Tag: Banglore

  • ಬೆಂಗಳೂರು ರಸ್ತೆಗೆ ಪುನೀತ್ ರಾಜ್‌ಕುಮಾರ್ ನಾಮಫಲಕ ಅಳವಡಿಕೆ

    ಬೆಂಗಳೂರು ರಸ್ತೆಗೆ ಪುನೀತ್ ರಾಜ್‌ಕುಮಾರ್ ನಾಮಫಲಕ ಅಳವಡಿಕೆ

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನಂತರ ಬೆಂಗಳೂರಿನ ಯಾವುದಾರೂ ರಸ್ತೆಗೆ ಪುನೀತ್ ಹೆಸರು ಇಡಬೇಕು ಎಂಬ ಕೂಗು ಕೇಳಿ ಬರುತ್ತಿತ್ತು. ಅದಕ್ಕಿಗ ಕಾಲ ಕೂಡಿ ಬಂದಿದೆ. 12.ಕಿಲೋ ಮೀಟರ್ ಉದ್ದದ ರಸ್ತೆಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಎಂದು ನಾಮಫಲಕ ಅಳವಡಿಸಲಾಗಿದೆ.

    ಅಪ್ಪು ಅಗಲಿಕೆಯ ನಂತರ ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಪುನೀತ್ ಹೆಸರನ್ನೇ ಇಡಿಬೇಕು ಎಂಬ ಕೂಗು ಅಭಿಮಾನಿಗಳಿಂದ ಕೇಳಿ ಬರುತ್ತಿತ್ತು. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌ಆರ್ ರಮೇಶ್ ಬಿಬಿಎಂಪಿ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ 12 ಕಿಲೋ ಮೀಟರ್ ಉದ್ದದ ರಸ್ತೆಗೆ ಬಿಬಿಎಂಪಿ ಅಧಿಕಾರುಗಳು ಪುನೀತ್ ಹೆಸರಿನ ನಾಮಫಲಕ ಇಡಲು ಗ್ರೀನ್ ಕೊಟ್ಟಿದ್ದರು. ಈಗ ಅದರಂತೆಯೇ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಎಂದು ನಾಮಫಲಕ ಅಳವಡಿಸಲಾಗಿದೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿಯೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರನ್ನು ಇಡುವ ಬಗ್ಗೆ ಅನುಮೋದನೆ ನೀಡಲಾಗಿತ್ತು. ಅದರಂತೆಯೇ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್‌ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ `ಕರ್ನಾಟಕ ರತ್ನ ಡಾಟಟ ಪುನೀತ್ ರಾಜ್‌ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ. ಇದನ್ನೂ ಓದಿ: ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ಇನ್ನು ಈ ಸುದ್ದಿ ತಿಳಿದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಬೆಂಗಳೂರಿನ ರಸ್ತೆಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಎಂದು ನಾಮಫಲಕ ಅಳವಡಿಸಿರೋದಕ್ಕೆ ಅಪ್ಪು ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

  • ಬೆಂಗಳೂರಿಗೆ ಬಂದಿಳಿದ ನಟಿ ಶ್ರದ್ಧಾ ಕಪೂರ್: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ಬೆಂಗಳೂರಿಗೆ ಬಂದಿಳಿದ ನಟಿ ಶ್ರದ್ಧಾ ಕಪೂರ್: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದಾರೆ. `ಆಶಿಕಿ 2′ ನಟಿ ಶ್ರದ್ಧಾ ಜೊತೆ ಸೆಲ್ಫಿ ಕ್ಲಿಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬ್ಯೂಟಿ ಜೊತೆ ಟ್ಯಾಲೆಂಟ್ ಇರುವ ನಟಿ ಶ್ರದ್ಧಾ ಕಪೂರ್, ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಮುಂಬೈ ಬೆಡಗಿ ಶ್ರದ್ಧಾ ಕಪೂರ್ ಇದೀಗ ಬೆಂಗಳೂರಿಗೆ ಬಂದಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್‌ನ ಜ್ಯುವೆಲರಿ ಶಾಪ್ ಉದ್ಘಾಟನೆಗಾಗಿ ಶ್ರದ್ಧಾ ಕಪೂರ್ ಬಂದಿದ್ದರು. ಈ ವೇಳೆ ಸಾಕಷ್ಟು ಅಭಿಮಾನಿಗಳು ಅವರ ಜೊತೆ ಫೋಟೋಗಾಗಿ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಇನ್ನು ಕರಣ್ ಜೋಹರ್ 50ನೇ ವರ್ಷದ ಬರ್ತಡೇ ಪಾರ್ಟಿಯ ನಂತರ ಬೆಂಗಳೂರಿಗೆ ಆಗಮಿಸಿರುವ ಶ್ರದ್ಧಾ ಜೊತೆಗೆ ಫೋಟೋಗಾಗಿ ಅಭಿಮಾನಿಗಳು ಸುತ್ತುವರಿದಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಹಿಂದಿಯ ನಿರೀಕ್ಷಿತ ಚಿತ್ರ `ಲವ್ ರಂಜನ್’ ಚಿತ್ರದಲ್ಲಿ ಬ್ಯುಸಿಯಿದ್ದಾರೆ.

  • ನವೆಂಬರಿನಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ: ನಿರಾಣಿ

    ನವೆಂಬರಿನಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ: ನಿರಾಣಿ

    ಬೆಂಗಳೂರು: ನವೆಂಬರಿನಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಕೈಗಾರಿಕ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ನವೆಂಬರಿನಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶವನ್ನು ನಡೆಸಲು ನಿರ್ಧಾರಿಸಲಾಗಿದೆ. ಮುಖ್ಯಮಂತ್ರಿಗಳ ಚರ್ಚಿಸಿ ಒಂದು ವಾರದಲ್ಲಿ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್ ಜೊತೆ ಹೊಂದಾಣಿಕೆ ಸಾಹಸಕ್ಕೆ ಕೈಹಾಕಿ, ನಿಮ್ಮ ಕುರ್ಚಿಗೆ ಕುತ್ತು ತಂದ್ಕೋಬೇಡಿ- ಸಿಎಂಗೆ ರೇವಣ್ಣ ಸಲಹೆ

    ನಾಲ್ಕು ಕಂದಾಯ ವಿಭಾಗವಾರು ಕೈಗಾರಿಕಾ ಅದಾಲತ್ ನಡೆಸಲಾಗುವುದು. ಕರ್ನಾಟಕ ಉದ್ಯೋಗ ಮಿತ್ರ ದೇಶದ ಅಗ್ರಮಾನ್ಯವಾಗಿ ಹೂಡಿಕೆ ಪ್ರಚಾರ ಏಜೆನ್ಸಿಯಾಗಿ ಹೊರ ಹೊಮ್ಮಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 62,085 ಕೋಟಿ ರೂ. ಎಫ್‍ಡಿಐ ಇಡಲು ಆಕರ್ಷಿಸಲಾಗಿದೆ. ಶೀಘ್ರವೇ ದುಬೈನಲ್ಲಿ ಕೈಗಾರಿಕ ಮೇಳ ನಡೆಯಲಿದ್ದು, ರಾಜ್ಯದ ಕೈಗಾರಿಕಾ ಇಲಾಖೆಯ ಸ್ಟಾಲ್‍ಗಳನ್ನು ಎಂಟು ದಿನಗಳ ಕಾಲ ಹಾಕಲಾಗುವುದು. ದುಬೈ ಮೇಳದ ನಂತರ ಬೇರೆ ಬೇರೆ ದೇಶಗಳಲ್ಲಿ ರೋಡ್ ಶೋ ನಡೆಸಲಾಗುವುದು ಎಂದರು.

