Tag: Bank of Baroda

  • ಬ್ಯಾಂಕ್ ಖಾತೆಯಿಂದ ಹೆಂಡತಿಯ ಖಾತೆಗೆ 2.69 ಕೋಟಿ ರೂ. ವರ್ಗಾವಣೆ ಮಾಡಿ ನಾಪತ್ತೆಯಾದ ಬ್ಯಾಂಕ್ ಸಿಬ್ಬಂದಿ

    ಬ್ಯಾಂಕ್ ಖಾತೆಯಿಂದ ಹೆಂಡತಿಯ ಖಾತೆಗೆ 2.69 ಕೋಟಿ ರೂ. ವರ್ಗಾವಣೆ ಮಾಡಿ ನಾಪತ್ತೆಯಾದ ಬ್ಯಾಂಕ್ ಸಿಬ್ಬಂದಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ (Uttara Kannada) ಯಲ್ಲಾಪುರ ಪಟ್ಟಣದ ಬ್ಯಾಂಕ್ ಆಫ್ ಬರೋಡಾ Bank Of Baroda ಶಾಖೆಯ ಸಹಾಯಕ ವ್ಯವಸ್ಥಾಪಕನೇ (Branch Officer)  ಬ್ಯಾಂಕಿನ ಖಾತೆಯಿಂದ ತನ್ನ ಹೆಂಡತಿಯ (Wife) ಖಾತೆಗೆ 2.69 ಕೋಟಿ ರೂ. ವರ್ಗಾವಣೆ ಮಾಡಿ ಎಸ್ಕೇಪ್ ಆಗಿದ್ದಾನೆ.

    ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿರುವ ಆಂಧ್ರಪ್ರದೇಶ ಮೂಲದ ಕುಮಾರ ಕೃಷ್ಣಮೂರ್ತಿ ಬೋನಾಲ ಎಂಬಾತ ಕಳೆದ ಏಪ್ರಿಲ್ 7 ರಿಂದ ಸೆ.9 ರವರೆಗಿನ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತನ್ನ ಹೆಂಡತಿಯ ಖಾತೆಗೆ ವರ್ಗಾವಣೆ ಮಾಡಿ ಇದೀಗ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ: ಅಪ್ಘಾನಿಸ್ತಾನದಲ್ಲಿ ಆನ್‌ಲೈನ್ ಶಾಪಿಂಗ್ ಸ್ಥಗಿತ

    ಬ್ಯಾಂಕ್ ಸಿಬ್ಬಂದಿಯ ಲಾಗಿನ್ ಐಡಿಯನ್ನು ಅವರ ಗಮನಕ್ಕೆ ಬಾರದಂತೆ ಉಪಯೋಗಿಸಿಕೊಂಡು ಆಂಧ್ರದ ಚಿರಲಾದ ಎಸ್‍ಬಿಐ (SBI) ಬ್ಯಾಂಕ್‍ನಲ್ಲಿ ಖಾತೆ ಹೊಂದಿರುವ ಪತ್ನಿ ರೇವತಿ ಪ್ರಿಯಾಂಕ ಗೊರ್ರೆಯ ಖಾತೆಗೆ 2.69 ಕೋಟಿ ರೂ. ವರ್ಗಾವಣೆ ಮಾಡಿ ನಾಪತ್ತೆಯಾಗಿದ್ದಾನೆ. ಈ ಕುರಿತು ಶಾಖಾ ವ್ಯವಸ್ಥಾಪಕ ವಿಶ್ವೇಶ್ವರ ಭಟ್ ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ದರ್ಶನ ನೀಡಲಿರುವ ಅಯೋಧ್ಯೆ ಶ್ರೀರಾಮಚಂದ್ರ

    Live Tv
    [brid partner=56869869 player=32851 video=960834 autoplay=true]

  • ಕೋವಿಶೀಲ್ಡ್ ತಯಾರಿಕಾ ಕಂಪನಿಗೆ 500 ಕೋಟಿ ತುರ್ತು ಸಾಲ

    ಕೋವಿಶೀಲ್ಡ್ ತಯಾರಿಕಾ ಕಂಪನಿಗೆ 500 ಕೋಟಿ ತುರ್ತು ಸಾಲ

    ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಕೋವಿಡ್ ವಿರುದ್ಧ ಹೋರಾಟದಲ್ಲಿ ಆರೋಗ್ಯ ಮೂಲಸೌಕರ್ಯಕ್ಕಾಗಿ 50 ಸಾವಿರ ಕೋಟಿ ರೂ.ಗಳನ್ನ ಸಾಲದ ರೂಪದಲ್ಲಿ ನೀಡೋದಾಗಿ ಬುಧವಾರ ಹೇಳಿತ್ತು. ಇದರ ಮೊದಲ ಲಾಭ ಕೋವಿಶೀಲ್ಡ್ ತಯಾರಿಕೆಯ ಸೀರಂ ಸಂಸ್ಥೆಗೆ ಲಭ್ಯವಾಗಿದ್ದು, ಬ್ಯಾಂಕ್ ಆಫ್ ಬರೋಡಾ 500 ಕೋಟಿ ರೂ. ಸಾಲ ನೀಡುವ ಬಗ್ಗೆ ನಿರ್ಧರಿಸಿದೆ.

    ಭಾರತದಲ್ಲಿ ಮೂರು ಕೊರೊನಾ ಲಸಿಕೆ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಲ್ಲಿ ಕೋವಿಶೀಲ್ಡ್ ಹೆಚ್ಚು ಪೂರೈಕೆಯಾಗುತ್ತಿದ್ದು, ಬಳಕೆಯಾಗ್ತಿದೆ. ಹಾಗಾಗಿ ಕೋವಿಶೀಲ್ಡ್ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿ ಬ್ಯಾಂಕ್ ಆಫ್ ಬರೋಡಾ ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡಲು ಮುಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋವ್ಯಾಕ್ಸಿನ್ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ ಗೆ ಲೋನ್ ನೀಡಲು ಮುಂದಾಗಿದೆ. ಆದ್ರೆ ಸಾಲದ ಮೊತ್ತವನ್ನ ಬಹಿರಂಗಪಡಿಸಿಲ್ಲ.

    ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಆರ್ ಬಿಐ, ಕೋವಿಡ್ ಹೋರಾಟದಲ್ಲಿ ಭಾಗಿಯಾಗುತ್ತಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳಿಗೆ ನೆರವು ನೀಡಲಾಗುವುದು. ಬ್ಯಾಂಕ್‍ಗಳು ವ್ಯಾಕ್ಸಿನ್ ತಯಾರಿಕೆ ಕಂಪನಿಗಳು, ಆಮದುದಾರರಿಗೆ, ಆಕ್ಸಿಜನ್ ಪೂರೈಕೆದಾರರಿಗೆ, ಔಷಧಿ ಕಂಪನಿಗಳು, ಲ್ಯಾಬ್, ಆಸ್ಪತ್ರೆಗಳಿಗೂ ಲೋನ್ ಸಿಗಲಿದೆ ಎಂದು ಹೇಳಿತ್ತು. ಈ ಸೌಲಭ್ಯ ಮಾರ್ಚ್ 31, 2022ರವರೆಗೆ ಇರಲಿದೆ ಎಂದು ಆರ್ ಬಿಐ ಹೇಳಿದೆ.

  • ಲಾಕರ್ ನಲ್ಲಿದ್ದ ಹಣ ತಿಂದ ಗೆದ್ದಲು – ಬ್ಯಾಂಕ್ ಆಫ್ ಬರೋಡಾ ಪ್ರತಿಕ್ರಿಯೆ

    ಲಾಕರ್ ನಲ್ಲಿದ್ದ ಹಣ ತಿಂದ ಗೆದ್ದಲು – ಬ್ಯಾಂಕ್ ಆಫ್ ಬರೋಡಾ ಪ್ರತಿಕ್ರಿಯೆ

    ಗಾಂಧಿನಗರ: ಗುಜರಾತಿನ ವಡೋದರ ಪ್ರತಾಪ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾದ ಲಾಕರ್ ನಲ್ಲಿ ವ್ಯಕ್ತಿಯೊಬ್ಬ ಇಟ್ಟಿದ್ದ 2 ಲಕ್ಷ ರೂ ಹಣವನ್ನು ಗೆದ್ದಲು ಹುಳು ತಿಂದ ಘಟನೆ ಸಂಬಂಧಿಸಿದಂತೆ ಇದೀಗ ಬ್ಯಾಂಕ್ ಆಫ್ ಬರೋಡಾ ಅಧಿಕೃತವಾಗಿ ಹೇಳಿಕೆ ನೀಡಿದೆ.

    ವಡೋದರಾದ ಪ್ರತಾಪ್ ನಗರ ಶಾಖೆಯ ನಮ್ಮ ಬ್ಯಾಂಕಿನಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ ಒಂದಷ್ಟು ಗ್ರಾಹಕರ ಹಣವನ್ನು ಗೆದ್ದಲುಗಳು ತಿಂದು ಹಾಕಿದ್ದವು. ಈ ಕುರಿತಂತೆ ನಮ್ಮ ಬ್ಯಾಂಕ್ ಆಫ್ ಬರೋಡಾ ಆದಷ್ಟು ಶೀಘ್ರ ಪರಿಸ್ಥಿಯನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ರಾಹಕರಿಗೆ ಭರವಸೆ ನೀಡುತ್ತದೆ ಎಂದು ತಿಳಿಸಿದೆ.

    ಅಲ್ಲದೆ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡುಕೊಳ್ಳುತ್ತೇವೆ. ನಾವು ಗ್ರಾಹಕರ ದೂರನ್ನು ಪರಿಗಣಿಸಿದ್ದು, ಸಾಧ್ಯವಾದಷ್ಟು ಬೇಗ ಅವರ ಬೇಡಿಕೆಗಳನ್ನ ಪೂರೈಸುತ್ತೇವೆ. ಈ ವಿಚಾರವಾಗಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.

    ವಡೋದರ ಮೂಲದ ರೆಹನಾ ಕುತುಬ್ದೀನ್ ಎಂಬ ವ್ಯಕ್ತಿ ಪ್ರತಾಪ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾ ಲಾಕರ್ ನಲ್ಲಿ ಇಟ್ಟಿದ್ದ 2.20 ಲಕ್ಷ ರೂ ಹಣವನ್ನು ಗೆದ್ದಲು ಹುಳು ತಿಂದು ಹಾಕಿತ್ತು. ಈ ವಿಚಾರವಾಗಿ ಕುತುಬ್ದೀನ್ ಬ್ಯಾಂಕ್ ಮುಖ್ಯಸ್ಥನ ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿ ಹಣವನ್ನು ಮರುಪಾವತಿಸುವಂತೆ ಬೇಡಿಕೆ ಇಟ್ಟಿದ್ದರು.

  • ಬ್ಯಾಂಕ್ ಲಾಕರ್‌ನಲ್ಲಿದ್ದ 2.20 ಲಕ್ಷ ಹಣವನ್ನು ತಿಂದು ತೇಗಿದ ಗೆದ್ದಲು ಹುಳ

    ಬ್ಯಾಂಕ್ ಲಾಕರ್‌ನಲ್ಲಿದ್ದ 2.20 ಲಕ್ಷ ಹಣವನ್ನು ತಿಂದು ತೇಗಿದ ಗೆದ್ದಲು ಹುಳ

    ಗಾಂಧಿನಗರ: ಬ್ಯಾಂಕ್ ಲಾಕರ್‌ನಲ್ಲಿಟ್ಟ  2 ಲಕ್ಷ ಹಣವನ್ನು ಗೆದ್ದಲು ಹುಳಗಳು ತಿಂದ ಘಟನೆ ಗುಜರಾತಿನ ವಡೋದರದಲ್ಲಿ ನಡೆದಿದೆ.

    ವಡೋದರ ಮೂಲದ ರೆಹನಾ ಕುತುಬ್ದೀನ್ ಎಂಬವರು ಪ್ರತಾಪ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾದ ಲಾಕರ್ ನಲ್ಲಿ 2.20 ಲಕ್ಷ ರೂ ಹಣ ಇಟ್ಟಿದ್ದರು. ಆದರೆ ಬ್ಯಾಂಕ್ ಲಾಕರ್ ನಂ 252ರಲ್ಲಿ ಇದ್ದ ಹಣದ ಕಂತೆಗಳನ್ನು ಗೆದ್ದಲು ಹುಳುಗಳು ತಿಂದು ಹಾಕಿದೆ.

    ಈ ವಿಚಾರವಾಗಿ ರೆಹನಾ ಕುತುಬ್ದೀನ್ ಬ್ಯಾಂಕ್ ಮುಖ್ಯಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಳೆದುಕೊಂಡಿರುವ ಅಷ್ಟು ಹಣವನ್ನು ಬ್ಯಾಂಕ್ ಮರುಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ.

  • ಬ್ಯಾಂಕ್ ಆಫ್ ಬರೋಡಾದಲ್ಲಿ ಏ.1ರಂದು ದೇನಾ, ವಿಜಯಾ ಬ್ಯಾಂಕ್ ವಿಲೀನ: ಗ್ರಾಹಕರು ಏನು ಮಾಡಬೇಕು?

    ಬ್ಯಾಂಕ್ ಆಫ್ ಬರೋಡಾದಲ್ಲಿ ಏ.1ರಂದು ದೇನಾ, ವಿಜಯಾ ಬ್ಯಾಂಕ್ ವಿಲೀನ: ಗ್ರಾಹಕರು ಏನು ಮಾಡಬೇಕು?

    ಮುಂಬೈ: ಬ್ಯಾಂಕ್ ಆಫ್ ಬರೋಡಾದಲ್ಲಿ ಏಪ್ರಿಲ್ 1ರಂದು ದೇನಾ ಮತ್ತು ವಿಜಯಾ ಬ್ಯಾಂಕ್‍ಗಳು ವಿಲೀನಗೊಳ್ಳಲಿವೆ. ಈ ಎರಡು ಬ್ಯಾಂಕ್‍ಗಳಲ್ಲಿರುವ ಖಾತೆಗಳು ಬ್ಯಾಂಕ್ ಆಫ್ ಬರೋಡಾಗೆ ವರ್ಗಾವಣೆಗೊಳ್ಳಲಿವೆ. ಈ ಎರಡು ಬ್ಯಾಂಕ್‍ಗಳ ವಿಲೀನದಿಂದಾಗಿ ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಲಿದೆ.

    ಪಸ್ತುತ 45.85 ಲಕ್ಷ ಕೋಟಿ ಮೌಲ್ಯದ ವ್ಯವಹಾರಗಳೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊದಲ ಸ್ಥಾನದಲ್ಲಿದೆ. 15.8 ಲಕ್ಷ ಕೋಟಿ ವ್ಯವಹಾರಗಳೊಂದಿಗೆ ಎಚ್‍ಡಿಎಫ್‍ಸಿ ಎರಡನೇ ಸ್ಥಾನದಲ್ಲಿ, 11.02 ಲಕ್ಷ ಕೋಟಿ ವ್ಯವಹಾರಗಳೊಂದಿಗೆ ಐಸಿಐಸಿಐ ಮೂರನೇ ಸ್ಥಾನದಲ್ಲಿವೆ. ದೇನಾ ಮತ್ತು ವಿಜಯಾ ಬ್ಯಾಂಕ್‍ಗಳ ವಿಲೀನದಿಂದಾಗಿ ಬ್ಯಾಂಕ್ ಆಫ್ ಬರೋಡಾದ ವ್ಯವಹಾರದ ಮೌಲ್ಯ 15.4 ಲಕ್ಷ ಕೋಟಿ ಆಗಲಿದೆ. ಐಸಿಐಸಿಐ ಬ್ಯಾಂಕ್ ನ್ನು ಹಿಂದೆ ತಳ್ಳಿ ಬ್ಯಾಂಕ್ ಆಫ್ ಬರೋಡಾ ಮೂರನೇ ಸ್ಥಾನವನ್ನ ಅಲಂಕರಿಸಲಿದೆ.

    ದೇನಾ, ವಿಜಯ ಬ್ಯಾಂಕ್ ಗ್ರಾಹಕರು ಏನು ಮಾಡಬೇಕು?
    1. ಗ್ರಾಹಕರಿಗೆ ಹೊಸ ಖಾತೆಯ ಸಂಖ್ಯೆ ಮತ್ತು ಕಸ್ಟಮರ್ ಐಡಿ ಸಿಗಲಿದೆ.
    2. ದೇನಾ ಮತ್ತು ವಿಜಯಾ ಬ್ಯಾಂಕ್ ಗ್ರಾಹಕರೆಲ್ಲರಿಗೂ ಹೊಸ ಖಾತೆ ನಂಬರ್ ದೊರೆತ ಕೂಡಲೇ, ಆದಾಯ ತೆರಿಗೆ ಇಲಾಖೆ, ವಿಮೆ, ಪಿಂಚಣಿಗಳಿಗೆ ಮಾಹಿತಿಯನ್ನು ನೀಡಬೇಕು.
    3. ಸಾಲಗಾರರು ಅಥವಾ ಇಎಂಐ ಗ್ರಾಹಕರು ಹೊಸ ಅರ್ಜಿಯನ್ನು ಭರ್ತಿ ಮಾಡಿ, ಸಂಬಂಧಪಟ್ಟ ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಬೇಕು.
    4. ಬ್ಯಾಂಕ್ ಆಫ್ ಬರೋಡಾಗೆ ಸೇರ್ಪಡೆಯಾಗುವ ಎಲ್ಲ ಗ್ರಾಹಕರಿಗೆ ಹೊಸ ಡೆಬಿಟ್ ಕಾರ್ಡ್, ಚೆಕ್‍ಬುಕ್ ಮತ್ತು ಕ್ರೆಡಿಟ್ ಕಾರ್ಟ್ ನೀಡಲಾಗುತ್ತದೆ.
    6. ವಾಹನಗಳ ಮೇಲಿನ ಸಾಲ, ಗೃಹ ಸಾಲ, ವೈಯಕ್ತಿಕ ಸಾಲ ಪಡೆದ ಗ್ರಾಹಕರು ಪಾವತಿಸುತ್ತಿರುವ ಬಡ್ಡಿ ಮೊತ್ತದಲ್ಲಿ ಯಾವುದೇ ಬದಲಾವಣೆಗಳಿಲ್ಲ.
    7. ಬ್ಯಾಂಕ್‍ಗಳ ವಿಲೀನದಿಂದಗ ಕೆಲ ಶಾಖೆಗಳು ಬಂದ್ ಆಗಲಿವೆ. ಹಾಗಾಗಿ ಗ್ರಾಹಕರು ಸಮೀಪದ ಬ್ಯಾಂಕ್ ಬರೋಡಾ ಬ್ಯಾಂಕ್ ಸಂಪರ್ಕಿಸಬೇಕು.

    ಈ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತ್ರವಾಂಕೋರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ ಬ್ಯಾಂಕ್‍ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಗಿತ್ತು.