Tag: bar council

  • ವಕೀಲರು, ಪೊಲೀಸರ ಜಟಾಪಟಿ – ಬೆಂಗಳೂರಿನಲ್ಲಿ ಬಾರ್ ಕೌನ್ಸಿಲ್‌ ತುರ್ತು ಸಭೆ

    ವಕೀಲರು, ಪೊಲೀಸರ ಜಟಾಪಟಿ – ಬೆಂಗಳೂರಿನಲ್ಲಿ ಬಾರ್ ಕೌನ್ಸಿಲ್‌ ತುರ್ತು ಸಭೆ

    ಬೆಂಗಳೂರು: ಚಿಕ್ಕಮಗಳೂರಿನಲ್ಲಿ (Chikkamgaluru) ವಕೀಲರು ಹಾಗೂ ಪೊಲೀಸರ ಜಟಾಪಟಿ ತಾರಕಕ್ಕೇರಿದೆ. ಬೆಂಗಳೂರಲ್ಲಿ (Bengaluru) ತುರ್ತು ಸಭೆ ನಡೆಸಿದ ರಾಜ್ಯ ಬಾರ್ ಕೌನ್ಸಿಲ್ (Bar Council) ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.

    ಕೋರ್ಟ್‌ನಲ್ಲಿ ಕೇಸ್ ಇದ್ದರೂ ಆರೋಪಿ ಪೊಲೀಸರನ್ನು ರಿಲೀಸ್ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿದೆ. ಇದೇ ವೇಳೆ, ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಸುಧಾಕರ್ ಹಾಗೂ ಇತರರ ವಿರುದ್ಧದ ಕೇಸ್‌ಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ: ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

     

    ಹಲ್ಲೆಗೊಳಗಾದ ಮತ್ತು ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ವಕೀಲ ಪ್ರೀತಂ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

    ಚಿಕ್ಕಮಗಳೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಅಣ್ಣಯ್ಯ ಕರೆದಿದ್ದ ಸುದ್ದಿಗೋಷ್ಠಿಗೆ ಪೊಲೀಸರು ಅನುಮತಿ ನಿರಾಕರಿಸಿ ಬಲವಂತವಾಗಿ ಕರೆದೊಯ್ದರು. ಹಿರಿಯ ಅಧಿಕಾರಿಗಳ ನಡೆಗೆ ಅಣ್ಣಯ್ಯ ಆಕ್ರೋಶ ಹೊರಹಾಕಿದರು. ಈ ಬೆಳವಣಿಗೆ ಆತಂಕಕಾರಿ ಎಂದು ಮಾಜಿ ಸಿಎಂ ಬೊಮ್ಮಾಯಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

     

  • ಕೇರಳದ ಮೊದಲ ತೃತೀಯಲಿಂಗಿ ವಕೀಲರಾಗಿ ಪದ್ಮಲಕ್ಷ್ಮಿ ಆಯ್ಕೆ

    ಕೇರಳದ ಮೊದಲ ತೃತೀಯಲಿಂಗಿ ವಕೀಲರಾಗಿ ಪದ್ಮಲಕ್ಷ್ಮಿ ಆಯ್ಕೆ

    ಕೇರಳ: ಕೇರಳ (Kerala) ರಾಜ್ಯದ ಬಾರ್ ಕೌನ್ಸಿಲ್‌ನ ಮೊದಲ ತೃತೀಯಲಿಂಗಿ (Transgender) ವಕೀಲರಾಗಿ (Lawyer) ಪದ್ಮಲಕ್ಷ್ಮಿ (Padma Lakshmi) ಅವರು ಆಯ್ಕೆಯಾಗಿದ್ದಾರೆ.

    ಈ ವಿಚಾರವನ್ನು ರಾಜ್ಯದ ಕೈಗಾರಿಕಾ ಸಚಿವ ಪಿ.ರಾಜೀವ್  (P.Rajeev) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೀವನದ ಎಲ್ಲಾ ಅಡೆತಡೆಗಳನ್ನು ಎದುರಿಸಿ ಕೇರಳದ ಮೊದಲ ತೃತೀಯಲಿಂಗಿ ವಕೀಲರಾಗಿ ಆಯ್ಕೆಯಾದ ಪದ್ಮಲಕ್ಷ್ಮಿಯವರಿಗೆ ಅಭಿನಂದನೆಗಳು. ಮೊದಲಿಗರಾಗುವುದು ಇತಿಹಾಸದಲ್ಲಿ ಕಠಿಣವಾಗಿದೆ. ಗುರಿಯ ಹಾದಿಯಲ್ಲಿ ಅಡೆತಡೆಗಳಿರುತ್ತದೆ. ಅಲ್ಲಿ ನಿರುತ್ಸಾಹಗೊಳಿಸುವ ಜನರು ತುಂಬಾ ಇರುತ್ತಾರೆ. ಆದರೆ ಪದ್ಮಲಕ್ಷ್ಮಿಯವರು ಇವೆಲ್ಲವನ್ನೂ ಮೀರಿ ಕಾನೂನು ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಇವರ ಜೀವನವು ಉಳಿದ ಮಂಗಳಮುಖಿಯರು ವಕೀಲ ವೃತ್ತಿಗೆ ಬರಲು ಸ್ಫೂರ್ತಿಯಾಗಲಿ ಎಂದು ಪಿ.ರಾಜೀವ್ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿರುವ ಶೇ.90 ರಷ್ಟು ಮುಸ್ಲಿಮರು ಮತಾಂತರ ಆದವ್ರು – ಬಿಹಾರ ಸಚಿವ

     

    View this post on Instagram

     

    A post shared by P Rajeev (@prajeevofficial)


    ಬಾರ್ ಕೌನ್ಸಿಲ್ ಆಫ್ ಇಂಡಿಯಾ (Bar Council Of India), ಬಾರ್ ಎನ್‌ರೋಲ್‌ಮೆಂಟ್ (Bar Enrollment) ಪ್ರಮಾಣಪತ್ರವನ್ನು ಪಡೆದ 1,500ಕ್ಕೂ ಹೆಚ್ಚು ಕಾನೂನು ಪದವೀಧರರಲ್ಲಿ ಪದ್ಮಲಕ್ಷ್ಮಿಯವರು ಕೂಡಾ ಒಬ್ಬರು. ಇವರು ಎರ್ನಾಕುಲಂನ (Ernakulam) ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದಾರೆ. ಇದನ್ನೂ ಓದಿ: ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ನೀಡುವ ಪದ್ಧತಿಯನ್ನು ಅಂತ್ಯಗೊಳಿಸಲು ಚಿಂತಿಸುತ್ತಿದ್ದೇವೆ- ಸಿಜೆಐ

    ಭಾರತದ ಮೊದಲ ತೃತೀಯಲಿಂಗಿ ನ್ಯಾಯಾಧೀಶೆ (Judge) ಎಂಬ ಹೆಗ್ಗಳಿಕೆಗೆ ಜೋಯಿತಾ ಮೊಂಡಲ್ (Joyita Mondal) ಪಾತ್ರರಾಗಿದ್ದಾರೆ. ಇವರು 2017ರಲ್ಲಿ ಪಶ್ಚಿಮ ಬಂಗಾಳದ (West Bengal) ಇಸ್ಲಾಂಪುರದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶೆಯಾಗಿ ನೇಮಕಗೊಂಡರು.

    2018ರ ಆರಂಭದಲ್ಲಿ ಮಹಾರಾಷ್ಟ್ರದ (Maharashtra) ನಾಗಪುರದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ತೃತೀಯಲಿಂಗಿ ಕಾರ್ಯಕರ್ತೆ ವಿದ್ಯಾ ಕಾಂಬ್ಳೆ ಅವರನ್ನು ಸದಸ್ಯ ನ್ಯಾಯಾಧೀಶರಾಗಿ  ನೇಮಿಸಲಾಯಿತು. ಅದೇ ವರ್ಷ ಭಾರತದ ಮೂರನೇ ತೃತೀಯಲಿಂಗಿ ನ್ಯಾಯಾಧೀಶರಾಗಿ ಗುವಾಹಟಿಯ ಸ್ವಾತಿ ಬಿದಾನ್ ಅವರನ್ನು ನೇಮಕಗೊಳಿಸಲಾಯಿತು. ಇದನ್ನೂ ಓದಿ: ಖಲಿಸ್ತಾನಿ ನಾಯಕರು ಮಾನವ ಬಾಂಬರ್‌ಗಳನ್ನ ರೂಪಿಸುತ್ತಿದ್ದಾರೆ – ಗುಪ್ತಚರ ಇಲಾಖೆ ಮಾಹಿತಿ