    ಈ ಹಿಂದೆ ಕೈಗಾರಿಕೆಗಾಗಿ ನೀಡಲಾಗಿದ್ದ ಜಮೀನು ಬಳಕೆ ಮಾಡದಿರುವುದು ಕಂಡು ಬಂದಿದೆ. ಅದನ್ನು ಗುರುತಿಸಿ ಆ ಜಮೀನನ್ನ ವಾಪಸ್ ಪಡೆಯಲು ಚಿಂತನೆ ನಡೆಸಿದ್ದೇವೆ. ಜಮೀನಿಗಾಗಿ ಹಣ ಕೊಟ್ಟಿರುವವರಿಗೆ ಅವಕಾಶ ನೀಡುತ್ತೇವೆ. ಯಾರು ಹಣ ಕೊಟ್ಟಿಲ್ಲ ಅವರಿಗೆ ನೋಟಿಸ್ ನೀಡುವ ಕೆಲಸ ಪ್ರಾರಂಭ ಮಾಡುತ್ತೇವೆ. ಕೈಗಾರಿಕಾ ಸಚಿವರ ಹಂತದಲ್ಲಿ ತೀರ್ಮಾನವಾಗುವ ಕೆಲಸ ನಾವು ಮಾಡ್ತೀವಿ. ಚೀಫ್ ಸೆಕ್ರೆಟರಿ ಹಂತದಲ್ಲಿರೋದನ್ನ ಅವರ ಕಡೆಯಿಂದ ಮಾಡಿಸುತ್ತೇವೆ. ಯಾರಿಗೂ ಕಿರುಕುಳ ನೀಡುವ ಕೆಲಸ ಆಗಬಾರದು. ಎಲ್ಲವನ್ನೂ ನೋಡಿಕೊಂಡು 30 ದಿನಗಳ ಅವಕಾಶ ನೀಡಿ ನಂತರ ಕ್ರಮ ಈ ಬಗ್ಗೆ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಶಿರಾಡಿ ಘಾಟ್ ನಾಲ್ಕು ಪಥದ ರಸ್ತೆ ಸಂಪೂರ್ಣಗೊಳಿಸಿ – ಗಡ್ಕರಿ ಬಳಿ ಸಿಎಂ ಮನವಿ

    ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ವೇತನ ಪಾವತಿ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ನಿರಾಣಿ, ವೇತನ ಕೊಟ್ಟಿಲ್ಲ ಎಂಬುದು ಸುಳ್ಳು. ಅಲ್ಲಿ ಯಾವುದೇ ಸಮಸ್ಯೆಯಿಲ್ಲ. ಪ್ರತಿಭಟನೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ನನಗೂ ಕಾರ್ಖಾನೆಗೂ ಯಾವುದೇ ಸಂಬಂಧವಿಲ್ಲ ನಾನು ಅದರಲ್ಲಿ ಯಾವ ಭಾಗವೂ ಅಲ್ಲ. ನಾನು 2008ರಲ್ಲೇ ನಿರಾಣಿ ಗ್ರೂಪ್‍ಗೆ ರಿಸೈನ್ ಮಾಡಿದ್ದೇನೆ. ಅಲ್ಲಿ ನಾನು ಡೈರೆಕ್ಟರ್ ಕೂಡಾ ಅಲ್ಲ ಅಲ್ಲಿಗೂ ನನಗೂ ಯಾವುದೇ ಸಂಬಂಧವಿಲ್ಲ. ಪಾಂಡವಪುರ ಕಾರ್ಖಾನೆ ಕುರಿತು ಸಂಬಂಧಿಸಿದವರು ಉತ್ತರ ಕೊಡ್ತಾರೆ ಎಂದು ಹೇಳಿದರು.

    ಜಾತಿ ಜನಗಣತಿ ವರದಿ ಬಿಡುಗಡೆ ವಿಚಾರಕ್ಕೆ ಅಪಸ್ವರ ವಿಚಾರಕ್ಕೆ ಉತ್ತರಿಸಿದ ನಿರಾಣಿ, ವೀರಶೈವ ಲಿಂಗಾಯತ ಸಮಾಜಕ್ಕೆ ನಾಯಕರಾಗಿ ಶಾಮನೂರು ಶಿವಶಂಕರಪ್ಪ ಇದ್ದಾರೆ. ಅವರು ಮತ್ತು ಹಿರಿಯರು ಸೇರಿ ಈ ವಿಚಾರವಾಗಿ ನಿರ್ಧಾರ ಮಾಡ್ತಾರೆ ಎಂದರು.

