Tag: bar dancer

  • ಪತ್ನಿಯ ಕೆಲಸದಿಂದ ಬೇಸತ್ತ ಪತಿ – ಕೊಲೆಗೈದು 8 ಪೀಸ್ ಮಾಡಿ ಬಿಸಾಕಿದ!

    ಪತ್ನಿಯ ಕೆಲಸದಿಂದ ಬೇಸತ್ತ ಪತಿ – ಕೊಲೆಗೈದು 8 ಪೀಸ್ ಮಾಡಿ ಬಿಸಾಕಿದ!

    ಥಾಣೆ: ಪತ್ನಿ ಮಾಡುತ್ತಿರುವ ವೃತ್ತಿಯಿಂದ ಬೇಸತ್ತ ವ್ಯಕ್ತಿಯೊಬ್ಬ ಆಕೆಯನ್ನು ಕೊಲೆಗೈದು ಬಳಿಕ ಆಕೆಯ ದೇಹವನ್ನು 8 ಪೀಸ್ ಮಾಡಿ ಬಿಸಾಕಿದ ಅಮಾನವೀಯ ಘಟನೆಯೊಂದು ಥಾಣೆ ಜಿಲ್ಲೆಯ ಬಿವಾಂಡಿ ಪ್ರದೇಶದಲ್ಲಿ ನಡೆದಿದೆ.

    ಪತ್ನಿ ಸಬಿನಾಬಿ ಸರ್ದಾರ್‍ಳನ್ನು ಪತಿ ಹಮೀದ್ ಅನ್ಸಾರಿ ಕೊಲೆ ಮಾಡಿದ್ದಾನೆ. ದಂಪತಿ ಬಿವಾಂಡಿಯ ನರ್ಪೊಲಿ ಪ್ರದೇಶದ ನಿವಾಸಿಗಳಾಗಿದ್ದಾರೆ.

    ಪತ್ನಿ ಸಬಿನಾಬಿ ಡಾನ್ಸ್ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ಆರೋಪಿ ಪತಿ ಬೇಸತ್ತಿದ್ದನು. ಅಲ್ಲದೆ ಪತ್ನಿಯ ಕತ್ತು ಸೀಳಿ ಆಕೆಯ ದೇಹವನ್ನು 8 ಪೀಸ್ ಮಾಡಿ ಪ್ಲಾಸ್ಟಿಕ್ ಡ್ರಮ್ ಗೆ ಹಾಕಿ ಸೋನಾಲಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಬಿಸಾಕಿ ಬಂದಿದ್ದಾನೆ.

    ಹೀಗೆ ಬಿಸಾಕಿದ ಡ್ರಮ್ ನಿಂದ ಸ್ಥಳೀಯ ನಿವಾಸಿಗಳಿಗೆ ಕೊಳೆತ ವಾಸನೆ ಬರತೊಡಗಿದೆ. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಮಹಿಳೆಯನ್ನು ಕೊಲೆ ಮಾಡಿ ಪೀಸ್ ಮಾಡಿರುವ ಬಗ್ಗೆ ಬೆಳಕಿಗೆ ಬಂತು. ಹೀಗಾಗಿ ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಅಲ್ಲದೆ ಸ್ಥಳೀಯ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಡ್ರಮ್ ಬಿಸಾಕಿ ಹೋಗಿರುವ ದೃಶ್ಯ ಪೊಲೀಸರ ಗಮನಕ್ಕೆ ಬಂದಿದೆ.

    ಗ್ರಾಮೀಣ ಭಾಗದ ಪೊಲೀಸ್ ಅಧಿಕಾರಿ ಡಾ. ಶಿವಾಜಿ ರಾಥೋರ್ ಹಾಗೂ ಕ್ರೈಂ ಬ್ರ್ಯಾಂಚ್ ಇನ್ಸ್ ಪೆಕ್ಟರ್ ವೆಂಕಟ್ ಅಂಧಾಲೆಯವರ ನೇತೃತ್ವದ ತಂಡ ತನಿಖೆ ನಡೆಸಿತ್ತು. ಈ ವೇಳೆ ಪೀಸ್ ಪೀಸ್ ಆದ ದೇಹವನ್ನು ತುಂಬಿದ್ದ ಪ್ಲಾಸ್ಟಿಕ್ ಡ್ರಮ್ ತಾರಾಪುರದಲ್ಲಿ ತಯಾರಾಗಿದ್ದು, ಅದನ್ನು ಬಿವಾಂಡಿ ಅಂಗಡಿಯಲ್ಲಿ ಮಾರಾಟ ಮಾಡಲಾಗಿತ್ತು. ಈ ಡ್ರಮ್ಮನ್ನು ಆರೋಪಿ ಖರೀದಿ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಆರೋಪಿಯನ್ನು ಥಾಣೆ ನಗರ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

  • ಹತ್ಯೆಗೀಡಾದ ಬಾರ್ ಡ್ಯಾನ್ಸರ್‍ ಗೆ ಲವ್ವರ್ ಕೊಡಿಸಿದ್ದ ಈ ಐಷಾರಾಮಿ ಮನೆ

    ಹತ್ಯೆಗೀಡಾದ ಬಾರ್ ಡ್ಯಾನ್ಸರ್‍ ಗೆ ಲವ್ವರ್ ಕೊಡಿಸಿದ್ದ ಈ ಐಷಾರಾಮಿ ಮನೆ

    ಅಹಮದಾಬಾದ್: ಗುಜರಾತ್‍ನ ಸೂರತ್‍ನಲ್ಲಿ ಬಾರ್ ಡ್ಯಾನ್ಸರ್ ನಿಶಾ ಜ್ಯೋತಿ ಎಂಬಾಕೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ಪ್ರಿಯತಮ ಪ್ರೀತೇಶ್ ಈಗ ಪೊಲೀಸರ ಕಸ್ಟಡಿಯಲ್ಲಿದ್ದಾನೆ. ಜ್ಯೋತಿಗಾಗಿ ತಾನು 2 ಕೋಟಿ ರೂ. ಖರ್ಚು ಮಾಡಿದ್ದಾಗಿ ಪ್ರೀತೇಶ್ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದ. ಆಕೆಗಾಗಿ ಪ್ರೀತೇಶ್ ಕೊಡಿಸಿದ್ದ ಐಶಾರಾಮಿ ಮನೆಯ ಫೋಟೋಗಳು ಇದೀಗ ಲಭ್ಯವಾಗಿದೆ.

    ವಿವಾಹಿತನಾಗಿದ್ದ ಪ್ರೀತೇಶ್ ಜ್ಯೋತಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದ. ಆಕೆಗಾಗಿ ಐಶಾರಾಮಿ ಮನೆ, ಕಾರು ಹಾಗೂ ಇನ್ನಿತರೆ ವಸ್ತುಗಳನ್ನ ಕೊಡಿಸಿದ್ದ. ತನ್ನ ಹಂಡತಿಗೆ ಡೈವೋರ್ಸ್ ಕೂಡ ನೀಡಿ ಜ್ಯೋತಿಯ ಪ್ರೀತಿಯಲ್ಲಿ ಮುಳುಗಿದ್ದ. ಇಷ್ಟೆಲ್ಲಾ ಕೊಡಿಸಿದ ಮೇಲೂ ಜ್ಯೋತಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದು, ತನಗೆ ಮೋಸ ಮಾಡುತ್ತಿದ್ದಾಳೆಂದು ತಿಳಿದು ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದೆ ಎಂದು ಹೇಳಿದ್ದಾನೆ.

    ಜ್ಯೋತಿಗೆ ಪ್ರೀತೇಶ್ ಕೊಡಿಸಿದ್ದ ಮನೆಯಲ್ಲಿ ಐಶಾರಾಮಿ ವ್ಯವಸ್ಥೆಗಳಿದ್ದು, ದುಬಾರಿ ಸೋಫಾ, ಟಿವಿ ಹಾಗೂ ಪೀಠೋಪಕರಣಗಳನ್ನ ಫೋಟೋದಲ್ಲಿ ಕಾಣಬಹುದು.

    ಏನಿದು ಪ್ರಕರಣ?: ಸೂರತ್ ಪಟ್ಟಣದ ಹೊರವಲಯದ ಟಿಂಬಾ ಗ್ರಾಮದ ತೋಟದಲ್ಲಿ ಪ್ರೀತೇಶ್ ಜ್ಯೋತಿಯ ರುಂಡ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದ. ನಿಶಾ ಜ್ಯೋತಿ ಬಾರ್ ಡ್ಯಾನ್ಸರ್ ಆಗಿದ್ದು, ಮಾಡೆಲ್ ಕೂಡ ಆಗಿದ್ದರು. ಆರೋಪಿಯಾದ 30 ವರ್ಷದ ಪ್ರೀತೇಶ್ ಪಟೇಲ್ ಈಕೆ ಕೆಲಸ ಮಾಡುವ ಮುಂಬೈ ಬಾರ್‍ಗೆ ಭೇಟಿ ನೀಡುತ್ತಿದ್ದ. ಅಲ್ಲಿ ಇವರಿಬ್ಬರಿಗೂ ಪರಿಚಯವಾಗಿತ್ತು.

    ಪ್ರಿತೇಶ್ ಈಗಾಗಲೇ ಮದುವೆಯಾಗಿದ್ದು, ಈತ ಕಳೆದ ವಾರ ಡಿಸೆಂಬರ್ 27 ರಂದು ಜ್ಯೋತಿಯೊಡನೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ. ಡಿಸೆಂಬರ್ 28 ರಂದು ಈ ಜೋಡಿ ಹೊಸವರ್ಷವನ್ನು ಆಚರಿಸಲು ಮುಂಬೈಗೆ ಹೋಗಿತ್ತು. ಅಲ್ಲಿ ಮೀರಾ ರಸ್ತೆಯಲ್ಲಿರುವ ಹೋಟೆಲ್‍ವೊಂದರಲ್ಲಿ ತಂಗಿ ಸೋಮವಾರ ಟಿಂಬಾಗೆ ಹಿಂದಿರುಗಿದ್ದರು.

    ಜ್ಯೋತಿಯ ಕಾರ್ ಡ್ರೈವರ್ ಸಂದೀಪ್ ಸಿಂಗ್ ಮತ್ತು ಆತನ ಪತ್ನಿ ಕೂಡ ಪ್ರೀತೇಶ್ ಜೊತೆ ಟಿಂಬಾದ ತೋಟಕ್ಕೆ ಬಂದಿದ್ದರು. ಮಂಗಳವಾರದಂದು ಪ್ರೀತೇಶ್ ಹಾಗೂ ಜ್ಯೋತಿ ಮಧ್ಯೆ ವಾಗ್ವಾದ ನಡೆದಿತ್ತು. ಜ್ಯೋತಿ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪ್ರೀತೇಶ್ ಆಕ್ರೋಶಗೊಂಡಿದ್ದ.

    ಜಗಳ ವಿಕೋಪಕ್ಕೆ ತಿರುಗಿ ಅಲ್ಲೇ ಪಕ್ಕದಲ್ಲಿದ್ದ ಕುಡುಗೋಲು ತೆಗೆದು ಪ್ರಿತೇಶ್ ಪಟೇಲ್ ಜ್ಯೋತಿಯ ತಲೆಯನ್ನು ಕತ್ತರಿಸಿದ್ದ. ಈ ಎಲ್ಲಾ ದೃಶ್ಯವನ್ನು ನೋಡುತ್ತಿದ್ದ ಚಾಲಕ ಮತ್ತು ಪತ್ನಿ ಭಯಗೊಂಡು ತಮ್ಮ ಮೇಲೂ ದಾಳಿ ಮಾಡಬಹುದೆಂದು ಹೆದರಿ ಅಲ್ಲಿಂದ ಓಡಿಹೋಗಿದ್ದರು. ನಂತರ ಅವರು ನಡೆದ ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರೋ ಜ್ಯೋತಿ ತಂದೆ, ತನ್ನ ಮಗಳ ಮೇಲೆ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದಿದ್ದಾರೆ.

  • ಬಾರ್ ಡ್ಯಾನ್ಸರ್  ರುಂಡ ಕಡಿದು ಬರ್ಬರವಾಗಿ ಹತ್ಯೆಗೈದ ಪ್ರಿಯತಮ

    ಬಾರ್ ಡ್ಯಾನ್ಸರ್  ರುಂಡ ಕಡಿದು ಬರ್ಬರವಾಗಿ ಹತ್ಯೆಗೈದ ಪ್ರಿಯತಮ

    ಗಾಂಧಿನಗರ: ಪ್ರಿಯತಮನೇ ಯವತಿಯ ರುಂಡ ಕಡಿದು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಗುಜರಾತ್‍ನ ಸೂರತ್ ಪಟ್ಟಣದ ಹೊರವಲಯದ ಟಿಂಬಾ ಗ್ರಾಮದಲ್ಲಿ ನಡೆದಿದೆ.