  • ಸುಳ್ಳು ವಯಸ್ಸಿನ ದಾಖಲೆ ನೀಡಿ ಸ್ಪರ್ಧೆ – ಬೋಪಯ್ಯ ವಿರುದ್ಧ ದೂರು

    ಸುಳ್ಳು ವಯಸ್ಸಿನ ದಾಖಲೆ ನೀಡಿ ಸ್ಪರ್ಧೆ – ಬೋಪಯ್ಯ ವಿರುದ್ಧ ದೂರು

    ಮಡಿಕೇರಿ: ಚುನಾವಣೆಗೆ ಸ್ಪರ್ಧಿಸಲು ವಯಸ್ಸಿನ ಸುಳ್ಳು ದಾಖಲೆ ನೀಡಿದ್ದರು ಎಂದು ಆರೋಪಿಸಿ ಶಾಸಕ ಹಾಗೂ ಮಾಜಿ ಸ್ಪೀಕರ್ (Former Speaker) ಕೆ.ಜಿ ಬೋಪಯ್ಯ (K.G Bopaiah) ವಿರುದ್ಧ ವ್ಯಕ್ತಿಯೊಬ್ಬರು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಬೋಪಯ್ಯ ತಮ್ಮ ವಯಸ್ಸನ್ನು ತಿದ್ದಿ, ತಪ್ಪು ಮಾಹಿತಿ ನೀಡಿ ನಾಮಪತ್ರ ಸಲ್ಲಿಸಿದ್ದರು ಎಂದು ಪಿ.ಬಿ ತಿಮ್ಮಯ್ಯ ಎಂಬವರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಆತಂಕ ಸೃಷ್ಟಿಸಿರುವ H3N2ಗೆ ರಾಜ್ಯದಲ್ಲಿ ಮೊದಲಿ ಬಲಿ

    ದೂರಿನಲ್ಲಿ ವಿರಾಜಪೇಟೆ (Virajpet) ಕ್ಷೇತ್ರದ ವಿಧಾನಸಭಾ ಸದಸ್ಯರಾದ ಕೆ.ಜಿ ಬೋಪಯ್ಯ 1979ರ ಅಕ್ಟೋಬರ್‌ನಲ್ಲಿ ಬಾರ್ ಕೌನ್ಸಿಲ್ (Bar Council) ವಕೀಲರಾಗಿದ್ದರು. ಅವರು ಆಗ ತಮ್ಮ ಹುಟ್ಟಿದ ದಿನಾಂಕವನ್ನು 1951 ಅಕ್ಟೋಬರ್ 17 ಎಂದು ದಾಖಲಿಸಿದ್ದರು. ಆದರೆ ಬೋಪಯ್ಯನವರು 2004 ನೇ ಸಾಲಿನ ಚುನಾವಣೆ ಸಮಯದಲ್ಲಿ ಅವರ ವಯಸ್ಸು 53 ವರ್ಷ ಆಗಿತ್ತು. ಆದರೆ ಬೋಪಯ್ಯನವರು ತಮ್ಮ ವಯಸ್ಸನ್ನು 49 ವರ್ಷ ಎಂದು ಸುಳ್ಳು ಮಾಹಿತಿ ನೀಡಿದ್ದರು.

    2013ರ ಚುನಾವಣೆಯಲ್ಲಿ ಅವರ ವಯಸ್ಸು 61 ವರ್ಷ ಆಗಿತ್ತು. ಆದರೆ ಅವರು ಚುನಾವಣಾ ಆಯೋಗಕ್ಕೆ (Election Commission) 58 ವರ್ಷ ಎಂದು ಸುಳ್ಳು ಮಾಹಿತಿ ನೀಡಿದ್ದರು. ಮತ್ತು 2018ರ ಚುನಾವಣೆಯಲ್ಲಿ ಅವರ ವಯಸ್ಸು 67 ಆಗಿತ್ತು. ಆದರೆ ತಮ್ಮ ವಯಸ್ಸನ್ನು 65 ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ದೂರುದಾರ ತಿಮ್ಮಯ್ಯ ಆರೋಪಿಸಿದ್ದಾರೆ.

    ಇದು ಚುನಾವಣೆ ನೀತಿ ಸಂಹಿತೆ ಅನುಗುಣವಾಗಿ ಗಂಭೀರ ಅಪರಾಧವಾಗಿದೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ದಾಖಲಿಸಿದ್ದಾರೆ.

