Tag: BAPS

  • ಅರಬ್ಬರ ನೆಲದಲ್ಲಿ ಹಿಂದೂ ಮಂದಿರ – ವಿಶ್ವದ ಮೂರನೇ ಅತಿ ದೊಡ್ಡ ದೇವಸ್ಥಾನ ಇಂದು ಲೋಕಾರ್ಪಣೆ

    ಅರಬ್ಬರ ನೆಲದಲ್ಲಿ ಹಿಂದೂ ಮಂದಿರ – ವಿಶ್ವದ ಮೂರನೇ ಅತಿ ದೊಡ್ಡ ದೇವಸ್ಥಾನ ಇಂದು ಲೋಕಾರ್ಪಣೆ

    ಅಬುಧಾಬಿ: ಇಂದು (ಫೆ.14) ಅಬುಧಾಬಿಯಲ್ಲಿ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ ಅಥವಾ ಬಿಎಪಿಎಸ್ (BAPS) ಸೊಸೈಟಿ ನಿರ್ಮಿಸಿರುವ ವಿಸ್ತಾರವಾದ ಹಿಂದೂ ದೇವಾಲಯವನ್ನು (Hindu Temple) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ.

    27 ಎಕರೆ ಭೂಮಿಯಲ್ಲಿ ನಿರ್ಮಿಸಲಾದ ಈ ದೇವಾಲಯ ಅಬುಧಾಬಿಯ (Abu Dhabi) ಮೊದಲ ಹಿಂದೂ ಕಲ್ಲಿನ ದೇವಾಲಯವಾಗಿದ್ದು, ಭಾರತೀಯ ಸಂಸ್ಕೃತಿಯ ವಿಶಿಷ್ಟ ಮಿಶ್ರಣ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಗುರುತನ್ನು ಹೊಂದಿದೆ. ಇದನ್ನೂ ಓದಿ: ಫೆ.14 ಕ್ಕೆ ಬಿಎಪಿಎಸ್‌ ಹಿಂದೂ ದೇವಾಲಯ ಉದ್ಘಾಟನೆ; ಎಲ್ಲಿ? ದೇವಸ್ಥಾನದ ವೈಶಿಷ್ಟ್ಯವೇನು?

    ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನದ ಅರಬ್ ಪ್ರವಾಸದಲ್ಲಿ ಈ ದೇವಾಲಯದ ಉದ್ಘಾಟನೆಯನ್ನು ಮಾಡಲಿದ್ದಾರೆ. ಇದು ಯುಎಇಯಲ್ಲಿ ಉದ್ಘಾಟನೆಗೊಂಡ ಎರಡನೇ ಅತಿ ದೊಡ್ಡ ಹಿಂದೂ ದೇವಾಲಯವಾಗಿದೆ. ಮಾರ್ಚ್ 1 ರಂದು ಸಾರ್ವಜನಿಕರಿಗೆ ತೆರೆಯಲಾಗುವ ದೇವಾಲಯದ ಸಮರ್ಪಣೆ ಸಮಾರಂಭಕ್ಕೂ ಪ್ರಧಾನಿ ಮೋದಿ ನೇತೃತ್ವ ವಹಿಸಲಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 5 ವರ್ಷ: 2019ರ ಫೆ.14 ರಂದು ನಡೆದಿದ್ದು ಏನು?

    2024ರ ವರ್ಷ ಹಿಂದೂಗಳಿಗೆ ಹರ್ಷ ತಂದಿದೆ. ಹೊಸ ವರ್ಷದ ಮೊದಲ ತಿಂಗಳಲ್ಲೇ ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಸಂತಸ ಒಂದುಕಡೆಯಾದರೆ, 2ನೇ ತಿಂಗಳಲ್ಲಿ ಮುಸ್ಲಿಮರ ನೆಲದಲ್ಲಿ ಮೊಟ್ಟ ಮೊದಲ ಐತಿಹಾಸಿಕ ಹಿಂದೂ ದೇವಾಲಯ ಲೋಕಾರ್ಪಣೆ ಕಣ್ತುಂಬಿಕೊಳ್ಳುವ ಸೌಭಾಗ್ಯ ಹಿಂದೂಗಳಿಗೆ ಒಲಿದು ಬಂದಿದೆ. ಇದನ್ನೂ ಓದಿ: ಹೃದಯದ ಮೌನ.. ಹೃದಯಕೆ ಸೀದಾ.. ತಲುಪುವ ಹಾಗೆ ಮಾತಾಡು ನೀ…….

