Tag: Bannerghatta

  • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನ

    ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನ

    ಆನೇಕಲ್: ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನ ವನ್ಯ ಜೀವಿಗಳ ತಾಣವಾಗಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ವನ್ಯ ಜೀವಿಗಳನ್ನು ಕಂಡು ಸಂತಸಗೊಳ್ಳುತ್ತಾರೆ. ಇದೀಗ ಪಾರ್ಕ್‌ಗೆ ಮತ್ತೋರ್ವ ಹೊಸ ಅತಿಥಿ ಆಗಮನವಾಗಿದ್ದು, ಪ್ರಾಣಿ ಪ್ರಿಯರನ್ನು ಮತ್ತಷ್ಟು ಆಕರ್ಷಣೆಗೊಳಿಸುತ್ತಿದೆ.

    ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ, ತನ್ನ ಮುದ್ದಾದ ಕಣ್ಣಿನ ನೋಟದಿಂದ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿರುವ ಮರಿ ಜೀಬ್ರಾ (Zebra) ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹೊಸ ಅತಿಥಿ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ (Park) ಕಬಿನಿ ಎಂಬ ಜೀಬ್ರಾ ಮುದ್ದಾರಿ ಮರಿಗೆ ಜನ್ಮ ನೀಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಕಬಿನಿ ಹಾಗೂ ಹರಿಶ್ಚಂದ್ರ ದಂಪತಿಗೆ ಮರಿ ಜನಿಸಿದೆ. ಸುಮಾರು ಮೂರರಿಂದ ನಾಲ್ಕು ವರ್ಷ ವಯಸ್ಸಿನ ತಾಯಿ ಕಬಿನಿ ಮೊದಲ ಬಾರಿಗೆ ಗರ್ಭಧರಿಸಿ ಮುದ್ದಾದ ಮರಿ ಜೀಬ್ರಾಗೆ ಜನ್ಮ ನೀಡಿದ್ದು, ಮರಿ ಜೀಬ್ರಾ ಸೇರ್ಪಡೆಯೊಂದಿಗೆ, ಮೃಗಾಲಯದಲ್ಲಿ ಒಟ್ಟು ಜೀಬ್ರಾಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ತಾಯಿ ಮತ್ತು ಮರಿ ಜೀಬ್ರಾ ಎರಡೂ ಆರೋಗ್ಯಕರವಾಗಿದ್ದು, ಪಾರ್ಕ್‌ನ ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲಕರು ಹೆಚ್ಚಿನ ಆರೈಕೆಯಿಂದ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಪಾರ್ಕ್‌ನಲ್ಲಿ ತಾಯಿ ಜೀಬ್ರಾದೊಂದಿಗೆ ಮರಿ ಜೀಬ್ರಾವನ್ನು ಪ್ರವಾಸಿಗರು ಕಾಣಬಹುದಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ತಿಳಿಸಿದಿದ್ದಾರೆ. ಇದನ್ನೂ ಓದಿ:  ಸೆಪ್ಟೆಂಬರ್ 2ಕ್ಕೆ ‘ಆದಿತ್ಯ-ಎಲ್1’ ಉಡಾವಣೆ – ಏನಿದರ ವಿಶೇಷ?

