Tag: Bansuri Swaraj

  • ಪ್ರಿಯಾಂಕಾ Vs ಬಾನ್ಸುರಿ ಸ್ವರಾಜ್‌ – ʼNational Herald Ki Lootʼ ಕೈಚೀಲ ಹೊತ್ತು ಸಭೆಗೆ ಹಾಜರ್‌

    ಪ್ರಿಯಾಂಕಾ Vs ಬಾನ್ಸುರಿ ಸ್ವರಾಜ್‌ – ʼNational Herald Ki Lootʼ ಕೈಚೀಲ ಹೊತ್ತು ಸಭೆಗೆ ಹಾಜರ್‌

    – ಒಂದು ದೇಶ ಒಂದು ಚುನಾವಣೆ, JPC ಸಭೆ ಆರಂಭ
    – ಇಂದು ನಾಲ್ವರು ನ್ಯಾಯಾಂಗ ತಜ್ಞರೊಂದಿಗೆ ಸಂವಾದ

    ನವದೆಹಲಿ: ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ ಮಾಡಿದಂತೆ ಬಹು ನಿರೀಕ್ಷೆಯ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಅನುಮತಿ ನೀಡುವ ಒಂದು ದೇಶ, ಒಂದು ಚುನಾವಣೆಗೆ (One Nation One Election) ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯ (JPC) ಸಭೆ ಆರಂಭಗೊಂಡಿದೆ.

    ಈ ಸಭೆಗೆ ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್‌ ಪುತ್ರಿ, ದೆಹಲಿ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ (Bansuri Swaraj) ಅವರು ʼNational Herald Ki Lootʼ ಎಂದು ಬರೆದಿರುವ ಬ್ಯಾಗ್‌ ಹೊತ್ತುಕೊಂಡು ಸಂಸತ್ತಿನ ಅನೆಕ್ಸ್ ಕಟ್ಟಡಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

    ಡಿಸೆಂಬರ್‌ನಲ್ಲಿ ಪ್ರಿಯಾಂಕಾ ವಾದ್ರಾ (Priyanka Wadra) ಅವರು ʼಪ್ಯಾಲೆಸ್ತೀನ್‌ʼಎಂದು ಬರೆದಿರುವ ಬ್ಯಾಗ್‌ ಹಾಕಿಕೊಂಡು ಬಂದಿದ್ದು ಬಹಳ ಚರ್ಚೆಯಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದ್ದರೂ ಅವರ ನೋವಿಗೆ ಮಿಡಿಯದ ಪ್ರಿಯಾಂಕಾ ಮುಸ್ಲಿಮರ ವೋಟ್‌ ಬ್ಯಾಂಕ್‌ಗಾಗಿ ʼಪ್ಯಾಲೆಸ್ತೀನ್‌ʼ ಎಂದು ಬರೆದಿರುವ ಬ್ಯಾಗ್‌ ಧರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

    ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಇತ್ತಿಚೇಗೆ ಇಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಇದರಲ್ಲಿ ಎಐಸಿಸಿ ಮಾಜಿ ಅಧ್ಯಕ್ಷರುಗಳಾದ ಸೋನಿಯಗಾಂಧಿ ಮತ್ತು ರಾಹುಲ್‌ಗಾಂಧಿ ಸೇರಿ ಹಲವು ಕಾಂಗ್ರೇಸ್ ನಾಯಕರನ್ನು ಆರೋಪಿಗಳನ್ನಾಗಿಸಿದೆ. ಈ ಬೆಳವಣಿಗೆ ಬೆನ್ನಲೆ ಬನ್ಸೂರಿ ನ್ಯಾಷನಲ್ ಹೆರಾಲ್ಡ್ ಕಿ ಲೂಟ್ ಸಂದೇಶವಿರುವ ಬ್ಯಾಗ್ ಧರಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಬಾನ್ಸುರಿ ಸ್ವರಾಜ್‌, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮದಲ್ಲಿ ಮೊದಲ ಬಾರಿಗೆ ಭ್ರಷ್ಟಾಚಾರವು ಒಳನುಗ್ಗಿದೆ. ಇಡಿಯ ಚಾರ್ಜ್‌ಶೀಟ್ ಪ್ರಕಾರ, ಕಾಂಗ್ರೆಸ್ ಪಕ್ಷವು ಸಾರ್ವಜನಿಕ ಸೇವೆಗಾಗಿ ಮೀಸಲಾದ ಸಂಸ್ಥೆಗಳನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತು ಅದರ ಉನ್ನತ ನಾಯಕತ್ವವು ಇದಕ್ಕೆ ಜವಾಬ್ದಾರರಾಗಿರಬೇಕು ಎಂದು ಆರೋಪಿಸಿದರು

