Tag: Banshankari Police Station

  • ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ದೂರು

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ದೂರು

    ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ವಿರುದ್ಧ ಬನಶಂಕರಿ ಪೊಲೀಸ್ (Banshankari) ಠಾಣೆಯಲ್ಲಿ ದೂರು ದಾಖಲಾಗಿದೆ.

    ಮನೋಜ್ ಎಂಬುವವರು ನಟ ಧ್ರುವ ಸರ್ಜಾ, ಅವರ ಮ್ಯಾನೇಜರ್, ಚಾಲಕ ಹಾಗು ಫಾನ್ಸ್‌ಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಇವರುಗಳಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ನಮ್ಮ ಮನೆ ಮುಂದೆ ಫ್ಯಾನ್ಸ್‌ಗಳು ಬೈಕ್ ಪಾರ್ಕ್ ಮಾಡುತ್ತಾರೆ. ಅಲ್ಲದೇ ಮನೆಯ ಮುಂದೆಯೇ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಯ ಮೇಲೆ ಉಗಿಯುತ್ತಾರೆ. ಇದ್ದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ:1.85 ಲಕ್ಷ ರೂ. ಫೋನ್‌ ಬುಕ್‌ ಮಾಡಿದ್ದ ಟೆಕ್ಕಿಗೆ ಶಾಕ್‌ – ಡೆಲಿವರಿ ಬಾಕ್ಸಲ್ಲಿ ಟೈಲ್ಸ್‌ ಪೀಸ್‌ ಇಟ್ಟು ವಂಚನೆ

    ನಟನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ದೂರಿನನ್ವಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.

  • ಯುವತಿಯರ ಅಸಭ್ಯ ಫೋಟೋ, ವಿಡಿಯೋ ಪೋಸ್ಟ್ ಮಾಡುವ ಖಾತೆಗಳು ಕಂಡ್ರೆ ಸೈಬರ್‌ ಸೆಲ್‌ಗೆ ದೂರು ನೀಡಿ – ಸಿಎಂ

    ಯುವತಿಯರ ಅಸಭ್ಯ ಫೋಟೋ, ವಿಡಿಯೋ ಪೋಸ್ಟ್ ಮಾಡುವ ಖಾತೆಗಳು ಕಂಡ್ರೆ ಸೈಬರ್‌ ಸೆಲ್‌ಗೆ ದೂರು ನೀಡಿ – ಸಿಎಂ

    ಬೆಂಗಳೂರು: ಅಸಭ್ಯವಾಗಿ ಕಾಣುವಂತೆ ಯುವತಿಯರ ಫೋಟೋ, ವಿಡಿಯೋಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿದ್ದ ಕೇಸ್‌ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಆಘಾತ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸಿಎಂ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂತಹ ಘಟನೆಗಳು ಮರುಕಳಿಸಿದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಮಹಿಳೆಯರ ಘನತೆಗೆ ಚ್ಯುತಿ ಬರುವ ವಿಡಿಯೋ ಹಾಗೂ ಖಾತೆಗಳನ್ನು ನೋಡಿದರೆ ತಕ್ಷಣವೇ ಸೈಬರ್ ಸೆಲ್‌ಗೆ ದೂರು ನೀಡಲು ಮನವಿ ಮಾಡಿದ್ದಾರೆ. .ಇದನ್ನೂ ಓದಿ: ಹಾಸನ ಸರಣಿ ಹೃದಯಾಘಾತದ ವರದಿ ಬಹಿರಂಗ – ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಯಾಬ್‌ ಚಾಲಕರು!

    ಏನಿದು ಪ್ರಕರಣ?
    ಅಸಭ್ಯವಾಗಿ ಕಾಣುವಂತೆ ಯುವತಿಯರ ಫೋಟೋ, ವಿಡಿಯೋಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿದ್ದ  ಕೆಆರ್‌ಪುರಂ ನಿವಾಸಿ  ಗುರುದೀಪ್ ಸಿಂಗ್ ಎಂಬಾತನನ್ನು ಬನಶಂಕರಿ ಪೊಲೀಸರು (Banshankari Police) ಅರೆಸ್ಟ್ ಮಾಡಿದ್ದರು.