    ಕಬಿನಿ ಜೀಬ್ರಾಗೆ ಇದು ಮೊದಲನೇ ಮರಿಯಾಗಿದ್ದು, ತಾಯಿ-ಮಗು ಆರೋಗ್ಯಕರವಾಗಿದೆ. ತಾಯಿ ಹಾಗೂ ಮರಿ ಜೀಬ್ರಾವನ್ನು ವಿಶೇಷ ಕಾಳಜಿ ಇಟ್ಟು ನೋಡಿಕೊಳ್ಳಲಾಗುತ್ತಿದೆ. ಮರಿ ಜೀಬ್ರಾಗೆ ತಾಯಿ ಕಬಿನಿ ಹೆಚ್ಚಿನ ಹಾಲು ನೀಡಬೇಕಾಗಿರುವ ಹಿನ್ನೆಲೆ ಪೋಷಕಾಂಶಗಳ ಹಣ್ಣುಹಂಪಲನ್ನು ತಾಯಿ ಜೀಬ್ರಾಗೆ ನೀಡಲಾಗುತ್ತಿದೆ. ಆದಷ್ಟು ಬೇಗ ಮರಿ ಜೀಬ್ರಾವನ್ನು ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಟ್ಟರೆ ಪಾರ್ಕ್‌ಗೆ ಬರುವ ಮಕ್ಕಳಿಗೆ ಮುದ್ದಾದ ಮರಿ ಜೀಬ್ರಾವನ್ನು ನೋಡಲು ಖುಷಿಯಾಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಪಾರ್ಕ್ ನಲ್ಲಿ ಮರಿ ಜೀಬ್ರಾ ಒಂದು ರೀತಿಯ ಸಂತಸದ ಜೊತೆಗೆ ಪ್ರಾಣಿ-ಪಕ್ಷಿ ಪ್ರಿಯರ ಆಕರ್ಷಣೀಯವಾಗಲಿದೆ ಎಂದು ಪ್ರವಾಸಿಗರು ಸಂತಸ ಹಂಚಿಕೊಂಡರು. ಇದನ್ನೂ ಓದಿ: ದೇಶದಲ್ಲೇ ಮೊದಲ ಲಿಥಿಯಂ ಬ್ಯಾಟರಿ ಘಟಕ ಸ್ಥಾಪನೆಗೆ ಡಿಕೆಶಿ ಶಂಕುಸ್ಥಾಪನೆ

    ಒಟ್ಟಾರೆ ವನ್ಯ ಜೀವಿಗಳ ಪ್ರವಾಸಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನ ದಿನೇ ದಿನೇ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದೀಗ ಇದರ ಸೊಬಗನ್ನು ಮರಿ ಜೀಬ್ರಾ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಇದನ್ನೂ ಓದಿ: ಎರಡೂವರೆ ಗಂಟೆಯಲ್ಲಿ 9 ಎಕರೆ ಜಮೀನು ಹದ: ಜೋಡೆತ್ತುಗಳಿಗೆ ಮೆಚ್ಚುಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ – ಆತ್ಮಹತ್ಯೆ ಪ್ರಕರಣ ದಾಖಲು

    ಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ – ಆತ್ಮಹತ್ಯೆ ಪ್ರಕರಣ ದಾಖಲು

    ಆನೇಕಲ್: ಅಪರಿಚಿತ ಮಹಿಳೆಯ ಶವವೊಂದು ಕೆರೆಯಲ್ಲಿ ಪತ್ತೆಯಾದ ಘಟನೆ ಬೆಂಗಳೂರು (Bengaluru) ಹೊರವಲಯದ ಬನ್ನೇರುಘಟ್ಟ (Bannerghatta) ಸಮೀಪದ ಸಿಕೆಪಾಳ್ಯದಲ್ಲಿ ನಡೆದಿದೆ.

    ಸುಮಾರು 32 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಸಿಕೆಪಾಳ್ಯ ಕೆರೆಯಲ್ಲಿ ಪತ್ತೆಯಾಗಿದ್ದು, ಶವ ತೇಲುತ್ತಿರುವುದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾರ್ಗಿಲ್ ಯುದ್ಧದ ಹೀರೋ ರಸ್ತೆ ಅಪಘಾತದಲ್ಲಿ ದುರ್ಮರಣ 

    ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ (Suicide) ಮಾಡಿಕೊಂಡಿರಬಹುದು ಎಂಬುವುದಾಗಿ ಶಂಕಿಸಿ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆಕೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ರವಾನಿಸಲಾಗಿದೆ. ಇದನ್ನೂ ಓದಿ: 2 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ರೈತ ಆತ್ಮಹತ್ಯೆಗೆ ಶರಣು