  • ಗುಣಮಟ್ಟದ ಜೀವನ – ದೇಶದಲ್ಲೇ ಬೆಂಗಳೂರು ನಂಬರ್ 1 ಸಿಟಿ

    ಗುಣಮಟ್ಟದ ಜೀವನ – ದೇಶದಲ್ಲೇ ಬೆಂಗಳೂರು ನಂಬರ್ 1 ಸಿಟಿ

    – ಕೇಂದ್ರ ಸರ್ಕಾರದಿಂದ ಘೋಷಣೆ

    ಬೆಂಗಳೂರು: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈಸ್ ಆಫ್ ಲಿವಿಂಗ್ ಮತ್ತು ಮುನ್ಸಿಪಲ್ ಫಾರ್ಮಾಮೆನ್ಸ್ ಇಂಡಿಸಿಸ್ ಕಾರ್ಯಕ್ರಮದಡಿ, ಗುಣಮಟ್ಟದ ಜೀವನ ನಡೆಸಲು (ಈಸ್ ಆಫ್ ಲಿವಿಂಗ್) ಸೂಕ್ತ ನಗರಗಳ ಪೈಕಿ ಬೆಂಗಳೂರಿಗೆ ನಂಬರ್ ವನ್ ಸ್ಥಾನ ಎಂದು ಘೋಷಿಸಿದೆ.

    ದೇಶದ ಟಾಪ್ 51 ನಗರಗಳ ಪೈಕಿ, ರಾಜ್ಯದ ಜಿಲ್ಲೆಗಳಾದ ಹುಬ್ಬಳ್ಳಿ- ಧಾರವಾಡ 37ನೇ ಸ್ಥಾನದಲ್ಲಿದೆ. ಪ್ರತೀ ವರ್ಷ ಕೇಂದ್ರ ಸರ್ಕಾರ ಸೂಚ್ಯಂಕ ಬಿಡುಗಡೆ ಮಾಡುತ್ತದೆ. ಈಸ್ ಆಫ್ ಲಿವಿಂಗ್ ಪ್ರಕಾರ, ನಗರದಲ್ಲಿ ವಾಸಿಸುತ್ತಿರುವ ಜನರ ಜೀವನ ಮಟ್ಟ, ಗುಣಮಟ್ಟದಲ್ಲಿ ಜೀವನ ನಡೆಸಲು ಬೇಕಾದ ಸೌಕರ್ಯಗಳು, ಶಿಕ್ಷಣ, ಆರೋಗ್ಯ, ಸುರಕ್ಷತೆ, ಘನತ್ಯಾಜ್ಯ ನಿರ್ವಹಣೆ ಸೌಲಭ್ಯಗಳ ಬಗ್ಗೆ ಹಾಗೂ ಜನರ ಆರ್ಥಿಕ ಅಭಿವೃದ್ಧಿಗಾಗಿ ನಗರ ಎಷ್ಟು ಸಹಕಾರಿಯಾಗಿದೆ, ಜೊತೆಗೆ ನಗರದ ಪರಿಸರ ಯಾವ ಗುಣಮಟ್ಟದಲ್ಲಿದೆ ಎಂಬ ಮೂರು ವಿಭಾಗಗಳಲ್ಲಿ ಕೇಂದ್ರ ಸರ್ಕಾರ ಜನರ ಸಮೀಕ್ಷೆ ನಡೆಸಿದೆ. ಒಟ್ಟು 100 ಅಂಕಗಳಿದ್ದು, 30 ಅಂಕಗಳು ಜನರ ಅಭಿಪ್ರಾಯಕ್ಕೆ ಬಿಟ್ಟಿತ್ತು. ಈ ಸರ್ವೇಯನ್ನು ಈಗಾಗಲೇ ಕೇಂದ್ರ ಸರ್ಕಾರ ಮಾಡಿದ್ದು, ಇಂದು ಫಲಿತಾಂಶ ಘೋಷಣೆ ಮಾಡಿದೆ.

    ಇಡೀ ದೇಶದಲ್ಲಿ ನಗರಗಳನ್ನು ಎರಡು ವಿಭಾಗ ಮಾಡಿ, ಹತ್ತು ಲಕ್ಷ ಜನಸಂಖ್ಯೆಯ ನಗರ ಹಾಗೂ ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ ನಗರವಾಗಿ ವಿಭಾಗಿಸಲಾಗಿದೆ. ಇಡೀ ದೇಶದಲ್ಲಿ ಗುಣಮಟ್ಟದ ಜೀವನ ನಡೆಸಲು ಉತ್ತಮ ನಗರ ಎಂದು ಬೆಂಗಳೂರಿಗೆ ಮೊದಲ ರ್ಯಾಂಕಿಂಗ್ ನೀಡಿದೆ. ಈ ಹಿಂದೆ, ಕಡಿಮೆ ರ್ಯಾಂಕ್ ಪಡೆಯುತ್ತಿದ್ದ ಬೆಂಗಳೂರು ಈ ಬಾರಿ ನಂಬರ್ ವನ್ ಬಂದಿದ್ದು, ಇದು ಕೇವಲ ಬಿಬಿಎಂಪಿಗಷ್ಟೇ ಅಲ್ಲ ಜಲಂಮಡಳಿ, ಬಿಡಿಎ, ಬೆಸ್ಕಾಂ, ಮೆಟ್ರೋ, ಬಿಎಂಟಿಸಿಗೂ ಸೇರಿದೆ, ಇಲ್ಲಿನ ಸಂಘಸಂಸ್ಥೆಗಳು- ಜನರಿಗೂ ಈ ಶ್ರೇಯಸ್ಸು ಸೇರಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದರು.


    ಇದೇ ರ್ಯಾಂಕಿಂಗ್ ಮುಂದೆಯೂ ಉಳಿಸಿಕೊಂಡು ಹೋಗಲು, ಬೆಂಗಳೂರನ್ನು ಸುಂದರವಾಗಿ ಮಾಡಲು ಸಿಎಂ ಕೂಡಾ ಹಲವಾರು ಯೋಜನೆ ಕೈಗೊಂಡಿದ್ದಾರೆ, ಮುನ್ಸಿಪಲ್ ಪರ್ಫಾಮೆನ್ಸ್ ಇಂಡೆಕ್ಸ್ ನ ಐದು ವಿಭಾಗಗಳಲ್ಲಿ ಬಿಬಿಎಂಪಿಗೆ ಉತ್ತಮ ಅಂಕಗಳು ಬಂದಿಲ್ಲ. ಎಲ್ಲೆಲ್ಲಿ ಎಡವಿದ್ದೇವೆ, ಎಂದು ನೋಡಬೇಕಿದೆ. ಹಾಗೆ ಹಣಕಾಸು, ತಂತ್ರಜ್ಞಾನ, ಪಾಲಿಸಿ, ಆಡಳಿತ ವಿಭಾಗಗಳಲ್ಲಿ ಕೆಲವೆಡೆ ಕಡಿಮೆ ಅಂಕಗಳು ಬಂದಿವೆ. ಇದನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

    ಇನ್ನು ಸಂಸದರಾದ ಪಿ.ಸಿ ಮೋಹನ್ ಮಾತನಾಡಿ, ಈಸ್ ಆಫ್ ಲಿವಿಂಗ್ ಸರ್ವೇಯಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ ಬಂದಿರುವುದಕ್ಕೆ ಅಭಿನಂದನೆಗಳು. ಒಂದುಕಾಲು ಕೋಟಿ ಜನಸಂಖ್ಯೆಗೆ ಎಲ್ಲಾ ರೀತಿಯ ಸೌಲಭ್ಯ ನೀಡಿ, ಪಾರ್ಕ್-ಕೆರೆಗಳ ಅಭಿವೃದ್ಧಿಯಿಂದ ಈ ಸರ್ವೇಯಲ್ಲಿ ಪ್ರಥಮ ಸ್ಥಾನ ಬಂದಿದೆ. ಕೇಂದ್ರಸರ್ಕಾರದ ಎಲ್ಲಾ ಸಹಕಾರವೂ ಬೆಂಗಳೂರು ನಗರದೊಂದಿಗೆ ಇದೆ ಎಂದರು.