    ನಿಶಾ ಜ್ಯೋತಿ ಮೃತ ದುರ್ದೈವಿ. ಈಕೆ ಬಾರ್ ಡ್ಯಾನ್ಸರ್ ಆಗಿದ್ದು, ಮಾಡೆಲ್ ಕೂಡ ಆಗಿದ್ದರು. ಆರೋಪಿಯಾದ 30 ವರ್ಷದ ಪ್ರೀತೇಶ್ ಪಟೇಲ್‍ನನ್ನು ಟಿಂಬಾ ಗ್ರಾಮದ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಆಗಾಗ ಈಕೆ ಕೆಲಸ ಮಾಡುವ ಮುಂಬೈ ಬಾರ್ ಗೆ ಭೇಟಿ ನೀಡುತ್ತಿದ್ದ. ಅಲ್ಲಿ ಇವರಿಬ್ಬರಿಗೂ ಪರಿಚಯವಾಗಿತ್ತು ಎಂದು ತಿಳಿದು ಬಂದಿದೆ.

    ಪ್ರಿತೇಶ್ ಈಗಾಗಲೇ ಮದುವೆಯಾಗಿದ್ದು, ಈತ ಕಳೆದ ವಾರ ಡಿಸೆಂಬರ್ 27 ರಂದು ಜ್ಯೋತಿಯೊಡನೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ. ಡಿಸೆಂಬರ್ 28 ರಂದು ಈ ಜೋಡಿ ಹೊಸವರ್ಷವನ್ನು ಆಚರಿಸಲು ಮುಂಬೈಗೆ ಹೋಗಿತ್ತು. ಅಲ್ಲಿ ಮೀರಾ ರಸ್ತೆಯಲ್ಲಿರುವ ಹೋಟೆಲ್‍ವೊಂದರಲ್ಲಿ ತಂಗಿ ಸೋಮವಾರ ಟಿಂಬಾಗೆ ಹಿಂದಿರುಗಿದ್ದರು.

    ಜ್ಯೋತಿಯ ಕಾರ್ ಡ್ರೈವರ್ ಸಂದೀಪ್ ಸಿಂಗ್ ಮತ್ತು ಆತನ ಪತ್ನಿ ಕೂಡ ಪ್ರೀತೇಶ್ ಜೊತೆ ಟಿಂಬಾದ ತೋಟಕ್ಕೆ ಬಂದಿದ್ದರು. ಮಂಗಳವಾರದಂದು ಪ್ರೀತೇಶ್ ಹಾಗೂ ಜ್ಯೋತಿ ಮಧ್ಯೆ ವಾಗ್ವಾದ ನಡೆದಿದೆ. ಜ್ಯೋತಿಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪ್ರೀತೇಶ್ ಆಕ್ರೋಶಗೊಂಡಿದ್ದ.

    ಜಗಳ ವಿಕೋಪಕ್ಕೆ ತಿರುಗಿ ಅಲ್ಲೇ ಪಕ್ಕದಲ್ಲಿದ್ದ ಕುಡುಗೋಲು ತೆಗೆದು ಪ್ರಿತೇಶ್ ಪಟೇಲ್ ಜ್ಯೋತಿಯ ತಲೆಯನ್ನು ಕತ್ತರಿಸಿದ್ದಾನೆ. ಈ ಎಲ್ಲಾ ದೃಶ್ಯವನ್ನು ನೋಡುತ್ತಿದ್ದ ಚಾಲಕ ಮತ್ತು ಪತ್ನಿ ಭಯಗೊಂಡು ತಮ್ಮ ಮೇಲೂ ದಾಳಿ ಮಾಡಬಹುದೆಂದು ಹೆದರಿ ಅಲ್ಲಿಂದ ಓಡಿಹೋಗಿದ್ದಾರೆ. ನಂತರ ಅವರು ನಡೆದ ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.

    2 ಕೋಟಿ ಖರ್ಚು: ಆರೋಪಿ ಪಟೇಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಜ್ಯೋತಿಗಾಗಿ ನಾನು ಸುಮಾರು 2 ಕೋಟಿ ರೂ. ಖರ್ಚು ಮಾಡಿದ್ದ ಎನ್ನುವ ವಿಚಾರ ತಿಳಿದು ಬಂದಿದೆ. ಅಲ್ಲದೆ ಇವರಿಬ್ಬರ ಸಂಬಂಧದಿಂದ ಪಟೇಲ್ ದಾಂಪತ್ಯ ಜೀವನದಲ್ಲೂ ಬಿರುಕು ಉಂಟಾಗಿತ್ತು ಎಂದು ವರದಿಯಾಗಿದೆ.