    ನಗರದ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ ಹಾಗೂ ಎಂಜಿ ರಸ್ತೆಗಳಲ್ಲಿ ಯುವತಿಯರು ಓಡಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ. ಇತ್ತೀಚಿಗೆ ಯುವತಿಯೊಬ್ಬರು ವಿಡಿಯೋ ಟ್ಯಾಗ್ ಮಾಡಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಬಳಿಕ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು..ಇದನ್ನೂ ಓದಿ: ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ

  • ರಾಜಕಾರಣಿಗಳೊಂದಿಗೆ ಮಲಗಲು ಒಪ್ಪದಿದ್ದಕ್ಕೆ 6 ಬಾರಿ ತಲಾಖ್ – ಸೈಕೋ ಪತಿ ವರ್ತನೆಗೆ ಬೇಸತ್ತು ಪತ್ನಿ ದೂರು

    ರಾಜಕಾರಣಿಗಳೊಂದಿಗೆ ಮಲಗಲು ಒಪ್ಪದಿದ್ದಕ್ಕೆ 6 ಬಾರಿ ತಲಾಖ್ – ಸೈಕೋ ಪತಿ ವರ್ತನೆಗೆ ಬೇಸತ್ತು ಪತ್ನಿ ದೂರು

    – ಸೊಸೆಗೆ ಮಸಾಜ್ ಮಾಡುವಂತೆ ಕೇಳುತ್ತಿದ್ದ ಮಾವ

    ಬೆಂಗಳೂರು: ರಾಜಕಾರಣಿಗಳೊಂದಿಗೆ ಮಲಗುವಂತೆ ಪತಿಯ ಒತ್ತಾಯ ಹಾಗೂ ಅತ್ತೆ ಮಾವ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ಸಹಿಸಲಾಗದೇ ಓರ್ವ ಮಹಿಳೆ ಪತಿ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ (Banshankari Police Station) ದೂರು ದಾಖಲಿಸಿದ್ದಾರೆ.

    ತನ್ನ ಸೈಕೋ ಪತಿ ಯೂನಿಸ್ ಪಾಷಾ ವರ್ತನೆಯಿಂದ ಬೇಸತ್ತು ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ರಾಜಕಾರಣಿಗಳು, ಸಹಚರರ ಜೊತೆ ಮಲಗುವಂತೆ ಒತ್ತಾಯಿಸುತ್ತಾರೆ. ಒಪ್ಪದಿದ್ದಕ್ಕೆ ಈಗಾಗಲೇ 6 ಬಾರಿ ತಲಾಖ್ ನೀಡಿದ್ದಾನೆ. ಜೊತೆಗೆ ಗರ್ಭಪಾತ ಮಾಡಿಸಿದ್ದಾನೆ. ಅಷ್ಟೇ ಅಲ್ಲದೇ ತಲೆಗೆ ಗನ್ ಇಟ್ಟು ಬೆದರಿಕೆ ಹಾಕುತ್ತಾನೆ. ಪತ್ನಿ ಮನೆಯವರಿಗೆಲ್ಲ ಮಚ್ಚು, ಲಾಂಗ್ ತೋರಿಸಿ ಬೆದರಿಸುತ್ತಾನೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಗುಡ್‌ ನ್ಯೂಸ್‌; ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ಭಾರಿ ಇಳಿಕೆ

    ಪತಿ ಮಾತ್ರವಲ್ಲ, ಅತ್ತೆ, ಮಾವ ಕೂಡ ವರದಕ್ಷಿಣೆಗಾಗಿ ನಿರಂತರ ಟಾರ್ಚರ್ ನೀಡುತ್ತಾರೆ. ಮಾವ ಮಸಾಜ್ ಮಾಡುವಂತೆ ಕೇಳುತ್ತಾರೆ ಎಂದು ಪತಿ, ಅತ್ತೆ ಹಾಗೂ ಮಾವನ ಮೇಲೆ ಸಾಲು ಸಾಲು ಆರೋಪಗಳನ್ನು ಹೊರಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಕೇಳಿಕೊಂಡಿದ್ದಾರೆ.

    ಸದ್ಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಯೂನಿಸ್ ಮತ್ತು ಆತನ ತಂದೆ-ತಾಯಿ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.ಇದನ್ನೂ ಓದಿ: ಅಬ್ದುಲ್ ರಹಿಮಾನ್ ಹತ್ಯೆ ಕೇಸ್ – ಇನ್ನೋರ್ವ ಆರೋಪಿ ಅರೆಸ್ಟ್

  • `ಆಪರೇಷನ್ ಸಿಂಧೂರ’ ಬೂಟಾಟಿಕೆ ಅಂದಿದ್ದ ಕೊತ್ತೂರು ಮಂಜುನಾಥ್ ವಿರುದ್ಧ ಪ್ರಕರಣ ದಾಖಲು

    `ಆಪರೇಷನ್ ಸಿಂಧೂರ’ ಬೂಟಾಟಿಕೆ ಅಂದಿದ್ದ ಕೊತ್ತೂರು ಮಂಜುನಾಥ್ ವಿರುದ್ಧ ಪ್ರಕರಣ ದಾಖಲು

    ಬೆಂಗಳೂರು: ಆಪರೇಷನ್ ಸಿಂಧೂರದ (Operation Sindoor) ಬಗ್ಗೆ, ಸೇನೆಯ ಯುದ್ಧದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ (Kottur Manjunath) ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ (Banshankari Police Station) ಪ್ರಕರಣ ದಾಖಲಾಗಿದೆ.