  • ಇಂದ್ರಧನುಷ್ 3.0ಗೆ ಚಾಲನೆ, 13 ಕಡೆಗಳಲ್ಲಿ ಲಸಿಕೆ: ಡಾ.ಕೆ ಸುಧಾಕರ್

    ಇಂದ್ರಧನುಷ್ 3.0ಗೆ ಚಾಲನೆ, 13 ಕಡೆಗಳಲ್ಲಿ ಲಸಿಕೆ: ಡಾ.ಕೆ ಸುಧಾಕರ್

    – ಫೆಬ್ರವರಿ 22 ರಿಂದ ಮಾರ್ಚ್ 22 ರವರೆಗೆ ಲಸಿಕೆ ಅಭಿಯಾನ

    ಬೆಂಗಳೂರು: ಮಕ್ಕಳು ಹಾಗೂ ಗರ್ಭಿಣಿಯರಿಗೆ ಏಳು ರೋಗಗಳು ಬಾರದಂತೆ ತಡೆಯಲು ಕೇಂದ್ರ ಸರ್ಕಾರ ಇಂದ್ರಧನುಷ್ 3.0 ಅಭಿಯಾನ ಅನುಷ್ಠಾನಗೊಳಿಸಿದ್ದು, ರಾಜ್ಯದ 13 ಜಿಲ್ಲೆಗಳಲ್ಲಿ ಮಾರ್ಚ್ 22 ರವರೆಗೆ ಇಂದ್ರಧನುಷ್ ಲಸಿಕೆ ಅಭಿಯಾನ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ 13 ಜಿಲ್ಲೆಗಳಲ್ಲಿ ಲಸಿಕೆ ನೀಡಲಾಗುವುದು. ಫೆಬ್ರವರಿ 22 ರಿಂದ ಮಾರ್ಚ್ 22 ರವರೆಗೆ ಈ ಅಭಿಯಾನ ನಡೆಸಲಾಗುವುದು. ಈವರೆಗೆ ತಲುಪಲಾಗದ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಈ ಲಸಿಕೆ ನೀಡಲಾಗುತ್ತಿದೆ ಎಂದು ವಿವರಿಸಿದರು.

    ಬಿಜೆಪಿ ಸರ್ಕಾರ 2014 ರ ಡಿಸೆಂಬರ್ 25 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿಂದ ಈ ಲಸಿಕೆ ಅಭಿಯಾನ ಆರಂಭಿಸಿತ್ತು. ನಂತರ 2017 ರ ಅಕ್ಟೋಬರ್ 8 ರಂದು ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ ಗೆ ಚಾಲನೆ ನೀಡಲಾಗಿತ್ತು. ಈಗ ಮುಂದಿನ ಭಾಗವಾಗಿ 3.0 ಗೆ ಚಾಲನೆ ದೊರೆತಿದೆ. ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳಿರುವಂತೆಯೇ, ಇಂದ್ರಧನುಷ್ ಏಳು ರೋಗಗಳು ಬಾರದಂತೆ ತಡೆಯುತ್ತದೆ ಎಂದರು.

    ಡಿಫ್ತೀರಿಯಾ, ವೂಫಿಂಗ್ ಕಾಫ್, ಟೆಟಾನಸ್, ಟ್ಯುಬರ್ ಕ್ಯುಲೋಸಿಸ್, ಪೋಲಿಯೋ, ಮಿಸಲ್ಸ್, ಹೆಪಟೈಟಸ್-ಬಿ ಸೇರಿ ಏಳು ರೋಗಗಳು ಬಾರದಂತೆ ಲಸಿಕೆ ನೀಡಲಾಗುವುದು. ಬೆಂಗಳೂರು, ಬಿಬಿಎಂಪಿ ವ್ಯಾಪ್ತಿ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿರುವ ವಲಸಿಗರನ್ನು ಹೊಂದಿದ ಸ್ಲಂ, ಇಟ್ಟಿಗೆ ಸುಡುವ ಜಾಗ, ಅಲೆಮಾರಿಗಳು ವಾಸಿಸುವ ಸ್ಥಳ, ಕಟ್ಟಡ ನಿರ್ಮಾಣ ಸ್ಥಳ ಮೊದಲಾದ ಕಡೆಗಳಲ್ಲಿ ಮಕ್ಕಳಿಗೆ ಇಂದ್ರಧನುಷ್ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

  • ‘ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ’: ಅಂಕಣದ ಬಗ್ಗೆ  ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ

    ‘ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ’: ಅಂಕಣದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ

    ಬೆಂಗಳೂರು: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರನ್ನು ಉದ್ದೇಶಿಸಿ ನಾನು ಅಂಕಣ ಬರೆದಿಲ್ಲ. ಐದು ಆರು ಬಾರಿ ಗೆದ್ದು ಯಾವುದೇ ಅಭಿವೃದ್ಧಿ ಮಾಡದ ಕರ್ನಾಟಕದ ಎಲ್ಲ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಈ ಅಂಕಣವನ್ನು ನಾನು ಬರೆದಿದ್ದೇನೆ ಎಂದು ವಾಗ್ಮಿ, ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

