲಿನ ದ್ವೀಪಗಳಲ್ಲಿ ಬಿರುಗಾಳಿಯ ತೀವ್ರತೆಯೂ ಹೆಚ್ಚಾಗಿದ್ದು, ಅಪಾಯಮಟ್ಟದಲ್ಲಿದೆ. 3 ಲಕ್ಷ ಜನಸಂಖ್ಯೆ ಹೊಂದಿರುವ ದ್ವೀಪದಲ್ಲಿ ಭಾನುವಾರ ಸಂಜೆಯಿಂದಲೇ ಲಾಕ್‌ಡೌನ್ ವಿಧಿಸಲಾಗಿದೆ. ಹೀಗಾಗಿ ಟೀಂ ಇಂಡಿಯಾ ಆಟಗಾರರು ಬಾರ್ಬಡೋಸ್‌ನ ಹೋಟೆಲ್‌ಗೆ ಸೀಮಿತ ಆಗಿದ್ದಾರೆ. ಅವರು ಸ್ವದೇಶಕ್ಕೆ ವಾಪಸ್ ಆಗೋದು ಇನ್ನೂ ಮೂರು ದಿನ ತಡವಾಗಬಹುದು ಎಂದು ಹೇಳಲಾಗಿದೆ.

    ಇನ್ನೂ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಜಯ್ ಶಾ (Jay Shah), ನಾವಿಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಮೊದಲಿಗೆ ಆಟಗಾರರು ಮತ್ತಿತರರನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಆದ್ಯತೆಯಾಗಿದೆ. ಸ್ವದೇಶಕ್ಕೆ ಹೋದ ನಂತರ ಸನ್ಮಾನದ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೇರಿಕ ಅಧ್ಯಕ್ಷೀಯ ಚುನಾವಣೆ: ಬೈಡನ್, ಟ್ರಂಪ್ ಮುಖಾಮುಖಿ ಚರ್ಚೆ

    ಸ್ವದೇಶಕ್ಕೆ ಆಗಮಿಸಿದ ನಂತರ ಮುಂಬೈ ಏರ್‌ಪೋರ್ಟ್‌ನಿಂದ ಬಿಸಿಸಿಐ ಕಚೇರಿವರೆಗೆ ಮೆರವಣಿಗೆ ನಡೆಸಲು ಬಿಸಿಸಿಐ ಆಲೋಚಿಸಿದೆ. ಇತ್ತ, ಸಂಸತ್‌ನ ಉಭಯ ಸದನಗಳಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಆಟಗಾರರನ್ನು ಅಭಿನಂದಿಸಲಾಗಿದೆ. ಇದನ್ನೂ ಓದಿ: ಲಂಕಾ ನೌಕಾಪಡೆಯ ನಾವಿಕ ಸಾವು – ಭಾರತೀಯ ಮೀನುಗಾರರ ಮೇಲೆ ಹತ್ಯೆ ಆರೋಪ

     

  • ಟಿ20 ವಿಶ್ವಕಪ್‌ ಫೈನಲ್‌ ಮ್ಯಾಚ್‌; ಟೀಂ ಇಂಡಿಯಾ ಗೆಲುವಿಗೆ ಕರ್ನಾಟಕದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

    ಟಿ20 ವಿಶ್ವಕಪ್‌ ಫೈನಲ್‌ ಮ್ಯಾಚ್‌; ಟೀಂ ಇಂಡಿಯಾ ಗೆಲುವಿಗೆ ಕರ್ನಾಟಕದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

    – ಸಮುದ್ರದ ಮರಳಿನಲ್ಲಿ ಅರಳಿದ ‘ಜೈ ಹೋ ಇಂಡಿಯಾ’ ಕಲಾಕೃತಿ

    ಬೆಂಗಳೂರು: ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ತಂಡಗಳ ಸೆಣೆಸಾಟ ನೋಡಲು ಕ್ರಿಕೆಟ್‌ ಅಭಿಮಾನಿಗಳು ಕಾತರರಾಗಿದ್ದಾರೆ. ಈ ಬಾರಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡದ ಗೆಲುವಿಗಾಗಿ ದೇಶಾದ್ಯಂತ ಜನರು ಪ್ರಾರ್ಥಿಸುತ್ತಿದ್ದಾರೆ.

