Tag: bank

  • ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 49% ವಿದೇಶಿ ನೇರ ಹೂಡಿಕೆಗೆ ಅನುಮೋದನೆ ಸಾಧ್ಯತೆ

    ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 49% ವಿದೇಶಿ ನೇರ ಹೂಡಿಕೆಗೆ ಅನುಮೋದನೆ ಸಾಧ್ಯತೆ

    ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 49% ವಿದೇಶಿ ನೇರ ಹೂಡಿಕೆಗೆ (FDI) ಭಾರತ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ.

    ಕಳೆದ ಎರಡು ತಿಂಗಳಿಂದ ಹಣಕಾಸು ಸಚಿವಾಲಯವು ದೇಶದ ಬ್ಯಾಂಕಿಂಗ್ ವಲಯದ ನಿಯಂತ್ರಕ ಸಂಸ್ಥೆಯಾದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೊತೆ ಈ ವಿಷಯದ ಬಗ್ಗೆ ಚರ್ಚಿಸುತ್ತಿದೆ. ಈ ಪ್ರಸ್ತಾವನೆಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಇದನ್ನೂ ಓದಿ: ವೈಯಕ್ತಿಕ ಹಗೆತನಕ್ಕೆ ಬಲಿಯಾಗ್ತಿದೆಯೇ ಟೀಂ ಇಂಡಿಯಾ – ಇನ್ನೂ ಮುಗಿದಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?

    ಪ್ರಸ್ತುತ ಶೇ.20 ಎಫ್‌ಡಿಐ ಮಿತಿ ಹೇರಿದೆ. ಹೊಸ ಕ್ರಮವು ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ನಿಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿದೆ. ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಪ್ರಸ್ತುತ ಎಫ್‌ಡಿಐ ಮಿತಿ ಶೇ.74 ರಷ್ಟಿದೆ. ಈ ಬಗ್ಗೆ ಆರ್‌ಬಿಐ ಜೊತೆಗೆ ಹಣಕಾಸು ಸಚಿವಾಲಯ ಚರ್ಚಿಸುತ್ತಿದೆ.

    ಭಾರತದ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳು ಆಸಕ್ತಿ ತೋರಿಸುತ್ತಿವೆ. ಶೀಘ್ರದಲ್ಲೇ ಹೂಡಿಕೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.

    ದುಬೈ ಮೂಲದ ಎಮಿರೇಟ್ಸ್ ಎನ್‌ಬಿಡಿ ಇತ್ತೀಚೆಗೆ ಆರ್‌ಬಿಎಲ್ ಬ್ಯಾಂಕಿನಲ್ಲಿ 60% ಪಾಲನ್ನು 3 ಬಿಲಿಯನ್‌ ಡಾಲರ್‌ಗೆ ಖರೀದಿಸಿದೆ. ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪ್ ಯೆಸ್ ಬ್ಯಾಂಕಿನಲ್ಲಿ 20% ಪಾಲನ್ನು 1.6 ಬಿಲಿಯನ್‌ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿದ್ದು, ಜಪಾನಿನ ಸಾಲದಾತ ನಂತರ ಇದನ್ನು ಮತ್ತೊಂದು 4.99% ಹೆಚ್ಚಿಸಿದ್ದರಿಂದ ಭಾರತದ ಬ್ಯಾಂಕಿಂಗ್ ಉದ್ಯಮದಲ್ಲಿ ವಿದೇಶಿ ಆಸಕ್ತಿ ಹೆಚ್ಚುತ್ತಿದೆ. ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ

    ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವಿದೇಶಿ ಹೂಡಿಕೆದಾರರಿಂದ ಆಸಕ್ತಿಯನ್ನು ನಿರೀಕ್ಷಿಸುತ್ತಿವೆ. ವಿದೇಶಿ ಮಾಲೀಕತ್ವದ ಮಿತಿಯನ್ನು ಹೆಚ್ಚಿಸುವುದರಿಂದ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಬಂಡವಾಳವನ್ನು ಪಡೆಯಲು ಸಹಾಯವಾಗುತ್ತದೆ.

  • ನ.1ರಿಂದ ಬ್ಯಾಂಕ್‌ಗಳ `ನಾಮಿನಿ ನಿಯಮ’ದಲ್ಲಿ ಬದಲಾವಣೆ

    ನ.1ರಿಂದ ಬ್ಯಾಂಕ್‌ಗಳ `ನಾಮಿನಿ ನಿಯಮ’ದಲ್ಲಿ ಬದಲಾವಣೆ

    ನವದೆಹಲಿ: ನವೆಂಬರ್ 1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ (Nomination rules) ಬದಲಾವಣೆ ಆಗಲಿದ್ದು, ಬ್ಯಾಂಕ್ ಅಕೌಂಟ್, ಲಾಕರ್‌ಗಳಿಗೆ 1ಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡಬಹುದು ಎಂದು ಕೇಂದ್ರ ಹಣಕಾಸು ಇಲಾಖೆ (Finance Department) ತಿಳಿಸಿದೆ.

    ಈವರೆಗೆ 1 ಬ್ಯಾಂಕ್ ಖಾತೆ ಅಥವಾ ಲಾಕರ್‌ಗಳಿಗೆ ಇದ್ದ ಒಬ್ಬರು ನಾಮಿನಿ ಬದಲಿಗೆ ನಾಲ್ವರು ನಾಮಿನಿಗಳಿಗೆ ಅವಕಾಶ ಸಿಗಲಿದೆ. ಈ ಮೂಲಕ ಕ್ಲೈಮ್‌ ಸೆಟಲ್‌ಮೆಂಟ್‌ಗಳು ಮತ್ತಷ್ಟು ನೇರ ಹಾಗೂ ಸುಲಭವಾಗಲಿದೆ. ಡೆಪಾಸಿಟ್ ವೇಳೆಯೇ ಖಾತೆದಾರರು 4 ನಾಮಿನಿಗಳನ್ನು ಆಯ್ಕೆ ಮಾಡಬಹುದು. ಠೇವಣಿದಾರರು ಮೃತರಾದ ನಂತರ ಇದರಲ್ಲಿ ಕ್ರಮಸಂಖ್ಯೆಗೆ ಅನುಗುಣವಾಗಿ ಖಾತೆದಾರರ ಹಣಕಾಸಿಗೆ ಉತ್ತರಾಧಿಕಾರಿಗಳಾಗಲಿದ್ದಾರೆ.ಇದನ್ನೂ ಓದಿ: 2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ

    ಇದರಿಂದಾಗಿ ಗೌಜು ಗೊಂದಲ ಇಲ್ಲದೇ ನಿಗದಿತ ಹಣಕಾಸಿನ ಭಾಗವು ಆ ನಾಮಿನಿಗಳಿಗೆ ನೇರವಾಗಿ ವರ್ಗಾವಣೆ ಆಗಲಿದೆ. ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯಿದೆ-2025 ನವೆಂಬರ್ 1ರಿಂದ ಜಾರಿಗೆ ಬರಲಿದೆ ಅಂತ ಕೇಂದ್ರ ಹಣಕಾಸು ಇಲಾಖೆ ಹೇಳಿದೆ.

  • 40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ಮಂದಿಗೆ ನೋಟಿಸ್‌: ವಾಣಿಜ್ಯ ತೆರಿಗೆ ಇಲಾಖೆ

    40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ಮಂದಿಗೆ ನೋಟಿಸ್‌: ವಾಣಿಜ್ಯ ತೆರಿಗೆ ಇಲಾಖೆ

    ಬೆಂಗಳೂರು: 40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ರೂ. ಮಂದಿಗೆ ನೋಟಿಸ್‌ ನೀಡಿದ್ದೇವೆ ಎಂದು ಕರ್ನಾಟಕ ಸರ್ಕಾರ ವಾಣಿಜ್ಯ ತೆರಿಗೆ (Commercial Tax) ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯಕ್ ಹೇಳಿದ್ದಾರೆ.

    ಬೇಕರಿ, ಕಾಂಡಿಮೆಂಟ್ಸ್‌, ಟೀ- ತರಕಾರಿ ಅಂಗಡಿಯವರಿಗೆ ಲಕ್ಷಲಕ್ಷ ತೆರಿಗೆ ಬಾಕಿ ನೋಟಿಸ್ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, 40 ಸಾವಿರ ಯುಪಿಐ (UPI) ದಾಖಲೆಯನ್ನು ಕಲೆ ಹಾಕಿ ಅದರಲ್ಲಿ 40 ಲಕ್ಷ ವಹಿವಾಟು ದಾಟಿದ ಆರು ಸಾವಿರ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೀದರ್ | ಶಾದಿಮಹಲ್ ನಿರ್ಮಾಣ ಹೆಸರಲ್ಲಿ ಹಗರಣ ಆರೋಪ – ಕೋಟ್ಯಂತರ ಹಣ ನುಂಗಿದ್ರಾ ಅಧಿಕಾರಿಗಳು?

     

    ಹಾಲು, ಬ್ರೆಡ್ ಮಾರಾಟ, ತರಕಾರಿ ಮಾರಾಟದ ಬಗ್ಗೆ ದಾಖಲೆ ನೀಡಿದರೆ ಖಂಡಿತ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಉಳಿದಂತೆ 40 ಲಕ್ಷ ರೂ. ವಹಿವಾಟು ಹೆಚ್ಚಾದರೆ ವಾರ್ಷಿಕವಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕು. ಕಂಪೋಸಿಷನ್ ಟ್ಯಾಕ್ಸ್‌ ಅಡಿ 1% ಕೂಡ ಕಟ್ಟುವ ಅವಕಾಶ ಇದೆ ಎಂದು ತಿಳಿಸಿದರು.

    ಕಳೆದ 2021 ರಿಂದ 2024 ವರೆಗೆ ಪ್ರತಿ ವರ್ಷ 40 ಲಕ್ಷ ರೂ.ಗಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ಮಾತ್ರ ನೋಟಿಸ್ ‌ ನೀಡಲಾಗಿದೆ. ಬ್ಯಾಂಕ್‌ (Bank) ದಾಖಲೆಗಳ ಆಧಾರದಲ್ಲಿ ನೋಟಿಸ್‌ ನೀಡಲಾಗಿದೆ ಎಂದು ಹೇಳಿದರು.