    ‘ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ’ ಎನ್ನುವ ಶೀರ್ಷಿಕೆ ಅಡಿ ಚಕ್ರವರ್ತಿ ಸೂಲಿಬೆಲೆ ಅವರು ಪತ್ರಿಕೆಯೊಂದಕ್ಕೆ ಬುಧವಾರ ಅಂಕಣ ಬರೆದಿದ್ದರು. ಈ ಅಂಕಣದಲ್ಲಿ ಉತ್ತರ ಕರ್ನಾಟಕ ಪ್ರವಾಸೋದ್ಯಮದಲ್ಲಿ ಹಿಂದೆ ಉಳಿದಿದೆ ಯಾಕೆ ಸೇರಿದಂತೆ ಕರ್ನಾಟಕ ಪ್ರವಾಸದ್ಯೋಮ ಕ್ಷೇತ್ರ ಅಭಿವೃದ್ಧಿ ಯಾಕೆ ಆಗಿಲ್ಲ ಎನ್ನುವ ವಿಚಾರಗಳನ್ನು ಪ್ರಸ್ತಾಪ ಮಾಡಿ ಬರೆದಿದ್ದರು. ಈ ಅಂಕಣವನ್ನು ಅನಂತ್ ಕುಮಾರ್ ಹೆಗ್ಡೆ ಉದ್ದೇಶಿಸಿ ಬರೆಯಲಾಗಿದೆ ಎಂದು ಹೆಗ್ಡೆ ಅಭಿಮಾನಿಗಳು ಆರೋಪಿಸಿ ಸೂಲಿಬೆಲೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡುವ ವೇಳೆ ಅವರು ಈ ಮೇಲಿನಂತೆ ಹೇಳಿಕೆ ನೀಡಿದ್ದಾರೆ.

    ಅನಂತಕುಮಾರ್ ಹೆಗಡೆಗೆ ಸಂಬಂಧಿಸಿ ನಾನು ಈ ಅಂಕಣ ಬರೆದಿಲ್ಲ. ಐದು ಆರು ಬಾರಿ ಗೆದ್ದ ಎಲ್ಲ ಜನಪ್ರತಿನಿಧಿಗಳಿಗೂ ಅನ್ವಯಿಸುತ್ತದೆ. ಇದು ಕರ್ನಾಟಕ ಅಭಿವೃದ್ಧಿ ಕುರಿತಂತೆ ಕಳೆದ 6 ವರ್ಷಗಳಿಂದ ನಾವು ನೋಡಿದ್ದೇವೆ. 10 ವರ್ಷಗಳಿಂದ ಇಡೀ ರಾಜ್ಯದ ಬೆಳವಣೆಗೆ ಚಟುವಟಿಕೆಯನ್ನು ನೋಡಿದ್ದೇವೆ. 10 ವರ್ಷಗಳಿಂದ ಹಲವು ಸಿಎಂ ಬಂದು ಹೋಗಿದ್ದಾರೆ. ಇದೆಲ್ಲವನ್ನೂ ನೋಡಿ ನೋಡಿ ನನಗೆ ಮಾತ್ರವಲ್ಲ ಅಭಿವೃದ್ಧಿ ಬಯಸುವ ಪ್ರತಿಯೊಬ್ಬರಿಗೂ ಅಸಮಾಧಾನವಾಗಿದೆ ಎಂದು ತಿಳಿಸಿದರು.

    ಉತ್ತರ ಕನ್ನಡವನ್ನು ನೋಡಿದರೇ ಇಂದಿಗೂ ನನಗೆ ನೋವಾಗುತ್ತದೆ. ಅಭಿವೃದ್ಧಿ ಮಾಡದ, ವಿಕಾಸವಾದ ಇಲ್ಲದವರಿಗೆ ಗೌರವ ಕೊಡಲು ಸಾಧ್ಯವಿಲ್ಲ. ವಿಕಾಸವನ್ನು ಬಿಟ್ಟು ಎಲ್ಲವನ್ನೂ ಮಾತನಾಡುತ್ತಾರೆ. ನಾನು ಬರೆದ ಅಂಕಣದಿಂದ ಹೆಗ್ಡೆ ಅವರ ಅಭಿಮಾನಿಗಳು ಕೆರಳಿದ್ರೆ ಕೆರಳಲಿ ನನಗೆ ಸಂತೋಷ. ಈ ಮೂಲಕವಾದರೂ ಉತ್ತರ ಕನ್ನಡ ಅಭಿವೃದ್ಧಿಯಾಗಲಿ ಎಂದರು.

