Tag: Bangle

  • ಮಹಿಳೆಯರಿಗೆ ಸೂಟ್ ಆಗುವಂತಹ ಲೇಟೆಸ್ಟ್ ಡಿಸೈನ್ ಬಳೆಗಳು

    ಮಹಿಳೆಯರಿಗೆ ಸೂಟ್ ಆಗುವಂತಹ ಲೇಟೆಸ್ಟ್ ಡಿಸೈನ್ ಬಳೆಗಳು

    ವಿವಿಧ ಆಭರಣಗಳಲ್ಲಿ ಬಳೆಗಳು ಕೂಡ ಒಂದಾಗಿದ್ದು, ಸಾಮಾನ್ಯವಾಗಿ ಮಹಿಳೆಯರು ಬಳೆಯನ್ನು ಧರಿಸುತ್ತಾರೆ ಮತ್ತು ಬಳೆಗಳು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಬಳೆಗಳು ಮೊಣ ಕೈವರೆಗೂ ಧರಿಸುವ ಆಭರಣವಾಗಿದ್ದು, ಹಲವು ರೀತಿಯ ಸ್ಟೈಲಿಶ್ ಬಳೆಗಳಿದೆ. ಅಲ್ಲದೇ ವಿವಾಹಿತ ಮಹಿಳೆಯರ ಅಮೂಲ್ಯವಾದ ಆಭರಣಗಳಲ್ಲಿ ಬಳೆ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬಳೆಯಲ್ಲಿ ಹಲವು ವೆರೈಟಿ ಡಿಸೈನ್ ಬಳೆಗಳಿದ್ದು, ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.

    bangle

     

    ವಜ್ರದ ಡಿಸೈನ್ ಚಿನ್ನದ ಬಳೆಗಳು:
    ಕಿಟ್ಟಿ ಪಾರ್ಟಿಗಳಲ್ಲಿ ಮಹಿಳೆಯರು ಧರಿಸಲು ಈ ಬಳೆ ಸುಂದರವಾಗಿರುತ್ತದೆ. ಅಧಿಕೃತ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಈ ಬಳೆ ಧರಿಸಲು ಸೂಕ್ತವಾಗಿದ್ದು, ಇದು ನಿಮಗೆ ಖಂಡಿತವಾಗಿಯೂ ಗ್ರ್ಯಾಂಡ್ ಲುಕ್ ನೀಡುತ್ತದೆ. ಈ ಚಿನ್ನದ ಬಳೆಯನ್ನು ವಜ್ರ ಹಾಗೂ ಪಚ್ಚೆಗಳಿಂದ ವಿನ್ಯಾಸಗೊಳಿಸಲಾಗಿದ್ದು, ಸೀರೆಗೆ ಬಹಳ ಸೂಟ್ ಆಗುತ್ತದೆ.

    bangle

    ಹೂವಿನ ವಿನ್ಯಾಸದ ವಜ್ರದ ಬಳೆಗಳು:
    ವಜ್ರಗಳಿಂದ ಕೂಡಿದ ಹೂವಿನ ವಿನ್ಯಾಸದ ಈ ಬಳೆ ಇತ್ತೀಚಿನ ಡಿಸೈನರ್ ಬಳೆಗಳಲ್ಲಿ ಒಂದಾಗಿದ್ದು, ಸಂಪ್ರಾದಾಯಿಕ ಉಡುಪಿನ ಜೊತೆಗೆ ಪಾಶ್ಚಿಮಾತ್ಯ ಉಡುಪುಗಳಿಗೂ ಸಹ ಮ್ಯಾಚ್ ಆಗುತ್ತದೆ. ಇದನ್ನೂ ಓದಿ: ಮದುವೆಯಲ್ಲಿ ಕೇಕ್ ಪೀಸ್ ತಿಂದಿದ್ದಕ್ಕೆ ಅತಿಥಿಗೆ 366 ರೂ. ಪಾವತಿಸಿ ಅಂದ ನವದಂಪತಿ

    bangle

    ಅಗಲವಾದ ವಜ್ರದ ಬಳೆಗಳು:
    ಅಗಲವಾಗಿ ವಜ್ರದಿಂದ ವಿನ್ಯಾಸಗೊಳಿಸಿರುವ ಬಳೆಗಳು ಇತ್ತೀಚೆಗೆ ಹೊಸ ಟ್ರೆಂಡ್ ಸೃಷ್ಟಿಸಿದೆ. ಕೇವಲ ಒಂದು ಬಳೆಯನ್ನು ಧರಿಸಿದರೆ ಸಾಕು ಇದು ನಿಮ್ಮ ಕೈಗೆ ಗ್ರ್ಯಾಂಡ್ ಲುಕ್ ನೀಡುತ್ತದೆ ಮತ್ತು ಇದಕ್ಕೆ ಹೆಚ್ಚು ವೆಚ್ಚವಾಗುವುದಿಲ್ಲ. ಈ ಬಳೆಗಳನ್ನು ವಜ್ರ ಹಾಗೂ ಪಚ್ಚೆಗಳಿಂದ ವಿನ್ಯಾಸಗೊಳಿಸಲಾಗಿದೆ.

    bangle

    ಚಿನ್ನದ ಚಕ್ಕೆಗಳ ವಿನ್ಯಾಸದ ರೆಸಿನ್ ಬಳೆಗಳು:
    ಈ ಬಳೆ ಹದಿಹರೆಯದವರಿಗೆ ಹೆಚ್ಚು ಪ್ರಿಯವಾಗಿದ್ದು, ಇತ್ತೀಚಿನ ಡಿಸೈನರ್ ಬಳೆಗಳಲ್ಲಿ ಒಂದಾಗಿದೆ. ಈ ಬಳೆ ಮಹಿಳೆಯರಿಗೆ ಅದ್ಭುತವಾದ ಲುಕ್ ನೀಡುವುದರ ಜೊತೆಗೆ ಎಲ್ಲರ ಮಧ್ಯೆ ಎದ್ದು ಕಾಣಿಸುತ್ತದೆ. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ

    bangle

    ಗೋಲ್ಡ್ ಆರ್ಮ್ ಕಫ್ಸ್:
    ಈ ಡಿಸೈನರ್ ಬಳೆಗಳು ಹಿರಿಯ ಮಹಿಳೆಯರಿಗೆ ಹಾಗೂ ಯುವತಿಯರಿಗೆ ಸೂಟ್ ಆಗುತ್ತದೆ. ಎರಡು ತುದಿಗಳಿಂದಲೂ ಸಂಕೀರ್ಣವಾದ ಎಳೆಗಳನ್ನು ಹೊಂದಿರುವ ತೆಳುವಾದ ಅಂಚು ಹೊಂದಿರುತ್ತದೆ. ಈ ಬಳೆಯನ್ನು ನೀವು ಯಾವುದೇ ಡ್ರೆಸ್ ಜೊತೆಗೆ ಧರಿಸಬಹುದಾಗಿದೆ.

    bangle

  • ಮಹಿಳೆಯರಿಗೆ ಬಳೆ ತೊಡಿಸಿದ ಪರಮೇಶ್ವರ್

    ಮಹಿಳೆಯರಿಗೆ ಬಳೆ ತೊಡಿಸಿದ ಪರಮೇಶ್ವರ್

    ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಹಿಳೆಯರಿಗೆ ಬಳೆ ತೊಡಿಸಿ ಸಂಭ್ರಮಿಸಿದರು.

    ಗ್ರಾಮದಲ್ಲಿ ನಡೆದ ಮಾರಮ್ಮ ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಪರಮೇಶ್ವರ್, ಅಲ್ಲಿ ನೆರೆದಿದ್ದ ಮಹಿಳೆಯರಿಗೆ ಬಳೆ ಕೊಡಿಸಿ, ಅಣ್ಣನ ಸ್ಥಾನ ತುಂಬಿದರು. ಅಲ್ಲದೆ ತಾವೇ ತಮ್ಮ ಕೈಯಾರೆ ಬಳೆ ತೊಡಿಸಿ ಸಂತಸಪಟ್ಟರು. ಮಾಜಿ ಉಪ ಮುಖ್ಯಮಂತ್ರಿಯೊಬ್ಬರು ಅಣ್ಣನಾಗಿ ಬಳೆ ತೊಡಿಸಿದ್ದಕ್ಕೆ ಗ್ರಾಮದ ಮಹಿಳೆಯರು ಸಂತೋಷ ವ್ಯಕ್ತಪಡಿಸಿದರು.