    ಮುಸ್ಲಿಮರ ನೆಲದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಮೊದಲ ಬಿಎಪಿಎಸ್ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ಈ ದೇವಾಲಯ ಪಾತ್ರವಾಗಲಿದೆ. ಈ ದೇವಾಲಯವು ಭಾರತದ ಹೊರಗಿನ ಅತ್ಯಂತ ದೊಡ್ಡ ಮತ್ತು ಅತ್ಯಂತ ಸುಂದರವಾದ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಪಶ್ಚಿಮ ಏಷ್ಯಾದ ಅತಿದೊಡ್ಡ ಹಿಂದೂ ದೇವಾಲಯವೂ ಹೌದು. ಇದನ್ನೂ ಓದಿ: ಉಡುಪಿಯಲ್ಲಿ ನಾಲ್ವರ ಹತ್ಯೆ ಕೇಸ್‌ – ಆಯ್ನಾಜ್ ಮೇಲಿನ ವಿಪರೀತ ವ್ಯಾಮೋಹವೇ ಕೊಲೆಗೆ ಕಾರಣ

    ಫೆಬ್ರವರಿ 2018 ರಲ್ಲಿ ಪ್ರಧಾನಿ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಡಿಸೆಂಬರ್ 2019ರಲ್ಲಿ ನಿರ್ಮಾಣ ಪ್ರಾರಂಭವಾಯಿತು. ದೇವಾಲಯವನ್ನು 5.4 ಹೆಕ್ಟೇರ್ ಭೂಮಿ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. 700 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗಿದೆ. ಇದನ್ನೂ ಓದಿ: ಭಾರತ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ- ಅಬುಧಾಬಿಯಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ

  • ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಮೊದಲ ಹಿಂದೂ ದೇವಾಲಯ – ಜೈಶಂಕರ್‌ ಭೇಟಿ

    ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಮೊದಲ ಹಿಂದೂ ದೇವಾಲಯ – ಜೈಶಂಕರ್‌ ಭೇಟಿ

    ಅಬುಧಾಬಿ: ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯ ಸ್ಥಳಕ್ಕೆ ಭೇಟಿ ನೀಡಿದರು. ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಹಿಂದೂ ದೇವಾಲಯ ಇದಾಗಿದೆ.

    ಗಲ್ಫ್‌ ರಾಷ್ಟ್ರಕ್ಕೆ ಮೂರು ದಿನಗಳ ಭೇಟಿಗೆ ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ)ಕ್ಕೆ ಆಗಿಸಿರುವ ಎಸ್.ಜೈಶಂಕರ್‌ ಅವರು ದೇವಾಲಯ ನಿರ್ಮಾಣದಲ್ಲಿ ಭಾರತೀಯರ ಶ್ರಮವನ್ನು ಶ್ಲಾಘಿಸಿದರು. ʼಶಾಂತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಸಂಕೇತ ಇದುʼ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ದಾವೂದ್ ಇಬ್ರಾಹಿಂನ ತಲೆಗೆ 25 ಲಕ್ಷ ನಗದನ್ನು ಘೋಷಿಸಿದ ಎನ್‍ಐಎ

    ಈ ಕುರಿತು ಟ್ವೀಟ್‌ ಮಾಡಿರುವ ಜೈಶಂಕರ್‌, ಗಣೇಶ ಚತುರ್ಥಿಯಂದು ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದೆ. ತ್ವರಿತ ಪ್ರಗತಿಯನ್ನು ನೋಡಲು ಸಂತೋಷವಾಗಿದೆ. ದೇವಾಲಯ ನಿರ್ಮಾಣ ಜವಾಬ್ದಾರಿ ಹೊತ್ತಿರುವ BAPS ತಂಡ, ಭಕ್ತರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಸಂತೋಷವಾಯಿತು ಎಂದು ಟ್ವೀಟ್ ಮಾಡಿದ್ದಾರೆ.

    ಸಚಿವ ಶೇಖ್ ನಹ್ಯಾನ್ ಬಿನ್ ಮಬಾರಕ್ ಅಲ್ ನಹ್ಯಾನ್ ಅವರನ್ನು ಜೈಶಂಕರ್ ಭೇಟಿ ಮಾಡಿದರು. ಅಲ್ಲಿರುವ ಭಾರತೀಯ ಸಮುದಾಯದ ಯೋಗ ಚಟುವಟಿಕೆಗಳು, ಕ್ರಿಕೆಟ್ ಮತ್ತು ಸಾಂಸ್ಕೃತಿಕ ಸಹಕಾರಕ್ಕಾಗಿ ಅಪಾರ ಬೆಂಬಲ ನೀಡುತ್ತಿರುವುದನ್ನು ಶ್ಲಾಘಿಸಿದರು. ಇದನ್ನೂ ಓದಿ: ಜನಮನ ಸೆಳೆಯುತ್ತಿದೆ 60 ಸಾವಿರ ಗೋಲಿಗಳಿಂದ ಮಾಡಿದ ಗಣೇಶ ಮೂರ್ತಿ!

    55,000 ಚದರ ಮೀಟರ್ ಜಾಗದಲ್ಲಿ ದೇವಾಲಯ ನಿರ್ಮಾಣವಾಗಲಿದೆ. ಈ ರಚನೆಯನ್ನು ಭಾರತೀಯ ದೇವಾಲಯದ ಕುಶಲಕರ್ಮಿಗಳ ಕೈಯಿಂದ ಕೆತ್ತನೆಯಾಗುತ್ತಿದೆ. ಇದು ಮಧ್ಯಪ್ರಾಚ್ಯದಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ಕಲ್ಲಿನ ದೇವಾಲಯವಾಗಲಿದೆ.

    Live Tv
    [brid partner=56869869 player=32851 video=960834 autoplay=true]