    ನೀರಿರುವ ಬಾವಿಯಲ್ಲಿ ನೀರು ಸೇದಿ ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಸಚಿವ ಸ್ಥಾನ ಕೊಟ್ಟಿದ್ದಲ್ಲ. ನೀರು, ಸಂಪತ್ತನ್ನು ಸೃಷ್ಟಿಸಿಕೊಳ್ಳಲು ನರೇಂದ್ರ ಮೋದಿ ಅವರು ಸಚಿವ ಸ್ಥಾನ ಕೊಟ್ಟಿದ್ದಾರೆ. ನನಗೆ ಇತ್ತೀಚೆಗೆ ರಾಜಕೀಯ ನಾಯಕರ ಮೇಲೆ ನಿರೀಕ್ಷೆ ಕಳೆದು ಹೋಗಿದೆ. ಐದೈದು ಬಾರಿ ಶಾಸಕರಾಗಿ, ಸಂಸದರಾಗಿ ಆಯ್ಕೆಯಾದವರ ಕ್ಷೇತ್ರಗಳಿಗೆ ನಾನು ಹೋಗಿ ನೋಡಿದ್ದೇನೆ. ಬಹಳ ಬೇಸರವಾಗುತ್ತದೆ. ಜನರು ಯಾಕೆ ಇವರನ್ನು ಪ್ರತಿ ಬಾರಿ ವೋಟು ನೀಡಿ ಗೆಲ್ಲಿಸಬೇಕು? ಅಭಿವೃದ್ಧಿ, ವಿಕಾಸ ಮಾಡದೇ ಇರುವರಿಗೆ ಗೌರವ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಸೂಲಿಬೆಲೆ ಬೇಸರ ವ್ಯಕ್ತಪಡಿಸಿದರು.

    ನಾನು ನಿರಂತರವಾಗಿ ನಾನು ಗ್ರಾಮೀಣ ಅಭಿವೃದ್ಧಿ, ಹಣಕಾಸು ವಿಚಾರ, ಮದ್ಯ ನಿಷೇಧದ ಬಗ್ಗೆ ಬರೆದಿದ್ದೇನೆ. ಆದರೂ ಯಾವುದು ಬೆಳವಣಿಗೆ ಆಗಿಲ್ಲ. ಇತ್ತೀಚಿಗೆ ಟೂರಿಸಂ ಅಭಿವೃದ್ಧಿ ಬಗ್ಗೆ ಬರೆದಿದ್ದೇನೆ. ಇದು ಅಗತ್ಯವಾದ ಸಂಗತಿಯಾಗಿದೆ. ಉತ್ತರ ಕನ್ನಡದಲ್ಲಿ ಗೆದ್ದು ಬಂದ ಸಂಸದ, ಶಾಸಕರ ನಿರ್ಲಕ್ಷ್ಯದಿಂದಾಗಿ ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿಯಾಗಿಲ್ಲ. ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಬರೆದಿದ್ದೇನೆ. ಬರೀ ಅನಂತಕುಮಾರ್ ಹೆಗಡೆ ಒಬ್ಬರ ಬಗ್ಗೆ ಮಾತ್ರ ನಾನು ಹೇಳಿದ್ದಲ್ಲ. ಅಲ್ಲಿ ಆಯ್ಕೆ ಆಗಿರುವ ಎಲ್ಲ ರಾಜಕೀಯ ನಾಯಕರಿಗೆ ಇದು ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದರು.

    ಚುನಾವಣೆಯ ಸಂದರ್ಭದಲ್ಲಿ ಧರ್ಮ ಜಾತಿ ನೆಪವಾಗುತ್ತದೆ. ವಿಕಾಸದ ಬಗ್ಗೆ ಮಾತನಾಡುವುದಕ್ಕೆ ಬದಲು ಧರ್ಮದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. ನಾನು ನಾಗರಿಕನಾಗಿ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕರ್ನಾಟಕದ ಅಭಿವೃದ್ಧಿಗೋಸ್ಕರ ನನ್ನ ಕೊಡುಗೆ ಎಷ್ಟು ಕೊಡಲು ಆಗುತ್ತದೋ ಅಷ್ಟನ್ನು ನೀಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

    https://www.youtube.com/watch?v=W443FWFfOAk

    https://www.youtube.com/watch?v=Ph2IOPiR9vQ