    ಹೂ, ಹಣ್ಣು, ಹಾಲು ಸೇರಿ ಮೊದಲಾದವು ಜಿಎಸ್‌ಟಿಯಿಂದ ಹೊರಗಡೆ ಇದೆ. ಇವರಿಗೆ ನೋಟಿಸ್‌ ಬಂದಿದ್ದರೆ ಆ ವ್ಯಾಪಾರಿಗಳು ಸ್ಪಷ್ಟೀಕರಣ ನೀಡಬಹುದು. ಸರಕು ಖರೀದಿ ವೇಳೆ ಜಿಎಸ್‌ಟಿ ಪಾವತಿ ಮಾಡಿದ್ದರೆ ಮಾರಾಟದಲ್ಲಿ ಜಿಎಸ್‌ಟಿ ಪಾವತಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಅದಕ್ಕೆ ಪೂರಕ ದಾಖಲೆಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ ಎಂದರು.

  • ಮೈಸೂರು | ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ಮಹಿಳೆಗೆ 1.41 ಕೋಟಿ ವಂಚನೆ ಆರೋಪ

    ಮೈಸೂರು | ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ಮಹಿಳೆಗೆ 1.41 ಕೋಟಿ ವಂಚನೆ ಆರೋಪ

    ಮೈಸೂರು: ಇಲ್ಲಿನ ನವನಗರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ (Navanagara Urban Co-Operative Bank) ಮಹಿಳೆಯೊಬ್ಬರಿಗೆ 1.41 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

    ಸುನಿತಾ ಎಂಬ ಮಹಿಳೆಯ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ (Savings Account) 1 ಕೋಟಿ 41 ಲಕ್ಷ ರೂ. ಹಣವನ್ನು ಅವರ ಅನುಮತಿಯಿಲ್ಲದೇ ಬ್ಯಾಂಕಿನ 2 ಅನ್ಯ ಖಾತೆಗೆ ಟ್ರಾನ್ಸಫರ್ ಮಾಡಿಕೊಳ್ಳಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಪ್ರವಾಸಿಗರ ಕೊಂಡೊಯ್ಯುತ್ತಿದ್ದ ಬಸ್ ಅಪಘಾತ – 25 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಸಾಲಕ್ಕಾಗಿ ಬ್ಯಾಂಕ್‌ಗೆ ನೀಡಿದ್ದ ಚೆಕ್‌ಗಳನ್ನು ಬಳಸಿ, ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್.ಬಸಂತ್, ಜನರಲ್ ಮ್ಯಾನೇಜರ್ ಸುರೇಶ್, ಮ್ಯಾನೇಜರ್ ಶಿವಕುಮಾರ್ ಅವರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಕ್ಫ್‌ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್‌ ಆರೋಪ

    ಈ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷರನ್ನು ವಿಚಾರಿಸಿದಾಗ ಬ್ಯಾಂಕ್‌ನ ಹಿತದೃಷ್ಟಿಯಿಂದ ಹಣ ಬಳಸಿದ್ದೇವೆಂದು 4 ವರ್ಷಗಳಿಂದ ಸಬೂಬು ಹೇಳುತ್ತಾ ಬಂದಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಮ್ಯಾನೇಜರ್ ಶಿವಕುಮಾರ್ ಅವರನ್ನ ಸೇವೆಯಿಂದ ಅಮಾನತು ಮಾಡಲಾಗಿತ್ತು. ಅವರು ಬಳಸಿಕೊಂಡ ಹಣಕ್ಕೆ ಬಡ್ಡಿ ಸಹಿತ ವಾಪಸ್ ಕೊಡಿಸುವುದಾಗಿ ಅಧ್ಯಕ್ಷ ಕೆ.ಎನ್. ಬಸಂತ್ ಭರವಸೆ ನೀಡಿದ್ದರು. ಈವರೆಗೆ 25 ಲಕ್ಷ ರೂ. ಮಾತ್ರ ಸುನಿತಾ ಅವರ ಖಾತೆಗೆ ಜಮೆ ಆಗಿದ್ದು, ಇನ್ನೂ 1 ಕೋಟಿ 16 ಲಕ್ಷ ರೂ. ಕೊಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಗುಂಡು ತಗುಲಿ ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು

    ತಮ್ಮ ಬಾಕಿ ಹಣವನ್ನು ವಾಪಸ್ ನೀಡದೇ ಇದಿದ್ದಕ್ಕೆ ಸುನಿತಾ, ಬ್ಯಾಂಕ್‌ನ ಅಧ್ಯಕ್ಷ, ಜನರಲ್ ಮ್ಯಾನೇಜರ್ ಹಾಗೂ ಮ್ಯಾನೇಜರ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ (Vijayanagara Police Station) ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

  • ಸೀಜ್ ಆಗಿದ್ದ ಹಣಕ್ಕೆ ಕನ್ನ ಹಾಕಿದ ಸೈಬರ್ ವಂಚಕರು – ನಕಲಿ ಕೋರ್ಟ್ ಆರ್ಡರ್ ತಯಾರಿಸಿ 1.32 ಕೋಟಿ ಲೂಟಿ