    ಬೆಂಗಳೂರು ನಾಗರಿಕ ಹೋರಾಟ ಸಮಿತಿಯ ಉಪಾಧ್ಯಕ್ಷ ಗಣೇಶ್ ರಾವ್ ಅವರು ಕೊತ್ತೂರು ಮಂಜುನಾಥ್ ವಿರುದ್ಧ ದೂರು ದಾಖಲಿಸಿದ್ದು, ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಫ್ಯಾಂಟಸಿ ಕ್ರಿಕೆಟ್‌ನಲ್ಲಿ ಗೆದ್ದ ಅಭಿಮಾನಿಗೆ ಲ್ಯಾಂಬೊರ್ಗಿನಿ ಕಾರು ಗಿಫ್ಟ್‌ ಕೊಟ್ಟ ರೋಹಿತ್‌ ಶರ್ಮಾ

    ದೂರಿನಲ್ಲಿ ಏನಿದೆ?
    ಏ.22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Attack) 26 ನಾಗರಿಕರನ್ನು ಅವರ ಕುಟುಂಬದವರ ಸಮ್ಮುಖದಲ್ಲೇ ಪಾಕ್ ಭಯೋತ್ಪಾದಕರು ಹತ್ಯೆ ಮಾಡಿದರು. ಇದಕ್ಕೆ ಪ್ರತೀಕಾರವಾಗಿ ಭಾರತ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಮತ್ತು 8 ವಾಯುನೆಲೆಗಳನ್ನು ನಾಶ ಮಾಡಿದ್ದರು.

    ಪಾಕಿಸ್ತಾನಕ್ಕೆ ಸೇರಿದ 16 ಯುದ್ಧ ವಿಮಾನ, ಚೀನಾದ ಕ್ಷಿಪಣಿಗಳು, ಡ್ರೋನ್‌ಗಳನ್ನು ನಾಶ ಮಾಡಿದ ಭಾರತೀಯ ಸೇನೆಯ ಪರಾಕ್ರಮಕ್ಕೆ ಇಡೀ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಈ ಸಮಯದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರು ಮೇ 16 ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಭಾರತೀಯ ಸೇನೆ 4 ವಿಮಾನಗಳನ್ನು ಅತ್ತಿಂದ ಇತ್ತ, ಇತ್ತಿಂದ ಅತ್ತ ಹಾರಾಡಿಸಿ ಬಡಾಯಿಕೊಚ್ಚಿಕೊಳ್ಳುತ್ತಿದೆ. ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿರುವ ದಾಳಿಗೆ ಸಾಕ್ಷ್ಯಗಳೇನು ? ಎಂಬ ಹೇಳಿಕೆ ನೀಡುವ ಮೂಲಕ ಭಾರತ ದೇಶಕ್ಕೆ ಮತ್ತು ಭಾರತೀಯ ಸೇನೆಗೆ ಕಳಂಕ ಹಚ್ಚುವ ಮಾತುಗಳನ್ನಾಡಿದ್ದರು.

    ತಮ್ಮ ಮಾತುಗಳ ಮೂಲಕ 140 ಕೋಟಿ ಭಾರತೀಯರ ಭಾವನೆಗಳಿಗೆ ದಕ್ಕೆ ತಂದಿರುವ ಹಾಗೂ ಬಹಿರಂಗವಾಗಿ ಭಾರತ ದೇಶ ಮತ್ತು ಭಾರತೀಯ ಸೇನೆಗೆ ಅವಮಾನಕರ ಮಾತುಗಳನ್ನಾಡಿದ್ದಾರೆ. ಹೀಗಾಗಿ ಶಾಸಕ ಕೊತ್ತೂರು ಮಂಜುನಾಥ್ ಅವರ ವಿರುದ್ಧ ಕೂಡಲೇ ದೇಶದ್ರೋಹದ ಪ್ರಕರಣ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದಾಖಲೆಗಳ ಸಹಿತ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ:ಕಲಬುರಗಿಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ – ಮನೆ ಕುಸಿತ