Tag: Bank Janardhan

  • ನಟ ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ

    ನಟ ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ

    ನ್ನಡ ಸಿನಿಮಾ ರಂಗದ ಹೆಸರಾಂತ ಪೋಷಕ ನಟ ಬ್ಯಾಂಕ್ ಜನಾರ್ದನ್ ಅವರಿಗೆ ನಿನ್ನೆ ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆಯಿಂದ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕನ್ನಡದ ಅಷ್ಟೂ ಹೆಸರಾಂತ ನಟರೊಂದಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು.

    ಬ್ಯಾಂಕ್ ಜನಾರ್ದನ್ ಅವರಿಗೆ 74 ವರ್ಷ ವಯಸ್ಸು. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಜನಾರ್ದನ್. ಹಾಸ್ಯ ನಟರಾಗಿ ಸಾಕಷ್ಟು ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ.

    ಗೌರಿ ಗಣೇಶ್, ಕೌರವ, ರಂಗ ಎಸ್.ಎಸ್.ಎಲ್.ಸಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಜೊತೆಗೆ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಕೂಡ ಇವರದ್ದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೈಜ ಕಥೆಯಾಧಾರಿತ ‘ಸಂತು ಲವ್ಸ್ ಸಂಧ್ಯಾ’ಗೆ ಮುಹೂರ್ತ

    ನೈಜ ಕಥೆಯಾಧಾರಿತ ‘ಸಂತು ಲವ್ಸ್ ಸಂಧ್ಯಾ’ಗೆ ಮುಹೂರ್ತ

    ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ನಡೆದ ನೈಜ ಘಟನೆಯೊಂದು ಚಲನಚಿತ್ರವಾಗಿ ಮೂಡಿಬರುತ್ತಿದೆ. ಸಂತು ಲವ್ಸ್ ಸಂಧ್ಯಾ ಎಂಬ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಘಟನೆ ನಡೆದ ಸ್ಥಳವಾದ ಮುಳಬಾಗಿಲಿನ ಸಮೀಪದ ಯಲ್ದೂರು ಗ್ರಾಮದ ಗಂಗಾ ಭವಾನಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು.

    ಚಿತ್ರದ ಆರಂಭಿಕ ದೃಶ್ಯಕ್ಕೆ ನಿವೃತ್ತ ಅರಣ್ಯಾಧಿಕಾರಿ ಕೆಂಪಣ್ಣ ಕ್ಯಾಮೆರಾ ಚಾಲನೆ ಮಾಡಿದರೆ, ನಿರ್ಮಾಪಕ ಶಿವಕುಮಾರ್ ಆರಂಭ ಫಲಕ ತೋರಿದರು. ಆರ್.ಕೆ. ಗಾಂಧಿ ಈ ಚಿತ್ರಕ್ಕೆ ಕತೆ, ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಾಹಸ ಕಲಾವಿದನಾಗಿ ರಥಾವರ, ರಾಟೆ, ಒಡೆಯ, ಮುತ್ತಿನಹಾರ ಸೇರಿದಂತೆ 60ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಜೈಸುಬ್ರಮಣಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಪ್ರೇಮಿಗಳ ನಡುವೆ ಜಾತಿ ಎಂಬ ವಿಷಯ ಬಂದಾಗ ಅದು ಎಂತಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಈ ಘಟನೆಯ ರಿಯಲ್ ನಾಯಕ ವೆಂಕಟ್ ಈಗಲೂ ಯಲ್ದೂರು ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನಾಗಿ ಅಲೆದಾಡುತ್ತಿದ್ದಾನೆ.

    ಮನೋಜ್ ಮೂವಿ ಮೇಕರ್ಸ್ ಲಾಂಛನದಲ್ಲಿ ಶಿವಕುಮಾರ್, ದೇವರಾಜ್, ಶಬರೀಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪೌಲ್ ರಾಜು ಛಾಯಾಗ್ರಹಣ, ಗಂಟಾಡಿ ಕೃಷ್ಣ ಸಂಗೀತ, ಸುರೇಶ್ ಕಂಬಳಿ ಸಾಹಿತ್ಯ, ಶಂಕರ್ ಸಾಹಸ, ಸಾನ್ವಿ ನೃತ್ಯ ನಿರ್ದೇಶನ, ವಿನಯ್ ಜಿ. ಆಲೂರು ಸಂಕಲನವಿದೆ. ಜೈ ಸುಬ್ರಮಣಿ, ಸುಷ್ಮಾ ಗೌಡ, ಕಿಲ್ಲರ್ ವೆಂಕಟೇಶ್, ಬ್ಯಾಂಕ್ ಜನಾರ್ಧನ್, ಹೊನ್ನವಳ್ಳಿ ಕೃಷ್ಣ, ಜ್ಯೋತಿ ಮೂರೂರು, ಕಾವ್ಯ ಪ್ರಕಾಶ್, ದಿಂಬಾಲ ಅಶೋಕ್, ಕೋಲಾರ ಬಾಬು, ಮಹೇಶ್ ಬ್ರೂಸ್ಲಿ, ತಿರುಪತಿ ರಾಜು, ನಾಗರಾಜ್ ಮುಂತಾದವರ ತಾರಾಬಳಗವಿದೆ.

  • ಹೀರೋ ಅಂದ್ರೆ ಹೀಗೇ ಇರ್ಬೇಕು, ಹೈಟ್-ಫೇರ್ ಇರಬೇಕು ಅನ್ನೋದೆಲ್ಲ ಸುಳ್ಳೆಂದು ಪ್ರೂವ್ ಮಾಡಿದ್ದವ್ರು ಕಾಶಿನಾಥ್: ರಮೇಶ್ ಅರವಿಂದ್

    ಹೀರೋ ಅಂದ್ರೆ ಹೀಗೇ ಇರ್ಬೇಕು, ಹೈಟ್-ಫೇರ್ ಇರಬೇಕು ಅನ್ನೋದೆಲ್ಲ ಸುಳ್ಳೆಂದು ಪ್ರೂವ್ ಮಾಡಿದ್ದವ್ರು ಕಾಶಿನಾಥ್: ರಮೇಶ್ ಅರವಿಂದ್

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅಗಲಿಕೆಗೆ ಹಿರಿಯ ನಟ ಬ್ಯಾಂಕ್ ಜನಾರ್ದನ್ ಮತ್ತು ನಟ, ನಿರ್ದೇಶಕ ರಮೇಶ್ ಅರವಿಂದ್ ಸಂತಾಪ ಸೂಚಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ ಟಿವಿ ಜೊತೆ ಮಾತನಾಡಿದ ನಟ ನಿರ್ದೇಶಕ ರಮೇಶ್ ಅರವಿಂದ್, ಅವರು ಮಾಡಿದ ಸಿನಿಮಾ ಅವರನ್ನ ಬಾಲಿವುಡ್‍ಗೆ ಕರೆದುಕೊಂಡು ಹೋಗಿವೆ. ಬಜೆಟ್‍ನಲ್ಲಿ ಕೆಲಸ ಮಾಡುತ್ತಾರೆ. ಹಲವಾರು ನಟರನ್ನು ಪರಿಚಯಿಸಿದ್ದಾರೆ. ಯಂಗ್ ಗೆ ಸ್ಟರ್ ಅವಕಾಶ ಕೊಡುತ್ತಿದ್ದರು. ನನ್ನ ಶೋಗೆ ಬಂದಾಗ “ಎಷ್ಟು ದಿನ ಅಂತಾ ಬೇರೆ ಅವರ ಕಾಲು ಎಳೆಯುತ್ತೀರಾ? ಅಂದ್ರೆ ನೀವು ಅವರ ಕೆಳಗೆ ಇದ್ದೀರಾ ಎಂದು ಅರ್ಥ ಎಂದು ಹೇಳಿದ್ದರು. ಬಾಲಿವುಡ್‍ಗೆ ಹೋಗಿ ಬಂದ ಮೇಲೆ ಜೀವನ ಎಂದರೆ ಏನು ಎಂದು ಗೊತ್ತಾಯಿತು ಎಂದಿದ್ದರು. ಅದನ್ನು ನಾನು ಮರೆಯಲು ಸಾಧ್ಯವಿಲ್ಲ. ಇದು ಇಂಡಸ್ಟ್ರಿಗೆ ದೊಡ್ಡ ನಷ್ಟ. ಅವರಂತಹ ಥಿಂಕರ್ ಇರಬೇಕು ಅಂದ್ರು.