    ಸಂಜೆ 5 ಗಂಟೆಯವರೆಗೆ ಸಭೆ:
    ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ನಾಲ್ಕು ಹಂತಗಳಲ್ಲಿ ನ್ಯಾಯಾಂಗ ತಜ್ಞರೊಂದಿಗೆ ಇಂದು ಜೆಪಿಸಿ ಸಭೆ ನಡೆಯಲಿದೆ. ಮೊದಲ ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಹೇಮಂತ್ ಗುಪ್ತಾ, ಎರಡನೇ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್‌ಎನ್ ಝಾ ಅವರೊಂದಿಗೆ ಸಂವಾದ ನಡೆಯಲಿದೆ.
    ಮೂರನೇ ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು ಮತ್ತು ಭಾರತದ 21 ನೇ ಕಾನೂನು ಆಯೋಗದ ಅಧ್ಯಕ್ಷರಾದ ಡಾ. ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಭಾಗವಹಿಸಲಿದ್ದಾರೆ.

    ಅಂತಿಮ ಅಧಿವೇಶನದಲ್ಲಿ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರೊಂದಿಗೆ ನಡೆಯಲಿದೆ. ಹೊಸ ಕಾನೂನಿನ ಸಾಧಕ ಬಾಧಕಗಳ ಬಗ್ಗೆ ಕಾನೂನು ತಜ್ಞರಿಂದ ಅಭಿಪ್ರಾಯ ಸಂಗ್ರಹವಾಗಲಿದೆ.

    ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ (Law Minister Arjun Meghwal) ಡಿಸೆಂಬರ್‌ನಲ್ಲಿ ಸಂವಿಧಾನ (ನೂರ ಇಪ್ಪತ್ತೊಂದನೇಯ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ್ದರು. ಮಸೂದೆ ಮಂಡನೆಯ ಬೆನ್ನಲ್ಲೇ INDIA ಒಕ್ಕೂಟದ ಸದಸ್ಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಹೆಚ್ಚಿನ ಚರ್ಚೆ ನಡೆಸಲು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಿತ್ತು. ಇದನ್ನೂ ಓದಿ:1 ಲಕ್ಷ ರೂ. ದಾಟಿದ ಚಿನ್ನದ ಬೆಲೆ – ಸಾರ್ವಕಾಲಿಕ ದಾಖಲೆ

    ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ನೇತೃತ್ವದ ಉನ್ನತ ಮಟ್ಟದ ಸಮಿತಿ 2014ರ ಮಾರ್ಚ್‌ 14 ರಂದು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಸಲ್ಲಿಸಿತ್ತು.

    191 ದಿನಗಳ ಸಮಯವನ್ನು ತೆಗೆದುಕೊಂಡು ಅಧ್ಯಯನ ನಡೆಸಿದ್ದ ಸಮಿತಿ 18,000 ಕ್ಕೂ ಅಧಿಕ ಪುಟಗಳ ವರದಿಯನ್ನು ತಯಾರಿಸಿತ್ತು. ವಿವಿಧ ರಾಜಕೀಯ ಪಕ್ಷಗಳು ಮತ್ತು ಪ್ರಮುಖ ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆಯನ್ನು ಸಂಗ್ರಹಿಸಿತ್ತು. ಇದನ್ನೂ ಓದಿ: ಖರ್ಗೆ ಕಾರ್ಯಕ್ರಮಕ್ಕೆ ಬಾರದ ಜನ – ಪಕ್ಷದಿಂದಲೇ ಜಿಲ್ಲಾಧ್ಯಕ್ಷ ಅಮಾನತು

    ಭಾರತದಲ್ಲಿ ಸಂಸತ್ತಿನ ಸದಸ್ಯರನ್ನು ಆಯ್ಕೆ ಮಾಡಲು ಸಾರ್ವತ್ರಿಕ ಚುನಾವಣೆಗಳು ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳು ಹಾಲಿ ಸರ್ಕಾರದ ಅವಧಿಯು ಅಂತ್ಯಗೊಂಡಾಗ ಅಥವಾ ಕೆಲವು ಕಾರಣಗಳಿಂದ ವಿಸರ್ಜನೆಯಾದಾಗ ಪ್ರತ್ಯೇಕವಾಗಿ ನಡೆಯುತ್ತಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಹಿಂದಿನಿಂದಲೂ ಒಂದು ರಾಷ್ಟ್ರ, ಒಂದು ಚುನಾವಣೆಯ ಕಲ್ಪನೆಯನ್ನು ಪ್ರತಿಪಾದಿಸುತ್ತಿದ್ದಾರೆ. ಕೋವಿಂದ್ ನೇತೃತ್ವದ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಮಾಜಿ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಇದ್ದರು.

  • Lok Sabha: ಸುಷ್ಮಾ ಸ್ವರಾಜ್‌ ಪುತ್ರಿ ಬಾನ್ಸುರಿ ಸ್ವರಾಜ್‌ಗೆ ಬಿಜೆಪಿ ಟಿಕೆಟ್‌

    Lok Sabha: ಸುಷ್ಮಾ ಸ್ವರಾಜ್‌ ಪುತ್ರಿ ಬಾನ್ಸುರಿ ಸ್ವರಾಜ್‌ಗೆ ಬಿಜೆಪಿ ಟಿಕೆಟ್‌

    – ನವದೆಹಲಿ ಕ್ಷೇತ್ರದಿಂದ ಬಾನ್ಸುರಿ ಸ್ಪರ್ಧೆ

    ನವದೆಹಲಿ: ಕೇಂದ್ರ ಮಾಜಿ ಸಚಿವೆ ಸುಷ್ಮಾ ಸ್ವರಾಜ್ (Sushma Swaraj) ಅವರ ಪುತ್ರಿ ಬಾನ್ಸುರಿ ಸ್ವರಾಜ್ (Bansuri Swaraj) ಮುಂಬರುವ ಲೋಕಸಭಾ ಚುನಾವಣೆಯಲ್ಲಿ (General Elections 2024) ಸ್ಪರ್ಧೆಗೆ ಬಿಜೆಪಿ (BJP) ಟಿಕೆಟ್‌ ನೀಡಿದೆ.

    ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಬಾನ್ಸುರಿ ಸ್ವರಾಜ್ ಅವರು ನವದೆಹಲಿ (New Delhi) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷವು ಘೋಷಿಸಿತು. ಇದನ್ನೂ ಓದಿ: BJP First list: 3ನೇ ಬಾರಿಗೆ ವಾರಣಾಸಿಯಿಂದ ಮೋದಿ ಕಣಕ್ಕೆ

    ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಘೋಷಣೆಯಾಗಿದ್ದಕ್ಕೆ ಸಂಸತ ವ್ಯಕ್ತಪಡಿಸಿರುವ ಬಾನ್ಸುರಿ ಸ್ವರಾಜ್‌, ನನ್ನ ತಾಯಿ ಸ್ಥಾಪಿಸಿದ ಪರಂಪರೆಗೆ ತಕ್ಕಂತೆ ಬದುಕಲು ಪ್ರಯತ್ನಿಸುತ್ತೇನೆ. ಅವರು ಸ್ವರ್ಗದಿಂದ ನನಗೆ ಆಶೀರ್ವಾದ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ನನಗೆ ಅಮ್ಮನ ಆಶೀರ್ವಾದವಿದೆ. ಆದರೆ ಈ ಸಾಧನೆಯು ಬಾನ್ಸುರಿ ಸ್ವರಾಜ್ ಅವರದ್ದಲ್ಲ. ದೆಹಲಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರದ್ದು ಎಂದು ಬಾನ್ಸುರಿ ಮಾತನಾಡಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

    ಹೆಸರಾಂತ ವಕೀಲರಾದ ಬಾನ್ಸುರಿ ಸ್ವರಾಜ್ ಅವರು ರಾಜಕೀಯ ಕ್ಷೇತ್ರಕ್ಕೆ ಕಾನೂನು ಪ್ರಕ್ರಿಯೆಗಳಲ್ಲಿ ಅನುಭವದ ಸಂಪತ್ತನ್ನು ತರುತ್ತಾರೆ. ಕಳೆದ ವರ್ಷ ಬಿಜೆಪಿಯು ಅವರನ್ನು ಬಿಜೆಪಿ ದೆಹಲಿಯ ಕಾನೂನು ಘಟಕದ ಸಹ ಸಂಚಾಲಕರನ್ನಾಗಿ ನೇಮಿಸಿತ್ತು.