    ಇಡಿ ದಾಳಿಯ ಕಾರಣ ಗೊತ್ತಿಲ್ಲ
    ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ದಾಳಿ ನಡೆದಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಕೇಂದ್ರ ಸರ್ಕಾರ ಮೊದಲಿನಿಂದಲೂ ಇಡಿ, ಸಿಬಿಐ, ಐಟಿಯನ್ನು ಬಳಕೆ ಮಾಡಿಕೊಳ್ಳುತ್ತದೆ ಎಂದು ಹೇಳುತ್ತ ಬಂದಿದ್ದೇವೆ. ಹೀಗಾಗಿ ಯಾವ ಉದ್ದೇಶಕ್ಕಾಗಿ ದಾಳಿ ನಡೆದಿದೆ ಎಂದು ಗೊತ್ತಿಲ್ಲ, ಅವರೂ ಸ್ಪಷ್ಟಪಡಿಸಿಲ್ಲ. ಮುಂದಿನ ದಿನಗಳಲ್ಲಿ ಯಾವ ಆಧಾರದ ಮೇಲೆ ದಾಳಿ ಮಾಡಿದರು ಎಂಬುದನ್ನು ತಿಳಿಸಲಿದ್ದಾರೆ. ಐಎಂಎ ಕೇಸ್ ಲಿಂಕ್ ಇರುವ ಆಧಾರದ ಮೇಲೆ ದಾಳಿ ಮಾಡಿದ್ದೇನೆ ಎಂದು ಅವರು ಹೇಳಿಲ್ಲ ಎಂದರು.

    ಇದೇ ವೇಳೆ ರಾಜ್ಯದ ನೂತನ ಸಚಿವ ಸಂಪುಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪುಟದಲ್ಲಿ ಅನುಭವಿಗಳ ಕೊರತೆಯಿದ್ದು, ತಪ್ಪು ಮಾಡಿದರೆ ತಿದ್ದುವವರಿಲ್ಲದ ಸಂಪುಟ ರಚನೆಯಾಗಿದೆ ಎಂದರು.

  • ಮದುವೆ ಸಮಯದಲ್ಲಿ ವಧುವಿನಂತೆ ಕಂಗೊಳಿಸಲು ಧರಿಸಬೇಕಾದ ಮುಖ್ಯ ಆಭರಣಗಳು

    ಮದುವೆ ಸಮಯದಲ್ಲಿ ವಧುವಿನಂತೆ ಕಂಗೊಳಿಸಲು ಧರಿಸಬೇಕಾದ ಮುಖ್ಯ ಆಭರಣಗಳು

    ಸಾಮಾನ್ಯವಾಗಿ ಸಾಂಪ್ರಾದಾಯಿಕ ಆಭರಣ ತೊಡದೇ ಮದುಮಗಳ ನೋಟವು ಪರಿಪೂರ್ಣಗೊಳ್ಳವುದೇ ಇಲ್ಲ. ಹಿಂದಿನ ಕಾಲದಲ್ಲಿ ಮದುವೆಯ ಸಮಯದಲ್ಲಿ ವಧು ಸಿಂಗಾರಗೊಳಿಸಲು ಮುಡಿಯಿಂದ ಪಾದದವರೆಗೂ 16 ಆಭರಣಗಳನ್ನು ಹಾಕಲಾಗುತ್ತಿತ್ತು. ಆದರೆ ಇಂದಿನ ಕಾಲದ ವಧು 16 ಆಭರಣಗಳನ್ನು ಧರಿಸಲೇ ಬೇಕೆಂಬ ಅಗತ್ಯವಿಲ್ಲ. ಹೀಗಾಗಿ ಅವರ ಪೂರ್ವಜರು ನೀಡಿದ ಅಥವಾ ತಮ್ಮ ನೆಚ್ಚಿನ ಅಂಗಡಿಗಳಲ್ಲಿ ಆಭರಣ ಖರೀದಿಸಿ ಕಡಿಮೆ ಆಭರಣವನ್ನು ತೊಟ್ಟು ವಧುವಿನಂತೆ ಮಿಂಚುತ್ತಾರೆ.

    ಆದರೆ ಎಷ್ಟೋ ಮಹಿಳೆಯರಿಗೆ ಮದುವೆಯ ಸಮಯದಲ್ಲಿ ವಧುವಿನಂತೆ ಕಾಣಿಸಿಕೊಳ್ಳಲು ಮುಖ್ಯವಾಗಿ ಧರಿಸಬೇಕಾದ ಆಭರಣಗಳು ಯಾವುದೆಂಬುವುದರ ಬಗ್ಗೆ ತಿಳಿದಿರುವುದಿಲ್ಲ. ಅಂತಹವರಿಗೆ ಕೆಲವೊಂದು ಮಾಹಿತಿ ಈ ಕೆಳಗಿನಂತಿದೆ.

    ವಧುವಿನ ಸೆಟ್: ವಧುವಿನ ಸೆಟ್‍ನಲ್ಲಿ ನೆಕ್ಲೆಸ್ ಹಾಗೂ ಜುಮ್ಕಿ ಸೇರಿದಂತೆ ಕೆಲವು ಬೇಸಿಕ್ ಆಭರಣಗಳು ಇರುತ್ತದೆ. ಮದುವೆ ಸಮಯದಲ್ಲಿ ವಧುವಿಗೆ ಹೆಚ್ಚಾಗಿ ಹಲವಾರು ಶೈಲಿಯ ಹಾರದ ಸರಗಳನ್ನು ಹಾಕುತ್ತಾರೆ.

    ವಧುವಿನ ಸೆಟ್

    ಬೈತಲೆ ಬೊಟ್ಟು: ವಧುವಿಗೆ ತೊಡಿಸುವ ಆಭರಣಗಳಲ್ಲಿ ಬೈತಲೆ ಬೊಟ್ಟು ಕೂಡ ಒಂದು. ಕೂದಲಿನ ಮಧ್ಯೆ ಕ್ರಾಫ್ ತೆಗೆದು ಹಣೆಯ ಮಧ್ಯೆ ಇದನ್ನು ಸಿಗಿಸಲಾಗುತ್ತದೆ. ಹಿಂದೂ ಪುರಾಣದಲ್ಲಿ ಇದನ್ನು ಮೂರನೇ ಕಣ್ಣು ಅಥವಾ ಆತ್ಮದ ಶಕ್ತಿ ಎಂದು ಪ್ರತಿನಿಧಿಸಲಾಗುತ್ತದೆ. ಇದು ಮಹಿಳೆ ಹಾಗೂ ಪುರುಷ ಮಧ್ಯೆ ಇರುವ ಆಧ್ಯಾತ್ಮಿಕ, ದೈಹಿಕ ಮತ್ತು ಭಾವನಾತ್ಮಕ ಮಟ್ಟದ ಪವಿತ್ರ ಒಕ್ಕೂಟವನ್ನು ಸೂಚಿಸುವ ಸಂರಕ್ಷಣೆಯ ಕೇಂದ್ರವಾಗಿದೆ.