    ಭಾರತ ತಂಡ ಗೆಲ್ಲಲಿ ಎಂದು ಬೆಂಗಳೂರಿನ (Bengaluru) ದೇಗುಲದಲ್ಲಿ ವಿಶೇಷ ಹೋಮ-ಹವನ ಮಾಡಿಸಲಾಗಿದೆ. ರಾಜರಾಜೇಶ್ವರಿ ನಗರದ ನಿಮಿಷಾಂಬ ದೇಗುಲದಲ್ಲಿ ಅಭಿಷ್ಟ ಸಿದ್ದಿ ಪೂಜೆ ಮಾಡಲಾಗಿದೆ. ಪ್ರತಿ ನಿಮಿಷವೂ ಶುಭವಾಗಲಿ ಹಾಗೂ ಗೆಲ್ಲಬೇಕೆಂಬ ಅಭಿಲಾಷೆಯಿಂದ ಅಭಿಷ್ಟ ಸಿದ್ದಿ ಹೋಮ ಮಾಡಿಸಿರುವ ಕನ್ನಡಿಗರು, ಟೀಂ ಇಂಡಿಯಾ ಆಟಗಾರರ ಮೇಲೆ ದೇವಿಯ ಬೆಂಬಲ ಇರಲಿ ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಇಂದು ಟಿ-20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯ; ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ-ಭಾರತ ಹಣಾಹಣಿ

    ನಗರದ ಗಾಳಿ ಆಂಜನೇಯನಿಗೆ ವಿಶೇಷ ಅಭಿಷೇಕ ಕೂಡ ಮಾಡಿಸಲಾಗಿದೆ. ಆಂಜನೇಯನಿಗೆ ಹೂವು ಹಾಕಿ ವಿಕೆಟ್, ಬಾಲ್, ಬ್ಯಾಟ್‌ಗೆ ಪೂಜೆ ಸಲ್ಲಿಸಲಾಗಿದೆ. ತೆಂಗಿನಕಾಯಿ ಒಡೆದು, ಹೂವಿನ ಅಭಿಷೇಕ ಮಾಡಿ ತಂಡದ ಗೆಲುವಿಗೆ ಪ್ರಾರ್ಥಿಸಲಾಗಿದೆ.

    ಮಂಡ್ಯ ನಗರದ ಶನೇಶ್ವರ ದೇವಾಲಯದಲ್ಲಿ ಕೂಡ ಪೂಜೆ ಸಲ್ಲಿಕೆಯಾಗಿದೆ. ತಂಡದ ಆಟಗಾರರ ಹೆಸರಿನಲ್ಲಿ ಅರ್ಚನೆ ಕೂಡ ಮಾಡಿಸಲಾಗಿದೆ. ಇತ್ತ ಉಡುಪಿಯ ಕುಂದಾಪುರದ ಕೋಟೇಶ್ವರದಲ್ಲಿ ಬೀಚ್‌ ‘ಜೈ ಹೋ ಇಂಡಿಯಾ’ ಎಂದು ಸ್ಯಾಂಡ್ ಆರ್ಟ್ ಕಲಾಕೃತಿ ರಚಿಸಿದ್ದಾರೆ. ಉಡುಪಿಯ ಸ್ಯಾಂಡ್ ಆರ್ಟ್ ಟೀಂ ನಿಂದ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಗೆದ್ದು ಬಾ ಟೀಂ ಇಂಡಿಯಾ – 2014 ರಿಂದ 2023ವರೆಗೆ ಐಸಿಸಿ ಟೂರ್ನಿಯಲ್ಲಿ ಭಾರತ ಸಾಧನೆ ಏನು?

    ದಾವಣಗೆರೆಯಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಮಕ್ಕಳು ಕೂಡ ಭಾರತ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಆಲ್‌ ದಿ ಬೆಸ್ಟ್‌ ಇಂಡಿಯಾ ಅಂತಾ ಕ್ರಿಕೆಟ್‌ ಅಭಿಮಾನಿಗಳೂ ತಂಡದ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.

  • ರೇಣುಕಾ ಸಿಂಗ್ ಇನ್‍ಸ್ವಿಂಗ್ – ಜಸ್ಟ್ ವಾವ್ ಎಂದ ಕ್ರಿಕೆಟ್ ಪ್ರಿಯರು

    ರೇಣುಕಾ ಸಿಂಗ್ ಇನ್‍ಸ್ವಿಂಗ್ – ಜಸ್ಟ್ ವಾವ್ ಎಂದ ಕ್ರಿಕೆಟ್ ಪ್ರಿಯರು

    ಲಂಡನ್: ಕಾಮನ್‍ವೆಲ್ತ್ ಗೇಮ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡದ ವೇಗದ ಬೌಲರ್ ರೇಣುಕಾ ಸಿಂಗ್ ಎಸೆದ ಇನ್‍ಸ್ವಿಂಗ್ ಎಸೆತವೊಂದು ಕ್ರಿಕೆಟ್ ಪ್ರಿಯರ ಮನಗೆದ್ದಿದೆ.

    22ನೇ ಕಾಮನ್‍ವೆಲ್ತ್ ಗೇಮ್ಸ್‌ನ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಬಾರ್ಬಡೋಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಶೀಫಾಲಿ ವರ್ಮಾ 43 ರನ್ (26 ಎಸೆತ, 7 ಬೌಂಡರಿ, 1), ಜೆಮಿಮಾ ರಾಡ್ರಿಗಸ್ ಅಜೇಯ 56 ರನ್ (46 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ದೀಪ್ತಿ ಶರ್ಮಾ 34 ರನ್ (28 ಎಸೆತ, 2 ಬೌಂಡರಿ, 1 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್‍ಗಳ ಉತ್ತಮ ಮೊತ್ತ ಕಲೆ ಹಾಕಿತು. ಇದನ್ನೂ ಓದಿ: ಹೈಜಂಪ್‌ನಲ್ಲಿ ತೇಜಸ್ವಿನ್ ತೇಜಸ್ಸು, ವೇಟ್‌ಲಿಫ್ಟಿಂಗ್‌ನಲ್ಲಿ ಗುರ್‌ದೀಪ್ ಪರಾಕ್ರಮ- ಭಾರತಕ್ಕೆ ಮತ್ತೆರಡು ಕಂಚು

    163 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಬಾರ್ಬಡೋಸ್ ರೇಣುಕಾ ಸಿಂಗ್ ದಾಳಿಗೆ ತತ್ತರಿಸಿ ಕೇವಲ 62 ರನ್‍ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ ತಂಡ 100 ರನ್‍ಗಳ ಭರ್ಜರಿ ಜಯ ದಾಖಲಿಸಿ ಸೆಮಿಫೈನಲ್‍ ರೇಸ್‌ನಲ್ಲಿದೆ.

    ಬಾರ್ಬಡೋಸ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ ರೇಣುಕಾ ಸಿಂಗ್ 4 ಓವರ್ ಎಸೆದು ಕೇವಲ 10 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಬಾರ್ಬಡೋಸ್ ತಂಡದ ಬ್ಯಾಟರ್‌ಗಳು ರೇಣುಕಾ ಶರ್ಮಾರ ಸ್ವಿಂಗ್ ದಾಳಿಗೆ ತತ್ತರಿಸಿ ಹೇಳ ಹೆಸರಿಲ್ಲದಂತೆ ಪೆವಿಲಿಯನ್‌ ಪರೇಡ್‌ ನಡೆಸಿದರು.

    ಅದರಲ್ಲೂ ಬಾರ್ಬಡೋಸ್ ಆಟಗಾರ್ತಿ ಆಲಿಯಾ ಅಲ್ಲೆನ್ ಬ್ಯಾಟಿಂಗ್‍ಗೆ ಆಗಮಿಸುತ್ತಿದ್ದಂತೆ 5ನೇ ಓವರ್ ಎಸೆಯಲು ಬಂದ ರೇಣುಕಾ ಸಿಂಗ್ ಪ್ರೇಕ್ಷಕರನ್ನು ಮೂಕ ಪ್ರೇಕ್ಷಕರನ್ನಾಗಿಸಿದರು. ರೇಣುಕಾ ಸಿಂಗ್ ಎಸೆದ ಇನ್‍ಸ್ವಿಂಗ್ ಅರಿಯಲು ವಿಫಲವಾದ ಆಲಿಯಾ ಅಲ್ಲೆನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಇತ್ತ ಪ್ರೇಕ್ಷಕರು ರೇಣುಕಾ ಸಿಂಗ್ ಇನ್‍ಸ್ವಿಂಗ್ ಕಂಡು ಬೆರಗಾದರು. ಇದೀಗ ರೇಣುಕಾ ಸಿಂಗ್ ಇನ್‍ಸ್ವಿಂಗ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಟಿ20 ರ್‍ಯಾಕಿಂಗ್: ಜೀವನ ಶ್ರೇಷ್ಠ ಎರಡನೇ ಸ್ಥಾನಕ್ಕೇರಿದ ಸೂರ್ಯ ಕುಮಾರ್ – ಪಾಕ್ ನಾಯಕನಿಗೆ ನಡುಕ

    22ನೇ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮಹಿಳೆಯ ಕ್ರಿಕೆಟ್ ಸೇರ್ಪಡೆಗೊಳಿಸಲಾಗಿದೆ. ಈಗಾಗಲೇ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]