Tag: bank robbery

  • ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಗಳು-ಚೇಸಿಂಗ್ ಮಾಡಿದ್ರೂ ರಾಬರಿ ಗ್ಯಾಂಗ್ ಎಸ್ಕೇಪ್

    ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಗಳು-ಚೇಸಿಂಗ್ ಮಾಡಿದ್ರೂ ರಾಬರಿ ಗ್ಯಾಂಗ್ ಎಸ್ಕೇಪ್

    -ಗ್ಯಾಂಗ್ ಪ್ಲಾನ್ ಫೇಲ್ ಆಗಿದ್ದು ಹೇಗೆ?

    ಬೀದರ್: ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ ಯತ್ನಿಸಿರುವ ಘಟನೆ ನಗರದ ಮಡಿವಾಳ ವೃತ್ತದ ಬಳಿಯ ಮುತ್ತೂಟ್ ಬ್ಯಾಂಕ್ ಬಳಿ ನಡೆದಿದೆ.

    ಮುಖಕ್ಕೆ ಮಾಸ್ಕ್ ಧರಿಸಿ ಬಂದ 6 ಮಂದಿ ದುಷ್ಕರ್ಮಿಗಳು ಬ್ಯಾಂಕ್ ಒಳಗೆ ಏಕಾಏಕಿ ನುಗ್ಗಿ ಸಿಬ್ಬಂದಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ಹಣ ದೋಚಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಬ್ಯಾಂಕ್ ಸಿಬ್ಬಂದಿಯೊಬ್ಬರು ಸದ್ದಿಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕುರಿತು ಮಾಹಿತಿ ಪಡೆದ ಕ್ಷಣ ಮಾತ್ರದಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದರೆ ದರೋಡೆ ಮಾಡುವ ವೇಳೆ ಗುಂಪಿನ ಆರೋಪಿ ಬ್ಯಾಂಕ್ ಮುಂದೇ ನಿಂತು ಪರಿಶೀಲನೆ ನಡೆಸಿದ್ದು, ಪೊಲೀಸ್ ವಾಹನ ಕಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

    ನಡೆದಿದ್ದೇನು?
    6 ಮಂದಿಯ ದರೋಡೆ ಗುಂಪು ಮುಖಕ್ಕೆ ಮಾಸ್ಕ್ ಧರಿಸಿ ಬೆಳಗ್ಗೆ 9 ಗಂಟೆ ಸಮಯದಲ್ಲಿ ಆಗಮಿಸಿದ್ದರು. ಮೊದಲೇ ಪ್ಲಾನ್ ರೂಪಿಸಿದಂತೆ ಕಂಡು ಬಂದ ಗುಂಪು ಏಕಾಏಕಿ ಬ್ಯಾಂಕ್ ಪ್ರವೇಶ ಮಾಡಿತ್ತು. ಇದಾದ ಬಳಿಕ ಕೆಲ ಸಮಯದಲ್ಲೇ ಬ್ಯಾಂಕ್ ನಿಂದ ಹೊರ ಬಂದ ಆರೋಪಿಗಳು ಕಾರು ಹತ್ತಿ ಪರಾರಿಯಾಗಲು ಸಿದ್ಧರಿದ್ದರು. ಆದರೆ ಆ ವೇಳೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಬ್ಯಾಂಕ್ ಮುಂದೇ ಕಾರ್ಯಾಚರಣೆ ನಡೆಲು ಸಿದ್ಧತೆ ನಡೆಸಿತ್ತು.

    ಕ್ಷಣ ಮಾತ್ರದಲ್ಲಿ ಪೊಲೀಸರನ್ನು ಕಣ್ಣು ತಪ್ಪಿಸಿದ ಖದೀಮರು ಕಾರಿನ ಸಮೇತ ಪರಾರಿಯಾದರು. ಕೂಡಲೇ ಪೊಲೀಸರು ದರೋಡೆಕೋರರ ಕಾರು ಹಿಂಬಾಲಿಸಿದರು. ಪೊಲೀಸರು ತಮ್ಮನ್ನ ಫಾಲೋ ಮಾಡುತ್ತಿದ್ದಾರೆ ಎಂಬ ವಿಷಯ ಅರಿತ ದರೋಡೆಕೋರರು ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

    ಘಟನೆ ವೇಳೆ ಬ್ಯಾಂಕಿನಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಿಬ್ಬಂದಿ ಕಾರಣ ದರೋಡೆ ಯತ್ನ ನಡೆದಿದೆ. ಈ ಎಲ್ಲಾ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳ ಆಧಾರ ಮೇಲೆ ದರೋಡೆಗೆ ಯತ್ನಿಸಿದ ಆರೋಪಿಗಳನ್ನ ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ಯಾಂಕಿಗೆ 25 ಅಡಿ ಉದ್ದದ ಸುರಂಗ ಕೊರೆದು 30 ಲಾಕರ್‍ಗಳನ್ನ ಲೂಟಿ ಹೊಡೆದ ಖದೀಮರು!

    ಬ್ಯಾಂಕಿಗೆ 25 ಅಡಿ ಉದ್ದದ ಸುರಂಗ ಕೊರೆದು 30 ಲಾಕರ್‍ಗಳನ್ನ ಲೂಟಿ ಹೊಡೆದ ಖದೀಮರು!

     

    ಮುಂಬೈ: ಸಿನಿಮೀಯ ರೀತಿಯಲ್ಲಿ ಖದೀಮರು 25 ಅಡಿ ಉದ್ದದ ಸುರಂಗ ಕೊರೆದು ಬ್ಯಾಂಕ್‍ಗೆ ಕನ್ನ ಹಾಕಿ, 40 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನ ಲೂಟಿ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ನವೀ ಮುಂಬೈ ಬಳಿ ಜುಯಿನಗರ್‍ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಶನಿವಾರ ಮತ್ತು ಭಾನುವಾರದ ನಡುವೆ ಈ ದರೋಡೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಈ ದರೋಡೆಗೆ ಕಳ್ಳರು ಸುಮಾರು 5 ತಿಂಗಳಿನಿಂದ ಪ್ಲ್ಯಾನ್ ಮಾಡಿರಬಹುದು ಎಂದು ಶಂಕಿಸಲಾಗಿದೆ.

    ಬ್ಯಾಂಕ್ ಸಿಬ್ಬಂದಿ ಸೋಮವಾರದಂದು ಕೆಲಸಕ್ಕೆ ಬಂದ ನಂತರ, ಲಾಕರ್ ರೂಮಿಗೆ ಹೋದಾಗ ಕೆಲವು ಲಾಕರ್‍ಗಳು ಓಪನ್ ಆಗಿದ್ದನ್ನು ನೋಡಿದ್ದಾರೆ. ಆಗ ದರೋಡೆ ನಡೆದಿರೋದು ಬೆಳಕಿಗೆ ಬಂದಿದೆ.

    ಆರೋಪಿಗಳು ಬ್ಯಾಂಕ್ ಪಕ್ಕದಲ್ಲೇ ಇದ್ದ ಅಂಗಡಿಯೊಂದನ್ನ ಮೇನಲ್ಲಿ ಬಾಡಿಗೆಗೆ ಪಡೆದಿದ್ದರು. ಅಂದಿನಿಂದ ಸುರಂಗ ಕೊರೆಯಲು ಶುರು ಮಾಡಿದ್ದರು. ಬ್ಯಾಂಕ್ ಆಫ್ ಬರೋಡಾದ ಲಾಕರ್ ರೂಮ್ ತಲುಪಲು ಸುಮಾರು 25 ಅಡಿ ಉದ್ದದ ಸುರಂಗ ಕೊರೆದಿದ್ದಾರೆ. ಅಲ್ಲಿದ್ದ 225 ಲಾಕರ್‍ಗಳಲ್ಲಿ 30 ಲಾಕರ್‍ಗಳನ್ನ ತೆರೆದಿದ್ದು, 40 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ಸೋಮವಾರದಂದು ಬ್ಯಾಂಕ್ ಸಿಬ್ಬಂದಿ ಕೆಲಸಕ್ಕೆ ಮರಳಿದಾಗ ದರೋಡೆ ನಡೆದಿರೋದು ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಸದ್ಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದೇವೆ. ದರೋಡೆಯಾಗಿರುವ ವಸ್ತುಗಳ ನಿರ್ದಿಷ್ಟ ಮೌಲ್ಯ ಇನ್ನಷ್ಟೇ ತಿಳಿದುಬರಬೇಕು. ಕಳುವಾಗಿರುವ ವಸ್ತುಗಳ ಬೆಲೆ ಸುಮಾರು 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಘಟನೆ ಕುರಿತು ಸನ್ಪಾದಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ನವೀ ಮುಂಬೈ ಪೊಲೀಸ್ ಆಯುಕ್ತರಾದ ಹೇಮಂತ್ ನಗ್ರಾಲೆ ಹೇಳಿದ್ದಾರೆ.

  • ವಿಶ್ವದ ಅತೀ ದೊಡ್ಡ ದರೋಡೆ ಯತ್ನ ಠುಸ್- 2 ಸಾವಿರ ಕೋಟಿ ರೂ. ಕದಿಯಲು ಬ್ಯಾಂಕ್‍ಗೆ 4 ತಿಂಗಳು ಸುರಂಗ ಕೊರೆದು ಸಿಕ್ಕಿಬಿದ್ರು

    ವಿಶ್ವದ ಅತೀ ದೊಡ್ಡ ದರೋಡೆ ಯತ್ನ ಠುಸ್- 2 ಸಾವಿರ ಕೋಟಿ ರೂ. ಕದಿಯಲು ಬ್ಯಾಂಕ್‍ಗೆ 4 ತಿಂಗಳು ಸುರಂಗ ಕೊರೆದು ಸಿಕ್ಕಿಬಿದ್ರು

     

    ಸಾವೋ ಪೌಲೋ: ಬ್ಯಾಂಕ್ ಕಳ್ಳತನ ಮಾಡಲು ಸರಿಸುಮಾರು 2 ಸಾವಿರ ಅಡಿ ಸುರಂಗ ಕೊರೆದಿದ್ದ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

    ಇಲ್ಲಿನ ಸಾವೋ ಪೌಲೋನಲ್ಲಿನ ಬ್ಯಾಂಕ್‍ನಲ್ಲಿ ಕಳ್ಳರು ದರೋಡೆಗೆ ಯತ್ನಿಸಿದ್ದರು. ಈ ಗ್ಯಾಂಗ್ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಸುರಂಗ ಕಾರ್ಯ ಕೊನೆ ಹಂತ ತಲುಪುವ ವೇಳೆಗೆ ಸೆಪ್ಟೆಂಬರ್ 27 ರಂದು ಒಳಗೆ ಹೋಗಲು ನಿರ್ಧರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 16 ಮಂದಿಯನ್ನ ಸೋಮವಾರದಂದು ಬಂಧಿಸಿದ್ದಾರೆ.

    ಬ್ಯಾಂಕೋ ಡೋ ಬ್ರೆಜಿಲ್‍ನ ಶಾಖೆಯೊಂದರಲ್ಲಿ ಕಳ್ಳತನ ಮಾಡಲು ಈ ಗುಂಪು ಸುರಂಗದ ಮೂಲಕ ಎಂಟ್ರಿ ಕೊಡುವ ವೇಳೆಯೇ ಪೊಲೀಸರು ದಾಳಿ ಮಾಡಿದ್ದಾರೆ. ಒಂದು ಬಿಲಿಯನ್ ರಿಯಲ್(ಅಂದಾಜು 2 ಸಾವಿರ ಕೋಟಿ ರೂ.) ಹಣ ಕಳ್ಳತನ ಮಾಡಲು ಯತ್ನಿಸಿದ್ದಾಗಿ ತಂಡ ಹೇಳಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಒಂದು ವೇಳೆ ಈ ದರೋಡೆ ನಡೆದುಬಿಟ್ಟಿದ್ದರೆ ಇದು ವಿಶ್ವದ ಅತ್ಯಂತ ದೊಡ್ಡ ದರೋಡೆಯಾಗುತ್ತಿತ್ತು ಎಂದು ಪೊಲೀಸ್ ಮುಖ್ಯಸ್ಥ ಫಾಬಿಯೋ ಪಿನ್ಹೀರೋ ಲೋಪ್ಸ್ ಇಲ್ಲಿನ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಆದ್ರೆ ಈ ಕಳ್ಳರ ಗುಂಪು ಚೇಂಬರ್‍ನ ಗೋಡೆಯವರೆಗೆ ಹೋದರಾದ್ರೂ ಸೇಫ್ ಲಾಕರ್ ತಲುಪಲು ಸಾಧ್ಯವಾಗಿರಲಿಲ್ಲ. ಸುರಂಗ ಕೊರೆಯಲು ಈ ಗುಂಪು ಸುಮಾರು 8.3 ಕೋಟಿ ರೂ ಹಣ ಹೂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆಯಲು ಆರಂಭಿಸಿದ್ದರು. ಸುರಂಗದೊಳಗೆ ಫ್ಯಾನ್, ಲೈಟ್ ದೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳಿದ್ದವು. ಮರದ ತುಂಡುಗಳು ಮತ್ತು ಕಬ್ಬಿಣದ ಬಾರ್‍ಗಳನ್ನ ಸುರಂಗಕ್ಕೆ ಬಳಸಿದ್ದರು. ಇದರಲ್ಲಿ ವಯಸ್ಕ ವ್ಯಕ್ತಿಯೊಬ್ಬ ಎದ್ದುನಿಲ್ಲುವಷ್ಟು ದೊಡ್ಡದಾಗಿತ್ತು.

     

    ಇಲ್ಲಿನ ಚಾಕಾರಾ ಸಾಂಟೋ ಆಂಟೋನಿಯೋದಲ್ಲಿನ ಬಾಡಿಗೆ ಮನೆಯೊಂದರಿಂದ ಸುರಂಗ ಶುರುವಾಗಿತ್ತು. ಈ ಮನೆಯಲ್ಲಿ ಆಹಾರ ಮತ್ತು ಸಲಕರಣೆಗಳನ್ನ ಶೇಖರಣೆ ಮಾಡಲಾಗಿತ್ತು. ಬ್ಯಾಂಕ್ ಕಡೆಗೆ ಹೋಗುವ ರಸ್ತೆಯ ಕೆಳಗೆ ಸುರಂಗ ಮಾರ್ಗವನ್ನ ಕೊರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    https://www.youtube.com/watch?v=LmlH2z11uio