ಬೆಂಗಳೂರು: ವಿಧಾನಸೌಧದಲ್ಲೇ ಎರಡು ಬಾರ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳ ನಡುವೆ ಗಲಾಟೆ ನಡೆಯಿತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮುಗಿಸಿ ಹೊರ ಬಂದ ಬಳಿಕ ಮೂರನೇ ಮಹಡಿ ಕಾರಿಡಾರ್‌ನಲ್ಲಿ ಬಾರ್ ಅಸೋಸಿಯೇಷನ್ ಪ್ರತಿನಿಧಿಗಳು ಗಲಾಟೆ ಮಾಡಿಕೊಂಡರು.
ಪರಸ್ಪರ ಕೂಗಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಪ್ರತಿನಿಧಿಗಳು ಹೋಗಿದ್ದರು. ಪೊಲೀಸರು ಮಧ್ಯಪ್ರವೇಶ ಮಾಡಿ ಇಬ್ಬರನ್ನ ಕರೆದುಕೊಂಡು ಹೋಗಿ ಸಮಾಧಾನಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಅಬಕಾರಿ ಮಾರಾಟ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಜೆಟ್ ಪೂರ್ವ ಸಭೆ ನಡೆಸಿದರು. ಬೇಡಿಕೆ ಮತ್ತು ಅಹವಾಲುಗಳನ್ನು ಆಲಿಸಿದರು. ಸಭೆಯಲ್ಲಿ ಎಲ್ಲ ಅಸೋಸಿಯೇಷನ್‌ಗಳಿಗೆ ಮಾತನಾಡಲು ಅವಕಾಶ ಕೊಡಲಿಲ್ಲ, ಮರ್ಯಾದೆ ಕೊಡಲಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಬ್ಲ್ಯಾಕ್‌ಮೇಲ್ ಮಾಡಿದವರಿಗೆ ಮಾತನಾಡಲು ಅವಕಾಶ ಕೊಟ್ಟರು ಅಂತ ಆಕ್ರೋಶ ಹೊರಹಾಕಿದಾಗ, ಎರಡು ಅಸೋಸಿಯೇಷನ್‌ಗಳ ನಡುವೆ ಗಲಾಟೆ ನಡೆಯಿತು.
ಢಾಕಾ: ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರ ಬಂಧನ ಖಂಡಿಸಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ಹಿಂದೂ ಸಮುದಾಯದ ನಾಯಕನ ಅನುಯಾಯಿಗಳ ನಡುವಿನ ಘರ್ಷಣೆಯಲ್ಲಿ ವಕೀಲರೊಬ್ಬರು ಹತ್ಯೆಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮೃತ ವಕೀಲನನ್ನು 35 ವರ್ಷದ ಸೈಫುಲ್ ಇಸ್ಲಾಂ ಅಲಿಫ್ (Saiful Islam Alif) ಎಂದು ಗುರುತಿಸಲಾಗಿದೆ. ಈತ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಚಟ್ಟೋಗ್ರಾಮ್ ಜಿಲ್ಲಾ ವಕೀಲರ ಸಂಘದ ಸದಸ್ಯ ಎಂದು ಢಾಕಾದ ಪತ್ರಿಕೆಯೊಂದು ವರದಿ ಮಾಡಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಉಪ ಆಯುಕ್ತ ಲಿಯಾಕತ್ ಅಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ
ದಾಸರ್‌ರನ್ನ ಎಳೆದೊಯ್ಯುವ ವೇಳೆ ಅವರು ಉದ್ರಿಕ್ತರು ಶಾಂತವಾಗಿರುವಂತೆ ಕೇಳಿಕೊಂಡರು. ಆದ್ರೆ ಪ್ರತಿಭಟನೆ ನಿಲ್ಲದ ಕಾರಣ, ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದರು. ಧ್ವನಿ ಗ್ರೆನೇಡ್, ಅಶ್ರುವಾಯು ಶೆಲ್‌ಗಳು ಮತ್ತು ಲಾಠಿ ಚಾರ್ಜ್ ಅಸ್ತ್ರಗಳನ್ನು ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದರು.
ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಯಾರು?
ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರು ಹಿಂದೂ ಸಂಘಟನೆಯಾದ ಇಸ್ಕಾನ್ ಸಂಸ್ಥಾಪಕರಲ್ಲಿ ಒಬ್ಬರು ಮತ್ತು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲರಾಗಿದ್ದಾರೆ. ಸನಾತನ ಜಾಗರಣ್ ಮಂಚ್, ಬಾಂಗ್ಲಾದೇಶ ಸನಾತನ ಜಾಗರಣ ಮಂಚ್ ವಕ್ತಾರರು ಮತ್ತು ಪುಂಡರೀಕ್ ಧಾಮದ ಪ್ರಾಂಶುಪಾಲರಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಅವರು ಧ್ವನಿ ಎತ್ತಿದ್ದರು.
ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದ ನಂತರ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ನಡೆಯುತ್ತಿದೆ. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ತಡೆಯಲು ವಿಫಲವಾಗಿದೆ ಎಂದು ಟೀಕಿಸಿದ್ದರು. ಕಳೆದ ತಿಂಗಳು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಯಾರಾದರೂ ನಮ್ಮನ್ನು ಈ ದೇಶದಿಂದ ಹೊರಹಾಕಿ ಶಾಂತಿಯಿಂದ ಬದುಕಬಹುದು ಎಂದು ಬಯಸಿದರೆ ಇಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ನಮ್ಮ ದೇಶ ಅಫ್ಘಾನಿಸ್ತಾನ ಅಥವಾ ಸಿರಿಯಾ ಆಗುತ್ತದೆ ಎಂದು ಹೇಳಿದ್ದರು.