    ಸೀಜ್ ಆಗಿದ್ದ ಹಣಕ್ಕೆ ಕನ್ನ ಹಾಕಿದ ಸೈಬರ್ ವಂಚಕರು – ನಕಲಿ ಕೋರ್ಟ್ ಆರ್ಡರ್ ತಯಾರಿಸಿ 1.32 ಕೋಟಿ ಲೂಟಿ

    ಬೆಂಗಳೂರು: ಬೇರೆ ಬೇರೆ ಕೇಸ್‌ಗಳಲ್ಲಿ ಸೀಜ್ ಆದ ಹಣ ಲೂಟಿ ಮಾಡಲು ನಕಲಿ ಕೋರ್ಟ್ ಆರ್ಡರ್ ತಯಾರಿಸಿ, 1.32 ಕೋಟಿ ರೂ. ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಇಷ್ಟು ದಿನ ಸೈಬರ್ ವಂಚಕರು ನಿಮ್ಮ ಅಕೌಂಟ್‌ನಲ್ಲಿರುವ ಹಣಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದರು. ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ವಂಚನೆಗೊಳಗಾದವರ ಸೀಜ್ ಹಣಕ್ಕೆ ಕನ್ನ ಹಾಕಲು, ನಕಲಿ ಕೋರ್ಟ್ ಆರ್ಡರ್ ನೀಡಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ.ಇದನ್ನೂ ಓದಿ: 27ನೇ ವಯಸ್ಸಿಗೆ ಬದುಕು ಮುಗಿಸಿದ ‘ಆಸ್ಟ್ರೇಲಿಯಾದ ನೆಕ್ಸ್ಟ್ ಟಾಪ್ ಮಾಡೆಲ್’ ಮಾಜಿ ಸ್ಪರ್ಧಿ

    ಸಾಮಾನ್ಯವಾಗಿ ಸೈಬರ್ ವಂಚನೆಯ ಸ್ಟೋರಿಗಳನ್ನು ನೀವೆಲ್ಲ ನೋಡಿರುತ್ತೀರಿ. ಆದರೆ ಇದೀಗ ವಂಚಕರು ಸೀಜ್ ಆದ ಹಣಕ್ಕೆ ಕನ್ನ ಹಾಕಿದ್ದಾರೆ. ಬೆಟ್ಟಿಂಗ್‌ನಲ್ಲಿ ಅರೆಸ್ಟ್ ಆಗಿದ್ದ ಆರೋಪಿಗಳು, ಜೈಲಿಂದ ಹೊರಬಂದು ತನ್ನ ಖತರ್ನಾಕ್ ಬುದ್ಧಿಯಿಂದ ಸರ್ಕಾರಕ್ಕೆ ಪಂಗನಾಮ ಹಾಕಿದ್ದಾನೆ. ಆರೋಪಿಗಳನ್ನು ಸಾಗರ್ ಲಕುರ, ಅಭಿಮನ್ಯು, ನಿರಜ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಸಾಗರ್. ಬ್ಯಾಂಕ್‌ನಲ್ಲಿ ಫ್ರೀಜಾದ ಹಣವನ್ನು ಟಾರ್ಗೆಟ್ ಮಾಡಿ, ಅದನ್ನು ಲಪಟಾಯಿಸುವ ಕಲೆ ಹೊಂದಿದ್ದ.

    ಹೌದು, ಬ್ಯಾಂಕ್ ದರೋಡೆ ಮಾಡದೇ ಬ್ಯಾಂಕಿನಿಂದ ಹಣ ವಂಚಿಸಿದ್ದಾರೆ. ನಕಲಿ ಕೋರ್ಟ್ ಆರ್ಡರ್ ಮಾಡಿ, ಸರ್ಕಾರದ ನಕಲಿ ಮೇಲ್ ಐಡಿ ಯೂಸ್ ಮಾಡಿಕೊಂಡು ಒಂದೂವರೆ ಕೋಟಿ ಹಣ ವಂಚಿಸಿದ್ದಾರೆ. ಆರೋಪಿ ಸಾಗರ್ ಆಕ್ಸಿಸ್ ಬ್ಯಾಂಕ್‌ಲ್ಲಿ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಹಣವನ್ನು ಯಾವ ರೀತಿ ಫ್ರೀಜ್ ಮಾಡುತ್ತಾರೆ ಹಾಗೂ ಯಾವ ರೀತಿ ರಿಲೀಸ್ ಮಾಡುತ್ತಾರೆ ಎಂದು ತಿಳಿದುಕೊಂಡಿದ್ದ.