    ಬೈತಲೆ ಬೊಟ್ಟು

    ಹಾಥ್ ಪೂಲ್: ಯಾವುದೇ ಆಭರಣಗಳನ್ನು ಧರಿಸಿದರು ವಧುವಿನ ಕೈ ಮತ್ತು ಬೆರಳುಗಳ ಮೇಲೆ ಹ್ಯಾಥ್‍ಪೂಲ್‍ನಂತೆ ಸುಂದರವಾಗಿ ಯಾವುದು ಕಾಣಿಸಲು ಸಾಧ್ಯವಿಲ್ಲ. ಹ್ಯಾಥ್‍ಫೂಲ್ ಎಂದರೆ ಫ್ಲವರ್ ಆಫ್ ದಿ ಆ್ಯಂಡ್ (ಕೈ ಮೇಲೆ ಹೂವು) ಎಂದರ್ಥ. ಹಸ್ತದ ಹಿಂಭಾಗ ಹೂವಿನಂತೆ ಆಭರಣವನ್ನು ವಿನ್ಯಾಸಗೊಳಿಸಲಾಗಿದ್ದು, ಮುತ್ತು, ರತ್ನ, ಕಮಲ, ಸರಗಳಿಂದ ತಯಾರಿಸಲಾಗಿದೆ. ಈ ಆಭರಣವು ವಧುವುಗೆ ಗ್ಲಾಮರ್ ಲುಕ್ ನೀಡುತ್ತದೆ.

    ಹಾಥ್ ಪೂಲ್

    ಮೂಗು ಬೊಟ್ಟು (ನೋಸ್ ರಿಂಗ್): ವೃತ್ತಾಕಾರದ ಮುಗುತಿ ವಧುವಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ರೀತಿಯ ಮೂಗುತಿಯನ್ನು ಪಾರ್ವತಿ ದೇವರು ಮದುವೆಯ ಸಮಯದಲ್ಲಿ ಧರಿಸಿದ್ದರು ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಈ ರೀತಿಯ ಮುಗುತಿ ಭಾರವಿರುವುದರಿಂದ ನಿಮಗೆ ಧರಿಸಲು ಆನ್‍ಕಂಫರ್ಟ್‍ಟೇಬಲ್ ಫೀಲ್ ಆದಲ್ಲಿ ಧರಿಸುವ ಅಗತ್ಯವಿಲ್ಲ. ಇದೀಗ ಕಡಿಮೆ ತೂಕದ ಮುಗುತಿ ಹಾಗೂ ಪ್ರೆಸಿಂಗ್ ಮೂಗು ಬೊಟ್ಟು ದೊರೆಯುತ್ತದೆ.

    ಮೂಗು ಬೊಟ್ಟು

    ಬಳೆಗಳು: ವಧು ಬಳೆಗಳನ್ನು ತೊಡದೇ ಮದುವೆಯ ಸಂಪೂರ್ಣಗೊಳ್ಳುವುದಿಲ್ಲ. ಬಳೆಗಳು ಭಾರತೀಯ ಸಂಸ್ಕøತಿಯ ಒಂದು ಭಾಗವಾಗಿದೆ. ಇಂದಿನ ಮಾಡ್ರೆನ್ ವಧುಗಳು ಕೆಂಪು ಮತ್ತು ಹಸಿರಿನ ಸಾಂಪ್ರದಾಯಿಕ ಬಳೆಯನ್ನೇ ತೊಡಬೇಕೆಂದಿಲ್ಲ. ಮುತ್ತಿನ, ಚಿನ್ನದ ಮತ್ತು ವಜ್ರದ ಬಳೆಗಳನ್ನು ತೊಡುತ್ತಾರೆ. ಅಲ್ಲದೆ ತಮ್ಮ ಉಡುಪಿಗೆ ಹೊಂದಿಕೊಳ್ಳುವಂತಹ ಬಳೆಗಳನ್ನು ಹಾಕಿಕೊಂಡು ವಧು ಮದುವೆಯ ಸಮಯದಲ್ಲಿ ಕಂಗೋಳಿಸುತ್ತಾರೆ. ಬಳೆ ನಿಮ್ಮ ಕೈಗಳನ್ನು ಪೂರ್ಣಗೊಳಿಸುವುದಲ್ಲದೇ ಸುಂದರವಾಗಿ ಕಾಣುವಂತೆ ಮಾಡುತ್ತದೆ.