  • ಗುರುವಾರ ಪ್ರವಾಸಿಗರಿಗೆ ಬನ್ನೇರುಘಟ್ಟ ಉದ್ಯಾನವನ ವೀಕ್ಷಣೆ ಇಲ್ಲ

    ಗುರುವಾರ ಪ್ರವಾಸಿಗರಿಗೆ ಬನ್ನೇರುಘಟ್ಟ ಉದ್ಯಾನವನ ವೀಕ್ಷಣೆ ಇಲ್ಲ

    ಬೆಂಗಳೂರು: ಗುರುವಾರ ಒಂದು ದಿನ ಪ್ರವಾಸಿಗರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta National Park) ವೀಕ್ಷಣೆಯನ್ನು ಬಂದ್‌ ಮಾಡಲಾಗಿದೆ.

    ಭಾರತ ಜಿ-20 (G20) ಆತಿಥ್ಯವನ್ನು ವಹಿಸಿಕೊಂಡ ಹಿನ್ನೆಲೆಯಲ್ಲಿ ಅನೇಕ ತಾಂತ್ರಿಕ ಕಾರ್ಯಗುಂಪುಗಳ ಸಭೆಗಳನ್ನು ದೇಶದ ವಿವಿಧ ನಗರಗಳಲ್ಲಿ ಆಯೋಜಿಸಲಾಗುತ್ತಿದೆ. ಭೂ ಅಪಮೌಲ್ಯೀಕರಣದ ಪ್ರತಿಬಂಧನ (ತಡೆ), ಜೀವ ಪರಿಸರ ಮರುಸ್ಥಾಪನೆಯ ತ್ವರಿತಗೊಳಿಸುವಿಕೆ, ಜೀವ ವೈವಿಧ್ಯತೆಯ ಸಮೃದ್ದೀಕರಣ ವಿಷಯದಡಿ ಬೆಂಗಳೂರಿನಲ್ಲಿ ಫೆ.9 ರಿಂದ 12 ರವರೆಗೆ ಸಭೆ ನಡೆಯಲಿದ್ದು, ಸುಮಾರು 20 ದೇಶದ ಪ್ರತಿನಿಧಿಗಳು ಬೆಂಗಳೂರಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಡಿಕೆಶಿಗೆ ಮಾಸ್ಟರ್ ಸ್ಟ್ರೋಕ್!

    ಫೆ.9 ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಆಯ್ಕೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಪ್ರತಿನಿಧಿಗಳು ಉದ್ಯಾನವನದ ವೀಕ್ಷಣೆಗೆ ಬರುವುದರಿಂದ ಭದ್ರತೆಯ ದೃಷ್ಟಿಯಿಂದ ಜೈವಿಕ ಉದ್ಯಾನವನದ ಮೃಗಾಲಯ, ಸಫಾರಿ ಮತ್ತು ಚಿಟ್ಟೆ ಉದ್ಯಾನ ಬಂದ್ ಆಗಿಲಿದ್ದು, ಪ್ರವಾಸಿಗರಿಗೆ ಯಾವುದೇ ರೀತಿಯ ಪಾರ್ಕ್ ಭೇಟಿಗೆ ಅವಕಾಶ ಇರುವುದಿಲ್ಲ.