    ಬಾನ್ಸುರಿ ಸ್ವರಾಜ್ ಅವರು ವಕೀಲ ವೃತ್ತಿಯಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ. ಅವರು 2007 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ಗೆ ಸೇರಿಕೊಂಡರು. ವಾರ್ವಿಕ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಪೂರ್ವ ಅಧ್ಯಯನ ಪೂರ್ಣಗೊಳಿಸಿದ ನಂತರ, ಅವರು ಪ್ರತಿಷ್ಠಿತ BPP ಕಾನೂನಿ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸೇಂಟ್ ಕ್ಯಾಥರೀನ್ ಕಾಲೇಜಿನಲ್ಲಿ ತನ್ನ ಸ್ನಾತಕೋತ್ತರ ಅಧ್ಯಯನ ಪೂರ್ಣಗೊಳಿಸಿದ್ದರು. ಇದನ್ನೂ ಓದಿ: ಲೋಕಸಭೆಗೆ ಬಿಜೆಪಿ ಅಭ್ಯರ್ಥಿಗಳ ಫಸ್ಟ್‌ ಲಿಸ್ಟ್‌ ಔಟ್‌ – ಮಥುರಾದಿಂದ ಹೇಮಾ ಮಾಲಿನಿ ಕಣಕ್ಕೆ

  • ಸಕ್ರಿಯ ರಾಜಕಾರಣಕ್ಕೆ ಸುಷ್ಮಾ ಸ್ವರಾಜ್ ಪುತ್ರಿ

    ಸಕ್ರಿಯ ರಾಜಕಾರಣಕ್ಕೆ ಸುಷ್ಮಾ ಸ್ವರಾಜ್ ಪುತ್ರಿ

    ನವದೆಹಲಿ: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ (Sushma Swaraj) ಅವರ ಪುತ್ರಿ ಬಾನ್ಸುರಿ ಸ್ವರಾಜ್ ಸಕ್ರಿಯ ರಾಜಕಾರಣಕ್ಕೆ ಬಂದಿದ್ದು, ಬಿಜೆಪಿ (BJP) ಅವರನ್ನು ದೆಹಲಿಯ ಕಾನೂನು ಘಟಕದ ಸಹ ಸಂಚಾಲಕರನ್ನಾಗಿ ನೇಮಕ ಮಾಡಿದೆ.

    ಬನ್ಸುರಿ ಸ್ವರಾಜ್ (Bansuri Swaraj) ಅವರು ಕಾನೂನು ಪ್ರಕ್ರಿಯೆಗಳಲ್ಲಿ ಅನುಭವ ಹೊಂದಿರುವ ವಕೀಲರಾಗಿದ್ದಾರೆ. ಈಗಾಗಲೇ ಅವರು ಸುಪ್ರೀಂ ಕೋರ್ಟ್‍ನಲ್ಲಿ (Supreme Court) ಕೆಲಸ ಮಾಡುತ್ತಿದ್ದಾರೆ.

    ಬನ್ಸುರಿ ಸ್ವರಾಜ್‍ರ ವಿದ್ಯಾರ್ಹತೆಯೇನು?: ಇಂಗ್ಲೆಂಡ್‍ನ ವಾರ್ವಿಕ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಯನ್ನು ಪಡೆದಿದ್ದಾರೆ. ನಂತರ ಲಂಡನ್‍ನ ಬಿಪಿಪಿ ಕಾನೂನು ಶಾಲೆಯಿಂದ ಪದವಿಯನ್ನು ಪಡೆದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ಇದನ್ನೂ ಓದಿ: ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಪುತ್ರ ಶೀಘ್ರವೇ ಕಾಂಗ್ರೆಸ್‌ಗೆ ಸೇರ್ಪಡೆ

    ಅಷ್ಟೇ ಅಲ್ಲದೇ ಕಾನೂನು ವೃತ್ತಿಯಲ್ಲಿ ಅವರಿಗೆ 16 ವರ್ಷಗಳ ಅನುಭವವಿದ್ದು, ದೆಹಲಿಯ ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‍ನಲ್ಲಿ ಹಲವು ಹೈಪ್ರೋಫೈಲ್ ಕೇಸ್‍ಗಳಿಗೂ ವಾದಿಸಿದ್ದರು. ರಿಯಲ್ ಎಸ್ಟೇಟ್, ತೆರಿಗೆ, ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆಗಳು ಮತ್ತು ಹಲವಾರು ಕ್ರಿಮಿನಲ್ ಕೇಸ್‍ಗಳನ್ನೊಳಗೊಂಡ ವಿವಾದಗಳನ್ನು ನಿಭಾಯಿಸಿದ್ದಾರೆ.