    ತಾನೊಬ್ಬ ಸರ್ಕಾರಿ ಅಧಿಕಾರಿ, ತನಗೆ ಸರ್ಕಾರದ ಮೇಲ್ ಐಡಿ ಬೇಕು ಎಂದು ಮನವಿ ಸಲ್ಲಿಸಿ ಅಧಿಕೃತವಾಗಿ ಸರ್ಕಾರದಿಂದಲೇ ಮೇಲ್ ಐಡಿ ಪಡೆದುಕೊಂಡಿದ್ದ. ಫೋಟೋಶಾಪ್‌ನಲ್ಲಿ ನಕಲಿ ಕೋರ್ಟ್ ಆರ್ಡರ್ ತಯಾರಿಸಿ, ಅದಕ್ಕೆ ರಾಜ್ಯ ಸರ್ಕಾರದ ಸೀಲ್ ಎಲ್ಲವನ್ನು ಹಾಕಿ ಇಮೇಲ್ ಮೂಲಕ ಬೆಂಗಳೂರಿನ ಐಸಿಐಸಿಐ ಬ್ಯಾಂಕ್‌ಗೆ ಕೋರ್ಟ್ ಆರ್ಡರ್ ಇದೆ ಎಂಬಂತೆ 18 ಮೇಲ್ ಕಳುಹಿಸಿದ್ದ. ಖಾತೆಯೊಂದರಲ್ಲಿ ಫ್ರೀಜ್ ಆಗಿದ್ದ ಹಣವನ್ನು ರಿಲೀಸ್ ಮಾಡಿ, ಮತ್ತೊಂದು ಖಾತೆಗೆ ವರ್ಗಾವಣೆ ಮಾಡುವಂತೆ ಸೂಚಿಸಿದ್ದ. ಇದನ್ನು ನಂಬಿದ ಬ್ಯಾಂಕ್ ಮ್ಯಾನೇಜರ್ ಹಣ ರಿಲೀಸ್ ಮಾಡಿದ್ದರು.

    ಆದರೆ ಕೆಲ ದಿನಗಳಲ್ಲೇ ವಂಚಕರ ಅಸಲಿಯತ್ತು ಬಯಲಾಗಿದೆ. ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರ ಕೈಗೆ ಇದೇ ರೀತಿ ಕೋರ್ಟ್ ಆರ್ಡರ್ ಬಂದಿದೆ. ಒಂದು ಮೈಸೂರು ಕೋರ್ಟ್ ಆರ್ಡರ್ ಆಗಿದ್ದರೆ, ಇನ್ನೊಂದು ಎಕಾನಮಿಕ್ಸ್ ಅಫೆನ್ಸ್. ಆದರೆ ಅದು ಮೈಸೂರು ಕೋರ್ಟ್ ಬರಲ್ಲ ಅಂತ ತನಿಖೆಗಿಳಿದಾಗ ಆರೋಪಿಗಳ ಅಸಲಿಯತ್ತು ಬಯಲಾಗಿದೆ.

    ಇನ್ನೂ ತನಿಖೆ ಕೈಗೊಂಡ ಪೊಲೀಸರು ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆಯ ಜಾಡು ಹಿಡಿದು ದೆಹಲಿ ತಲುಪಿದರು. ಅಲ್ಲಿ ಅಭಿಮನ್ಯುವನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ಮಾಡಿದಾಗ ವಂಚನೆಯ ಅಸಲಿ ಕಹಾನಿ ಬಯಲಾಗಿದೆ. ಆರೋಪಿಗಳು ವಂಚಿಸಿದ್ದ ಹಣದಲ್ಲಿ ಐಷಾರಾಮಿ ಜೀವನ ನಡೆಸಿ, ಬಿಂದಾಸ್ ಆಗಿದ್ದರು ಎಂಬುದು ಕೂಡ ಗೊತ್ತಾಗಿದೆ.

    ಸದ್ಯ ಪೊಲೀಸರು ಮೂವರು ಆಸಾಮಿಗಳನ್ನು ಬಂಧಿಸಿ, ವಂಚಕರ ಖಾತೆಯಲ್ಲಿದ್ದ 63 ಲಕ್ಷ ರೂ.ಯನ್ನು ಫ್ರೀಜ್ ಮಾಡಿದ್ದಾರೆ. ಇನ್ನೂ ಈ ಜಾಲದ ಹಿಂದೆ ಬೇರೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆಯೂ ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ: ಧಾರವಾಡದಲ್ಲಿ ಗಾಳಿ ಸಹಿತ ಮಳೆ – ಆಂಜನೇಯ ದೇವಸ್ಥಾನದ ಮೇಲೆ ಬಿದ್ದ ಮರ

  • ನ್ಯಾಮತಿ ಬ್ಯಾಂಕ್ ದರೋಡೆಗೂ ಮುನ್ನ ಪೂಜೆ ಸಲ್ಲಿಸಿದ್ದ ದೇವಾಲಯದಲ್ಲಿ ಕಳ್ಳತನ!

    ನ್ಯಾಮತಿ ಬ್ಯಾಂಕ್ ದರೋಡೆಗೂ ಮುನ್ನ ಪೂಜೆ ಸಲ್ಲಿಸಿದ್ದ ದೇವಾಲಯದಲ್ಲಿ ಕಳ್ಳತನ!

    ದಾವಣಗೆರೆ: ನ್ಯಾಮತಿ ಎಸ್‍ಬಿಐ ಬ್ಯಾಂಕ್ (Bank) ಕಳುವಿಗೆ ಮೊದಲು ಕಳ್ಳರು ಪೂಜೆ ಮಾಡಿದ್ದ ದೇವಸ್ಥಾನದಲ್ಲಿ (Temple) ಈಗ ಹುಂಡಿ ಕಳ್ಳತನವಾಗಿದೆ.