    ಕೇಂದ್ರ ಸೇರಿದಂತೆ ವಿವಿಧ ಭಾಗದಿಂದ ಸಾಕಷ್ಟು ಪ್ರತಿನಿಧಿಗಳು ಆಗಮಿಸುತ್ತಿರುವ ಹಿನ್ನೆಲೆ ಸುರಕ್ಷತೆಯ ದೃಷ್ಟಿಯಿಂದ ಪಾರ್ಕ್ ಬಂದ್ ಮಾಡಲಾಗುತ್ತಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರಿನ ಮೇಲ್ ಪಲ್ಟಿಯಾದ ಕಾಂಕ್ರೀಟ್ ಮಿಕ್ಸರ್ ಲಾರಿ – ತಾಯಿ, ಮಗಳು ದುರ್ಮರಣ

    ಕಾರಿನ ಮೇಲ್ ಪಲ್ಟಿಯಾದ ಕಾಂಕ್ರೀಟ್ ಮಿಕ್ಸರ್ ಲಾರಿ – ತಾಯಿ, ಮಗಳು ದುರ್ಮರಣ

    ಬೆಂಗಳೂರು: ಕಾಂಕ್ರೀಟ್ ಮಿಕ್ಸರ್ ಲಾರಿ (Concrete Mixer Truck) ಕಾರಿನ ಮೇಲೆ ಪಲ್ಟಿ ಹೊಡೆದು (Car) ತಾಯಿ (Mother) ಹಾಗೂ ಮಗಳು (Daughter) ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬನ್ನೇರುಘಟ್ಟ (Bannerghatta) ಸಮೀಪದ ಬ್ಯಾಲಮರದ ದೊಡ್ಡಿ ಬಳಿ ನಡೆದಿದೆ.

    ತಿರುವಿನಲ್ಲಿ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಮೇಲೆ ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನಲ್ಲಿ ಸಂಚರಿಸುತ್ತಿದ್ದ ಶಾಲಾ ವಿದ್ಯಾರ್ಥಿ ಹಾಗೂ ಅಕೆಯ ತಾಯಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ ಬಂಪರ್ – ಏನಿದು ಯೋಜನೆ? ಯಾರಿಗೆಲ್ಲ ಲಾಭ?

    ತರಲು ಗ್ರಾಮ ಮೂಲದ ಖಾಸಗಿ ಶಾಲೆ ವಿದ್ಯಾರ್ಥಿನಿ ಶ್ಯಾಮಲಾ ಹಾಗೂ ಅವರ ತಾಯಿ ಗಾಯತ್ರಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು. ಘಟನೆ ಬಳಿಕ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಕಾರ್‌ನಲ್ಲಿ ಸಿಲುಕಿಕೊಂಡಿದ್ದ ಮೃತ ದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಕೆಳಮನೆ ಆಂಟಿ ಜೊತೆ ಎಸ್ಕೇಪ್ ಆಗಿದ್ದ ಲವರ್‌ಬಾಯ್ ಅಂಕಲ್ ತಡರಾತ್ರಿ ದಿಢೀರ್ ಪ್ರತ್ಯಕ್ಷ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕತ್ತು ಕೊಯ್ದ ಸ್ಥಿತಿಯಲ್ಲಿ ಖಾಸಗಿ ಕಾಲೇಜಿನ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ಶವ ಪತ್ತೆ

    ಕತ್ತು ಕೊಯ್ದ ಸ್ಥಿತಿಯಲ್ಲಿ ಖಾಸಗಿ ಕಾಲೇಜಿನ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ಶವ ಪತ್ತೆ

    ಬೆಂಗಳೂರು: ಖಾಸಗಿ ಕಾಲೇಜ್ (Collage) ಒಂದರ ಇಂಜಿನಿಯರಿಂಗ್ (Engineering) ವಿದ್ಯಾರ್ಥಿಯೋರ್ವ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ಹಾಸ್ಟೆಲ್‍ನ (Hostel) ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಬನ್ನೇರುಘಟ್ಟ ಸಮೀಪದ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ನಿತಿನ್ (19) ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾದ ಕೇರಳ ಮೂಲದ ವಿದ್ಯಾರ್ಥಿ. ನಿತಿನ್ ಇದೇ ತಿಂಗಳು ಡಿ.1ಕ್ಕೆ ಕಾಲೇಜು ಸೇರಿದ್ದ. ಪ್ರಥಮ ವರ್ಷದ ಇಂಜಿನಿಯರಿಂಗ್ ಪದವಿಗೆ ಅಡ್ಮಿಷನ್ ಮಾಡಿಸಿದ್ದ ನಿತಿನ್ ಚಾಕುವಿನಿಂದ ತಾನೇ ಚುಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳಿದ್ದ ಶಾಲಾ ಪ್ರವಾಸದ ಬಸ್ ಪಲ್ಟಿ – 18 ಮಕ್ಕಳಿಗೆ ಗಾಯ

