Tag: banner

  • ನಾಳೆ RSS ಪಥ ಸಂಚಲನ – ಚಿತ್ತಾಪುರದಲ್ಲಿ ಹಾಕಿದ್ದ ಬ್ಯಾನರ್‌, ಬಂಟಿಂಗ್‌ ತೆರವು

    ನಾಳೆ RSS ಪಥ ಸಂಚಲನ – ಚಿತ್ತಾಪುರದಲ್ಲಿ ಹಾಕಿದ್ದ ಬ್ಯಾನರ್‌, ಬಂಟಿಂಗ್‌ ತೆರವು

    * ಹಣ ಪಾವತಿಸಿದ್ದರೂ ಬ್ಯಾನರ್‌ ತೆರವು; ಹಿಂದೂ ಕಾರ್ಯಕರ್ತರ ಆಕ್ರೋಶ

    ಕಲಬುರಗಿ: ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ನಿಗದಿಯಾಗಿದ್ದ ಆರ್‌ಎಸ್‌ಎಸ್‌ (RSS) ಪಥ ಸಂಚಲನಕ್ಕಾಗಿ ಹಾಕಿದ್ದ ಬ್ಯಾನರ್‌ ಮತ್ತು ಬಂಟಿಂಗ್‌ಗಳನ್ನು ತೆರವುಗೊಳಿಸಲಾಗಿದೆ. ಅಧಿಕಾರಿಗಳ ನಡೆಗೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಿತ್ತಾಪುರ (Chittapura) ಪುರಸಭೆ ಕಚೇರಿ ಮುಂದೆ ಹಿಂದೂ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ. ಆರ್‌ಎಸ್‌ಎಸ್‌ ಪಥ ಸಂಚಲನ ಹಿನ್ನೆಲೆಯಲ್ಲಿ 6 ಸಾವಿರ ರೂ. ಹಣ ಪಾವತಿಸಿ ಬಂಟಿಂಗ್‌, ಬ್ಯಾನರ್‌ ಅಳವಡಿಸಲಾಗಿತ್ತು. ಹಣ ಪಾವತಿಸಿದರೂ ತೆರವು ಮಾಡಿದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: RSS ಪಥಸಂಚಲನದಲ್ಲಿ ಭಾಗಿ- ರಾಯಚೂರಿನ PDO ಅಮಾನತು

    ವಿಚಾರಣೆಗೆ ತೆರಳಿದಾಗ ಪುರಸಭೆ ಸಿಬ್ಬಂದಿ ಕಚೇರಿ ಬಿಟ್ಟು ಹೋಗಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹಿಸಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

    ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್ಎಸ್ ಕಾರ್ಯಕ್ರಮಕ್ಕೆ ಬ್ಯಾನ್ ಕುರಿತು ಸಚಿವ‌ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದು ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆರ್‌ಎಸ್‌ಎಸ್‌ ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಪಿಡಿಒ ಅಮಾನತು ಕೂಡ ಮಾಡಲಾಗಿದೆ. ಇದನ್ನೂ ಓದಿ: ಮುಂದಿನ ಸಿಎಂ ಸತೀಶಣ್ಣನೇ ಆಗ್ಲಿ – ಜಾರಕಿಹೊಳಿ ಪರ ಬ್ಯಾಟ್ ಬೀಸಿದ ರಾಜು ಗೌಡ

    ಸರ್ಕಾರದ ನಡೆಗೆ ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಹಿಂದೂ ಕಾರ್ಯಕರ್ತರು ಕೂಡ ಆಕ್ರೋಶ ಹೊರಹಾಕಿದ್ದು, ನಾಳೆ ಪಥ ಸಂಚಲನಕ್ಕೆ ಮುಂದಾಗಿದ್ದಾರೆ.

  • ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಡಿಕೆಶಿ ಗರಂ – ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧವೇ 12 ಎಫ್‌ಐಆರ್‌, 12 ಲಕ್ಷ ದಂಡ

    ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಡಿಕೆಶಿ ಗರಂ – ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧವೇ 12 ಎಫ್‌ಐಆರ್‌, 12 ಲಕ್ಷ ದಂಡ

    – ಪದಗ್ರಹಣ ಸ್ವೀಕರಿಸಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷಗೆ 1 ಲಕ್ಷ ರೂ. ದಂಡ

    ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಿರುವವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar) ನಿರ್ದೇಶನದ ಮೇರೆಗೆ ಬಿಬಿಎಂಪಿ ಆಯುಕ್ತರು ಕ್ರಮಕೈಗೊಂಡಿದ್ದಾರೆ.

    ಬಳ್ಳಾರಿ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಪಶ್ಚಿಮ, ಪೂರ್ವ ಹಾಗೂ ಯಲಹಂಕ ವಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ಡಿಕೆಶಿ ಎಚ್ಚರಿಕೆಗೆ ಕ್ಯಾರೇ ಅನ್ನದ ಯುವ ಕಾರ್ಯಕರ್ತರು – ಈಗಲೂ ರಾರಾಜಿಸುತ್ತಿವೆ ಬ್ಯಾನರ್‌ಗಳು

    ಫ್ಲೆಕ್ಸ್ ತೆರವುಗೊಳಿಸಲು ಖರ್ಚಾಗುವ ಹಣವನ್ನು ಫ್ಲೆಕ್ಸ್‌ಗಳನ್ನು ಅಳವಡಿಸಿರುವವರಿಂದಲೇ ವಸೂಲಿಗೆ ಕ್ರಮವಹಿಸಲಾಗಿದೆ. ಫ್ಲೆಕ್ಸ್‌ ಅಳವಡಿಸಿದವರ ವಿರುದ್ಧ ಇದುವರೆಗೂ 12 ಎಫ್‌ಐಆರ್ ದಾಖಲಿಸಲಾಗಿದ್ದು, 12 ಲಕ್ಷ ರೂ. ದಂಡ ವಿಧಿಸಲಾಗಿದೆ.

    ನಗರದ ಪೂರ್ವ, ಪಶ್ಚಿಮ ಹಾಗೂ ಯಲಹಂಕ ಸೇರಿದಂತೆ ಮೂರೂ ವಲಯಗಳ ಅನಧಿಕೃತ ಫ್ಲೆಕ್ಸ್ ತೆರವು ಮಾಡಲಾಗಿದೆ. ನಿನ್ನೆಯಿಂದ 1,350 ಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್‌ಗಳು ಹಾಗೂ 600 ಕ್ಕೂ ಹೆಚ್ಚು ಪಕ್ಷದ ಧ್ವಜಗಳನ್ನು ತೆಗೆಯಲಾಗಿದೆ. ಇದನ್ನೂ ಓದಿ: ರನ್ಯಾ ರಾವ್ ಕೇಸ್ | ತಾಕತ್ತಿದ್ದರೆ ಸಚಿವರ ಹೆಸರು ಬಹಿರಂಗಪಡಿಸಲಿ – ಯತ್ನಾಳ್‌ಗೆ ಕಾಂಗ್ರೆಸ್ ಸಚಿವರ ಸವಾಲು

    ಅರಮನೆ ಮೈದಾನದಲ್ಲಿ ನಡೆದ ಯುವಸಂಕಲ್ಪ ಕಾರ್ಯಕ್ರಮದಲ್ಲಿ ಪದಗ್ರಹಣ ಸ್ವೀಕರಿಸಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಅವರಿಗೂ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾಲಾ ಪ್ರದೀಪ್‌, ಮಾಜಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್ ಸುಧಾಕರ್, ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಕುಮಾರ್‌, ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಚೈತ್ರಾ ಗಿರೀಶ್‌, ಬೆಂಗಳೂರು ಕೇಂದ್ರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್ ದಿವಾಕರ್, INTUC ರಾಜ್ಯ ಸಂಘಟನೆ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಗೆ ತಲಾ 1 ಲಕ್ಷ ರೂ. ಹಾಗೂ ತೆರವುಗೊಳಿಸುವ ಚಾರ್ಜ್ 5,000 ರೂ. ದಂಡ ಹಾಕಲಾಗಿದೆ.

  • ಮನೆ-ಮನೆಗೆ ತೆರಳಿ ಪಡಿ ಸಂಗ್ರಹಿಸಿದ ದತ್ತಮಾಲಾಧಾರಿ ಸಿ.ಟಿ ರವಿ

    ಮನೆ-ಮನೆಗೆ ತೆರಳಿ ಪಡಿ ಸಂಗ್ರಹಿಸಿದ ದತ್ತಮಾಲಾಧಾರಿ ಸಿ.ಟಿ ರವಿ

    – ದತ್ತಜಯಂತಿ ಬ್ಯಾನರ್ ಕಿತ್ತ ಕಿಡಿಗೇಡಿಗಳು

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) 3 ದಿನಗಳ ಕಾಲ ದತ್ತಜಯಂತಿ (Dattajayanthi) ಅದ್ಧೂರಿಯಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದತ್ತಮಾಲಾಧಾರಿ ಸಿ.ಟಿ ರವಿಯವರು (CT Ravi) ಭಿಕ್ಷಾಟನೆ ಆರಂಭಿಸಿದ್ದಾರೆ.

    ಹೌದು. ಸಿ.ಟಿ ರವಿಯವರು ಮನೆ-ಮನೆಗೆ ತೆರಳಿ ಪಡಿ ಸಂಗ್ರಹಿಸುತ್ತಿದ್ದಾರೆ. ಚಿಕ್ಕಮಗಳೂರು ನಗರದ ನಾರಾಯಣಪುರದಲ್ಲಿ 9 ಮನೆಯಲ್ಲಿ ಭಿಕ್ಷೆ ಬೇಡಿ ಪಡಿ ಸಂಗ್ರಹಿಸಿದ್ದಾರೆ. ಈ ವೇಳೆ ಸಿ.ಟಿ ರವಿಯವರಿಗೆ 20ಕ್ಕೂ ಹೆಚ್ಚು ಮಾಲಾಧಾರಿಗಳ ಸಾಥ್ ನೀಡಿದ್ದಾರೆ. ಸಿಟಿ ರವಿಯವರ ಪಡಿ ಸಂಗ್ರಹಲ್ಲಿದ್ದ ವಸ್ತುಗಳನ್ನ ಇರುಮುಡಿ ರೂಪದಲ್ಲಿ ಮಂಗಳವಾರ ದತ್ತಪೀಠಕ್ಕೆ ಹೊತ್ತೊಯ್ಯುತ್ತಾರೆ.

    ಪಡಿಯಲ್ಲಿ ಏನೇನಿರುತ್ತೆ..?: ಅಕ್ಕಿ, ಬೇಳೆ,ಕಾಯಿ, ಬೆಲ್ಲ ಎಲೆ, ಅಡಿಕೆ ಇವಿಷ್ಟು ದತ್ತಜಯಂತಿಗೆ ನೀಡುವ ಪಡಿಯಲ್ಲಿರುತ್ತವೆ. ಇದನ್ನೂ ಓದಿ: ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಶ್ರೀರಾಮ ಸೇನೆ ಸಿದ್ಧತೆ- ಜಿಲ್ಲಾಡಳಿತದಿಂದ ನಿಷೇಧಾಜ್ಞೆ

    ಬ್ಯಾನರ್ ಕಿತ್ತ ದುಷ್ಕರ್ಮಿಗಳು: ದತ್ತಜಯಂತಿಯ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಜಿಲ್ಲೆಯಾದ್ಯಂತ ಬ್ಯಾನರ್‍ಗಳನ್ನು ಹಾಕಲಾಗಿತ್ತು. ಆದರೆ ಚಿಕ್ಕಮಗಳೂರು ತಾಲೂಕಿನ ಬಸ್ಕಲ್ ಗ್ರಾಮದಲ್ಲಿ ಇಂದು ಬೆಳಗ್ಗಿನ ಜಾವ ಓಮ್ನಿಯಲ್ಲಿ ಬಂದ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ. ದತ್ತಜಯಂತಿ ಬ್ಯಾನರ್ ಕಿತ್ತು ಓಮ್ನಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

  • ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು

    ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು

    ಚಿಕ್ಕಮಗಳೂರು: ರಸ್ತೆ ದುರಸ್ತಿ (Road Repair) ಮಾಡಿಸಿದ್ದು ಪಟ್ಟಣ ಪಂಚಾಯತ್‌ನ (Panchayat) ಹಣದಲ್ಲಿ. ಆದರೆ, ಬ್ಯಾನರ್ ಹಾಕಿಸಿಕೊಂಡಿದ್ದು ಶಾಸಕರು. ಇಂತಹದ್ದೊಂದು ನಗೆಪಾಟಲಿನ ಘಟನೆಗೆ ಜಿಲ್ಲೆಯ ಕೊಪ್ಪ (Koppa) ಪಟ್ಟಣ ಸಾಕ್ಷಿಯಾಗಿದೆ.

    ಕೊಪ್ಪ ಪಟ್ಟಣದಲ್ಲಿ ರಸ್ತೆ ಸಾಕಷ್ಟು ಹಾಳಾಗಿತ್ತು. ಆದರೆ, ಶಾಸಕರು ರಸ್ತೆ ದುರಸ್ತಿಯನ್ನು ಮಾಡಿಸಿರಲಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣ ಪಂಚಾಯತ್ ರಸ್ತೆಗೆ ಪ್ಯಾಚ್ ಹಾಕಿಸಿ ದುರಸ್ತಿ ಮಾಡಿಸಿತ್ತು. ಆದರೆ, ರಸ್ತೆಗೆ ಪ್ಯಾಚ್ ಹಾಕಿಸಿ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಟ್ಟರೆಂದು ಬ್ಯಾನರ್ ಹಾಕಿಸಿಕೊಂಡಿದ್ದು ಮಾತ್ರ ಶಾಸಕ ಟಿ.ಡಿ.ರಾಜೇಗೌಡ. ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

    ಕೊಪ್ಪ ಪಟ್ಟಣದ ಮುಖ್ಯ ರಸ್ತೆ ಸಂಪೂರ್ಣ ಅಯೋಮಯವಾಗಿತ್ತು. ಟಿ.ಡಿ.ರಾಜೇಗೌಡ (TD Rajegowda) 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ಶಾಸಕರು ರಸ್ತೆ ದುರಸ್ತಿ ಮಾಡಿಸಿದ್ದರು. ಆದರೆ, ದುರಸ್ತಿ ಮಾಡಿದ ಗುತ್ತಿಗೆದಾರನಿಗೆ ಯಾವುದೇ ಬಿಲ್ ಪಾವತಿ ಮಾಡಿರುವುದಿಲ್ಲ. 2023ರಲ್ಲಿ ಪಟ್ಟಣ ಪಂಚಾಯತ್ ಜನರ ತೆರಿಗೆ ಹಣದಲ್ಲಿ ಬಿಲ್ ಪಾವತಿ ಮಾಡಲಾಗಿದೆ. ಅದಾದ ನಂತರವೂ 2-3 ಬಾರಿ ರಸ್ತೆಗೆ ಪ್ಯಾಚ್ ಕೆಲಸ ಮಾಡಲಾಗಿದೆ. ಆದರೆ, ಶಾಸಕರ ನಿಧಿಯಿಂದ ಈವರೆಗೂ ಯಾವುದೇ ಅನುದಾನ ನೀಡಿಲ್ಲ ಎಂದು ಪಟ್ಟಣ ಪಂಚಾಯತ್ ಸದಸ್ಯರು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: 2ನೇ ಹಂತದ ಭಾರತ್ ಜೋಡೋ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧಾರ

    ಪಟ್ಟಣ ಪಂಚಾಯತ್ ರಸ್ತೆ ದುರಸ್ತಿ ಮಾಡಿಸಿದ ಕೆಲಸಕ್ಕೆ ಶಾಸಕರು ಬ್ಯಾನರ್ ಹಾಕಿಸಿಕೊಳ್ಳುವುದು ಎಷ್ಟು ಸರಿ ಎಂದು ಕೊಪ್ಪ ಪಟ್ಟಣ ಪಂಚಾಯತ್ ಸದಸ್ಯರು ಶಾಸಕರನ್ನು ಪ್ರಶ್ನಿಸಿದ್ದಾರೆ. ಯಾರೋ ಮಾಡಿದ ಕೆಲಸಕ್ಕೆ ಶಾಸಕರು ಬ್ಯಾನರ್ ಹಾಕಿಸಿಕೊಂಡಿರುವುದನ್ನು ಕಂಡ ಕೊಪ್ಪ ನಿವಾಸಿಗಳು ಶಾಸಕರನ್ನು ಕಂಡು ನಗುತ್ತಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ದಲಿತಾಸ್ತ್ರ ಹೂಡಲು ಮುಂದಾಯ್ತಾ I.N.D.I.A- ಖರ್ಗೆ ಪ್ರಧಾನಿ ಅಭ್ಯರ್ಥಿ?

  • ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ಸಂಪೂರ್ಣ ಬ್ಯಾನ್;‌ ಯಾರ ಹೆಸರಿರುತ್ತೋ ಅವರಿಗೂ 50,000 ರೂ. ದಂಡ: ಡಿಕೆಶಿ ಎಚ್ಚರಿಕೆ

    ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ಸಂಪೂರ್ಣ ಬ್ಯಾನ್;‌ ಯಾರ ಹೆಸರಿರುತ್ತೋ ಅವರಿಗೂ 50,000 ರೂ. ದಂಡ: ಡಿಕೆಶಿ ಎಚ್ಚರಿಕೆ

    ಬೆಂಗಳೂರು: ಆಗಸ್ಟ್‌ 15ರ ನಂತರ ಬೆಂಗಳೂರಿನಲ್ಲಿ (Bengaluru) ಸಂಪೂರ್ಣವಾಗಿ ಫ್ಲೆಕ್ಸ್, ಬ್ಯಾನರ್ ನಿಷೇಧಿಸಲಾಗಿದೆ. ಯಾರಾದರು ಫ್ಲೆಕ್ಸ್‌, ಬ್ಯಾನರ್‌ ಹಾಕಿದರೆ 50,000 ರೂ. ದಂಡ ಹಾಕಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (D.K. Shivakumar) ಎಚ್ಚರಿಸಿದರು.

    ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊರಗಡೆ ನೋಡಿದಾಗ ನನಗೆ ಅಸಹ್ಯ ಎನ್ನಿಸಿದೆ. ಬ್ಯಾನರ್, ಫ್ಲೆಕ್ಸ್ ಯಾರದೇ ಆಗಲಿ ಸಂಪೂರ್ಣ ಬ್ಯಾನ್. ಯಾರು ಕೂಡ ಹಾಕಬಾರದು. ಯಾರದಾದರು ಹೆಸರಲ್ಲಿ ಹಾಕಿದರೆ ಅವರಿಗೂ 50 ಸಾವಿರ ದಂಡ ಹಾಕುತ್ತೇವೆ. ಇನ್ಮೇಲೆ ಫ್ಲೆಕ್ಸ್ ಹಾಕಿದರೆ ಎಫ್‌ಐಆರ್ ಕೂಡ ದಾಖಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರವನ್ನ ಟೀಕಿಸಿದ್ದ ಹೆಚ್‍ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

    ನಾನು ಉಸ್ತುವಾರಿ ಆದಾಗಲೆ ಘೋಷಣೆ ಮಾಡಬೇಕು ಎಂದುಕೊಂಡಿದ್ದೆ. ಕೆಲವು ಕಾರಣಕ್ಕೆ ತಡವಾಗಿ ಘೋಷಣೆ ಮಾಡಿದ್ದೇನೆ. ಒಂದು ಪಾಲಿಸಿ ಮಾಡುತ್ತೇವೆ. ಸರ್ಕಾರದ್ದು ಯಾವುದಾದರು ಹಾಕವಂತಹ ಪ್ರಸಂಗ ಬಂದರೆ ಅದು ಹೇಗೆ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

    ಬೆಂಗಳೂರು ಸಿಟಿಯೊಳಗೆ ಫ್ಲೆಕ್ಸ್, ಬ್ಯಾನರ್ ಯಾರೂ ಹಾಕಬಾರದು. ನಾನು ಸೇರಿ ಯಾರು ಕೂಡ ಹಾಕಬಾರದು. ಇನ್ಮೇಲೆ ಅಕ್ರಮವಾಗಿರುವ ಫ್ಲೆಕ್ಸ್ ಹಾಕುವಂತಿಲ್ಲ. ಯಾರಾದ್ರೂ ಫ್ಲೆಕ್ಸ್ ಹಾಕಿದ್ರೆ 50 ಸಾವಿರ ದಂಡ. ಈಗಿರುವ ಫ್ಲೆಕ್ಸ್ ತೆರವು ಮಾಡಬೇಕು. ಫ್ಲೆಕ್ಸ್ ಬಗ್ಗೆ ಹೈಕೋರ್ಟ್ ಆದೇಶವೂ ಇದೆ. ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ಸಂಪೂರ್ಣ ತೆರವು ಮಾಡಲಾಗುವುದು. ಹೋಲ್ಡಿಂಗ್ಸ್ ಕೂಡ ತೆರವು ಮಾಡಬೇಕು. ಬೆಳಗ್ಗೆ ಸಚಿವರು, ಶಾಸಕರಿಗೂ ಹೇಳಿದ್ದೇನೆ. ಬರ್ತ್ ಡೇ, ಡೆತ್ ಡೇ, ಶುಭಹಾರೈಕೆ ಫ್ಲೆಕ್ಸ್ ಹಾಕುವಂತಿಲ್ಲ. ಫ್ಲೆಕ್ಸ್ ಹಾಕಿದ್ರೆ ಎಫ್‌ಐಆರ್ ದಾಖಲಿಸಲಾಗುವುದು. ಮಲ್ಟಿನ್ಯಾಷನಲ್ ಹೋಲ್ಡಿಂಗ್ಸ್‌ಗೂ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಾನು ಯಾರಿಗೂ ಪ್ರಮಾಣ ಮಾಡ್ಬೇಕಾದ ಅವಶ್ಯಕತೆ ಇಲ್ಲ, ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ: ಡಿಕೆಶಿ

    ಬೆಂಗಳೂರು ಟ್ರಾಫಿಕ್ ಕಿರಿಕಿರಿ ಈಸ್ ಔಟ್ ಪ್ರಯತ್ನ ನಡೆದಿದೆ. ಶಾಲಾ ಮಕ್ಕಳಿಂದ ಹಿಡಿದು ಎಲ್ಲರ ಸಲಹೆ ಬಂದಿವೆ. ಕೆಲವು ಸಂಸ್ಥೆಗಳಿಗೆ ಡಿಬೇಟ್‌ಗೆ ಕೊಟ್ಟಿದ್ದೆವು. ಈ ಸಲಹೆಗಳನ್ನ ಆಧರಿಸಿ ವರದಿಗೆ ಕೊಟ್ಟಿದ್ದೆವು. ದೆಹಲಿಯಲ್ಲಿ ಗಡ್ಕರಿಯವರನ್ನ ಭೇಟಿ ಮಾಡಿದ್ದೆವು. ಯಶವಂತಪುರ, ಕೋಲಾರ, ಮೈಸೂರು ಹೈವೇ, ಹೊಸಕೋಟೆ ಕಡೆಯಿಂದ ಹೈವೇಗಳು ರೀಚ್ ಆಗುತ್ತವೆ. ಇದರಿಂದ ಟ್ರಾಫಿಕ್ ಪ್ರಾಬ್ಲಂ ಹೆಚ್ಚಾಗಿದೆ. ವಾಹನಗಳ ಹೆಚ್ಚಳವೂ ಇದೆ. ಕೇಂದ್ರ ಸಚಿವರು ಇದಕ್ಕೆ ಸಲಹೆ ಕೊಟ್ಟಿದ್ದರು. ಟನಲ್, ಫ್ಲೈಓವರ್ ಬಗ್ಗೆ ಸಲಹೆಗಳನ್ನೂ ಕೊಟ್ಟಿದ್ದರು. ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡು ಬನ್ನಿ ಎಂದಿದ್ದಾರೆ‌ ಎಂದರು.

    ಡಿಕೆಶಿ ಬ್ಲ್ಯಾಕ್‌ಮೇಲ್ ಮಾಡ್ತಾರೆ ಎಂಬ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿ.ಟಿ. ರವಿ ನನ್ನ ಸ್ನೇಹಿತ. ರಾಜ್ಯ ರಾಜಕಾರಣಕ್ಕೆ ಬರ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿನ್ನ ಬ್ಯಾನರ್ ಇಲ್ಯಾಕೆ..?- ವಿಜಯನಗರ ವಿಧಾನಸಭೆ ಕ್ಷೇತ್ರದ ಕೈ ಆಕಾಂಕ್ಷಿಗಳ ಗಲಾಟೆ

    ನಿನ್ನ ಬ್ಯಾನರ್ ಇಲ್ಯಾಕೆ..?- ವಿಜಯನಗರ ವಿಧಾನಸಭೆ ಕ್ಷೇತ್ರದ ಕೈ ಆಕಾಂಕ್ಷಿಗಳ ಗಲಾಟೆ

    ವಿಜಯನಗರ: ಬ್ಯಾನರ್ (Banner) ಹಾಕೋ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತ (Congress Activist) ರ ಗಲಾಟೆ ನಡೆದಿರುವ ಘಟನೆ ಬಳ್ಳಾರಿಯ ವಿಜಯನಗರದಲ್ಲ ನಡೆದಿದೆ.

    ವಿಜಯನಗರ ವಿಧಾನಸಭೆ ಕ್ಷೇತ್ರ (Vijayanagar Vidhanasabha Constituency) ದ ಕೈ ಆಕಾಂಕ್ಷಿಗಳ ನಡುವೆ ಈ ಗಲಾಟೆ ನಡೆದಿದೆ. ನಿನ್ನ ಬ್ಯಾನರ್ ಇಲ್ಯಾಕೆ ಅಂತ ಗಲಾಟೆ ಶುರುವಾಗಿದೆ. ಒಬ್ಬರು ಹಾಕಿಸಿರೋ ಬ್ಯಾನರ್ ಅನ್ನು ಮತ್ತೊಬ್ಬರು ಕಿತ್ತು ಹಾಕಿಸಿ, ಅವರ ಬ್ಯಾನರ್ ಗಳು ಹಾಕಿಸಿದ್ದಾರೆ.

    ಪ್ರಜಾಧ್ವನಿಯಾತ್ರೆ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಆಕಾಂಕ್ಷಿಗಳು ಬ್ಯಾನರ್ ಹಾಕಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಜಶೇಖರ್ ಹಿಟ್ನಾಳ್, ಗವಿಯಪ್ಪ, ಸಿರಾಜ್ ಶೇಕ್, ಸೇರಿದಂತೆ ಅನೇಕ ನಾಯಕರ ಫೋಟೋ ಬ್ಯಾನರ್‍ನಲ್ಲಿತ್ತು. ಇದನ್ನೂ ಓದಿ: KSRTCಯ ಮೊದಲ ಎಲೆಕ್ಟ್ರಿಕ್ ಬಸ್‍ಗೆ ಅಧಿಕೃತ ಚಾಲನೆ- ವೋಲ್ವೋ ಬಸ್‍ಗಿಂತ ಕಡಿಮೆ ದರ ನಿಗದಿ

    ಈ ಗಲಾಟೆ ತಾರಕ್ಕೇರುತ್ತಿದ್ದಂತೆಯೇ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ (Basavaraj Rayareddy) ಎಂಟ್ರಿ ಕೊಟ್ಟಿದ್ದಾರೆ. ಯಾರ ಫೋಟೋಸ್ ಬೇಡ, ಕೇವಲ ರಾಷ್ಟ್ರೀಯ, ರಾಜ್ಯ ನಾಯಕರ ಫೋಟೋಸ್ ಹಾಕಿ ಅಂತ ತಾಕೀತು ಮಾಡಿದ್ದಾರೆ. ಬಳಿಕ ಹೊಸಪೇಟೆಯ ಡಾ. ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಿಂದ ಖಾಸಗಿ ಹೊಟೇಲ್‍ಗೆ ಕರೆದು ಎಲ್ಲರನ್ನೂ ಕೂರಿಸಿ ರಾಯರೆಡ್ಡಿ ಸಮಾಧಾನ ಪಡಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಸ್ತೆಯಲ್ಲಿ ಹಾಕಿದ್ದ ಬಿಜೆಪಿ ಮುಖಂಡ ಮಲ್ಲೇಶ್ ಬ್ಯಾನರ್ ಹರಿದು ಹಾಕಿ ಪತ್ನಿ ರಂಪಾಟ

    ರಸ್ತೆಯಲ್ಲಿ ಹಾಕಿದ್ದ ಬಿಜೆಪಿ ಮುಖಂಡ ಮಲ್ಲೇಶ್ ಬ್ಯಾನರ್ ಹರಿದು ಹಾಕಿ ಪತ್ನಿ ರಂಪಾಟ

    ಬೀದರ್: ಕೌಟುಂಬಿಕ ಕಲಹ ಹಿನ್ನೆಲೆ ರಸ್ತೆಯಲ್ಲಿ ಹಾಕಿದ್ದ ಪತಿ ಹಾಗೂ ಬಿಜೆಪಿ (BJP) ಮುಖಂಡ ಮಲ್ಲೇಶ್ ಬ್ಯಾನರ್ (Banner) ಹರಿದು ಹಾಕಿ ಪತ್ನಿ ರಂಪಾಟ ಮಾಡಿದ ಘಟನೆ ಬೀದರ್ (Bidar) ನಗರದ ಮೈಲೂರು ಕ್ರಾಸ್ ಬಳಿ ನಡೆದಿದೆ.

    ಮಲ್ಲೇಶ್ ಜನ್ಮದಿನ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಿಎಂ ಸೇರಿದಂತೆ ಸಚಿವರು ಹಾಗೂ ಬಿಜೆಪಿ ಮುಖಂಡರ ಜೊತೆ ಬ್ಯಾನರ್ ಹಾಕಲಾಗಿತ್ತು. ಆದರೆ ಮಲ್ಲೇಶ್ ಪತ್ನಿ ಸಾಧನಾ ಈ ಬ್ಯಾನರ್ ಹರಿದು ಹಾಕುವ ಮೂಲಕ ರಂಪಾಟ ನಡೆಸಿದ್ದಾರೆ. ಇದನ್ನೂ ಓದಿ: ತಾಯಿಯಿಂದ ಬೇರ್ಪಟ್ಟ ಮಗುವಿಗೆ ಎದೆಹಾಲು ಉಣಿಸಿದ ಮಹಿಳಾ ಪೇದೆ – ಭಾರೀ ಪ್ರಶಂಸೆ

    ಕಳೆದ ನಾಲ್ಕು ತಿಂಗಳ ಹಿಂದೆ ಪತಿಯ ಅನೈತಿಕ ಸಂಬಂಧದ ಬಗ್ಗೆ ಠಾಣೆಗೆ ದೂರು ನೀಡಿದ್ರು. ಪೊಲೀಸರು ಎಫ್‍ಐಆರ್ (FIR) ದಾಖಲಿಸದ ಕಾರಣ ಇಂದು ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆ ವೇಳೆ ಪತಿಯ ಬ್ಯಾನರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಮಹಿಳೆಯ ನಡುವೆ ಮಾತಿನ ಚಕಮಕಿಯಾಗಿದ್ದು, ಮಹಿಳೆಯ ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಟ್ಟರು.

    ಬಿಜೆಪಿ ಮುಖಂಡ ಸೂರ್ಯಕಾಂತ್ ನಾಗಮಾರಪ್ಪಳ್ಳಿ ಹಾಗೂ ಶಿವಶರಣಪ್ಪ ವಾಲಿ ಮುಂದೆ ನ್ಯಾಯಕ್ಕಾಗಿ ಮಹಿಳೆ ಕಣ್ಣೀರು ಹಾಕಿದ ಪ್ರಸಂಗವು ಈ ವೇಳೆ ನಡೆಯಿತು.

    Live Tv
    [brid partner=56869869 player=32851 video=960834 autoplay=true]

  • ಜಿನ್‌ಪಿಂಗ್ ವಿರುದ್ಧ ಭುಗಿಲೆದ್ದ ಚೀನಾದ ಜನ – ಅಪರೂಪದಲ್ಲಿ ಕಂಡುಬಂತು ಬ್ಯಾನರ್

    ಜಿನ್‌ಪಿಂಗ್ ವಿರುದ್ಧ ಭುಗಿಲೆದ್ದ ಚೀನಾದ ಜನ – ಅಪರೂಪದಲ್ಲಿ ಕಂಡುಬಂತು ಬ್ಯಾನರ್

    ಬೀಜಿಂಗ್: ಚೀನಾದ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ವಿರುದ್ಧ ಅಪರೂಪದಲ್ಲಿ ಅಲ್ಲಿನ ಜನರು ಪ್ರತಿಭಟನೆ (Protest) ನಡೆಸಿರುವುದಾಗಿ ವರದಿಯಾಗಿದೆ. ಬೀಜಿಂಗ್‌ನ (Beijing) ಸಿಟಾಂಗ್ ಸೇತುವೆ ಮೇಲೆ 2 ದೊಡ್ಡ ಬ್ಯಾನರ್‌ಗಳು (Banner) ಕಂಡುಬಂದಿದ್ದು, ಅದರಲ್ಲಿ ಅಧ್ಯಕ್ಷ ಸ್ಥಾನದಿಂದ ಕ್ಸಿ ಜಿನ್‌ಪಿಂಗ್ ಅವರನ್ನು ತೆಗೆದು ಹಾಕುವಂತೆ ಕರೆ ನೀಡಲಾಗಿದೆ.

    ಸೇತುವೆ ಮೇಲೆ ಕಂಡುಬಂದ 1 ಬ್ಯಾನರ್‌ನಲ್ಲಿ ಕೋವಿಡ್ ಪರೀಕ್ಷೆ ಬೇಡ, ಆಹಾರಕ್ಕೆ ಹೌದು ಎನ್ನಿ. ಲಾಕ್‌ಡೌನ್ ಬೇಡ, ಸ್ವಾತಂತ್ರ್ಯಕ್ಕೆ ಹೌದು ಎನ್ನಿ. ಸುಳ್ಳು ಬೇಡ, ಘನತೆಗೆ ಹೌದು ಎನ್ನಿ. ಸಾಂಸ್ಕೃತಿಕ ಕ್ರಾಂತಿ ಬೇಡ, ಸುಧಾರಣೆಗೆ ಹೌದು ಎನ್ನಿ. ಮಹಾನಾಯಕ ಬೇಡ, ಮತ ಚಲಾವಣೆ ಬೇಕು ಎನ್ನಿ. ಗುಲಾಮನಾಗಬೇಡಿ, ಪ್ರಜೆಯಾಗಿರಿ ಎಂದು ಬರೆಯಲಾಗಿದೆ.

    ತೂಗುಹಾಕಲಾಗಿದ್ದ ಇನ್ನೊಂದು ಬ್ಯಾನರ್‌ನಲ್ಲಿ, ಮುಷ್ಕರ ಮಾಡಿ, ಸರ್ವಾಧಿಕಾರಿ ಹಾಗೂ ರಾಷ್ಟ್ರದ್ರೋಹಿ ಕ್ಸಿ ಜಿನ್‌ಪಿಂಗ್ ಅವರನ್ನು ತೆಗೆದುಹಾಕಿ ಎಂದು ಬರೆಯಲಾಗಿದೆ. ಈ ಬ್ಯಾನರ್‌ಗಳ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ತಮ್ಮ ಅಧ್ಯಕ್ಷನ ವಿರುದ್ಧ ಪ್ರತಿಭಟನೆ ನಡೆಸಲು ಚೀನಾದ ಜನರಿಗೆ ಮನವೊಲಿಸಲಾಗುತ್ತಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಿಸಿಸಿಐಗೆ ಜಿಎಸ್‍ಟಿ ಬರೆ – 2023ರ ವಿಶ್ವಕಪ್‍ಗೂ ಮುನ್ನ 955 ಕೋಟಿ ರೂ. ನಷ್ಟದ ಭೀತಿ

    ಬೀಜಿಂಗ್‌ನಲ್ಲಿ ಕಮ್ಯುನಿಸ್ಟ್ ನಾಯಕತ್ವವನ್ನು ಟೀಕಿಸುವ ಬ್ಯಾನರ್‌ಗಳನ್ನು ತೂಗುಹಾಕಲಾಗಿದೆ ಎಂಬ ಸುದ್ದಿ ಹರಡುತ್ತಲೇ ಚೀನಾ ಈ ಸುದ್ದಿಯನ್ನು ತಕ್ಷಣವೇ ಅಲ್ಲಗೆಳೆದಿದೆ. ಈ ಪ್ರದೇಶದಲ್ಲಿ ಯಾವುದೇ ನಾಯಕತ್ವ ವಿರೋಧಿ ಘಟನೆ ನಡೆದಿಲ್ಲ ಎಂದು ಚೀನಾ ಪೊಲೀಸರು ಹೇಳಿದ್ದಾರೆ.

    ಪಾಶ್ಚಿಮಾತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಚಿತ್ರಗಳು ಮತ್ತು ವೀಡಿಯೊಗಳು ಹರಡಿದಾಡುತ್ತಿದ್ದಂತೆಯೇ, ಚೀನಾವು ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಿಂದ ಚಿತ್ರಗಳ ಪ್ರತಿಯೊಂದು ಕುರುಹುಗಳನ್ನು ತೆಗೆದುಹಾಕಿದೆ. ಚೀನಾದ ಮ್ಯಾಂಡರಿನ್ ಭಾಷೆಯಲ್ಲಿ ಬರೆಯಲಾಗಿದ್ದ ಕೆಲ ಟ್ವಿಟ್ಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ.

    ಕ್ಸಿ ಜಿನ್‌ಪಿಂಗ್ ಅವರು 2012 ರಲ್ಲಿ ಚೀನಾದ ಅಧ್ಯಕ್ಷರಾಗಿ ನೇಮಕವಾಗಿದ್ದು, ಇದೇ ಭಾನುವಾರದಂದು 3ನೇ ಅವಧಿಗೆ ಮತ್ತೆ 5 ವರ್ಷ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ನಮ್ಮಲ್ಲಿ ಮೂನ್‌ಲೈಟಿಂಗ್‌ಗೆ ಜಾಗ ಇಲ್ಲ – ಉದ್ಯೋಗಿಗಳನ್ನು ವಜಾಗೊಳಿಸಿದ ಇನ್ಫೋಸಿಸ್‌

    Live Tv
    [brid partner=56869869 player=32851 video=960834 autoplay=true]

  • ರಮ್ಯಾ ಬ್ಯಾನರ್ ನಿಂದ ಮೊದಲ ಅವಕಾಶಗಿಟ್ಟಿಸಿಕೊಂಡ ನಿರ್ದೇಶಕ ಯಾರು? ಕರಾವಳಿ ಹುಡುಗನಿಗೆ ಒಲಿದ ಅವಕಾಶ

    ರಮ್ಯಾ ಬ್ಯಾನರ್ ನಿಂದ ಮೊದಲ ಅವಕಾಶಗಿಟ್ಟಿಸಿಕೊಂಡ ನಿರ್ದೇಶಕ ಯಾರು? ಕರಾವಳಿ ಹುಡುಗನಿಗೆ ಒಲಿದ ಅವಕಾಶ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೊನ್ನೆಯಷ್ಟೇ ತಮ್ಮ ಹೊಸ ಬ್ಯಾನರ್ ಘೋಷಣೆ ಮಾಡಿದ್ದಾರೆ. ಅದಕ್ಕೆ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಅಂತ ಹೆಸರು ಇಟ್ಟಿದ್ದಾರೆ. ಪ್ರೊಡಕ್ಷನ್ ಹೆಸರು ಘೋಷಣೆ ಮಾಡುವ ದಿನವೇ ಎರಡು ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ವಿಷಯವನ್ನೂ ಬಹಿರಂಗ ಪಡಿಸಿದ್ದರು. ಆ ಎರಡು ಸಿನಿಮಾಗಳನ್ನು ಯಾರೆಲ್ಲ ಮಾಡಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು. ಮೂಲಗಳ ಪ್ರಕಾರ ಕರಾವಳಿ ಹುಡುಗ ರಾಜ್ ಬಿ ಶೆಟ್ಟಿ ಮೊದಲ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    ರಮ್ಯಾ ಅವರಿಗೆ ಸಿನಿಮಾ ಮಾಡುತ್ತಿಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳುತ್ತಿದ್ದರೂ, ಆ್ಯಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯಿಂದ ರಾಜ್ ಬಿ ಶೆಟ್ಟಿ ಅವರೇ ಮೊದಲ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಈ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿಲ್ಲ. ಹಾಗಾಗಿ ರಮ್ಯಾಗೆ ಸಿನಿಮಾ ಮಾಡುತ್ತಿಲ್ಲವೆಂದು ಮಾತು ಬದಲಿಸುತ್ತಿದ್ದಾರಂತೆ ರಾಜ್ ಬಿ. ಶೆಟ್ಟಿ. ಆದರೆ, ಇವರೇ ಮೊದಲ ಸಿನಿಮಾ ನಿರ್ದೇಶನ ಮಾಡುವುದು ಪಕ್ಕಾ ಎನ್ನುತ್ತಿವೆ ಬಲ್ಲ ಮೂಲಗಳು. ಇದನ್ನೂ ಓದಿ: ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ಈಗಾಗಲೇ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಎರಡು ಹಂತದಲ್ಲಿ ಮಾತುಕತೆ ಕೂಡ ಮಾಡಿದ್ದಾರೆ. ಸ್ವತಃ ರಮ್ಯಾ ಮನೆಗೆ ಹೋಗಿ ಶೆಟ್ಟಿ ಅವರು ಕಥೆ ಕೂಡ ಹೇಳಿ ಬಂದಿದ್ದಾರೆ. ಮುಂದಿನ ಹಂತದ ಕೆಲಸಗಳಲ್ಲೂ ಅವರು ತೊಡಗಿದ್ದಾರೆ. ರಮ್ಯಾ ಅವರೇ ಈ ವಿಷಯವನ್ನು ಬಹಿರಂಗ ಪಡಿಸಲಿ ಎಂದು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ರಮ್ಯಾ ಅವರ ಮೊದಲ ನಿರ್ಮಾಣದ ಸಿನಿಮಾ ರಾಜ್ ಬಿ ಶೆಟ್ಟಿ ಅವರದ್ದೇ ಆಗಿರಲಿದೆ.

    Live Tv
    [brid partner=56869869 player=32851 video=960834 autoplay=true]

  • ಅನಧಿಕೃತ ಫ್ಲೆಕ್ಸ್, ಬ್ಯಾನರ್ ವಿರುದ್ಧ ಫೀಲ್ಡ್‌ಗಿಳಿದ ಬಿಬಿಎಂಪಿ ಅಧಿಕಾರಿಗಳು

    ಅನಧಿಕೃತ ಫ್ಲೆಕ್ಸ್, ಬ್ಯಾನರ್ ವಿರುದ್ಧ ಫೀಲ್ಡ್‌ಗಿಳಿದ ಬಿಬಿಎಂಪಿ ಅಧಿಕಾರಿಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಧಿಕೃತ ಪ್ಲೆಕ್ಸ್ ಬ್ಯಾನರ್ ವಿರುದ್ಧ ಈಗ ಬಿಬಿಎಂಪಿ ಅಧಿಕಾರಿಗಳು ಫೀಲ್ಡ್ ಗಿಳಿದಿದ್ದಾರೆ.

    ಅನುಮತಿ ಪಡೆಯದೇ ನಿರ್ಮಾಣವಾಗಿರುವ ಬ್ಯಾನರ್ ಅಂಗಡಿಗಳಿಗೆ ತೆರಳಿ ಅಂಗಡಿಗಳನ್ನು, ಬ್ಯಾನರ್ ಗಳನ್ನು ಸೀಝ್ ಮಾಡುತ್ತಿದೆ. ನಗರದಲ್ಲಿ ಫ್ಲೆಕ್ಸ್ ಆಳವಡಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಪದೇ ಪದೇ ಹೈಕೋರ್ಟ್ ಚಾಟಿ ಬೀಸುತ್ತಲೇ ಇದೆ. ಇದನ್ನೂ ಓದಿ: ರಾಜ್ಯದಲ್ಲಿ ಮಂಕಿಪಾಕ್ಸ್ ಬಗ್ಗೆ ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ

    ಫ್ಲೆಕ್ಸ್ ಬ್ಯಾನರ್ ಬಳಕೆ ಮಾಡಬಾರದು ಅಂತಾ ನಿರ್ದೇಶನ ಇದ್ರೂ ಜನಪ್ರತಿನಿಧಿಗಳೇ ಇದನ್ನು ಉಲ್ಲಂಘಿಸುತ್ತಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕೋಕೆ ಬಿಬಿಎಂಪಿ ಹಿಂದೇಟು ಹಾಕುತ್ತಿದೆ. ಆದರೆ ಈಗ ಕೊನೆಗೂ ಎಚ್ಚೆತ್ತು ಗಾಂಧಿನಗರದಲ್ಲಿ ಅಕ್ರಮ ಪ್ಲೆಕ್ಸ್ ಬ್ಯಾನರ್ ಅಂಗಡಿಗಳಿಗೆ ಬಿಸಿ ಮುಟ್ಟಿಸುವ ಕೆಲ್ಸವನ್ನು ಬಿಬಿಎಂಪಿ ಮಾಡಿದೆ.

    ಮುಂದಿನ ದಿನದಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್‍ಗಳಲ್ಲಿಯೂ ಈ ಪರಿಶೀಲನಾ ಕಾರ್ಯ ನಡೆಸೋದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]