    ನ್ಯಾಮತಿ ಪಟ್ಟಣದ ಸುರಹೊನ್ನೇ ಬಳಿ ಇರುವ ಗಡಿ ಚೌಡಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಬೈಕ್‍ನಲ್ಲಿ ಮುಖಕ್ಕೆ ಮಾಸ್ಕ್‌ ಧರಿಸಿ ಬಂದ ಕಳ್ಳ ದೇವರ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಕಳ್ಳನ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ – ತಮಿಳುನಾಡಿನ ಪಾಳು ಬಾವಿಯಲ್ಲಿ ಚಿನ್ನಾಭರಣ ಇಟ್ಟಿದ್ದ ಗ್ಯಾಂಗ್!

    ಇತ್ತೀಚೆಗೆ ನಡೆದಿದ್ದ ನ್ಯಾಮತಿ ಎಸ್‍ಬಿಐ ಬ್ಯಾಂಕ್‍ನ ಕಳ್ಳತನಕ್ಕೂ ಮುನ್ನ ಹಾಗೂ ಕಳ್ಳತನದ ಬಳಿಕ ಅರೋಪಿಗಳು ಇದೇ ದೇವಾಲಯದಲ್ಲಿ ಪೂಜೆ ನಡೆಸಿದ್ದರು. ಈಗ ಅದೇ ದೇವಸ್ಥಾನದ ಹುಂಡಿ ಕಳುವಾಗಿದ್ದು ಚರ್ಚೆಗೆ ಗ್ರಾಸವಾಗಿದೆ.

    ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಈ ದರೋಡೆ ನಡೆದಿತ್ತು. ಬ್ಯಾಂಕ್ ಕಿಟಕಿಯ ಸರಳನ್ನು ಮುರಿದು, 12.96 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಹೋಗುವಾಗ ಬ್ಯಾಂಕ್ ತುಂಬೆಲ್ಲಾ ಕಾರದ ಪುಡಿಯನ್ನು ಚೆಲ್ಲಿ ಎಸ್ಕೇಪ್ ಆಗಿದ್ದರು. ಈ ಎಲ್ಲಾ ಆರೋಪಿಗಳ ಬಂಧನವಾಗಿದ್ದು, ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು 1.13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಬುರ್ಖಾಧಾರಿ ಮಹಿಳೆಯರು!

  • ದಾವಣಗೆರೆ| ಬ್ಯಾಂಕ್ ದರೋಡೆಗೆ ಬಂದಿದ್ದ ಯುಪಿ ಗ್ಯಾಂಗ್ ಮೇಲೆ ಪೊಲೀಸರಿಂದ ಫೈರಿಂಗ್ – ನಾಲ್ವರು ಅರೆಸ್ಟ್

    ದಾವಣಗೆರೆ| ಬ್ಯಾಂಕ್ ದರೋಡೆಗೆ ಬಂದಿದ್ದ ಯುಪಿ ಗ್ಯಾಂಗ್ ಮೇಲೆ ಪೊಲೀಸರಿಂದ ಫೈರಿಂಗ್ – ನಾಲ್ವರು ಅರೆಸ್ಟ್

    ದಾವಣಗೆರೆ: ಬ್ಯಾಂಕ್ (Bank) ದರೋಡೆಗೆ ಬಂದಿದ್ದ ಉತ್ತರ ಪ್ರದೇಶದ (Uttar Pradesh) ನಾಲ್ವರು ದರೋಡೆಕೋರರನ್ನು ದಾವಣಗೆರೆ (Davanagere) ಪೊಲೀಸರು ಹೊನ್ನಾಳಿ ತಾಲೂಕಿನ ಅರಬಘಟ್ಟದಲ್ಲಿ ಬಂಧಿಸಿದ್ದಾರೆ.

    ದರೋಡೆಕೋರರ ಗ್ಯಾಂಗ್ ಬ್ಯಾಂಕ್ ದರೋಡೆಗೆ ಆಗಮಿಸಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೊನ್ನಾಳಿ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, 7 ಜನ ಹರಿಹರದ ಕಡೆಯಿಂದ ನ್ಯಾಮತಿ ಕಡೆಗೆ ಎರಡು ಕಾರುಗಳಲ್ಲಿ ಹೋಗುತ್ತಿದ್ದರು. ಇವರನ್ನು ಹೊನ್ನಾಳಿ ಬಳಿಯ ಚೆಕ್‍ಪೋಸ್ಟ್‌ನಲ್ಲಿ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಅವರು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಕಾರನ್ನು ಬೆನ್ನಟ್ಟಿದ ಪೊಲೀಸರು ಅರಬಘಟ್ಟ ಬಳಿ ತಡೆದಿದ್ದಾರೆ. ಆಗ ಅರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ ಕಾನ್ಸ್‌ಟೇಬಲ್‌ ಅನಂದ್ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರು| ಐದನೇ ಮಹಡಿಯಿಂದ ಬಿದ್ದು ಬಾಲಕ ಸಾವು

    ದರೋಡೆಕೋರರು ದಾಳಿ ನಡೆಸುತ್ತಿದ್ದಂತೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ರವಿಯವರು ಅರೋಪಿ ಗುಡ್ಡು ಅಲಿಯಾನ್ ಗುಡು ಖಾಲಿಯಾ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಅಲ್ಲದೇ ಆತನ ಜೊತೆಗಿದ್ದ ಉತ್ತರ ಪ್ರದೇಶ ಮೂಲದ ಹಸ್ರತ್ ಅಲಿ, ಅಸಾಂ ಯಾನೆ ಟನ್ ಟನ್, ಕಮರುನ್ ಯಾನೆ ಬಾಬು ಸೆರಲಿಯನ್ನು ಬಂಧಿಸಿದ್ದಾರೆ. ಗ್ಯಾಂಗ್‍ನ ನಟೋರಿಯಸ್ ಲೀಡರ್ ರಾಜಾರಾಮ್, ಬಾಬುಷಾ, ಹಾಗೂ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆಪೀಜ್ ಪರಾರಿಯಾಗಿದ್ದಾರೆ. ಪರಾರಿಯಾದ ಅರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಲಾಗಿದೆ.

    ಕಳೆದ ಕೆಲ ತಿಂಗಳ ಹಿಂದೆ ನ್ಯಾಮತಿಯಲ್ಲಿ ನಡೆದ ಎಸ್‍ಬಿಐ ಬ್ಯಾಂಕ್‍ನ ದರೋಡೆಗೂ ಇವರಿಗೂ ಸಂಬಂಧ ಇದೆ ಎಂದು ಶಂಕೆ ವ್ಯಕ್ತವಾಗುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿರುವ ಮಚ್ಚು, ಬುಲೆಟ್, ಎರಡು ಕಾರುಗಳು, ಮಂಕಿ ಕ್ಯಾಪ್‍ಗಳನ್ನು ಎಸ್‍ಪಿ ಉಮಾ ಪ್ರಶಾಂತ್ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಮಂಗಳೂರು| ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆ – 75 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

  • ನಕಲಿ ಬಂಗಾರ ಇಟ್ಟು ಬ್ಯಾಂಕ್ ಸಿಬ್ಬಂದಿಯಿಂದಲೇ 19 ಲಕ್ಷ ವಂಚನೆ

    ನಕಲಿ ಬಂಗಾರ ಇಟ್ಟು ಬ್ಯಾಂಕ್ ಸಿಬ್ಬಂದಿಯಿಂದಲೇ 19 ಲಕ್ಷ ವಂಚನೆ

    ಬಳ್ಳಾರಿ: ನಕಲಿ ಬಂಗಾರ (Fake Gold) ಇಟ್ಟು ಬ್ಯಾಂಕ್ (Bank) ಸಿಬ್ಬಂದಿಯಿಂದಲೇ 19 ಲಕ್ಷ ರೂ. ವಂಚನೆ ಎಸಗಿದ ಘಟನೆ ಸಿರುಗುಪ್ಪ ಪಟ್ಟಣದ ಆಕ್ಸಿಸ್ ಬ್ಯಾಂಕ್‌ನಲ್ಲಿ ನಡೆದಿದ್ದು ಮೂವರು ಬ್ಯಾಂಕ್ ಸಿಬ್ಬಂದಿ ವಿರುದ್ದ ಕೇಸ್‌ ದಾಖಲಾಗಿದೆ.

    ಅಡಮಾನ ವಿಭಾಗದ ಮುಖ್ಯಸ್ಥ ಕಾರ್ತಿಕ್, ಶ್ರೀನಿವಾಸ್ ಮತ್ತು ಅಕ್ಕಸಾಲಿಗ ರಾಮನಗೌಡ ವಿರುದ್ಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

    ಕಳೆದ ವರ್ಷ ಈ ಮೂವರು ಆರೋಪಿಗಳು ಸಿರುಗುಪ್ಪ ಆಕ್ಸಿಸ್ ಬ್ಯಾಂಕ್‌ನಿಂದ ವರ್ಗಾವಣೆಯಾಗಿದ್ದಾರೆ. ವರ್ಗಾವಣೆಯಾಗಿ ಒಂದು ವರ್ಷದ ಬಳಿಕ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: Ind vs Pak ಬ್ಲಾಕ್‌ಬಸ್ಟರ್ ಪಂದ್ಯದ VIP ಟಿಕೆಟ್‌ 3.50 ಕೋಟಿಗೆ ಮಾರಿಕೊಂಡ ಪಿಸಿಬಿ ಅಧ್ಯಕ್ಷ

     

    ಹೇಮಾವತಿ ಎನ್ನುವವರ ಹೆಸರಿನಲ್ಲಿ 339 ಗ್ರಾಂ ಬಂಗಾರ ಅಡವಿಟ್ಟು 10.35 ಲಕ್ಷ ರೂ. ಸಾಲ ನೀಡಿದ್ದಾರೆ. ಬಳಿಕ ಆಡಿಟ್ ಮಾಡುವ ಸಂದರ್ಭದಲ್ಲಿ ನಕಲಿ ಬಂಗಾರಕ್ಕೆ ಸಾಲ ನೀಡಿರುವುದು ಪತ್ತೆಯಾಗಿದೆ.