    ಈ ಹಿಂದೆಯೂ ಕಾನೂನು ವಿಚಾರದಲ್ಲಿ ಬಿಜೆಪಿಗೆ ಕೆಲವು ಸಲಹೆಯನ್ನು ನೀಡುತ್ತಿದ್ದರು. ಇದೀಗ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ದೆಹಲಿ ಬಿಜೆಪಿಯ ಕಾನೂನು ವಿಭಾಗದ ಸಹ ಸಂಚಾಲಕನಾಗಿ ಪಕ್ಷಕ್ಕೆ ಹೆಚ್ಚು ಸಕ್ರಿಯವಾಗಿ ಸೇವೆ ಸಲ್ಲಿಸಲು ನನಗೆ ಔಪಚಾರಿಕವಾಗಿ ಅವಕಾಶ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಜಾತಿ ಬಲ ಇಲ್ಲದಿದ್ದರೂ, ಅಭಿವೃದ್ಧಿ ನಂಬಿ ಗೆದ್ದು ಸಚಿವರಾದ ಬಿ.ಸಿ. ನಾಗೇಶ್

  • ಮೈಸೂರಿನ ಅರಮನೆ, ಮೃಗಾಲಯಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವೆ ಪುತ್ರಿ

    ಮೈಸೂರಿನ ಅರಮನೆ, ಮೃಗಾಲಯಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವೆ ಪುತ್ರಿ

    ಮೈಸೂರು: ಕೇಂದ್ರ ವಿದೇಶಾಂಗ ಸಚಿವೆ ಬನ್ಸೂರಿ ಸ್ವರಾಜ್ ಮತ್ತು ಅವರ ಸ್ನೇಹಿತೆಯರು ಇಂದು ಅರಮನೆ ನಗರಿ ಮೈಸೂರಿಗೆ ಭೇಟಿ ನೀಡಿದ್ದರು.

    ಸಂಸದ ಪ್ರತಾಪ್ ಸಿಂಹ ಬನ್ಸೂರಿ ಅವರಿಗೆ ಮೈಸೂರು ದರ್ಶನ ಮಾಡಿಸುವದರ ಜೊತೆ ಒಡೆಯರ್ ಇತಿಹಾಸವನ್ನು ಪರಿಚಯಿಸಿದ್ದಾರೆ. ಅರಮನೆ, ಮೃಗಾಲಯ ಸೇರಿದಂತೆ ಪ್ರೇಕ್ಷಣಿಯ ಸ್ಥಳಗಳಿಗೆ ಸುಷ್ಮಾ ಪುತ್ರಿ ಭೇಟಿ ನೀಡಿ ನಗರದ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

    ಇದೇ ವೇಳೆ ಸಂಜೆ ಪ್ರತಾಪ್ ಸಿಂಹ ಕೆಲ ನಿಮಿಷ ಫೇಸ್‍ಬುಕ್ ಲೈವ್ ಬಂದು ತಾವು ಬನ್ಸೂರಿ ಸ್ವರಾಜ್ ಮತ್ತು ತಮ್ಮ ಮಗಳೊಂದಿಗೆ ಅರಮನೆಯ ವಿದ್ಯುದೀಪಾಲಂಕಾರ ವೀಕ್ಷಣೆ ಮಾಡುತ್ತಿದ್ದೇವೆ ಅಂತಾ ತಿಳಿಸಿದ್ದಾರೆ. ಮೈಸೂರು ಅರಮನೆ ನಾಡಿನ ಪರಂಪರೆ, ಸಂಸ್ಕೃತಿಯನ್ನು ಕಂಡು ಬನ್ಸೂರಿ ಸ್ವರಾಜ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    https://www.facebook.com/MPPratapSimha/videos/2076156969311317/