Tag: Baqr Eid

  • ಹಬ್ಬಗಳ ಹೆಸ್ರು ಹೇಳುವಾಗ ಪ್ರಧಾನಿಗಳು ಬಕ್ರಿದ್ ಮರೆತ್ರು: ಓವೈಸಿ

    ಹಬ್ಬಗಳ ಹೆಸ್ರು ಹೇಳುವಾಗ ಪ್ರಧಾನಿಗಳು ಬಕ್ರಿದ್ ಮರೆತ್ರು: ಓವೈಸಿ

    ನವದೆಹಲಿ: ಇಂದು ದೇಶವನ್ನುದ್ದೇಶಿಸಿ ಪ್ರಧಾನಿಗಳು ಮಾತನಾಡಿ ಮಹತ್ವದ ಘೋಷಣೆಯೊಂದನ್ನು ಘೋಷಿಸಿದ್ದಾರೆ. ಇತ್ತ ವಿರೋಧ ಪಕ್ಷಗಳ ನಾಯಕರು ಭಾಷಣವನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ. ಎಐಎಂಐ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಮುಂಬರುವ ಎಲ್ಲ ಹಬ್ಬಗಳ ಹೆಸರು ಹೇಳಿದ ಪ್ರಧಾನಿಗಳು ಬಕ್ರಿದ್ ಬಗ್ಗೆ ಹೇಳಲಿಲ್ಲ ಎಂದಿದ್ದಾರೆ.

    ಓವೈಸಿ ಟ್ವೀಟ್: ಇವತ್ತು ಚೀನಾ ಬಗ್ಗೆ ಮಾತನಾಡುವ ಬದಲು ಚನಾ (ಕಾಳು) ಬಗ್ಗೆ ಹೇಳಿದ್ರಿ. ಯಾವುದೇ ತಯಾರಿಗಳಿಲ್ಲದ ನಿಮ್ಮ ಲಾಕ್‍ಡೌನ್ ಬಹುತೇಕ ದಿನದ ಊಟವನ್ನು ಕಿತ್ತುಕೊಂಡಿದೆ. ಭಾಷಣದಲ್ಲಿ ಒಂದು ವಿಷಯ ಗಮನಕ್ಕೆ ಬಂತು. ಮುಂಬರುವ ಹಬ್ಬಗಳ ಹೆಸರು ಹೇಳಿದ ಪ್ರಧಾನಿಗಳು ಬಕ್ರಿದ್ ಬಗ್ಗೆ ಹೇಳಲಿಲ್ಲ. ಪರವಾಗಿಲ್ಲ ಮುಂಚಿತವಾಗಿ ನಿಮಗೆ ಬಕ್ರಿದ್ ಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

    ಭಾಷಣದ ಆರಂಭದಲ್ಲಿ ಪ್ರಧಾನಿಗಳು ಮುಂದೆ ಸಾಲು ಸಾಲು ಹಬ್ಬಗಳು ಬರಲಿವೆ. ಹಬ್ಬಗಳ ಬಂದಂತೆ ಅವಶ್ಯಕತೆಗಳ ಜೊತೆಯಲ್ಲಿ ಖರ್ಚುಗಳು ಹೆಚ್ಚಾಗುತ್ತವೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನವೆಂಬರ್ ಅಂದರೆ ದೀಪಾವಳಿವರೆಗೆ ಬಿಪಿಎಲ್ ಕುಟುಂಬಗಳ ಪ್ರತಿಯೊಬ್ಬರಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಪ್ರತಿ ಕುಟುಂಬಕ್ಕೆ ಒಂದು ಕೇಜಿ ಬೇಳೆಯನ್ನು ಉಚಿತವಾಗಿ ನೀಡೋದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.