    ಕಾಲೇಜ್ ಕ್ಯಾಂಪಸ್ ಒಳಗಿನ ಹಾಸ್ಟೆಲ್‍ನಲ್ಲಿ ವಾಸವಿದ್ದ ನಿತಿನ್ ನಿನ್ನೆ ಮಧ್ಯಾಹ್ನ ಹಾಸ್ಟೆಲ್ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಹಾಸ್ಟೆಲ್ ಸಹಪಾಠಿ ಬಂದು ಬಾಗಿಲು ಬಡಿದಿದ್ದ. ಬಾಗಿಲು ತೆಗೆಯದ ಹಿನ್ನೆಲೆ ಹಾಸ್ಟೆಲ್ ವಾರ್ಡನ್‍ಗೆ ವಿಷಯ ತಿಳಿಸಿದ್ದಾನೆ. ಕೂಡಲೇ ವಾರ್ಡನ್ ಹಾಗೂ ಸಿಬ್ಬಂದಿ ಬಂದು ಬಾಗಿಲು ಒಡೆದಿದ್ದಾರೆ. ಆಗ ಕತ್ತು ಕೊಯ್ದ ಸ್ಥಿತಿಯಲ್ಲಿ ಶೌಚಾಲಯದಲ್ಲಿ ನಿತಿನ್ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಕಾಮುಕ ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಧರ್ಮದೇಟು

    Live Tv
    [brid partner=56869869 player=32851 video=960834 autoplay=true]

  • ಪತ್ನಿಗೆ ಚಾಕುವಿನಿಂದ ಇರಿದು ಗಂಡನೂ ಆತ್ಮಹತ್ಯೆಗೆ ಶರಣು

    ಪತ್ನಿಗೆ ಚಾಕುವಿನಿಂದ ಇರಿದು ಗಂಡನೂ ಆತ್ಮಹತ್ಯೆಗೆ ಶರಣು

    ಬೆಂಗಳೂರು/ಆನೇಕಲ್: ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದು, ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    crime

    ಸುರೇಶ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಈತ ಮೈಲ ಸಂದ್ರ ಗ್ರಾಮದ ನಿವಾಸಿಯಾಗಿದ್ದನು. ಘಟನೆ ನಡೆದು ಎರಡು ದಿನಗಳಾಗಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿ ನಿತ್ಯ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಸುರೇಶ್ ಮಂಗಳವಾರ ಮತ್ತೆ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಹೆಂಡತಿಗೆ ಚಾಕುವಿನಿಂದ ಇರಿದಿದ್ದಾನೆ.  ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣಕ್ಕೆ ತಿರುವು – ಉಗ್ರ ಸಂಘಟನೆಯೊಂದರ ಕೈವಾಡ: ಎನ್‍ಐಎ

    ಬಳಿಕ ಸ್ಥಳೀಯರು ಆಗಮಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದರ ಬೆನ್ನಲ್ಲೆ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ – ಶಾಲಾ, ಕಾಲೇಜುಗಳಿಗೆ ರಜೆ

    Live Tv
    [brid partner=56869869 player=32851 video=960834 autoplay=true]

  • ಬಂಡೆಯಿಂದ ಜಾರಿ ಬಿದ್ದು ಬನ್ನೇರುಘಟ್ಟದ ಮರಿಯಾನೆ ಸಾವು

    ಬಂಡೆಯಿಂದ ಜಾರಿ ಬಿದ್ದು ಬನ್ನೇರುಘಟ್ಟದ ಮರಿಯಾನೆ ಸಾವು

    ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮರಿಯಾನೆ ಬಂಡೆಯಿಂದ ಜಾರಿ ಬಿದ್ದು, ಸಾವನ್ನಪ್ಪಿರುವ ಘಟನೆ ನಡೆದಿದೆ.