    ಹೀರೋ ಅಂದರೆ ಹೀಗೆ ಇರಬೇಕು, ಇಷ್ಟು ಹೈಟ್ ಇರಬೇಕು, ಇಷ್ಟು ಬೆಳ್ಳಗಿರಬೇಕು, ಈ ಥರ ನಗಬೇಕು ಅನ್ನೋದಲ್ಲಾ ಸುಳ್ಳು ಎಂದು ಸಾಬೀತು ಮಾಡಿದ ಕೆಲವೇ ಕೆಲವು ನಟರಲ್ಲಿ ಕಾಶಿನಾಥ್ ಒಬ್ಬರು. ಅವರ ವೀಕ್‍ನೆಸ್ ಗಳನ್ನೇ ಸ್ಟ್ರೆಂತ್ ಮಾಡಿಕೊಳ್ಳುವ ಶಕ್ತಿ ಅವರಲ್ಲಿತ್ತು. ಅವರ ಯೋಜನೆಗಳ ಮೂಲಕವೇ ಅವರು ಇಷ್ಟು ಸಾಧನೆ ಮಾಡಿದ್ದಾರೆ. ಸೆಕ್ಸ್ ಕೂಡ ಎಂಟರ್‌ಟೈನ್‌ಮೆಂಟ್‌ ರೀತಿಯಲ್ಲಿ ತೋರಿಸಿಕೊಟ್ಟವರು. ಇಂದು ಅವರು ಇಲ್ಲ ಅಂದರೆ ತುಂಬಾ ದುಃಖ ಆಗುತ್ತದೆ ಎಂದು ತಿಳಿಸಿದರು.

    ಹಿರಿಯ ನಟ ಬ್ಯಾಂಕ್ ಜನಾರ್ದನ್ ಮಾತನಾಡಿ, ತುಂಬಾ ದುಃಖ ಆಗುತ್ತಿದೆ. ಅವರು ಎಂತೆಂಥ ನಟರನ್ನು ಸಿನಿಮಾಗೆ ಪರಿಚಯಿಸಿದ್ದಾರೆ. ಅಪ್ರತಿಮ ಕಲಾವಿದ, ಉತ್ತಮ ನಿರ್ದೇಶಕ. ನನಗೆ ತುಂಬಾ ಆತ್ಮೀಯ. ಒಬ್ಬರಿಗೆ ಉಪಕಾರ ಮಾಡಿದರೆ ಅವರು ನಾನು ಮಾಡಿದ್ದೀನಿ ಎಂದು ಯಾರಿಗೂ ಹೇಳುತ್ತಿರಲ್ಲಿ. ಕಾಲಕ್ಕೆ ತಕ್ಕಂತೆ ಸಿನಿಮಾ ಮಾಡುತ್ತಿದ್ದರು. ಅವರಿಂದ ನಾನು, ಉಮಾಶ್ರೀ ತುಂಬಾ ಹೆಸರು ಮಾಡಿದ್ದೇವೆ. ನಾನು ಸಹ ಅವರ ಗರಡಿಯಲ್ಲಿ ಮುಂದೆ ಬಂದಿದ್ದೇನೆ. ಈಗ ಅವರು ಇಲ್ಲ ಎಂದು ಕೇಳಿದರೆ ಏನು ಹೇಳಬೇಕು ಗೊತ್ತಾಗ್ತಿಲ್ಲ. ಒಂದು ರೀತಿ ಅವರು ನನಗೆ ಗುರುಗಳು ಎಂದು ಹೇಳಿದ್ರು.

    https://www.youtube.com/watch?v=JY1P-IPdVQE