    ಬಳೆಗಳು

    ಗೆಜ್ಜೆ : ಸರಳವಾದಂತಹ ಗೆಜ್ಜೆಯನ್ನು ಧರಿಸಿದರು ವಧುವಿನ ಕಾಲುಗಳು ಸುಂದರವಾಗಿ ಕಾಣಿಸುತ್ತದೆ. ಬೆಳ್ಳಿ ಲೋಹ ಮತ್ತು ಚಿಕ್ಕ ಮಣಿಯಂತಿರುವ ಗಂಟೆಗಳನ್ನು ಅಳವಡಿಸುವ ಮೂಲಕ ಗೆಜ್ಜೆಯನ್ನು ತಯಾರಿಸಲಾಗುತ್ತದೆ. ವಧು ನಡಿಯುವಾಗ ಗೆಜ್ಜೆ ಸದ್ದು ಮಾಡುತ್ತದೆ. ಅಲ್ಲದೆ ಗೆಜ್ಜೆ ಧರಿಸಿ ವಧು ಹಸೆಮಣೆಯತ್ತ ಬರುವಾಗ ಸಾಕ್ಷತ್ ಲಕ್ಷ್ಮಿ ದೇವಿ ಪ್ರವೇಶಿಸಿದಂತೆ ತೋರುತ್ತದೆ.

    ಗೆಜ್ಜೆ
  • ಅನರ್ಹ ಶಾಸಕ ಸುಧಾಕರಿಂದಲೂ ಮಹಿಳೆಯರಿಗೆ ಸೀರೆ, ಕುಂಕುಮ, ಬಳೆ ವಿತರಣೆ

    ಅನರ್ಹ ಶಾಸಕ ಸುಧಾಕರಿಂದಲೂ ಮಹಿಳೆಯರಿಗೆ ಸೀರೆ, ಕುಂಕುಮ, ಬಳೆ ವಿತರಣೆ

    ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ.ಸುಧಾಕರ್ ಉಪಚುನಾವಣೆಗೆ ಈಗಿನಿಂದಲೇ ತಾಲೀಮು ನಡೆಸುತ್ತಿದ್ದು, ಗೌರಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ಸೀರೆ, ಅರಿಶಿಣ, ಕುಂಕುಮ, ಬಳೆಗಳನ್ನು ವಿತರಿಸಿದ್ದಾರೆ.

    ಇತ್ತೀಚೆಗೆ ಅನರ್ಹ ಶಾಸಕ ಭೈರತಿ ಬಸವರಾಜ್ ಸೀರೆಗಳನ್ನು ಹಂಚಿ ಸುದ್ದಿಯಾಗಿದ್ದರು. ಇದೀಗ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಸುಧಾಕರ್ ಮಹಿಳೆಯರಿಗೆ ಸೀರೆ, ಅರಿಶಿಣ, ಕುಂಕುಮ ಹಾಗೂ ಬಳೆಗಳನ್ನು ವಿತರಿಸಿದ್ದಾರೆ.

    ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಗಳಿಗೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯರಿಗೆ ಸೀರೆ, ಅರಿಶಿಣ, ಕುಂಕುಮ ಹಾಗೂ ಬಳೆ ವಿತರಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸುಧಾಕರ್, ನನ್ನ ಅಕ್ಕ-ತಂಗಿಯರಿಗೆ ನಾನು ಸೀರೆ ಕೊಟ್ಟರೆ ಇವರಿಗೇನು ಸಮಸ್ಯೆ, ಮಹಿಳೆಯರಿಗೆ ಹಲವು ವರ್ಷಗಳಿಂದ ಸೀರೆ ವಿತರಣೆ ಮಾಡುತ್ತಿದ್ದೇನೆ. ಆಗಿನಿಂದಲೂ ವಿರೋಧಿಗಳು ಟೀಕೆ ಮಾಡುತ್ತಿದ್ದಾರೆ ಇದು ಹೊಸತೇನಲ್ಲ. ಅವರ ಹೆಂಡತಿ ಮಕ್ಕಳಿಗಾದರೂ ಸೀರೆ ಕೊಡಸಿಲಿಕ್ಕೆ ಹೇಳಿ. ಕೊಡಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಸೀರೆ ವಿತರಣೆಗೆ ಮಾಡಿದ್ದಕ್ಕೆ ಟೀಕೆ ಮಾಡಿದ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