    ಕಳೆದ ತಿಂಗಳಷ್ಟೇ ತಡೆ ಬೇಲಿಗೆ ಕತ್ತು ಸಿಲುಕಿ ಜಿರಾಫೆ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಬಂಡೆ ಮೇಲಿನಿಂದ ಜಾರಿ ಬಿದ್ದು ಮರಿಯಾನೆಯೊಂದು ಸಾವನ್ನಪ್ಪಿದೆ. ಕಳೆದ 4 ದಿನಗಳ ಹಿಂದೆ ಜೈವಿಕ ಉದ್ಯಾನವನದ 5 ವರ್ಷದ ಗಂಡು ಆನೆಮರಿ ಶ್ರೀರಾಮುಲು ಬಂಡೆ ಮೇಲಿಂದ ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದೆ.

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ ಸಫಾರಿಯಲಿದ್ದ ಶ್ರೀರಾಮುಲು ಆನೆಮರಿ ರಾತ್ರಿ ವೇಳೆ ಕಾಡಿಗೆ ಮೇಯಲು ಬಿಡಲಾಗಿತ್ತು. ಬಂಡೆ ತುದಿಯಲ್ಲಿ ಆಟ ಆಡಬೇಕಾದರೆ ಕಾಲು ಜಾರಿ ಮೇಲಿಂದ ಬಿದ್ದು, ಸಾವನ್ನಪ್ಪಿರುವ ಶಂಕೆ ಇದೆ. ಅದು ಅಲ್ಲದೇ ಕಾಡಿನ ಆನೆಯೊಂದಿಗೆ ಮುಖಾಮುಖಿಯಾದ ಸಮಯದಲ್ಲಿ ಏನಾದರೂ ಕಾಡಿನ ಆನೆ ಮೇಲಿಂದ ಕೆಳಕ್ಕೆ ತಳ್ಳಿರಬಹುದೆಂಬ ಅನುಮಾನವೂ ಮೂಡಿದೆ. ಇದನ್ನೂ ಓದಿ: ಆರ್ಯನ್ ಖಾನ್ ಮೂರು ವರ್ಷದಿಂದ ಡ್ರಗ್ ಸೇವಿಸುತ್ತಿದ್ದಾರೆ – ಎನ್‍ಸಿಬಿ

    ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಾಧಿಕಾರಿಗಳಿಂದ ಮೃತಪಟ್ಟ ಆನೆಮರಿಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ.

  • ಬನ್ನೇರುಘಟ್ಟದಿಂದ ಶಿವಮೊಗ್ಗದ ಹುಲಿ ಸಿಂಹಧಾಮಕ್ಕೆ ಆಗಮಿಸಿದ ಹೊಸ ಅತಿಥಿಗಳು

    ಬನ್ನೇರುಘಟ್ಟದಿಂದ ಶಿವಮೊಗ್ಗದ ಹುಲಿ ಸಿಂಹಧಾಮಕ್ಕೆ ಆಗಮಿಸಿದ ಹೊಸ ಅತಿಥಿಗಳು

    – ಬನ್ನೇರುಘಟ್ಟದಿಂದ ಬಂದ ಸುಚಿತ್ರಾ, ಯಶ್ವಂಥ್
    – ಆರಕ್ಕೇರಿದ ಸಿಂಹಗಳ ಸಂಖ್ಯೆ

    ಶಿವಮೊಗ್ಗ: ನೈಸರ್ಗಿಕ ಅರಣ್ಯದ ಮಧ್ಯೆ ಇರುವ ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಎರಡು ಹೊಸ ಅತಿಥಿಗಳು ಆಗಮಿಸಿದ್ದು, ಸಿಂಹಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

    ಬನ್ನೇರುಘಟ್ಟದಿಂದ ಶಿವಮೊಗ್ಗದ ಮೃಗಾಲಯಕ್ಕೆ ಏಳು ವರ್ಷದ ಸುಚಿತ್ರಾ ಮತ್ತು ಯಶ್ವಂಥ್ ಎಂಬ ಹೆಸರಿನ ಎರಡು ಸಿಂಹಗಳನ್ನು ಕರೆ ತರಲಾಗಿದೆ. ಈಗಾಗಲೇ ಮೃಗಾಲಯದಲ್ಲಿ ಆರ್ಯ, ಮಾನ್ಯ, ಸುಶ್ಮಿತಾ ಹಾಗೂ ಸರ್ವೇಶ್ ಎಂಬ ನಾಲ್ಕು ಸಿಂಹಗಳಿದ್ದವು. ಇದೀಗ ಆ ಕುಟುಂಬಕ್ಕೆ ಇನ್ನೆರಡು ಸಿಂಹಗಳು ಹೊಸದಾಗಿ ಸೇರ್ಪಡೆಯಾಗಿವೆ.

    ಈ ಹಿಂದೆಯೇ ಹುಲಿ ಮತ್ತು ಸಿಂಹಧಾಮಕ್ಕೆ ಹೊಸ ಸಿಂಹಗಳನ್ನು ತರುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸಿಂಹಗಳನ್ನು ತರಲು ಸಾಧ್ಯವಾಗಿರಲಿಲ್ಲ. ಈಗ ಆ ಯೋಜನೆ ಈಡೇರಿದಂತಾಗಿದೆ. ಇದನ್ನೂ ಓದಿ: ಕಾಲಿಗೆ ಮಾಸ್ಕ್ ಸಿಕ್ಕಿಸಿಕೊಂಡು ಟ್ರೋಲ್ ಆದ ಸಚಿವ

  • ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನನ್ನು ಕೊಲೆಗೈದಿದ್ದ ಆರೋಪಿಗಳು ಅಂದರ್

    ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನನ್ನು ಕೊಲೆಗೈದಿದ್ದ ಆರೋಪಿಗಳು ಅಂದರ್

    ಬೆಂಗಳೂರು: ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನನ್ನು ಬರ್ಬರ ಹತ್ಯೆಗೈದಿದ್ದ ಆರೋಪಿಗಳನ್ನು ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

    ಕಲ್ಕೆರೆಯ ಪವನ್, ಪ್ರವೀಣ್, ಮನೋಜ್, ಅಕ್ಷಯ್, ಯೋಗೇಶ್, ಗೋವಿಂದ್, ವೆಂಕಟೇಶ್, ರಾಜಶೇಖರ್ ಬಂಧಿತ ಆರೋಪಿಗಳು. ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ನಿವಾಸಿ ಕಿರಣ್ ಅಲಿಯಾಸ್ ಪುಟ್ಟ (27) ಕೊಲೆಯಾದ ಜಿಮ್ ಟ್ರೈನರ್. ಕಿರಣ್ ರಾಮಸಂದ್ರದಲ್ಲಿ ಜಿಮ್ ಟ್ರೈನರ್ ಆಗಿದ್ದ.

    ಯುವತಿಯ ವಿಚಾರದಲ್ಲಿ ಕಿರಿಕ್ ಉಂಟಾಗಿತ್ತು. ಇತ್ತ ಕಲ್ಕೆರೆಯ ಪವನ್, ಪ್ರವೀಣ್ ಹಾಗೂ ಅವರ ಸ್ನೇಹಿತರು ಕಿರಣ್ ಹತ್ಯೆಗೆ ಪ್ಲಾನ್ ನಡೆಸಿತ್ತು. ಇದೇ ಸಂದರ್ಭದಲ್ಲಿ ಯುವತಿಯು ಪವನ್ ಗುಂಪಿನ ಮೊರೆ ಹೋಗಿದ್ದಳು. ಹೀಗಾಗಿ ಜಗಳ ಬಗೆ ಹರಿಸಬೇಕು ನೀನು ಬಾ ಎಂದು ಆರೋಪಿಗಳು ಕಿರಣ್‍ನನ್ನು ಕರೆದಿದ್ದರು.

    ಕಿರಣ್ ಜೂನ್ 18ರಂದು ನ್ಯಾಯ ಪಂಚಾಯ್ತಿಗೆ ಹೋಗಿದ್ದಾಗ ಮಾತಿಗೆ ಮಾತು ಬೆಳೆದಿತ್ತು. ಇದರಿಂದ ಕೋಪಗೊಂಡ ಗುಂಪು ಕಿರಣ್ ಮೇಲೆ ಲಾಗು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಆರೋಪಿಗಳು ಸ್ಕೂಟರ್ ಹಾಗೂ ಆಟೋದಲ್ಲಿ ಬಂದು ಕೃತ್ಯ ಎಸಗಿರುವ ಮಾಹಿತಿ ಲಭಿಸಿತ್ತು. ಬಳಿಕ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ಇಂದು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಎರಡು ಆಟೋ ಹಾಗೂ ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.

  • ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನ ಬರ್ಬರ ಹತ್ಯೆ

    ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನ ಬರ್ಬರ ಹತ್ಯೆ

    ಬೆಂಗಳೂರು: ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‍ನನ್ನು ಬರ್ಬರ ಹತ್ಯೆಗೈದ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಬಳಿಯ ರಾಮಸಂದ್ರದಲ್ಲಿ ನಡೆದಿದೆ.

    ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ನಿವಾಸಿ ಕಿರಣ್ ಅಲಿಯಾಸ್ ಪುಟ್ಟ (27) ಕೊಲೆಯಾದ ವ್ಯಕ್ತಿ ಜಿಮ್ ಟ್ರೈನರ್. ಕಿರಣ್ ರಾಮಸಂದ್ರದಲ್ಲಿ ಜಿಮ್ ಟ್ರೈನರ್ ಆಗಿದ್ದ.

    ಪ್ರೇಮಿಗಳಿಬ್ಬರ ವಿಚಾರದಲ್ಲಿ ಕಿರಿಕ್ ಉಂಟಾಗಿತ್ತು. ಇತ್ತ ಕಲ್ಕೆರೆ ಭಾಗದ ಯುವಕರ ಗುಂಪೊಂದು ಕಿರಣ್ ಹತ್ಯೆಗೆ ಪ್ಲಾನ್ ನಡೆಸಿತ್ತು. ಇದೇ ಸಂದರ್ಭದಲ್ಲಿ ಪ್ರೇಮಿಗಳು ಆ ಗುಂಪಿನವರ ಮೊರೆ ಹೋಗಿದ್ದರು. ಹೀಗಾಗಿ ಪ್ರೇಮಿಗಳ ಜಗಳ ಬಗೆ ಹರಿಸಬೇಕು ನೀನು ಬಾ ಎಂದು ದುಷ್ಕರ್ಮಿಗಳು ಕಿರಣ್‍ನನ್ನು ಕರೆದಿದ್ದರು.

    ಕಿರಣ್ ಇಂದು ನ್ಯಾಯ ಪಂಚಾಯ್ತಿಗೆ ಹೋಗಿದ್ದಾಗ ಮಾತಿಗೆ ಮಾತು ಬೆಳೆದೆ. ಇದರಿಂದ ಕೋಪಗೊಂಡ ಗುಂಪು ಕಿರಣ್ ಮೇಲೆ ಲಾಗು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಪ್ರೇಮಿಗಳನ್ನು ವಶಕ್ಕೆ ಪಡೆದು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.