Tag: Banquet

  • ಪ್ರಧಾನಿ ಮೋದಿ ಔತಣಕೂಟಕ್ಕೆ ಕಿಚ್ಚನಿಗೂ ಆಹ್ವಾನವಿತ್ತು: ಜೊತೆಗೆ ಜ್ವರವೂ ಇತ್ತು

    ಪ್ರಧಾನಿ ಮೋದಿ ಔತಣಕೂಟಕ್ಕೆ ಕಿಚ್ಚನಿಗೂ ಆಹ್ವಾನವಿತ್ತು: ಜೊತೆಗೆ ಜ್ವರವೂ ಇತ್ತು

    ಸ್ಯಾಂಡಲ್ ವುಡ್ ಹಲವು ಸಿಲೆಬ್ರಿಟಿ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಔತಣಕೂಟದಲ್ಲಿ ಭಾಗಿಯಾಗಿದ್ದರು. ನಟರಾದ ಯಶ್, ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್, ಕಾಮಿಡಿಯನ್ ಶ್ರದ್ಧಾ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು. ಇವರಷ್ಟೇ ಭಾಗಿಯಾಗಿದ್ದು ಚರ್ಚೆಗೂ ಕಾರಣವಾಗಿತ್ತು.

    ಕನ್ನಡ ಸಿನಿಮಾ ರಂಗದಲ್ಲಿ ಇನ್ನೂ ಸಾಧಕರು ಇರುವಾಗ ಅವರನ್ನು ಯಾಕೆ ಕಡೆಗಣಿಸಲಾಯಿತು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಅದರಲ್ಲೂ ಶಿವರಾಜ್ ಕುಮಾರ್, ಸುದೀಪ್ ಸೇರಿದಂತೆ ಹಲವರನ್ನು ಮೋದಿ ಯಾಕೆ ಕರೆಯಲಿಲ್ಲ ಎನ್ನುವ ಚರ್ಚೆ ಜೋರಾಗಿತ್ತು. ಇದೀಗ ಸುದೀಪ್ ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಕೆಲ ಮಾತುಗಳನ್ನು ಆಡಿದ್ದಾರೆ. ಮೋದಿ ಅವರಿಂದ ತಮಗೂ ಆಹ್ವಾನವಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆಯ ಬಳಿಕ ಸಿಹಿ ಸುದ್ದಿ ನೀಡಿದ ಸಿದ್-ಕಿಯಾರಾ ಜೋಡಿ

    ಪ್ರಧಾನಿ ನರೇಂದ್ರ ಮೋದಿ ಅವರು ತಮಗೂ ಆಹ್ವಾನ ನೀಡಿದ್ದರು. ಆದರೆ, ಜ್ವರದ ಕಾರಣದಿಂದಾಗಿ ನಾನು ಹೋಗಲಿಲ್ಲ. ಪ್ರಧಾನಿಯನ್ನು ಭೇಟಿ ಮಾಡಲು ಹಲವು ಪ್ರೊಟೊಕಾಲ್ ಇರುತ್ತವೆ. ಶೀತ ಮತ್ತು ಜ್ವರ ಇದ್ದ ಕಾರಣದಿಂದಾಗಿ ಅವರನ್ನು ಭೇಟಿ ಮಾಡಲಿಲ್ಲ. ಆರ್.ಟಿ.ಪಿ.ಸಿ.ಆರ್ ಮಾಡಿಸಬೇಕಿತ್ತು. ಜ್ವರ ಇದ್ದರಿಂದ ಭೇಟಿ ಸಾಧ್ಯವಾಗಲ್ಲ ಅನಿಸಿ ಹೋಗುವುದನ್ನು ಬಿಟ್ಟೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

    ಅಲ್ಲದೇ ಅವರು ಇದೀಗ ಕ್ರಿಕೆಟ್ ಪಂದ್ಯಾವಳಿಯಲ್ಲೂ ಬ್ಯುಸಿಯಾಗಿದ್ದಾರೆ. ದಿನವೂ ಪ್ರಾಕ್ಟಿಸ್ ಮ್ಯಾಚ್ ನಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಇದೇ ತಿಂಗಳಲ್ಲೇ ಪಂದ್ಯಾವಳಿ ಕೂಡ ಇರುವುದರಿಂದ ಸುದೀಪ್, ಅದರಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಔತಣಕೂಟ – ಬೋರಿಸ್ ಜಾನ್ಸನ್, ರಿಷಿ ಸುನಾಕ್ ಕ್ಷಮೆ

    ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಔತಣಕೂಟ – ಬೋರಿಸ್ ಜಾನ್ಸನ್, ರಿಷಿ ಸುನಾಕ್ ಕ್ಷಮೆ

    ಲಂಡನ್: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ, ಬ್ರಿಟನ್ನಿನ ಹಣಕಾಸು ಸಚಿವ ರಿಷಿ ಸುನಾಕ್ ಪಾರ್ಟಿಗೇಟ್ ಹಗರಣಕ್ಕೆ ಸಂಬಂಧ ಪಟ್ಟಂತೆ ಕ್ಷಮೆ ಯಾಚಿಸಿ, ದಂಡವನ್ನು ಭರಿಸಿದ್ದಾರೆ.

    2020ರ ಜೂನ್‌ನಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಬೋರಿಸ್ ಜಾನ್ಸನ್ ಅವರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ ರಿಷಿ ಸುನಾಕ್ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

    ಆರಂಭದಲ್ಲಿ ಯಾವುದೇ ಕಾನೂನುಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದ ಜಾನ್ಸನ್ ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ವೇಳೆ ಕ್ಷಮೆ ಯಾಚಿಸಿದ ಜಾನ್ಸನ್, ದಂಡವನ್ನು ಪಾವತಿಸಿರುವುದನ್ನು ದೃಢಪಡಿಸಿದ ಬಳಿಕ ರಿಷಿ ಸುನಾಕ್ ಕೂಡ ಕ್ಷಮೆ ಯಾಚಿಸಿದ್ದಾರೆ. ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥರಿಗೆ ಅವಮಾನ – ಇಮ್ರಾನ್ ಖಾನ್ ಸಾಮಾಜಿಕ ಮಾಧ್ಯಮ ತಂಡ ಅರೆಸ್ಟ್

    2020-21ರ ಅವಧಿಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ವೈಟ್‌ಹೌಸ್‌ನಲ್ಲಿರುವ ಡೌನಿಂಗ್ ಹಾಗೂ ಇತರ ಬ್ರಿಟನ್ನಿನ ಸರ್ಕಾರಿ ಕಚೇರಿಗಳಲ್ಲಿ ಸುಮಾರು 12 ಔತಣಕೂಟಗಳು ನಡೆದಿದೆ ಎಂದು ವರದಿಯಾಗಿತ್ತು. ಇದನ್ನು ಪಾರ್ಟಿಗೇಟ್ ಹಗರಣ ಎಂದು ಕರೆಯಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು.