Tag: bankok

  • ಟಾಯ್ಲೆಟ್ ಕಮೋಡ್‍ನಿಂದ ಹೊರ ಬಂತು ವಿಷಕಾರಿ ಹಲ್ಲಿ – ಪ್ರೇಮಿಗಳು ಶಾಕ್!

    ಟಾಯ್ಲೆಟ್ ಕಮೋಡ್‍ನಿಂದ ಹೊರ ಬಂತು ವಿಷಕಾರಿ ಹಲ್ಲಿ – ಪ್ರೇಮಿಗಳು ಶಾಕ್!

    ಬ್ಯಾಂಕಾಕ್: ಬ್ರಿಟಿಷ್ ವ್ಯಕ್ತಿ ಮತ್ತು ಅವರ ಗೆಳತಿ ರಜೆ ಸಮಯ ಕಳೆಯಲು ಥೈಲ್ಯಾಂಡ್ ಪ್ರವಾಸಕ್ಕೆಂದು ಬಂದು ತಂಗಿದ್ದ ಹೋಟೆಲ್ ರೂಮ್‍ವೊಂದರಲ್ಲಿ ವಿಲಕ್ಷಣ ಘಟನೆಯೊಂದು ಸಂಭವಿಸಿದೆ. ಅವರ ಶೌಚಾಲಯದ ಕಮೋಡ್‍ನಿಂದ ಮಾನಿಟರ್ ಹಲ್ಲಿಯೊಂದು ಹೊರಬಂದಿದ್ದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

    ಗೆಳತಿಯೊಂದಿಗೆ ಪಾಥುಮ್ ಥಾನಿಗೆ ಪ್ರವಾಸಕ್ಕೆಂದು ಬಂದಿದ್ದ. ವ್ಯಕ್ತಿ ಶೌಚಾಲಯದಲ್ಲಿ ಮಾನಿಟರ್ ಹಲ್ಲಿಯನ್ನು ನೋಡಿ ಆಘಾತಕ್ಕೊಳಗಾಗಿದ್ದಾನೆ. ಅದು ನಂತರ ಕಮೋಡ್‍ನಿಂದ ತಾನಾಗಿಯೇ ಕಣ್ಮರೆಯಾಗಿದೆ. ಇದನ್ನೂ ಓದಿ: ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಸಲೀಸಾಗಿ ತಿಂದ ಭೂಪ

    ಈ ನೀರಿನ ಮಾನಿಟರ್ ಹಲ್ಲಿಗಳು ಥೈಲ್ಯಾಂಡ್‍ನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಕೊಳ ಮತ್ತು ಕಾಲುವೆಗಳಲ್ಲಿ ವಾಸಿಸುತ್ತವೆ. ಮಾನಿಟರ್ ಹಲ್ಲಿಗಳು ವಿಷಪೂರಿತ ಪ್ರಭೇದಗಳಾಗಿವೆ. ಇವು ಕಚ್ಚಿದಾಗ ಹಾನಿಕಾರಕ ಬ್ಯಾಕ್ಟೀರಿಯಾ ದೇಹದಲ್ಲಿ ವಿಷವಾಗಿ ಮಾರ್ಪಟ್ಟು ಸಮಸ್ಯೆಯಾಗುತ್ತದೆ. ದಂಪತಿಯು ಅದೃಷ್ಟವಶಾತ್ ಅದರ ಆಕ್ರಮಣದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

    ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಫೋಟೋದಲ್ಲಿ ಮಾನಿಟರ್ ಹಲ್ಲಿಯು ನೋಡಲು ಡೈನೊಸಾರ್ ಆಕಾರದಲ್ಲಿದ್ದು, ಕಪ್ಪು ಬಿಳಿಯ ಬಣ್ಣದ ಚರ್ಮವನ್ನು ಹೊಂದಿದೆ.

  • `ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರಕ್ಕೆ ಬ್ಯಾಂಕಾಕ್‍ನಲ್ಲಿ ಮುಹೂರ್ತ

    `ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರಕ್ಕೆ ಬ್ಯಾಂಕಾಕ್‍ನಲ್ಲಿ ಮುಹೂರ್ತ

    ಬೆಂಗಳೂರು: ಬಿಲ್ವ ಎಂಟರ್ ಟೈನ್‍ಮೆಂಟ್ ಲಾಂಛನದಲ್ಲಿ ನವೀನ್ ಕುಮಾರ್ ಜಿ.ಆರ್ ಅವರು ನಿರ್ಮಿಸುತ್ತಿರುವ `ಕಾಣೆಯಾದವರ ಬಗ್ಗೆ ಪ್ರಕಟಣೆ` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬ್ಯಾಂಕಾಕ್‍ನಲ್ಲಿ ನಡೆಯಿತು. 16 ದಿನಗಳ ಕಾಲ ಬ್ಯಾಂಕಾಕ್‍ನಲ್ಲೇ ಚಿತ್ರೀಕರಣ ನಡೆಯಲಿದ್ದು, 35 ಜನರ ತಂಡ ಅಲ್ಲಿಗೆ ಪ್ರಯಾಣ ಬೆಳೆಸಿದೆ. ಮಾತಿನ ಭಾಗ ಹಾಗೂ ಒಂದು ಹಾಡಿನ ಚಿತ್ರೀಕರಣ ಬ್ಯಾಂಕಾಕ್‍ನಲ್ಲಿ ನಡೆಯಲಿದೆ.

    ಈ ಹಿಂದೆ `ಶಕ್ತಿ`, `ದಿಲ್‍ವಾಲ`, `ಕೃಷ್ಣ ರುಕ್ಕು`, `ರ್ಯಾಂಬೋ 2` `ಕಿರಾತಕ 2`, ದಾರಿ ತಪ್ಪಿದ ಮಗ` ಸೇರಿದಂತೆ ಆರು ಚಿತ್ರಗಳ ನಿರ್ದೇಶಕರಾಗಿರುವ ಅನಿಲ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ನಿರ್ದೇಶನದ ಏಳನೇ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಅನಿಲ್ ಕುಮಾರ್ ಅವರೇ ಬರೆದಿದ್ದಾರೆ.

    65 ವರ್ಷ ಮೇಲ್ಪಟವರ (ಹಿರಿಯ ನಾಗರಿಕರ) ಬಗ್ಗೆಗಿನ ಕಥಾ ಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರವಿಶಂಕರ್, ರಂಗಾಯಣ ರಘು, ತಬಲನಾಣಿ, ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ.

    ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಶಿವಕುಮಾರ್ ಬಿ.ಕೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಡಾ.ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.