Tag: Bapuji High School

  • ಶಿಕ್ಷಕರ ಒತ್ತಾಯಕ್ಕೆ 100 ಬಸ್ಕಿ ಹೊಡೆದ 7 ಮಂದಿ ವಿದ್ಯಾರ್ಥಿನಿಯರು – ಆಸ್ಪತ್ರೆಗೆ ದಾಖಲು

    ಶಿಕ್ಷಕರ ಒತ್ತಾಯಕ್ಕೆ 100 ಬಸ್ಕಿ ಹೊಡೆದ 7 ಮಂದಿ ವಿದ್ಯಾರ್ಥಿನಿಯರು – ಆಸ್ಪತ್ರೆಗೆ ದಾಖಲು

    ಭುವನೇಶ್ವರ: ಸರ್ಕಾರಿ ಶಾಲೆಯ ಶಿಕ್ಷಕನೋರ್ವ ಬಸ್ಕಿ ಹೊಡಿಸಿದ್ದರಿಂದ ಏಳು ಮಂದಿ ವಿದ್ಯಾರ್ಥಿನಿಯರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ನಡೆದಿದೆ.

    ಬೋಲಂಗಿರ್ ಜಿಲ್ಲೆಯ ಪಟ್ನಾಗರ್ ಪ್ರದೇಶದ ಬಾಪೂಜಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕನನ್ನು ಬಿಕಾಶ್ ಧರುವಾ ಎಂದು ಗುರುತಿಸಲಾಗಿದೆ. ಪ್ರಾರ್ಥನಾ ಅವಧಿ ಮುಗಿದ ನಂತರ ಶಾಲೆಗೆ ತಡವಾಗಿ ಬಂದಿದ್ದರಿಂದ 100 ಸಲ ಬಸ್ಕಿ ಹೊಡೆಯುವಂತೆ ಬಿಕಾಶ್ ಧರುವಾ ಅವರು ವಿದ್ಯಾರ್ಥಿಗಳಿಗೆ ಒತ್ತಾಯಿಸಿದ್ದಾರೆ. ಬಲವಂತವಾಗಿ ಬಸ್ಕಿ ಹೊಡೆಯುವ ವೇಳೆ ಕೆಲವು ವಿದ್ಯಾರ್ಥಿಗಳು ಪ್ರಜ್ಞಾಹೀನರಾಗಿ ಕುಸಿದು ಬಿದ್ದಿದ್ದಾರೆ. ಹೀಗಾಗಿ ಕೂಡಲೇ ವಿದ್ಯಾರ್ಥಿಗಳನ್ನು ಶಾಲಾ ಅಧಿಕಾರಿಗಳು ಆಂಬ್ಯುಲೆನ್ಸ್‍ನಲ್ಲಿ ಪಟ್‍ನಗರ ಉಪ-ವಿಭಾಗೀಯ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು. ಇದನ್ನೂ ಓದಿ: ಹಿಂದೂಗಳನ್ನು ಒಂದು ಮಾಡಲು ಹೊರಟರೆ ದಕ್ಷಿಣ ಕರ್ನಾಟಕ ಬಿಜೆಪಿ ಪಾಲಿಗೆ ಬಂದ್

    ಆಸ್ಪತ್ರೆಗೆ ಕರೆದೊಯ್ದ ವೇಳೆ ಬಾಲಕಿಯರು ಅಸ್ವಸ್ತಗೊಂಡಿದ್ದರು. ಆದರೆ ಪ್ರಾಥಮಿಕ ಚಿಕಿತ್ಸೆ ನಂತರ ಆರೋಗ್ಯ ಸ್ಥಿರವಾಯಿತು ಎಂದು ಪಟ್ನಾಗಢ ಉಪವಿಭಾಗೀಯ ವೈದ್ಯಾಧಿಕಾರಿ ಪಿತಾಬಾಶ್ ಶಾ ತಿಳಿಸಿದ್ದಾರೆ. ಇದನ್ನೂ ಓದಿ: ತಾಕತ್ತಿದ್ರೆ ಎಲ್ಲರಿಗೂ ಹಿಜಬ್ ತೊಡಿಸಿ – RSS ಮುಖಂಡ ಡಾ.ಹಣಮಂತ ಮಳಲಿ ಸವಾಲು

    ಸೋಮವಾರ ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಲೆ ಮತ್ತು ಸಮೂಹ ಶಿಕ್ಷಣ ಸಚಿವ ಸಮೀರ್ ರಂಜನ್ ದಾಶ್ ಅವರು, ಬೋಲಾಂಗಿರ್‍ನ ಪಟ್ನಾಗರ್ ಪ್ರದೇಶದ ಬಾಪೂಜಿ ಹೈಸ್ಕೂಲ್‍ನಲ್ಲಿ ಕೆಲವು ವಿದ್ಯಾರ್ಥಿನಿಯರಿಗೆ ಶಿಕ್ಷೆ ವಿಧಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ನಾನು ಪಟ್‍ನಗರ್ ಸಮುದಾಯ ಶಿಕ್ಷಣ ಅಧಿಕಾರಿ ಶಂಕರ್ ಪ್ರಸಾದ್ ಮಜ್ಹಿ ಅವರಿಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.