Tag: bannerugatta

  • ಬೆಳ್ಳಂಬೆಳಗ್ಗೆ ಲಾಂಗ್ ಮಚ್ಚುಗಳಿಂದ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ!

    ಬೆಳ್ಳಂಬೆಳಗ್ಗೆ ಲಾಂಗ್ ಮಚ್ಚುಗಳಿಂದ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ!

    ಬೆಂಗಳೂರು: ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ಯುವ ಮುಖಂಡರುಗಳ ಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಯುವ ಕಾರ್ಯಕರ್ತನನ್ನು ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಲೆ ಮಾಡಲಾಗಿದೆ.

    ಸತೀಶ್ ರೆಡ್ಡಿ(28) ಕೊಲೆಯಾದ ವ್ಯಕ್ತಿ. ಸತೀಶ್ ರೆಡ್ಡಿ ಬನ್ನೇರುಘಟ್ಟ ಸಮೀಪದ ಕಲ್ಕೆರೆ ನಿವಾಸಿಗಾಗಿದ್ದು, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.

    ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ತನ್ನ ಪತ್ನಿಯನ್ನು ಇಂದು ಬೆಳಗ್ಗೆ ಬಿಟ್ಟು ಸತೀಶ್ ಅವರು ವಾಪಾಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಬೈಕ್ ಗಳಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಹುಲುವಳ್ಳಿಯ ಬಳಿಯ ರಸ್ತೆಯಲ್ಲಿ ಸತೀಶ್ ಅವರನ್ನು ಅಡ್ಡಗಟ್ಟಿ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

    ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಹಲ್ಲೆಗೊಳಗಾದ ಸತೀಶ್ ಅವರು ಕೆಲ ದೂರ ಓಡಿ ಖಾಲಿ ಜಾಗದಲ್ಲಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸತೀಶ್ ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದ್ರೆ ಸತೀಶ್ ಗಂಭೀರ ಗಾಯಗೊಂಡಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ತಕ್ಷಣವೇ ಸ್ಥಳೀಯರು ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

    ಇನ್ನು ಕೊಲೆಯಾದ ಸತೀಶ್ ರೆಡ್ಡಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿ ವಾಪಸ್ಸಾಗಿದ್ದು, ಈತನನ್ನು ಬನ್ನೇರುಘಟ್ಟ ಪೊಲೀಸ್ ಠಾಣೆಯ ರೌಡಿ ಶೀಟರ್ ಪಟ್ಟಿಗೆ ಸೇರಿಸುವ ತಯಾರಿ ನಡೆಯುತ್ತಿತ್ತು ಎನ್ನಲಾಗಿದೆ. ಅಷ್ಟರಲ್ಲಿ ಸತೀಶ್ ರೆಡ್ಡಿ ಕೊಲೆಯಾಗಿ ಹೋಗಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಪರಿಚಯಸ್ಥರೇ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

  • ತಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಹೊಸ ಕಳೆ- ಬನ್ನೇರುಘಟ್ಟದಿಂದ ಬಂದ್ವು 2 ಸಿಂಹಗಳು

    ತಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಹೊಸ ಕಳೆ- ಬನ್ನೇರುಘಟ್ಟದಿಂದ ಬಂದ್ವು 2 ಸಿಂಹಗಳು

    ಶಿವಮೊಗ್ಗ: ಸಿಂಹಗಳು ಇಲ್ಲದೆ ಸೊರಗಿದ್ದ ಶಿವಮೊಗ್ಗದ ತಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಈಗ ಹೊಸ ಕಳೆ ಬಂದಿದೆ.

    ಈ ಕಳೆ ನೀಡಿರುವುದು ಬನ್ನೆರುಘಟ್ಟ ಸಫಾರಿಯಿಂದ ಬಂದಿರುವ ನಾಲ್ಕು ವರ್ಷದ ಸರ್ವೇಶ, ನಾಲ್ಕೂವರೆ ವರ್ಷದ ಸುಶ್ಮಿತ ಎಂಬ ಎರಡು ಸಿಂಹಗಳು. ಒಂದು ಕಾಲದಲ್ಲಿ ಎಂಟು ಸಿಂಹಗಳಿದ್ದ ಇಲ್ಲಿ ಈಗ ಕೇವಲ ಮುದಿಯಾಗಿರುವ ಆರ್ಯ ಹಾಗೂ ಮಾನ್ಯ ಎಂಬ ಎರಡೇ ಸಿಂಹಗಳಿವೆ.

    ಈ ಸಿಂಹಗಳ ಕೊರತೆ ನೀಗಲು ಮೃಗಾಲಯ ಪ್ರಾಧಿಕಾರ ಇಲ್ಲಿಗೆ ಬನ್ನೇರುಘಟ್ಟದಿಂದ ಸಿಂಹಗಳನ್ನು ಕಳುಹಿಸಿದೆ. ಈ ಸಿಂಹಗಳು ಇಲ್ಲಿ ವಂಶೋದ್ಧಾರ ಮಾಡಿ, ಸಿಂಹಗಳ ಸಂಖ್ಯೆ ಹೆಚ್ಚಿಸಲಿವೆ ಎಂಬ ವಿಶ್ವಾಸ ಅರಣ್ಯ ಇಲಾಖೆ ಅಧಿಕಾರಿಗಳಿದ್ದಾಗಿದೆ. ಇಲ್ಲಿರುವ ಸಿಂಹಗಳ ಜೊತೆ ಹೊಂದಿಕೊಳ್ಳಲಿ ಎಂಬ ಕಾರಣಕ್ಕೆ ಹೊಸ ಸಿಂಹಗಳನ್ನು ಇನ್ನೂ ಕೇಜ್ ನಲ್ಲೇ ಇಡಲಾಗಿದೆ. ಇನ್ನೊಂದು ವಾರದಲ್ಲಿ ಮುಕ್ತವಾಗಿ ಬಿಡುವ ಸಾಧ್ಯತೆ ಇದ್ದು ಸಾರ್ವಜನಿಕರು ವೀಕ್ಷಣೆ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಬನ್ನೇರುಘಟ್ಟ ಝೂನಲ್ಲಿ ಮತ್ತೊಂದು ಅವಘಡ – ಬಿಳಿಹುಲಿ ಮರಿ ದಾಳಿಗೆ ಅನಿಮಲ್ ವಾಚರ್ ಬಲಿ

    ಬನ್ನೇರುಘಟ್ಟ ಝೂನಲ್ಲಿ ಮತ್ತೊಂದು ಅವಘಡ – ಬಿಳಿಹುಲಿ ಮರಿ ದಾಳಿಗೆ ಅನಿಮಲ್ ವಾಚರ್ ಬಲಿ

    ಬೆಂಗಳೂರು: ನಗರಕ್ಕೆ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಕಾಡು ಪ್ರಾಣಿಗಳ ಪ್ರವಾಸಿ ತಾಣವಾಗಿದ್ದು, ರಾಷ್ಟ್ರದಲ್ಲಿಯೆ ಪ್ರಖ್ಯಾತಿ ಗಳಿಸಿದೆ. ಆದರೆ ಕಳೆದ ಎರಡು ವರ್ಷಗಳಿಂದ ಇಲ್ಲಿನ ಅಧಿಕಾರಿಗಳ ಬೇಜವಬ್ದಾರಿ ತನದಿಂದಾಗಿ ಕಾಡುಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದು, ಇದೀಗ ಸಿಬ್ಬಂದಿಗಳು ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗುವಂತಾಗಿದೆ.

    ಬೆಂಗಳೂರಿನ ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. 7 ದಿನಗಳ ಹಿಂದಷ್ಟೇ ಅಸಿಸ್ಟೆಂಟ್ ಅನಿಮಲ್ ವಾಚರ್ ಆಗಿ ಕೆಲಸಕ್ಕೆ ಸೇರಿಕೊಂಡ 35 ವರ್ಷದ ಆಂಜನೇಯ ಹುಲಿಗಳ ದಾಳಿಗೆ ಬಲಿಯಾಗಿದ್ದಾರೆ.