    ಬೋಪಯ್ಯ ಸ್ಪಷ್ಟನೆ: ಪ್ರತೀ ಚುನಾವಣೆ ಬಂದಾಗ ನನ್ನ ವಿರುದ್ಧ ಇಂತಹ ಆರೋಪ ಮಾಡುವ ಗ್ಯಾಂಗ್ ಮಡಿಕೇರಿಯಲ್ಲಿದೆ. ವಯಸ್ಸಿನ ಬಗ್ಗೆ ಸುಳ್ಳು ದಾಖಲೆ ನೀಡಿದ ಆರೋಪದ ದೂರು ದಾಖಲಾಗಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನನ್ನ ತಂದೆ ಹೆಬ್ಬೆಟ್ಟು. ನನ್ನ ತಂದೆ ಕೊಟ್ಟಿರುವ ದಿನಾಂಕವನ್ನೇ ನಾನು ಫಾಲೋ ಮಾಡುತ್ತಾ ಬಂದಿದ್ದೇನೆ ಎಂದು ಬೋಪಯ್ಯ ಪ್ರತಿಕ್ರಿಯಿಸಿದ್ದಾರೆ.

    ನನ್ನ ವಿರುದ್ಧದ ಹಿಂದೆ ಸೋ ಕಾಲ್ಡ್ ಪರಿಸರವಾದಿಗಳು ಇದ್ದಾರೆ. ಅವರ ಈ ಸಣ್ಣತನಕ್ಕೆ ನಾನು ಸಣ್ಣತನ ಮಾಡಲ್ಲ. ನನ್ನ ಎಲ್ಲಾ ದಾಖಲೆಗಳಲ್ಲೂ ಒಂದೇ ಡೇಟ್ ಇದೆ. ಈ ಬಾರಿ ಚುನಾವಣೆ ಎದುರಿಸಲು ತನಗೆ ಪಕ್ಷದ ತೀರ್ಮಾನವಾಗಿದೆ. ಆರೋಪಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಎರಡು ಕ್ಷೇತ್ರದ ಬಿಜೆಪಿ ಸ್ಥಾನಗಳನ್ನು ಕುಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಚರ್ಚ್ ಮೇಲೆ ಗುಂಡಿನ ದಾಳಿ 7 ಮಂದಿ ಸಾವು- ಹಲವರಿಗೆ ಗಾಯ

  • ನ್ಯಾಯಾಧೀಶರ ವಯೋಮಿತಿ ಹೆಚ್ಚಿಸಿ –  ಸಂವಿಧಾನಿಕ ತಿದ್ದುಪಡಿಗೆ ಬಾರ್ ಕೌನ್ಸಿಲ್ ಮನವಿ

    ನ್ಯಾಯಾಧೀಶರ ವಯೋಮಿತಿ ಹೆಚ್ಚಿಸಿ – ಸಂವಿಧಾನಿಕ ತಿದ್ದುಪಡಿಗೆ ಬಾರ್ ಕೌನ್ಸಿಲ್ ಮನವಿ

    ನವದೆಹಲಿ: ನ್ಯಾಯಾಧೀಶರ ನಿವೃತ್ತಿ ವಯಸ್ಸಿಗೆ ತಿದ್ದುಪಡಿ(Raise Retirement Age) ತರುವಂತೆ ಭಾರತೀಯ ಬಾರ್ ಕೌನ್ಸಿಲ್(Bar Council) ಕೇಂದ್ರ ಸರ್ಕಾರಕ್ಕೆ(Central Government) ಒತ್ತಾಯಿಸಿದೆ.

    bar council

    ಬುಧವಾರ ನಡೆದ ಎಲ್ಲ ರಾಜ್ಯಗಳ ಬಾರ್ ಕೌನ್ಸಿಲ್‍ಗಳ ಜೊತೆಗಿನ ಸಭೆ ಬಳಿಕ ಒಮ್ಮತದ ನಿರ್ಧಾರ ಕೈಗೊಂಡಿದ್ದು ಸಾಂವಿಧಾನಿಕ ತಿದ್ದುಪಡಿ ತರಲು ಅದು ಸರ್ಕಾರಕ್ಕೆ ಮನವಿ ಮಾಡಿದೆ. ಇದನ್ನೂ ಓದಿ: ಉದ್ಘಾಟನೆಗೆ ರಾಷ್ಟ್ರಪತಿ; ಜಂಬೂಸವಾರಿ ಮೆರವಣಿಗೆಗೆ ಮೋದಿ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು

    ನಿನ್ನೆ ನಡೆದ ಸಭೆಯಲ್ಲಿ ಹೈಕೋರ್ಟ್(High Court) ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62 ರಿಂದ 65 ವರ್ಷಕ್ಕೆ, ಸುಪ್ರೀಂ ಕೋರ್ಟ್‍ನ(Supreme Court )ನ್ಯಾಯಾಧೀಶರ ನಿವೃತ್ತಿಯ ವಯಸ್ಸು 67 ವರ್ಷಕ್ಕೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಈ ನಿರ್ಣಯದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಿಗೆ ಕಳುಹಿಸಿದ್ದು, ಕ್ರಮಕ್ಕಾಗಿ ಮನವಿ ಮಾಡಿದೆ ಎಂದು ಬಿಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಇದು ಸರ್ಕಾರಿ ಪ್ರಾಯೋಜಿತ ಕೊಲೆ – ವಿಮ್ಸ್‌ ದುರಂತಕ್ಕೆ ಸಿದ್ದು ಕಿಡಿ

    ಇದರ ಜೊತೆಗೆ ಅನುಭವಿ ವಕೀಲರನ್ನು ವಿವಿಧ ಆಯೋಗಗಳು ಮತ್ತು ಇತರ ವೇದಿಕೆಗಳ ಅಧ್ಯಕ್ಷರನ್ನಾಗಿ ನೇಮಿಸಲು ಹಾಗೂ ಶಾಸನಗಳನ್ನು ತಿದ್ದುಪಡಿ ಮಾಡಲು ಪರಿಗಣಿಸಲು ಸಂಸತ್ತಿಗೆ ಪ್ರಸ್ತಾಪಿಸಲು ಜಂಟಿ ಸಭೆ ನಿರ್ಧರಿಸಿದೆ ಎಂದು ಬಾರ್ ಕೌನ್ಸಿಲ್ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಬಾರ್ ಕೌನ್ಸಿಲ್‍ನಿಂದ ವಕೀಲ ಮಂಜುನಾಥ್ ಅಮಾನತು

    ಬಾರ್ ಕೌನ್ಸಿಲ್‍ನಿಂದ ವಕೀಲ ಮಂಜುನಾಥ್ ಅಮಾನತು

    ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಧಿಸಿದಂತೆ ಸಂತ್ರಸ್ತ ಯುವತಿ ಪರ ವಕೀಲರ ಆಪ್ತ ಲಾಯರ್ ನನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಲಾಗಿದೆ.

    ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ಆಪ್ತ ಮಂಜುನಾಥ್ ಅವರೇ ಅಮಾನತಾದ ವಕೀಲ. ಬಾರ್ ಕೌನ್ಸಿಲ್ ವಿರುದ್ಧ ಮಂಜುನಾಥ್ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಅವರನ್ನು ವಜಾ ಮಾಡಲಾಗಿದೆ.

    ಬಾರ್ ಕೌನ್ಸಿಲ್ ಫೆಲ್‍ಫೇರ್ ಸ್ಟ್ಯಾಂಪ್ ಬಗ್ಗೆ ಮಂಜುನಾಥ್ ಆರೋಪ ಮಾಡಿದ್ದರು. ಹೀಗಾಗಿ ಮಂಜುನಾಥ್ ವಿರುದ್ಧ ವಿಚಾರಣೆಗೆ ತೀರ್ಮಾನ ಮಾಡಲಾಗಿದ್ದು, ವಿಚಾರಣೆ ಮುಗಿಯುವವರೆಗೆ ವಕಾಲತ್ತು ವಹಿಸುವಂತಿಲ್ಲ. ಹೀಗಂತ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‍ನಿಂದ ಮಂಜುನಾಥ್ ಅವರಿಗೆ ನೋಟಿಸ್ ನೀಡಿದೆ.

    ಸಿಡಿ ಯುವತಿ ಪರ ವಕೀಲ ಜಗದೀಶ್ ಹಾಗೂ ಮಂಜುನಾಥ್ ಬಾರ್ ಕೌನ್ಸಿಲ್‍ಗೆ ಸವಾಲೆಸೆದಿದ್ದರು. ತಾಕತ್ತಿದ್ದರೆ ಕ್ರಮಕೈಗೊಳ್ಳಿ ಎಂದು ಚಾಲೆಂಜ್ ಹಾಕಿದ್ದರು. ಜಗದೀಶ್ ದೆಹಲಿ ಬಾರ್ ಕೌನ್ಸಿಲ್‍ನಲ್ಲಿ ನೋಂದಣಿ ಹಿನ್ನೆಲೆಯಲ್ಲಿ ಜಗದೀಶ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ.