Tag: Bank Locker

  • ಬ್ಯಾಂಕ್‍ಗೆ ಕನ್ನ ಹಾಕಿದ್ರೂ ಲಾಕರ್ ಓಪನ್ ಆಗಿಲ್ಲ

    ಬ್ಯಾಂಕ್‍ಗೆ ಕನ್ನ ಹಾಕಿದ್ರೂ ಲಾಕರ್ ಓಪನ್ ಆಗಿಲ್ಲ

    ಹುಬ್ಬಳ್ಳಿ: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಗೆ ಕನ್ನ ಹಾಕಲು ಯತ್ನಿಸಿದ ಕಳ್ಳರು ಲಾಕರ್ ತೆರೆಯಲಾಗದೆ ನಿರಾಸೆ ಅನುಭವಿಸಿದ್ದಾರೆ.

    ಶಿವಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಕಿಟಕಿಯ ಸರಳು ಮುರಿದು ಕಳ್ಳರು ಬ್ಯಾಂಕಿನ ಒಳ ನುಗ್ಗಿ ಕನ್ನ ಹಾಕುವ ಯತ್ನ ವಿಫಲವಾಗಿದೆ. ಬ್ಯಾಂಕಿನ ಹಿಂಭಾಗದ ಕಿಟಕಿಯ ಮೂರು ಸರಳುಗಳನ್ನು ಕಟರ್ ನಿಂದ ಕಟ್ ಮಾಡಿ ಕಳ್ಳರು, ಕಿಟಕಿಯ ಮೂಲಕ ಬ್ಯಾಂಕ್‍ನ ಒಳ ನುಗ್ಗಿದ್ದಾರೆ. ಅದರೆ ಬ್ಯಾಂಕ್ ಲಾಕರ್ ತೆಗೆಯಲು ಕಳ್ಳರು ವಿಫಲವಾಗಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ತೆರಳಿದ್ದಾರೆ.  ಇದನ್ನೂ ಓದಿ: ಪಾರ್ಕಿಗೆ ಬಾ ಅಂತಿದ್ಳು – ಅಂಕಲ್‍ಗಳೇ ಈಕೆಯ ಟಾರ್ಗೆಟ್!

    ಘಟನೆಯ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹಾವುಗಳಿಗೆ ಸೋದರಿಯರಿಂದ ರಾಖಿ ಕಟ್ಟಿಸಲು ಹೋಗಿ ಪ್ರಾಣ ಬಿಟ್ಟ ಯುವಕ

  • ಬ್ಯಾಂಕ್ ಲಾಕರ್‌ನಲ್ಲಿದ್ದ 2.20 ಲಕ್ಷ ಹಣವನ್ನು ತಿಂದು ತೇಗಿದ ಗೆದ್ದಲು ಹುಳ

    ಬ್ಯಾಂಕ್ ಲಾಕರ್‌ನಲ್ಲಿದ್ದ 2.20 ಲಕ್ಷ ಹಣವನ್ನು ತಿಂದು ತೇಗಿದ ಗೆದ್ದಲು ಹುಳ

    ಗಾಂಧಿನಗರ: ಬ್ಯಾಂಕ್ ಲಾಕರ್‌ನಲ್ಲಿಟ್ಟ  2 ಲಕ್ಷ ಹಣವನ್ನು ಗೆದ್ದಲು ಹುಳಗಳು ತಿಂದ ಘಟನೆ ಗುಜರಾತಿನ ವಡೋದರದಲ್ಲಿ ನಡೆದಿದೆ.

    ವಡೋದರ ಮೂಲದ ರೆಹನಾ ಕುತುಬ್ದೀನ್ ಎಂಬವರು ಪ್ರತಾಪ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾದ ಲಾಕರ್ ನಲ್ಲಿ 2.20 ಲಕ್ಷ ರೂ ಹಣ ಇಟ್ಟಿದ್ದರು. ಆದರೆ ಬ್ಯಾಂಕ್ ಲಾಕರ್ ನಂ 252ರಲ್ಲಿ ಇದ್ದ ಹಣದ ಕಂತೆಗಳನ್ನು ಗೆದ್ದಲು ಹುಳುಗಳು ತಿಂದು ಹಾಕಿದೆ.

    ಈ ವಿಚಾರವಾಗಿ ರೆಹನಾ ಕುತುಬ್ದೀನ್ ಬ್ಯಾಂಕ್ ಮುಖ್ಯಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಳೆದುಕೊಂಡಿರುವ ಅಷ್ಟು ಹಣವನ್ನು ಬ್ಯಾಂಕ್ ಮರುಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ.

  • 1947ರಲ್ಲಿ ರಾಷ್ಟ್ರಧ್ವಜ ಖರೀದಿ- ಹಾಳಾಗಬಾರದೆಂದು ಬ್ಯಾಂಕ್ ಲಾಕರಿನಲ್ಲಿಡುವ ವೃದ್ಧ

    1947ರಲ್ಲಿ ರಾಷ್ಟ್ರಧ್ವಜ ಖರೀದಿ- ಹಾಳಾಗಬಾರದೆಂದು ಬ್ಯಾಂಕ್ ಲಾಕರಿನಲ್ಲಿಡುವ ವೃದ್ಧ

    – ಪ್ರತಿ ವರ್ಷ ಮನೆ ಮುಂದೆ ಹಾರುತ್ತೆ ಈ ರಾಷ್ಟ್ರಧ್ವಜ

    ಧಾರವಾಡ: ಬ್ಯಾಂಕ್ ಲಾಕರಿನಲ್ಲಿ ಸಹಜವಾಗಿ ಚಿನ್ನದ ಒಡವೆ, ಹಣ ಅಥವಾ ಆಸ್ತಿ ದಾಖಲೆಗಳನ್ನು ಇಟ್ಟಿರುವುದನ್ನ ನೋಡಿದ್ದೆವೆ. ಆದರೆ ಧಾರವಾಡ ನಗರದ ಗಾಂಧಿನಗರ ನಿವಾಸಿಯೊರ್ವರು ರಾಷ್ಟ್ರಧ್ವಜವನ್ನು ತಮ್ಮ ಬ್ಯಾಂಕ್ ಲಾಕರಿನಲ್ಲಿ ಇಟ್ಟಿರುತ್ತಾರೆ.

    ಗಂಗಾಧರ ಕುಲಕರ್ಣಿ(86) ಅವರು ತಮ್ಮ ಸಿಂಡಿಕೇಟ್ ಬ್ಯಾಂಕ್ ಲಾಕರಿನಲ್ಲಿ ಈ ರಾಷ್ಟ್ರಧ್ವಜವನ್ನು ಇಡುತ್ತಾರೆ. ಇದನ್ನು ಆಗಸ್ಟ್ 15 ಬಂದಾಗ ಮಾತ್ರ ಅಲ್ಲಿಂದ ತಂದು ಧ್ವಜಾರೋಹಣ ಮಾಡುತ್ತಾರೆ. ಕಳೆದ 7 ವರ್ಷಗಳಿಂದ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ. ಒಟ್ಟು 73 ವರ್ಷಗಳ ಹಿಂದೆ ಅಂದರೆ, 1947 ರಲ್ಲಿ ಭಾರತಕ್ಕೆ ಸ್ವತಂತ್ರ್ಯ ಸಿಕ್ಕಾಗ ಗಂಗಾಧರ ಅವರು 4ನೇ ತರಗತಿಯಲ್ಲಿ ಓದುತ್ತಿದ್ದರು. ಆಗ ಇವರ ಗುರುಗಳು ಈ ಧ್ವಜವನ್ನು ಖರೀದಿ ಮಾಡಲು ಹೇಳಿದ್ದರಂತೆ, ಹೀಗಾಗಿ ಇದನ್ನ ಖರೀದಿ ಮಾಡಿದ್ದರು.

    ಆಗಿನಿಂದ 2006ರ ವರೆಗೆ ಗಂಗಾಧರ ಅವರ ತಾಯಿಯೇ ಧ್ವಜಾರೋಹಣ ಮಾಡುತಿದ್ದರು. ಆದರೆ ಅವರ ನಂತರ ಗಂಗಾಧರ ಅವರು ಇದನ್ನ ಇಟ್ಟುಕೊಂಡಿದ್ದಾರೆ. 1947ರಲ್ಲಿ ಇದನ್ನು ಖರೀದಿಸಿದ್ದು, ಹಾಗೂ ಇದರ ಹಿಂದೆ ನೆನಪಿನ ಬುತ್ತಿ ಇರುವುದರಿಂದ ಯಾರಾದರು ಮುಟ್ಟಿ ಅಗೌರವ ತೋರಬಾರದು ಹಾಗೂ ಹಾಳಾಗಬಾರದು ಎಂಬ ಉದ್ದೇಶದಿಂದ ಬ್ಯಾಂಕ್ ಲಾಕರ್‍ನಲ್ಲಿ ಇಡುತ್ತಾರೆ. ಇವರ ಈ ಅಭಿಮಾನ ಹಾಗೂ ರಾಷ್ಟ್ರ ಪ್ರೇಮ ನೋಡಿ ಸ್ಥಳೀಯರು ಸಂತಸ ವ್ಯಕ್ತ ಪಡಿದ್ದಾರೆ.

  • ಒಂದು ದಿನದ ಭಾಗ್ಯ – 22 ವರ್ಷಗಳಿಂದ ಬ್ಯಾಂಕ್ ಲಾಕರ್‌ನಲ್ಲಿದ್ದ  ಲಿಂಗಕ್ಕೆ ಭಕ್ತರ ಅಭಿಷೇಕ

    ಒಂದು ದಿನದ ಭಾಗ್ಯ – 22 ವರ್ಷಗಳಿಂದ ಬ್ಯಾಂಕ್ ಲಾಕರ್‌ನಲ್ಲಿದ್ದ ಲಿಂಗಕ್ಕೆ ಭಕ್ತರ ಅಭಿಷೇಕ

    ಶಿವಮೊಗ್ಗ: ಸರ್ಕಾರದ ಮಧ್ಯಪ್ರವೇಶದಿಂದಾಗಿ 22 ವರ್ಷಗಳ ಕಾಲ ಬ್ಯಾಂಕ್ ಲಾಕರ್‌ನಲ್ಲಿದ್ದ  ಶಿವಲಿಂಗಕ್ಕೆ ಭಕ್ತರು ಇಂದು ಅಭಿಷೇಕ ಮಾಡಿದ್ದಾರೆ.

    ಸಾಗರ ತಾಲೂಕಿನ ಕೆಳದಿ ರಾಜಗುರು ಬಂದಗದ್ದೆ ಹಿರೇಮಠದ ಪಚ್ಚೆ ಲಿಂಗಕ್ಕೆ 600 ವರ್ಷದ ಇತಿಹಾಸವಿದೆ. 1 ಕೆಜಿ ತೂಕದ ಪಚ್ಚೆಲಿಂಗವನ್ನು ಕೆಳದಿ ಅರಸರು ರಾಜಗುರು ಮಠಕ್ಕೆ ನೀಡಿದ್ದರು. ಅಂದಿನಿಂದ ಪ್ರತಿವರ್ಷ ನವರಾತ್ರಿ ಸೇರಿದಂತೆ ವಿಶೇಷ ಸಂದರ್ಭದ ದಿನಗಳಲ್ಲಿ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತಿತ್ತು.’

    ಮಠದ ಹಿಂದಿನ ಸ್ವಾಮೀಜಿ ಗುರು ಸಿದ್ದದೇವರು ಆರ್ಥಿಕ ಸಂಕಷ್ಟದಿಂದಾಗಿ ಪಚ್ಚೆ ಲಿಂಗವನ್ನು ಶಿವಮೊಗ್ಗದ ಎಸ್‍ಬಿಐ ಬ್ಯಾಂಕಿನಲ್ಲಿಟ್ಟು 2.80 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ನಂತರದಲ್ಲಿ ಸಾಲವನ್ನು ತೀರಿಸಲಾಗಿತ್ತು. ಆದರೆ ಇಂದಿನ ಸ್ವಾಮೀಜಿ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗು ಸದ್ಯ ಬೆಳಗಾವಿಯ ಮಠವೊಂದರಲ್ಲಿ ಸ್ವಾಮೀಜಿಯಾಗಿರುವ ಮೃತ್ಯುಂಜಯ ಸ್ವಾಮೀಜಿಯವರ ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಮೃತ್ಯುಂಜಯ ಸ್ವಾಮೀಜಿ ಆಪ್ತರು ನ್ಯಾಯಾಲಯದಲ್ಲಿ ದಾವೆ ಹೂಡಿ ಮಠದ ಆಸ್ತಿಯನ್ನು ಪರಭಾರೆ ಮಾಡದಂತೆ ತಡೆಯಾಜ್ಞೆ ತಂದಿದ್ದರು.

    ತಡೆಯಾಜ್ಞೆಯಿಂದಾಗಿ ಭದ್ರತೆ ದೃಷ್ಟಿಯಿಂದ ಪಚ್ಚೆಲಿಂಗ ಮತ್ತೆ ಬ್ಯಾಂಕಿನ ಲಾಕರ್ ಸೇರಿತು. ಆದರೆ ಈ ಬಾರಿ ನವರಾತ್ರಿಯ ಕೊನೆಯ ಒಂದು ದಿನ ಪಚ್ಚೆಲಿಂಗ ದರ್ಶನ ಮಾಡಬೇಕು ಎಂಬುದು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗು ಭಕ್ತರ ಆಸೆಯಾಗಿತ್ತು. ಅದರಂತೆ ಸ್ಥಳೀಯ ಶಾಸಕ ಹಾಲಪ್ಪ ನೇತೃತ್ವದಲ್ಲಿ ತೆರಳಿದ್ದ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪಚ್ಚೆಲಿಂಗ ದರ್ಶನಕ್ಕೆ ಮನವಿ ಸಲ್ಲಿಸಿತ್ತು.

    ಭಕ್ತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರು ಇಂದು ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ತಹಶೀಲ್ದಾರ್ ಸಮ್ಮುಖದಲ್ಲಿ ಬಿಗಿ ಭದ್ರತೆಯೊಂದಿಗೆ ಇಂದು ಸಾಗರ ಖಜಾನೆಯಿಂದ ಪಚ್ಚೆಲಿಂಗ ತೆಗೆದುಕೊಂಡು ಹೋಗಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಚ್ಚೆಲಿಂಗ 22 ವರ್ಷಗಳ ನಂತರ ಮಠಕ್ಕೆ ಆಗಮಿಸುತ್ತಿದ್ದಂತೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಅಲ್ಲದೇ ಸ್ವಾಮೀಜಿಯವರು ಪಚ್ಚೆಲಿಂಗಕ್ಕೆ ಜಲಾಭಿಷೇಕ, ಕ್ಷೀರಾಭಿಷೇಕ, ಗಂಧಾಭಿಷೇಕ, ಬಿಲ್ವಾರ್ಚನೆ ಮಾಡಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

    22 ವರ್ಷಗಳ ನಂತರ ಪಚ್ಚೆಲಿಂಗ ದರ್ಶನ ಮಾಡಿದ್ದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದರು. ಪ್ರತಿ ವರ್ಷ ನವರಾತ್ರಿ ದಿನದಂದು ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ಅಲ್ಲದೇ ಇಂದು ರಾತ್ರಿ ಮತ್ತೆ ಬಿಗಿ ಭದ್ರತೆ ನಡುವೆ ಪಚ್ಚೆಲಿಂಗ ಲಾಕರ್ ಸೇರಿದೆ.