    ಕ್ಷೇತ್ರದ ಅಭಿವೃದ್ಧಿಗಾಗಿ ಮೈತ್ರಿ ಸರ್ಕಾರದಲ್ಲಿದ್ದಾಗ ರಾಜೀನಾಮೆ ತೀರ್ಮಾನ ಕೈಗೊಂಡಿದ್ದೇನೆ. ಅನೈತಿಕ ರಮೇಶ್ ಕುಮಾರ್ ಕೆಟ್ಟ ನಿರ್ಣಯ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಕಾನೂನು ಹೋರಾಟದಲ್ಲಿ ಗೆಲುವು ಸಿಗಲಿದೆ. ಸುಧಾಕರ್ ಡಿಕ್ಷನರಿಯಲ್ಲಿ ಭಯ ಎನ್ನುವ ಪದವೇ ಇಲ್ಲ. ಬಿಜೆಪಿಗೆ ಹೋಗಲು ನಾನೊಬ್ಬನೇ ಸ್ವತಂತ್ರನಲ್ಲ. ಕ್ಷೇತ್ರದ ಜನ ಮುಖಂಡರು ನಾಯಕರ ಅಭಿಪ್ರಾಯ ಪಡೆದು ಮುಂದಿನ ದಾರಿ ಕಂಡುಕೊಳ್ಳುತ್ತೇನೆ ಎಂದು ತಿಳಿಸಿದರು.

    ಎರಡನೇ ಬಾರಿ ಅತಿ ಹೆಚ್ಚು ಮತಗಳಿಂದ ನನ್ನ ಗೆಲ್ಲಿಸಿದ್ದೀರಿ, ದುರದೃಷ್ಟ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಜಿಲ್ಲೆಗೆ ವೈದ್ಯಕೀಯ ಕಾಲೇಜು ತರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಆದರೆ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಭಿವೃದ್ಧಿ ಕೆಲಸ ಮಾಡಲಾಗಲಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ 14 ತಿಂಗಳು ಆತಂಕ ಅವಮಾನವನ್ನು ಎದುರಿಸಿದ್ದೇನೆ. ಹೀಗಾಗಿ ನಾನು ಶಾಸಕನಾಗೋದು ಮುಖ್ಯ ಅಲ್ಲ ಎಂದು ತೀರ್ಮಾನ ಮಾಡಿದೆ. ಶಾಸಕನಲ್ಲದಿದ್ದರೂ ಪರವಾಗಿಲ್ಲ ಅಭಿವೃದ್ಧಿ ಮಾಡಬೇಕು ಎಂದು ರಾಜೀನಾಮೆ ನೀಡಿದೆ ಎಂದರು.

    ನನ್ನ ರಾಜೀನಾಮೆ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದ್ರೆ ಆ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ತೆಗೆದುಕೊಂಡ ನಿರ್ಧಾರಗಳು ಜನಪರವಾದುದು. ಅಧಿಕಾರದ ವ್ಯಾಮೋಹ ನನಗಿಲ್ಲ. ಅಧಿಕಾರದ ವ್ಯಾಮೋಹ ಇದ್ದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರಲಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

    ಇತ್ತೀಚೆಗೆ ಕೆ.ಆರ್.ಪುರದ ಅನರ್ಹ ಶಾಸಕ ಭೈರತಿ ಬಸವರಾಜ್ ಗೌರಿ ಹಬ್ಬಕ್ಕೆ ಸೀರೆ, ಅರಿಶಿನ, ಕುಂಕುಮ ಹಂಚಿದ್ದರು. ಗೌರಿ ಗಣೇಶ ಹಬ್ಬದ ಗಿಫ್ಟ್ ನೀಡುವ ಮೂಲಕ ಮತದಾರರ ಮನವೊಲಿಸಲು ಭೈರತಿ ಮುಂದಾಗಿದ್ದರು. ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್‍ನಲ್ಲಿ ಅರಿಶಿನ ಕುಂಕುಮ ಬಳೆ ಸೀರೆ ಹಂಚುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮುಂಬರುವ ಉಪ ಚುನಾವಣೆಗೆ ಈಗಲೇ ಸೀರೆ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.