    ನಿನ್ನೆ ಸಂಜೆ 5:30ರ ಸುಮಾರಿನಲ್ಲಿ ಎಂದಿನಂತೆ ಹುಲಿಗಳಿಗೆ ಆಹಾರ ನೀಡಿದ ನಂತರ ಹುಲಿಗಳನ್ನ ಕೇಜ್‍ನಲ್ಲಿ ಬಿಡಲು ಆಂಜನೇಯ ಹೋಗಿದ್ರು. ಈ ವೇಳೆ, 1 ವರ್ಷ ವಯಸ್ಸಿನ 2 ಹುಲಿ ಮರಿಗಳು ಆಂಜನೇಯ ಮೇಲೆ ದಾಳಿ ಮಾಡಿವೆ. ಇದರಿಂದ ಗಾಬರಿಗೊಂಡ ಆಂಜನೇಯ ಕೆಳಬಿದ್ದಿದ್ದಾರೆ. ಹುಲಿ ಮರಿಗಳ ದಾಳಿ ಬೆನ್ನಲ್ಲೇ ದೊಡ್ಡ ಹುಲಿಗಳು ದಾಳಿ ಮಾಡಿವೆ.

    ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಆಂಜನೇಯ ಮೃತಪಟ್ಟಿದ್ದಾರೆ. ಇನ್ನು ಪಾರ್ಕ್ ನಲ್ಲಿ ಪ್ರಾಣಿಗಳಿಗೆ ಆಹಾರ ನೀಡುವ ಸಂದರ್ಭದಲ್ಲಿ ನುರಿತ ಅನಿಮಲ್ ಕೀಪರ್ ಇರಬೇಕಿತ್ತು. ಆದರೆ ಆತ ಇರದೇ ಇದ್ದದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಘಟನೆ ನಡೆದ ನಂತರ ಯಾವುದೇ ಮಾಧ್ಯಮದವರು ಒಳ ಹೋಗದಂತೆ ಬನ್ನೇರುಘಟ್ಟ ಪಾರ್ಕ್ ಡಿಎಫ್‍ಓ ಕುಶಾಲಪ್ಪ ಉದ್ಯಾನವನದ ಮುಖ್ಯ ಗೇಟ್‍ಗೆ ಬೀಗ ಹಾಕಿದ್ದಾರೆ. ಇದುವರೆಗೂ ಹುಲಿದಾಳಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಯನ್ನು ಪಾರ್ಕ್ ಅಧಿಕಾರಿಗಳು ನೀಡಿಲ್ಲ. ಇನ್ನು ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಕೊಟ್ಟ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ವಿಕ್ಟೊರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

    ಒಂದೂವರೆ ವರ್ಷದ ಹಿಂದೆ ಬೆಂಗಾಲ್ ಟೈಗರ್‍ಗಳು ಕೃಷ್ಣಾ ಎಂಬ ಪ್ರಾಣಿಪಾಲಕನ ಮೇಲೆ ಎರಗಿದ್ದವು. ಅದೃಷ್ಟವಶಾತ್ ಕೃಷ್ಣಾ ತೀವ್ರ ಗಾಯಗೊಂಡರೂ ಬದುಕುಳಿದು ಚೇತರಿಸಿಕೊಂಡಿದ್ದರು. ಇನ್ನು, 2 ತಿಂಗಳ ಹಿಂದೆ ಇದೆ ಬಿಳಿಹುಲಿಯೊಂದು ಬೆಂಗಾಲ್ ಟೈಗರ್ ಕೇಜ್ ಗೆ ಹೋಗಿ ದಾಳಿಗೀಡಾಗಿ ಸಾವನ್ನಪ್ಪಿತ್ತು.

    https://www.youtube.com/watch?v=8sATYADYfzc

    https://www.youtube.com/watch?v=gkyumRjXHk0

  • ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!

    ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!

    ಬೆಂಗಳೂರು: ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ವ್ಯಕ್ತಿಯೋರ್ವ ಆನೆ ದಾಳಿಗೆ ಬಲಿಯಾಗಿರುವ ದಾರುಣ ಘಟನೆ ಬನ್ನೇರುಘಟ್ಟ ಸಫಾರಿಯ ಸೀಗೆಕಟ್ಟೆಯಲ್ಲಿ ನಡೆದಿದೆ.

    ಮಂಗಳವಾರ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಗೆ ರಜೆ ಇದ್ದು, ಸೂಕ್ತ ಭದ್ರತೆ ಇಲ್ಲದ ಕಾರಣ ಬೆಂಗಳೂರಿನ ಗಿರಿನಗರ ನಿವಾಸಿ ಅಭಿಲಾಷ್ ನಿನ್ನೆ ಸಂಜೆ ಸ್ನೇಹಿತರ ಜೊತೆ ಬನ್ನೇರುಘಟ್ಟಕ್ಕೆ ಹಕ್ಕಿಪಿಕ್ಕಿ ಕಾಲೋನಿ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಸಫಾರಿಯೊಳಕ್ಕೆ ಪ್ರವೇಶಿಸಿದ್ದಾರೆ.

    ಅಭಿಲಾಷ್ ಗೆ ಆನೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅಭ್ಯಾಸವಿದೆ. ಈ ಹಿಂದೆ ಮದಗಜಗಳಾದ ರೌಡಿ ರಂಗ ಮತ್ತು ಐರಾವತನನ್ನು ಪಳಗಿಸಲು ಕ್ರಾಲ್ ನಲ್ಲಿ ಇಟ್ಟಿದ್ದಾಗಲೂ ಬಂದು ಸೆಲ್ಫಿ ತೆಗೆದುಕೊಂಡು ಹೋಗಿದ್ದರಂತೆ. ಆದರೆ ಈ ಬಾರಿ ರಜೆಯ ದಿನ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಬಂದು ಸಫಾರಿಯಲ್ಲಿದ್ದ ಸುಂದರ ಎಂಬ ಆನೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿ ಮಾಡಿದೆ. ಈ ವೇಳೆ ತಪ್ಪಿಸಿಕೊಳ್ಳಲಾಗದೇ ಅಭಿಲಾಷ್ ಸ್ಥಳದಲ್ಲೆ ಬಲಿಯಾಗಿದ್ದಾರೆ ಎನ್ನಲಾಗಿದೆ.

    ಹಕ್ಕಿಪಿಕ್ಕಿ ಕಾಲೋನಿಯಿಂದ ಆನೆಗಳಿದ್ದ ಸ್ಥಳಕ್ಕೆ 4 ಕಿಲೋ ಮೀಟರ್ ನಡೆದೇ ಬರಬೇಕು. ಇಷ್ಟು ದೂರದವರೆಗೆ ಭದ್ರತಾ ಸಿಬ್ಬಂದಿ ಇರಲಿಲ್ಲವೇ? ಇಲ್ಲವೇ ಭದ್ರತಾ ಸಿಬ್ಬಂದಿಯೇ ಒಳಗೆ ಬಿಟ್ಟರೇ? ಎಂಬ ಅನುಮಾನಗಳು ಮೂಡುತ್ತಿವೆ. ಅಭಿಲಾಷ್ ಜೊತೆ ಇನ್ನೂ ಮೂವರು ಸ್ನೇಹಿತರಿದ್ದರೆಂದು ಕೆಲವರು ಹೇಳುತ್ತಾರೆ. ಅವರೆಲ್ಲಾ ಎಲ್ಲಿಗೆ ಹೋದರು? ಯಾಕೆ ಈ ವಿಷಯ ಪೊಲೀಸರ ಗಮನಕ್ಕಾಗಲೀ ಅಥವಾ ಅಭಿಲಾಷ್ ಮನೆಯವರಿಗು ವಿಷಯ ತಿಳಿಸದೇ ಪರಾರಿಯಾಗಿದ್ದಾರೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

    ಘಟನೆಯ ವಿಷಯ ತಿಳಿದ ಪಾರ್ಕ್ ನ ಅಧಿಕಾರಿಗಳು ಸೀಗೆಕಟ್ಟೆ ಪೊಲೀಸರಿಗೆ ವಿಷಯ ತಿಳಿಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದರು. ನಂತರ ವಿಷಯ ತಿಳಿದು ಬಂದ ಅಭಿಲಾಷ್ ನ ಸಂಬಂಧಿಕರು ಇಂದು ಬೆಳಗ್ಗೆ ಹಕ್ಕಿಪಿಕ್ಕಿ ಕಾಲೋನಿ ಬಳಿಯಿದ್ದ ಅಭಿಲಾಷ್ ನ ದ್ವಿಚಕ್ರ ವಾಹನ ಗುರುತಿಸಿದ್ದಾರೆ. ಬಳಿಕ ಪಾರ್ಕ್ ನ ಅಧಿಕಾರಿಗಳ ಭದ್ರತಾ ಲೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಲವು ಅನುಮಾನಗಳ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ 3 ಹೊಸ ಅತಿಥಿಗಳ ಆಗಮನ

    ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ 3 ಹೊಸ ಅತಿಥಿಗಳ ಆಗಮನ

    ಆನೇಕಲ್: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹುಲಿ ಸಫಾರಿಯಲ್ಲಿ ಹೆಣ್ಣು ಹುಲಿಯೊಂದು 3 ಮರಿಗಳಿಗೆ ಜನ್ಮ ನೀಡುವ ಮೂಲಕ ಪ್ರಾಣಿ ಪ್ರಿಯರಲ್ಲಿ ಸಂತಸವನ್ನುಂಟುಮಾಡಿದೆ.

    ಹುಲಿ ಸಫಾರಿಯ ಹೆಣ್ಣು ಹುಲಿ ವಿಸ್ಮಯ ಹಾಗೂ ಗಂಡು ಹುಲಿ ಅಮರ್ ಈ 3 ಮರಿಗಳ ತಂದೆ ತಾಯಿ. ಸದ್ಯ ತಾಯಿ ಹಾಗೂ ಮರಿಗಳು ಆರೋಗ್ಯವಾಗಿದ್ದು ಹುಲಿ ಸಫಾರಿಯಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಪ್ರಿಯರ ಸ್ವರ್ಗ ಎಂದೆ ಕರೆಸಿಕೊಳ್ಳುವ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹುಲಿ ಸಫಾರಿಯಲ್ಲಿ ಈಗ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ.

    15 ದಿನಗಳ ಹಿಂದೆಯಷ್ಟೇ ಈ ಮುದ್ದಾದ ಮರಿಗಳು ಜನ್ಮ ತಾಳಿವೆ. 2 ಹೆಣ್ಣು ಹಾಗೂ 1 ಗಂಡು ಮರಿಗಳಾಗಿದ್ದು, ತಾಯಿ ವಿಸ್ಮಯ ಜೊತೆ ಮೂರು ಮರಿಗಳ ತುಂಟಾಟ ನೋಡಲು ನಿಜಕ್ಕೂ ಕಣ್ಣಿಗೆ ಹಬ್ಬವನ್ನ ಉಂಟು ಮಾಡಿದೆ.

    ಈವರೆಗೂ ಹುಲಿ ಸಫಾರಿಯಲ್ಲಿ 23 ಹುಲಿಗಳಿದ್ದು ಇದೀಗ 3 ಹುಲಿ ಮರಿಗಳ ಜನನದಿಂದ ಹುಲಿಗಳ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ. ಇದು ಪಾರ್ಕ್‍ನ ಸಿಬ್ಬಂದಿಗಳಿಗೂ ಸಂತಸವನ್ನುಂಟುಮಾಡಿದೆ. ಇನ್ನು ಈ 3 ಹುಲಿ ಮರಿಗಳು ತಾಯಿಯ ಆರೈಕೆಯಲ್ಲಿ ಬೆಳೆಯುತ್ತಿವೆ. ಹುಲಿಮರಿಗಳಗಳ ತಾಯಿ ವಿಸ್ಮಯಗೆ ಪ್ರಾಣಿ ಪಾಲಕರು ವಿಶೇಷ ಆರೈಕೆ ನೀಡುತ್ತಿದ್ದು, ಪ್ರತ್ಯೇಕ ಪಂಜರದಲ್ಲಿ ಇರಿಸಲಾಗಿದೆ. ವೈದ್ಯರು ಸಹ ತಾಯಿ ಹಾಗೂ ಮರಿಗಳ ಬಗ್ಗೆ ಮುತುವರ್ಜಿ ವಹಿಸಿದ್ದಾರೆ.

    ಒಟ್ಟಿನಲ್ಲಿ ಮೂರು ಹುಲಿ ಮರಿಗಳ ಜನನದಿಂದ ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ ಹಬ್ಬದ ವಾತಾವರಣ ನಿಮಾಣವಾಗಿದೆ. ಈ ಹುಲಿ ಮರಿಗಳ ತುಂಟಾಟವನ್ನು ನೀವು ನೋಡಬೇಕಾದ್ರೆ ಇನ್ನೂ 6 ತಿಂಗಳ ಕಾಲ ಕಾಯಲೇಬೇಕು.

  • ಸಫಾರಿ ಹುಲಿ ಜೊತೆ ಕಾಡು ಹುಲಿ ಜಗಳ!

    ಸಫಾರಿ ಹುಲಿ ಜೊತೆ ಕಾಡು ಹುಲಿ ಜಗಳ!