    ಯಾಸೀನ್ ಎನ್ನುವರು 42 ಗ್ರಾಂ ಚಿನ್ನ ಇಟ್ಟು, ವರ್ಷದ ನಂತರ ಸಾಲ ತೀರಿಸಲು ಬಂದಾಗ ಅಕೌಂಟ್ ಕ್ಲೋಸ್ ಆಗಿ ಚಿನ್ನ ಮಾಯ‌ವಾಗಿದೆ.

    ಬಸವರಾಜ್ ಎನ್ನುವರು ಚಿನ್ನದ ಸಾಲ ಕಟ್ಟಿದ್ರೂ ಅವರ 4.2 ಗ್ರಾಂ ಉಂಗುರ ಮಾಯವಾಗಿದೆ. ವಿವಿಧ ರೀತಿಯಲ್ಲಿ ಮೂವರು ಆರೋಪಿಗಳು ಒಟ್ಟು 19 ಲಕ್ಷ ರೂ. ವಂಚನೆ ಮಾಡಿರುವುದು ಬ್ಯಾಂಕ್‌ ತನಿಖೆಯಿಂದ ಬೆಳಕಿಗೆ ಬಂದಿದೆ.

     

  • ಬ್ಯಾಂಕ್ ಲಾಕರ್‌ನಲ್ಲಿಟ್ಟ ದುಡ್ಡಿಗೆ ಗೆದ್ದಲು – 8 ಲಕ್ಷ ಢಮಾರ್!

    ಬ್ಯಾಂಕ್ ಲಾಕರ್‌ನಲ್ಲಿಟ್ಟ ದುಡ್ಡಿಗೆ ಗೆದ್ದಲು – 8 ಲಕ್ಷ ಢಮಾರ್!

    ಬೆಂಗಳೂರು: ಬ್ಯಾಂಕ್‌ ಲಾಕರ್‌ನಲ್ಲಿ (Bank Locker) ಇಟ್ಟಿದ್ದ 8 ಲಕ್ಷ ರೂಪಾಯಿ ಗೆದ್ದಲಿಗೆ ಬಲಿಯಾಗಿದ್ದಕ್ಕೆ ಗ್ರಾಹಕರೊಬ್ಬರು ಈಗ ಬೆಂಗಳೂರಿನ ಪ್ರಧಾನ ಕಚೇರಿಗೆ ದೂರು ನೀಡಿದ್ದಾರೆ.

    ಸಫಲ್‌ ಮಂಗಳೂರಿನ (Mangaluru) ಕೋಟೆಕಾರ್‌ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ 8 ಲಕ್ಷ ರೂ. ಇಟ್ಟಿದ್ದರು. 6 ತಿಂಗಳ ಬಳಿಕ ಔಷಧಿಗಾಗಿ ದುಡ್ಡು ತೆಗೆಯಲು ಲಾಕರ್‌ ತೆರೆದಿದ್ದಾರೆ.

    ಬ್ಯಾಂಕ್ ನವರೇ ಖುದ್ದಾಗಿ ಲಾಕರ್ ಓಪನ್ ಮಾಡಿದ್ದಾರೆ. ಲಾಕರ್ ಮಳೆನೀರಿನಲ್ಲಿ ನೆಂದ ಸ್ಥಿತಿಯಲ್ಲಿದ್ದರೆ ದುಡ್ಡು ಸಂಪೂರ್ಣವಾಗಿ ಕಪ್ಪಾಗಿ ಹುಡಿ ಹುಡಿಯಾಗಿ ಗೆದ್ದಲು ಹಿಡಿದು ಚೂರಾಗಿ ಬಿದ್ದಿದೆ. ಎಂಟು ಲಕ್ಷ ರೂ. ದುಡ್ಡು ಇದೇ ರೀತಿ ಆಗಿದೆ. ಇದನ್ನೂ ಓದಿ: ದತ್ತಪೀಠದ ತಪ್ಪಲಿನಲ್ಲಿ ಕಾಡ್ಗಿಚ್ಚು – ಹೊತ್ತಿ ಉರಿದ ಅಪರೂಪದ ಶೋಲಾರಣ್ಯ

     

    ಆರ್‌ಬಿಐ ನಿಯಮದ ಪ್ರಕಾರ ಪ್ರಕಾರ ದುಡ್ಡನ್ನು ಲಾಕರ್‌ನಲ್ಲಿ ಇಡುವಂತಿಲ್ಲ ಹೀಗಾಗಿ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಬ್ಯಾಂಕ್‌ನವರು ಹೇಳಿದ್ದಾರೆ. ಹೀಗಾಗಿ ಸಫಲ್ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿ ಪ್ರಧಾನ ಕಚೇರಿಗೆ ದೂರು ನೀಡಿ, ಹಳೆಯ ಕಟ್ಟಡ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದೆ. ಹೀಗಾಗಿ ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

    ಲಾಕರ್‌ನಲ್ಲಿ ಹಣ ಇಡಬಾರದು ನಿಜ. ಆದರೆ ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಸೇಫ್‌ ಎಂಬ ನಂಬಿಕೆಯಿದೆ. ಆದರೆ ನಿರ್ವಹಣೆ ಕೊರತೆಯಿಂದ ಈ ರೀತಿ ಸಮಸ್ಯೆಯಾದರೆ ಹೊಣೆ ಯಾರು ಎನ್ನುವುದೇ ಪ್ರಶ್ನೆ.