    ಆನೇಕಲ್: ಸಫಾರಿಯಲ್ಲಿದ್ದ ಹುಲಿಯ ಜೊತೆ ಕಾಡು ಹುಲಿಯೊಂದು ಜಗಳ ತೆಗೆಯುತ್ತಿರುವ ವೀಡಿಯೋ ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ ಈ ಘಟನೆ ನಡೆದಿದ್ದು ಪ್ರವಾಸಿಗರನ್ನು ಭಯಭೀತಗೊಳಿಸುವಂತೆ ಮಾಡಿದೆ.

    ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಕೆಲ ತಿಂಗಳಿಂದ ಆಗಾಗ ಕಾಣಿಸಿಕೊಂಡು ನಾಪತ್ತೆಯಾಗುತ್ತಿತ್ತು. ಅದೇ ಹುಲಿ ಇಂದು ಅರಣ್ಯ ಪ್ರದೇಶದಲ್ಲಿರುವ ಹುಲಿ ಸಫಾರಿಯ ಬಳಿ ಕಾಣಿಸಿಕೊಂಡಿದೆ. ಸಫಾರಿಯ ಒಳಗಡೆ ಇದ್ದ ಹುಲಿಯೊಂದಿಗೆ ಜಗಳ ತೆಗೆದಿದೆ. ಸಫಾರಿ ಹುಲಿ ಹಾಗೂ ಕಾಡು ಹುಲಿ ಮದ್ಯೆ ಕಬ್ಬಿಣದ ಬೇಲಿ ಇದ್ದ ಕಾರಣ ಹೆಚ್ಚಿನ ಅನಾಹುತವೇನೂ ಸಂಭವಿಸಿಲ್ಲ. ಸುಮಾರು ಹತ್ತು ನಿಮಿಷಗಳ ಕಾಲ ಎರಡು ಹುಲಿಗಳ ನಡುವೆ ಕಿತ್ತಾಟ ಮುಂದುವರೆದಿದೆ.

    ಸಾಮಾನ್ಯವಾಗಿ ಸಫಾರಿಯಲ್ಲಿರುವ ಹುಲಿಗಳಿಗಿಂತ ಕಾಡಿನಲ್ಲಿ ಬೆಳೆಯುವ ಹುಲಿಗಳಿಗೆ ದೈರ್ಯ ಹಾಗೂ ಶಕ್ತಿ ಹೆಚ್ಚಾಗಿರುತ್ತದೆ. ಆದರೆ ಸಫಾರಿಯಲ್ಲಿದ್ದ ಹುಲಿ ಕೂಡ ತಾನೇನು ಕಡಿಮೆ ಇಲ್ಲ ಎಂಬಂತೆ ಕಾಡು ಹುಲಿಯನ್ನ ಹೆದರಿಸಿ ಓಡುವಂತೆ ಮಾಡಿದೆ. ಇಷ್ಟು ದಿನ ಕಾಡಂಚಿನ ಹಳ್ಳಿಗಳ ಬಳಿ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದ್ದ ಹುಲಿ ಇಂದು ಏಕಾಏಕಿ ಸಫಾರಿ ಬಳಿ ಕಾಣಿಸಿಕೊಂಡು ಪ್ರವಾಸಿಗರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ಹುಲಿ ಸಫಾರಿಯನ್ನು ನೋಡಲು ಹೋಗಿದ್ದ ಪ್ರವಾಸಿಗರಿಗಂತೂ ಇಂದು ಧಬಲ್ ಧಮಾಕಾ ಕಾದಿತ್ತು. ಸಫಾರಿ ಹುಲಿಯನ್ನು ನೋಡುವುದರ ಜೊತೆಗೆ ಕಾಡು ಹುಲಿಯನ್ನು ನೋಡುವ ಅವಕಾಶ ದೊರೆತಿದೆ.

    ತಿಂಗಳ ಹಿಂದಷ್ಟೇ ಬನ್ನೇರುಘಟ್ಟ ಸಫಾರಿ ವೇಳೆ ಸಿಂಹವೊಂದು ಕಾರಿನ ಮೇಲೆ ಏರಿ ಆತಂಕದ ವಾತಾವರಣ ಸೃಷ್ಟಿ ಮಾಡಿತ್ತು. ಅಂದು ಕೂಡಾ ಇದೇ ರೀತಿಯ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    https://www.youtube.com/watch?v=U92q03WEXIw&feature=youtu.be

    https://www.youtube.com/watch?v=gkyumRjXHk0